ವಿಷಯಕ್ಕೆ ಹೋಗು

ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾರಿ ಪಾಟರ್ ಪುಸ್ತಕಗಳು
Harry Potter and the Half-Blood Prince
ಲೇಖಕಿಜೆ. ಕೆ. ರೊಲಿಂಗ್
ಚಿತ್ರಲೇಖಕJason Cockcroft (UK)
Mary GrandPré (US)
ಪ್ರಕಾರಕಲ್ಪನೆ
ಪ್ರಕಾಶಕರುಬ್ಲೂಮ್ಸ್ ಬೆರಿ (ಯುಕೆ)
ಆರ್ಥರ್ ಎ. ಲೆವಿನ್/
ಸ್ಕೊಲ್ಯಸ್ಟಿಕ್ (ಯುಎಸ್)
ರೈನ್‌ಕೋಸ್ಟ್ (ಕೆನಡ)
ಬಿಡುಗಡೆ16 July 2005
ಪುಸ್ತಕ ಸಂಖ್ಯೆSix
ಮಾರಾಟ~65 million[ಸೂಕ್ತ ಉಲ್ಲೇಖನ ಬೇಕು]
ಕಥಾ ಕಾಲಕ್ರಮಾಂಕ1 August 1996-June 10, 1997
ಅಧ್ಯಾಯಗಳು30
ಪುಟಗಳು607 (UK)
652 (US)
ಐಎಸ್‌ಬಿಎನ್0747581088
ಹಿಂದಿನ ಪುಸ್ತಕHarry Potter and the Order of the Phoenix
ಮುಂದಿನ ಪುಸ್ತಕHarry Potter and the Deathly Hallows

ಕಳೆದ ೨೦೦೫ರ ಜುಲೈ ೧೬ರಂದು ಬಿಡುಗಡೆಯಾದ ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್, ಬ್ರಿಟಿಷ್‌ ಬರಹಗಾರ್ತಿ ಜೆ. ಕೆ. ರೌಲಿಂಗ್‌ರವರ ಜನಪ್ರಿಯ ಹ್ಯಾರಿ ಪಾಟರ್ ‌ ಏಳು ಕಾದಂಬರಿಗಳ ಸರಣಿಯಲ್ಲಿ ಆರನೆಯದು.‌ ಹಾಗ್ವಾರ್ಟ್ಸ್‌ನಲ್ಲಿ ಹ್ಯಾರಿ ಪಾಟರ್‌ನ ಕಲಿಕೆಯ ಆರನೆಯ ವರ್ಷದಲ್ಲಿ ಇದರ ಕಥೆಯನ್ನು ಹೆಣೆಯಲಾಗಿದೆ. ಈ ಕಾದಂಬರಿಯು ಲಾರ್ಡ್ ವೊಲ್ಡ್ಮಾರ್ಟ್‌‌ರ ಹಿನ್ನೆಲೆಯನ್ನು ಪರಿಶೋಧಿಸುತ್ತದೆಯಲ್ಲದೇ, ಅಂತಿಮ ಯುದ್ಧಕ್ಕೆ ಹ್ಯಾರಿಯ ಸಿದ್ಧತೆಯ ಮೇಲೆ ಕಥೆ ಕೇಂದ್ರೀಕೃತವಾಗಿದೆ. ತಾರುಣ್ಯಾವಸ್ಥೆಯ ಲಕ್ಷಣಗಳಾದ ಆಗಷ್ಟೆ ಮೂಡುತ್ತಿರುವ ಪ್ರೇಮ-ಪ್ರಣಯ ಪ್ರಸಂಗಗಳು ಹಾಗೂ ಭಾವನಾತ್ಮಕ ಗೊಂದಲಗಳು ಮತ್ತು ಘರ್ಷಣೆ-ಸಮಸ್ಯೆಗಳ ಇತ್ಯರ್ಥ ಇವೆಲ್ಲವೂ ಸಹ ಈ ಕಾದಂಬರಿಯ ಅಂಶಗಳಲ್ಲಿ ಸೇರಿವೆ.

ಈ ಕಾದಂಬರಿ ಬಿಡುಗಡೆಯಾದ ನಂತರದ ಮೊದಲ ೨೪ ಗಂಟೆಗಳಲ್ಲಿ ಒಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾದವು. ಆ ಸಮಯದಲ್ಲಿ ಇದು ದಾಖಲೆಯಾಗಿತ್ತು. ಇದಾದ ನಂತರ ಬಿಡುಗಡೆಯಾದ ಹ್ಯಾರಿ ಪಾಟರ್‌ ಅಂಡ್‌ ದಿ ಡೆತ್ಲಿ ಹ್ಯಾಲೊಸ್ ‌ ಕಂತು ಹಾಫ್‌ ಬ್ಲಡ್‌ ಪ್ರಿನ್ಸ್‌ ಕೃತಿಯ ಮಾರಾಟ ದಾಖಲೆಯನ್ನು ಹಿಂದಿಕ್ಕಿತು.[]

ಕಥಾವಸ್ತು

[ಬದಲಾಯಿಸಿ]

ಹ್ಯಾರಿ ಪಾಟರ್‌ ಮತ್ತು ಆತನ ಆಪ್ತ ಸ್ನೇಹಿತರಾದ ರಾನ್‌ ವೀಸ್ಲೆ ಮತ್ತು ಹರ್ಮಿಯೊನ್‌ ಗ್ರ್ಯಾಂಗರ್‌ ಮಂತ್ರವಿದ್ಯೆಯ ಆರನೆಯ ವರ್ಷದ ಕಲಿಕೆಗಾಗಿ ಹಾಗ್ವಾರ್ಟ್ಸ್‌ ಸ್ಕೂಲ್‌ ಆಫ್‌ ವಿಚ್‌ಕ್ರಾಫ್ಟ್‌ ಅಂಡ್‌ ವಿಝಾರ್ಡ್ರಿಗೆ ಮರಳುತ್ತಾರೆ. ಅವರು ವಾಪಸಾಗುವ ಮುಂಚೆ, ಲಾರ್ಡ್‌ ವೊಲ್ಡ್ಮಾರ್ಟ್‌ ಎಮೆಲೀನ್‌ ವ್ಯಾನ್ಸ್‌ ಮತ್ತು ಅಮೆಲಿಯಾ ಸೂಸಾನ್‌ ಬೋನ್ಸ್‌ರನ್ನು ಕೊಲೆ ಮಾಡಿದ ವಿಚಾರ ತಿಳಿಯುತ್ತದೆ. ಸಿವೆರಸ್‌ ಸ್ನೇಪ್‌ ನೂತನ ಡಿಫೆನ್ಸ್‌ ಎಗೇನ್ಸ್ಟ್‌ ದಿ ಡಾರ್ಕ್‌ ಆರ್ಟ್ಸ್‌ ತರಬೇತುದಾರ ಹಾಗೂ ಸ್ನೇಪ್‌ ಜಾಗದಲ್ಲಿ ಹಾರೇಸ್‌ ಸ್ಲಗ್ಹಾರ್ನ್‌ ಪೋಷನ್ಸ್‌ ಶಿಕ್ಷಕರು ಎಂದು ಇದರಲ್ಲಿ ಘೋಷಿಸಲಾಗಿದೆ. ತನ್ನ ಪೋಷನ್ಸ್‌ ಪಠ್ಯಪುಸ್ತಕದ ಹಿಂದಿನ ಮಾಲೀಕ 'ಹಾಫ್‌ ಬ್ಲಡ್‌ ಪ್ರಿನ್ಸ್‌', ಹ್ಯಾರಿಗೆ ಅನುಕೂಲವಾಗುವಂತೆ, ಆ ಪುಸ್ತಕವನ್ನು ಇನ್ನಷ್ಟು ಉತ್ತಮಗೊಳಿಸಿದ್ದು, ಇದರಿಂದ ಹ್ಯಾರಿ ತನ್ನ ವ್ಯಾಸಂಗದಲ್ಲಿ ಉತ್ತಮ ಪ್ರದರ್ಶನ ನೀಡಿ, ಸ್ಲಗ್ಹಾರ್ನ್ಸ್‌ನ ನೆಚ್ಚಿನ ವಿದ್ಯಾರ್ಥಿಯಾಗುವಂತೆ ಮಾಡಿರುವುದನ್ನು ಹ್ಯಾರಿ ಪತ್ತೆ ಮಾಡುತ್ತಾನೆ. ಪುನಃ ಶಕ್ತಿ ಪಡೆದಿದ್ದು, ಮಾಂತ್ರಿಕತೆಯ ಪ್ರಪಂಚವನ್ನೇ ಗೆಲ್ಲಲು ಹೊರಟಿರುವ ಲಾರ್ಡ್‌ ವೊಲ್ಡ್ಮಾರ್ಟ್‌ನನ್ನು ಕೊಲ್ಲಲು ಹ್ಯಾರಿ ಪಾಟರ್‌ ಏಕೈಕ ಹಾಗೂ ಸೂಕ್ತ ವ್ಯಕ್ತಿ ಎಂಬ ವದಂತಿಯಿಂದ ಸ್ಲಗ್ಹಾರ್ನ್‌ ಸಿಡಿಮಿಡಿಗೊಂಡಿರುತ್ತಾನೆ.

