ರಷ್ಯಾದ ಕ್ರಾಂತಿ
ರಷ್ಯಾದ ಕ್ರಾಂತಿ[೧] (೧೯೧೭). ರಷ್ಯಾದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ.[೨] ಈ ಕ್ರಾಂತಿಯು ಶತಮಾನಗಳ ಝಾರ್ ನಿರಂಕುಶಪ್ರಭುತ್ವದ ಆಡಳಿತವನ್ನು ಕೊನೆಗೊಳಿಸಿ , ಸೋವಿಯತ್ ಒಕ್ಕೂಟದ ರಚನೆಗೆ ಕಾರಣವಾಯಿತು. ರಷ್ಯಾದ ಕ್ರಾಂತಿಯು ಎರಡು ಮಖ್ಯ ಹೋರಾಟಗಳನ್ನು ಒಳಗೊಂಡಿದೆ. ಆ ಎರಡು ಹೋರಾಟಗಳು ಫೆಬ್ರವರಿ ಕ್ರಾಂತಿ ಮತ್ತು ಅಕ್ಟೋಬರ್ ಕ್ರಾಂತಿ. ಫೆಬ್ರವರಿ ಕ್ರಾಂತಿಯ ಸಮಯದಲ್ಲಿ ಝಾರ್ ನಿರಂಕುಶಪ್ರಭುತ್ವವನ್ನು ಕೆಳಗಿಳಿಸಿ , ಸೋವಿಯತ್ ಒಕ್ಕೂಟವು ಉಗಮವಾಯಿತು. ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ಸೇರಿಕೊಂಡು ಬೆಳೆಯುತ್ತಿರುವ ನಾಗರೀಕ ಅಶಾಂತಿ ಮತ್ತು ಬಹಿರಂಗ ಕ್ರಾಂತಿಯು,ಝಾರ್ ಎರಡನೇ ನಿಕೊಲಸ್ (೧೮೬೮-೧೯೧೮), ರಷ್ಯಾದ ನಿರಂಕುಶರಾಜನಿಗೆ ಪದತ್ಯಾಗ ಮಾಡಲು ಉತ್ತೇಜಿಸಿತು. ರಷ್ಯಾದ ಚಕ್ರವರ್ತಿ ನಿಕೋಲಸ್ ಪದತ್ಯಾಗ ಮಾಡಿದ ನಂತರ, ರಷ್ಯಾದ ಅಧಿಕಾರ ಬಿದ್ದು ಹೋಯಿತು. ಆ ಸಮಯದಲ್ಲಿ ಹಂಗಾಮಿ ಸರ್ಕಾರ ತಾತ್ಕಾಲಿಕವಾಗಿ ಆಡಳಿತಕ್ಕೆ ಬಂದಿತು. ಅಕ್ಟೋಬರ್ ಅಲ್ಲಿ ನಡೆದ ಎರಡನೆಯ ಕ್ರಾಂತಿಯ ಸಮಯದಲ್ಲಿ, ಹಂಗಾಮಿ ಸರ್ಕಾರವು ಬಿದ್ದು ಹೋಗಿ ಬೋಲ್ಷೆವಿಕ್ (ಕಮ್ಯುನಿಸ್ಟ್) ಸರ್ಕಾರದ ವ್ಲಾಡಿಮಿರ್ ಲೆನಿನ್(೧೮೭೦-೧೯೨೪) ಆಡಳಿತಕ್ಕೆ ಬಂದರು.
