ವಿಷಯಕ್ಕೆ ಹೋಗು

ವಿಷ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣು
ಪರಮಾತ್ಮ, ಪರಬ್ರಹ್ಮ, ದೇವರ ರಕ್ಷಣೆ, ಒಳ್ಳೆಯದನ್ನು ಸಂರಕ್ಷಿಸುವುದು, ಇಡೀ ವಿಶ್ವವನ್ನು ನಿಯಂತ್ರಿಸುವವನು, ಕರ್ಮ ಪುನಃಸ್ಥಾಪನೆ, ಮೋಕ್ಷ[][]
Member of ತ್ರಿಮೂರ್ತಿ
ಇತರ ಹೆಸರುಗಳುನಾರಾಯಣ, ಜಗನ್ನಾಥ, ಜಗದೀಶ್ವರ, ಸುರೇಶ, ಪದ್ಮನಾಭ, ರಮಾಪತಿ, ಲಕ್ಷ್ಮಿಪತಿ, ಕಮಲನಯನ
ದೇವನಾಗರಿविष्णु
ಸಂಸ್ಕೃತ ಲಿಪ್ಯಂತರಣViṣṇu
ಸಂಲಗ್ನತೆದಶಾವತಾರ, ಪರಬ್ರಹ್ಮ (Vaishnavism), ತ್ರಿಮೂರ್ತಿ, ಭಗವಾನ್, ಈಶ್ವರ, ತ್ರಿದೇವ್
ನೆಲೆವೈಕುಂಠ, ಕ್ಷೀರಸಾಗರ
ಮಂತ್ರॐ नमो नारायणाय (ಓಂ ನಮೋ ನಾರಾಯಣ)
ॐ नमो भगवते वासुदेवाय (ಓಂ ನಮೋ ಭಗವತೆ ನಾರಾಯಣ)
ಆಯುಧಸುದರ್ಶನ ಚಕ್ರ, Mace (Kaumodaki gada), Conch (Panchajanya)[], Bow (Sharanga), Sword (Nandaka)
ಲಾಂಛನಗಳುಶಾಲಿಗ್ರಾಮ್, ಕಮಲ
ಸಂಗಾತಿಲಕ್ಷ್ಮಿ (ಶ್ರೀದೇವಿ, ಭೂದೇವಿ, ನೀಲಾದೇವಿ, ತುಳಸಿ, ಪದ್ಮಾವತಿ)
ಒಡಹುಟ್ಟಿದವರುಆದಿಪರಾಶಕ್ತಿ alias ಪಾರ್ವತಿ (in some traditions)
ಮಕ್ಕಳುಬ್ರಹ್ಮ
ವಾಹನಗರುಡ[]
ಹಬ್ಬಗಳುಹೋಳಿ, ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ನರಸಿಂಹ ಜಯಂತಿ, ದೀಪಾವಳಿ, ಓಣಂ, ವಿವಾಹ ಪಂಚಮಿ, ವಿಜಯದಶಮಿ, ಅನಂತ ಚತುರ್ದಶಿ, ದೇವಶಯನೀ ಏಕಾದಶಿ, ಕಾರ್ತಿಕ ಪೌರ್ಣಮಿ, ತುಳಸಿ ವಿವಾಹ[]
ಮಹಾವಿಷ್ಣು

ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ' ನಾರಾಯಣ ಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ.