ತಾನು ಗಿನ್ನಿ ವೀಸ್ಲೆಯಿಂದ ಆಕರ್ಷಿತನಾಗಿರುವುದನ್ನು ಹ್ಯಾರಿ ಗಮನಿಸುತ್ತಾನೆ. ಆದರೆ ಆ ದಿಕ್ಕಿನಲ್ಲಿ ಸಾಗಿದರೆ ಗಿನ್ನಿಯ ಅಂಗರಕ್ಷಕನಂತಿರುವ ಅಣ್ಣ ರಾನ್‌ನೊಂದಿಗಿನ ಸ್ನೇಹಕ್ಕೆ ತೊಂದರೆಯಾಗುತ್ತದೆಂಬ ತಳಮಳವೂ ಇರುತ್ತದೆ. ರಾನ್‌ ಲ್ಯಾವೆಂಡರ್‌ ಬ್ರೌನ್‌ನೊಂದಿಗೆ ಪ್ರಣಯ ಬೆಳೆಸಿಕೊಳ್ಳುತ್ತಾನೆ. ಇದರಿಂದ ಆತ ಮತ್ತು ತನ್ನ ಬಗ್ಗೆ ರಹಸ್ಯವಾಗಿ ಪ್ರೇಮದ ಭಾವನೆ ಹೊತ್ತಿದ್ದ ಹರ್ಮಿಯೊನ್‌ ನಡುವೆ ಬಿರುಕು ಉಂಟಾಗುತ್ತದೆ. ಹಾಗ್ವಾರ್ಟ್ಸ್‌ ಶಾಲೆಯ ಮುಖ್ಯೋಪಾಧ್ಯಾಯ ಅಲ್ಬಸ್‌ ಡಂಬಲ್ಡೊರ್‌ಗಾಗಿ ಉದ್ದೇಶಿತ ವಿಷಕಾರಿ ಮಾದಕ ದ್ರವ್ಯ ಸೇವಿಸಿ ರಾನ್‌ ಸಾವಿನಿಂದ ಕೂದಲೆಳೆಯಲ್ಲಿಯೇ ಪಾರಾದಾಗಲೇ ಈ ಬಿರುಕು ಇತ್ಯರ್ಥವಾಗುವುದು. ತನ್ನೊಂದಿಗೆ ಶತೃತ್ವ ಬೆಳೆಸಿಕೊಂಡಿರುವ ಡ್ರ್ಯಾಕೊ ಮಲ್ಫೊಯ್‌ ವೊಲ್ಡ್ಮಾರ್ಟ್‌ನ ಸಮರ್ಥಕರ ಗುಂಪಿಗೆ ಸೇರಿದ್ದಾನೆ, ಎಂದು ಹ್ಯಾರಿ ಅನುಮಾನ ಪಟ್ಟು, ವಿಷಕಾರಿ ಮಾದಕ ದ್ರವ್ಯ ಹಾಗೂ ಡಂಬಲ್ಡೊರ್‌ ಪ್ರಾಣ ತೆಗೆಯುವ ಇನ್ನೂ ಹಳೆಯ ಯತ್ನದ ಹಿಂದೆ ಡ್ರ್ಯಾಕೊ ಕೈವಾಡವಿದೆಯೆಂದು ಹ್ಯಾರಿ ನಂಬುತ್ತಾನೆ. ಆದರೆ ಹ್ಯಾರಿಯನ್ನು ಯಾರೂ ನಂಬುವಂತೆ ಕಾಣಲಿಲ್ಲ.