ಫೆಬ್ರವರಿ ಕ್ರಾಂತಿ
[ಬದಲಾಯಿಸಿ]ರಾಜಕೀಯ ಮತ್ತು ರಾಷ್ಟ್ರೀಯ ಕಾರಣಗಳು
[ಬದಲಾಯಿಸಿ]ಫೆಬ್ರವರಿ ಕ್ರಾಂತಿಯು[೩] ಆಗಿನ ರಷ್ಯಾದ ರಾಜಧಾನಿ ಪೆಟ್ರೋಗ್ರಾಡ್, (ಈಗ ಸೇಂಟ್ ಪೀಟರ್ಸ್ಬರ್ಗ್) ಸುತ್ತಲೂ ಕೇಂದ್ರೀಕೃತವಾಗಿತ್ತು. ಜನರು ಎರಡನೇ ನಿಕೊಲಸ್ ನ ನಾಯಕತ್ವದ ಸಾಮರ್ಥ್ಯದ ನಂಬಿಕೆಯನ್ನು ಕಳೆದುಕೊಂಡಿದ್ದರು. ಸರ್ಕಾರವು ಬಲು ಭ್ರಷ್ಟವಾಗಿತ್ತು. ರಷ್ಯಾ ಆರ್ಥಿಕವಾಗಿ ಹಿಂದುಳಿದಿತ್ತು. ನಿಕೋಲಸ್ಗೆ ರಾಷ್ಟ್ರದ ವಿಷಯಗಳಿಗಿಂತ ತನ್ನ ಕುಟುಂಬದ ವಿಷಯಗಳಲ್ಲಿ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಅವರು ರಾಜನಾಗುವುದು ದೇವರ ಆಯ್ಕೆ ಎಂಬುದನ್ನು ನಂಬಿದ್ದರು, ಅದಕ್ಕಾಗಿ ಅವರು ತನ್ನ ಸೌಲಭ್ಯಗಳನ್ನು ಅತಿಯಾಗಿ ಬಳಸುತ್ತಿದ್ದರು. ನಿಕೋಲಸ್ ತನ್ನ ಇಚ್ಛೆಯನ್ನು ವಿರೋಧಿಸಿದಲ್ಲಿ, ರಷ್ಯಾದ ಸಂಸತ್ತನ್ನೇ ವಿಸರ್ಜನೆ ಮಾಡುತ್ತಿದ್ದನು. ಅಲ್ಲದೆ, ರಷ್ಯಾದ ಉದ್ದಕ್ಕೂ ಕೈಗಾರೀಕರಣ ಮತ್ತು ರಾಷ್ಟ್ರೀಯತೆಯ ಹೆಚ್ಚಾಗುತ್ತಿದ್ದರೂ, ಅವರಿಗೆ ಅದು ಅರ್ಥವಾಗಲಿಲ್ಲ. ಫೆಬ್ರುವರಿ ಕ್ರಾಂತಿಯ ಸಮಯದಲ್ಲಿ ರಷ್ಯಾ ಮೊದಲ ವಿಶ್ವಯುದ್ಧದಲ್ಲಿ ಭಾಗವಹಿಸಿ, ಹಾನಿಗೊಳಗಾಗಿತ್ತು. ಜರ್ಮನಿ ಮತ್ತು ಮುಂತಾದ ರಾಷ್ಟ್ರಗಳಿಗಿಂತ ರಷ್ಯಾ ಯುದ್ಧೋಪಕರಣಗಳಲ್ಲಿ ದುರ್ಬಲವಾಗಿತ್ತು. ರಷ್ಯಾದವರ ಸಾವು-ನೋವುಗಳು ಹಿಂದಿನ ಯಾವುದೇ ಯುದ್ಧದಲ್ಲಿ ಯಾವುದೇ ರಾಷ್ಟ್ರ ಅನುಭವಿಸಿದ್ದಕ್ಕಿಂತ ಹೆಚ್ಚಾಗಿತ್ತು. ಯುದ್ಧದಲ್ಲಿ ಪಲ್ಗೊಳ್ಳುವಯತ್ನ ಆರ್ಥಿಕವಾಗಿ ದುಬಾರಿಯಾಗಿತ್ತು.