ವಿಷ್ಣುವು ತ್ರಿಮೂರ್ತಿಗಳಲ್ಲೊಬ್ಬ. ವೈಷ್ಣವ ಪಂಥದ ಆರಾಧ್ಯದೈವ. ವಿಶ್ವರಕ್ಷಕ, ವಿಶ್ವದ ಚೈತನ್ಯ ಹಾಗೂ ಸಕಲ ಜೀವರಾಶಿಗಳನ್ನು ತನ್ನ ಶಕ್ತಿಯಿಂದ ನಿಯಂತ್ರಿಸುವವ ಎಂದು ಈತನನ್ನು ಪುರಾಣಗಳು ವರ್ಣಿಸುತ್ತವೆ. ವೈಕುಂಠ ಈತನ ವಾಸಸ್ಥಾನ. ಮಹಾಲಕ್ಷ್ಮಿ ಈತನ ಹೆಂಡತಿ. ಭೂಲೋಕದಲ್ಲಿ ಪಾಪದ ಕೊಡ ತುಂಬಿದಾಗ ವಿಷ್ಣು ಅವತಾರಗಳನ್ನು ತಳೆದು ಪಾಪಕ್ಕೆ ಕಾರಣರಾದವರನ್ನು ಶಿಕ್ಷಿಸಿ, ಜನರನ್ನು ಸಂರಕ್ಷಿಸುವನೆಂಬ ನಂಬಿಕೆಯಿದೆ. ಕಷ್ಟದಲ್ಲಿರುವ ಭಕ್ತರನ್ನು ಕಾಪಾಡಿ ಮುಕ್ತಿ ನೀಡುವ ಈತ ಜನಸಾಮಾನ್ಯರಿಗೆ ಸ್ಪಂದಿಸುವ ದೇವನಾಗಿ ಕಂಡುಬರುತ್ತಾನೆ. ವಿಷ್ಣು ಅವತಾರಗಳನ್ನು ತಾಳಿದಾಗಲ್ಲೆಲ್ಲಾ ಲಕ್ಷ್ಮಿಯೂ ಅವತಾರಗಳನ್ನು ತಳೆದು ಈತನ ಪತ್ನಿಯಾಗಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನೆರವಾಗುತ್ತಾ ಬರುವಳೆಂಬ ನಂಬಿಕೆಯಿದೆ.

ಆದಿ ಅಂತ್ಯ ಇಲ್ಲದವನು

ವಿಷ್ಣುವಿನ ಹೆಸರುಗಳು

[ಬದಲಾಯಿಸಿ]

ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.

ವಿಷ್ಣುವು ಶಾಪಗಳಿಗೆ ಒಳಗಾಗಿದ್ದು

[ಬದಲಾಯಿಸಿ]

ವಿಷ್ಣು ಜನರನ್ನು ರಕ್ಷಿಸುವ ದೇವನಾದರೂ ಕೆಲವು ಶಾಪಗಳಿಗೆ ಒಳಗಾಗಿರುವುದನ್ನು ಪುರಾಣಗಳು ತಿಳಿಸುತ್ತವೆ. ಒಮ್ಮೆ ವಿಷ್ಣು ಮಹಾಲಕ್ಷ್ಮಿಯ ಮುಖವನ್ನು ನೋಡುತ್ತಾ ಕಾರಣವಿಲ್ಲದೆ ನಗಲಾರಂಭಿಸಿದ. ಇದನ್ನು ಕಂಡು ಲಕ್ಷ್ಮಿ ತನ್ನ ಬಗ್ಗೆತಮಾಷೆ ಮಾಡುತ್ತಿರುವನೆಂದು ಬಗೆದು ನಿನ್ನ ದೇಹದಿಂದ ತಲೆ ಬೇರ್ಪಡಲಿ ಎಂದು ಶಪಿಸಿದಳು. ಇದೇ ಸಂದರ್ಭದಲ್ಲಿ ಹಯಗ್ರೀವ ಎಂಬ ಅಸುರ ಒಂದು ಸಾವಿರ ವರ್ಷಕಾಲ ತಪಸ್ಸು ಮಾಡಿ ಅನೇಕ ವರಗಳ ಜೊತೆಗೆ ಕುದುರೆ ತಲೆಯುಳ್ಳ ಮಾನವನಿಂದ ಮಾತ್ರ ಸಾವೆಂದು ಮತ್ತೊಂದು ವರವನ್ನು ಪಡೆದುಕೊಂಡಿದ್ದ. ಹೀಗೆ ಅದ್ಭುತ ಶಕ್ತಿಯನ್ನು ಪಡೆದ ಹಯಗ್ರೀವ ದೇವಲೋಕಕ್ಕೆ ಮುತ್ತಿಗೆ ಹಾಕಿದ. ಲಕ್ಷ್ಮಿಯ ಶಾಪದಂತೆ ವಿಷ್ಣು ತನ್ನ ತಲೆಯನ್ನು ಕಳೆದುಕೊಂಡ. ಆಗ ಬ್ರಹ್ಮ ಕುದುರೆ ತಲೆಯನ್ನು ವಿಷ್ಣುವಿನ ದೇಹಕ್ಕೆ ಜೋಡಿಸಿದ. ಲಕ್ಷ್ಮಿಯ ಶಾಪದಿಂದ ವಿಷ್ಣು ಹಯಗ್ರೀವ ಅಸುರನನ್ನು ಕೊಲ್ಲಲು ಸಾಧ್ಯವಾಯಿತು.