ಇಡೀ ವರ್ಷ ನಡೆದ ಖಾಸಗಿ ಸಭೆಗಳಲ್ಲಿ ಡಂಬಲ್ಡೊರ್, ವೊಲ್ಡರ್ಮಾರ್ಟ್‌ನ ಹಿನ್ನೆಲೆ ನೆನಪುಗಳನ್ನು ಹ್ಯಾರಿಗೆ ಪ್ರದರ್ಶಿಸಲು ತನ್ನ ಪೆನ್ಸೀವ್‌ನ್ನು ಬಳಸುತ್ತಾನೆ. ಅಮರತ್ವದ ಸ್ಥಿತಿ ಗಳಿಸಲು, ವೊಲ್ಡ್ಮಾರ್ಟ್‌ ತನ್ನಆತ್ಮವನ್ನು ಏಳು ಚೂರುಗಳಾಗಿ ಒಡೆದಿದ್ದಾನೆಂಬ ಡಂಬಲ್ಡೊರ್‌ನ ಅನುಮಾನವು, ಸ್ಲಗ್ಹಾರ್ನ್‌ನಿಂದ ತೆಗೆದುಕೊಂಡ ನೆನಪೊಂದರ ಮೂಲಕ ಖಚಿತವಾಗುತ್ತದೆ. ಇವುಗಳಲ್ಲಿ ಆರು ತುಣುಕುಗಳು ಹಾರ್ಕ್ರಕ್ಸಸ್‌ ಎಂಬ ಅದ್ಭುತ ವಸ್ತುಗಳಲ್ಲಿರಿಸಲಾಗಿವೆ. ವೊಲ್ಡರ್ಮಾರ್ಟ್‌ನನ್ನು ಕೊಲ್ಲುವ ಮುಂಚೆ ಈ ಆರು ವಸ್ತುಗಳನ್ನು ನಾಶಗೊಳಿಸಬೇಕಾಗುತ್ತದೆ. ಈಗಾಗಲೇ ಎರಡು ಹಾರ್ಕ್ರಕ್ಸ್‌ಗಳನ್ನು ನಾಶಗೊಳಿಸಲಾಗಿದೆ: ಟಾಮ್‌ ರಿಡ್ಲ್‌ನ ದಿನಚರಿ - ಹ್ಯಾರಿ ತನ್ನ ಎರಡನೆಯ ಇಯತ್ತಿನಲ್ಲಿದ್ದಾಗ ಬ್ಯಾಸಿಲಿಸ್ಕ್‌ ಸರೀಸೃಪದ ಹಲ್ಲಿನಿಂದ ಈ ದಿನಚರಿಯನ್ನು ಮುಗಿಸಿದ್ದನು; ವೊಲ್ಡ್ಮಾರ್ಟ್‌ನ ತಾತನ ಉಂಗುರವನ್ನು ಡಂಬಲ್ಡೊರ್‌ ಬೇಸಿಗೆಯಲ್ಲಿ ನಾಶಗೊಳಿಸಿದ್ದರು. ಇನ್ನೂ ಮೂರು ಹಾರ್ಕ್ರಕ್ಸ್‌ಗಳು ಉಳಿದಿವೆ ಎಂಬುದು ಡಂಬಲ್ಡೊರ್‌ ಅನುಮಾನ. ವೊಲ್ಡರ್ಮಾರ್ಟ್‌ನ ಸಾಕುಹಾವು ನಾಗಿನಿ, ಹಾಗೂ ಹಾಗ್ವಾರ್ಟ್‌ ಶಾಲೆಯ ಸಂಸ್ಥಾಪಕರು ಮುಂಚೆ ಹೊಂದಿದ್ದ ವಸ್ತುಗಳಾದ ಸಲಜರ್‌ ಸ್ಲಿತರಿನ್ ಸಂಫುಟಿಕೆ,(ಲಾಕೆಟ್ ) ಹೆಲ್ಗಾ ಹಫಲ್ಪಫ್‌ ಲೋಟ ಹಾಗೂ ರೊವೆನಾ ರೆವೆನ್‌ಕ್ಲಾಳ ಅನಾಮಧೇಯ ವಸ್ತುಗಳನ್ನು ಪತ್ತೆ ಮಾಡಿ ನಾಶಗೊಳಿಸಬೇಕಾಯಿತು.

ಹಾಫ್‌-ಬ್ಲಡ್‌ ಪ್ರಿನ್ಸ್‌ನ ಪುಸ್ತಕದಿಂದ ಶಾಪವೊಂದನ್ನು ಹ್ಯಾರಿ ಪ್ರಯೋಗಿಸುತ್ತಿರುವುದನ್ನು ನೋಡಿದ ಸ್ನೇಪ್‌ ಅದನ್ನು ಕಸಿಯಲು ಯತ್ನಿಸಿದಾಗ, ಹ್ಯಾರಿ ಅದನ್ನು ರೂಮ್‌ ಆಫ್‌ ರಿಕ್ವಯರ್ಮೆಂಟ್‌ನಲ್ಲಿ ಅವಿತಿಡುತ್ತಾನೆ. ಹ್ಯಾರಿಯ ಹಾಗ್ವಾರ್ಟ್ಸ್‌ ಹೌಸ್‌ ಗ್ರಿಫಿನ್ಡಾರ್‌, ಶಾಲೆಯ ಕ್ವಿಡ್ಡಿಚ್‌ ಸ್ಪರ್ಧೆ ಗೆಲ್ಲುತ್ತದೆ. ಇದರಿಂದ ಅತೀವ ಹರ್ಷಗೊಂಡ ಹ್ಯಾರಿ, ಗಿನ್ನಿಯ ಕೆನ್ನೆಗೆ ಮುತ್ತಿಡುತ್ತಾನೆ. ಆಕೆಯ ಅಣ್ಣನ ಆತ್ಮ ವಿಶ್ವಾಸವಿಲ್ಲದ ಒಪ್ಪಿಗೆಯ ಮೇರೆಗೆಯೂ ಹ್ಯಾರಿ ಮತ್ತು ಗಿನ್ನಿ ಪ್ರಣಯ ಆರಂಭಿಸುತ್ತಾರೆ.

ಡಂಬಲ್ಡೊರ್‌ ಹಾರ್ಕ್ರಕ್ಸ್‌ ಇರುವ ಸ್ಥಳವನ್ನು ಪರಿಶೋಧಿಸಿ, ಅದನ್ನು ನಾಶಗೊಳಿಸಲು ಹ್ಯಾರಿಯ ಸಹಾಯ ಕೋರುತ್ತಾನೆ. ಅವರಿಬ್ಬರೂ ಗುಹೆಯೊಂದಕ್ಕೆ ಪಯಣಿಸಿ, ಸಲಜರ್‌ ಸಂಪುಟಿಕೆ ಎಂದು ನಂಬಲಾದ ವಸ್ತುವೊಂದನ್ನು ಪುನಃ ಪಡೆಯುತ್ತಾರೆ. ಆದರೆ, ಹಾರ್ಕ್ರಕ್ಸ್‌ನ್ನು ರಕ್ಷಿಸುವ ಅದ್ಭುತ ದ್ರವವನ್ನು ಕುಡಿದ ಡಂಬಲ್ಡೊರ್‌ಗೆ ತೀವ್ರ ದೌರ್ಬಲ್ಯವುಂಟಾಗುತ್ತದೆ. ಅವರು ಹಾಗ್ವಾರ್ಟ್ಸ್‌ಗೆ ಮರಳಿದೊಡನೆ, ಹಾಗ್ವಾರ್ಟ್ಸ್‌ನ ಖಗೋಳವೈಜ್ಞಾನಿಕ ಗೋಪುರದ ಮೇಲೆ ವೊಲ್ಡ್ಮಾರ್ಟ್‌ ಸಂಕೇತವು ತೂಗಾಡುತ್ತಿರುವುದು ಕಾಣುತ್ತದೆ. ಗೋಪುರದ ಮೇಲೆ, ಡಂಬಲ್ಡೊರ್‌ ಮತ್ತು ಡ್ರ್ಯಾಕೊ ಮುಖಾಮುಖಿಯಾಗುತ್ತಾರೆ. ಡಂಬಲ್ಡೊರ್‌ ಮೇಲಿನ ಈ ಹಲ್ಲೆಯ ಹಿಂದೆ ತನ್ನ ಕೈವಾಡವಿತ್ತೆಂದು ಡ್ರ್ಯಾಕೊ ಒಪ್ಪಿಕೊಳ್ಳುತ್ತಾನೆ, ಏಕೆಂದರೆ ಡಂಬಲ್ಡೊರ್‌ನನ್ನು ಕೊಲ್ಲಲು ವೊಲ್ಡ್ಮಾರ್ಟ್ ಡ್ರ್ಯಾಕೊಗೆ ಆದೇಶಿಸಿದ್ದು, ವಿಫಲವಾದಲ್ಲಿ ವೊಲ್ಡ್ಮಾರ್ಟ್‌ ಡ್ರ್ಯಾಕೊನನ್ನೇ ಮುಗಿಸುಬಿಡುವನೆಂದು ಬೆದರಿಕೆ ಹಾಕಿದ್ದ. ಆದರೂ, ವೊಲ್ಡ್ಮಾರ್ಟ್‌ ಸ್ವತಃ ಆ ಸ್ಥಳಕ್ಕೆ ಆಗಮಿಸಿ ಡಂಬಲ್ಡೊರ್‌ನನ್ನು ಕೊಲೆ ಮಾಡಲಾರ.‌ ಆದರೂ, ಸ್ನೇಪ್‌ ಆಗಮಿಸಿ, ಡಂಬಲ್ಡೊರ್‌ನನ್ನು ಕೊಲ್ಲುತ್ತಾನೆ. ಇದರಿಂದ ಕೋಪಗೊಂಡ ಹ್ಯಾರಿ ಸ್ನೇಪ್‌ನ ಬೆನ್ನಟ್ಟುತ್ತಾನೆ. ಸ್ನೇಪ್‌ ಹ್ಯಾರಿಯ ದಾಳಿಗಳಿಂದ ತಪ್ಪಿಸಿಕೊಂಡು, ತಾನೇ ಹಾಫ್‌-ಬ್ಲಡ್‌ ಪ್ರಿನ್ಸ್‌ ಎಂದು ಬಹಿರಂಗಪಡಿಸಿ, ಮಾಯವಾಗುತ್ತಾನೆ.

ಹ್ಯಾರಿ ಆ ಸಂಪುಟಿಕೆಯನ್ನು ಡಂಬಲ್ಡೊರ್‌ನ ಶವದಿಂದ ತೆಗೆದುಕೊಳ್ಳುತ್ತಾನೆ. ಆದರೆ R.A.B. ಎಂಬ ಪ್ರಥಮಾಕ್ಷರಗಳುಳ್ಳ ವ್ಯಕ್ತಿಯೊಬ್ಬನು ಬಿಟ್ಟುಹೋದ ನಕಲಿ ಸಂಪುಟಿಕೆಯಾಗಿರುತ್ತದೆ. R.A.B. ಅಸಲಿ ಹಾರ್ಕ್ರಕ್ಸ್‌ನ್ನು ಕದ್ದು, ತಾನು ವೊಲ್ಡ್ಮಾರ್ಟ್‌ನ ವಿರೋಧಿಯೆಂದು ಘೋಷಿಸಿಕೊಳ್ಳುವ ಚೀಟಿ ಬಿಟ್ಟುಹೋಗಿರುತ್ತಾನೆ. ಡಂಬಲ್ಡೊರ್‌ನ ಅಂತಿಮ ಸಂಸ್ಕಾರದೊಂದಿಗೆ ಆ ಶಾಲಾ ತರಗತಿ ಅಂತ್ಯಗೊಳ್ಳುತ್ತದೆ. ಹಾಗ್ವಾರ್ಟ್ಸ್‌ ಶಾಲಾ ಅಂಗಳದಲ್ಲಿ ಕೆರೆಯೊಂದರ ಪಕ್ಕ ಡಂಬಲ್ಡೊರ್‌ ಮತ್ತು ಆತನ ದಂಡವನ್ನು ಗೋರಿಯೊಂದರಲ್ಲಿ ಹೂಳಲಾಗುತ್ತದೆ. ಅಂತಿಮ ಸಂಸ್ಕಾರದ ನಂತರ, ತಾವಿಬ್ಬರೂ ತಮ್ಮ ಪ್ರಣಯ ಮುಂದುವರೆಸಿದಲ್ಲಿ ವೊಲ್ಡ್ಮಾರ್ಟ್‌ ಗಿನ್ನಿಯನ್ನು ಕೊಲೆ ಮಾಡಲು ಯತ್ನಿಸಬಹುದೆಂದು ಶಂಕಿಸಿದ ಹ್ಯಾರಿ ಗಿನ್ನಿಯೊಂದಿಗಿನ ತನ್ನ ಪ್ರಣಯ ಅಂತ್ಯಗೊಳಿಸುತ್ತಾನೆ. ಆ ಮುಂದಿನ ಕಲಿಕೆಗಾಗಿ ಆತ, ರಾನ್‌ ಮತ್ತು ಹರ್ಮಿಯೊನ್‌ ಶಾಲೆಗೆ ಮರಳದಿರಲು ನಿರ್ಧರಿಸುತ್ತಾರೆ. ಬದಲಿಗೆ, ಉಳಿದ ಹಾರ್ಕ್ರಕ್ಸ್‌ಗಳನ್ನು ಹುಡುಕಿ, ನಾಶಪಡಿಸಲು ಹೊರಡುತ್ತಾರೆ.

==ಅಭಿವೃದ್ಧಿ ==

ಡೆಲಾವೇರ್‌ನ ನೆವಾರ್ಕ್‌ನಲ್ಲಿ ಬಾರ್ಡರ್ಸ್‌ ಪುಸ್ತಕದಂಗಡಿಯಾಚೆ, ಮಧ್ಯರಾತ್ರಿ ಬಿಡುಗಡೆಯಾಗುವ ಕೃತಿಗಾಗಿ ನಿರೀಕ್ಷಿಸಿ ಸಾಲಾಗಿ ನಿಂತಿರುವ ಪಾಟರ್‌ ಅಭಿಮಾನಿಗಳು

ವಿಶೇಷ ಹಕ್ಕು

[ಬದಲಾಯಿಸಿ]

ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ , ಹ್ಯಾರಿ ಪಾಟರ್ ಸರಣಿಯಲ್ಲಿ ಆರನೆಯ ಕೃತಿ.[] ಸರಣಿಯಲ್ಲಿ ಮೊದಲ ಕೃತಿ ಹ್ಯಾರಿ ಪಾಟರ್ ಅಂಡ್‌ ದಿ ಫಿಲಾಸಫರ್ಸ್‌ ಸ್ಟೋನ್‌ ಮೊದಲ ಬಾರಿಗೆ ಬ್ಲೂಮ್ಸ್‌ಬ್ಯುರಿ ೧೯೯೭ರಲ್ಲಿ ಪ್ರಕಟಿಸಿ, ದೃಢ ರಕ್ಷಾಪುಟಗಳುಳ್ಳ ೫೦೦ ಪ್ರತಿಗಳನ್ನು ಹೊರಡಿಸಿತು. ಇವುಗಳಲ್ಲಿ ೩೦೦ ಪ್ರತಿಗಳನ್ನು ಗ್ರಂಥಾಲಯಗಳಿಗೆ ವಿತರಿಸಲಾಯಿತು.[] ಆಗ ೧೯೯೭ರ ಅಂತ್ಯದಲ್ಲಿ, ಯುಕೆ ಆವೃತ್ತಿಗೆ ನ್ಯಾಷನಲ್‌ ಬುಕ್‌ ಅವಾರ್ಡ್‌ ಲಭಿಸಿತು. ಅಲ್ಲದೆ, ನೆಸ್ಲೆ ಸ್ಮಾರ್ಟೀಸ್‌ ಬುಕ್‌ ಪ್ರೈಜ್‌ನ ೯ರಿಂದ೧೧ ವಯಸ್ಕರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿತು.[] ಎರಡನೆಯ ಕೃತಿ ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಆಫ್ ಸೀಕ್ರೆಟ್ಸ್ , ಮೂಲತಃ ೧೯೮೮ರ ಜುಲೈ ೨ರಂದು ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಹಾಗೂ ೧೯೮೯ರ ಜುಲೈ ೨ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಕಟಿಸಲಾಯಿತು.[][] ಒಂದು ವರ್ಷದ ನಂತರ, ಹ್ಯಾರಿ ಪಾಟರ್ ಆಂಡ್ ದಿ ಪ್ರಿಸನರ್ ಆಫ್ ಅಸ್ಕಬಾನ್‌ ಕೃತಿಯನ್ನು ೧೯೯೯ರ ಜುಲೈ ೮ರಂದು ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಹಾಗೂ ಅದೇ ವರ್ಷ ಸೆಪ್ಟೆಂಬರ್ ೮ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಕಟಿಸಲಾಯಿತು.[][] ಹ್ಯಾರಿ ಪಾಟರ್ ಆಂಡ್ ದಿ ಗಾಬ್ಲೆಟ್ ಆಫ್ ಫೈಯರ್ ಕೃತಿಯನ್ನು ೨೦೦೦ರ ಜುಲೈ ೮ರಂದು ಬ್ಲೂಮ್ಸ್‌ಬ್ಯುರಿ ಹಾಗೂ ಸ್ಕಾಲಸ್ಟಿಕ್‌ ಏಕಕಾಲಕ್ಕೆ ಪ್ರಕಟಿಸಿದವು.[] ಹ್ಯಾರಿ ಪಾಟರ್‌ ಅಂಡ್‌ ದಿ ಆರ್ಡರ್‌ ಆಫ್‌ ದಿ ಫೀನಿಕ್ಸ್ ಈ ಸರಣಿಯ ಅತಿದೊಡ್ಡ ಕೃತಿಯಾಗಿದ್ದು, ೨೦೦೩ರ ಜೂನ್‌ ೨೧ರಂದು ಬಿಡುಗಡೆಯಾಯಿತು.[] ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ ಪ್ರಕಟಣೆಯಾದ ನಂತರ, ಏಳನೆಯ ಮತ್ತು ಅಂತಿಮ ಕೃತಿ ಹ್ಯಾರಿ ಪಾಟರ್‌ ಅಂಡ್‌ ದಿ ಡೆತ್ಲಿ ಹ್ಯಾಲೊಸ್‌ ೨೦೦೭ರ ಜುಲೈ ೨೧ರಂದು ಬಿಡುಗಡೆಯಾಯಿತು.[] ಇದರ ಬಿಡುಗಡೆಯ ೨೪ ಘಂಟೆಗಳೊಳಗೆ ೧೧ ದಶಲಕ್ಷ ಪ್ರತಿಗಳು ಮಾರಾಟವಾದವು. ಯುನೈಟೆಡ್‌ ಕಿಂಗ್ಡಮ್‌ನಲ್ಲಿ ೨.೭ ದಶಲಕ್ಷ ಪ್ರತಿಗಳು ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ೮.೩ ಮಿಲಿಯನ್ ಪ್ರತಿಗಳು ಮಾರಾಟವಾದವು.[]

ಬಿಡುಗಡೆ-ಮುಂಚಿನ ವಿವಾದಗಳು

[ಬದಲಾಯಿಸಿ]

ದಾಖಲೆ ಮೀರಿದಂತಹ ಹಾಫ್‌-ಬ್ಲಡ್‌ ಪ್ರಿನ್ಸ್‌ ಪ್ರಕಟಣೆಯಾಗುವುದರೊಂದಿಗೆ ವಿವಾದವೂ ಉಂಟಾಯಿತು. ಅಂದರೆ ೨೦೦೫ರ ಮೇ ತಿಂಗಳಲ್ಲಿ ಕೃತಿಯಲ್ಲಿನ ಮುಖ್ಯ ಪಾತ್ರದ ಸಾವು ಸಂಭವಿಸುವುದು ಎಂಬ ವದಂತಿಯ ಮೇಲೆ ಭಾರಿ ಬಾಜಿ ಕಟ್ಟಲಾಯಿತು. ಇದರ ಪರಿಣಾಮವಾಗಿ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಬುಕ್ಕಿಗಳು ಬಾಜಿ ಕಟ್ಟುವುದನ್ನು ಸ್ಥಗಿತಗೊಳಿಸಿದರು. ಕೃತಿ ಪ್ರಕಟಣೆಗೆ ನಿಕಟವರ್ತಿಗಳ, ಸಂಬಂಧಿತರ ಕೈವಾಡ ಎಂದೂ ಶಂಕಿಸಲಾಯಿತು. ಅಲ್ಬಸ್‌ ಡಂಬಲ್ಡೊರ್‌ ಸಾವಿನ ಬಗ್ಗೆ ಹೆಚ್ಚಿನ ಮೌಲ್ಯದ ಬಾಜಿ ಕಟ್ಟಲಾಗಿತ್ತು. ಇವುಗಳಲ್ಲಿ ಹಲವು ಪುಸ್ತಕಗಳು ಅಚ್ಚಾಗುತ್ತಿದ್ದ ಸ್ಥಳ ಬಂಗೇ ನಗರದಿಂದ ಬಂದಿದ್ದವು. ಬಾಜಿಕಟ್ಟುವ ಕ್ರಿಯೆಯನ್ನು ಆನಂತರ ಪುನಾರಂಭಗೊಳಿಸಲಾಯಿತು.[೧೦] ಇತರೆ ವಿವಾದಗಳಲ್ಲಿ, ಬಿಡುಗಡೆಯ ಮುಂಚೆ ಹ್ಯಾರಿ ಪಾಟರ್‌ ಕೃತಿಗಳನ್ನು ಓದುವ ಹಕ್ಕು, ದಶಲಕ್ಷಗಳ ಪ್ರಮಾಣದಲ್ಲಿ ಪುಸ್ತಕಗಳನ್ನು ಅಚ್ಚು ಮಾಡಲು ಬಳಸಲಾದ ಕಾಗದಗಳ ಮೂಲ, ಕಥಾಹಂದರದ ವಿವಿಧ ಬೆಳವಣಿಗೆಗಳಿಗೆ ಅಭಿಮಾನಿಗಳ ಪ್ರತಿಕ್ರಿಯೆ ಹಾಗೂ ಬಹಿರಂಗವಾದ ಕೃತಿಯ ಇತರೆ ವಿಚಾರಗಳು ಸೇರಿದ್ದವು.