ಚಳುವಳಿಗಳ ಪ್ರಾರಂಭ
[ಬದಲಾಯಿಸಿ]ರಷ್ಯಾದ ರಾಡಿಕಲ್ ಎಲಿಮೆಂಟ್ಸ್ರವರು ಮಾಡರೇಟ್ಗಳ ಜೊತೆ ಸೇರಿ ತ್ಸಾರ್ನನ್ನು ಇಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಮಹಿಳೆಯರು ಹೆಚ್ಚು ಆಹಾರ ಬೇಕೆಂದು ಚಳುವಳಿ ಪ್ರಾರಂಭಿಸಿದರು, ಆದರೆ ಘಟನೀಯವಾಗಿ ಇತರ ಉದ್ಯಮಗಳಿಗೆ ಸೇರಿ ನಗರದಾದ್ಯಂತ ಹರಡಿತ್ತು. ಮುಂಭಾಗದಲ್ಲಿ ಸೈನಿಕರು ಸಹ ಕ್ರಾಂತಿಗೆ ಸೇರಿದರು. ಕೈಗಾರಿಕಾ ಕಾರ್ಮಿಕರು ಜನರ ಬೆಂಬಲದೊಂದಿಗೆ ಪ್ರತಿಭಟನೆ ಮಾಡಿ, ಪೋಲೀಸರೊಡನೆ ಸೆಣಸಾಡಿದರು. ಜನರೆಲ್ಲರು ಬೀದಿಗಳನ್ನು ಬಿಡಲು ನಿರಾಕರಿಸಿದರು. ಮಾರ್ಚ್ ೧೦ರಂದು ಮುಷ್ಕರ ಪೆಟ್ರೋಗ್ರಾಡ್ನ ಎಲ್ಲಾ ಕಾರ್ಮಿಕರಲ್ಲಿ ಹರಡಿತು ಮತ್ತು ಕೋಪಗೊಂಡವರು ಪೋಲೀಸ್ ಠಾಣೆಯನ್ನು ನಾಶ ಪಡಿಸಿದರು. ಮಾರ್ಚ್ ೧೧ರಂದು, ಪೆಟ್ರೋಗ್ರಾಡ್ ಸೇನೆ ಪಡೆಯನ್ನು ಜನರ ಹೋರಾಟವನ್ನು ಹತ್ತಿಕ್ಕಲು ಕರೆಸಲಾಯಿತು. ಕೆಲವು ಮುಖಾಮುಖಿಗಳಲ್ಲಿ, ಸೈನಿಕರು ಗುಂಡಿನ ಸುರಿಮಳೆಯನ್ನು ಸುರಿಸಿ ಪ್ರತಿಭಟನಾಕಾರರನ್ನು ಕೊಂದರು, ಆದರೂ ಪ್ರತಿಭಟನಾಕಾರರು ರಸ್ತೆಗಳನ್ನು ಬಿಡದೆ ಚಳುವಳಿಗಳನ್ನು ಮುಂದುವರೆಸಿದರು.
ಸರ್ಕಾರದಲ್ಲಾದ ಬದಲಾವಣೆಗಳು
[ಬದಲಾಯಿಸಿ]ಅಂದೇ ಪಾರ್ಲಿಮೆಂಟನ್ನು ಮತ್ತೆ ವಿಸರ್ಜನೆ ಮಾಡಲಾಯಿತು. ಮಾರ್ಚ್ ೧೨ರಂದು ಪೆಟ್ರೋಗ್ರಾಡ್ ಸೇನಾ ತುಕಡಿ ನಂತರ ತುಕಡಿ ಕರೆಸಿದರು, ಆದರೆ ಸೈನಿಕರು ಪಕ್ಷಾಂತರ ಮಾಡಿದ್ದರಿಂದ ಕ್ರಾಂತಿಯು ಜಯಭೇರಿಯಾಯಿತು. ಸಾಮ್ರಾಜ್ಯಶಾಹಿ ಸರ್ಕಾರವು ಬಲವಂತವಾಗಿ ರಾಜೀನಾಮೆ ನೀಡಲೇ ಬೇಕಾಯಿತು. ಸಂಸತ್ತು ಶಾಂತಿಯುತವಾಗಿ ಕ್ರಾಂತಿ ನಿಯಂತ್ರಣಕ್ಕೆ ಪೆಟ್ರೋಗ್ರಾಡ್ ಸೋವಿಯತ್ನ ಆಶಯವನ್ನು ಅನುಸರಿಸುವ ಒಂದು ತಾತ್ಕಾಲಿಕ ಸರ್ಕಾರವೊಂದನ್ನು ರಚಿಸಿದರು. ಮಾರ್ಚ್ ೧೪ ರಂದು ಪೆಟ್ರೋಗ್ರಾಡ್ ಸೋವಿಯತ್ನ ನಿರ್ದೇಶಕ ರಷ್ಯಾದ ಸೈನಿಕರು ಮತ್ತು ನಾವಿಕರಿಗೆ ಸೂಚನೆ ಆದೇಶ ಸಂಖ್ಯೆ ೧ಅನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರವಾಗಿ ಸೋವಿಯತ್ನ ಆಶಯಗಳನ್ನು ಗೌರವಿಸುವ ಸೂಚನೆಗಳನ್ನು ಮಾತ್ರ ಪ್ರತಿಒಬ್ಬರು ಪಾಲಿಸಬೇಕಿತ್ತು. ಮರುದಿನ, ಮಾರ್ಚ್ ೧೫, ನಿರಂಕುಶ ರಾಜ ಎರಡನೇ ನಿಕೊಲಸ್ ಸಿಂಹಾಸನವನ್ನು ಆತನ ಸಹೋದರ ಮೈಕೆಲ್ಗೆ (೧೮೭೮-೧೯೧೮) ವಹಿಸಲು ಪ್ರಸ್ತಾಪಿಸಿದನು, ಆದರೆ ಮೈಕೆಲ್ ಕಿರೀಟವನ್ನು ನಿರಾಕರಿಸಿದ ಕಾರಣ ಝಾರ್ ನಿರಂಕುಶಪ್ರಭುತ್ವ ತನ್ನ ಅಂತ್ಯ ಕಂಡಿತು. ೧೯೧೮ರಲ್ಲಿ ಬೋಲ್ಷೆವಿಕ್ ಪಡೆಗಳು ಝಾರ್ ಎರಡನೇ ನಿಕೊಲಸ್ ಮತ್ತು ಅವರ ಕುಟುಂಬವನ್ನು ಕೊಲ್ಲಿಸಿ, ಬಲಿಯಾದವರ ಇರಿದ ದೇಹವನ್ನು ಬಚ್ಚಿಟ್ಟಿದ್ದರು.
ಹಂಗಾಮಿ ಸರ್ಕಾರ
[ಬದಲಾಯಿಸಿ]ಹಂಗಾಮಿ ಸರ್ಕಾರ ವಿವಿಧ ಹಕ್ಕುಗಳನ್ನು ಒಂದು ಸಾರ್ವಜನಿಕೆ ಕಾರ್ಯಕ್ರಮದಲ್ಲಿ ಸ್ಥಾಪಿಸಲಾಯಿತು. ಈ ಹಕ್ಕುಗಳೇ: ವಾಕ್ ಸ್ವಾತಂತ್ರ್ಯ, ಧರ್ಮ ಪಾಲನಾ ಸ್ವಾತಂತ್ರ್ಯ, ಶಾಸನಸಭೆಯ ಸ್ವಾತಂತ್ರ್ಯ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಾರಿದ್ದರು. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಮುಷ್ಕರ ಮಾಡುವ ಹಕ್ಕುನ್ನು ನೀಡಿತು. ಈ ಸರ್ಕಾರದ ನಾಯಕರಾದ ಅಲೆಕ್ಸಾಂಡರ್ ಕೆರೆನ್ಸ್ಕಿ ಸೇರಿದಂತೆ ಇನ್ನೂ ಕೆಲವರ ವಿರುದ್ಧವಾಗಿ ಸಾಮಾಜಿಕ ಕ್ರಾಂತಿ ನಿಲ್ಲಲೇ ಇಲ್ಲ. ಇನ್ನು ಮುಂದಿನ ಯುದ್ಧದಲ್ಲಿ ಪಾಲ್ಗೊಳ್ಳುವುದು ರಾಷ್ಟ್ರೀಯ ಕರ್ತವ್ಯವೆಂದು ತಿಳಿದಿದ್ದರು. ಸರ್ಕಾರವು ಆಹಾರ ಕೊರತೆಯ ಸಮಸ್ಯೆಯನ್ನು ಪರಿಹರಿಸದೆ ಇರುವ ಕಾರಣ ರೈತರು ಕೃಷಿಯನ್ನು ಲೂಟಿ ಮಾಡುತ್ತಿದ್ದರು ಅಥವಾ ಆಹಾರಕ್ಕಾಗಿ ಹೋರಾಟಗಳನ್ನು ಮಾಡುತ್ತಿದ್ದರು. ಅರಾಜಕತೆಯು ನಿಧಾನವಾಗಿ ಸ್ವಾತಂತ್ರ್ಯದ ಸ್ಥಾನವನ್ನು ತಗೆದುಕೊಳ್ಳುತ್ತಿತ್ತು. ಇದು ವ್ಲಾಡಿಮಿರ್ ಇಲಿಚ್ ಲೆನಿನ್ರಂತ ಒಬ್ಬ ಮೂಲಭೂತ ಸಮಾಜವಾದಿಗೆ, ದೇಶದ ಸಂಪೂರ್ಣ ಹಿಡಿತ ತೆಗೆದುಕೊಳ್ಳುವುದಕ್ಕೆ ಸರಿಯಾದ ಸಮಯವಾಗಿತ್ತು.
ಅಕ್ಟೋಬರ್ ಕ್ರಾಂತಿ
[ಬದಲಾಯಿಸಿ]ಅಕ್ಟೋಬರ್ ಕ್ರಾಂತಿಯು[೪] ಬೋಲ್ಷೆವಿಕ್ ಪಕ್ಷದ ವ್ಲಾಡಿಮಿರ್ ಲೆನಿನ್ ನಾಯಕತ್ವದಲ್ಲಿ ಪ್ರಾರಂಭವಾಯಿತು. ಕಾರ್ಲ್ ಮಾರ್ಕ್ಸ್ ರವರ ರಾಜಕೀಯ ಕಲ್ಪನೆಗಳು ಲೆನಿನ್ಗೆ ಸರಿ ಅನಿಸಿದವು. ಈ ರಾಜಕೀಯ ಸಿದ್ಧಾಂತವನ್ನು ಸಾಮಾನ್ಯವಾಗಿ ಮಾರ್ಕ್ಸ್-ಲೆನಿನ್ಸ್ ಎಂದು ಕರೆಯಲಾಗುತ್ತದೆ. ಇದು ಸಮತಾವಾದ (ಕಮ್ಯುನಿಸ್ಟ್) ಸರ್ಕಾರದ ಬಗ್ಗೆ ೨೦ನೇ ಶತಮಾನದಲ್ಲಿ ಹರಡುವಿಕೆಗೆ ನಾಂದಿ ಹಾಡಿತ್ತು. ಇದು ಫೆಬ್ರವರಿ ಕ್ರಾಂತಿಗಿಂತ ತುಂಬಾ ಕಡಿಮೆ ವಿರಳವಾಗಿತ್ತು ಆದರು ಅಂತ್ಯದಲ್ಲಿ ಉದ್ದೇಶಪೂರ್ವಕ ಯೋಜನೆ ಮತ್ತು ಸಮನ್ವಯ ಚಟುವಟಿಕೆಗಳಿಂದ ಕ್ರಾಂತಿಗೆ ಜಯ ಬಂದಿತು. ಅನುಭವಿ ಸೈನ್ಯದ ಪಡೆಗಳು ಭಿನ್ನಮತೀಯರನ್ನು ಅಡಗಿಸಲು ನಗರಕ್ಕೆ ಬಂದಿದ್ದರು, ಆದರೆ ಬೋಲ್ಷೆವಿಕ್ ಪಕ್ಷದವರು ಜರ್ಮನ್ನರ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಆರೋಪಗಳಿದ್ದವು. ಲೆನಿನ್ ಫಿನ್ಲ್ಯಾಂಡ್ಗೆ ತಪ್ಪಿಸಿಕೊಂಡಿದ್ದರು, ಆದರು ಅನೇಕರನ್ನು ಬಂಧಿಸಲಾಯಿತು. ಲೆನಿನ್ ಯುರೋಪಿನಲ್ಲಿ ಭಾಗಶಃ ೨೦ನೇ ಶತಮಾನವನ್ನು ಪ್ರಯಾಣ, ಕೆಲಸ ಮತ್ತು ಪ್ರಚಾರದಲ್ಲಿ ಕಳೆದಿದ್ದರು.
ಲೆನಿನ್ ರಾಜಕೀಯ ಪ್ರವೇಶ
[ಬದಲಾಯಿಸಿ]ಲೆನಿನ್ರವರನ್ನು ಸಮಾಜವಾದಿ ಮತ್ತು ಝಾರ್ ಪ್ರಭುತ್ವದ ಶತ್ರು ಎಂದು ಕರೆಯಲಾಗುತ್ತಿತ್ತು, ಅದಕ್ಕೆ ಅವರು ತನ್ನ ಸ್ವಂತ ಸುರಕ್ಷತೆಗಾಗಿ ಹೆದರುತ್ತಿದ್ದರು. ಆದರೂ, ಝಾರ್ ಬಂಧನ ಮತ್ತು ರಷ್ಯಾದ ರಾಜಕೀಯ ಗೊಂದಲದಲ್ಲಿ , ಲೆನಿನ್ ತನ್ನ ಪಕ್ಷವನ್ನು ಅಧಿಕಾರಕ್ಕೆ ತರುವ ಅವಕಾಶ ಕಂಡರು. ಸ್ವಿಜರ್ಲ್ಯಾಂಡ್ನಲ್ಲಿದ್ದ ತನ್ನ ಮನೆಯಿಂದ ಅವರು ಜರ್ಮನ್ ಅಧಿಕಾರಿಗಳ ಸಹಾಯದಿಂದ ರಷ್ಯಾಕ್ಕೆ ಮರಳಿದರು. ವಿಶ್ವಯುದ್ಧದಿಂದ ರಷ್ಯಾವನ್ನು ಹಿಂದೆಗೆಯಬೇಕು ಎಂಬ ಉದ್ದೇಶದಿಂದ, ಜರ್ಮನ್ನರು ಪೂರ್ತಿ ಮುಚ್ಚಿರುವ ರೈಲಿನಲ್ಲಿ ಲೆನಿನ್ನನ್ನು ಮತ್ತೆ ರಷ್ಯಾಕ್ಕೆ ಕಳುಹಿಸಲು ಸಿದ್ಧರಿದ್ದರು. ೧೯೧೭ರ ಏಪ್ರಿಲ್ನಲ್ಲಿ ಲೆನಿನ್ ಹಿಂದಿರುಗಿದಾಗ, ರಷ್ಯಾದ ಜನಸಾಮಾನ್ಯರು ಮತ್ತು ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳು ಅವರನ್ನು ಸ್ವಾಗತಿಸಿದರು. ಅವರು ತಕ್ಷಣ ಹಂಗಾಮಿ ಸರ್ಕಾರ ಮತ್ತು ಪೆಟ್ರೋಗ್ರಾಡ್ ಸೋವಿಯತ್ಗಳ ರೀತಿ-ನೀತಿಗಳು ಮತ್ತು ಸಿದ್ಧಾಂತಗಳನ್ನು ಖಂಡಿಸಿದರು. ಬೋಲ್ಷೆವಿಕ್ ಪತ್ರಿಕೆ 'ಪ್ರಾವ್ಡಾ', ಏಪ್ರಿಲ್ನಲ್ಲಿ ಪ್ರಕಟಮಾಡಿದ ಲೆನಿನ್ನ ಪ್ರಬಂಧದಲ್ಲಿ, ಅವರು ಪ್ರಗತಿಪರರ (ಕಟ್ಟುನಿಟ್ಟಲ್ಲದ ಕಮ್ಯುನಿಸ್ಟರು) ಸಹಕಾರ ಬೇಕೆಂದು ಮತ್ತು ಯುದ್ಧವನ್ನು ಅದೇ ಕ್ಷಣದಲ್ಲಿ ನಿಲ್ಲಿಸಬೇಕೆಂದು ಕೇಳಿದ್ದರು.ಲೆನಿನ್ ಅಕ್ಟೋಬರ್ ೨೬ರಂದು ಅರಮನೆಯನ್ನು ವಶಪಡಿಸಿಕೊಂಡರು. ಲೆನಿನ್, ಅಕ್ಟೋಬರ್ ಕ್ರಾಂತಿಯನ್ನು ಕನಿಷ್ಠ ರಕ್ತಪಾತದಿಂದ ಜಯ ಸಾಧಿಸಿದ್ದರು.
ರಷ್ಯಾದ ಅಂತರ್ಯುದ್ಧ
[ಬದಲಾಯಿಸಿ]ಸೋವಿಯತ್ನ ಸದಸ್ಯರು ಆರಂಭದಲ್ಲಿ ಮುಕ್ತವಾಗಿ ಆಯ್ಕೆಯಾದರು, ಆದರೆ ಸಾಮಾಜಿಕ-ಕ್ರಾಂತಿಕಾರಿ ಪಕ್ಷದವರು, ಕ್ರಾಂತಿಕಾರಿಗಳು, ಮತ್ತು ಇತರ ಎಡಪಂಥೀಯರು ಸೋವಿಯತ್ನ ಸದಸ್ಯರಾಗಿ ಬೊಲ್ಷೆವಿಕ್ನ ವಿರೋಧ ವ್ಯಕ್ತಪಡಿಸಿದರು. ಸೇಂಟ್ ಪೀಟರ್ಸ್ಬರ್ಗ್ ಮತ್ತು ಮಾಸ್ಕೋ ಕೈಗಾರಿಕೋದ್ಯಮ ಪ್ರದೇಶಗಳ ಹೊರಗೆ ಕಡಿಮೆ ಪ್ರಮಾಣದ ಬೆಂಬಲ ದೊರೆಯುತ್ತಿದ್ದನ್ನು ಗಮನಿಸಿ, ಅವರು ಸೋವಿಯತ್ನಲ್ಲಿ ಸದಸ್ಯರಾಗಲು ಬೊಲ್ಷೆವಿಕ್ ಅಲ್ಲದವರನ್ನು ಮತ್ತು ಬೊಲ್ಷೆವಿಕ್ವನ್ನು ದ್ವೇಷಿಸಿದವರನ್ನು ನಿಷೇಧಿಸಿತು. ಅದು ದೇಶೀಯ ಒತ್ತಡವನ್ನು ಉಂಟು ಮಾಡಿತು, ಈಗ ಮತ್ತೊಂದು ರಾಜಕೀಯ ಸುಧಾರಣೆ ಬೇಕು ಎಂದು ಅನೇಕ ವ್ಯಕ್ತಿಗಳು ಮೂರನೇ ರಷ್ಯಾದ ಕ್ರಾಂತಿಗೆ ಕರೆ ನೀಡಿದರು. ಈ ಚಳುವಳಿಗೆ ಸಾಕಷ್ಟು ಬೆಂಬಲ ದೊರೆಯಿತು.ಪ್ರಗತಿಪರ ಮತ್ತು ರಾಜಪ್ರಭುತ್ವದ ಪಡೆಗಳು ವೈಟ್ ಸೈನ್ಯವನ್ನು ರಚಿಸಿ ಬೊಲ್ಷೆವಿಕ್ರ ರೆಡ್ ಸೈನ್ಯದ ವಿರುದ್ಧ ಸಂಘಟಿಸಿದರು.[೫] ಈ ಹೋರಾಟಗಳ ಸರಣಿಯನ್ನು ರಷ್ಯಾದ ಅಂತರ್ಯುದ್ಧ[೬] ಎಂದು ಕರೆಯುತ್ತಾರೆ.
ಅಧಿಕಾರವನ್ನು ಆಕ್ರಮಿಸಿಕೊಳ್ಳಲು ಅವಕಾಶ ಇದ್ದರೂ, ಲೆನಿನ್ ಕೂಡಲೇ ತಮ್ಮ ಬೆಂಬಲ ಕಡಿಮೆಯಾಗಿತ್ತು ಎಂದು ಸುಲಭವಾಗಿ ಕಂಡುಹಿಡಿದರು. ಜರ್ಮನಿಯೊಂದಿಗೆ ಅವರು ಒಪ್ಪಿಕೊಂಡಿದ್ದ ಶಾಂತಿ-ನೀತಿಯಂತೆ ರಷ್ಯಾದ ದೊಡ್ಡ ಪ್ರಮಾಣದ ಪ್ರದೇಶ ಬಿಟ್ಟುಕೊಡಬೇಕಿತ್ತು, ಜನರಿಗೆ ಇದು ಇಷ್ಟವಿರಲಿಲ್ಲ. ಅಕ್ಟೋಬರ್ ಕ್ರಾಂತಿಯ ಸ್ವಲ್ಪ ದಿನಗಳ ನಂತರ, ರಷ್ಯಾದ ಅಂತರ್ಯುದ್ಧ ರೆಡ್ಸ್ ಮತ್ತು ವೈಟ್ಸ್ ಗುಂಪುಗಳ ನಡುವೆ ನಡೆಯಿತು. ರಕ್ತಮಯವಾದ ನಾಲ್ಕು ವರ್ಷದ ಹೋರಾಟದ ನಂತರ ಲೆನಿನ್ ಮತ್ತು ಬೊಲ್ಷೆವಿಕ್ರ ರೆಡ್ಸ್ ಸೈನ್ಯ ಗೆಲವು ಸಾಧಿಸಿ ೧೯೨೨ರಲ್ಲಿ ಸೋವಿಯತ್ ಒಕ್ಕೂಟವನ್ನು ಮತ್ತೆ ಸ್ಥಾಪಿಸಿದರು. ಈ ಹೋರಾಟದಲ್ಲಿ ೧೫ ದಶಲಕ್ಷ ಜನರು ಸತ್ತರು ಮತ್ತು ಶತಕೋಟಿ ಜನ ಗಾಯಾಳುಗಳಾಗಿ ಉಳಿದರು. ೧೯೨೩ರಲ್ಲಿ ಲೆನಿನ್ ನಿಧನರಾದರು ಮತ್ತು ಸ್ಟಾಲಿನ್ ಬೊಲ್ಷೆವಿಕ್ ಕಮ್ಯುನಿಸ್ಟ್ ಪಾರ್ಟಿ ವಹಿಸಿಕೊಂಡರು. ೧೯೯೧ರಲ್ಲಿ ಯುಎಸ್ಎಸ್ಆರ್ ವಿಸರ್ಜಿಸುವವರೆಗೆ ರಷ್ಯಾ ಆಡಳಿತವನ್ನು ಸ್ಟಾಲಿನ್ ಮುಂದುವರಿಸಿದರು.
ಉಲ್ಲೇಖನಗಳು
[ಬದಲಾಯಿಸಿ]- ↑ http://www.local-life.com/st-petersburg/articles/1917-russian-revolution
- ↑ http://www.history.com/topics/russian-revolution#
- ↑ https://www.britannica.com/topic/February-Revolution
- ↑ https://www.britannica.com/topic/October-Revolution-Russian-history
- ↑ https://www.britannica.com/event/Russian-Civil-War
- ↑ http://www.historylearningsite.co.uk/modern-world-history-1918-to-1980/russia-1900-to-1939/the-russian-civil-war/