ದೇವಾಸುರರ ನಡುವೆ ಆಗಾಗ ನಡೆಯುತ್ತಿದ್ದ ಯುದ್ಧಗಳಲ್ಲಿ ಒಮ್ಮೆ ಅಸುರರಿಗೆ ಸೋಲುಂಟಾಯಿತು. ಆಗ ಅಸುರರು ಭೃಗುಮುನಿಯ ಹೆಂಡತಿಯಾದ ಪುಲೋಮೆ ಯಾ ಮಾಯಾಂಗನೆ ಬಳಿಗೆ ಹೋಗಿ ರಕ್ಷಣೆ ಬೇಡಿದರು. ಈಕೆ ದೇವತೆಗಳನ್ನು ನಾಶ ಮಾಡಲು ತಪಸ್ಸನ್ನಾರಂಭಿಸಿದಳು. ಇದನ್ನು ತಿಳಿದ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆಕೆಯನ್ನು ಕೊಂದ. ಇದರಿಂದ ಭೃಗು ಮುನಿ ಕೋಪಗೊಂಡು, ಮಾನವ ಜನ್ಮಪಡೆದು ಹೆಂಡತಿಯನ್ನು ಅಗಲಿ ವಿರಹ ವೇದನೆಯನ್ನು ಅನುಭವಿಸೆಂದು ವಿಷ್ಣುವಿಗೆ ಶಾಪ ನೀಡಿದ. ಈ ಶಾಪವೇ ರಾಮಾವತಾರಕ್ಕೆ ಕಾರಣ. ಹೀಗೆ ವಿಷ್ಣು ಹಲವು ಶಾಪಗಳನ್ನು ಪಡೆದು ದೇವತೆಗಳ ರಕ್ಷಣೆಗೆ ಕಾರಣನಾದ ಕಥೆಗಳು ಹಲವಾರಿವೆ.

ಸುದರ್ಶನ ಚಕ್ರ

[ಬದಲಾಯಿಸಿ]

ವಿಷ್ಣುವಿನ ಆಯುಧ ಸುದರ್ಶನ ಚಕ್ರ. ಇದರ ಉಗಮದ ಬಗ್ಗೆ ಎರಡು ರೀತಿಯ ಕಥೆಗಳಿವೆ. ಕಾರ್ತೀಕ ಶುಕ್ಲ ಚರ್ತುದಶಿಯ ದಿನ ವಿಷ್ಣು ಕಾಶೀ ಕ್ಷೇತ್ರವನ್ನು ಸೇರಿ, ಸಾವಿರ ಕಮಲಗಳಿಂದ ಶಿವನನ್ನು ಪೂಜಿಸುತ್ತಿರುವಾಗ, ಶಿವ ಆ ಕಮಲಗಳಲ್ಲಿ ಒಂದನ್ನು ಅದೃಶ್ಯ ಮಾಡಿದ. ವಿಷ್ಣು ಕಡಿಮೆಯಾದ ಕಮಲ ಪುಷ್ಪದ ಬದಲಿಗೆ ತನ್ನ ಕಣ್ಣಿನಿಂದಲೇ ಶಿವನನ್ನು ಪೂಜಿಸಲು, ಶಿವ ಒಲಿದು, ತಾನು ಜಲಂಧರನೆಂಬ ದೈತ್ಯನನ್ನು ಕೊಂದ ಆಯುಧವನ್ನು ವಿಷ್ಣುವಿಗೆ ನೀಡಿದ. ಮತ್ತೊಂದು ಕಥೆಯ ಪ್ರಕಾರ ದೇವಬಡಗಿ ವಿಶ್ವಕರ್ಮ ಸಾಣೆ ಹಿಡಿಯುವಾಗ ಬಿದ್ದ ಚಿಕ್ಕ ಚಿಕ್ಕ ಚೂರುಗಳನ್ನು ಸೇರಿಸಿ ಸುದರ್ಶನ ಚಕ್ರ ರಚಿಸಿ, ಅದನ್ನು ದ್ವಾದಶಾದಿತ್ಯರಲ್ಲಿ ಒಬ್ಬನಾದ ವಿಷ್ಣುವಿಗೆ ನೀಡಿದ. ವಿಷ್ಣು ಇದನ್ನು ದುಷ್ಟರನ್ನು ಶಿಕ್ಷಿಸಲು ಬಳಸಿದ. ಸುದರ್ಶನ ಚಕ್ರಕ್ಕೆ ವಜ್ರನಾಭ ಎಂಬ ಇನ್ನೊಂದು ಹೆಸರಿದೆ. ಈ ಚಕ್ರಕ್ಕೆ ಮಧ್ಯೆ ರಂಧ್ರವಿದ್ದು ಇದರ ಮಧ್ಯದಿಂದ ಸಾವಿರ ತೋಳುಗಳು ಹರಡಿಕೊಂಡಿವೆ. ಇದರ ಹೊರಭಾಗ ಚೂಪಾಗಿದೆ.