ಓದುವ ಹಕ್ಕು ವಿವಾದ

[ಬದಲಾಯಿಸಿ]

ನಂತರ ೨೦೦೫ರ ಜುಲೈ ತಿಂಗಳ ಆರಂಭದಲ್ಲಿ, ಕೆನಡಾ ದೇಶದ ಬ್ರಿಟಿಷ್‌ ಕೊಲಂಬಿಯಾ ರಾಜ್ಯದ ಕೊಕ್ವಿಟ್ಲ್ಯಾಮ್‌ನಲ್ಲಿನ ರಿಯಲ್‌ ಕೆನಡಿಯನ್‌ ಸುಪರ್ಸ್ಟೋರ್‌ನಲ್ಲಿ‌, ದಿ ಹಾಫ್‌-ಬ್ಲಡ್ ಪ್ರಿನ್ಸ್ ‌ ಅಧಿಕೃತವಾಗಿ ಬಿಡುಗಡೆಯಾಗುವ ಮುಂಚೆಯೇ ಹದಿನಾಲ್ಕು ಪ್ರತಿಗಳು ಅಪ್ಪಿತಪ್ಪಿ ಮಾರಾಟವಾದವು. ಕೆನಡಾ ಮೂಲದ ಪ್ರಕಾಶಕ ರೇನ್ಕೋಟ್‌ ಬುಕ್ಸ್‌ ಬ್ರಿಟಿಷ್‌ ಕೊಲಂಬಿಯಾದ ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಯನ್ನು ಪಡೆಯುವಲ್ಲಿ ಸಫಲವಾದರು.[೧೧] ಇದರಂತೆ, ಪುಸ್ತಕಗಳನ್ನು ಕೊಂಡ ಗ್ರಾಹಕರು ಅಧಿಕೃತ ಬಿಡುಗಡೆಯ ದಿನಕ್ಕೆ ಮುಂಚೆ ಅವನ್ನು ಓದುವಂತಿರಲಿಲ್ಲ ಅಥವಾ ಕಥಾವಸ್ತುವನ್ನು ಇನ್ನೊಬ್ಬರೊಂದಿಗೆ ಚರ್ಚಿಸುವಂತೆಯೂ ಇರಲಿಲ್ಲ. ಜುಲೈ ೧೬ರ ಮುಂಚೆ ಕೊಂಡ ಪ್ರತಿಗಳನ್ನು ವಾಪಸ್‌ ಮಾಡಿದವರಿಗೆ ಹ್ಯಾರಿ ಪಾಟರ್‌ ಟಿ-ಷರ್ಟ್‌ ಮತ್ತು ಕೃತಿಯ ಹಸ್ತಾಕ್ಷರವುಳ್ಳ ಪ್ರತಿ ನೀಡಲಾಗುತ್ತಿತ್ತು.

ಪೌರಾತ್ಯ ಸಮಯ ವಲಯದಲ್ಲಿ ಕೃತಿಯು ಮಾರಾಟವಾಗುವ ಹನ್ನೆರಡು ಗಂಟೆಗಳಿಗಿಂತ ಕಡಿಮೆ ಸಮಯದ ಮುಂಚೆ, ರೇನ್ಕೋಟ್‌ ಪ್ರಕಾಶಕ ಸಂಸ್ಥೆ ದಿ ಗ್ಲೋಬ್ ಅಂಡ್‌ ಮೇಲ್‌ ದೈನಿಕಕ್ಕೆ ಎಚ್ಚರಿಕೆ ನೀಡಿತು. ಇದರಂತೆ, ಮಧ್ಯರಾತ್ರಿಯಂದು ಕೆನಡಾ ಮೂಲದ ಬರಹಗಾರರೊಬ್ಬರಿಂದ ವಿಮರ್ಶೆಯೊಂದನ್ನು ಪ್ರಕಟಿಸಿದಲ್ಲಿ, ವಹಿವಾಟು ರಹಸ್ಯ ತಡೆಯಾಜ್ಞೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಈ ತಡೆಯಾಜ್ಞೆಯಿಂದಾಗಿ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ ಎಂದು ಆಪಾದಿಸುವ ಹಲವು(ಪತ್ರಿಕಾ ವರದಿಗಳು) ವಾರ್ತಾ ಲೇಖನಗಳು ಮೂಡಿಬಂದವು. ಕೆನಡಿಯನ್‌ ಕಾನೂನು ಪ್ರಾಧ್ಯಾಪಕ ಮೈಕಲ್‌ ಗೀಸ್ಟ್‌ ತಮ್ಮ ಬ್ಲಾಗ್‌ನಲ್ಲಿ ಟಿಪ್ಪಣಿಯೊಂದನ್ನು ನಮೂದಿಸಿದರು;[೧೨] ರಿಚರ್ಡ್ ಸ್ಟಾಲ್ಮನ್‌ ಈ ಪುಸ್ತಕವನ್ನು ಬಹಿಷ್ಕರಿಸಲು ಕರೆ ನೀಡಿ, ಪುಸ್ತಕದ ಪ್ರಕಾಶಕರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.[೧೩] ದಿ ಗ್ಲೋಬ್‌ ಅಂಡ್‌ ಮೇಯ್ಲ್‌ ತನ್ನ ಜುಲೈ ೧೬ರ ಸಂಚಿಕೆಯಲ್ಲಿ ಯುನೈಟೆಡ್‌ ಕಿಂಗ್ಡಮ್‌ ಮೂಲದ ಇಬ್ಬರು ಬರಹಗಾರರ ವಿಮರ್ಶೆ ಪ್ರಕಟಿಸಿತು. ಅದೇ ದಿನ ಬೆಳಗ್ಗೆ ೯ ಗಂಟೆಗೆ ಕೆನಡಾ ಮೂಲದ ವಿಮರ್ಶಕರ ಟಿಪ್ಪಣಿಯನ್ನು ತನ್ನ ಅಂತರಜಾಲತಾಣದಲ್ಲಿ ಪ್ರಕಟಿಸಿತು.[೧೪] ರೇನ್ಕೋಟ್‌ನ ಅಂತರಜಾಲತಾಣದಲ್ಲಿಯೂ ಸಹ ಟಿಪ್ಪಣಿಗಳನ್ನು ನಮೂದಿಸಲಾಗಿತ್ತು.[೧೫]

ವಿಮರ್ಶೆಯ ಸ್ವೀಕೃತಿ

[ಬದಲಾಯಿಸಿ]

ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಗೆ ಒಟ್ಟಾರೆ ಸಕಾರಾತ್ಮಕ ವಿಮರ್ಶೆಗಳು ದೊರೆತವು. ದಿ ನ್ಯೂಯಾರ್ಕ್‌ ಟೈಮ್ಸ್‌ ನ ಲೀಸ್ಲ್‌ ಷಿಲಿಂಗರ್‌ ಈ ಪುಸ್ತಕದ ಬಗ್ಗೆ ಬಹಳಷ್ಟು ಸಕಾರಾತ್ಮಕ ವಿಮರ್ಶೆ ನೀಡಿ, ಕೃತಿಯಲ್ಲಿನ ವಿವಿಧ ವಿಷಯಗಳು ಮತ್ತು ಅತಿ-ರೋಮಾಂಚಕವಾಗಿರುವ ರಹಸ್ಯ ಅಂತ್ಯವನ್ನು ಹೊಗಳಿದರು.[೧೬] 'ವೊಲ್ಡ್ಮಾರ್ಟ್‌ ಕೇವಲ ಕಥೆಯ ಮರುಕಳಿಕೆಗಳಲ್ಲಿ ಕಾಣಿಸಿಕೊಳ್ಳುವ ಕಾರಣ, ಈ ಕೃತಿಯನ್ನು ಓದಿದವರಿಗೆ ಆನಂದ, ರೋಮಾಂಚನ, ಭಾವೋದ್ರೇಕ, ಆತಂಕ, ಕೋಪ, ಶೋಕ, ಅಚ್ಚರಿ ಹಾಗೂ ಯೋಚನೆಗಳಿಗೆ ತಳ್ಳುವ ಅನುಭವವಾಗುವುದು' ಎಂದು ಕಿರ್ಕಸ್‌ ರಿವ್ಯೂಸ್ ‌ ತನ್ನ ಅಭಿಪ್ರಾಯದ ಹೇಳಿಕೆ ನೀಡಿತು.[೧೭] ಕ್ರಿಶ್ಚಿಯನ್‌ ಸರ್ವಿಸ್ ಮಾನಿಟರ್ ‌ನ ಯೆವೊನ್‌ ಜಿಪ್‌ ಸಹ ಒಟ್ಟಾರೆ ಸಕಾರಾತ್ಮಕ ವಿಮರ್ಶೆ ನೀಡಿ, ಜೆಕೆ ರೌಲಿಂಗ್‌ ಹ್ಯಾರಿಯ ಪಾತ್ರವನ್ನು ತಾರುಣ್ಯಾವಸ್ಥೆಗೆ ವಿಕಸನ ನೀಡಿದ ರೀತಿ ಹಾಗೂ ಕೃತಿಯಲ್ಲಿನ ತಿಳಿ ಹಾಸ್ಯವನ್ನೂ ಪ್ರಶಂಸಿಸಿದ್ದಾರೆ.[೧೮] ಎಂಟರ್ಟೇನ್ಮೆಂಟ್‌ ವೀಕ್ಲಿ ಗಾಗಿ ಕ್ರಿಸ್ಟೊಫರ್‌ ಪಾವೊಲಿನಿ,ಅವರು ಬರೆದದ್ದು: ಪ್ರಪಂಚವು ವಿಕಸನವಾದಂತೆಯೇ ಕಥಾ ಹಂದರದಲ್ಲಿ ಒಂದು ರೀತಿಯ ವಿಚಿತ್ರವಾದ ಬದಲಾವಣೆಯನ್ನು ಗಮನಿಸುವಂತೆ ಮಾಡಿದೆ, ಅಲ್ಲದೇ ಇದರಲ್ಲಿನ ಪಾತ್ರಗಳ ಬೆಳವಣಿಗೆಯೂ ಶ್ಲಾಘಿಸುವಂತಿದೆ.[೧೯]

ಅನುವಾದಗಳು

[ಬದಲಾಯಿಸಿ]

ಹ್ಯಾರಿ ಪಾಟರ್‌ ಸರಣಿಯ ಇತರೆ ಕೃತಿಗಳೊಂದಿಗೆ, ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ ೬೭ ಭಾಷೆಗಳಲ್ಲಿ ಅನುವಾದಗೊಂಡಿತು.[೨೦]

ಪಠ್ಯ ಬದಲಾವಣೆಗಳು

[ಬದಲಾಯಿಸಿ]

ಹ್ಯಾರಿ ಪಾಟರ್‌ ಅಂಡ್‌ ದಿ ಫಿಲಾಸಫರ್ಸ್‌ ಸ್ಟೋನ್ ‌ ತರಹ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಕಟಣೆಯಾದ ಆವೃತ್ತಿಯಲ್ಲಿ ಬ್ರಿಟಿಷ್‌ ಆವೃತ್ತಿಗಿಂತ ಭಿನ್ನವಾಗಿಸಲು ಕೆಲವು ಬದಲಾವಣೆ ಮಾಡಲಾಯಿತು. ಹಾಫ್‌-ಬ್ಲಡ್‌ ಪ್ರಿನ್ಸ್‌ ಕೃತಿಯಲ್ಲಿ, ಸ್ನೇಪ್‌ ಡಂಬಲ್ಡೊರ್‌ನನ್ನು ಕೊಲ್ಲುವ ಮುಂಚೆ, ಡಂಬಲ್ಡೊರ್‌ ಡ್ರ್ಯಾಕೊ ಮಾಲ್ಫೊಯ್‌ಗೆ ಮಾಡುವ ಪ್ರಸ್ತಾಪದ ರೀತಿಯನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಲಾಗಿದೆ. ಕೆಳಗಿನ ಪಠ್ಯವನ್ನು ಬದಲಾಯಿಸಲು ಕಾರಣಗಳನ್ನು ಲೇಖಕಿಯ ಅಂತರಜಾಲಪುಟದಲ್ಲಿ ವಿವರಿಸಲಾಗಿಲ್ಲ, ಆದರೆ ಬ್ರಿಟಿಷ್ ಆವೃತ್ತಿಯಲ್ಲಿ ಈ ಭಾಗವು ಅಸ್ಪಷ್ಟವಾಗಿದೆ. "ದಿ ಲೈಟ್ನಿಂಗ್‌-ಸ್ಟ್ರಕ್‌ ಟಾವರ್‌ "ಎನ್ನಲಾದ ೨೭ನೆಯ ಅಧ್ಯಾಯದಲ್ಲಿ ಪಠ್ಯವಿದೆ. ಮೃದು-ರಕ್ಷಾಪುಟ ಆವೃತ್ತಿಯ ಪ್ರಕಟಣೆಯಲ್ಲಿ, ಅಮೆರಿಕಾ ಆವೃತ್ತಿಯಲ್ಲಿ, ಬ್ರಿಟಿಷ್‌ ಆವೃತ್ತಿಯನ್ನು ಹೋಲುವಂತೆಯೇ ಪಠ್ಯವನ್ನು ಸೂಕ್ತವಾಗಿ ಬದಲಿಸಲಾಯಿತು.[೨೧] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಕಟಣೆಯಾದ ದೃಢರಕ್ಷಾಪುಟ ಆವೃತ್ತಿಯಲ್ಲಿ ಸೇರಿಸಲಾದ ಪಠ್ಯಭಾಗಗಳನ್ನು ಎದ್ದು-ಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿದೆ:

"[...] He told me to do it or he'll kill me. I've got no choice."
"He cannot kill you if you are already dead. Come over to the right side, Draco, and we can hide you more completely than you can possibly imagine. What is more, I can send members of the Order to your mother tonight to hide her likewise. Nobody would be surprised that you had died in your attempt to kill me — forgive me, but Lord Voldemort probably expects it. Nor would the Death Eaters be surprised that we had captured and killed your mother — it is what they would do themselves, after all. Your father is safe at the moment in Azkaban [...]"

— (U.S. Edition p. 591)(CND Edition p. 552), [HP6]

ಚಲನಚಿತ್ರ

[ಬದಲಾಯಿಸಿ]

ಆರನೆಯ ಕೃತಿಯನ್ನು ಆಧರಿಸಿದ ಚಲನಚಿತ್ರವನ್ನು ಮೂಲತಃ ೨೦೦೮ರ ನವೆಂಬರ್‌ ೨೧ರಂದು ಬಿಡುಗಡೆಗೊಳಿಸುವ ಯೋಜನೆಯಿತ್ತು. ಅಂತಿಮವಾಗಿ ೨೦೦೯ರ ಜುಲೈ ೧೫ಕ್ಕೆ ಬಿಡುಗಡೆಯಾಯಿತು.[೨೨][೨೩] ಡೇವಿಡ್‌ ಯೇಟ್ಸ್‌ ನಿರ್ದೇಶಿಸಿದ ಈ ಚಲನಚಿತ್ರಕ್ಕೆ ಸ್ಟೀವ್‌ ಕ್ಲೋವ್ಸ್‌ ಚಿತ್ರಕಥೆ ರಚಿಸಿದರು. ಡೇವಿಡ್‌ ಹೇಯ್ಮನ್‌ ಮತ್ತು ಡೇವಿಡ್‌ ಬ್ಯಾರೊನ್‌ ನಿರ್ಮಾಪಕರಾಗಿದ್ದರು.[೨೪] ಚಲನಚಿತ್ರದ ಅವಧಿ ೧೫೩ ನಿಮಿಷಗಳು. ಇದು ಹ್ಯಾರಿ ಪಾಟರ್ ‌ ಸರಣಿಯಲ್ಲಿ ಮೂರನೆಯ ಅತ್ಯುದ್ದದ ಚಲನಚಿತ್ರವಾಗಿದೆ.[೨೫] ಇದು ಬಿಡುಗಡೆಯಾದೊಡನೆ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಕಂಡಿತು. ಅತ್ಯುತ್ತಮ ಚಲನಚಿತ್ರ ಛಾಯಾಗ್ರಹಣಕ್ಕಾಗಿ ಅಕ್ಯಾಡೆಮಿ ಪ್ರಶಸ್ತಿ ನಾಮನಿರ್ದೇಶನ ಗಳಿಸುವ ಏಕೈಕ ಹ್ಯಾರಿ ಪಾಟರ್‌ ಚಲನಚಿತ್ರವಾಯಿತು.[೨೬][೨೭]

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ "Harry Potter finale sales hit 11 m". BBC. 23 ಜುಲೈ 2007. Retrieved 20 ಆಗಸ್ಟ್ 2008.
  2. "Harry Potter Books". MuggleNet.com. 1999–2009. Archived from the original on 6 ಜೂನ್ 2009. Retrieved 29 ಮೇ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)CS1 maint: date format (link)
  3. Elisco, Lester (2000–2009). "The Phenomenon of Harry Potter". TomFolio.com. Archived from the original on 12 ಏಪ್ರಿಲ್ 2009. Retrieved 22 ಜನವರಿ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)CS1 maint: date format (link)
  4. Knapp, N.F. (2003). "In Defense of Harry Potter: An Apologia" (PDF). School Libraries Worldwide. International Association of School Librarianship. 9 (1): 78–91. Archived from the original (PDF) on 9 ಮಾರ್ಚ್ 2011. Retrieved 14 ಮೇ 2009.
  5. ೫.೦ ೫.೧ "A Potter timeline for muggles". Toronto Star. 14 July 2007. Retrieved ೨೭ September ೨೦೦೮. {{cite news}}: Check date values in: |accessdate= (help); Italic or bold markup not allowed in: |publisher= (help)
  6. ೬.೦ ೬.೧ "Harry Potter: Meet J.K. Rowling". Scholastic Inc. Retrieved 27 ಸೆಪ್ಟೆಂಬರ್ 2008.
  7. "Speed-reading after lights out". London: Guardian News and Media Limited. 19 ಜುಲೈ 2000. Retrieved 27 ಸೆಪ್ಟೆಂಬರ್ 2008.
  8. "Harry Potter and the Order of the Phoenix - Book Review". Wolfpack Productions. 2003. Retrieved 11 ಜೂನ್ 2009.
  9. "Rowling unveils last Potter date". BBC. 1 ಫೆಬ್ರವರಿ 2007. Retrieved 27 ಸೆಪ್ಟೆಂಬರ್ 2008.
  10. "Bets reopen on Dumbledore death" ಬಿಬಿಸಿಯಿಂದ
  11. Malvern, Jack; Cleroux, Richard (13 ಜುಲೈ 2005). "Reading ban on leaked Harry Potter". The Times. London. Archived from the original on 29 ಮೇ 2010. Retrieved 4 ಮೇ 2010.
  12. Geist, Michael (12 ಜುಲೈ 2005). "The Harry Potter Injunction". Retrieved 14 ಫೆಬ್ರವರಿ 2011.
  13. Stallman, Richard. "Don't Buy Harry Potter Books". Retrieved 14 ಫೆಬ್ರವರಿ 2011.
  14. "Much Ado As Harry Potter Hits the Shelves" ದಿ ಗ್ಲೋಬ್‌ ಅಂಡ್‌ ಮೇಯ್ಲ್‌ನಲ್ಲಿ [ಮಡಿದ ಕೊಂಡಿ]
  15. http://www.raincoast.com/harrypotter/injunction-commentary.html Archived 24 October 2005[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Raincoast.com ೨೦೦೭ರ ಏಪ್ರಿಲ್‌ ೨೪ರಂದು ಮರುಪಡೆಯಲಾಯಿತು.[ಮಡಿದ ಕೊಂಡಿ]
  16. Schillinger, Liesl (31 ಜುಲೈ 2005). "'Harry Potter and the Half-Blood Prince': Her Dark Materials". The New York Times. Retrieved 12 ಫೆಬ್ರವರಿ 2011. {{cite web}}: Italic or bold markup not allowed in: |publisher= (help)
  17. "'Harry Potter and the Half-Blood Prince': The Kirkus Review". Kirkus Reviews. Archived from the original on 13 ಜುಲೈ 2011. Retrieved 12 ಫೆಬ್ರವರಿ 2011. {{cite web}}: Italic or bold markup not allowed in: |publisher= (help); More than one of |archivedate= and |archive-date= specified (help); More than one of |archiveurl= and |archive-url= specified (help)
  18. Zipp, Yvonne (18 ಜುಲೈ 2005). "Classic Book Review: Harry Potter and the Half-Blood Prince". The Christian Science Monitor. Retrieved 12 ಫೆಬ್ರವರಿ 2011. {{cite web}}: Italic or bold markup not allowed in: |publisher= (help)
  19. Paolini, Christopher (20 ಜುಲೈ 2005). "Harry Potter and the Half-Blood Prince". Entertainment Weekly. Archived from the original on 6 ಜೂನ್ 2009. Retrieved 12 ಫೆಬ್ರವರಿ 2011. {{cite web}}: Italic or bold markup not allowed in: |publisher= (help); More than one of |archivedate= and |archive-date= specified (help); More than one of |archiveurl= and |archive-url= specified (help)
  20. Flood, Alison (17 ಜೂನ್ 2008). "Potter tops 400 million sales". theBookseller.com. The Bookseller. Retrieved 12 ಸೆಪ್ಟೆಂಬರ್ 2008.
  21. "Differences between US and UK editions". The Harry Potter Lexicon. Retrieved 8 ಮೇ 2007.
  22. "Coming Sooner: Harry Potter Changes Release Date". TVGuide.com. Archived from the original on 18 ಏಪ್ರಿಲ್ 2009. Retrieved 15 ಏಪ್ರಿಲ್ 2009.
  23. "Harry Potter and the Half-Blood Prince".
  24. "Harry Potter and the Half-Blood Prince". IMDb.
  25. "Half-Blood Prince Runtime confirmed by several sources"
  26. "Nominees & Winners for the 82nd Academy Awards". AMPAS. AMPAS. Retrieved ೨೬ April ೨೦೧೦. {{cite web}}: Check date values in: |accessdate= (help)
  27. Strowbridge, C.S. (19 ಸೆಪ್ಟೆಂಬರ್ 2009). "International Details - Dusk for Ice Age". The Numbers. Retrieved 2 ಮಾರ್ಚ್ 2011.

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಟೆಂಪ್ಲೇಟು:Hpw