ಲಕ್ಷಣಗಳು

[ಬದಲಾಯಿಸಿ]

ವಿಷ್ಣುವಿನ ಎದೆಯ ಮೇಲಿರುವ ಚಿಹ್ನೆಗೆ ಶ್ರೀವತ್ಸ ಎಂದು ಹೆಸರಿದೆ. ಈತನ ಬಳಿ ಇರುವ ಶಂಖದ ಹೆಸರು ಪಾಂಚಜನ್ಯ. ಇದನ್ನು ಸ್ಪರ್ಶಿಸುವ ಮೂಲಕವೇ ಅಪಾರ ಬುದ್ಧಿವಂತಿಕೆ ದೊರೆಯುವುದೆಂಬ ನಂಬಿಕೆ ಇದೆ. ಸಾರಂಗ ಈತನ ಧನುಸ್ಸು. ಇದಕ್ಕೆ ವೈಷ್ಣವ ಚಾಪ ಎಂಬ ಹೆಸರೂ ಇದೆ. ವೈಜಯಂತಿ ಈತನ ಕಂಠಾಭರಣ. ಐದು ಆಭರಣಗಳನ್ನು ಒಟ್ಟುಗೂಡಿಸಿ ಮಾಡಿರುವ ಈ ಹಾರಕ್ಕೆ ವನಮಾಲಾ ಎಂಬ ಹೆಸರಿದೆ. ವಿಷ್ಣುವಿನ ವಾಹನ ಕಶ್ಯಪ ವಿನತೆಯರ ಮಗನಾದ ಗರುಡ.

ಋಗ್ವೇದದಲ್ಲಿ ವಿಷ್ಣುವಿನ ಪ್ರಸ್ತಾಪ ಕೆಲವು ಕಡೆಯಲ್ಲಿದೆ. ಆದರೆ ಇಲ್ಲಿ ಇಂದ್ರನಿಗೆ ಹೆಚ್ಚಿನ ಪ್ರಾಮುಖ್ಯವಿರುವುದು ಕಂಡುಬರುತ್ತದೆ. ಇಲ್ಲಿ ವಿಷ್ಣು ಇಂದ್ರನ ಕಿರಿಯ ಸೋದರ ಸ್ಥಾನ ಪಡೆದಿದ್ದಾನೆ. ಹೀಗಾಗಿ ವಿಷ್ಣು ಸಹಸ್ರನಾಮಗಳಲ್ಲಿ ಉಪೇಂದ್ರ, ಇಂದ್ರಾವರಜ ಮುಂತಾದ ಹೆಸರುಗಳು ಸೇರಿವೆ. ಮಹಾಭಾರತದಲ್ಲಿ ಭೀಷ್ಮ ವಿಷ್ಣುಶಕ್ತಿಯ ವಿವರ ನೀಡುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. Wendy Doniger (1999). Merriam-Webster's Encyclopedia of World Religions. Merriam-Webster. p. 1134. ISBN 978-0-87779-044-0.
  2. Editors of Encyclopaedia Britannica (2008). Encyclopedia of World Religions. Encyclopaedia Britannica, Inc. pp. 445–448. ISBN 978-1-59339-491-2. {{cite book}}: |author= has generic name (help)
  3. ೩.೦ ೩.೧ Constance Jones; James D. Ryan (2006). Encyclopedia of Hinduism. Infobase Publishing. pp. 491–492. ISBN 978-0-8160-7564-5.
  4. Muriel Marion Underhill (1991). The Hindu Religious Year. Asian Educational Services. pp. 75–91. ISBN 978-81-206-0523-7.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: