ಬ್ಲ್ಯಾಕ್ ಸಬ್ಬತ್
Black Sabbath | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Birmingham, England |
ಸಂಗೀತ ಶೈಲಿ | Heavy metal |
ಸಕ್ರಿಯ ವರ್ಷಗಳು | 1968– |
Labels | Vertigo, Warner Bros, Sanctuary, IRS, Reprise, Epic |
Associated acts | Mythology, Heaven & Hell, GZR, Rainbow, Dio, Deep Purple, Black Country, Badlands |
ಅಧೀಕೃತ ಜಾಲತಾಣ | www.blacksabbath.com |
ಸಧ್ಯದ ಸದಸ್ಯರು | Tony Iommi Ozzy Osbourne Geezer Butler Bill Ward |
ಮಾಜಿ ಸದಸ್ಯರು | See: List of Black Sabbath band members |
ಬ್ಲ್ಯಾಕ್ ಸಬ್ಬತ್ ಒಂದು ಇಂಗ್ಲಿಷ್ ರಾಕ್ ವಾದ್ಯ-ಮೇಳ. ಇದು ಬರ್ಮಿಂಗ್‌ಹ್ಯಾಮ್‌ನಲ್ಲಿ 1968ರಲ್ಲಿ ಟೋನಿ ಐಯೋಮಿ (ಗಿಟಾರ್), ಓಜ್ಜೀ ಆಸ್ಬಾರ್ನ್ (ಪ್ರಮುಖ ಗಾಯಕ), ಟೆರ್ರಿ "ಗೀಜರ್" ಬಟ್ಲರ್ (ಮಂದ್ರವಾದ್ಯ) ಮತ್ತು ಬಿಲ್ ವಾರ್ಡ್ (ಡ್ರಮ್ ಮತ್ತು ತಾಳವಾದ್ಯ) ಮೊದಲಾದವರಿಂದ ರೂಪುಗೊಂಡಿತು. ವಾದ್ಯ-ಮೇಳವು ಒಟ್ಟು ಇಪ್ಪತ್ತೆರಡು ಮಾಜಿ ಸದಸ್ಯರೊಂದಿಗೆ ಇದುವರೆಗೆ ಹಲವಾರು ತಂಡದ ಬದಲಾವಣೆಗಳನ್ನು ಕಂಡಿದೆ. ಆರಂಭದಲ್ಲಿ ಭಾರೀ ಬ್ಲೂಸ್-ರಾಕ್ ವಾದ್ಯ-ಮೇಳವಾಗಿ ಅರ್ಥ್ ಎಂಬ ಹೆಸರಿನಲ್ಲಿ ರಚನೆಯಾಯಿತು ಹಾಗೂ ನಿಗೂಢ ಮತ್ತು ಭಯಾನಕತೆಯನ್ನು ಪ್ರೇರೇಪಿಸುವ ಗೀತೆರಚನೆಗಳನ್ನು ಗಿಟಾರ್‌ನ ಶ್ರುತಿಯೊಂದಿಗೆ ಸಂಯೋಜಿಸಲು ಆರಂಭಿಸಿತು. ನಂತರ 1970ರ ಸಂದರ್ಭದಲ್ಲಿ 'ಬ್ಲ್ಯಾಕ್ ಸಬ್ಬತ್' ಎಂದು ಹೆಸರು ಬದಲಾಯಿಸಿಕೊಂಡು ಅನೇಕ ಪ್ಲಾಟಿನಂ ಶ್ರೇಷ್ಠತೆಯ ಧ್ವನಿಮುದ್ರಣಗಳನ್ನು ನೀಡಿತು. ನಿಗೂಢತೆ ಮತ್ತು ಭಯಾನಕ ಅಂಶಗಳ ಸಂಯೋಜನೆಯ ಕಥಾವಸ್ತುಗಳಲ್ಲದೇ ಬ್ಲ್ಯಾಕ್ ಸಬ್ಬತ್ ಮಾದಕ ವಸ್ತುಗಳು ಮತ್ತು ಯುದ್ಧದಂತಹ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಕುರಿತಾಗಿರುವ ಹಾಡುಗಳನ್ನೂ ಸಂಯೋಜಿಸಿತು.
ಮೊದಲ ಮತ್ತು ಹೆಚ್ಚು ಪ್ರಭಾವಶಾಲಿ ಹೆವಿ ಮೆಟಲ್ ಸಾರ್ವಕಾಲಿಕ ವಾದ್ಯ-ಮೇಳವಾದ[೧] ಬ್ಲ್ಯಾಕ್ ಸಬ್ಬತ್ 1970ರಲ್ಲಿ ಚತುರ್ಭಾಗದ ಪ್ಯಾರನಾಯ್ಡ್ ನಂತಹ ಆಲ್ಬಮ್ಅನ್ನು ಬಿಡುಗಡೆಗೊಳಿಸಿ ಶೈಲಿಯನ್ನು ನಿರೂಪಿಸಲು ನೆರವಾಯಿತು.[೨] ಅದು MTVಯಿಂದ ಸಾರ್ವಕಾಲಿಕ "ಗ್ರೇಟೆಸ್ಟ್ ಮೆಟಲ್ ಬ್ಯಾಂಡ್" ಎಂಬ ಬಿರುದು ಪಡೆಯಿತು[೩] ಹಾಗೂ VH1ರ "100 ಗ್ರೇಟೆಸ್ಟ್ ಆರ್ಟಿಸ್ಟ್ಸ್ ಆಫ್ ಹಾರ್ಡ್ ರಾಕ್" ಪಟ್ಟಿಯಲ್ಲಿ ಲೆಡ್ ಜೆಪ್ಪೆಲಿನ್‌ನ ನಂತರದ ಎರಡನೆ ಸ್ಥಾನವನ್ನು ಗಳಿಸಿಕೊಂಡಿತು.[೪] ಅದು ಅಮೇರಿಕಾ ಸಂಯುಕ್ತ ಸಂಸ್ಥಾನವೊಂದರಲ್ಲೇ 15 ದಶಲಕ್ಷದಷ್ಟು ಧ್ವನಿಮುದ್ರಣಗಳನ್ನು ಮಾರಾಟ ಮಾಡಿತು.[೫] ರೋಲಿಂಗ್ ಸ್ಟೋನ್ ಈ ವಾದ್ಯ-ಮೇಳಕ್ಕೆ 70ರ' ಹೆವಿ- ಮೆಟಲ್ ರಾಜರು' ಎಂಬ ಸ್ಥಾನವನ್ನು ನೀಡಿದೆ.[೬]
ಗಾಯಕ ಓಜ್ಜೀ ಆಸ್ಬಾರ್ನ್ ಕುಡಿತದ ಚಟವು ಅವನನ್ನು 1979ರಲ್ಲಿ ವಾದ್ಯ-ಮೇಳದಿಂದ ಹೊರಹಾಕುವಂತೆ ಮಾಡಿತು. ಅವನ ಬದಲಿಗೆ ಹಿಂದೆ ರೈನ್‌ಬೊ ಹಾಡುಗಾರನಾಗಿದ್ದ ರೋನಿ ಜೇಮ್ಸ್ ಡಿಯೊನನ್ನು ಸೇರಿಸಿಕೊಳ್ಳಲಾಯಿತು. ಡಿಯೊನ ಧ್ವನಿ ಮತ್ತು ಅವನ ಹಾಡುರಚನೆಯ ಸಹಯೋಗಗಳೊಂದಿಗೆ ಕೆಲವು ಆಲ್ಬಮ್‌ಗಳನ್ನು ಮಾಡಿದ ನಂತರ ಬ್ಲ್ಯಾಕ್ ಸಬ್ಬತ್ 1980 ಮತ್ತು 1990ರ ದಶಕಗಳಲ್ಲಿ ಅಯನ್ ಗಿಲ್ಲನ್, ಗ್ಲೆನ್ ಹಫೆಸ್, ರೆ ಗಿಲ್ಲೆನ್ ಮತ್ತು ಟೋನಿ ಮಾರ್ಟಿನ್ ಸೇರಿದಂತೆ ಆವರ್ತನ ಸಾಲಿನಲ್ಲಿ ಅನೇಕ ಗಾಯಕರನ್ನು ಬಳಸಿಕೊಂಡಿತು. 1992ರಲ್ಲಿ ಐಯೋಮಿ ಮತ್ತು ಬಟ್ಲರ್, ಡಿಯೊ ಮತ್ತು ಡ್ರಮ್-ವಾದಕ ವಿನ್ನಿ ಅಪ್ಪೀಸ್‌ಯೊಂದಿಗೆ ಡೀಹ್ಯೂಮನೈಸರ್ ಧ್ವನಿಮುದ್ರಣ ಮಾಡುವುದಕ್ಕಾಗಿ ಪುನಃಸೇರಿಕೊಂಡರು. ಮೂಲ ತಂಡವು 1997ರಲ್ಲಿ ಆಸ್ಬಾರ್ನ್‌ಯೊಂದಿಗೆ ಪುನಃ ಸೇರಿ ಒಂದು ನೇರ ಪ್ರದರ್ಶನದ ಆಲ್ಬಮ್ ರಿಯೂನಿಯನ್ ಅನ್ನು ಬಿಡುಗಡೆಗೊಳಿಸಿದರು. 1980ರ ದಶಕದ ಆರಂಭಿಕ/ಮಧ್ಯ ಅವಧಿಯಲ್ಲಿದ್ದ ಐಯೋಮಿ, ಬಟ್ಲರ್, ಡಿಯೊ, ಮತ್ತು ಅಪ್ಪೀಸ್ ಮೊದಲಾದವರ ಒಕ್ಕೂಟವು 2006ರಲ್ಲಿ ಹೆವೆನ್ & ಹೆಲ್ ಶೀರ್ಷಿಕೆಯಡಿಯಲ್ಲಿ ಮತ್ತೆ ಒಗ್ಗೂಡಿದರು.
ಇತಿಹಾಸ
[ಬದಲಾಯಿಸಿ]ರಚನೆ ಮತ್ತು ಆರಂಭಿಕ ದಿನಗಳು (1968–1969)
[ಬದಲಾಯಿಸಿ]1968ರಲ್ಲಿ ಹಿಂದಿನ ವಾದ್ಯ-ಮೇಳ ಮೈಥಾಲಜಿಯ ವಿಯೋಜನೆಯ ನಂತರ ಗಿಟಾರ್-ವಾದಕ ಟೋನಿ ಐಯೋಮಿ ಮತ್ತು ಡ್ರಮ್-ವಾದಕ ಬಿಲ್ ವಾರ್ಡ್, ಬರ್ಮಿಂಗ್‌ಹ್ಯಾಮ್‌ನ ಆಸ್ಟೋನ್‌ನಲ್ಲಿ ಹೆವಿ ಬ್ಲೂಸ್ ವಾದ್ಯ-ಮೇಳವನ್ನು ರೂಪಿಸಲು ಪ್ರಯತ್ನಿಸಿದರು. ಇವರಿಬ್ಬರು ರೇರ್ ಬ್ರೀಡ್ ಎಂಬ ವಾದ್ಯ-ವೃಂದದಲ್ಲಿ ಜತೆಗೂಡಿದ್ದ ಮಂದ್ರವಾದ್ಯ-ವಾದಕ ಗೀಜರ್ ಬಟ್ಲರ್ ಮತ್ತು ಗಾಯಕ ಓಜ್ಜೀ ಆಸ್ಬಾರ್ನ್ ಇವರನ್ನು ಸೇರಿಸಿಕೊಂಡರು. ಒಸ್ಬರ್ನ್ ಸ್ಥಳೀಯ ಸಂಗೀತ ಕಛೇರಿಯಲ್ಲಿ "ಓಜಿ ಜಿಗ್ ಸ್ವಂತ PA ಆಗಿ ಗಿಗ್‌ಅನ್ನು ಬಯಸುತ್ತಾನೆ" ಎಂದು ಜಾಹಿರಾತನ್ನು ಹಾಕಿಕೊಂಡಿದ್ದನು.[೭] ಹೊಸ ತಂಡವು ಆರಂಭದಲ್ಲಿ ದ ಪೋಲ್ಕ ಟಲ್ಕ್ ಬ್ಲೂಸ್ ಬ್ಯಾಂಡ್ (ಆಸ್ಬಾರ್ನ್ ಅವನ ತಾಯಿಯ ಸ್ನಾನದ ಕೋಣೆಯಲ್ಲಿ ಅಗ್ಗದ ಬ್ರ್ಯಾಂಡ್‌ನ ಟಾಲ್ಕಂ ಪುಡಿಯನ್ನು ನೋಡಿದ ನಂತರ) ಎಂಬ ಹೆಸರನ್ನು ಇಟ್ಟುಕೊಂಡಿತು[೮] ಹಾಗೂ ಆ ತಂಡದಲ್ಲಿ ಗಿಟಾರ್-ವಾದಕ ಜಿಮ್ಮಿ ಫಿಲಿಪ್ಸ್ ಮತ್ತು ಸ್ಯಾಕ್ಸೊಫೋನ್-ವಾದಕ ಅಲನ್ "ಅಕರ್" ಕ್ಲಾರ್ಕೆ ಮೊದಲಾದವರು ಇದ್ದರು. ಆ ಹೆಸರನ್ನು ಪೋಲ್ಕ ಟಲ್ಕ್ ಎಂಬುದಾಗಿ ಸಣ್ಣದಾಗಿ ಮಾಡಿಕೊಂಡ ಸ್ವಲ್ಪ ದಿನಗಳ ನಂತರ ವಾದ್ಯ-ಮೇಳವು ತನ್ನ ಹೆಸರನ್ನು ಅರ್ಥ್ ಎಂಬುದಾಗಿ ಬದಲಾಯಿಸಿಕೊಂಡಿತು. ಫಿಲಿಪ್ಸ್ ಮತ್ತು ಕ್ಲಾರ್ಕೆ ಇಲ್ಲದೆಯೇ ನಾಲ್ಕು-ಮಂದಿಯ ತಂಡವಾಗಿ ಮುಂದುವರಿಯಿತು.[೯][೧೦] ಅರ್ಥ್ ಹೆಸರಿನಡಿಯಲ್ಲಿ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಾದ್ಯ-ವೃಂದವು "ದ ರೆಬೆಲ್", "ಸಾಂಗ್ ಫಾರ್ ಜಿಮ್" ಮತ್ತು "ವೆನ್ ಐ ಕೇಮ್ ಡೌನ್" ಮೊದಲಾದ ನಾರ್ಮನ್ ಹೈನ್ಸ್ ಬರೆದ ಅನೇಕ ಡೆಮೊಗಳನ್ನು ಧ್ವನಿಮುದ್ರಣ ಮಾಡಿತು.[೧೧]
ಅರ್ಥ್ ಇಂಗ್ಲೆಂಡ್, ಡೆನ್ಮಾರ್ಕ್ ಮತ್ತು ಜರ್ಮನಿ ಮೊದಲಾದೆಡೆಗಳಲ್ಲಿ ಕ್ಲಬ್ ಪ್ರದರ್ಶನಗಳನ್ನು ನೀಡಿತು; ಅದರ ಪ್ರದರ್ಶನ-ಪಟ್ಟಿಯು ಜಿಮಿ ಹೆಂಡ್ರಿಕ್ಸ್, ಬ್ಲೂ ಚೀರ್ ಮತ್ತು ಕ್ರೀಮ್ ಮಾತ್ರವಲ್ಲದೆ ದೀರ್ಘ ದೀರ್ಘ, ಸುಧಾರಿಕ ಬ್ಲೂ ಜಾಮ್ಸ್‌ನ ದ್ವನಿಮುದ್ರಿತ ಹಾಡುಗಳನ್ನು ಒಳಗೊಂಡಿತ್ತು. ಡಿಸೆಂಬರ್ 1968ರಲ್ಲಿ ಐಯೋಮಿ ಜೆಥ್ರೊ ಟುಲ್ ಸೇರುವುದಕ್ಕಾಗಿ ಅರ್ಥ್‌ಅನ್ನು ಹಠತ್ತಾಗಿ ತ್ಯಜಿಸಿದ.[೧೨] ಜೆಥ್ರೊ ಟುಲ್ ವಾದ್ಯ-ಮೇಳದೊಂದಿಗಿನ ಕೆಲಸವು ಅಲ್ಪದಿನದದ್ದಾದರೂ ಐಯೋಮಿಯು ಇದರೊಂದಿಗೆ ದ ರೋಲಿಂಗ್ ಸ್ಟೋನ್ಸ್ ರಾಕ್ ಆಂಡ್ ರೋಲ್ ಸರ್ಕಸ್ TV ಪ್ರದರ್ಶನದಲ್ಲಿ ಕಾಣಿಸಿಕೊಂಡನು. ಜೆಥ್ರೊ ಟುಲ್‌ನ ನಿರ್ದೇಶನದಿಂದ ತೃಪ್ತಿಗೊಳ್ಳದ ಐಯೋಮಿ 1969ರ ಜನವರಿಯಲ್ಲಿ ಅರ್ಥ್‌ಗೆ ಹಿಂದಿರುಗಿದನು. "ಅದು ಸರಿಯಾಗಿರಲಿಲ್ಲ, ಆದ್ದರಿಂದ ನಾನು ಬಿಟ್ಟುಬಿಟ್ಟೆ" ಎಂದು ಐಯೋಮಿ ಹೇಳಿಕೊಂಡನು. "ಮೊದಲು ನಾನು ಟುಲ್ ಮಹತ್ತರವೆಂದು ತಿಳಿದಿದ್ದೆ. ಆದರೆ ಅಯನ್ ಆಂಡರ್ಸನ್‌ನ ಮಾರ್ಗದರ್ಶನದಲ್ಲಿದ್ದ ವಾದ್ಯ-ಮೇಳದಲ್ಲಿ ನಾನು ನಾಯಕತ್ವವನ್ನು ಹೊಂದಲು ಹೆಚ್ಚು ಪ್ರಯತ್ನಿಸಲಿಲ್ಲ. ಟುಲ್‌ನಿಂದ ನಾನು ಹಿಂದಿರುಗಿದಾಗ ನಾನು ಸಂಪೂರ್ಣ ಹೊಸ ಮನೋಭಾವದಿಂದ ವಾಪಸು ಬಂದೆ. ಪ್ರಗತಿ ಹೊಂದುವುದಕ್ಕಾಗಿ ಕೆಲಸ ಮಾಡಬೇಕು ಎಂದು ನನಗೆ ಕಲಿಸಿಕೊಟ್ಟಿತು. "[೧೩]
ಇಂಗ್ಲೆಂಡ್‌ನಲ್ಲಿ 1969ರಲ್ಲಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ವಾದ್ಯ-ಮೇಳ ತಂಡವು, ತಮ್ಮ ತಂಡವನ್ನು ಅರ್ಥ್ ಎಂಬ ಹೆಸರಿನ ಮತ್ತೊಂದು ಇಂಗ್ಲಿಷ್ ತಂಡವೆಂದು ತಪ್ಪಾಗಿ ಭಾವಿಸಿದ್ದನ್ನು ಗ್ರಹಿಸಿ ಮೇಳದ ಹೆಸರನ್ನು ಮತ್ತೊಮ್ಮೆ ಬದಲಾಯಿಸಲು ನಿರ್ಧರಿಸಿದರು. ವಾದ್ಯ-ಮೇಳದ ಪೂರ್ವಾಭ್ಯಾಸದ ಕೊಠಡಿಯ ಬೀದಿಯಲ್ಲಿದ್ದ ಚಲನಚಿತ್ರಮಂದಿರವೊಂದರಲ್ಲಿ 1963 ಬೋರಿಸ್ ಕಾರ್ಲೋಫ್ ಭಯಾನಕ ಚಿತ್ರ ಬ್ಲ್ಯಾಕ್ ಸಬ್ಬತ್ ಪ್ರದರ್ಶನಗೊಳ್ಳುತ್ತಿತ್ತು. ಚಿತ್ರವನ್ನು ವೀಕ್ಷಿಸಲು ಸೇರುತ್ತಿದ್ದ ಜನರ ಸಮೂಹವನ್ನು ನೋಡಿದ ಬಟ್ಲರ್ ಹೀಗೆಂದು ಹೇಳಿದನು - "ಭೀತಿಕಾರಕ ಚಲನಚಿತ್ರಗಳನ್ನು ನೋಡಲು ಜನರು ಇಷ್ಟೆಲ್ಲ ಹಣವನ್ನು ಖರ್ಚುಮಾಡುವುದು ತುಂಬಾ ಆಶ್ಚರ್ಯಕರವಾಗಿದೆ".[೧೪] ಆನಂತರ ಆಸ್ಬಾರ್ನ್‌ಯು "ಬ್ಲ್ಯಾಕ್ ಸಬ್ಬತ್" ಎಂಬ ಹಾಡಿಗೆ ಗೀತರಚನೆ ಮಾಡಿದ. ಅದು ಬಟ್ಲರ್‌ನ ಹಾಸಿಗೆಯ ಬುಡದಲ್ಲಿ ಕಪ್ಪು ನೆರಳುಚಿತ್ರದ ವ್ಯಕ್ತಿಯು ನಿಂತುಕೊಂಡಿರುವ ಮುನ್ನೋಟದೊಂದಿಗೆ ನಿಗೂಢಬರಹಗಳ ಲೇಖಕ ಡೆನ್ನಿಸ್ ವೀಟ್ಲಿಯ ಕೆಲಸದಿಂದ ಸ್ಫೂರ್ತಿಯನ್ನು ಪಡೆಯಿತು.[೧೫][೧೬][೧೭] "ದ ಡೆವಿಲ್ಸ್ ಇಂಟರ್ವಲ್" ಎಂದೂ ಕರೆಯುವ[೧೮] ಸಂಗೀತದ ಮೂರುಸ್ವರಗಳನ್ನು ಬಳಸಿಕೊಂಡ ಹಾಡಿನ ಅಶುಭಕರ ಧ್ವನಿ ಮತ್ತು ಕರಾಳ ಗೀತರಚನೆಗಳು ವಾದ್ಯ-ಮೇಳವನ್ನು 1960ರ ದಶಕದ ಉತ್ತರಾರ್ಧದಲ್ಲಿ ಮೇಲುಗೈ ಪಡೆದಿದ್ದ ಫ್ಲವರ್ ಪವರ್, ಜಾನಪದ ಸಂಗೀತ ಮತ್ತು ಹಿಪ್ಪಿ ಸಂಸ್ಕೃತಿ ಮೊದಲಾದ ಜನಪ್ರಿಯ ಸಂಗೀತಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿ ಕರಾಳ ದಿಕ್ಕಿನತ್ತ ಕೊಂಡೊಯ್ಯಿತು.[೧೯][೨೦] ಹೊಸ ಧ್ವನಿಯಿಂದ ಪ್ರೇರಿತವಾದ ವಾದ್ಯ-ಮೇಳವು 1969ರ ಆಗಸ್ಟ್‌ನಲ್ಲಿ ಅದರ ಹೆಸರನ್ನು ಬ್ಲ್ಯಾಕ್ ಸಬ್ಬತ್ ಎಂಬುದಾಗಿ ಬದಲಾಯಿಸಿಕೊಂಡಿತು.[೨೧] ಭಯಾನಕ ಚಲನಚಿತ್ರಗಳಿಗೆ ಸಮಾನವಾದ ಸಂಗೀತವನ್ನು ರಚಿಸುವ ಪ್ರಯತ್ನವಾಗಿ ಅಂತಹುದೇ ಅಂಶಗಳನ್ನು ಬರೆಯುವುದಕ್ಕೆ ಹೆಚ್ಚು ಗಮನ ಹರಿಸುವ ನಿರ್ಧಾರವನ್ನು ಮಾಡಿತು.
ಬ್ಲ್ಯಾಕ್ ಸಬ್ಬತ್ ಮತ್ತು ಪ್ಯಾರನಾಯ್ಡ್ (1970–1971)
[ಬದಲಾಯಿಸಿ]ಬ್ಲ್ಯಾಕ್ ಸಬ್ಬತ್ 1969ರ ಡಿಸೆಂಬರ್‌ನಲ್ಲಿ ಫಿಲಿಪ್ಸ್ ರೆಕಾರ್ಡ್ಸ್‌ಗೆ ಸಹಿಹಾಕಿತು. ನಂತರ ಅದರ ಮೊದಲ ಏಕಗೀತದ ತಟ್ಟೆ "ಎವಿಲ್ ವುಮನ್"ಅನ್ನು ಫಿಲಿಪ್ಸ್ ಅಂಗಸಂಸ್ಥೆ ಫೋಂಟಾನ ರೆಕಾರ್ಡ್ಸ್‌ನ ಮೂಲಕ 1970ರ ಜನವರಿಯಲ್ಲಿ ಬಿಡುಗಡೆಗೊಳಿಸಿತು. ನಂತರದ ಬಿಡುಗಡೆಗಳು ಫಿಲಿಪ್ಸ್‌ನ ಹೊಸದಾಗಿ ಹುಟ್ಟಿಕೊಂಡ ಪ್ರಗತಿಶೀಲ ರಾಕ್ ಧ್ವನಿಮುದ್ರಣ ಸಂಸ್ಥೆ ವರ್ಟಿಗೊ ರೆಕಾರ್ಡ್ಸ್‌ನಿಂದ ನಿರ್ವಹಿಸಲ್ಪಟ್ಟವು. ಆ ಏಕಗೀತದ ರೆಕಾರ್ಡ್ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ವಿಫಲವಾದರೂ, ವಾದ್ಯ-ಮೇಳವು ಜನವರಿಯ ಕೊನೆಯಲ್ಲಿ ಅದರ ಪ್ರಥಮ ಆಲ್ಬಮ್ಅನ್ನು ರೋಡ್ಜರ್ ಬೈನ್‌ನ ನಿರ್ಮಾಣದಲ್ಲಿ ಧ್ವನಿಮುದ್ರಣ ಮಾಡಲು ಎರಡು ದಿನಗಳ ಸ್ಟುಡಿಯೊ ಕಾಲದಲ್ಲಿ ಸಮರ್ಥವಾಯಿತು. ಐಯೋಮಿಯು ನೇರ ಧ್ವನಿಮುದ್ರಣ ಮಾಡಿದ ಸಂದರ್ಭವನ್ನು ಹೀಗೆಂದು ನೆನಪು ಮಾಡಿಕೊಳ್ಳುತ್ತಾನೆ: "ಅದನ್ನು ಮಾಡಲು ನಮಗೆ ಎರಡು ದಿನಗಳಿದ್ದವೆಂದು ನಾವು ಭಾವಿಸಿದೆವು. ಅದರಲ್ಲಿ ಒಂದು ದಿನ ಸಂಕಲನ ಮಾಡಬೇಕಿತ್ತು. ಆದ್ದರಿಂದ ನಾವು ನೇರವಾಗಿ ನುಡಿಸಿದೆವು. ಅದೇ ಸಮಯದಲ್ಲಿ ಓಜ್ಜೀಯು ಹಾಡುತ್ತಿದ್ದ. ಅವನನ್ನು ನಾವು ಒಂದು ಬೇರೆಯೇ ಬೂತ್ ಒಳಗೆ ಕುಳ್ಳಿರಿಸಿ, ನಾವು ಬೇರೆ ಹೋಗಿದ್ದೆವು. ನಾವು ಎರಡನೇ ಬಾರಿಗೆ ಬಹುತೇಕ ಹಾಡುಗಳನ್ನು ನುಡಿಸಲೇ ಇಲ್ಲ.
ನಾಮಸೂಚಕ ಬ್ಲ್ಯಾಕ್ ಸಬ್ಬತ್ 1970ರ ಫೆಬ್ರವರಿ 13ನೇ ಶುಕ್ರವಾರದಂದು ಬಿಡುಗಡೆಗೊಂಡಿತು. ಆ ಆಲ್ಬಮ್ UK ಆಲ್ಬಮ್ಸ್ ಚಾರ್ಟ್‌ನಲ್ಲಿ 8ನೇ ಸ್ಥಾನ ಪಡೆದುಕೊಂಡಿತು. USನಲ್ಲಿ 1970ರ ಮೇನಲ್ಲಿ ವಾರ್ನರ್ ಬ್ರದರ್ಸ್ ರೆಕಾರ್ಡ್ಸ್‌ನಿಂದ ಬಿಡುಗಡೆಯಾದ ನಂತರ ಆ ಆಲ್ಬಮ್ ಬಿಲ್ಬೋರ್ಡ್ 200ರಲ್ಲಿ 23ನೇ ಸ್ಥಾನ ಗಳಿಸಿತು. ಅಲ್ಲಿ ಅದು ಸುಮಾರು ಒಂದು ವರ್ಷದವರೆಗೆ ಉಳಿಯಿತು.[೨೨][೨೩] ಆಲ್ಬಮ್ ವಾಣಿಜ್ಯ ರೀತಿಯಲ್ಲಿ ಯಶಸ್ಸು ಕಂಡರೂ, ವಿಮರ್ಶಕರಿಂದ ಟೀಕೆಗೊಳಗಾಯಿತು. ರೋಲಿಂಗ್ ಸ್ಟೋನ್ ನ ಲೆಸ್ಟರ್ ಬ್ಯಾಂಗ್ಸ್ "ಮಂದ್ರವಾದ್ಯ ಮತ್ತು ಗಿಟಾರ್‌ಗಳ ಕರ್ಕಶ ಗಜಿಬಿಜಿಯು ಪ್ರತಿಯೊಬ್ಬರ ಸಂಗೀತ ಪರಿಧಿಗಳಲ್ಲಿ ಪರಸ್ಪರ ವೇಗಕ್ಕೆ ಹೊಂದಿಕೊಂಡ ಸ್ಪೀಡ್‌ಫ್ರೀಕ್ಸ್‌ನಂತೆ ಸುತ್ತುತ್ತದೆ. ಆದರೂ ಚೆನ್ನಾಗಿ ಹೊಂದಿಕೆಯಾಗುವಂತೆ ಕಂಡುಬಂದಿಲ್ಲ" ಎಂದು ಆಲ್ಬಮ್‌ನ್ನು ತಳ್ಳಿಹಾಕಿದ.[೨೪] ಟೀಕೆಗೊಳಗಾದರೂ ಈ ಆಲ್ಬಮ್ ವಾದ್ಯ-ಮೇಳಕ್ಕೆ ಅದರ ಮೊದಲ ಮೈನ್‌ಸ್ಟ್ರೀಮ್ (1930ರ ಶೈಲಿಯನ್ನು ಆಧರಿಸಿದ ಜಾಸ್ ಸಂಗೀತ) ಪ್ರದರ್ಶನವೆಂಬ ಹೆಸರನ್ನು ತಂದುಕೊಡುವುದರೊಂದಿಗೆ ಭಾರಿ ಸಂಖ್ಯೆಯಲ್ಲಿ ಮಾರಾಟವಾಯಿತು.[೨೫] ಇದು USನಲ್ಲಿ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಶನ್ ಆಫ್ ಅಮೇರಿಕಾ (RIAA)ದಿಂದ ಹಾಗೂ UKಯಲ್ಲಿ ಬ್ರಿಟಿಷ್ ಫೋನೊಗ್ರಫಿಕ್ ಇಂಡಸ್ಟ್ರಿ (BPI)ಯಿಂದ ಎರಡರಿಂದಲೂ ಪ್ಲಾಟಿನಂ ಧೃಢೀಕೃತವನ್ನು ಪಡೆದಿದೆ.[೨೬][೨೭]
USನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಯಶಸ್ಸಿನ ಲಾಭಪಡೆಯಲು ವಾದ್ಯ-ಮೇಳವು ಬ್ಲ್ಯಾಕ್ ಸಬ್ಬತ್ ಬಿಡುಗಡೆಯಾದ ನಾಲ್ಕು ತಿಂಗಳೊಳಗೆ 1970ರ ಜೂನ್‌ನಲ್ಲಿ ಅತಿಶೀಘ್ರವಾಗಿ ಸ್ಟುಡಿಯೊಗೆ ಹಿಂದಿರುಗಿತು. ವಿಯೆಟ್ನಾಂ ಕದನವನ್ನು ಟೀಕಿಸಿದ ಹಾಡು "ವಾರ್ ಪಿಗ್ಸ್"ನಂತರ ಹೊಸ ಆಲ್ಬಮ್‌ಗೆ ಆರಂಭದಲ್ಲಿ ವಾರ್ ಪಿಗ್ಸ್ ಎಂಬ ಹೆಸರು ಇಡುವಂತೆ ಯೋಜಿಸಲಾಯಿತು. ವಿಯೆಟ್ನಾಂ ಕದನದ ಬೆಂಬಲಿಗರಿಂದ ಬರಬಹುದಾದ ಪ್ರತಿಕ್ರಿಯೆಗೆ ಹೆದರಿ ವಾರ್ನರ್ ಆ ಆಲ್ಬಮ್‌ನ ಶೀರ್ಷಿಕೆಯನ್ನು ಪ್ಯಾರನಾಯ್ಡ್ ಎಂದು ಬದಲಾಯಿಸಿದನು. ಆಲ್ಬಮ್‌ನ ಪ್ರಾರಂಭದ ಏಕಗೀತ "ಪ್ಯಾರನಾಯ್ಡ್"ಅನ್ನು ಸ್ಟುಡಿಯೊದಲ್ಲಿ ಕೊನೆಯ ಗಳಿಗೆಯಲ್ಲಿ ರಚಿಸಲಾಯಿತು. ಬಿಲ್ ವಾರ್ಡ್ ವಿವರಿಸಿದಂತೆ: "ನಮ್ಮಲ್ಲಿ ಆಲ್ಬಮ್‌ಗೆ ಸಾಕಷ್ಟು ಹಾಡುಗಳಿರಲಿಲ್ಲ. ಹಾಗಾಗಿ ಟೋನಿ (ಪ್ಯಾರನಾಯ್ಡ್) ಗಿಟಾರ್ ವಾದಿಸುವ ಮೂಲಕ ನುಡಿಸಿದನು, ಅದೇ ಇದು. ಆರಂಭ ಮಾಡಿ ಕೊನೆಗೊಳಿಸಲು ಇದು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳನ್ನು ತೆಗೆದುಕೊಂಡಿತು."[೨೮] ಈ ಏಕಗೀತವು ಆಲ್ಬಮ್‌ಗಿಂತ ಮೊದಲೇ 1970ರ ಸೆಪ್ಟೆಂಬರ್‌ರಲ್ಲಿ ಬಿಡುಗಡೆಗೊಂಡಿತು ಹಾಗೂ UK ಪಟ್ಟಿಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು, ಬ್ಲ್ಯಾಕ್ ಸಬ್ಬತ್‌ನ ಜನಪ್ರಿಯ ಪ್ರಮುಖ ಹತ್ತು ಹಾಡುಗಳಲ್ಲಿ ಒಂದಾಗಿ ಉಳಿಯಿತು.[೨೩]
ಬ್ಲ್ಯಾಕ್ ಸಬ್ಬತ್ ಅದರ ಎರಡನೇ ಪೂರ್ಣಮಟ್ಟದ ಆಲ್ಬಮ್ ಪ್ಯಾರನಾಯ್ಡ್ ಅನ್ನು UKಯಲ್ಲಿ 1970ರ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿತು. "ಪ್ಯಾರನಾಯ್ಡ್" ಏಕಗೀತದ ಯಶಸ್ಸಿನ ಪ್ರಭಾವದಿಂದಾಗಿ ಈ ಆಲ್ಬಮ್ UKಯಲ್ಲಿ ಪ್ರಥಮ ಸ್ಥಾನದಲ್ಲಿ ಜನಪ್ರಿಯವಾಯಿತು. ಪ್ಯಾರನಾಯ್ಡ್ UKಅಲ್ಲಿ ಬಿಡುಗಡೆ ಯಾಗುವ ಸಂದರ್ಭದಲ್ಲಿ ಬ್ಲ್ಯಾಕ್ ಸಬ್ಬತ್ ಆಲ್ಬಮ್ ಇನ್ನೂ ಪಟ್ಟಿಯಲ್ಲಿ ಇದ್ದುದರಿಂದ USನಲ್ಲಿ ಈ ಆಲ್ಬಮ್ ಬಿಡುಗಡೆಯನ್ನು 1971ರ ಜನವರಿವರೆಗೆ ತಡೆಹಿಡಿಯಲಾಯಿತು.ಈ ಆಲ್ಬಮ್ USನಲ್ಲಿ[೨೯] 1971ರ ಮಾರ್ಚ್‌ನಲ್ಲಿ ಪ್ರಮುಖ ಹತ್ತು ಹಾಡುಗಳ ಪಟ್ಟಿಯಲ್ಲಿ ಸೇರಿಕೊಂಡಿತು ಹಾಗೂ ಯಾವುದೇ ರೇಡಿಯೊ ಆಕಾಶವಾಣಿಯ ಪ್ರಸಾರವಿಲ್ಲದೆ ಅಲ್ಲಿ ನಾಲ್ಕು ದಶಲಕ್ಷದಷ್ಟು ಪ್ರತಿಗಳು ಮಾರಾಟವಾದವು.[೨೩] ಈ ಆಲ್ಬಮ್ ಮತ್ತೆ ಆ ಕಾಲದ ರಾಕ್ ವಿಮರ್ಶಕರಿಂದ ಟೀಕೆಗೊಳಗಾಯಿತು. ಆದರೆ ಆಲ್‌ಮ್ಯೂಸಿಕ್‌ನ ಸ್ಟೀವ್ ಹ್ಯೂಯ್‌ನಂತಹ ಆಧುನಿಕ-ಕಾಲದ ವಿಮರ್ಶಕರು ಪ್ಯಾರನಾಯ್ಡ್‌ನ್ನು "ರಾಕ್ ಇತಿಹಾಸದ ಮಹತ್ತರ ಹಾಗೂ ಅತೀ ಪ್ರಭಾವಶಾಲಿ ಸರ್ವಕಾಲಿಕ ಹೆವಿ ಮೆಟಲ್ ಆಲ್ಬಂ" "ರಾಕ್ ಇತಿಹಾಸದ ಯಾವುದೇ ಧ್ವನಿಮುದ್ರಿಕೆಗಿಂತ ಹೆಚ್ಚು ಹೆವಿ ಮೆಟಲ್ ಧ್ವನಿ ಮತ್ತು ಶೈಲಿಯನ್ನು ನಿರೂಪಿಸುತ್ತದೆ" ಎಂದು ಉದಾಹರಿಸಿದರು.[೨] 2003ರಲ್ಲಿ ಆಲ್ಬಮ್, ರೋಲಿಂಗ್ ಸ್ಟೋನ್ ನಿಯತಕಾಲಿಕದ 500 ಅತ್ಯುತ್ತಮ ಸಾರ್ವಕಾಲಿಕ ಆಲ್ಬಮ್‌ಗಳ ಪಟ್ಟಿಯಲ್ಲಿ 130ನೇ ಸ್ಥಾನ ಪಡೆದುಕೊಂಡಿತು. ಪ್ಯಾರನಾಯ್ಡ್ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡು ಯಶಸ್ಸಾದುದು ವಾದ್ಯ-ವೃಂದವು 1970ರ ಡಿಸೆಂಬರ್‌ನಲ್ಲಿ USಗೆ ಮೊದಲ ಬಾರಿ ಪ್ರವಾಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಈ ಪ್ರವಾಸವು ಆಲ್ಬಮ್‌ನ ಎರಡನೇ ಏಕಗೀತೆ "ಐರನ್ ಮ್ಯಾನ್"ಅನ್ನು ಬಿಡುಗಡೆಯಾಗುವಂತೆ ಮಾಡಿತು. ಪ್ರಮುಖ 40 ಹಾಡುಗಳ ಪಟ್ಟಿಯಲ್ಲಿ ಸೇರಿಕೊಳ್ಳಲು ವಿಫಲವಾದರೂ "ಐರನ್ ಮ್ಯಾನ್" ಬ್ಲ್ಯಾಕ್ ಸಬ್ಬತ್‌ನ ಹೆಚ್ಚು ಜನಪ್ರಿಯ ಹಾಡುಗಳಲ್ಲಿ ಒಂದಾಗಿ ಉಳಿಯಿತು. ಅಲ್ಲದೆ ಇದು 1998ರ "ಸೈಕೊ ಮ್ಯಾನ್" ಬರುವವರೆಗೆ, ವಾದ್ಯ-ಮೇಳದ 'USನ ಉತ್ಕೃಷ್ಟ ಪಟ್ಟಿಯಲ್ಲಿದ್ದ ಏಕಗೀತ' ಎಂಬ ಹೆಸರು ಪಡೆದಿತ್ತು.[೨೨]
ಮಾಸ್ಟರ್ ಆಫ್ ರಿಯಾಲಿಟಿ ಮತ್ತು ವಾಲ್ಯೂಮ್ 4 (1971–1973)
[ಬದಲಾಯಿಸಿ]ಫೆಬ್ರವರಿ 1971ರಲ್ಲಿ ಬ್ಲ್ಯಾಕ್ ಸಬ್ಬತ್ ತಂಡದವರು ಅವರ ಮೂರನೇ ಆಲ್ಬಮ್‌ನ ಕೆಲಸವನ್ನು ಆರಂಭಿಸುವುದಕ್ಕಾಗಿ ಸ್ಟುಡಿಯೊಗೆ ಹಿಂದಿರುಗಿದರು. ಪ್ಯಾರನಾಯ್ಡ್ ನ ಪಟ್ಟಿಯಲ್ಲಿನ ಯಶಸ್ಸಿನ ನಂತರ ಈ ವಾದ್ಯ-ಮೇಳದವರು ಮಾದಕ ಪದಾರ್ಥಗಳನ್ನು ಕೊಳ್ಳಲು "ಪೆಟ್ಟಿಗೆ ತುಂಬ ಹಣ"ದೊಂದಿಗೆ ಸ್ಟುಡಿಯೊದಲ್ಲಿ ಹೆಚ್ಚು ಕಾಲ ಕಳೆಯತೊಡಗಿದರು.[೩೦] ವಾರ್ಡ್ ಹೀಗೆಂದು ವಿವರಿಸಿದ್ದಾನೆ - "ನಾವು ಶ್ರೇಷ್ಠ ಪ್ರದರ್ಶನಗಳಲ್ಲಿ ಕೋಕ್ಅನ್ನು ಸೇವಿಸುತ್ತಿದ್ದೆವು" ವಾರ್ಡ್ ವಿವರಿಸಿದ. "ಉತ್ತೇಜಕ, ಶಾಮಕ ಮಾದಕ ದ್ರವ್ಯಗಳು, ಕ್ವಾಲ್ಯೂಡ್ ಇತ್ಯಾದಿ ಇಷ್ಟವಾದವುಗಳನ್ನು ಸೇವಿಸುತ್ತಿದ್ದೆವು. ವೇದಿಕೆಯಲ್ಲಿದ್ದಾಗ ಅಲ್ಲಿ ಕೆಲವು ಕಲ್ಪನೆಗಳು ಮೂಡಿ ಮರೆತುಹೋಗುತ್ತದೆ. ಏಕೆಂದರೆ ಅವುಗಳಿಂದ ನೀವು ಹೊರಬಂದಿರುತ್ತೀರಿ.
ಎಪ್ರಿಲ್ 1971ರಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ ವಾದ್ಯ-ಮೇಳವು ಅದೇ ಜುಲೈನಲ್ಲಿ ಮಾಸ್ಟರ್ ಆಫ್ ರಿಯಾಲಿಟಿ ಯನ್ನು ಬಿಡುಗಡೆಗೊಳಿಸಿತು. ಇದು ಪ್ಯಾರನಾಯ್ಡ್ ಬಿಡುಗಡೆಯಾದ ಕೇವಲ ಆರು ತಿಂಗಳೊಳಗೆ ಬಿಡುಗಡೆಯಾಗಿದೆ. ಈ ಆಲ್ಬಮ್ US ಮತ್ತು UK ಎರಡೂ ಕಡೆಗಳಲ್ಲಿ ಜನಪ್ರಿಯ ಹತ್ತು ಆಲ್ಬಮ್‌ಗಳ ಸ್ಥಾನವನ್ನು ತಲುಪಿತು ಹಾಗೂ ಎರಡು ತಿಂಗಳುಗಳೊಳಗೆ ಚಿನ್ನದ ದೃಢೀಕರಣವನ್ನು ಪಡೆಯಿತು.[೩೧] ಅಂತಿಮವಾಗಿ 1980ರಲ್ಲಿ ಪ್ಲಾಟಿನಂ [೩೧] ಹಾಗೂ 21ನೇ ಶತಮಾನದಲ್ಲಿ ಡಬಲ್ ಪ್ಲಾಟಿನಂ ಪ್ರಮಾಣೀಕರಣವನ್ನು ಗಳಿಸಿತು.[೩೧] ಮಾಸ್ಟರ್ ಆಫ್ ರಿಯಾಲಿಟಿ ಬ್ಲ್ಯಾಕ್ ಸಬ್ಬತ್‌ನ ಮೊದಲ ಧ್ವನಿಯ ತರಂಗಗಳಿಂದ ಕೂಡಿದ ಹಾಗೂ "ಚಿಲ್ಡ್ರನ್ ಆಫ್ ದ ಗ್ರೇವ್" ಮತ್ತು "ಸ್ವೀಟ್ ಲೀಫ್" ಇತ್ಯಾದಿ ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡುಗಳನ್ನು ಹೊಂದಿದೆ.[೩೨] ಆ ಕಾಲದವರ ವಿಮರ್ಶೆಯು ಮತ್ತೆ ಪ್ರತಿಕೂಲವಾಗಿಯೇ ಇತ್ತು. ರೋಲಿಂಗ್ ಸ್ಟೋನ್ ನ ಲೆಸ್ಟರ್ ಬ್ಯಾಂಗ್ಸ್ ಮಾಸ್ಟರ್ ಆಫ್ ರಿಯಾಲಿಟಿ ಯು "ಮುಗ್ಧ, ಕೃತಕವೆನಿಸುವಷ್ಟು ಸರಳವಾದ, ಪುನರಾವರ್ತನೆಯನ್ನೊಳಗೊಂಡ ಸಂಪೂರ್ಣವಾಗಿ ಕಳಪೆ ಮಟ್ಟದ್ದು" ಎಂದು ಟೀಕಿಸಿದ್ದಾನೆ. ಆದರೂ ಅದೇ ನಿಯತಕಾಲಿಕವು ನಂತರ 2003ರಲ್ಲಿ ಮಾಡಿದ ಅದರ 500 ಅತ್ಯುತ್ತಮ ಸಾರ್ವಕಾಲಿಕ ಆಲ್ಬಮ್‌ಗಳ ಪಟ್ಟಿಯಲ್ಲಿ ಆ ಆಲ್ಬಮ್‌ಗೆ 298ನೇ ಸ್ಥಾನವನ್ನು ನೀಡಿತು.[೩೩]
ಮಾಸ್ಟರ್ ಆಫ್ ರಿಯಾಲಿಟಿ ಯು ಪ್ರಪಂಚದಾದ್ಯಂತ ಬಿಡುಗಡೆಗೊಂಡು ಯಶಸ್ಸನ್ನು ಗಳಿಸಿದ ನಂತರ 1972ರಲ್ಲಿ ಬ್ಲ್ಯಾಕ್ ಸಬ್ಬತ್ ಮೂರು ವರ್ಷಗಳ ಅದರ ಮೊದಲ ವಿರಾಮವನ್ನು ತೆಗೆದುಕೊಂಡಿತು. ಬಿಲ್ ವಾರ್ಡ್ ವಿವರಿಸಿದಂತೆ: "ವಾದ್ಯ-ವೃಂದದವರಿಗೆ ಹೆಚ್ಚು ದಣಿವು ಆಯಾಸವಾಗಲು ಶುರುವಾಯಿತು. ವರ್ಷವಿಡೀ ವಿರಾಮವಿಲ್ಲದೆ ನಿರಂತರವಾಗಿ ಪ್ರಯಾಣಿಸಿ, ಧ್ವನಿಮುದ್ರಣ ಮಾಡುತ್ತಿದ್ದೆವು. ಮಾಸ್ಟರ್ ಆಫ್ ರಿಯಾಲಿಟಿ ಯು ಮೊದಲ ಮೂರು ಆಲ್ಬಮ್‌ಗಳು ಒಂದು ಯುಗದ ಕೊನೆಯ ರೀತಿಯೆಂದು ಭಾವಿಸಿದೆವು ಹಾಗೂ ಮುಂದಿನ ಆಲ್ಬಮ್‌ಗೆ ನಮ್ಮದೇ ಆದ ಸಮಯವನ್ನು ತೆಗೆದುಕೊಳ್ಳಲು ನಿರ್ಧರಿಸಿದೆವು."[೩೪]
ಜೂನ್ 1972ರಲ್ಲಿ ವಾದ್ಯ-ಮೇಳದವರು ರೆಕಾರ್ಡ್ ಪ್ಲ್ಯಾಂಟ್‌ನಲ್ಲಿ ಮುಂದಿನ ಆಲ್ಬಮ್‌ನ ಕೆಲಸವನ್ನು ಆರಂಭಿಸುವುದಕ್ಕಾಗಿ ಲಾಸ್ ಏಂಜಲೀಸ್‌ನಲ್ಲಿ ಮತ್ತೆ ಒಂದುಗೂಡಿದರು. ಧ್ವನಿಮುದ್ರಿಸುವ ಕಾರ್ಯವು ಮಾದಕವಸ್ತುವಿನ ದುರ್ಬಳಕೆ ಸಮಸ್ಯೆಗಳ ಫಲವಾಗಿ ಅನೇಕ ತೊಂದರೆಗಳಿಗೆ ಸಿಲುಕಿತು. "ಮಾದಕ ದ್ರವ್ಯಗಳನ್ನು ಸೇವಿಸುತ್ತಾ ಮಧ್ಯ ಕೊಠಡಿಯಲ್ಲಿ ಕುಳಿತುಕೊಂಡು" "ಕೋರ್ನುಕೋಪಿಯ" ಹಾಡನ್ನು ಧ್ವನಿಮುದ್ರಿಸಲು ಕಷ್ಟಪಡುತ್ತಿರುವಾಗ[೩೫] ಬಿಲ್ ವಾರ್ಡ್‌ನನ್ನು ಬಹುಮಟ್ಟಿಗೆ ವಾದ್ಯ-ಮೇಳದಿಂದ ಹೊರದೂಡುವ ಸಂಭವವಿತ್ತು. "ನಾನು ಹಾಡನ್ನು ದ್ವೇಷಿಸಿದೆ, ಅಲ್ಲಿದ್ದ ಕೆಲವು ಕ್ರಮಗಳು ತುಂಬಾ ಅಸಹನೀಯವಾಗಿದ್ದವು" ಎಂದು ವಾರ್ಡ್ ಹೇಳಿದ್ದಾನೆ. "ಅಂತಿಮವಾಗಿ ನಾನು ಅದನ್ನು ಸ್ಪಷ್ಟವಾಗಿ ವಿವರಿಸಿದೆ. ಆದರೆ ಸಿಕ್ಕಿದ ಪ್ರತಿಕ್ರಿಯೆಯೆಂದರೆ ಪ್ರತಿಯೊಬ್ಬರಿಂದಲೂ ಅನಾದರ, ಅಸಡ್ಡೆ. ಅದು 'ಒಳ್ಳೆಯದು, ಸುಮ್ಮನೆ ಮನೆಗೆ ಹೋಗು. ಈಗ ನಿನ್ನಿಂದ ಯಾವುದೇ ಉಪಯೋಗವಿಲ್ಲ' ಎಂಬತ್ತಿತ್ತು. ನಾನು ಅದನ್ನು ಬಿಟ್ಟು ಹೋಗಬೇಕೆಂದು ಭಾವಿಸಿದೆ, ಹೇಗೂ ನನ್ನನ್ನು ಹೊರಹಾಕುವವರಿದ್ದರು".[೩೬] ಕೊಕೇನ್ ದುರುಪಯೋಗದ ಬಗ್ಗೆ ತಿಳಿಸುವ "ಸ್ನೊಬ್ಲೈಂಡ್" ಎಂಬ ಹೆಸರಿನ ಹಾಡಿನ ನಂತರ ಆ ಆಲ್ಬಮ್‌ಗೆ ಆರಂಭದಲ್ಲಿ ಅದೇ ಶೀರ್ಷಿಕೆಯನ್ನು ಇಡಲಾಯಿತು. ಧ್ವನಿಮುದ್ರಣ ಕಂಪೆನಿಯು ಕೊನೆಗಳಿಗೆಯಲ್ಲಿ ಶೀರ್ಷಿಕೆಯನ್ನು ಬ್ಲ್ಯಾಕ್ ಸಬ್ಬತ್ ವಾಲ್ಯೂಮ್ 4 ಎಂದು ಬದಲಾಯಿಸಿತು. "ಯಾವುದೇ ವಾಲ್ಯೂಮ್ 1, 2 ಅಥವಾ 3 ಎಂಬುದಿರಲಿಲ್ಲ. ಇದು ನಿಜವಾಗಿಯೂ ಅಸಮಂಜಸವಾದುದು" ಎಂದು ವಾರ್ಡ್ ಹೇಳಿದ್ದಾನೆ.[೩೭]
ಬ್ಲ್ಯಾಕ್ ಸಬ್ಬತ್‌ನ ವಾಲ್ಯೂಮ್ 4 1972ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಯಿತು. ಆ ಕಾಲದ ವಿಮರ್ಶಕರು ಈ ಆಲ್ಬಮ್‌ಅನ್ನೂ ಟೀಕಿಸುವ ಸಂದರ್ಭದಲ್ಲೇ ಇದು ಒಂದು ತಿಂಗಳೊಳಗೆ ಚಿನ್ನದ ಸ್ಥಾನಮಾನವನ್ನು ಸಾಧಿಸಿತು[೩೮] ಹಾಗೂ USನಲ್ಲಿ ದಶಲಕ್ಷದಷ್ಟು ಪ್ರತಿಗಳು ಮಾರಾಟವಾದ ವಾದ್ಯ-ಮೇಳದ ನಾಲ್ಕನೇ ಅನುಕ್ರಮ ಬಿಡುಗಡೆ ಎಂಬ ಹೆಗ್ಗಳಿಕೆ ಪಡೆದುಕೊಂಡಿತು.[೨೨][೩೮] ಸ್ಟುಡಿಯೊದಲ್ಲಿ ಹೆಚ್ಚು ಕಾಲ ಕಳೆದ ವಾಲ್ಯೂಮ್ 4 ವಾದ್ಯ-ಮೇಳಕ್ಕೆ ತಂತಿವಾದ್ಯಗಳು, ಪಿಯಾನೋ, ವಾದ್ಯವೃಂದ ಸಂಯೋಜನೆ ಮತ್ತು ಹಲವು-ವಿಭಾಗದ ಹಾಡುಗಳಂತಹ ಹೊಸ ರೀತಿಯ ಸ್ವರಸಂಯೋಜನೆ ಪ್ರಯೋಗವನ್ನು ಆರಂಭಿಸುವಂತೆ ಅವಕಾಶ ಕಲ್ಪಿಸಿಕೊಟ್ಟಿತು.[೩೯] "ಟುಮೋರೋಸ್ ಡ್ರೀಮ್" ಹಾಡು ಏಕಗೀತವಾಗಿ-ಪ್ಯಾರನಾಯ್ಡ್ ನ ನಂತರ ವಾದ್ಯ ಮೇಳದ ಮೊದಲ ಏಕಗೀತೆಯಾಗಿ ಬಿಡುಗಡೆಹೊಂದಿತು. ಆದರೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ವಿಫಲವಾಯಿತು.[೪೦] USನ ವ್ಯಾಪಕ ಪ್ರವಾಸದ ನಂತರ ವಾದ್ಯ-ಮೇಳವು 1973ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾಕ್ಕೆ, ನಂತರ ಪ್ರಧಾನ ಭೂಭಾಗ ಯುರೋಪ್‌ಗೆ ಪ್ರಯಾಣ ಮಾಡಿತು.
ಸಬ್ಬತ್ ಬ್ಲಡಿ ಸಬ್ಬತ್ ಮತ್ತು ಸ್ಯಾಬೊಟೇಜ್ (1973–1976)
[ಬದಲಾಯಿಸಿ]ವಾಲ್ಯೂಮ್ 4 ಪ್ರಪಂಚದಾದ್ಯಂತ ಬಿಡುಗಡೆಗೊಂಡ ನಂತರ ಬ್ಲ್ಯಾಕ್ ಸಬ್ಬತ್ ತಂಡದವರು ಅವರ ಮುಂದಿನ ಬಿಡುಗಡೆಯ ಕೆಲಸವನ್ನು ಆರಂಭಿಸಲು ಲಾಸ್ ಏಂಜಲೀಸ್‌ಗೆ ಹಿಂದಿರುಗಿದರು. ವಾಲ್ಯೂಮ್ 4 ಆಲ್ಬಮ್‌ನ ಯಶಸ್ಸಿನಿಂದ ಸಂತೋಷ ಪಡೆದ ವಾದ್ಯ-ಮೇಳವು ಧ್ವನಿಮುದ್ರಣ ಮಾಡುವ ವಾತಾವರಣದಲ್ಲಿ ನವಚೈತನ್ಯ ಮೂಡಿಸಲು ಪ್ರಯತ್ನಿಸಿತು ಹಾಗೂ ಲಾಸ್ ಏಂಜಲೀಸ್‌ನ ರೆಕಾರ್ಡ್ ಪ್ಲ್ಯಾಂಟ್ ಸ್ಟುಡಿಯೊಗೆ ಹಿಂದಿರುಗಿತು. ಆ ಶಕೆಯ ಹೊಸ ಸಂಗೀತ ನಾವೀನ್ಯತೆಯೊಂದಿಗೆ, ರೆಕಾರ್ಡ್ ಪ್ಲಾಂಟ್‌ನಲ್ಲಿ ತಾವು ಈ ಹಿಂದೆ ಬಳಸಿದ ಕೋಣೆಯಲ್ಲಿ ಬೃಹತ್ "ವಿದ್ಯುತ್ ಸಂಗೀತ ಉಪಕರಣ"ದಿಂದ ಬದಲಿಸಿದ್ದನ್ನು ಕಂಡು ಅಚ್ಚರಿಗೊಂಡರು. ವಾದ್ಯ-ಮೇಳವು ಬೆಲ್ ಏರ್‌ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು 1973ರ ಬೇಸಿಗೆಯಲ್ಲಿ ಸಾಹಿತ್ಯ ರಚನಾ ಕಾರ್ಯವನ್ನು ಆರಂಭಿಸಿತು. ಆದರೆ ಮಾದಕವಸ್ತು ಸಮಸ್ಯೆ ಮತ್ತು ದಣಿವಿನಿಂದಾಗಿ ಅವರಿಗೆ ಯಾವುದೇ ಹಾಡನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. "ವಾಲ್ಯೂಮ್ 4 ರ ರೆಕಾರ್ಡ್ ಮಾಡುವ ಸಂದರ್ಭದಲ್ಲಿದ್ದ ಆಲೋಚನೆಗಳು ಆಗ ಬರುತ್ತಿರಲಿಲ್ಲ. ನಾವು ನಿಜವಾಗಿಯೂ ಅಸಮಧಾನಗೊಂಡೆವು" ಎಂದು ಐಯೋಮಿ ಹೇಳಿಕೊಂಡಿದ್ದಾನೆ. "ಪ್ರತಿಯೊಬ್ಬರೂ ಸುಮ್ಮನೆ ಕುಳಿತುಕೊಂಡು ಹೊಸತಾದ ವಿಷಯದೊಂದಿಗೆ ಬರಬಹುದೆಂದು ನನಗಾಗಿ ಕಾಯುತ್ತಿದ್ದರು. ನನಗೆ ಏನ್ನನ್ನೂ ಆಲೋಚಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಯಾವುದಾದರೂ ವಿಷಯದೊಂದಿಗೆ ಬರದಿದ್ದರೆ, ಯಾರೂ ಏನನ್ನೂ ಮಾಡುತ್ತಿರಲಿಲ್ಲ."[೪೧]
left|thumb|210px|ವೇದಿಕೆಯ ಮೇಲೆ ಟೋನಿ ಐಯೋಮಿ ಮತ್ತು ಓಜ್ಜೀ ಆಸ್ಬಾರ್ನ್. ಲಾಸ್ ಏಂಜಲೀಸ್‌ನಲ್ಲಿ ಯಾವುದೇ ಫಲಿತಾಂಶಗಳಿಲ್ಲದೆ ಒಂದು ತಿಂಗಳು ಕಳೆದ ನಂತರ ವಾದ್ಯ-ಮೇಳವು ಇಂಗ್ಲೆಂಡ್‌ಗೆ ಹಿಂದಿರುಗಲು ನಿರ್ಧರಿಸಿತು. ಅಲ್ಲಿ ಅವರು ದ ಫೋರೆಸ್ಟ್ ಆಫ್ ಡೀನ್‌ನಲ್ಲಿ ಕ್ಲಿಯರ್‌ವೆಲ್ ಕ್ಯಾಸ್ಟೆಲ್‌ನಲ್ಲಿ ಬಾಡಿಗೆಗೆ ಇದ್ದರು. "ನಾವು ಕತ್ತಲಕೋಣೆಗಳಲ್ಲಿ ಪೂರ್ವತಯಾರಿ ಮಾಡಿಕೊಂಡೆವು. ಇದು ನಿಜವಾಗಿಯೂ ಅಹಿತಕರವಾಗಿದ್ದರೂ, ಇದು ವಿಷಯಗಳನ್ನು ಸೃಷ್ಟಿಸಿತು ಮತ್ತು ಪುನಃ ಹೊಸ ಹಾಡುಗಳು ಹೊಳೆಯಲಾಂಭಿಸಿದವು. ".[೪೨] ಕತ್ತಲಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಐಯೋಮಿಯು "ಸಬ್ಬತ್ ಬ್ಲಡಿ ಸಬ್ಬತ್"ನ ಪ್ರಮುಖ ಪುನರಾವರ್ತಿಸುವ ಭಾಗದಲ್ಲಿ ಎಡವಿದನು, ಇದು ಹೊಸ ಅಂಶಕ್ಕೆ ಸ್ವರ ಹೊಂದಿಸಿ ಕೊಟ್ಟಿತು. ಇದನ್ನು ಲಂಡನ್‌ನ ಮೋರ್ಗನ್ ಸ್ಟುಡಿಯೊದಲ್ಲಿ ಮೈಕ್ ಬಟ್ಚರ್ ಧ್ವನಿಮುದ್ರಣ ಮಾಡಿದನು. ವಾಲ್ಯೂಮ್ 4 ರಲ್ಲಿ ಪರಿಚಯಿಸಲಾದ ಉತ್ತಮ ಶೈಲಿಯ ಬದಲಾವಣೆಗಳನ್ನು ಇರಿಸಿಕೊಳ್ಳಲಾಯಿತು. ಹೊಸ ಹಾಡುಗಳು ಸಂಯೋಜಕ ವಾದ್ಯಗಳು, ತಂತಿವಾದ್ಯಗಳು ಮತ್ತು ಸಂಕೀರ್ಣ ವ್ಯವಸ್ಥೆಗಳನ್ನು ಒಂದುಗೂಡಿಸಿದವು. ಯೆಸ್ ಕೀಬೋರ್ಡ್-ವಾದಕ ರಿಕ್ ವೇಕ್‌ಮ್ಯಾನ್‌ನನ್ನು "ಸಾಬ್ರ ಕ್ಯಾಡಬ್ರ"ದಲ್ಲಿ ಪ್ರದರ್ಶನದ ಕಲಾವಿದನಾಗಿ ಕರೆಯಿಸಿಕೊಳ್ಳಲಾಯಿತು.[೪೩]
ನವೆಂಬರ್ 1973ರಲ್ಲಿ ಬ್ಲ್ಯಾಕ್ ಸಬ್ಬತ್ ವಿಮರ್ಶಾತ್ಮಕ ಹೊಗಳಿಕೆಯನ್ನು ಪಡೆದ ಸಬ್ಬತ್ ಬ್ಲಡಿ ಸಬ್ಬತ್ ಅನ್ನು ಬಿಡುಗಡೆಗೊಳಿಸಿತು. ವಾದ್ಯ-ಮೇಳವು ಅದರ ಭವಿಷ್ಯದಲ್ಲೇ ಮುಖ್ಯವಾಹಿನಿಯಲ್ಲಿ ಮೊದಲ ಬಾರಿಗೆ ಮೆಚ್ಚುಗೆಯ ವಿಮರ್ಶೆಗಳನ್ನು ಪಡೆಯಿತು. ರೋಲಿಂಗ್ ಸ್ಟೋನ್ ನ ಗೋರ್ಡನ್ ಪ್ಲೆಟ್ಚರ್, ಈ ಆಲ್ಬಮ್ "ಒಂದು ಅತ್ಯದ್ಭುತ ಬಿಗಿಹಿಡಿತವಿರುವ ಕೆಲಸ" ಹಾಗೂ "ಸಂಪೂರ್ಣ ಯಶಸ್ಸಿಗಿಂತ ಕಡಿಮೆ ಇಲ್ಲ" ಎಂದು ಹೊಗಳಿದನು.[೪೪] ಆಲ್‌ಮ್ಯೂಸಿಕ್‌ನ ಎಡ್ವರ್ಡೊ ರಿವಡೇವಿಯನಂತಹ ನಂತರದ ವಿಮರ್ಶಕರು ಆಲ್ಬಮ್ "ಒಂದು ಅತ್ಯುತ್ತಮ ಕೆಲಸ, ಇದು ಯಾವುದೇ ಹೆವಿ ಮೆಟಲ್ ಸಂಗೀತದ ಸಂಗ್ರಹಕ್ಕೆ ಅವಶ್ಯಕವಾಗಿರುವಂತದ್ದು" ಹಾಗೂ "ಕೈಚಳಕ ಮತ್ತು ಪರಿಪಕ್ವತೆಯ ಒಂದು ನವೀನ ಅರಿವು" ಎಂದು ಉದಾಹರಿಸಿದರು.[೪೫] ಈ ಆಲ್ಬಮ್ UK ಪಟ್ಟಿಯಲ್ಲಿ ನಾಲ್ಕನೇ ಮತ್ತು US ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನವನ್ನು ಪಡೆಯುವ ಮೂಲಕ USನಲ್ಲಿ ಮಾರಾಟವಾಗುವ ಈ ವಾದ್ಯ-ಮೇಳದ ಐದನೇ ಅನುಕ್ರಮ ಪ್ಲಾಟಿನಂ ಆಲ್ಬಮ್ ಎಂಬ ಹೆಗ್ಗಳಿಕೆ ಗಳಿಸಿಕೊಂಡಿತು.[೪೬] ವಾದ್ಯ-ಮೇಳವು 1974ರ ಜನವರಿಯಲ್ಲಿ ವಿಶ್ವ ಪ್ರವಾಸ ಕೈಗೊಂಡಿತು. ಈ ಪ್ರಯಾಣವು ಕ್ಯಾಲಿಫೋರ್ನಿಯಾದ ಒಂಟಾರಿಯೊದಲ್ಲಿ 1974ರ ಎಪ್ರಿಲ್ 6ರಲ್ಲಿ ನಡೆದ ಕ್ಯಾಲಿಫೋರ್ನಿಯಾ ಜ್ಯಾಮ್‌ಉತ್ಸವದಲ್ಲಿ ಮುಕ್ತಾಯಗೊಂಡಿತು. ಸುಮಾರು 200,000 ಅಭಿಮಾನಿಗಳನ್ನು ಆಕರ್ಷಿಸುತ್ತಾ ಬ್ಲ್ಯಾಕ್ ಸಬ್ಬತ್ 70ರ ದಶಕದ ಪಾಪ್ ದೈತ್ಯರಾದ ರೇರ್ ಅರ್ಥ್, ಎಮರ್ಸನ್, ಲೇಕ್ & ಪಾಲ್ಮರ್, ಡೀಪ್ ಪರ್ಪಲ್, ಅರ್ಥ್, ವಿಂಡ್ & ಫೈರ್, ಸೀಲ್ಸ್ & ಕ್ರೋಫ್ಟ್ಸ್, ಬ್ಲ್ಯಾಕ್ ಓಕ್ ಅರ್ಕನ್ಸಾಸ್ ಮತ್ತು ಈಗಲ್ಸ್ ಒಂದಿಗೆ ಕಾಣಿಸಿಕೊಂಡಿತು. ಈ ಪ್ರದರ್ಶನದ ಭಾಗಗಳನ್ನು USನ ABC ಟೆಲಿವಿಷನ್ ಪ್ರಸಾರ ಮಾಡುವ ಮೂಲಕ ಈ ವಾದ್ಯ-ಮೇಳವನ್ನು ಅಮೇರಿಕಾದ ಶ್ರೋತೃಗಳಿಗೆ ತೆರೆದಿಟ್ಟಿತು. ಕುಖ್ಯಾತ ಇಂಗ್ಲಿಷ್ ನಿರ್ವಾಹಕ ಡಾನ್ ಆರ್ಡೆನ್‌ನೊಂದಿಗೆ ಸಹಿ ಹಾಕುವುದರೊಂದಿಗೆ 1974ರಲ್ಲಿ ವಾದ್ಯ-ಮೇಳವು ನಿರ್ವಹಣೆಯನ್ನು ಸ್ಥಳಾಂತರಿಸಿತು. ಈ ಸ್ಥಳ ಬದಲಾವಣೆಯು ಬ್ಲ್ಯಾಕ್ ಸಬ್ಬತ್‌ನ ಮಾಜಿ ನಿರ್ವಾಹಕರೊಂದಿಗೆ ಒಪ್ಪಂದದ ವಿವಾದಕ್ಕೆ ಕಾರಣವಾಯಿತು. USನಲ್ಲಿದ್ದಾಗ ಆಸ್ಬಾರ್ನ್‌ಯು ಸಪೀನ(ನ್ಯಾಯಸ್ಥಾನಕ್ಕೆ ಹಾಜರಾಗಲೇ ಬೇಕೆಂದು ಕೋರ್ಟಿನಿಂದ ಬಂದ ಆಜ್ಞೆ)ವನ್ನು ಪಡೆದನು, ಅದು ಎರಡು ವರ್ಷಗಳ ದಾವೆಗೆ ಕಾರಣವಾಯಿತು.[೪೧]
ಬ್ಲ್ಯಾಕ್ ಸಬ್ಬತ್ ಅದರ ಆರನೇ ಆಲ್ಬಮ್‌ನ ಕೆಲಸವನ್ನು 1975ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ವಿಲ್ಲೆಸ್ಡೆನ್‌ನ ಮೋರ್ಗನ್ ಸ್ಟುಡಿಯೊದಲ್ಲಿ ಸಬ್ಬತ್, ಬ್ಲಡಿ ಸಬ್ಬತ್ ಗಿಂತ ಬೇರೆಯದೇ ಆದ ಧ್ವನಿಯನ್ನು ಸಂಯೋಜಿಸುವ ನಿರ್ಧಾರಕ ಮುನ್ನೋಟದೊಂದಿಗೆ ಆರಂಭಿಸಿತು. "ನಾವು ನಮ್ಮ ಕಾರ್ಯವನ್ನು ಮುಂದುವರಿಸಿ,ನಾವು ನಿರ್ದಿಷ್ಟವಾಗಿ ಬಯಸಿರದ ಆರ್ಕೆಸ್ಟ್ರಾಗಳು ಮತ್ತು ಎಲ್ಲವನ್ನೂ ಬಳಸಿಕೊಂಡು ಹೆಚ್ಚೆಚ್ಚು ತಾಂತ್ರಿಕತೆಯನ್ನು ಪಡೆಯಬಹುದಿತ್ತು. ನಮ್ಮನ್ನು ನಾವು ಅವಲೋಕನ ಮಾಡಿಕೊಂಡೆವು. ಒಂದು ರಾಕ್ ಆಲ್ಬಮ್ ಮಾಡಬೇಕೆಂದು ಬಯಸಿದೆವು - ವಾಸ್ತವವಾಗಿ ಸಬ್ಬತ್, ಬ್ಲಡಿ ಸಬ್ಬತ್ ರಾಕ್ ಆಲ್ಬಮ್ ಆಗಿರಲಿಲ್ಲ."[೪೭] ಬ್ಲ್ಯಾಕ್ ಸಬ್ಬತ್ ಮತ್ತು ಮೈಕ್ ಬಟ್ಚರ್‌ನಿಂದ ತಯಾರಿಸಲ್ಪಟ್ಟ ಸ್ಯಾಬೊಟೇಜ್ 1975ರ ಜುಲೈನಲ್ಲಿ ಬಿಡುಗಡೆಗೊಂಡಿತು. ಈ ಆಲ್ಬಮ್ ಆರಂಭದಲ್ಲಿ ಮತ್ತೊಮ್ಮೆ ಮೆಚ್ಚುಗೆಯ ವಿಮರ್ಶೆಗಳನ್ನು ಕಂಡಿತು. ರೋಲಿಂಗ್ ಸ್ಟೋನ್ "ಸ್ಯಾಬೊಟೇಜ್ ಪ್ಯಾರನಾಯ್ಡ್ ನಂತರದ ಬ್ಲ್ಯಾಕ್ ಸಬ್ಬತ್‌ನ ಅತ್ಯುತ್ತಮ ರೆಕಾರ್ಡ್ ಮಾತ್ರವಲ್ಲದೆ, ಇದು ಅವರ ಎಂದೆಂದಿಗೂ ಅತ್ಯುತ್ತಮವಾದ ಧ್ವನಿಮುದ್ರಣ ಆಗಿರಬಹುದು" ಎಂದು ಹೊಗಳಿತು.[೪೮] ಆದರೂ ಆಲ್‌ಮ್ಯೂಸಿಕ್‌ನಂತಹ ನಂತರದ ವಿಮರ್ಶಕರು "ಪ್ಯಾರನಾಯ್ಡ್ ಮತ್ತು ವಾಲ್ಯೂಮ್ 4 ಆಲ್ಬಮ್‌ಗಳನ್ನು ತುಂಬಾ ವಿಶಿಷ್ಟವಾಗಿ ಮಾಡಿದ ಇಂತಹ ಮಾಂತ್ರಿಕ ಕ್ರಿಯೆಯು ವಿಯೋಜನೆ ಆರಂಭಿಸಿದೆ" ಎಂದು ಹೇಳಿದ್ದಾರೆ.[೪೯]
ಸ್ಯಾಬೊಟೇಜ್ US ಮತ್ತು UK ಎರಡೂ ಕಡೆಗಳಲ್ಲಿ ಪ್ರಮುಖ 20 ಆಲ್ಬಮ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿತು, ಆದರೆ ಇದು USನ ಚಿನ್ನದ ಪ್ರಮಾಣೀಕರಣವನ್ನು ಮಾತ್ರ ಪಡೆಯಿತು. ಇದು USನ ಪ್ಲಾಟಿನಂ ಸ್ಥಾನವನ್ನು ಗಳಿಸದ ವಾದ್ಯ-ಮೇಳದ ಮೊದಲ ಬಿಡುಗಡೆಯಾಗಿದೆ.[೫೦] ಆಲ್ಬಮ್‌ನ ಏಕೈಕ ಏಕಗೀತ "ಆಮ್ ಐ ಗೋಯಿಂಗ್ ಇನ್ಸೇನ್ (ರೇಡಿಯೊ)" ಪಟ್ಟಿಯಲ್ಲಿ ಸೇರಿಕೊಳ್ಳಲು ವಿಫಲವಾಯಿತು. ಸ್ಯಾಬೊಟೇಜ್ ನ "ಹೋಲ್ ಇನ್ ದ ಸ್ಕೈ" ಮತ್ತು "ಸಿಂಪ್ಟಮ್ ಆಫ್ ದ ಯೂನಿವರ್ಸ್" ಮೊದಲಾದವು ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡುಗಳಾಗಿವೆ.[೪೯] ಬ್ಲ್ಯಾಕ್ ಸಬ್ಬತ್ ಸ್ಯಾಬೊಟೇಜ್ ನ ಬೆಂಬಲವಾಗಿ ಆರಂಭಿಕರಾದ ಕಿಸ್‌ನೊಂದಿಗೆ ಪ್ರಯಾಣ ಬೆಳೆಸಿತು. ಆದರೆ ಮೋಟಾರು ಸೈಕಲ್ ಅಪಘಾತವೊಂದರಲ್ಲಿ ಆಸ್ಬಾರ್ನ್‌ಯ ಬೆನ್ನೆಲುಬಿನ ಸ್ನಾಯುವೊಂದು ಬಿರುಕುಬಿಟ್ಟಿದ್ದರಿಂದಾಗಿ 1975ರ ನವೆಂಬರ್‌ನಲ್ಲಿ ಪ್ರಯಾಣವನ್ನು ಮೊಟಕುಗೊಳಿಸಬೇಕಾಯಿತು. ಡಿಸೆಂಬರ್ 1975ರಲ್ಲಿ ವಾದ್ಯ-ಮೇಳದ ಧ್ವನಿಮುದ್ರಣ ಕಂಪೆನಿಗಳು ವಾದ್ಯ-ಮೇಳದಿಂದ ಮಾಹಿತಿಯನ್ನು ಪಡೆಯದೆಯೇ ವಿ ಸೋಲ್ಡ್ ಅವರ್ ಸೋಲ್ ಫಾರ್ ರಾಕ್ 'n' ರೋಲ್ ಶೀರ್ಷಿಕೆಯ ಅತ್ಯುತ್ತಮ ಜನಪ್ರಿಯ ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದವು. ಈ ಆಲ್ಬಮ್ USನ ಪಟ್ಟಿಯಲ್ಲಿ 1976ರ ವರ್ಷಪೂರ್ತಿ ಇತ್ತು ಹಾಗೂ ಅಲ್ಲಿ ಒಟ್ಟು ಸುಮಾರು ಎರಡು ದಶಲಕ್ಷ ಪ್ರತಿಗಳನ್ನು ಮಾರಾಟ ಮಾಡಿತು.[೫೧]
ಟೆಕ್ನಿಕಲ್ ಎಕ್‌ಸ್ಟ್ಯಾಸಿ ಮತ್ತು ನೆವರ್ ಸೆ ಡೈ! (1976–1979)
[ಬದಲಾಯಿಸಿ]ಬ್ಲ್ಯಾಕ್ ಸಬ್ಬತ್ ಅದರ ಮುಂದಿನ ಆಲ್ಬಮ್‌ನ ಕೆಲಸವನ್ನು ಫ್ಲೋರಿಡಾದ ಮಿಯಾಮಿಯ ಕ್ರೈಟೀರಿಯ ಸ್ಟುಡಿಯೊದಲ್ಲಿ 1976ರ ಜೂನ್‌ನಲ್ಲಿ ಆರಂಭಿಸಿತು. ಧ್ವನಿಯನ್ನು ವಿಸ್ತರಿಸಲು ವಾದ್ಯ-ಮೇಳವು ಕೀಬೋರ್ಡ್ ವಾದಕ ಗೆರ್ರಿ ವುಡ್ರಫೆಯನ್ನು ಸೇರಿಸಿಕೊಂಡಿತು. ಅವನು ಕೂಡ ಸ್ಯಾಬೊಟೇಜ್ ನಲ್ಲಿ ಅಲ್ಪಾವಧಿಯಲ್ಲಿ ಕಾಣಿಸಿಕೊಂಡಿದ್ದ. ಟೆಕ್ನಿಕಲ್ ಎಕ್‌ಸ್ಟ್ಯಾಸಿ 1976ರ ಸೆಪ್ಟೆಂಬರ್ 25ರಲ್ಲಿ ಬಿಡುಗಡೆಗೊಂಡು ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಮೊದಲ ಬಾರಿಗೆ ವಿಮರ್ಶೆಗಳು ಸಮಯ ಸರಿದಂತೆ ಮೆಚ್ಚುಗೆಯನ್ನು ಗಳಿಸಲಿಲ್ಲ. ಬಿಡುಗಡೆಯ ಎರಡು ದಶಕಗಳ ನಂತರ ಆಲ್‌ಮ್ಯೂಸಿಕ್ ಈ ಆಲ್ಬಮ್‌ಗೆ ಎರಡು ಸ್ಟಾರ್‌ಗಳನ್ನು ನೀಡಿತು ಹಾಗೂ ವಾದ್ಯ-ಮೇಳವು "ಗಾಬರಿಗೊಳಿಸುವ ರೀತಿಯಲ್ಲಿ ತೊಡಕು ಬಿಡಿಸುತ್ತಿದೆ" ಎಂದು ಹೇಳಿತು.[೫೨] ಈ ಆಲ್ಬಮ್ ಹಿಂದಿನ ಪ್ರಯತ್ನಗಳಿಗಿಂತ ಕಡಿಮೆ ಅಶುಭಸೂಚಕ, ಅಹಿತಕರ ಧ್ವನಿಯನ್ನು ಹೊಂದಿತ್ತು ಹಾಗೂ ಹೆಚ್ಚು ಸಂಯೋಜಕ ವಾದ್ಯಗಳನ್ನು ಮತ್ತು ಮೇಲು-ಲಯಗತಿಯ ರಾಕ್ ಹಾಡುಗಳನ್ನು ಸಂಯೋಜಿಸಿಕೊಂಡಿತ್ತು. ಟೆಕ್ನಿಕಲ್ ಎಕ್‌ಸ್ಟ್ಯಾಸಿ USನ ಪ್ರಮುಖ 50 ಆಲ್ಬಮ್‌ಗಳ ಪಟ್ಟಿಯಲ್ಲಿ ಸ್ಥಾನ ಗಳಿಸಲು ವಿಫಲವಾಯಿತು. ಇದು ಪ್ಲಾಟಿನಂ ಸ್ಥಾನಮಾನವನ್ನು ಸಾಧಿಸದ ವಾದ್ಯ-ಮೇಳದ ಎರಡನೇ ಅನುಕ್ರಮ ಆಲ್ಬಮ್. ಆದರೂ ಇದು ನಂತರ 1997ರಲ್ಲಿ ಚಿನ್ನದ ಪ್ರಮಾಣೀಕರಣವನ್ನು ಪಡೆಯಿತು.[೫೩] ಈ ಆಲ್ಬಮ್ ಪ್ರಧಾನಾಂಶವಾಗಿ ಉಳಿದ "ಡರ್ಟಿ ವುಮೆನ್" ಹಾಗೂ ಬಿಲ್ ವಾರ್ಡ್ ಮೊದಲು ಧ್ವನಿ ನೀಡಿದ "ಇಟ್ಸ್ ಆಲ್‌ರೈಟ್" ಹಾಡುಗಳನ್ನು ಹೊಂದಿತ್ತು.[೫೨] ಟೆಕ್ನಿಕಲ್ ಎಕ್‌ಸ್ಟ್ಯಾಸಿ ಯ ಬೆಂಬಲವಾಗಿ ಪ್ರವಾಸವನ್ನು 1976ರ ನವೆಂಬರ್‌ನಲ್ಲಿ ಆರಂಭಿಕರಾದಬೋಸ್ಟನ್ ಮತ್ತು ಟೆಡ್ ನ್ಯುಗೆಂಟ್ ಒಂದಿಗೆ USನಲ್ಲಿ ಆರಂಭಿಸಿ, 1977ರ ಎಪ್ರಿಲ್‌ನಲ್ಲಿ AC/DC ಒಂದಿಗೆ ಯುರೋಪ್‌ನಲ್ಲಿ ಪೂರ್ಣಗೊಳಿಸಿತು.[೨೧]
ನವೆಂಬರ್ 1977ರಲ್ಲಿ ಮುಂದಿನ ಆಲ್ಬಮ್‌ನ ಪೂರ್ವತಯಾರಿ ಮಾಡುತ್ತಿದ್ದ ಸಂದರ್ಭದಲ್ಲಿ, ವಾದ್ಯ-ಮೇಳವು ಸ್ಟುಡಿಯೊಗೆ ಪ್ರವೇಶಿಸುವ ಕೆಲವು ದಿನಗಳ ಮೊದಲು ಓಜ್ಜೀ ಆಸ್ಬಾರ್ನ್ ವಾದ್ಯ-ಮೇಳ ತ್ಯಜಿಸಿದನು. "ಸಬ್ಬತ್‌ನ ಕೊನೆಯ ಆಲ್ಬಮ್‌ಗಳು ನನಗೆ ನಿರುತ್ಸಾಹಗೊಳಿಸಿದವು" ಎಂದು ಆಸ್ಬಾರ್ನ್ ಹೇಳಿದನು. "ನಾನು ಇದನ್ನು ಧ್ವನಿಮುದ್ರಣ ಕಂಪೆನಿಯಿಂದ ಬರುತ್ತಿದ್ದ ಲಾಭಕ್ಕಾಗಿ, ಬಿಯರ್ ಕುಡಿಯುವ ಆಸೆಯಿಂದ ಹಾಗೂ ದಾಖಲೆಗಳಿಸುವ ಉದ್ದೇಶದಿಂದ ಮಾಡುತ್ತಿದ್ದೆ."[೫೪] 1977ರ ಅಕ್ಟೋಬರ್‌ನಲ್ಲಿ ಫ್ಲೀಟ್‌ವುಡ್ ಮ್ಯಾಕ್ ಮತ್ತು ಸ್ಯಾವೋಯ್ ಬ್ರೌನ್‌ನ ಮಾಜಿ ಗಾಯಕ ಡೇವ್ ವಾಕರ್‌ನನ್ನು ಪೂರ್ವಾಭ್ಯಾಸಗಳಿಗೆ ಕರೆತರಲಾಯಿತು. ನಂತರ ವಾದ್ಯ-ಮೇಳವು ಹೊಸ ಹಾಡುಗಳಲ್ಲಿ ಕೆಲಸ ಮಾಡಲು ಆರಂಭಿಸಿತು.[೨೨] BBC ಟೆಲಿವಿಷನ್ ಕಾರ್ಯಕ್ರಮ "ಲುಕ್!ಹಿಯರ್!"ನಲ್ಲಿ "ಜ್ಯೂನಿಯರ್ಸ್ ಐಸ್" ಹಾಡಿನ ಆರಂಭಿಕ ಆವೃತ್ತಿಯನ್ನು ವಾಕರ್ ಹಾಡುವ ಮೂಲಕ ಬ್ಲ್ಯಾಕ್ ಸಬ್ಬತ್ ಅವನೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಿತು. .[೨೧]
ಆಸ್ಬಾರ್ನ್ ಆರಂಭದಲ್ಲಿ ಜಾನ್ ಫ್ರೋಜರ್-ಬಿನ್ನೈ, ಟೆರ್ರಿ ಹೋರ್ಬರಿ ಮತ್ತು ಆಂಡಿ ಬಿಯರ್ನೆ ಮೊದಲಾದ ಮಾಜಿ-ಡರ್ಟಿ ಟ್ರಿಕ್ಸ್ ಸದಸ್ಯರನ್ನು ಒಳಗೊಂಡ ಯೋಜನೆಯೊಂದನ್ನು ಒಂಟಿಯಾಗಿ ರೂಪಿಸಲು ಉದ್ದೇಶಿಸಿದನು. ವಾದ್ಯ-ಮೇಳದ ಹೊಸ ಕಾರ್ಯಗಳ ಪೂರ್ವತಯಾರಿ ನಡೆಯುತ್ತಿದ್ದಾಗ 1978ರ ಜನವರಿಯಲ್ಲಿ ಆಸ್ಬಾರ್ನ್ ಮನಸ್ಸು ಬದಲಾಯಿಸಿ ಬ್ಲ್ಯಾಕ್ ಸಬ್ಬತ್‌ಗೆ ಪುನಃ ಸೇರಿಕೊಂಡನು. "ಮೂರು ದಿನಗಳ ಮೊದಲು ನಾವು ಸ್ಟುಡಿಯೊಗೆ ಹೋಗುತ್ತಿದ್ದಾಗ, ಓಜ್ಜೀಯು ನಮ್ಮ ವಾದ್ಯ-ಮೇಳಕ್ಕೆ ಹಿಂದಿರುಗಲು ಬಯಸಿದನು" ಎಂದು ಐಯೋಮಿ ವಿವರಿಸಿದ್ದಾನೆ. "ನಾವು ಬೇರೆ ವ್ಯಕ್ತಿಯೊಂದಿಗೆ ಬರೆದ ಯಾವುದೇ ವಿಷಯವನ್ನು ಅವನು ಹಾಡಲಿಲ್ಲ. ಆದ್ದರಿಂದ ತುಂಬಾ ಕಷ್ಟವಾಯಿತು. ನಾವು ಸ್ಟುಡಿಯೊಗೆ ಯಾವುದೇ ಹಾಡುಗಳಿಲ್ಲದೆಯೇ ಹೋದೆವು. ನಾವು ಬೆಳಿಗ್ಗೆ ಸಾಹಿತ್ಯ ರಚಿಸಬೇಕಿತ್ತು. ಹಾಗಾದರೆ ಮಾತ್ರ ರಾತ್ರಿಯಲ್ಲಿ ಪೂರ್ವತಯಾರಿ ಮತ್ತು ಧ್ವನಿಮುದ್ರಣ ಮಾಡಬಹುದಿತ್ತು. ನಮಗೆ ರಚಿಸಿದ ಕೃತಿಯನ್ನು ಪರ್ಯಾಲೋಚಿಸುವಷ್ಟು ಸಮಯ ಇರಲಿಲ್ಲ. ಸಾಗಣೆ ಬೆಲ್ಚ್‌ನಂತೆ ತುಂಬಾ ಕಷ್ಟಕರವಾಗಿತ್ತು. 'ಇದು ಸರಿಯಾಗಿದೆಯೇ? ಇದು ತಕ್ಕರೀತಿಯಲ್ಲಿ ಕೆಲಸ ಮಾಡುತ್ತಿದೆಯೇ?' ನನಗೆ ಹೊಸ ಯೋಚನೆಗಳೊಂದಿಗೆ ಬರಲು ಹಾಗೂ ಅವುಗಳನ್ನು ಒಟ್ಟಿಗೆ ಸೇರಿಸಲು ತುಂಬಾ ಕಷ್ಟವಾಗಿತ್ತು."[೫೪]
ವಾದ್ಯ-ಮೇಳವು ಕೆನಡಾದ ಟೊರೊಂಟೊದ ಸೌಂಡ್ ಇಂಟರ್ಚೆಂಜ್ ಸ್ಟುಡಿಯೊದಲ್ಲಿ ಬರೆಯುತ್ತಾ ಮತ್ತು ಧ್ವನಿಮುದ್ರಣ ಮಾಡುತ್ತಾ ಐದು ತಿಂಗಳನ್ನು ಕಳೆಯಿತು. ಕೊನೆಗೆ ನೆವರ್ ಸೆ ಡೈ! ಆಲ್ಬಮ್ ರಚನೆಯಾಯಿತು. "ಇದು ಸಾಕಷ್ಟು ದೀರ್ಘಕಾಲವನ್ನು ತೆಗೆದುಕೊಂಡಿತು" ಎಂದು ಐಯೋಮಿ ಹೇಳಿಕೊಂಡಿದ್ದಾನೆ. "ನಾವು ಅತಿಯಾಗಿ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದು, ನಿಜವಾಗಲೂ ವ್ಯಸನಿಗಳಾಗಿದ್ದೆವು. ನಾವು ಸೆಷನ್‌ಗಳಿಗೆ ತೆರಳಿ, ತೀರಾ ಮಾದಕದ್ರವ್ಯದ ಗುಂಗಿನಲ್ಲಿದ್ದರಿಂದ ಅದನ್ನು ನಿಲ್ಲಿಸಿ ಪ್ಯಾಕ್‌ಅಪ್ ಮಾಡಿದೆವು. ಯಾರಿಗೂ ಸರಿಯಾದ ವಿಷಯ ಸಿಗುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಭಿನ್ನವಾದ ಸ್ವರಗಳನ್ನು ನುಡಿಸಲು ಆರಂಭಿಸಿದರು. ನಾವು ಹಿಂದಿರುಗಿ ಹೋಗಿ ನಿದ್ದೆ ಮಾಡಿ, ಮರುದಿನ ಬಂದು ಪ್ರಯತ್ನಿಸುತ್ತಿದ್ದೆವು."[೫೪] ಈ ಆಲ್ಬಮ್ 1978ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡು, UKಯಲ್ಲಿ ಹನ್ನೆರಡನೇ ಹಾಗೂ USನಲ್ಲಿ 69ನೇ ಸ್ಥಾನವನ್ನು ಗಳಿಸಿಕೊಂಡಿತು. ಮಾಧ್ಯಮ ಪ್ರತಿಕ್ರಿಯೆಯು ಮತ್ತೆ ಪ್ರತಿಕೂಲವಾಗಿಯೇ ಇತ್ತು ಹಾಗೂ ಸಮಯ ಕಳೆದಂತೆ ಹಿಂದಿನಂತೆಯೇ ಸುಧಾರಿಸಲಿಲ್ಲ. ಬಿಡುಗಡೆಯಾದ ಎರಡು ದಶಕಗಳ ನಂತರ ಆಲ್‌ಮ್ಯೂಸಿಕ್ ನ ಎಡ್ವರ್ಡೊ ರಿವಾಡಿಯ ಆಲ್ಬಮ್‌ನ "ಗಮನಸೆಳೆಯದ ಹಾಡುಗಳು ವಾದ್ಯ-ಮೇಳದವರ ಉದ್ವಿಗ್ನ ವೈಯಕ್ತಿಕ ಸಮಸ್ಯೆಗಳು ಮತ್ತು ಮಾದಕ ದ್ರವ್ಯದ ದುರುಪಯೋಗವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿವೆ" ಎಂದು ಹೇಳಿಕೆ ನೀಡಿದೆ.[೫೫] ಆಲ್ಬಮ್‌ನ ಏಕಗೀತಗಳಾದ "ನೆವರ್ ಸೆ ಡೈ" ಮತ್ತು "ಹಾರ್ಡ್ ರೋಡ್" UKಯಲ್ಲಿ ಪ್ರಮುಖ 40 ಹಾಡುಗಳಲ್ಲಿ ಸ್ಥಾನಗಳಿಸಿಕೊಂಡವು. ವಾದ್ಯ-ಮೇಳವು "ನೆವರ್ ಸೆ ಡೈ" ಹಾಡನ್ನು ನಿರ್ವಹಿಸುವ ಮೂಲಕ ಟಾಪ್ ಆಫ್ ದ ಪಾಪ್ಸ್‌ನಲ್ಲಿ ಎರಡನೇ ಬಾರಿ ಕಾಣಿಸಿಕೊಂಡಿತು. ಈ ಆಲ್ಬಮ್ USನ ಚಿನ್ನದ ದೃಢೀಕರಣವನ್ನು ಪಡೆಯಲು ಸುಮಾರು 20 ವರ್ಷಗಳನ್ನು ತೆಗೆದುಕೊಂಡಿತು.[೫೬]
ನೆವರ್ ಸೆ ಡೈ! ಯ ಬೆಂಬಲವಾಗಿ ಪ್ರವಾಸವು 1978ರ ಮೇಯಲ್ಲಿ ಆರಂಭಿಕರಾದ ವ್ಯಾನ್ ಹ್ಯಾಲೆನ್ ಒಂದಿಗೆ ಆರಂಭಗೊಂಡಿತು. ಮೊದಲ ಬಾರಿಗೆ ವಿಶ್ವ ಪ್ರವಾಸ ಮಾಡುತ್ತಿದ್ದ ವ್ಯಾನ್ ಹ್ಯಾಲೆನ್‌ನ "ಯೌವನಸಹಜ" ನಿರ್ವಹಣೆಗೆ ಸುಸ್ಪಷ್ಟ ವೈರುದ್ಧ್ಯವಾಗಿ ವಿಮರ್ಶಕರು ಬ್ಲ್ಯಾಕ್ ಸಬ್ಬತ್‌ನ ನಿರ್ವಹಣೆಯನ್ನು "ದಣಿವಿನಿಂದ ಕೂಡಿದುದು ಹಾಗೂ ಸ್ಫೂರ್ತಿ ಇಲ್ಲದಿರುವುದು" ಎಂದು ಹೇಳಿದರು.[೨೧] ಹ್ಯಾಮ್ಮರ್ಸ್ಮಿತ್ ಆಡಿಯಾನ್‌ನಲ್ಲಿ 1978ರ ಜೂನ್‌ನಲ್ಲಿ ವಾದ್ಯ-ಮೇಳವು ಅದರ ನಿರ್ವಹಣೆಯನ್ನು ಚಿತ್ರೀಕರಿಸಿತು. ಇದು ನಂತರ ನೆವರ್ ಸೆ ಡೈ ಯ DVD ಆಗಿ ಬಿಡುಗಡೆಗೊಂಡಿತು. ಪ್ರವಾಸದ ಅಂತಿಮ ಪ್ರದರ್ಶನ ಮತ್ತು ಆಸ್ಪರ್ನ್ ಬ್ಯಾಂಡ್ ಜತೆ ಕೊನೆಯ ಪ್ರದರ್ಶನ(ನಂತರ ಪುನರ್ಮಿಲನ ಆಗುವ ತನಕ)ವು ನ್ಯೂಮೆಕ್ಸಿಕೊದ ಆಲ್ಬಕ್ವೆರ್ಕ್ಯುನಲ್ಲಿ ಡಿಸೆಂಬರ್ 11ರಂದು ನಡೆಯಿತು.
ಪ್ರವಾಸದ ನಂತರ ಬ್ಲ್ಯಾಕ್ ಸಬ್ಬತ್ ಲಾಸ್ ಏಂಜಲೀಸ್‌ಗೆ ಹಿಂದಿರುಗಿ, ಬೆಲ್ ಏರ್‌ನಲ್ಲಿ ಮತ್ತೆ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿತು. ಅಲ್ಲಿ ಮುಂದಿನ ಆಲ್ಬಮ್‌ಗಾಗಿ ಕೆಲಸ ಮಾಡುತ್ತಾ ಹೆಚ್ಚು ಕಡಿಮೆ ಒಂದು ವರ್ಷವನ್ನು ಕಳೆಯಿತು. ಧ್ವನಿಮುದ್ರಣ ಸಂಸ್ಥೆಯ ಒತ್ತಡ ಮತ್ತು ಆಸ್ಬಾರ್ನ್‌ಯ ಆಲೋಚನೆಗಳ ಕೊರತೆಯಿಂದ ವಿಷಮ ಸ್ಥಿತಿಗೆ ತಲುಪಿ,ಟೋನಿಯು ಓಜ್ಜೀ ಆಸ್ಬಾರ್ನ್‌ಯನ್ನು 1979ರಲ್ಲಿ ಹೊರಹಾಕಲು ನಿರ್ಧರಿಸಿದನು. "ಆ ಸಮಯದಲ್ಲಿ ಓಜ್ಜೀಯ ಕಾಲ ಕೊನೆಗೊಂಡಿತು" ಎಂದು ಐಯೋಮಿ ಹೇಳಿದ್ದಾನೆ. "ನಾವೆಲ್ಲರೂ ಹೆಚ್ಚು ಮಾದಕ ದ್ರವ್ಯಗಳನ್ನು, ಕೋಕ್ಅನ್ನು ಸೇವಿಸುತ್ತಿದ್ದೆವು. ಓಜ್ಜೀಯು ಆ ಸಂದರ್ಭದಲ್ಲಿ ತುಂಬಾ ಕುಡಿಯುತ್ತಿದ್ದನು. ನಾವು ಪೂರ್ವತಯಾರಿ ಮಾಡಬೇಕಿತ್ತು, ಆದರೆ ಏನೂ ನಡೆಯುತ್ತಿರಲಿಲ್ಲ. ಇದು 'ತಯಾರಿ ಇವತ್ತು ಮಾಡಬೇಕಾ? ಇಲ್ಲ, ನಾವು ನಾಳೆ ಮಾಡುವ' ಎಂಬತ್ತಿತ್ತು. ನಾವು ಏನನ್ನೂ ಮಾಡದಿರದಿರುವುದು ಕೆಟ್ಟದ್ದನ್ನು ಉಂಟುಮಾಡಿತು. ಎಲ್ಲಾ ವ್ಯರ್ಥವಾಯಿತು."[೫೭] ಗಾಯಕನಿಗೆ ಸುದ್ಧಿಯನ್ನು ಮುಚ್ಚಿಸಲು ಟೋನಿಯು ಆಸ್ಬಾರ್ನ್‌ಗೆ ಹತ್ತಿರದವನಾಗಿದ್ದ ಡ್ರಮ್-ವಾದಕ ಬಿಲ್ ವಾರ್ಡ್‌ನನ್ನು ಆಯ್ಕೆ ಮಾಡಿದನು. "ನಾನು ವೃತ್ತಿನಿರತನೆಂದು ಭಾವಿಸುತ್ತೇನೆ. ನಿಜವಾಗಿ ನಾನು ಹಾಗೆ ಇಲ್ಲದಿರಬಹುದು. ಕುಡಿದಾಗ ನಾನು ಘೋರ, ಭೀಕರವಾಗಿರುತ್ತೇನೆ ಎಂದು ವಾರ್ಡ್ ಹೇಳಿದ್ದಾನೆ. "ಆಲ್ಕೊಹಾಲ್ ನಿಜವಾಗಿಯೂ ಬ್ಲ್ಯಾಕ್ ಸಬ್ಬತ್‌ಗೆ ಹೆಚ್ಚು ಹಾನಿವುಂಟು ಮಾಡಿದ ವಸ್ತುಗಳಲ್ಲಿ ಒಂದಾಗಿದೆ. ನಾವು ಪರಸ್ಪರ ನಾಶಗೊಳಿಸಲು ಸಂಕಲ್ಪಿಸಿದ್ದೆವು. ವಾದ್ಯ-ಮೇಳವು ತುಂಬಾ ನಂಜಿನಿಂದ ಕೂಡಿತ್ತು."[೫೮]
ಹೆವೆನ್ ಆಂಡ್ ಹೆಲ್ ಮತ್ತು ಮಾಬ್ ರೂಲ್ಸ್ (1979–1982)
[ಬದಲಾಯಿಸಿ]ಬ್ಲ್ಯಾಕ್ ಸಬ್ಬತ್‌ನ ನಿರ್ವಾಹಕ ಡಾನ್ ಆರ್ಡೆನ್‌ನ ಪುತ್ರಿ ಶರೋನ್ ಆರ್ಡೆನ್ (ನಂತರದ ಶರೋನ್ ಆಸ್ಬಾರ್ನ್) 1979ರಲ್ಲಿ ಓಜ್ಜೀ ಒಸ್ಬರ್ನೆಯ ಬದಲಿಗೆ ಮಾಜಿ ರೈನ್‌ಬೊ ಗಾಯಕ ರೋನಿ ಜೇಮ್ಸ್ ಡಿಯೊನನ್ನು ಸೇರಿಸುವಂತೆ ಸೂಚಿಸಿದಳು. ಡಿಯೊ ಅಧಿಕೃತವಾಗಿ ಜೂನ್‌ನಲ್ಲಿ ಸೇರಿಕೊಂಡನು. ವಾದ್ಯ-ಮೇಳವು ಮುಂದಿನ ಆಲ್ಬಮ್‌ಗೆ ಸಾಹಿತ್ಯ ರಚಿಸುವುದನ್ನು ಆರಂಭಿಸಿಕೊಂಡಿತು. ಆಸ್ಬಾರ್ನ್‌ಗಿಂತ ಬೇರೆಯೇ ಶೈಲಿಯ ಸ್ವರದ ಡಿಯೊನ ಸೇರ್ಪಡೆಯು ಬ್ಲ್ಯಾಕ್ ಸಬ್ಬತ್‌ನ ಧ್ವನಿಯಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಮಾಡಿತು. "ಅವರು ಒಟ್ಟಿಗೆ ಸಂಪೂರ್ಣವಾಗಿ ಬೇರೆಯೇ ಆಗಿದ್ದರು" ಎಂದು ಐಯೋಮಿ ವಿವರಿಸಿದ್ದಾನೆ. "ಧ್ವನಿಯಲ್ಲಿ ಮಾತ್ರವಲ್ಲದೆ ನಡೆನುಡಿಯಲ್ಲೂ ಅವರು ಭಿನ್ನತೆಯನ್ನು ಹೊಂದಿದ್ದರು. ಓಜ್ಜೀಯು ಒಬ್ಬ ಉತ್ತಮ ಪ್ರದರ್ಶಕನಾಗಿದ್ದನು. ಆದರೆ ಡಿಯೊನ ವರ್ತನೆ, ಸ್ವರ ಮತ್ತು ಸಂಗೀತ ಮಾರ್ಗ ಎಲ್ಲವೂ ಭಿನ್ನವಾಗಿತ್ತು. ಡಿಯೊ ಪುನರಾವರ್ತಿಸುವ ಗೀತಭಾಗದ ಆಚೆ ಹಾಡುತ್ತಿದ್ದನು, ಅದೇ ಓಜ್ಜೀಯು "ಐರನ್ ಮ್ಯಾನ್"ನಲ್ಲಿದ್ದಂತೆ ಪುನರಾವರ್ತಿಸುವ ಗೀತಭಾಗವನ್ನು ಅನುಸರಿಸಿ ಹಾಡುತ್ತಿದ್ದನು. ರೋನಿಯು ಬಂದು ನಮಗೆ ಬರೆಯುವ ಮತ್ತೊಂದು ದೃಷ್ಟಿಕೋನವನ್ನು ಹೇಳಿಕೊಟ್ಟನು"[೫೯]
ಬ್ಲ್ಯಾಕ್ ಸಬ್ಬತ್‌ನಲ್ಲಿನ ಡಿಯೊನ ಅವಧಿಯಲ್ಲಿ ಹೆವಿ ಮೆಟಲ್ ಉಪಸಂಸ್ಕೃತಿಯಲ್ಲಿ "ಮೆಟಲ್ ಹಾರ್ನ್ಸ್" ಪ್ರಯೋಗವನ್ನು ಜನಪ್ರಿಯತೆಗೊಳಿಸಿತು. ಶೋತೃಗಳಿಗೆ ಅಭಿವಂದಿಸುವ ಸಲುವಾಗಿ ಡಿಯೊ ಇದನ್ನು ಅಳವಡಿಸಿಕೊಂಡನು. ಆರಂಭದಲ್ಲಿ "ಕೆಟ್ಟ ದೃಷ್ಟಿ"ಯನ್ನು ತಪ್ಪಿಸುವ ಮೂಢನಂಬಿಕೆಯ ಕ್ರಮವಾಗಿ ಮಾಡಲಾಯಿತು. ಆನಂತರ ಅಭಿಮಾನಿಗಳು ಮತ್ತು ಇತರ ಸಂಗೀತಗಾರರು ಈ ಸಂಜ್ಞೆಯನ್ನು ವ್ಯಾಪಕವಾಗಿ ನಕಲು ಮಾಡಲು ಪ್ರಾರಂಭಿಸಿದರು.[೬೦][೬೧]
ಗೀಜರ್ ಬಟ್ಲರ್ 1979ರ ಸೆಪ್ಟೆಂಬರ್‌ನಲ್ಲಿ ತಾತ್ಕಾಲಿಕವಾಗಿ ವಾದ್ಯ-ಮೇಳವನ್ನು ಬಿಟ್ಟುಬಿಟ್ಟನು. ಆನಂತರ ಆರಂಭದಲ್ಲಿ ಮಂದ್ರವಾದ್ಯಕ್ಕೆ ಕ್ವಾರ್ಟ್ಸ್‌ನ ಜಿಯೋಫ್ ನಿಕೋಲ್ಸ್‌ನನ್ನು ಸೇರಿಸಿಕೊಳ್ಳಲಾಯಿತು. ಬಟ್ಲರ್ 1980ರ ಜನವರಿಯಲ್ಲಿ ವಾದ್ಯ-ಮೇಳಕ್ಕೆ ಹಿಂದಿರುಗುವುದರೊಂದಿಗೆ ಹಾಗೂ ನಿಕೋಲ್ಸ್ ಕೀಬೋರ್ಡ್ ವಾದನಕ್ಕೆ ಬದಲಾಗುವುದರೊಂದಿಗೆ, ಹೊಸ ತಂಡವು ಧ್ವನಿಮುದ್ರಣ ಕಾರ್ಯವನ್ನು ಪ್ರಾರಂಭಿಸಲು ನವೆಂಬರ್‌ನಲ್ಲಿ ಕ್ರೈಟೀರಿಯ ಸ್ಟುಡಿಯೋಸ್‌ಗೆ ಹಿಂದಿರುಗಿತು. ಮಾರ್ಟಿನ್ ಬರ್ಚ್ ನಿರ್ಮಾಣದ ಹೆವೆನ್ ಆಂಡ್ ಹೆಲ್ 1980ರ ಎಪ್ರಿಲ್ 25ರಂದು ಬಿಡುಗಡೆಗೊಂಡು, ವಿಮರ್ಶಾತ್ಮಕ ಪ್ರಶಂಸೆಯನ್ನು ಗಳಿಸಿಕೊಂಡಿತು. ಅದು ಬಿಡುಗಡೆಯಾದ ಸುಮಾರು ಒಂದು ದಶಕದ ನಂತರ ಆಲ್‌ಮ್ಯೂಸಿಕ್ , ಈ ಆಲ್ಬಮ್ "ಸಬ್ಬತ್‌ನ ಧ್ವನಿಮುದ್ರಣಗಳಲ್ಲೇ ಅತ್ಯುತ್ತಮವಾದುದು. ಇದರಲ್ಲಿ ವಾದ್ಯ-ಮೇಳದ ಧ್ವನಿಯು ಮರುಹುಟ್ಟು ಪಡೆದುಕೊಂಡು ಪುನಃಚೇತರಿಸಿಕೊಂಡಿದೆ" ಎಂದು ಹೇಳಿಕೆ ನೀಡಿತು.[೬೨] ಹೆವೆನ್ ಆಂಡ್ ಹೆಲ್ UKಯಲ್ಲಿ 9ನೇ ಹಾಗೂ USನಲ್ಲಿ 28ನೇ ಸ್ಥಾನಕ್ಕೇರಿತು. ಪಟ್ಟಿಯಲ್ಲಿ ಉತ್ತಮ ಸ್ಥಾನಗಳಿಸಿದ ಈ ವಾದ್ಯ-ಮೇಳದ ಸ್ಯಾಬೊಟೇಜ್ ನ ನಂತರದ ಆಲ್ಬಮ್ ಇದಾಗಿದೆ. ಈ ಆಲ್ಬಮ್ ಅಂತಿಮವಾಗಿ USನಲ್ಲಿ ಒಂದು ದಶಲಕ್ಷ ಪ್ರತಿಗಳ ಮಾರಾಟಕಂಡಿತು.[೬೩] ನಂತರ ವಾದ್ಯ-ಮೇಳವು ಡಿಯೊನೊಂದಿಗಿನ ಮೊದಲ ನೇರ ಪ್ರದರ್ಶನವನ್ನು 1980ರ ಎಪ್ರಿಲ್ 17ರಲ್ಲಿ ಜರ್ಮನಿಯಲ್ಲಿ ನಡೆಸಿಕೊಡುವುದರೊಂದಿಗೆ ಪ್ರಪಂಚ ಪ್ರವಾಸವನ್ನು ಕೈಗೊಂಡಿತು.
ಬ್ಲ್ಯಾಕ್ ಸಬ್ಬತ್ 1980ರ ವರ್ಷದಾದ್ಯಂತ ಬ್ಲೂ ಓಯಸ್ಟರ್ ಕಲ್ಟ್ ಒಂದಿಗೆ "ಬ್ಲ್ಯಾಕ್ ಆಂಡ್ ಬ್ಲೂ" ಪ್ರವಾಸದಲ್ಲಿ US ಪ್ರವಾಸ ಮಾಡಿತು. ನ್ಯೂಯಾರ್ಕ್‌ನ ಯೂನಿಯನ್ಡೇಲ್ನ ನಸ್ಸೌ ಕೊಲಿಸಿಯಮ್‌ನಲ್ಲಿ ನಡೆಸಿದ ಪ್ರದರ್ಶನವನ್ನು ಚಿತ್ರೀಕರಿಸಿ, ಬ್ಲ್ಯಾಕ್ ಆಂಡ್ ಬ್ಲೂ ಆಗಿ 1981ರಲ್ಲಿ ಬಿಡುಗಡೆಗೊಳಿಸಲಾಯಿತು.[೬೪] 1980ರ ಜುಲೈನಲ್ಲಿ ವಾದ್ಯ-ಮೇಳವು ಲಾಸ್ ಏಂಜಲೀಸ್‌ನ ಮೆಮೋರಿಯಲ್ ಕೊಲಿಸಿಯಮ್‌ನಲ್ಲಿ ಟಿಕೆಟ್‌ಗಳು ಸಂಪೂರ್ಣ ಮಾರಾಟವಾದಜರ್ನಿ, ಚೀಪ್ ಟ್ರಿಕ್ ಮತ್ತು ಮೋಲಿ ಹ್ಯಾಟ್ಚೆಟ್ ಮೊದಲಾದವುಗಳೊಂದಿಗೆ 75,000 ಅಭಿಮಾನಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿತು.[೬೫] ಮರುದಿನ ವಾದ್ಯ-ಮೇಳವು ಓಕ್‌ಲ್ಯಾಂಡ್ ಕೊಲಿಸಿಯಮ್‌ನಲ್ಲಿ 1980 ಡೇ ಆನ್ ದ ಗ್ರೀನ್‌ನಲ್ಲಿ ಪ್ರದರ್ಶನ ನಡೆಸಿತು. ಪ್ರವಾಸದಲ್ಲಿದ್ದಾಗ ಇಂಗ್ಲೆಂಡ್‌ನಲ್ಲಿದ್ದ ಬ್ಲ್ಯಾಕ್ ಸಬ್ಬತ್‌ನ ಮಾಜಿ ಧ್ವನಿಮುದ್ರಣ ಸಂಸ್ಥೆಯು ಏಳು ವರ್ಷ ಹಿಂದಿನ ಪ್ರದರ್ಶನದಿಂದ ಆರಿಸಿದ ಲೈವ್ ಅಟ್ ಲಾಸ್ಟ್ ಎಂಬ ಹೆಸರಿನ ಒಂದು ನೇರ ಪ್ರದರ್ಶನದ ಆಲ್ಬಮ್‌ಅನ್ನು ವಾದ್ಯ-ಮೇಳದಿಂದ ಯಾವುದೇ ಮಾಹಿತಿ ಪಡೆಯದೇ ಬಿಡುಗಡೆ ಮಾಡಿತು.
ಈ ಆಲ್ಬಮ್ ಬ್ರಿಟಿಷ್ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆಯಿತು ಹಾಗೂ "ಪ್ಯಾರನಾಯ್ಡ್"ಅನ್ನು ಏಕಗೀತವಾಗಿ ಪುನಃಪ್ರಕಟಿಸಿತು, ಇದು ಪ್ರಮುಖ 20 ಹಾಡುಗಳಲ್ಲಿ ಒಂದು ಸ್ಥಾನ ಗಳಿಸಿತು.[೨೨]
1980ರ ಆಗಸ್ಟ್‌ನಲ್ಲಿ ಮಿನ್ನೆಸೊತದ ಮಿನ್ನೆಯಪೊಲಿಸ್‌ನಲ್ಲಿ ಪ್ರದರ್ಶನವೊಂದನ್ನು ನಡೆಸಿಕೊಟ್ಟ ನಂತರ ಬಿಲ್ ವಾರ್ಡ್ ಬ್ಲ್ಯಾಕ್ ಸಬ್ಬತ್‌ನಿಂದ ತೆಗೆದುಹಾಕಲ್ಪಟ್ಟನು. ನಂತರ ವಾರ್ಡ್ ಹೀಗೆಂದು ಹೇಳಿಕೊಂಡಿದ್ದಾನೆ - "ನಾನು ತುಂಬಾ ವೇಗವಾಗಿ ಮುಳುಗುತ್ತಿದ್ದೆ " "ನಾನು ನಂಬಲಾರದಷ್ಟು ಕುಡಿಯುತ್ತಿದ್ದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಕುಡಿಯುತ್ತಿದ್ದೆ. ನಾನು ವೇದಿಕೆಗೆ ಹೋದಾಗ ಅಲ್ಲಿ ಹೆಚ್ಚು ಬೆಳಕಿರಲಿಲ್ಲ. ಅಲ್ಲಿ ನಾನು ಸಾಯುತ್ತಿದ್ದೇನೆ ಎಂದು ಭಾವಿಸಿದೆ. ಆ ನೇರ ಪ್ರದರ್ಶನವು ತುಂಬಾ ಖಾಲಿಯಾಗಿದ್ದಂತೆ ಇತ್ತು. ರೋನ್ ಅವನ ಕೆಲಸಗಳನ್ನು ಮಾಡುತ್ತಾ ಹೊರಗೆ ಇದ್ದನು. ನಾನು "ಎಲ್ಲಾ ಮುಗಿದುಹೋಯಿತು" ಎಂದುಕೊಳ್ಳುತ್ತಾ ಸುಮ್ಮನೆ ಹೋದೆ. ನನಗೆ ರೋನಿ ಎಂದರೆ ಇಷ್ಟ. ಆದರೆ ಸಂಗೀತದ ವಿಷಯದಲ್ಲಿ ಅವನು ನನಗೆ ಸರಿಹೊಂದುವುದಿಲ್ಲ."[೬೬] ವಾರ್ಡ್‌ನ ಆರೋಗ್ಯ ಕುಸಿತದಿಂದಾಗಿ ಐಯೋಮಿಯು ಅವನಿಗೆ ತಿಳಿಸದೆಯೇ ಡ್ರಮ್-ವಾದಕ ವಿನ್ನಿ ಅಪ್ಪೀಸ್‌ನನ್ನು ಸೇರಿಸಿಕೊಂಡನು. "ಆ ವಿಷಯದ ಬಗ್ಗೆ ಅವರು ನನ್ನೊಂದಿಗೆ ಮಾತನಾಡಲಿಲ್ಲ. ನನ್ನ ಸ್ಥಾನದಿಂದ ನನ್ನನ್ನು ಒದ್ದೋಡಿಸಿದರು, ಆ ಬಗ್ಗೆ ನನಗೆ ಏನನ್ನೂ ಹೇಳಲಿಲ್ಲ. ಅವರು ಪ್ರವಾಸವನ್ನು ಮುಂದುವರಿಸಲು ಬೇರೊಬ್ಬ ಡ್ರಮ್-ವಾದಕನನ್ನು ಕರೆದುಕೊಂಡು ಬರಬೇಕೆಂದು ನನಗೆ ತಿಳಿದಿತ್ತು. ಆದರೆ ನಾವು ಚಿಕ್ಕವರಿದ್ದಾಗಿನಿಂದರೂ ವರ್ಷಾನುಗಟ್ಟಲೆ ಈ ವಾದ್ಯ-ಮೇಳದಲ್ಲಿ ಇದ್ದೆ. ವಿನ್ನಿ ನುಡಿಸುತ್ತಿದ್ದ ರೀತಿಯು ನಿಜವಾಗಿಯೂ ಅತ್ಯಂತ ಕೆಟ್ಟದಾಗಿತ್ತು. ಇದು ನನ್ನನ್ನು ತುಂಬಾ ನೋಯಿಸಿತು."[೬೭]
ವಾದ್ಯ-ಮೇಳವು ಹೆವೆನ್ ಆಂಡ್ ಹೆಲ್ ಆಲ್ಬಮ್‌ನ ಪ್ರಪಂಚ ಪ್ರವಾಸವನ್ನು 1981ರ ಫೆಬ್ರವರಿಯಲ್ಲಿ ಪೂರ್ಣಗೊಳಿಸಿ, ಅದರ ಮುಂದಿನ ಆಲ್ಬಮ್‌ನ ಕೆಲಸವನ್ನು ಆರಂಭಿಸಲು ಸ್ಟುಡಿಯೊಗೆ ಹಿಂದಿರುಗಿತು.[೬೮] ಮಾರ್ಟಿನ್ ಬರ್ಚ್ ನಿರ್ಮಾಣದ ಹಾಗೂ ರೋನಿ ಜೇಮ್ಸ್ ಡಿಯೊನನ್ನು ಗಾಯಕನನ್ನಾಗಿ ಹೊಂದಿದ ಬ್ಲ್ಯಾಕ್ ಸಬ್ಬತ್‌ನ ಎರಡನೇ ಸ್ಟುಡಿಯೊ ಆಲ್ಬಮ್ ಮಾಬ್ ರೂಲ್ಸ್ 1981ರ ಅಕ್ಟೋಬರ್‌ನಲ್ಲಿ ಬಿಡುಗಡೆಹೊಂದಿತು. ಇದು ವಿಮರ್ಶಕರಿಂದ ಕಡಿಮೆ ಮಟ್ಟಿನ ಮೆಚ್ಚುಗೆಯನ್ನು ಪಡೆದರೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿತು. ರೋಲಿಂಗ್ ಸ್ಟೋನ್ ವಿಮರ್ಶಕ J. D. ಕನ್ಸಿಡೈನ್ "ಮಾಬ್ ರೂಲ್ಸ್ ವಾದ್ಯ-ಮೇಳದ ಮಂದ-ತಿಳುವಳಿಕೆಯ ಮತ್ತು ಕೇವಲ ಆಡಂಬರದ ಆಲ್ಬಮ್ ಆಗಿದೆ" ಎಂದು ಟೀಕಿಸುತ್ತಾ ಈ ಆಲ್ಬಮ್‌ಗೆ ಒಂದು ಸ್ಟಾರ್ ನೀಡಿದನು.[೬೯] ವಾದ್ಯ-ಮೇಳದ ಹೆಚ್ಚಿನ ಹಿಂದಿನ ಕೆಲಸಗಳಂತೆ ಸಂಗೀತ-ಮಾಧ್ಯಮದ ಅಭಿಪ್ರಾಯಗಳನ್ನು ಸುಧಾರಿಸುವಲ್ಲಿ ಕಾಲವು ಸಹಾಯ ಮಾಡಿತು. ಈ ಆಲ್ಬಮ್ ಬಿಡುಗಡೆಯಾದ ಒಂದು ದಶಕದ ನಂತರ ಆಲ್‌ಮ್ಯೂಸಿಕ್‌ನ ಎಡ್ವಾರ್ಡೊ ರಿವಾಡೇವಿಯಾ ಹೀಗೆಂದು ಹೇಳಿದನು ಮಾಬ್ ರೂಲ್ಸ್ "ಒಂದು ಅತ್ಯುತ್ಕೃಷ್ಟವಾದ ಧ್ವನಿಮುದ್ರಣ".[೭೦] ಈ ಆಲ್ಬಮ್ ಚಿನ್ನದ ದೃಢೀಕರಣವನ್ನು ಪಡೆಯಿತು[೭೧] ಹಾಗೂ UK ಪಟ್ಟಿಯಲ್ಲಿ ಪ್ರಮುಖ 20 ಆಲ್ಬಮ್‌ಗಳಲ್ಲಿ ಒಂದು ಸ್ಥಾನವನ್ನು ಗಳಿಸಿಕೊಂಡಿತು. ಜಾನ್ ಲೆನನ್‌ನ ಇಂಗ್ಲೆಂಡ್‌ನಲ್ಲಿದ್ದ[೬೮] ಹಳೆ ಮನೆಯಲ್ಲಿ ಧ್ವನಿಮುದ್ರಿಸಿದ ಆಲ್ಬಮ್‌ನ ಶೀರ್ಷಿಕೆ ಗೀತೆ "ದ ಮಾಬ್ ರೂಲ್ಸ್"ಅನ್ನು 1981ರ ಆನಿಮೇಶನ್ ಚಿತ್ರ ಹೆವಿ ಮೆಟಲ್‌ನಲ್ಲಿ ಅಳವಡಿಸಿಕೊಳ್ಳಲಾಯಿತು. ಈ ಚಿತ್ರ ರೂಪಾಂತರವು ಪರ್ಯಾಯ ಚಿತ್ರಣವಾದರೂ ಆಲ್ಬಮ್ ಆವೃತ್ತಿಗಿಂತ ಭಿನ್ನವಾಗಿದೆ.[೬೮]
1980ರ ಲೈವ್ ಅಟ್ ಲಾಸ್ಟ್ ನ ಗುಣಮಟ್ಟದಿಂದ ಅಸಂತೋಷಗೊಂಡ ವಾದ್ಯ-ಮೇಳವು, ದಲ್ಲಾಸ್, ಸ್ಯಾನ್ ಆಂಟೋನಿಯೊ ಮತ್ತು ಸೀಟಲ್ ಮೊದಲಾದ ಸ್ಥಳಗಳ ಅಮೇರಿಕಾ ಸಂಯುಕ್ತ ಸಂಸ್ಥಾನದಾದ್ಯಂತದ ಮಾಬ್ ರೂಲ್ಸ್ ನ ಪ್ರಪಂಚ ಪ್ರವಾಸದ ಸಂದರ್ಭದಲ್ಲಿ 1982ರಲ್ಲಿ ಲೈವ್ ಇವಿಲ್ ಎಂಬ ಹೆಸರಿನ ಮತ್ತೊಂದು ನೇರ ಪ್ರದರ್ಶನದ ಆಲ್ಬಮ್ಅನ್ನು ಧ್ವನಿಮುದ್ರಣ ಮಾಡಿತು.[೭೨] ಆಲ್ಬಮ್‌ನ ಸಂಕಲನ ಕ್ರಿಯೆಯ ಸಂದರ್ಭದಲ್ಲಿ ಐಯೋಮಿ ಮತ್ತು ಬಟ್ಲರ್, ಡಿಯೊನೊಂದಿಗೆ ಜಗಳವಾಡಿದರು. ಡಿಯೊ ಅವನ ಧ್ವನಿಯ ಪ್ರಮಾಣವನ್ನು ಹೆಚ್ಚಿಸಲು ಸ್ಟುಡಿಯೊಗೆ ಗುಟ್ಟಾಗಿ ನುಗ್ಗುತ್ತಿದ್ದ ಎಂದು ಐಯೋಮಿ ಮತ್ತು ಬಟ್ಲರ್ ದೂರಿದರು. ಅಲ್ಲದೆ ಡಿಯೊ ಕಲಾಕೃತಿಗಳಲ್ಲಿ ಅವನ ಚಿತ್ರಗಳ ಬಗ್ಗೆ ತೃಪ್ತನಾಗಿರಲಿಲ್ಲ.[೭೩] "ರೋನಿ ಅವನ ಅಭಿಪ್ರಾಯದಲ್ಲೇ ಹೆಚ್ಚು ಹೇಳಲು ಬಯಸುತ್ತಿದ್ದ" ಎಂದು ಐಯೋಮಿ ಹೇಳಿದ. "ಅಲ್ಲದೆ ಗೀಜರ್ ಅವನೊಂದಿಗೆ ಹೆಚ್ಚು ಉದ್ವಿಗ್ನನಾಗುತ್ತಿದ್ದ. ಆಗಲೇ ಹಠಾತ್ ಅವನತಿ ಆರಂಭವಾದವು. ಲೈವ್ ಎವಿಲ್ ರೆಕಾರ್ಡ್ ಮಾಡುವ ಸಂದರ್ಭದಲ್ಲೇ ಎಲ್ಲವೂ ಚೂರುಚೂರಾಯಿತು. ರೋನಿ ಹೆಚ್ಚಾಗಿ ಅವನ ಸ್ವಂತ ಆಸಕ್ತಿಯಂತೆಯೇ ಮಾಡಲು ಬಯಸುತ್ತಿದ್ದ. ಸ್ಟುಡಿಯೊದಲ್ಲಿ ಆ ಸಂದರ್ಭದಲ್ಲಿದ್ದ ಎಂಜಿನಿಯರ್‌ಗೆ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ ಏಕೆಂದರೆ ರೋನಿ ಒಂದು ಹೇಳುತ್ತಿದ್ದ, ನಾವು ಮತ್ತೊಂದು ಹೇಳುತ್ತಿದ್ದೆವು. ದಿನದ ಕೊನೆಯಲ್ಲಿ ನಾವು 'ಅಷ್ಟೆ, ಈ ವಾದ್ಯ-ಮೇಳವು ಇನ್ನು ಮುಚ್ಚುತ್ತದೆ'" ಎಂದು ಹೇಳಿದೆವು.[೭೪] "ಹಾಡಲು ಸಮಯ ಬಂದಾಗ ಯಾರೂ ನನಗೆ ಏನು ಮಾಡಬೇಕೆಂದು ಹೇಳುತ್ತಿರಲಿಲ್ಲ. ಯಾರೂ! ಏಕೆಂದರೆ ಅವರು ನನ್ನಷ್ಟು ಉತ್ತಮರಾಗಿರಲಿಲ್ಲ. ಆದ್ದರಿಂದ ನನಗೆ ಇಷ್ಟಬಂದ ಹಾಗೆ ಮಾಡುತ್ತಿದ್ದೆ" ಎಂದು ಡಿಯೊ ನಂತರ ಹೇಳಿದನು. "ನಾನು ಲೈವ್ ಎವಿಲ್ ಮಾಡಲು ನಿರಾಕರಿಸಿದೆ ಏಕೆಂದರೆ ಅದಕ್ಕೆ ಹಲವಾರು ಸಮಸ್ಯೆಗಳಿದ್ದವು. ನೀವು ಮನ್ನಣೆಗಳತ್ತ ಕಣ್ಣು ಹಾಯಿಸಿದರೆ, ಸಂಗೀತರಚನೆಗಳು ಮತ್ತು ಡ್ರಮ್‌ಗಳನ್ನು ಪಟ್ಟಿಯಿಂದ ತೆಗೆದು ಬದಿಗಿರಿಸಲಾಗಿತ್ತು. ಆಲ್ಬಮ್‌ಗಳನ್ನು ತೆರೆದು ನೋಡಿದರೆ ಟೋನಿಯದು ಎಷ್ಟು ಚಿತ್ರಗಳಿವೆ ಹಾಗೂ ನನ್ನದು ಮತ್ತು ವಿನ್ನಿಯದು ಎಷ್ಟಿವೆ ಎಂಬುದು ತಿಳಿಯುತ್ತದೆ".[೭೫]
ರೋನಿ ಜೇಮ್ಸ್ ಡಿಯೊ ಅವನ ಸ್ವಂತ ವಾದ್ಯ-ಮೇಳವನ್ನು ಆರಂಭಿಸಲು 1982ರ ನವೆಂಬರ್‌ನಲ್ಲಿ ಬ್ಲ್ಯಾಕ್ ಸಬ್ಬತ್‌ಅನ್ನು ಬಿಟ್ಟುಬಿಟ್ಟನು ಹಾಗೂ ಡ್ರಮ್-ವಾದಕ ವಿನ್ನಿ ಅಪ್ಪೀಸ್‌ಯನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಲೈವ್ ಎವಿಲ್ 1983ರ ಜನವರಿಯಲ್ಲಿ ಬಿಡುಗಡೆಗೊಂಡಿತು. ಆದರೆ ಇದು ಐದು ತಿಂಗಳ ಹಿಂದೆ ಬಿಡುಗಡೆಯಾದ ಬ್ಲ್ಯಾಕ್ ಸಬ್ಬತ್ ಹಾಡುಗಳನ್ನು ಮಾತ್ರ ಹೊಂದಿದ್ದ ಪ್ಲಾಟಿನಂ ದೃಢೀಕರಣದೊಂದಿಗೆ ಮಾರಾಟವಾದ[೭೬] ನೇರ ಪ್ರದರ್ಶನದ ಆಲ್ಬಮ್ ಓಜ್ಜೀ ಆಸ್ಬಾರ್ನ್‌ಯ ಸ್ಪೀಕ್ ಆಫ್ ದ ಡೆವಿಲ್ ನಿಂದ ಮಂಕಾಯಿತು.[೨೧]
ಬೋರ್ನ್ ಎಗೈನ್ (1983–1984)
[ಬದಲಾಯಿಸಿ]ಆರಂಭದ ಸದಸ್ಯರಲ್ಲಿ ಉಳಿದುಕೊಂಡ ಕೇವಲ ಇಬ್ಬರು, ಟೋನಿ ಐಯೋಮಿ ಮತ್ತು ಗೀಜರ್ ಬಟ್ಲರ್, ವಾದ್ಯ-ಮೇಳದ ಮುಂದಿನ ಬಿಡುಗಡೆಗಾಗಿ ಹೊಸ ಗಾಯಕರನ್ನು ಧ್ವನಿ ಪರೀಕ್ಷೆ ಮಾಡಲು ಆರಂಭಿಸಿದರು. ವೈಟ್ಸ್ನೇಕ್ನ ಡೇವಿಡ್ ಕವರ್ಡಾಲೆ, ಸ್ಯಾಮ್ಸನ್‌ನ ನಿಕಿ ಮೂರೆ ಮತ್ತು ಲೋನ್ ಸ್ಟಾರ್ನ ಜಾನ್ ಸ್ಲೋಮನ್ ಮೊದಲಾದವರೊಂದಿಗಿನ ಪ್ರಯತ್ನವು ಸೋತ ನಂತರ, ವಾದ್ಯ-ಮೇಳವು 1983ರಲ್ಲಿ ರೋನಿ ಜೇಮ್ಸ್ ಡಿಯೊನ ಬದಲಿಗೆ ಡೀಪ್ ಪರ್ಪಲ್‌ನ ಮಾಜಿ ಗಾಯಕ ಅಯನ್ ಗಿಲ್ಲನ್‌ನನ್ನು ಸೇರಿಸಿಕೊಂಡಿತು.[೨೨][೭೭] ಯೋಜನೆಯು ಆರಂಭದಲ್ಲಿ ಬ್ಲ್ಯಾಕ್ ಸಬ್ಬತ್ ಹೆಸರಿನಡಿಯಲ್ಲಿ ಸಿದ್ಧವಾಗದಿದ್ದಾಗ, ಧ್ವನಿಮುದ್ರಣ ಸಂಸ್ಥೆ ಆ ಗುಂಪಿಗೆ ಅದೇ ಹೆಸರನ್ನು ಉಳಿಸಿಕೊಂಡು ಹೋಗುವಂತೆ ಒತ್ತಾಯ ಪಡಿಸಿದವು.[೭೭] ವಾದ್ಯ-ಮೇಳವು ಪುನಃಹಿಂದಿರುಗಿದ ಮತ್ತು ಮೀತಿಮೀರಿ ಕುಡಿಯದ ಬಿಲ್ ವಾರ್ಡ್‌ನನ್ನು ಡ್ರಮ್-ವಾದಕನಾಗಿ ಹೊಂದುವುದರೊಂದಿಗೆ 1983ರ ಜೂನ್‌ನಲ್ಲಿ ಇಂಗ್ಲೆಂಡ್‌ನ ಆಕ್ಸ್ಫರ್ಡ್ಶೈರ್ನ ಶಿಪ್ಟಾನ್-ಆನ್-ಚೆರ್ವೆಲ್‌ನ ದ ಮ್ಯಾನರ್ ಸ್ಟುಡಿಯೊವನ್ನು ಪ್ರವೇಶಿಸಿತು.[೭೭] ಬೋರ್ನ್ ಎಗೈನ್ ಅಭಿಮಾನಿಗಳಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಈ ಆಲ್ಬಮ್ UK ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹಾಗೂ USನಲ್ಲಿ 39ನೇ ಸ್ಥಾನವನ್ನು ಗಳಿಸಿಕೊಂಡಿತು.[೪೦] ಆದರೂ ಬಿಡುಗಡೆಯಾದ ಒಂದು ದಶಕದ ನಂತರ ಆಲ್‌ಮ್ಯೂಸಿಕ್‌ನ ಎಡ್ವರ್ಡೊ ರಿವಡೇವಿಯ ಆಲ್ಬಂ "ಅತಿಭಯಂಕರ"ವೆಂದು ಕರೆದನು. "ಗಿಲ್ಲನ್‌ನ ಬ್ಲೂಸ್ ಶೈಲಿ ಮತ್ತು ಹಾಸ್ಯಮಯ ಸಾಹಿತ್ಯಗಳು ಕತ್ತಲೆ ಮತ್ತು ವಿನಾಶಕಾರಿ ಕ್ಷುದ್ರದೇವತೆಗಳೊಂದಿಗೆ ಸಂಪೂರ್ಣ ಹೊಂದಿಕೆಯಾಗದು" ಎಂದು ಸೂಚಿಸಿದನು.[೭೮]
ಆಲ್ಬಮ್‌ನಲ್ಲಿ ಪ್ರದರ್ಶನ ನೀಡಿದರೂ ಡ್ರಮ್-ವಾದಕ ಬಿಲ್ ವಾರ್ಡ್‌ಗೆ ರಸ್ತೆ ಪ್ರಯಾಣದ ಒತ್ತಡಗಳ ಹಿನ್ನೆಲೆಯಲ್ಲಿ ಪ್ರವಾಸ ಮಾಡಲು ಅಸಮರ್ಥನಾಗಿ,1984ರಲ್ಲಿ ವಾದ್ಯಮೇಳವನ್ನು ತ್ಯಜಿಸಿದ. "ನಾನು ಪ್ರವಾಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ" ಎಂದು ವಾರ್ಡ್ ಹೇಳಿದ್ದಾನೆ. "ನಾನು ಪ್ರವಾಸದಿಂದ ತುಂಬಾ ಭಯಪಟ್ಟಿದ್ದೇನೆ. ಭಯದ ಬಗ್ಗೆ ನಾನು ಮಾತನಾಡಲಿಲ್ಲ, ಬದಲಿಗೆ ಆ ಭಯದಿಂದ ಹೊರಬರಲು ಕುಡಿಯುತ್ತಿದ್ದೆ. ಅದೇ ನಾನು ಮಾಡಿದ ದೊಡ್ಡ ತಪ್ಪು."[೭೯] ಬೋರ್ನ್ ಎಗೈನ್ ವಿಶ್ವ ಪ್ರವಾಸಕ್ಕೆ ವಾರ್ಡ್‌ನ ಬದಲಿಗೆ ಎಲೆಕ್ಟ್ರಿಕ್ ಲೈಟ್ ಆರ್ಕೇಸ್ಟ್ರಾದ ಮಾಜಿ ಡ್ರಮ್-ವಾದಕ ಬೆವ್ ಬೇವನ್‌ನನ್ನು ಸೇರಿಸಿಕೊಳ್ಳಲಾಯಿತು.[೭೭] ಈ ಪ್ರವಾಸವು ಡೈಮಂಡ್ ಹೆಡ್ ಒಂದಿಗೆ ಯುರೋಪ್‌ನಲ್ಲಿ ಆರಂಭವಾಗಿ, ನಂತರ ಕ್ವೈಟ್ ರೈಯಟ್ ಮತ್ತು ನೈಟ್ ರೇಂಜರ್ ಒಂದಿಗೆ US ತಲುಪಿತು. ವಾದ್ಯ-ಮೇಳವು ಡೀಪ್ ಪರ್ಪಲ್ ಹಾಡು "ಸ್ಮೋಕ್ ಆನ್ ದ ವಾಟರ್"ಅನ್ನು ಅದರ ಪಟ್ಟಿಗೆ ಸೇರಿಸಿಕೊಳ್ಳುತ್ತಾ 1983 ರೀಡಿಂಗ್ ಫೆಸ್ಟಿವಲ್‌ಗೆ ತೀವ್ರ ಪ್ರಚಾರ ಕೈಗೊಂಡಿತು.
ಬೋರ್ನ್ ಎಗೈನ್ ಬೆಂಬಲದ ಪ್ರವಾಸವು ಸ್ಟೋನ್‌ಹೆಂಗ್ ಸ್ಮಾರಕದ ದೈತ್ಯ ಸೆಟ್ ಕೂಡ ಸೇರಿದೆ. ಈ ಕ್ರಮವನ್ನು ನಂತರ ಅಣಕದ ಸಾಕ್ಷ್ಯಚಿತ್ರ ದಿಸ್ ಇಸ್ ಸ್ಪೈನಲ್ ಕಾರ್ಡ್‌ನಲ್ಲಿ ಅಣಕಿಸಲಾಯಿತು.ಸೆಟ್ ಪೀಸ್‌ಗೆ ಆದೇಶ ನೀಡುವಲ್ಲಿ ಬ್ಯಾಂಡ್ ತಪ್ಪು ಮಾಡಿತ್ತು. ಗೀಜರ್ ಬಟ್ಲರ್ ನಂತರ ಹೀಗೆಂದು ವಿವರಿಸಿದ್ದಾನೆ:
We had Sharon Osbourne's dad, Don Arden, managing us. He came up with the idea of having the stage set be Stonehenge. He wrote the dimensions down and gave it to our tour manager. He wrote it down in meters but he meant to write it down in feet. The people who made it saw fifteen meters instead of fifteen feet. It was 45 feet high and it wouldn't fit on any stage anywhere so we just had to leave it in the storage area. It cost a fortune to make but there was not a building on earth that you could fit it into.[೮೦]
ವಿರಾಮ ಮತ್ತು ಸೆವೆಂತ್ ಸ್ಟಾರ್ (1984–1986)
[ಬದಲಾಯಿಸಿ]ಬೋರ್ನ್ ಎಗೈನ್ ಪ್ರವಾಸವನ್ನು 1984ರ ಮಾರ್ಚ್‌ನಲ್ಲಿ ಮುಗಿಸಿದ ನಂತರ, ಗಾಯಕ ಅಯನ್ ಗಿಲ್ಲನ್ ದೀರ್ಘ ವಿರಾಮದ ನಂತರ ಮತ್ತೊಮ್ಮೆ ಸುಧಾರಣೆಯಾಗುತ್ತಿದ್ದ ಡೀಪ್ ಪರ್ಪಲ್‌ಗೆ ಪುನಃಸೇರುವುದಕ್ಕಾಗಿ ಬ್ಲ್ಯಾಕ್ ಸಬ್ಬತ್‌ಅನ್ನು ಬಿಟ್ಟುಬಿಟ್ಟನು. ಬೇವನ್ ಸಹ ಅದೇ ಸಂದರ್ಭದಲ್ಲಿ ಬಿಟ್ಟನು. ಬೇವನ್ ಮತ್ತು ತನ್ನನ್ನು ಐಯೋಮಿ "ಬಾಡಿಗೆ ನೆರವು" ಪಡೆದಿದ್ದನೆಂಬ ಭಾವನೆ ಉಂಟಾಗುವಂತೆ ಮಾಡಲಾಗಿತ್ತು ಎಂದು ಗಿಲ್ಲನ್ ದೂರಿದ್ದಾನೆ. ವಾದ್ಯ-ಮೇಳವು ನಂತರ ಡೇವಿಡ್ ಡೊನ್ಯಾಟೊ ಎಂಬ ಹೆಸರಿನ ಲಾಸ್ ಏಂಜಲೀಸ್‌ನ ಅಜ್ಞಾತ ಗಾಯಕನನ್ನು ನೇಮಿಸಿಕೊಂಡಿತು. ಹೊಸ ತಂಡವು 1984ರ ವರ್ಷದಾದ್ಯಂತ ಸಾಹಿತ್ಯ ರಚಿಸಿ ಪೂರ್ವ ತಯಾರಿ ಮಾಡಿಕೊಂಡಿತು. ಅಂತಿಮವಾಗಿ ನಿರ್ಮಾಪಕ ಬಾಬ್ ಎಜ್ರಿನ್‌ನೊಂದಿಗೆ ಅಕ್ಟೋಬರ್‌ನಲ್ಲಿ ಬಹಿರಂಗ ಪ್ರದರ್ಶನವೊಂದನ್ನು ಧ್ವನಿಮುದ್ರಣ ಮಾಡಿತು. ಇದರ ಫಲಿತಾಂಶದಿಂದ ಅಸಂತೋಷಗೊಂಡ ವಾದ್ಯ-ಮೇಳವು ಸ್ವಲ್ಪ ದಿನಗಳ ನಂತರ ಡೊನ್ಯಾಟೊನಿಂದ ಬೇರ್ಪಟ್ಟಿತು.[೨೨] ಬ್ಯಾಂಡ್‌ನ ಆವರ್ತನ ಸಾಲಿನಿಂದ ಭ್ರಮನಿರಸಗೊಂಡ ಮಂದ್ರವಾದ್ಯ-ವಾದಕ ಗೀಜರ್ ಬಟ್ಲರ್ ಏಕವ್ಯಕ್ತಿಯ ವಾದ್ಯ-ಮೇಳವನ್ನು ರಚಿಸುವುದಕ್ಕಾಗಿ 1984ರ ನವೆಂಬರ್‌ನಲ್ಲಿ ಬ್ಲ್ಯಾಕ್ ಸಬ್ಬತ್‌ನಿಂದ ಹೊರನಡೆದನು. "ಅಯನ್ ಗಿಲ್ಲನ್‌ನನ್ನು ಸೇರಿಸಿಕೊಂಡಾಗ, ನನಗೆ ಅದು ಕೊನೆಗಾಲವಾಗಿತ್ತು" ಎಂದು ನಂತರ ಬಟ್ಲರ್ ಹೇಳಿದ್ದಾನೆ. "ನನಗೆ ಅದು ಹಾಸ್ಯಾಸ್ಪದವೆನಿಸಿತು, ಹಾಗಾಗಿ ಬಿಟ್ಟುಬಿಟ್ಟೆ. ನಾವು ಗಿಲ್ಲನ್‌ನೊಂದಿಗೆ ಕೆಲಸ ಮಾಡಲು ಆರಂಭಿಸಿದಾಗ ಅದು ಬ್ಲ್ಯಾಕ್ ಸಬ್ಬತ್ ಆಲ್ಬಮ್ ಆಗಿರಲಿಲ್ಲ. ನಾವು ಆಲ್ಬಮ್ ಮಾಡಿದ ನಂತರ ವಾರ್ನರ್ ಬ್ರೋಸ್‌ಗೆ ನೀಡಿದೆವು. ಅವರು ಅದನ್ನು ಬ್ಲ್ಯಾಕ್ ಸಬ್ಬತ್‌ನ ಆಲ್ಬಮ್ ಆಗಿ ಪ್ರಕಟಿಸುತ್ತೇವೆಂದು ಹೇಳಿದರು. ಆದರೆ ನಮಗೆ ನಮ್ಮ ಕಾಲಲ್ಲಿ ನಿಂತುಕೊಳ್ಳುವ ಸಾಮರ್ಥ್ಯವಿರಲಿಲ್ಲ. ಇದರಿಂದ ನನಗೆ ನಿಜವಾಗಿಯೂ ಭ್ರಮನಿರಸನವಾಯಿತು. ಗಿಲ್ಲನ್ ನಿರುತ್ಸಾಹಗೊಂಡನು. ಅದು ಒಂದು ಆಲ್ಬಮ್, ಒಂದು ಪ್ರವಾಸದಲ್ಲೇ ಕೊನೆಗೊಂಡಿತು."[೮೦]
ಬಟ್ಲರ್ ಹೊರನಡೆದ ನಂತರ ಉಳಿದ ಏಕೈಕ ಆರಂಭಿಕ ವ್ಯಕ್ತಿ ಟೋನಿ ಐಯೋಮಿಯು ಬ್ಲ್ಯಾಕ್ ಸಬ್ಬತ್‌ಗೆ ಬಿಡುವು ನೀಡಿ, ಕೀಬೋರ್ಡ್-ವಾದಕ ಜಿಯೋಫ್ ನಿಕೋಲ್ಸ್‌ನೊಂದಿಗೆ ಏಕವ್ಯಕ್ತಿಯ ಆಲ್ಬಮ್ ತಯಾರಿಸುವ ಕೆಲಸ ಆರಂಭಿಸಿದನು. ಈ ಹೊಸ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬ್ಲ್ಯಾಕ್ ಸಬ್ಬತ್‌ನ ಆರಂಭದ ತಂಡಕ್ಕೆ ಬಾಬ್ ಗೆಲ್ಡಾಫ್‌ನ ಲೈವ್ ಏಡ್ನೆರವಿನ ಗಾನಗೋಷ್ಠಿಯಲ್ಲಿ ನಿರ್ವಹಿಸುವ ಅವಕಾಶವನ್ನು ಒದಗಿಸಿಕೊಟ್ಟಿತು; ವಾದ್ಯ-ಮೇಳವು ಇದಕ್ಕೆ ಒಪ್ಪಿ, 1985ರ ಜುಲೈನಲ್ಲಿ ಫಿಲಡೆಲ್ಫಿಯಾ ಪ್ರದರ್ಶನದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿತು.[೨೧][೭೭] ಈ ಸಂದರ್ಭವು 1978ರ ನಂತರ ಮೊದಲ ಬಾರಿಗೆ ಆರಂಭದ ತಂಡವು ವೇದಿಕೆ ಮೇಲೆ ಕಾಣಿಸಿಕೊಳ್ಳುವಂತೆ ಮಾಡಿತು ಹಾಗೂ ದ ಹು ಮತ್ತು ಲೆಡ್ ಜೆಪ್ಪೆಲಿನ್ ತಂಡಗಳ ಪುನರ್ಮಿಲನಕ್ಕೆ ಕಾರಣವಾಯಿತು.[೮೧] ಏಕವ್ಯಕ್ತಿಯ ಆಲ್ಬಮ್ ಕಾರ್ಯಕ್ಕೆ ಹಿಂದಿರುಗಿದ ಐಯೋಮಿಯು ಮಂದ್ರವಾದ್ಯ-ವಾದಕ ಡೇವ್ ಸ್ಪಿಟ್ಜ್ ಮತ್ತು ಡ್ರಮ್-ವಾದಕ ಎರಿಕ್ ಸಿಂಗರ್‌ಹೆಸರನ್ನು ಪಟ್ಟಿ ಮಾಡಿದ ಹಾಗೂ ಆರಂಭದಲ್ಲಿ ಹಲವು ಗಾಯಕರಾದಜ್ಯುಡಾಸ್ ಪ್ರೀಸ್ಟ್‌ನ ರೋಬ್ ಹ್ಯಾಲ್ಫೋರ್ಡ್, ಮಾಜಿ-ಡೀಪ್ ಪರ್ಪಲ್ ಮತ್ತು ಟ್ರಾಪೆಜೆ ಗಾಯಕ ಗ್ಲೆನ್ ಹಫೆಸ್ ಮತ್ತು ಮಾಜಿ-ಬ್ಲ್ಯಾಕ್ ಸಬ್ಬತ್ ಗಾಯಕ ರೋನಿ ಜೇಮ್ಸ್ ಡಿಯೊ ಮೊದಲಾದವರನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದನು.[೭೭] "ನಾವು ಆಲ್ಬಮ್‌ಗೆ ವಿವಿಧ ಗಾಯಕರನ್ನು, ಅತಿಥಿ ಗಾಯಕರನ್ನು ಬಳಸಿಕೊಳ್ಳಲು ನಿರ್ಧರಿಸಿದೆವು. ಆದರೆ ಅಂತಹವರು ಸಿಗುವುದು ಮತ್ತು ಅವರ ಧ್ವನಿಮುದ್ರಣ ಕಂಪೆನಿಗಳಿಂದ ಅವರನ್ನು ಬಿಡುವುದು ತುಂಬಾ ಕಷ್ಟವಾಗಿತ್ತು. ಗ್ಲೆನ್ ಹಫೆಸ್ ಒಂದು ಹಾಡು ಹಾಡಲು ನಮ್ಮೊಂದಿಗೆ ಬಂದನು. ಆದರೆ ನಾವು ಸಂಪೂರ್ಣ ಆಲ್ಬಮ್‌ಗೆ ಅವನಿಂದಲೇ ಹಾಡಿಸಲು ನಿರ್ಣಯಿಸಿದೆವು."[೮೨]
ವಾದ್ಯ-ಮೇಳವು ವರ್ಷದ ಉಳಿದ ದಿನಗಳನ್ನು ಅದರ ಮುಂದಿನ ಆಲ್ಬಮ್ ಸೆವೆಂತ್ ಸ್ಟಾರ್ ಧ್ವನಿಮುದ್ರಣ ಮಾಡಲು ಸ್ಟುಡಿಯೊದಲ್ಲಿ ಕಳೆಯಿತು. ವಾರ್ನರ್ ಬ್ರದರ್ಸ್ ಈ ಆಲ್ಬಮ್‌ಅನ್ನು ಟೋನಿ ಐಯೋಮಿಯ ಏಕವ್ಯಕ್ತಿಯ ಬಿಡುಗಡೆಯಾಗಿ ಪ್ರಕಟಿಸಲು ನಿರಾಕರಿಸಿತು. ಬದಲಿಗೆ ಬ್ಲ್ಯಾಕ್ ಸಬ್ಬತ್ ಹೆಸರನ್ನು ಬಳಸಲು ಸೂಚಿಸಿತು.[೮೩] ವಾದ್ಯ-ಮೇಳದ ನಿರ್ವಾಹಕ ಡಾನ್ ಆರ್ಡೆನ್‌ನ ಒತ್ತಡದಿಂದ ಇಬ್ಬರೂ ರಾಜಿ ಮಾಡಿಕೊಂಡರು ಹಾಗೂ ಆ ಆಲ್ಬಮ್‌ಅನ್ನು "ಟೋನಿ ಐಯೋಮಿಯ ಬ್ಲ್ಯಾಕ್ ಸಬ್ಬತ್" ಎಂಬುದಾಗಿ 1986ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು.[೮೪] "ಇದು ಒಂದು ಸಂದಿಗ್ಧವಾದ ವಿಷಯವಾಗಿ ತೆರೆದುಕೊಂಡಿತು" ಎಂದು ಐಯೋಮಿ ವಿವರಿಸಿದ್ದಾನೆ, "ಏಕೆಂದರೆ ಇದನ್ನು ನಾವು ಏಕವ್ಯಕ್ತಿಯ ಆಲ್ಬಮ್ ಆಗಿ ಮಾಡಿದ್ದರೆ, ಇದು ಹೆಚ್ಚು ಉತ್ತಮ ರೀತಿಯಲ್ಲಿ ಸ್ವೀಕಾರಾರ್ಹವಾಗಿತ್ತು" ಬ್ಲ್ಯಾಕ್ ಸಬ್ಬತ್ ಆಲ್ಬಮ್ ರೀತಿ ಕಡಿಮೆ ಧ್ವನಿ ಮಾಡಿದಸೆವೆಂತ್ ಸ್ಟಾರ್ 1980ರ ಸಂದರ್ಭದಲ್ಲಿನ ಸನ್ಸೆಟ್ ಸ್ಟ್ರಿಪ್ ಹಾರ್ಡ್ ರಾಕ್ ದೃಶ್ಯದಿಂದ ಜನಪ್ರಿಯತೆ ಗಳಿಸಿದ ಹೆಚ್ಚಿನ ಹಾರ್ಡ್ ರಾಕ್ ಅಂಶಗಳನ್ನು ಒಂದುಗೂಡಿಸಿತು ಹಾಗೂ ಆ ಕಾಲದ ವಿಮರ್ಶಕರಿಂದ ಟೀಕೆಗೊಳಗಾಯಿತು. ಆದರೂ ಆಲ್‌ಮ್ಯೂಸಿಕ್ ನಂತಹ ನಂತರದ ವಿಮರ್ಶಕರು "ತಪ್ಪಾಗಿ ಗ್ರಹಿಸಲಾದ ಮತ್ತು ಕಡಿಮೆದರ್ಜೆಗಿಳಿಸಿದ" ಆಲ್ಬಮ್ ಎಂದು ಹೇಳುವ ಮೂಲಕ ಈ ಆಲ್ಬಮ್‌ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದರು.[೮೩]
ಹೊಸ ತಂಡವು ಸಂಪೂರ್ಣ ವಿಶ್ವ ಪ್ರವಾಸಕ್ಕೆ ಸಿದ್ಧವಾಗುವುದರೊಂದಿಗೆ ಆರು ವಾರಗಳವರೆಗೆ ಪೂರ್ವ ತಯಾರಿ ಮಾಡಿಕೊಂಡಿತು. ಆದರೂ ಆ ವಾದ್ಯ-ಮೇಳಕ್ಕೆ ಬ್ಲ್ಯಾಕ್ ಸಬ್ಬತ್ ಹೆಸರನ್ನು ಬಳಸಿಕೊಳ್ಳಬೇಕೆಂದು ಮತ್ತೆ ಒತ್ತಾಯ ಮಾಡಲಾಯಿತು. "ನಾನು 'ಟೋನಿ ಐಯೋಮಿಯ ಯೋಜನೆ'ಯಲ್ಲಿದ್ದೆಯೇ ಹೊರತು ಬ್ಲ್ಯಾಕ್ ಸಬ್ಬತ್ ಹೆಸರಿನಡಿಯಲ್ಲಿ ಅಲ್ಲ" ಎಂದು ಹಫೆಸ್ ಹೇಳಿದ್ದಾನೆ. "ಬ್ಲ್ಯಾಕ್ ಸಬ್ಬತ್‌ನಲ್ಲಿ ಇರುವುದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಗ್ಲೆನ್ ಹಫೆಸ್ ಬ್ಲ್ಯಾಕ್ ಸಬ್ಬತ್‌ಗೆ ಹಾಡುವುದೆಂದರೆ ಎಂದರೆ ಜೇಮ್ಸ್ ಬ್ರೌನ್ ಮೆಟಾಲಿಕಾಗೆ ಹಾಡುವಂತಿರುತ್ತದೆ. ಇದು ಕೆಲಸ ಮಾಡುವುದಿಲ್ಲ".[೮೨][೮೫] ಪ್ರವಾಸ ಆರಂಭವಾಗುವ ನಾಲ್ಕು ದಿನಗಳ ಮೊದಲು ಗಾಯಕ ಗ್ಲೆನ್ ಹಫೆಸ್ ವಾದ್ಯ-ಮೇಳದ ನಿರ್ಮಾಪಕ ನಿರ್ವಾಹಕ ಜಾನ್ ಡೌವ್ನಿಂಗ್‌ನೊಂದಿಗೆ ಬಾರ್‌ನಲ್ಲಿ ಜಗಳವಾಡಿದನು. ಇದರಿಂದ ಅವನ ಕಣ್ಣುಗುಳಿಯ ಮೂಳೆಯು ಒಡೆಯಿತು. ಈ ಗಾಯವು ಹಫೆಸ್‌ನ ಹಾಡುವ ಸಾಮರ್ಥ್ಯಕ್ಕೆ ಧಕ್ಕೆ ತಂದಿತು ಹಾಗೂ ವಾದ್ಯ-ಮೇಳವು W.A.S.P. ಮತ್ತು ಆಂಥ್ರ್ಯಾಕ್ಸ್ ಒಂದಿಗೆ ಪ್ರವಾಸ ಮುಂದುವರಿಸಲು ಗಾಯಕ ರೆ ಗಿಲ್ಲೆನ್‌ನನ್ನು ಕರೆತಂದಿತು. ಆದಾಗ್ಯೂ ಅಲ್ಪ ಪ್ರಮಾಣದ ಟಿಕೆಟ್ ಮಾರಾಟಗಳಿಂದ USನ ಅರ್ಧದಷ್ಟು ಪ್ರದರ್ಶನಗಳು ತರುವಾಯ ರದ್ದುಗೊಂಡವು.[೮೬]
ಬ್ಲ್ಯಾಕ್ ಸಬ್ಬತ್‌ನ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಸ್ಥಾನಮಾನದ ಬಗ್ಗೆ ವಿವಾದಗಳಿಗೆ ಒಳಗಾದ ಒಬ್ಬ ಗಾಯಕ ಕ್ರೈಸ್ತ ಧರ್ಮದ ಸಂಚಾರಿ ಪ್ರಚಾರಕ ಜೆಫ್ ಫೆನ್ಹಾಲ್ಟ್. 1985ರ ಜನವರಿ ಹಾಗೂ ಮೇ ನಡುವೆ ಅವನು ಬ್ಲ್ಯಾಕ್ ಸಬ್ಬತ್‌ನಲ್ಲಿ ಗಾಯಕನಾಗಿದ್ದೇನೆಂದು ಸಮರ್ಥಿಸಿಕೊಂಡಿದ್ದಾನೆ.[೨೧] ಟೋನಿ ಐಯೋಮಿ ಇದನ್ನು ಎಂದೂ ದೃಢಪಡಿಸಿಲ್ಲ. ಏಕೆಂದರೆ ಐಯೋಮಿ ಏಕಗೀತೆಯ ಆಲ್ಬಮ್‌ನಲ್ಲಿ ಕೆಲಸ ಮಾಡುತ್ತಿದ್ದನು, ಇದನ್ನು ನಂತರ ಸಬ್ಬತ್‌ನ ಆಲ್ಬಮ್ ಎಂದು ಹೆಸರಿಸಲಾಯಿತು. ಫೆನ್ಹಾಲ್ಟ್ ಐಯೋಮಿ ಮತ್ತು ಸಬ್ಬತ್‌ನೊಂದಿಗೆ ಕಳೆದ ಸಮಯದ ಬಗ್ಗೆ ವಿವರವಾದ ಮಾಹಿತಿಯನ್ನು ಗ್ಯಾರಿ ಶಾರ್ಪೆ-ಯಂಗ್‌ನ ಪುಸ್ತಕ ಸಬ್ಬತ್ ಬ್ಲಡಿ ಸಬ್ಬತ್: ದ ಬ್ಯಾಟಲ್ ಫಾರ್ ಬ್ಲ್ಯಾಕ್ ಸಬ್ಬತ್ ನಲ್ಲಿ ನೀಡಿದ್ದಾನೆ.[೮೭]
ದ ಎಟರ್ನಲ್ ಐಡಲ್ , ಹೆಡ್ಲೆಸ್ ಕ್ರಾಸ್ ಮತ್ತು ಟೈರ್ (1986–1990)
[ಬದಲಾಯಿಸಿ]ಬ್ಲ್ಯಾಕ್ ಸಬ್ಬತ್ 1986ರ ಅಕ್ಟೋಬರ್ನಲ್ಲಿ ಮೋಂಟ್ಸೆರಾಟ್ನ ಏರ್ ಸ್ಟುಡಿಯೋಸ್‌ನಲ್ಲಿ ನಿರ್ಮಾಪಕ ಜೆಫ್ ಗ್ಲಿಕ್ಸ್‌ಮ್ಯಾನ್‌ನೊಂದಿಗೆ ಹೊಸ ಆಲ್ಬಮ್ ಕೆಲಸ ಆರಂಭಿಸಿತು. ಗ್ಲಿಕ್ಸ್‌ಮ್ಯಾನ್ ಆರಂಭಿಕ ಸೆಷನ್‌ಗಳ ನಂತರ ಬಿಟ್ಟಾಗ ಅವನ ಬದಲಾಗಿ ನಿರ್ಮಾಪಕವಿಕ್ ಕಾಪರ್ಸ್ಮಿತ್-ಹೆವೆನ್ ಬಂದಿದ್ದರಿಂದ ದ್ವನಿಮುದ್ರಣ ಆರಂಭದಲ್ಲೇ ಸಮಸ್ಯೆಗಳಿಗೆ ತುತ್ತಾಯಿತು. ಮಂದ್ರವಾದ್ಯ-ವಾದಕ ಡೇವ್ ಸ್ಪಿಟ್ಜ್ "ವೈಯಕ್ತಿಕ ಕಾರಣ"ಗಳಿಂದ ಕೆಲಸ ತ್ಯಜಿಸಿದ ಮತ್ತು ಮಾಜಿ-ರೈನ್‌ಬೊ ಮಂದ್ರವಾದ್ಯ-ವಾದಕ ಬಾಬ್ ಡೈಸ್ಲಿಯನ್ನು ಕರೆತರಲಾಯಿತು. ಡೈಸ್ಲಿಯು ಎಲ್ಲಾ ಮಂದ್ರವಾದ್ಯ ಹಾಡುಗಳನ್ನು ಮರು ಧ್ವನಿಮುದ್ರಣ ಮಾಡಿದ ಹಾಗೂ ಆಲ್ಬಮ್‌ಗೆ ಸಾಹಿತ್ಯ ಬರೆದ. ಆದರೆ ಆಲ್ಬಮ್ ಪೂರ್ಣಗೊಳ್ಳುವ ಮೊದಲೇ ಅವನು ತ್ಯಜಿಸಿಗ್ಯಾರಿ ಮೂರ್ ನ ಹಿಮ್ಮೇಳ ವಾದ್ಯ-ವೃಂದಕ್ಕೆ ಸೇರಿಕೊಂಡ. ಅವನೊಂದಿಗೆ ಡ್ರಮ್-ವಾದಕ ಎರಿಕ್ ಸಿಂಗರ್‌ನನ್ನೂ ಕರೆದುಕೊಂಡು ಹೋದ.[೨೨] ಎರಡನೆ ನಿರ್ಮಾಪಕ ಕಾಪರ್ಸ್ಮಿತ್-ಹೆವೆನ್‌ನೊಂದಿಗಿನ ಸಮಸ್ಯೆಯ ನಂತರ, ವಾದ್ಯ-ಮೇಳವು ಹೊಸ ನಿರ್ಮಾಪಕ ಕ್ರೈಸ್ ತ್ಸಾಂಗರೈಡ್ಸ್ ನೊಂದಿಗೆ ಕೆಲಸ ಮಾಡಲು 1987ರ ಜನವರಿಯಲ್ಲಿ ಇಂಗ್ಲೆಂಡ್‌ನ ಮೋರ್ಗನ್ ಸ್ಟುಡಿಯೋಸ್‌ಗೆ ಹಿಂದಿರುಗಿತು. UKಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹೊಸ ಗಾಯಕ ರೆ ಗಿಲ್ಲೆನ್ ಜಾನ್ ಸೈಕ್ಸ್‌ನೊಂದಿಗೆ ಬ್ಲೂ ಮರ್ಡರ್ ರೂಪಿಸುವುದಕ್ಕಾಗಿ ಇದ್ದಕ್ಕಿದ್ದಂತೆ ಬ್ಲ್ಯಾಕ್ ಸಬ್ಬತ್ ತ್ಯಜಿಸಿದ. ವಾದ್ಯ-ಮೇಳವು ಗಿಲ್ಲನ್ ಹಾಡುಗಳನ್ನು ಮರು-ಧ್ವನಿಮುದ್ರಣ ಮಾಡಲು ಮಾಜಿ-ಅಲೈಯನ್ಸ್ ಗಾಯಕ ಟೋನಿ ಮಾರ್ಟಿನ್‌ನನ್ನು ಹಾಗೂ ಕೆಲವು ತಾಳವಾದ್ಯ ಅಧಿಕ ಧ್ವನಿಮುದ್ರಣವನ್ನು ಪೂರ್ಣಗೊಳಿಸಲು ಡ್ರಮ್-ವಾದಕ ಬೆವ್ ಬೇವನ್‌ನನ್ನು ಸೇರಿಸಿಕೊಂಡಿತು.[೨೧] ಹೊಸ ಆಲ್ಬಮ್ ಬಿಡುಗಡೆಗೊಳ್ಳುವ ಮೊದಲು ಬ್ಲ್ಯಾಕ್ ಸಬ್ಬತ್ ದಕ್ಷಿಣ ಆಫ್ರಿಕಾದ ಸನ್ ಸಿಟಿಯಲ್ಲಿ ವರ್ಣಭೇದ ನೀತಿಯಿದ್ದ ಕಾಲದಲ್ಲಿ ಆರು ಪ್ರದರ್ಶನಗಳನ್ನು ನಡೆಸಿಕೊಡುವ ಪ್ರಸ್ತಾಪವನ್ನು ಒಪ್ಪಿಕೊಂಡಿತು. ವಾದ್ಯ-ಮೇಳವು 1985ರಿಂದ ದಕ್ಷಿಣ ಆಫ್ರಿಕಾವನ್ನು ಬಹಿಷ್ಕಾರ ಮಾಡುತ್ತಿದ್ದ ಆರ್ಟಿಸ್ಟ್ಸ್ ಯುನೈಟೆಡ್ ಎಗೈನ್ಸ್ಟ್ ಅಪಾರ್ಥೀಡ್‌ನ ಕಾರ್ಯಕರ್ತರಿಂದ ಮತ್ತು ಕಲಾವಿದರಿಂದ ಟೀಕೆಗೊಳಗಾಯಿತು.[೮೮] ಡ್ರಮ್-ವಾದಕ ಬೆವ್ ಬೇವನ್ ಪ್ರದರ್ಶನ ನಡೆಸಲು ನಿರಾಕರಿಸಿದ. ಆದ್ದರಿಂದ ಅವನ ಬದಲಿಗೆ ಹಿಂದೆ ದ ಕ್ಲ್ಯಾಶ್‌ನಲ್ಲಿದ್ದ ಟೆರ್ರಿ ಕೈಮ್ಸ್‌ನನ್ನು ಸೇರಿಸಿಕೊಳ್ಳಲಾಯಿತು.[೨೧]
ಸುಮಾರು ಒಂದು ವರ್ಷ ನಿರ್ಮಾಣ ಕಾರ್ಯದಲ್ಲಿ ಕಳೆದ ದ ಎಟರ್ನಲ್ ಐಡಲ್ 1987ರ ಡಿಸೆಂಬರ್ 8ರಲ್ಲಿ ಬಿಡುಗಡೆಯಾಯಿತು. ಇದು ಸಮಕಾಲೀನ ವಿಮರ್ಶಕರಿಂದ ಉಪೇಕ್ಷಿಸಲ್ಪಟ್ಟಿತು. ಆನ್-ಲೈನ್ ಇಂಟರ್ನೆಟ್ ಅವಧಿಯ ವಿಮರ್ಶೆಗಳು ಮಿಶ್ರ ಪ್ರತಿಕ್ರಿಯೆಯನ್ನು ನೀಡಿದವು. ಆಲ್‌ಮ್ಯೂಸಿಕ್ "ಮಾರ್ಟಿನ್‌ನ ಪ್ರಬಲ ಧ್ವನಿಯು ವಾದ್ಯ-ಮೇಳಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಈ ಆಲ್ಬಮ್ ಐಯೋಮಿಯ ಹಲವಾರು ವರ್ಷಗಳ ಕೆಲವು ಭಾರಿ ಪುನರಾವರ್ತಿಸುವ ಗೀತಭಾಗಗಳನ್ನು ಒಳಗೊಂಡಿದೆ" ಎಂದು ಹೇಳಿತು.[೮೯] ಬ್ಲೆಂಡರ್ "ಬ್ಲ್ಯಾಕ್ ಸಬ್ಬತ್ ಹೆಸರಿಗೆ ಮಾತ್ರ" ಎಂದು ಹೇಳುತ್ತಾ ಈ ಆಲ್ಬಮ್‌ಗೆ ಎರಡು ಸ್ಟಾರ್‌ಗಳನ್ನು ನೀಡಿತು.[೯೦] ಈ ಆಲ್ಬಮ್ UKಯಲ್ಲಿ #66ನೇ ಸ್ಥಾನವನ್ನು ಗಳಿಸಿದರೆ, USನಲ್ಲಿ 168ನೇ ಸ್ಥಾನವನ್ನು ಪಡೆಯಿತು.[೪೦] ವಾದ್ಯ-ಮೇಳವು ಎಟರ್ನಲ್ ಐಡಲ್ ಬೆಂಬಲವಾಗಿ ಜರ್ಮನಿ, ಇಟಲಿ ಹಾಗೂ ಮೊದಲ ಬಾರಿಗೆ ಗ್ರೀಸ್ ಮೊದಲಾದ ಸ್ಥಳಗಳಿಗೆ ಪ್ರವಾಸ ಮಾಡಿತು. ದಕ್ಷಿಣ ಆಫ್ರಿಕಾದ ಘಟನೆ ಬಗ್ಗೆ ಪ್ರವರ್ತಕರಿಂದ ಹಿಂದೇಟಿನ ಪ್ರತಿಕ್ರಿಯೆಯಿಂದಾಗಿ ದುರದೃಷ್ಟವಶಾತ್ ಯುರೋಪಿನ ಇತರ ಪ್ರದರ್ಶನಗಳು ರದ್ದುಗೊಂಡವು.[೯೧] ಮಂದ್ರವಾದ್ಯ-ವಾದಕ ಡೇವ್ ಸ್ಪಿಟ್ಜ್ ಪ್ರವಾಸ ಆರಂಭಿಸುವ ಸ್ವಲ್ಪ ದಿನಗಳ ಮೊದಲು ವಾದ್ಯ-ಮೇಳವನ್ನು ತ್ಯಜಿಸಿದ. ಅವನ ಬದಲಿಗೆ ವರ್ಜಿನಿಯಾ ವೋಲ್ಫ್‌ನಲ್ಲಿದ್ದ ಜೊ ಬರ್ಟ್‌ನನ್ನು ಕರೆಸಿಕೊಳ್ಳಲಾಯಿತು.
ಎಟರ್ನಲ್ ಐಡಲ್ ನ ಅತಿ ಕಳಪೆ ವಾಣಿಜ್ಯ ಪ್ರದರ್ಶನದಿಂದ ಬ್ಲ್ಯಾಕ್ ಸಬ್ಬತ್‌ನ್ನು ವರ್ಟಿಗೊ ರೆಕಾರ್ಡ್ಸ್ ಮತ್ತು ವಾರ್ನರ್ ಬ್ರದರ್ಸ್ ರೆಕಾರ್ಡ್ಸ್‌ಗಳಿಂದ ಕೈಬಿಡಲಾಯಿತು ಹಾಗೂI.R.S. ರೆಕಾರ್ಡ್ಸ್‌ನೊಂದಿಗೆ ಸಹಿಹಾಕಿತು.[೨೧] ವಾದ್ಯ-ಮೇಳವು 1988ರಲ್ಲಿ ಬಿಡುವು ತೆಗೆದುಕೊಂಡು, ಅದರ ಮುಂದಿನ ಆಲ್ಬಮ್‌ನ ಕೆಲಸ ಆರಂಭಿಸುವುದಕ್ಕಾಗಿ ಆಗಸ್ಟ್‌ನಲ್ಲಿ ಹಿಂದಿರುಗಿತು. ಎಟರ್ನಲ್ ಐಡಲ್ ನ ಧ್ವನಿಮುದ್ರಣದಲ್ಲಿ ತೊಂದರೆ ಉಂಟಾದ ಫಲವಾಗಿ, ಟೋನಿ ಐಯೋಮಿ ವಾದ್ಯ-ಮೇಳದ ಮುಂದಿನ ಆಲ್ಬಮ್ ಸ್ವತಃ ನಿರ್ಮಿಸಲು ನಿರ್ಧರಿಸಿದ. "ಇದು ಸಂಪೂರ್ಣವಾಗಿ ಒಂದು ಹೊಸ ಆರಂಭವಾಗಿತ್ತು" ಎಂದು ಐಯೋಮಿ ಹೇಳಿದ್ದಾನೆ. "ನಾನು ಎಲ್ಲಾ ವಿಷಯವನ್ನು ಮರು-ಆಲೋಚಿಸಬೇಕಾಗಿತ್ತು. ನಾವು ವಿಶ್ವಾಸಾರ್ಹತೆಯನ್ನು ಸ್ಥಾಪಿಸುವ ಅಗತ್ಯವಿದೆಯೆಂದು ನಂತರ ನಿರ್ಧರಿಸಿದೆವು".[೯೨] ಐಯೋಮಿ ಮಾಜಿ-ರೈನ್‌ಬೊ ಡ್ರಮ್-ವಾದಕ ಕೋಜಿ ಪೋವೆಲ್, ದೀರ್ಘಕಾಲ ಕೀಬೋರ್ಡ್-ನುಡಿಸುವ ನಿಕೋಲ್ಸ್ ಮತ್ತು ಆ ಕಾಲದ ಮಂದ್ರವಾದ್ಯ-ವಾದಕ ಲಾರೆನ್ಸ್ ಕೋಟ್ಲ್ ರನ್ನು ಸೇರಿಸಿಕೊಂಡ ಹಾಗೂ "ತುಂಬಾ ಅಗ್ಗದ ಸ್ಟುಡಿಯೊವನ್ನು ಇಂಗ್ಲೆಂಡ್‌ನಲ್ಲಿ" ಬಾಡಿಗೆಗೆ ಪಡೆದ.[೯೨]
ಬ್ಲ್ಯಾಕ್ ಸಬ್ಬತ್ ಹೆಡ್ಲೆಸ್ ಕ್ರಾಸ್ ಅನ್ನು 1989ರ ಎಪ್ರಿಲ್‌ನಲ್ಲಿ ಬಿಡುಗಡೆಗೊಳಿಸಿತು. ಇದು ಮತ್ತೆ ಸಮಕಾಲೀನ ವಿಮರ್ಶಕರಿಂದ ಕಡೆಗಣಿತವಾಯಿತು. ತರುವಾಯಆಲ್‌ಮ್ಯೂಸಿಕ್ ಹೆಡ್ಲೆಸ್ ಕ್ರಾಸ್ "ಓಜ್ಜೀ ಅಥವಾ ಡಿಯೊ ಇಲ್ಲದ ಬ್ಲ್ಯಾಕ್ ಸಬ್ಬತ್‌ನ ಅತ್ಯುತ್ತಮ ಆಲ್ಬಮ್" ಎಂದು ಹೇಳುತ್ತಾ ಈ ಆಲ್ಬಮ್‌ಗೆ ನಾಲ್ಕು ಸ್ಟಾರ್‌ಗಳನ್ನು ನೀಡಿತು.[೯೩] "ಹೆಡ್ಲೆಸ್ ಕ್ರಾಸ್" ಏಕಗೀತವು ಪಟ್ಟಿಯಲ್ಲಿ 62ನೇ ಸ್ಥಾನ ಪಡೆದರೆ, ಈ ಆಲ್ಬಮ್ UK ಪಟ್ಟಿಯಲ್ಲಿ 31ನೇ ಹಾಗೂ USನಲ್ಲಿ 115ನೇ ಸ್ಥಾನ ತಲುಪಿತು.[೪೦] ಐಯೋಮಿ ಉತ್ತಮ ಸ್ನೇಹಿತ ಕ್ವೀನ್‌ನ ಗಿಟಾರ್-ವಾದಕ ಬ್ರಿಯಾನ್ ಮೇ "ವೆನ್ ಡೆತ್ ಕಾಲ್ಸ್" ಹಾಡಿನಲ್ಲಿ ಅತಿಥಿ ಸೊಲೊ ನುಡಿಸಿದನು. ಆಲ್ಬಮ್ ಬಿಡುಗಡೆಯಾದ ನಂತರ ವಾದ್ಯ-ಮೇಳವು ಹಿಂದೆ ವೈಟ್‌ಸ್ನೇಕ್ ಮತ್ತು ಗ್ಯಾರಿ ಮೂರ್‌ನ ಹಿಮ್ಮೇಳ ವಾದ್ಯ-ವೃಂದದಲ್ಲಿದ್ದ ಸಂಚಾರಿ ಮಂದ್ರವಾದ್ಯ-ವಾದಕ ನೈಲ್ ಮುರ್ರೆಯನ್ನು ಸೇರಿಸಿಕೊಂಡಿತು.[೨೨]
ದುರ್ದೈವದ ಹೆಡ್ಲೆಸ್ ಕ್ರಾಸ್ US ಪ್ರವಾಸವನ್ನು 1989ರ ಮೇನಲ್ಲಿ ಆರಂಭಿಕರಾದ ಕಿಂಗ್ಡಮ್ ಕಮ್ ಮತ್ತು ಸೈಲೆಂಟ್ ರೇಜ್ ಒಂದಿಗೆ ಆರಂಭಿಸಿತು. ಆದರೆ ಕಳಪೆ ಟಿಕೆಟ್ ಮಾರಾಟದಿಂದ ಪ್ರವಾಸ ಕೇವಲ ಎಂಟು ಪ್ರದರ್ಶನಗಳ ನಂತರ ರದ್ದುಗೊಂಡಿತು.[೨೧] ಯುರೋಪ್ ಹಂತದ ಪ್ರವಾಸ ಸೆಪ್ಟೆಂಬರ್‌ನಲ್ಲಿ ಆರಂಭವಾಯಿತು. ಅಲ್ಲಿ ವಾದ್ಯ-ಮೇಳವು ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತಾ ಯಶಸ್ಸು ಕಂಡಿತು. ಜಪಾನಿನಲ್ಲಿ ಪ್ರದರ್ಶನ ನೀಡಿದ ನಂತರ 23 ದಿನಗಳಲ್ಲಿ ವಾದ್ಯ-ಮೇಳವು ಗರ್ಲ್‌ಸ್ಕೂಲ್ ಒಂದಿಗೆ ರಷ್ಯಾ ಪ್ರವಾಸವನ್ನು ಪ್ರಾರಂಭಿಸಿತು. ಮಿಖೈಲ್ ಗೋರ್ಬಚೆವ್ 1989ರಲ್ಲಿ ಮೊದಲ ಬಾರಿಗೆ ಪಾಶ್ಚಿಮಾತ್ಯ ಚಟುವಟಿಕೆಗಳಿಗೆ ರಾಷ್ಟ್ರದಲ್ಲಿ ಅವಕಾಶ ಕಲ್ಪಿಸಿದ ನಂತರ ರಷ್ಯಾ ಪ್ರವಾಸ ಮಾಡಿದ ಮೊದಲ ವಾದ್ಯ-ಮೇಳ ಬ್ಲ್ಯಾಕ್ ಸಬ್ಬತ್.[೯೧]
ವಾದ್ಯ-ಮೇಳವು ಹೆಡ್ಲೆಸ್ ಕ್ರಾಸ್ ನ ನಂತರದ ಟೈರ್ ಅನ್ನು ಧ್ವನಿಮುದ್ರಣ ಮಾಡಲು 1990ರ ಫೆಬ್ರವರಿಯಲ್ಲಿ ಸ್ಟುಡಿಯೊಗೆ ಹಿಂದಿರುಗಿತು. ಇದು ತಾಂತ್ರಿಕವಾಗಿರದ ಒಂದು ಕಾನ್ಸೆಪ್ಟ್ ಆಲ್ಬಮ್ ಆಗಿದ್ದು, ಇದರ ಕೆಲವು ಹಾಡಿನ ಕಥಾವಸ್ತುಗಳು ನಾರ್ಸ್ ಪುರಾಣವನ್ನು ಸಡಿಲವಾಗಿ ಆಧರಿಸಿವೆ.[೨೧] ಟೈರ್ 1990ರ ಆಗಸ್ಟ್ 6ರಲ್ಲಿ ಬಿಡುಗಡೆಯಾಯಿತು. ಇದು UK ಆಲ್ಬಮ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನ ಗಳಿಸಿತು. ಆದರೆ ಇದು USನ ಬಿಲ್ಬೋರ್ಡ್ 200 ಅನ್ನು ತಲುಪದ ಮೊದಲ ಬ್ಲ್ಯಾಕ್ ಸಬ್ಬತ್ ಆಲ್ಬಮ್ ಆಗಿದೆ.[೪೦] ಆಲ್ಬಮ್ ಇಂಟರ್ನೆಟ್ ಶಕೆಯ ಮಿಶ್ರ ವಿಮರ್ಶೆಗಳನ್ನು ಮತ್ತೆ ಪಡೆಯಿತು. ಆಲ್‌ಮ್ಯೂಸಿಕ್ ಈ ಬ್ಯಾಂಡ್ ಪುರಾಣವನ್ನು ಕರ್ಕಶ ಧ್ವನಿಯ ರಾಕ್ ಸಂಗೀತದ ಜತೆ ಮಿಶ್ರ ಮಾಡಿ ಸಂಗೀತ ಸಂಯೋಜನೆಯ ಉತ್ತೇಜಕ ಪ್ರದರ್ಶನ ಎಂದು ಹೇಳಿತು.[೯೪] ಬ್ಲೆಂಡರ್ ಈ ಆಲ್ಬಮ್‌ಗೆ ಕೇವಲ ಒಂದು ಸ್ಟಾರ್ ಮಾತ್ರ ನೀಡಿ, "ಐಯೋಮಿಯು ಈ ಗುರುತಿಸಲಾಗದ ಸಂಗ್ರಹದಿಂದ ಸಬ್ಬತ್ ಹೆಸರನ್ನು ಕಳಂಕಗೊಳಿಸುತ್ತಿದ್ದಾನೆ" ಎಂದು ದೂರಿತು.[೯೫] ವಾದ್ಯ-ಮೇಳವು ಟೈರ್ ಬೆಂಬಲವಾಗಿ ಸರ್ಕಸ್ ಆಫ್ ಪವರ್ ಒಂದಿಗೆ ಯುರೋಪ್ ಪ್ರವಾಸ ಮಾಡಿತು. ಆದರೆ ಕಳಪೆ ಟಿಕೆಟ್ ಮಾರಾಟದಿಂದ UKಯ ಕೊನೆಯ ಏಳು ಪ್ರದರ್ಶನಗಳು ರದ್ದುಗೊಂಡವು.[೯೬] ವಾದ್ಯ-ಮೇಳದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅದರ ಪ್ರವಾಸ ಚಕ್ರವು US ದಿನಾಂಕಗಳನ್ನು ಒಳಗೊಳ್ಳಲಿಲ್ಲ.[೯೭]
ಡೀಹ್ಯೂಮನೈಸರ್ (1990–1993)
[ಬದಲಾಯಿಸಿ]ಆಗಸ್ಟ್ 1990ರಲ್ಲಿ ತನ್ನದೇ ಆದ ಲಾಕ್ ಅಪ್ ದಿ ವೂಲ್ವ್ಸ್ ನ US ಪ್ರವಾಸದಲ್ಲಿ, ಮಾಜಿ ಬ್ಲ್ಯಾಕ್ ಸಬ್ಬತ್ ಗಾಯಕ ರೋನಿ ಜೇಮ್ಸ್ ಡಿಯೊ ಮಾಜಿ ಬ್ಲ್ಯಾಕ್ ಸಬ್ಬತ್ ಮಂದ್ರವಾದ್ಯ-ವಾದಕ ಗೀಜರ್ ಬಟ್ಲರ್ ಮಿನ್ನೆಅಪೊಲಿಸ್ ಫೋರಂನ ವೇದಿಕೆಯಲ್ಲಿ ಒಟ್ಟಾಗಿ "ನೀಆನ್ ನೈಟ್ಸ್" ಪ್ರದರ್ಶನವನ್ನು ನೀಡಿದರು. ಪ್ರದರ್ಶನದ ನಂತರ, ಇಬ್ಬರೂ ಬ್ಲ್ಯಾಕ್ ಸಬ್ಬತ್‌ಗೆ ಮತ್ತೆ ಸೇರಿಕೊಳ್ಳುವ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಬಟ್ಲರ್ ಐಯೋಮಿಗೆ ಮನದಟ್ಟು ಮಾಡುತ್ತಾನೆ. ಇದರ ಪರಿಣಾಮ ಐಯೋಮಿ ಚಾಲ್ತಿಯಲ್ಲಿದ್ದ ತಂಡವನ್ನು ವಿಸರ್ಜಿಸುವುದರ ಜೊತೆಗೆ ಗಾಯಕ ಟೋನಿ ಮಾರ್ಟಿನ್ ಹಾಗು ಮಂದ್ರವಾದ್ಯ-ವಾದಕ ನೀಲ್ ಮುರ್ರೆಯನ್ನು ತಂಡದಿಂದ ಕೈ ಬಿಡುತ್ತಾನೆ. "ನನಗೆ ಯಾವುದೇ ರೀತಿಯಲ್ಲೂ ಇದರ ಬಗ್ಗೆ ಪಶ್ಚಾತ್ತಾಪವಿಲ್ಲ" ಎಂದು ಐಯೋಮಿ ಹೇಳುತ್ತಾನೆ. "ನಾವು ಆಗ ಒಳ್ಳೆಯ ಹಂತದಲ್ಲಿದ್ದೆವು. ನಾವು ಡಿಯೊ ಜೊತೆ ಒಂದುಗೂಡುವ ನಿರ್ಧಾರ ಮಾಡಿದೆವು. ನಿಜವಾಗಿ ನನಗೆ ಏತಕ್ಕಾಗಿ ಎಂಬ ಕಾರಣ ತಿಳಿದಿಲ್ಲ. ಅದು ಆರ್ಥಿಕ ಅಂಶವೂ ಆಗಿದ್ದಿರಬಹುದು, ಆದರೆ ಅದು ಪ್ರಮುಖ ಕಾರಣವಾಗಿರಲಿಲ್ಲ. ನಾವು ನಮ್ಮಲ್ಲಿದ್ದ ಏನನ್ನೋ ಮತ್ತೆ ವಶಪಡಿಸಿಕೊಳ್ಳುವಂತೆ ಭಾವಿಸಿದ್ದೆ".[೯೨]
ರೋನಿ ಜೇಮ್ಸ್ ಡಿಯೊ ಹಾಗು ಗೀಜರ್ ಬಟ್ಲರ್, ಟೋನಿ ಐಯೋಮಿ ಹಾಗು ಕೊಜಿ ಪೋವೆಲ್ ರನ್ನು 1990ರ ಋತುವಿನಲ್ಲಿ ಒಂದುಗೂಡುತ್ತಾರೆ ಜೊತೆಗೆ ಬ್ಲ್ಯಾಕ್ ಸಬ್ಬತ್‌ನ ಮುಂದಿನ ಬಿಡುಗಡೆಗೆ ಕೆಲಸ ಪ್ರಾರಂಭಿಸುತ್ತಾರೆ.
ನವೆಂಬರ್‌ನಲ್ಲಿ ಪೂರ್ವಾಭ್ಯಾಸದ ತಯಾರಿ ವೇಳೆ, ಕುದುರೆ ಡ್ರಮ್ಮರ್‌ನ ಕಾಲುಗಳ ಮೇಲೆ ಬಿದ್ದು ಮರಣಹೊಂದಿದಾಗ ಪೋವೆಲ್ ಸೊಂಟ ಮುರಿತಕ್ಕೆ ಒಳಗಾಗುತ್ತಾನೆ.[೯೮] ಆಲ್ಬಮ್ ನ ಕೆಲಸ ಪೂರ್ಣಗೊಳಿಸಲು ಅಸಮರ್ಥನಾದಾಗ, ಮಾಜಿ ಡ್ರಮ್ಮರ್ ವಿನ್ನಿ ಅಪ್ಪೀಸ್ ಪೋವೆಲ್ ಗೆ ಬದಲಿಯಾಗಿ ಬರುತ್ತಾನೆ. ಇದರೊಂದಿಗೆ ಮಾಬ್ ರೂಲ್ಸ್ ಶಕೆಯ ತಂಡ ಒಂದುಗೂಡುತ್ತದೆ, ಜೊತೆಗೆ ವಾದ್ಯ-ಮೇಳವು ನಿರ್ಮಾಪಕ ರಯಿನ್ ಹೋಲ್ಡ್ ಮ್ಯಾಕ್ ನ ಜೊತೆ ಸ್ಟುಡಿಯೋಕ್ಕೆ ಪ್ರವೇಶಿಸುತ್ತದೆ. ವರ್ಷ-ಪೂರ್ತಿ ನಡೆದ ಧ್ವನಿಮುದ್ರಣ ಕಾರ್ಯಕ್ಕೆ ಹಲವಾರು ಸಮಸ್ಯೆಗಳು ಎದುರಾದವು. ಮೊದಲಿಗೆ ಐಯೋಮಿ ಹಾಗು ಡಿಯೊ ನಡುವೆ ಬರವಣಿಗೆಯ ಬಗ್ಗೆ ಸಮಸ್ಯೆ ಹುಟ್ಟಿಕೊಂಡಿತು. ಜೊತೆಗೆ ಕೆಲವು ಹಾಡುಗಳನ್ನು ಹಲವಾರು ಬಾರಿ ಬದಲಾಯಿಸಿ ಬರೆಯಲಾಯಿತು.[೯೯] "ಡೀಹ್ಯೂಮನೈಸರ್ ತಯಾರಾಗಲು ಹೆಚ್ಚಿನ ಸಮಯ ತೆಗೆದುಕೊಂಡಿತು, ಅದೊಂದು ಶ್ರಮದ ಕೆಲಸವಾಗಿತ್ತು", ಎಂದು ಐಯೋಮಿ ಹೇಳುತ್ತಾನೆ. "ನಾವು ತೆಗೆದುಕೊಂಡ ಹೆಚ್ಚಿನ ಸಮಯದಿಂದಾಗಿ, ಆಲ್ಬಮ್‌ನ ತಯಾರಿಕೆ ವೆಚ್ಚ ದಶಲಕ್ಷ ಡಾಲರ್ ತಲುಪಿತು, ಇದು ಬಹಳ ಹಾಸ್ಯಾಸ್ಪದವಾಗಿತ್ತು".[೯೨] ಡಿಯೊ, ಆಲ್ಬಮ್ ನ ತಯಾರಿಕೆ ಕಷ್ಟವೆನಿಸಿದರೂ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತೆಂದು ನಂತರದಲ್ಲಿ ಸ್ಮರಿಸಿಕೊಳ್ಳುತ್ತಾನೆ. "ಇದಕ್ಕೆ ನಮ್ಮಲ್ಲಿರುವ ಎಲ್ಲ ಪ್ರತಿಭಾ ಶಕ್ತಿಯನ್ನು ಒಟ್ಟುಗೂಡಿಸಬೇಕಿತ್ತು, ಆದರೆ ನನ್ನ ಪ್ರಕಾರ ಇದೇ ಗೆಲುವಿಗೆ ದಾರಿಯಾಯಿತು", ಎಂದು ಹೇಳುತ್ತಾನೆ. "ಕೆಲವೊಂದು ಬಾರಿ ನಮಗೆ ಒಂದು ಬಗೆಯ ಉದ್ವಿಗ್ನತೆ ಇರಬೇಕು, ಇಲ್ಲದಿದ್ದರೆ ಅದು ಕ್ರಿಸ್ಮಸ್ ಆಲ್ಬಮ್ ಮಾದರಿಯ ತಯಾರಿಕೆಯಲ್ಲಿ ಕೊನೆಗೊಳ್ಳುತ್ತದೆ".[೧೦೦]
ತತ್ಪರಿಣಾಮವಾಗಿ ಹೊರಬಂದ ಆಲ್ಬಮ್, ಡೀಹ್ಯೂಮನೈಸರ್ 22 ಜೂನ್ 1992ರಲ್ಲಿ ಬಿಡುಗಡೆಯಾಯಿತು. USನಲ್ಲಿ, ರೆಪ್ರೈಸ್ ರೆಕಾರ್ಡ್ಸ್ ಆಲ್ಬಮ್‌ಅನ್ನು 30 ಜೂನ್ 1992ರಲ್ಲಿ ಬಿಡುಗಡೆ ಮಾಡಿತು. ಏಕೆಂದರೆ ರೋನಿ ಜೇಮ್ಸ್ ಡಿಯೊ ಹಾಗು ಅವನ ಅದೇ ಹೆಸರಿನ ವಾದ್ಯ-ಮೇಳ ವು ಆ ಸಮಯದಲ್ಲಿ ಧ್ವನಿಮುದ್ರಣಾ ತಯಾರಿಕ ಸಂಸ್ಥೆಯ ಜೊತೆ ಒಪ್ಪಂದಕ್ಕೆ ಒಳಪಟ್ಟಿತ್ತು. ಈ ನಡುವೆ ಆಲ್ಬಮ್‌ಗೆ ಮಿಶ್ರ ಪ್ರತಿಕ್ರಿಯೆಗಳು ದೊರೆತವು reviews,[೯೮][೧೦೧]. ಇದು ಹತ್ತುವರ್ಷಗಳ ಅವಧಿಯಲ್ಲಿ ವಾದ್ಯ-ಮೇಳಕ್ಕೆ ದೊರೆತ ಅತ್ಯಂತ ದೊಡ್ಡ ಯಶಸ್ಸಾಗಿತ್ತು.[೨೨] ಅಗ್ರ 40 ರಾಕ್ ರೇಡಿಯೋ ಏಕಗೀತೆ "TV ಕ್ರೈಮ್ಸ್" ನ ಮೂಲಕ, ಆಲ್ಬಮ್ ಬಿಲ್ಬೋರ್ಡ್ 200 ರ ಪಟ್ಟಿಯಲ್ಲಿ 44ನೇ ಸ್ಥಾನಕ್ಕೆ ತಲುಪಿತು.[೨೨]
ಆಲ್ಬಮ್ "ಟೈಮ್ ಮಷೀನ್" ಹಾಡನ್ನು ಒಳಗೊಂಡಿತ್ತು. ಇದರ ಒಂದು ರೂಪಾಂತರವನ್ನು 1992ರಲ್ಲಿ ವಾಯ್ನೆ'ಸ್ ವರ್ಲ್ಡ್ ಚಿತ್ರಕ್ಕಾಗಿ ಧ್ವನಿಮುದ್ರಿಸಲಾಗಿತ್ತು. ಇದರ ಜೊತೆಗೆ, "ನಿಜವಾದ" ಬ್ಲ್ಯಾಕ್ ಸಬ್ಬತ್‌ನ ಕೆಲವು ಹೋಲಿಕೆ ಮರುಕಳಿಸಿದೆ ಎಂಬ ಹಲವು ಅಭಿಮಾನಿಗಳ ಅನಿಸಿಕೆಯೂ ಸಹ ವಾದ್ಯ-ಮೇಳಕ್ಕೆ ಅಗತ್ಯವಾದ ಚಾಲನೆಯನ್ನು ಒದಗಿಸಿತು.
ಬ್ಲ್ಯಾಕ್ ಸಬ್ಬತ್, ಡೀಹ್ಯೂಮನೈಸರ್ ಅನ್ನು ಬೆಂಬಲಿಸುವ ಸಲುವಾಗಿ ಜುಲೈ 1992ರಲ್ಲಿ ಟೆಸ್ಟಮೆಂಟ್, ಡ್ಯಾನ್ಜಿಗ್, ಪ್ರಾಂಗ್, ಹಾಗು ಎಕ್ಸೋಡಸ್ ಜೊತೆ ಪ್ರವಾಸ ಕೈಗೊಂಡಿತು. ಪ್ರವಾಸದ ನಡುವೆ, ಮಾಜಿ ಗಾಯಕ ಓಜ್ಜೀ ಆಸ್ಬಾರ್ನ್ ಮೊದಲಬಾರಿಗೆ ತನ್ನ ನಿವೃತ್ತಿಯನ್ನು ಘೋಷಿಸಿದ. ಜೊತೆಗೆ ಕ್ಯಾಲಿಫೋರ್ನಿಯಾದ ಕೋಸ್ಟ ಮೆಸ ಪ್ರವಾಸದಲ್ಲಿ ನೋ ಮೋರ್ ಟೂರ್ಸ್ ನ ತನ್ನ ಸೊಲೊ ವಾದ್ಯ-ಮೇಳದ ಅಂತಿಮ ಎರಡು ಪ್ರದರ್ಶನದಲ್ಲಿ ಆರಂಭಿಕ ಪ್ರದರ್ಶನ ನೀಡುವಂತೆ ಬ್ಲ್ಯಾಕ್ ಸಬ್ಬತ್‌ಗೆ ಆಮಂತ್ರಣ ನೀಡಿದ. ಆದರೆ ಗಾಯಕ ರೋನಿ ಜೇಮ್ಸ್ ಡಿಯೊನ ಬಿಟ್ಟು, ಈ ಆಮಂತ್ರಣಕ್ಕೆ ವಾದ್ಯ-ಮೇಳವು ಅಂಗೀಕರಿಸುತ್ತದೆ, ಅವನು ಹೇಳುತ್ತಾನೆ:
I was told in the middle of the tour that we would be opening for Ozzy in Los Angeles. And I said, "No. Sorry, I have more pride than that." A lot of bad things were being said from camp to camp, and it created this horrible schism. So by [the band] agreeing to play the shows in L.A. with Ozzy, that, to me, spelled out reunion. And that obviously meant the doom of that particular project.[೧೦೦]
ಡಿಯೊ, 13 ನವೆಂಬರ್ 1992ರಲ್ಲಿ ಕ್ಯಾಲಿಫೋರ್ನಿಯಾ ದ ಓಕ್‌ಲ್ಯಾಂಡ್ ನಲ್ಲಿ ನಡೆದ ಒಂದು ಪ್ರದರ್ಶನದ ನಂತರ ಬ್ಲ್ಯಾಕ್ ಸಬ್ಬತ್‌ನ್ನು ವಾದ್ಯ-ಮೇಳವು ಆಸ್ಬಾರ್ನ್‌ನ ನಿವೃತ್ತಿ ಪ್ರದರ್ಶನಕ್ಕೆ ತಯಾರಾದ ಹಿಂದಿನ ರಾತ್ರಿ ತ್ಯಜಿಸುತ್ತಾನೆ. ಜುಡಾಸ್ ಪ್ರೀಸ್ಟ್ ಗಾಯಕ ರಾಬ್ ಹಾಲ್ಫೋರ್ಡ್ ಕಡೆಯ ಕ್ಷಣದಲ್ಲಿ ವಾದ್ಯ-ಮೇಳವನ್ನು ಸೇರಿಕೊಂಡು ಎರಡು ರಾತ್ರಿ ತಂಡದಲ್ಲಿ ಪ್ರದರ್ಶನ ನೀಡುತ್ತಾನೆ.[೧೦೨] ಐಯೋಮಿ ಹಾಗು ಬಟ್ಲರ್ ಕೂಡ ಆಸ್ಬಾರ್ನ್ ಜೊತೆಗೂಡುತ್ತಾರೆ. ಜೊತೆಗೆ ಮಾಜಿ ಡ್ರಮ್-ವಾದಕ ಬಿಲ್ ವಾರ್ಡ್ 1985ರಿಂದೀಚೆಗೆ ಮೊದಲ ಬಾರಿ ವೇದಿಕೆಯಲ್ಲಿ ಲೈವ್ ಏಡ್ ಸಂಗೀತ ಗೋಷ್ಠಿಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ, ಬ್ಲ್ಯಾಕ್ ಸಬ್ಬತ್‌ನ ಕೆಲವು ಹಾಡುಗಳ ಪ್ರದರ್ಶನ ನೀಡುತ್ತಾನೆ.
ಕ್ರಾಸ್ ಪರ್ಪಸಸ್ ಹಾಗು ಫರ್ಬಿಡನ್ (1993–1996)
[ಬದಲಾಯಿಸಿ]ಡ್ರಮ್-ವಾದಕ ವಿನ್ನಿ ಅಪ್ಪೀಸ್ ಪುನರ್ಮಿಲನದ ಪ್ರದರ್ಶನದ ನಂತರ ರೋನಿ ಜೇಮ್ಸ್ ಡಿಯೊ ನ ಸೊಲೊ ವಾದ್ಯಮೇಳಕ್ಕೆ ಸೇರ್ಪಡೆಗೊಳ್ಳುವ ಸಲುವಾಗಿ ಈ ವಾದ್ಯ-ಮೇಳವನ್ನು ಬಿಟ್ಟುಬಿಡುತ್ತಾನೆ. ನಂತರ ಡಿಯೊನ ಸ್ಟ್ರೇಂಜ್ ಹೈವೇಸ್ ಹಾಗು ಆಂಗ್ರಿ ಮೇಷಿನ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾನೆ. ಐಯೋಮಿ ಹಾಗು ಬಟ್ಲರ್ ಮಾಜಿ ರೈನ್‌ಬೊ ಡ್ರಮ್-ವಾದಕ ಬಾಬ್ಬಿ ರೊಂಡಿನೆಲ್ಲಿ ಯನ್ನು ತಂಡಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಮಾಜಿ ಗಾಯಕ ಟೋನಿ ಮಾರ್ಟಿನ್‌ನನ್ನು ಮತ್ತೆ ಕರೆತರುತ್ತಾರೆ. ವಾದ್ಯ-ಮೇಳವು ಹೊಸ ಆಲ್ಬಮ್ ತಯಾರಿಕೆಗೋಸ್ಕರ ಸ್ಟುಡಿಯೊದಿಂದ ಹಿಂದಿರುಗುತ್ತದೆ. ಜೊತೆಗೆ ಮತ್ತೊಮ್ಮೆ ಬ್ಲ್ಯಾಕ್ ಸಬ್ಬತ್ ಹೆಸರಿನಡಿಯಲ್ಲಿ ಬಿಡುಗಡೆಗೊಳಿಸುವ ಉದ್ದೇಶವನ್ನು ಅದು ಹೊಂದಿರುವುದಿಲ್ಲ. ಗೀಜರ್ ಬಟ್ಲರ್ ವಿವರಿಸುವಂತೆ:
It wasn't even supposed to be a Sabbath album; I wouldn't have even done it under the pretence of Sabbath. That was the time when the original band were talking about getting back together for a reunion tour. Tony and myself just went in with a couple of people, did an album just to have, while the reunion tour was (supposedly) going on. It was like an Iommi/Butler project album.[೧೦೩]
ಸಂಗೀತ ಧ್ವನಿಮುದ್ರಣ ಸಂಸ್ಥೆಯ ಒತ್ತಾಯದ ಮೇರೆಗೆ, ವಾದ್ಯ-ಮೇಳವು ತಮ್ಮ ಹದಿನೇಳನೇ ಸ್ಟುಡಿಯೊ ಆಲ್ಬಮ್ ಕ್ರಾಸ್ ಪರ್ಪಸಸ್ ಅನ್ನು 8 ಫೆಬ್ರವರಿ 1994ರಲ್ಲಿ ಬ್ಲ್ಯಾಕ್ ಸಬ್ಬತ್ ಹೆಸರಿನಡಿಯಲ್ಲೇ ಬಿಡುಗಡೆ ಮಾಡಿತು.
ಆಲ್ಬಮ್‌ಗೆ ಮತ್ತೊಮ್ಮೆ ಮಿಶ್ರ ಪ್ರತಿಕ್ರಿಯೆಗಳು ದೊರೆತವು. ಬ್ಲೆನ್ಡರ್ ಆಲ್ಬಮ್‌ಗೆ ಎರಡು ಸ್ಟಾರ್ ನೀಡುವುದರ ಜೊತೆ ಸೌಂಡ್ ಗಾರ್ಡನ್ ನ 1994ರ ಆಲ್ಬಮ್ ಸೂಪರ್ ಅನೋನ್ ನ್ನು "ಹಣಸಂಪಾದನೆಗೆ ಶೀಘ್ರದಲ್ಲೇ ರಚಿಸಿದ ಕಳಪೆ ಸಾಹಿತ್ಯದ ಆಲ್ಬಮ್‌ಗಳಲ್ಲಿ ಹೆಚ್ಚು ಉತ್ತಮ ಸಬ್ಬತ್ ಆಲ್ಬಮ್" ಎಂದು ಕರೆಯಲಾಯಿತು. ಆಲ್‌ಮ್ಯೂಸಿಕ್ ನ ಬ್ರಾಡ್ಲೆ ಟೋರ್ರೆಅನೋ ಕ್ರಾಸ್ ಪರ್ಪಸಸ್ ಅನ್ನು "ಬೋರ್ನ್ ಎಗೈನ್ ನಂತರ ಮೊದಲ ಬಾರಿಗೆ ನಿಜವಾಗಿ ಒಂದು ಸಬ್ಬತ್ ರೆಕಾರ್ಡ್ ತರಹವೇ ಧ್ವನಿಹೊಮ್ಮಿಸುತ್ತಿರುವ ಆಲ್ಬಮ್" ಎಂದು ಕರೆಯುತ್ತಾನೆ.[೧೦೪] ಆಲ್ಬಮ್ UKಯಲ್ಲಿ 40ನೇ ಅಗ್ರ ಸ್ಥಾನ ಗಳಿಸುವುದು ಸ್ವಲ್ಪದರಲ್ಲಿ ತಪ್ಪಿ 41ನೇ ಸ್ಥಾನ ಗಳಿಸಿತು. ಜೊತೆಗೆ ಬಿಲ್ಬೋರ್ಡ್ 200 ರ ಪಟ್ಟಿಯಲ್ಲಿ 122ನೇ ಸ್ಥಾನಕ್ಕೆ ತಲುಪಿತು. ಕ್ರಾಸ್ ಪರ್ಪಸಸ್ "ಇವಿಲ್ ಐ" ಹಾಡನ್ನು ಒಳಗೊಂಡಿತ್ತು. ಈ ಹಾಡಿಗೆ ವ್ಯಾನ್ ಹ್ಯಾಲೆನ್ ಗಿಟಾರ್-ವಾದಕ ಎಡ್ಡಿ ವ್ಯಾನ್ ಹ್ಯಾಲೆನ್ ಸಹ-ಬರಹಗಾರ. ಆದಾಗ್ಯೂ, ಇದು ರೆಕಾರ್ಡ್ ಕಂಪೆನಿ ನಿರ್ಬಂಧಗಳಿಂದ ಹೆಚ್ಚಿನ ಖ್ಯಾತಿಯನ್ನು ಗಳಿಸಲಿಲ್ಲ.[೨೧] ಕ್ರಾಸ್ ಪರ್ಪಸಸ್ ಅನ್ನು ಬೆಂಬಲಿಸುವ ಸಲುವಾಗಿ ಫೆಬ್ರವರಿಯಲ್ಲಿ USನ ಮೊರ್ಬಿಡ್ ಏಂಜಲ್ ಹಾಗು ಮೋಟಾರ್ ಹೆಡ್ ನಲ್ಲಿ ಪ್ರವಾಸ ಪ್ರಾರಂಭವಾಯಿತು. ವಾದ್ಯ-ಮೇಳವು ಹ್ಯಾಮರ್ಸ್ಮಿತ್ ಅಪೋಲ್ಲೋ ನಲ್ಲಿ 13 ಏಪ್ರಿಲ್ 1994ರಂದು ಒಂದು ನೇರ ಪ್ರದರ್ಶನವನ್ನು ಚಿತ್ರೀಕರಿಸಿತು. ಇದನ್ನು ಕ್ರಾಸ್ ಪರ್ಪಸಸ್ ಲೈವ್ ಹೆಸರಿನಿಂದ CD ಹಾಗು VHSನ ಮೂಲಕ ಬಿಡುಗಡೆ ಮಾಡಲಾಯಿತು.
ಜೂನ್ 1994ರಲ್ಲಿ ಕ್ಯಾಥೆಡ್ರಲ್ ಹಾಗು ಗಾಡ್ ಸ್ಪೀಡ್ ಜೊತೆಗಿನ ಯುರೋಪಿಯನ್ ಪ್ರವಾಸದ ನಂತರ, ಡ್ರಮ್-ವಾದಕ ಬಾಬ್ಬಿ ರೊಂಡಿನೆಲ್ಲಿ ವಾದ್ಯ-ಮೇಳವನ್ನು ತ್ಯಜಿಸುತ್ತಾನೆ. ಇವನ ಬದಲಿಗೆ ಮೂಲ ಬ್ಲ್ಯಾಕ್ ಸಬ್ಬತ್ ಡ್ರಮ್-ವಾದಕ ಬಿಲ್ ವಾರ್ಡ್ ದಕ್ಷಿಣ ಅಮೇರಿಕಾದಲ್ಲಿ ನಡೆದ ಐದು ಪ್ರದರ್ಶನಗಳಲ್ಲಿ ಭಾಗಿಯಾಗುತ್ತಾನೆ.
ಕ್ರಾಸ್ ಪರ್ಪಸಸ್ ನ ಬೆಂಬಲಾರ್ಥ ಪ್ರವಾಸಗಳ ನಂತರ, ಮಂದ್ರವಾದ್ಯ-ವಾದಕ ಗೀಜರ್ ಬಟ್ಲರ್ ಮತ್ತೊಮ್ಮೆ ವಾದ್ಯ-ಮೇಳವನ್ನು ತೊರೆಯುತ್ತಾನೆ. "ನನಗೆ ಕಡೆಯ ಸಬ್ಬತ್ ಆಲ್ಬಮ್ ಹೊತ್ತಿಗೆ ಸಂಪೂರ್ಣ ಭ್ರಮನಿರಸನವಾಯಿತು, ಜೊತೆಗೆ ಸಬ್ಬತ್ ತಂಡವು ತಯಾರಿ ನಡೆಸುತ್ತಿರುವ ವಿಷಯಕ್ಕಿಂತ ನಾನು ಬರೆಯುತ್ತಿರುವ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ".[೧೦೩] ಬಟ್ಲರ್ GZR ಹೆಸರಿನ ಒಂದು ಸೊಲೊ ಯೋಜನೆಯನ್ನು ರೂಪಿಸುವುದರ ಜೊತೆಗೆ ಪ್ಲಾಸ್ಟಿಕ್ ಪ್ಲಾನೆಟ್ ಅನ್ನು 1995ರಲ್ಲಿ ಬಿಡುಗಡೆ ಮಾಡಿದ. ಆಲ್ಬಮ್ "ಗಿವಿಂಗ್ ಅಪ್ ದಿ ಗ್ಹೊಸ್ಟ್" ಹಾಡನ್ನು ಒಳಗೊಂಡಿತ್ತು. ಇದು ಬ್ಲ್ಯಾಕ್ ಸಬ್ಬತ್ ಹೆಸರಿನಿಂದ ಮುಂದುವರೆಸುತ್ತಿರುವ ಟೋನಿ ಐಯೋಮಿ ಬಗೆಗಿನ ಟೀಕೆಯಾಗಿತ್ತು. ಹಾಡಿನ ಸಾಲುಗಳು ಈ ರೀತಿಯಾಗಿತ್ತು: ನೀನು ಕೃತಿಚೌರ್ಯ ಹಾಗೂ ಅಣಕವಾಡಿದೆ /ನಮ್ಮ ಅರ್ಥದ ಮಾಂತ್ರಿಕತೆಯನ್ನು / ನಿನ್ನ ಸ್ವಯಂ ಮನಸ್ಸಿನಲ್ಲಿ ದಂತಕಥೆಯೆಂದು ಭಾವಿಸಿದೆ / ನಿನ್ನ ಎಲ್ಲ ಸ್ನೇಹಿತರನ್ನು ತ್ಯಜಿಸಿದೆ / ನಿನ್ನದು ತಪ್ಪು ಎಂದು ಒಪ್ಪಿಕೊಳ್ಳಲು ನಿನಗೆ ಸಾಧ್ಯವಾಗುತ್ತಿಲ್ಲ / ಆತ್ಮವು ಸತ್ತಿದೆ ಮತ್ತು ಹೊರಟುಹೋಗಿದೆ .[೧೦೫]
ಬಟ್ಲರ್‌ನ ನಿರ್ಗಮನದ ನಂತರ, ಆಗ ತಾನೇ ಮರು ಸೇರ್ಪಡೆಯಾಗಿದ್ದ ಡ್ರಮ್-ವಾದಕ ಬಿಲ್ ವಾರ್ಡ್ ಮತ್ತೊಮ್ಮೆ ವಾದ್ಯ-ಮೇಳವನ್ನು ತೊರೆದ.
ಐಯೋಮಿ ತಂಡದ ಮಾಜಿ ಸದಸ್ಯರುಗಳಾದ ನೀಲ್ ಮುರ್ರೆಯನ್ನು ಮಂದ್ರವಾದ್ಯ ನುಡಿಸಲು ಹಾಗು ಕೊಜಿ ಪೋವೆಲ್ ಡ್ರಮ್ ಬಾರಿಸಲು ಮತ್ತೊಮ್ಮೆ ಕರೆತಂದ. ಹೀಗೆ ಟೈರ್ ತಂಡ ಪರಿಣಾಮಕಾರಿಯಾಗಿ ಪುನರ್ಮಿಲನವಾಯಿತು.
ಹೊಸ ಆಲ್ಬಮ್ ತಯಾರಿಕೆಗೆ ವಾದ್ಯ-ಮೇಳಕ್ಕೆ ಬಾಡಿ ಕೌಂಟ್ ನ ಗಿಟಾರ್-ವಾದಕ ಎರ್ನಿ C ಸೇರ್ಪಡೆಯಾದ. ಆಲ್ಬಮ್ ಅನ್ನು 1994ರ ಋತುವಿನಲ್ಲಿ ಲಂಡನ್‌ನಲ್ಲಿ ಧ್ವನಿಮುದ್ರಿಸಲಾಯಿತು. ಬಾಡಿ ಕೌಂಟ್ ನ ಗಾಯಕ ಐಸ್ T ಅಥಿತಿ ಗಾಯಕನಾಗಿ ಹಾಡಿದ "ಇಲ್ಯೂಷನ್ ಆಫ್ ಪವರ್" ಎಂಬ ಹಾಡನ್ನು ಆಲ್ಬಮ್ ಒಳಗೊಂಡಿದೆ.[೧೦೬] ನಂತರ ಬಿಡುಗಡೆಯಾದ ಫರ್ಬಿಡನ್ 8 ಜೂನ್ 1995ರಲ್ಲಿ ಬಿಡುಗಡೆಯಾಯಿತಾದರೂ, US ಅಥವಾ UKಯ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾಯಿತು.[೧೦೭][೧೦೮] ಆಲ್ಬಮ್ ವ್ಯಾಪಕವಾಗಿ ವಿಮರ್ಶಕರ ಟೀಕೆಗೆ ಒಳಗಾಯಿತು; ಆಲ್‌ಮ್ಯೂಸಿಕ್ ನ ಬ್ರಾಡ್ಲೆ ಟೋರ್ರೆಅನೋ "ಬೇಸರ ತರಿಸುವ ಹಾಡುಗಳು, ಬಹಳ ಕೆಟ್ಟದಾದ ನಿರ್ಮಾಣ ಹಾಗು ಅಷ್ಟೇನೂ ಸ್ಪೂರ್ತಿದಾಯಕವಲ್ಲದ ಪ್ರದರ್ಶನದಿಂದಾಗಿ ಹೆಚ್ಚಿನ ಉತ್ಸಾಹಪೂರ್ಣ ಅಭಿಮಾನಿಗಳೂ ಸಹ ಇದನ್ನು ಸುಲಭವಾಗಿ ನಿರಾಕರಿಸುತ್ತಿದ್ದಾರೆ" ಎಂದು ಹೇಳುತ್ತಾನೆ;[೧೦೯] ಈ ನಡುವೆ ಬ್ಲೆನ್ಡರ್ ನಿಯತಕಾಲಿಕವು ಫರ್ಬಿಡನ್ "ಒಂದು ಮುಜುಗರಪಡುವ ಸಂಗತಿ... ವಾದ್ಯ-ಮೇಳದ ಅತ್ಯಂತ ಕೆಟ್ಟ ಆಲ್ಬಮ್" ಎಂದು ಕರೆಯಿತು.[೧೧೦]
ಜುಲೈ 1995ರಲ್ಲಿ ಬ್ಲ್ಯಾಕ್ ಸಬ್ಬತ್ ವಿಶ್ವ ಪ್ರವಾಸವನ್ನು ಮೊದಲಿಗರಾದ ಮೋಟಾರ್ ಹೆಡ್ ಹಾಗು ಟಿಯಮತ್ ಜೊತೆಗೂಡಿ ಪ್ರಾರಂಭಿಸಿತು. ಆದರೆ ಪ್ರವಾಸ ಪ್ರಾರಂಭವಾದ ಎರಡು ತಿಂಗಳ ಒಳಗಾಗಿ ಡ್ರಮ್-ವಾದಕ ಕೊಜಿ ಪೋವೆಲ್, ತನ್ನ ಅನಾರೋಗ್ಯದ ನೆಪವೊಡ್ಡಿ ವಾದ್ಯ-ಮೇಳವನ್ನು ತೊರೆದ. ನಂತರ ಇವನ ಬದಲಿಗೆ ಮಾಜಿ ಡ್ರಮ್-ವಾದಕ ಬಾಬ್ಬಿ ರೊಂಡಿನೆಲ್ಲಿ ತಂಡಕ್ಕೆ ಸೇರ್ಪಡೆಯಾದ. ಡಿಸೆಂಬರ್ 1995ರಲ್ಲಿ ಏಶಿಯಾದಲ್ಲಿ ನಿಗದಿಯಾದ ದಿನಾಂಕಗಳಲ್ಲಿ ಪ್ರದರ್ಶನವನ್ನು ನೀಡಿದ ನಂತರ, ಟೋನಿ ಐಯೋಮಿ ವಾದ್ಯ-ಮೇಳಕ್ಕೆ ಬಿಡುವು ನೀಡುತ್ತಾನೆ, ಮಾಜಿ ಬ್ಲ್ಯಾಕ್ ಸಬ್ಬತ್ ಗಾಯಕ ಗ್ಲೆನ್ ಹಫೆಸ್ ಹಾಗು ಮಾಜಿ ಜುಡಾಸ್ ಪ್ರೀಸ್ಟ್ ಡ್ರಮ್-ವಾದಕ ಡೇವ್ ಹಾಲಂಡ್ ಜೊತೆ ಸೇರಿ ಸೊಲೊ ಆಲ್ಬಮ್‌ನ ತಯಾರಿಯಲ್ಲಿ ತೊಡಗಿದ. ಆಲ್ಬಮ್ ಪೂರ್ಣಗೊಂಡ ನಂತರ ಅಧಿಕೃತವಾಗಿ ಬಿಡುಗಡೆಯಾಗಲಿಲ್ಲ, ಆದಾಗ್ಯೂ ಕಾನೂನುಬಾಹಿರವಾಗಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಏತ್ ಸ್ಟಾರ್ ಶೀಘ್ರದಲ್ಲೇ ಕಾಣಿಸಿಕೊಂಡಿತು. ಆಲ್ಬಮ್ 2004ರಲ್ಲಿ ದಿ 1996 DEP ಸೆಷನ್ಸ್ ಹೆಸರಿನಿಂದ ಅಧಿಕೃತವಾಗಿ ಬಿಡುಗಡೆಯಾಯಿತು. ಜೊತೆಗೆ ಹಾಲಂಡ್ ನ ಡ್ರಮ್ ವಾದನವನ್ನು ಸೆಷನ್ ಡ್ರಮ್-ವಾದಕ ಜಿಮ್ಮಿ ಕಾಪ್ಲೆಯ್ ಮರು-ಮುದ್ರಣ ಮಾಡಿದ.[೧೧೧]
1997ರಲ್ಲಿ, ಟೋನಿ ಐಯೋಮಿ ಓಜ್ಜೀ ಆಸ್ಬಾರ್ನ್ ಹಾಗು ಮೂಲ ಬ್ಲ್ಯಾಕ್ ಸಬ್ಬತ್ ತಂಡದ ಜೊತೆ ಮತ್ತೆ ಒಂದಾಗುವ ಉದ್ದೇಶದಿಂದ ಚಾಲ್ತಿಯಲ್ಲಿದ್ದ ತಂಡವನ್ನು ವಿಸರ್ಜಿಸಿದ. ಓಜ್ಜೀ ಆಸ್ಬಾರ್ನ್‌ನ 1992ರ ಕೋಸ್ಟ ಮೇಸ ಪ್ರದರ್ಶನದ ಸಮಯದಲ್ಲಿ ತಂಡವು ಸ್ವಲ್ಪ ಕಾಲದ ಮಟ್ಟಿಗೆ ಒಂದುಗೂಡಿದ ನಂತರ ಮತ್ತೆ ಒಂದುಗೂಡುವ ಬಗ್ಗೆ ಚಿಂತನೆ ನಡೆಸಿತ್ತೆಂದು ಗಾಯಕ ಟೋನಿ ಮಾರ್ಟಿನ್ ಸಮರ್ಥಿಸಿಕೊಳ್ಳುತ್ತಾನೆ. ನಂತರದಲ್ಲಿ ವಾದ್ಯ-ಮೇಳವು I.R.S. ರೆಕಾರ್ಡ್ಸ್ ಜೊತೆಗಿನ ರೆಕಾರ್ಡ್ ಒಪ್ಪಂದವನ್ನು ಪೂರೈಸುವ ಸಲುವಾಗಿ ಆನಂತರ ತಮ್ಮ ಆಲ್ಬಮ್‌ಗಳನ್ನು ಬಿಡುಗಡೆಮಾಡಿತು. ಮರೀನ್ ನಂತರ ಫರ್ಬಿಡನ್ ನನ್ನು ಒಂದು "ಸ್ಥಾನ ತುಂಬಿದ ಆಲ್ಬಮ್ ಎಂದು ಕರೆಯುತ್ತಾನೆ. ಇದು ವಾದ್ಯ-ಮೇಳವನ್ನು ಧ್ವನಿಮುದ್ರಣದ ಸಂಸ್ಥೆಯ ಒಪ್ಪಂದದಿಂದ ಹೊರತಂದಿತು, ಗಾಯಕನಿಂದ ಪಾರುಮಾಡಿತು ಹಾಗು ತಂಡವನ್ನು ಒಂದುಗೂಡಿಸಿತು ಎಂದು ಸ್ಮರಿಸಿಕೊಳ್ಳುತ್ತಾನೆ. ಆದಾಗ್ಯೂ ನನಗೆ ಆ ಸಮಯದಲ್ಲಿ ಈ ಮಾಹಿತಿಯ ಅರಿವಿರಲಿಲ್ಲ".[೧೧೨] I.R.S. ರೆಕಾರ್ಡ್s 1996ರಲ್ಲಿ ವಾದ್ಯ-ಮೇಳದ ಜೊತೆಗಿನ ಒಪ್ಪಂದವನ್ನು ಪೂರ್ಣಗೊಳಿಸುವ ಸಲುವಾಗಿ ದಿ ಸಬ್ಬತ್ ಸ್ಟೋನ್ಸ್ ಹೆಸರಿನ ಒಂದು ಸಂಕಲಿತ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಇದರಲ್ಲಿ ಬೋರ್ನ್ ಎಗೈನ್ ಹಾಗು ಫರ್ಬಿಡನ್ ನ ಹಾಡುಗಳು ಸೇರಿದ್ದವು.
ಆಸ್ಬಾರ್ನ್‌ನ ಪುನರ್ಮಿಲನ (1997–2006)
[ಬದಲಾಯಿಸಿ]ಕಳೆದ 1997ರ ಬೇಸಿಗೆಯಲ್ಲಿ, ಟೋನಿ ಐಯೋಮಿ, ಗೀಜರ್ ಬಟ್ಲರ್, ಹಾಗು ಓಜ್ಜೀ ಆಸ್ಬಾರ್ನ್ ಅಧಿಕೃತವಾಗಿ ಒಂದುಗೂಡಿ ಒಜ್ಜ್ ಫೆಸ್ಟ್ ಉತ್ಸವಕ್ಕೆ ಆಸ್ಬಾರ್ನ್‌ನ ಏಕವ್ಯಕ್ತಿ ವಾದ್ಯ-ಮೇಳದೊಂದಿಗೆ ಪ್ರವಾಸವನ್ನು ಕೈಗೊಂಡರು. ತಂಡದಲ್ಲಿ ಆಸ್ಬಾರ್ನ್ ನ ಡ್ರಮ್-ವಾದಕ ಮೈಕ್ ಬೋರ್ಡಿನ್ ಬಿಲ್ ವಾರ್ಡ್ ಸ್ಥಾನವನ್ನು ಆಕ್ರಮಿಸಿದ. ಅವನು ತನ್ನ ಏಕವ್ಯಕ್ತಿ ಯೋಜನೆ ದಿ ಬಿಲ್ ವಾರ್ಡ್ ವಾದ್ಯ-ಮೇಳದಲ್ಲಿ ಮುಂಚಿನ ಒಪ್ಪಂದಗಳಿಗೆ ಬದ್ದನಾಗಿದ್ದರಿಂದ ಇದರಲ್ಲಿ ಭಾಗವಹಿಸಲಾಗಲಿಲ್ಲ.[೨೨] ಕಳೆದ ಡಿಸೆಂಬರ್ 1997ರಲ್ಲಿ, ತಂಡಕ್ಕೆ ವಾರ್ಡ್‌ನ ಆಗಮನವಾಯಿತು. ಇದು ಆಸ್ಬಾರ್ನ್‌ನ 1992ರ "ನಿವೃತ್ತಿ ಪ್ರದರ್ಶನ" ನಂತರ ಮೊದಲ ಬಾರಿಗೆ ನಾಲ್ಕು ಜನ ಮೂಲ ಸದಸ್ಯರ ಪುನರ್ಮಿಲನವೆಂದು ಗುರುತಿಸಲಾಯಿತು. ಈ ಮೂಲ ತಂಡವು ಎರಡು ಪ್ರದರ್ಶನಗಳನ್ನು ಬಿರ್ಮಿಂಘಮ್ NEC ಯಲ್ಲಿ ಧ್ವನಿಮುದ್ರಣ ಮಾಡಿತು. ರಿಯೂನಿಯನ್ ಹೆಸರಿನ ಈ ಜೋಡಿ ನೇರ ಪ್ರದರ್ಶನದ ಆಲ್ಬಮ್ ಅನ್ನು 20 ಅಕ್ಟೋಬರ್ 1998ರಲ್ಲಿ ಬಿಡುಗಡೆ ಮಾಡಲಾಯಿತು. ರಿಯೂನಿಯನ್ , ಬಿಲ್ಬೋರ್ಡ್ 200 ರಲ್ಲಿ ಹನ್ನೊಂದನೇ ಸ್ಥಾನ ಗಳಿಸುವುದರ ಜೊತೆಗೆ[೪೦] US ನಲ್ಲಿ ಪ್ಲಾಟಿನಂ ದರ್ಜೆ ಪಡೆಯಿತು.[೨೨][೧೧೩] ಆಲ್ಬಮ್‌ನ ಏಕಗೀತೆ "ಐರನ್ ಮ್ಯಾನ್"ಗಾಗಿ, ಬ್ಲ್ಯಾಕ್ ಸಬ್ಬತ್ 2000ದಲ್ಲಿ ಅತ್ಯುತ್ತಮ ಮೆಟಲ್ ಪ್ರದರ್ಶನ ಎಂದು ತನ್ನ ಮೊದಲನೇ ಗ್ರ್ಯಾಮ್ಮಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಇದು ಹಾಡು ಪ್ರಥಮಬಾರಿಗೆ ಬಿಡುಗಡೆಯಾದ 30 ವರ್ಷಗಳ ನಂತರ ಸಂದ ಗೌರವ. ರಿಯೂನಿಯನ್ ಎರಡು ಹೊಸ ಸ್ಟುಡಿಯೊ ಧ್ವನಿಮುದ್ರಿಕೆಗಳಾದ, "ಸೈಕೊ ಮ್ಯಾನ್" ಹಾಗು "ಸೆಲ್ಲಿಂಗ್ ಮೈ ಸೌಲ್" ಗಳನ್ನೂ ಒಳಗೊಂಡಿತ್ತು. ಇವೆರಡೂ ಬಿಲ್ಬೋರ್ಡ್ ಮೇನ್ ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ 20ನೇ ಸ್ಥಾನ ಪಡೆಯಿತು.[೪೦]
ವಾದ್ಯ-ಮೇಳವು 1998ರ ಬೇಸಿಗೆಯಲ್ಲಿ ಯುರೋಪಿಯನ್ ಪ್ರವಾಸ ಹೊರಡುವ ಸ್ವಲ್ಪ ಮುಂಚೆ, ಡ್ರಮ್-ವಾದಕ ಬಿಲ್ ವಾರ್ಡ್‌ಗೆ ಹೃದಯಾಘಾತ ವಾಯಿತು. ಹೀಗಾಗಿ ಇವನ ಬದಲಿಗೆ ತಾತ್ಕಾಲಿಕವಾಗಿ ಮಾಜಿ ಡ್ರಮ್-ವಾದಕ ವಿನ್ನಿ ಅಪ್ಪೀಸ್ ತಂಡಕ್ಕೆ ಸೇರ್ಪಡೆಯಾದ.[೧೧೪] ವಾರ್ಡ್ US ಪ್ರವಾಸಕ್ಕೆ ಆರಂಭಿಕರಾದ ಪಂತೇರ ಜೊತೆ ಸಮಯಕ್ಕೆ ಸರಿಯಾಗಿ ತಲುಪಿದ. ಇದು ಜನವರಿ 1999ರಲ್ಲಿ ಪ್ರಾರಂಭವಾಗುವುದರ ಜೊತೆಗೆ ಬೇಸಿಗೆಯಲ್ಲಿ ನಡೆದ ವಾರ್ಷಿಕ ಒಜ್ಜ್ ಫೆಸ್ಟ್ ಪ್ರವಾಸದಲ್ಲೂ ಸಹ ಮುಂದುವರೆಯಿತು.[೨೨] ಒಜ್ಜ್ ಫೆಸ್ಟ್ ಪ್ರದರ್ಶನದ ನಂತರ, ವಾದ್ಯ-ಮೇಳಕ್ಕೆ ವಿಶ್ರಾಂತಿ ನೀಡಲಾಯಿತು. ಈ ನಡುವೆ ತಂಡದ ಸದಸ್ಯರು ವೈಯುಕ್ತಿಕ ಪ್ರದರ್ಶನ ನೀಡಲು ತಯಾರಿ ನಡೆಸಿದರು. ಟೋನಿ ಐಯೋಮಿ ತನ್ನ ಮೊದಲ ಅಧಿಕೃತ ಏಕವ್ಯಕ್ತಿ ಪ್ರದರ್ಶನದ ಆಲ್ಬಮ್, ಐಯೋಮಿ ಯನ್ನು 2000ದಲ್ಲಿ ಬಿಡುಗಡೆ ಮಾಡಿದ. ಈ ಮಧ್ಯದಲ್ಲಿ ಆಸ್ಬಾರ್ನ್ ತನ್ನ ಮುಂದಿನ ಏಕವ್ಯಕ್ತಿ ಪ್ರದರ್ಶನದ ಡೌನ್ ಟು ಅರ್ಥ್ ಬಿಡುಗಡೆಗೆ ತಯಾರಿಯನ್ನು ಮುಂದುವರೆಸಿದ.
ಬ್ಲ್ಯಾಕ್ ಸಬ್ಬತ್ ತಮ್ಮ ಹೊಸ ತಯಾರಿಗಾಗಿ ಎಲ್ಲ ನಾಲ್ಕು ಮೂಲ ಸದಸ್ಯರು ಹಾಗು ನಿರ್ಮಾಪಕ ರಿಕ್ ರುಬಿನ್ ಜೊತೆ 2001ರ ವಸಂತ ಋತುವಿನಲ್ಲಿ ಸ್ಟುಡಿಯೊಗೆ ಮರಳಿತು.[೨೨] ಆದರೆ ಆಸ್ಬಾರ್ನ್ ಗೆ 2001ರ ಬೇಸಿಗೆಯಲ್ಲಿ ಅವನ ಏಕವ್ಯಕ್ತಿ ಪ್ರದರ್ಶನದ ಆಲ್ಬಮ್‌ನ ಕೆಲಸವನ್ನು ಮುಗಿಸಲು ಕರೆಬಂದದ್ದರಿಂದ ಸೆಷನ್ಸ್ ಅನ್ನು ಮಧ್ಯದಲ್ಲೇ ನಿಲ್ಲಿಸಲಾಯಿತು.[೧೧೫] "ಅದು ಅಂತಿಮ ಹಂತ ತಲುಪಿದೆ", ಎಂದು ಐಯೋಮಿ ಹೇಳುತ್ತಾನೆ. "ನಾವು ಹೆಚ್ಚಿಗೆ ಮುಂದುವರೆಯಲಿಲ್ಲ, ಜೊತೆಗೆ ಇದೊಂದು ನಾಚಿಕೆಗೇಡಿನ ಸಂಗತಿ ಏಕೆಂದರೆ ಹಾಡುಗಳು ನಿಜವಾಗಿ ಚೆನ್ನಾಗಿದ್ದವು"good".[೧೧೬]. ಐಯೋಮಿ ವಾದ್ಯ-ಮೇಳದ ಎಲ್ಲ ಸದಸ್ಯರನ್ನು ಒಟ್ಟುಗೂಡಿಸಿ ಆಲ್ಬಮ್‌ಗೆ ತಯಾರಿ ನಡೆಸುವುದು ಕಷ್ಟಸಾಧ್ಯವಾದ ಕೆಲಸವೆಂದು ಅಭಿಪ್ರಾಯಪಟ್ಟ:
It's quite different recording now. We've all done so much in between. In [the early] days there was no mobile phone ringing every five seconds. When we first started, we had nothing. We all worked for the same thing. Now everybody has done so many other things. It's great fun and we all have a good chat, but it's just different, trying to put an album together.[೧೧೬]
ಮಾರ್ಚ್ 2002ರಲ್ಲಿ, ಓಜ್ಜೀ ಆಸ್ಬಾರ್ನ್‌ನ ಎಮ್ಮಿ ಪ್ರಶಸ್ತಿ ವಿಜೇತ ರಿಯಾಲಿಟಿ TV ಕಾರ್ಯಕ್ರಮ "ದಿ ಆಸ್ಬಾರ್ನ್ಸ್" MTV ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ನೀಡುವುದರ ಜೊತೆಗೆ ಅತಿ ಶೀಘ್ರದಲ್ಲೇ ವಿಶ್ವವ್ಯಾಪಿಯಾಗಿ ಜನಪ್ರಿಯವಾಯಿತು.[೨೨] ಈ ಕಾರ್ಯಕ್ರಮದಿಂದ ಆಸ್ಬಾರ್ನ್ ಅಪಾರ ಪ್ರೇಕ್ಷಕರಿಗೆ ಪರಿಚಿತನಾದ ಜೊತೆಗೆ ಅದರ ಅನುಕೂಲ ಪಡೆಯಲು ಬ್ಯಾಂಡ್‌ನ ಹಿಂದಿನ ಕಾರ್ಯಕ್ರಮ ಸೂಚಿ ಕಂಪೆನಿ ಸ್ಯಾಂಕ್ಟ್ಯೂಅರಿ ರೆಕಾರ್ಡ್ಸ್ ಒಂದು ಜೋಡಿ ಲೈವ್ (ನೇರ ಪ್ರದರ್ಶನದ) ಆಲ್ಬಮ್ ಪಾಸ್ಟ್ ಲೈವ್ಸ್ ಅನ್ನು ಬಿಡುಗಡೆಮಾಡಿತು. ಇದರಲ್ಲಿ 70ರ ದಶಕದ ಸಂಗೀತ ಗೋಷ್ಠಿಗಳಲ್ಲಿ ಧ್ವನಿಮುದ್ರಣ ಮಾಡಿದಂತಹ ಹಾಡುಗಳು ಸೇರಿದ್ದವು. ಇದು ಪೂರ್ವದಲ್ಲಿ ಅನಧಿಕೃತವಾಗಿದ್ದ ಲೈವ್ ಅಟ್ ಲಾಸ್ಟ್ ಆಲ್ಬಮ್ ಕೂಡ ಒಳಗೊಂಡಿದೆ. ವಾದ್ಯ-ಮೇಳಕ್ಕೆ 2004ರ ಬೇಸಿಗೆಯವರೆಗೂ ವಿರಾಮ ನೀಡಲಾಯಿತು. ನಂತರ ತಂಡವು ಒಜ್ಜ್ ಫೆಸ್ಟ್ 2004 ಹಾಗು 2005ರಲ್ಲಿ ಪ್ರದರ್ಶನ ನೀಡಲು ಮರಳಿತು. ನವೆಂಬರ್ 2005ರಲ್ಲಿ, ಬ್ಲ್ಯಾಕ್ ಸಬ್ಬತ್ UK ಮ್ಯೂಸಿಕ್ ಹಾಲ್ ಆಫ್ ಫೇಮ್ ನಲ್ಲಿ ಪ್ರವೇಶ ದೊರಕಿಸಿಕೊಂಡಿತು. ಇದರಲ್ಲಿ ಅರ್ಹತೆ ಪಡೆದ ಹನ್ನೊಂದು ವರ್ಷ ನಂತರ, ಮಾರ್ಚ್ 2006ರಲ್ಲಿ, ವಾದ್ಯ-ಮೇಳವು USನ ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್ ನಲ್ಲಿ ಪ್ರವೇಶ ಪಡೆಯಿತು.[೧೧೭] ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮೆಟಾಲಿಕಾ ಬ್ಲ್ಯಾಕ್ ಸಬ್ಬತ್‌ನ ಎರಡು ಹಾಡುಗಳು "ಹೋಲ್ ಇನ್ ದ ಸ್ಕೈ" ಹಾಗು "ಐರನ್ ಮ್ಯಾನ್" ನನ್ನು ನುಡಿಸಿ ವಾದ್ಯ-ಮೇಳಕ್ಕೆ ಗೌರವವನ್ನು ಸಲ್ಲಿಸಿತು.[೧೧೮]
ದಿ ಡಿಯೊ ಇಯರ್ಸ್ ಮತ್ತು ಹೆವೆನ್ ಆಂಡ್ ಹೆಲ್ (2006-ಇಂದಿನವರೆಗೆ)
[ಬದಲಾಯಿಸಿ]ಇಸವಿ 2006ರಲ್ಲಿ ಓಜ್ಜೀ ಆಸ್ಬಾರ್ನ್ ಹೊಸ ಏಕವ್ಯಕ್ತಿಯ (ಸೊಲೊ) ಆಲ್ಬಮ್‌ನೊಂದಿಗೆ ನಿರತರಾಗಿದ್ದಾಗ, ರೋನಿ ಜೇಮ್ಸ್ ಡಿಯೊರನ್ನು ಒಳಗೊಂಡಿದ್ದ ನಾಲ್ಕೂ ಬ್ಲ್ಯಾಕ್ ಸಬ್ಬತ್ ಬಿಡುಗಡೆಗಳಿಂದ ಆಯ್ದ ಹಾಡುಗಳ ಸಂಗ್ರಹ 'ದಿ ಡಿಯೊ ಇಯರ್ಸ್ ' ಆಲ್ಬಮ್‌ನ್ನು ರೈನೋ ರೆಕಾರ್ಡ್ಸ್ ಬಿಡುಗಡೆಗೊಳಿಸಿತು. ಈ ಬಿಡುಗಡೆಗಾಗಿ, ಮೂರು ಹೊಸ ಹಾಡುಗಳನ್ನು ರಚಿಸಿ, ಧ್ವನಿ ಮುದ್ರಣ ಮಾಡಲು, ಐಯೋಮಿ, ಬಟ್ಲರ್, ಡಿಯೊ ಮತ್ತು ಅಪ್ಪೀಸ್ ಮೂವರೂ ಪುನಃ ಒಟ್ಟಿಗೆ ಸೇರಿದರು.
ದಿನಾಂಕ 3 ಏಪ್ರಿಲ್ 2007ರಂದು ದಿ ಡಿಯೊ ಇಯರ್ಸ್ ಬಿಡುಗಡೆಯಾಯಿತು. ಬಿಲ್ಬೋರ್ಡ್ 200 ಪಟ್ಟಿಯಲ್ಲಿ ಇದು 54ನೆಯ ಸ್ಥಾನ ಗಳಿಸಿತು. ಏಕಗೀತೆ 'ದಿ ಡೆವಿಲ್ ಕ್ರೈಡ್' ಮೇನ್‌ಸ್ಟ್ರೀಮ್ ರಾಕ್ ಟ್ರ್ಯಾಕ್ಸ್ ಪಟ್ಟಿಯಲ್ಲಿ 37ನೆಯ ಸ್ಥಾನ ಗಳಿಸಿತು.[೪೦] ಈ ರೀತಿಯ ಫಲಿತಾಂಶಗಳಿಂದ ಸಂತಸಗೊಂಡು, ಒಂದು ವಿಶ್ವ ಪ್ರದರ್ಶನ ಪ್ರವಾಸಕ್ಕಾಗಿ ಐಯೋಮಿ ಮತ್ತು ಡಿಯೊ ಹೆವೆನ್ ಆಂಡ್ ಹೆಲ್ ಆಲ್ಬಮ್ ರಚಿಸಿದ ತಂಡದವರನ್ನು ಪುನಃ ಒಟ್ಟುಗೂಡಿಸಲು ನಿರ್ಧರಿಸಿದರು. ಆಸ್ಬಾರ್ನ್, ಬಟ್ಲರ್, ಐಯೋಮಿ ಮತ್ತು ವಾರ್ಡ್‌ರ ಗುಂಪನ್ನು ಇನ್ನೂ ಅಧಿಕೃತವಾಗಿ ಬ್ಲ್ಯಾಕ್ ಸಬ್ಬತ್ ಎನ್ನಲಾಗಿತ್ತು. ಆದರೂ, ಯಾವುದೇ ಗೊಂದಲಕ್ಕೆ ಆಸ್ಪದ ನೀಡದಿರಲು, ಹೊಸ ತಂಡವು ಅದೇ ಹೆಸರಿನ ಆಲ್ಬಮ್‌ನಂತೆಯೇ ಹೆವೆನ್ ಆಂಡ್ ಹೆಲ್ ಎಂಬ ಎಂದು ಸ್ವತಃ ಕರೆದುಕೊಳ್ಳಲು ಬಯಸಿತು. ಪ್ರವಾಸ ಹೊರಡುವ ಮುಂಚೆ, ಭಾಗವಹಿಸಬೇಕಿದ್ದ ಡ್ರಮ್-ವಾದಕ ಬಿಲ್ ವಾರ್ಡ್ ಹಾಗೂ ವಾದ್ಯಮೇಳದ ಕೆಲವು ಸದಸ್ಯರೊಂದಿಗೆ ಗಹನವಾದ ಭಿನ್ನಾಭಿಪ್ರಾಯಗಳು ಮೂಡಿಬಂದು, ತಂಡದಿಂದ ಕೈಬಿಡಲಾಯಿತು.[೧೧೯] ಇವರ ಸ್ಥಾನದಲ್ಲಿ ಮಾಜಿ ಡ್ರಮ್-ವಾದಕ ವಿನ್ನಿ ಅಪ್ಪೀಸ್‌ರನ್ನು ಸೇರಿಸಿಕೊಳ್ಳಲಾಯಿತು. ಇದರಿಂದಾಗಿ ಮಾಬ್ ರೂಲ್ಸ್ ಹಾಗೂ ಡೀಹ್ಯೂಮನೈಸರ್ ಆಲ್ಬಮ್‌ಗಳಲ್ಲಿ ಭಾಗವಹಿಸಿದ್ದ ತಂಡವು ಪುನಃ ಒಟ್ಟಿಗೆ ಸೇರಿದಂತಾಯಿತು.
'ಹೆವೆನ್ ಆಂಡ್ ಹೆಲ್' ತಂಡವು ಮೆಗಾಡೆಟ್ ಹಾಗೂ ಲ್ಯಾಮ್ ಆಫ್ ಗಾಡ್ ಎಂಬ ಆರಂಭಿಕ ಸಂಕಲನಗಳೊಂದಿಗೆ US ಪ್ರವಾಸ ನಡೆಸಿತು. ದಿನಾಂಕ 20 ಮಾರ್ಚ್ 2007ರಂದು ನ್ಯೂಯಾರ್ಕ್‌ನಲ್ಲಿ ಒಂದು ನೇರ ಪ್ರದರ್ಶನದ ಆಲ್ಬಮ್ ಮತ್ತು DVDಯನ್ನು ಧ್ವನಿಮುದ್ರಣ ಮಾಡಿತು. ಇದರ ಶೀರ್ಷಿಕೆ 'ಲೈವ್ ಫ್ರಮ್ ರೇಡಿಯೊ ಸಿಟಿ ಮ್ಯೂಸಿಕ್ ಹಾಲ್ '.
ನವೆಂಬರ್ 2007ರಲ್ಲಿ, ಈ ವಾದ್ಯಮೇಳವು ಒಂದು ಹೊಸ ಸ್ಟುಡಿಯೊ ಆಲ್ಬಮ್ ರೆಕಾರ್ಡ್ ಮಾಡುವ ಇಂಗಿತವನ್ನು ಡಿಯೊ ಖಚಿತಪಡಿಸಿದ.[೧೨೦] ತರುವಾಯ ವರ್ಷ ಈ ಹೊಸ ಆಲ್ಬಮ್‌ನ ಧ್ವನಿಮುದ್ರಣ ನಡೆಯಿತು. ಮುಂಬರುವ ಹೊಸ ಬಾಕ್ಸ್ ಸೆಟ್ ಬಿಡುಗಡೆ, ಹಾಗೂ, ಜುಡಾಸ್ ಪ್ರೀಸ್ಟ್, ಮೊಟಾರ್‌ಹೆಡ್ ಹಾಗೂ ಟೆಸ್ಟಾಮೆಂಟ್ ಕಲಾವಿದರೊಂದಿಗೆ ಮೆಟಲ್ ಮಾಸ್ಟರ್ಸ್ ಟೂರ್ ಪ್ರವಾಸ ಪ್ರದರ್ಶನದಲ್ಲಿ ಜತೆಗೂಡುವುದೆಂದು ವಾದ್ಯ-ಮೇಳವು ಏಪ್ರಿಲ್ 2008ರಲ್ಲಿ ಘೋಷಿಸಿತು.[೧೨೧] ದಿ ರೂಲ್ಸ್ ಆಫ್ ಹೆಲ್ ಬಾಕ್ಸ್ ಸಂಗ್ರಹವು,ಡಿಯೊ ಮುಂದಾಳತ್ವದ ಬ್ಲಾಕ್ ಸಬ್ಬತ್ ಆಲ್ಬಮ್‌ನ ಎಲ್ಲ ಹೊಸಮಾತೃಕೆಯ ಆವೃತ್ತಿಗಳನ್ನು ಹೊಂದಿದ್ದು, ಮೆಟಲ್ ಮಾಸ್ಟರ್ಸ್ ಟೂರ್ ಬೆಂಬಲಿಸಿತು. ಇಸವಿ 2009ರಲ್ಲಿ ವಾದ್ಯಮೇಳವು ತನ್ನ ಪ್ರಪ್ರಥಮ ಸ್ಟುಡಿಯೊ ಆಲ್ಬಮ್‌ಗೆ ದಿ ಡೆವಿಲ್ ಯು ನೋ ಎಂಬ ಶೀರ್ಷಿಕೆ ನೀಡಿತು. ಇದನ್ನು 28 ಏಪ್ರಿಲ್ 2009ರಂದು ಬಿಡುಗಡೆಗೊಳಿಸಲಾಯಿತು.[೧೨೨]
ವಾದ್ಯ-ಮೇಳದ ಹೆಸರನ್ನು ಐಯೋಮಿ ಅಕ್ರಮವಾಗಿ ತೆಗೆದುಕೊಂಡರೆಂದು ಐಯೋಮಿ ವಿರುದ್ಧ 26 ಮೇ 2009ರಂದು ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯದಲ್ಲಿ ಆಸ್ಬಾರ್ನ್ ಮೊಕದ್ದಮೆ ಹೂಡಿದ. ತಾವು ಈ ವಾದ್ಯ-ಮೇಳದ ನಲವತ್ತೊಂದು ವರ್ಷಗಳ ಕಾಲ ಸಕ್ರಿಯರಾಗಿದ್ದ ಏಕೈಕ ಸದಸ್ಯರೆಂದು ಐಯೋಮಿ ಹೇಳಿಕೊಂಡರು. 1980ರ ದಶಕದಲ್ಲಿ ವಾದ್ಯಮೇಳದಲ್ಲಿನ ತಮ್ಮ ಸಹಯೋಗಿಗಳು ಈ ಹಸರಿಗೆ ತಮ್ಮ ಹಕ್ಕುಗಳನ್ನು ತ್ಯಜಿಸಿದ್ದರು. ಹಾಗಾಗಿ ತಮಗೆ ವಾದ್ಯ-ಮೇಳದ ಹೆಸರಿನ ಮೇಲೆ ಸಂಪೂರ್ಣ ಹಕ್ಕುಗಳಿವೆಯೆಂದು ಐಯೋಮಿ ವಾದಿಸಿದರು. ಆದರೂ, ಈ ಮೊಕದ್ದಮೆಯಲ್ಲಿ ಆಸ್ಬಾರ್ನ್ ಈ ಟ್ರೇಡ್ಮಾರ್ಕ್‌ನಲ್ಲಿ 50%ರಷ್ಟು ಮಾಲೀಕತ್ವ ಕೋರಿ ದಾವೆ ಹೂಡಿದ್ದಾರೆ. ಈ ಮೊಕದ್ದಮೆಯ ವಿಚಾರಣೆಯು ವಾದ್ಯ-ಮೇಳದ ಎಲ್ಲಾ ನಾಲ್ಕೂ ಮೂಲ ಸದಸ್ಯರಲ್ಲಿ ಸಮಾನ ಮಾಲೀಕತ್ವ ದೊರಕಿಸಿಕೊಡುವುದೆಂದು ಆಸ್ಬಾರ್ನ್ ಆಶಿಸಿದ್ದಾರೆ.[೧೨೩]
'ಐ ಆಮ್ ಓಜ್ಜೀ' ಎಂಬ ತಮ್ಮ ಜೀವನಚರಿತ್ರೆಯನ್ನು ಉತ್ತೇಜಿಸುವಾಗ ನೀಡಿದ ಇತ್ತೀಚೆಗಿನ ಸಂದರ್ಶನಗಳಲ್ಲಿ, ತಂಡವು ಪುನಃ ಒಟ್ಟಿಗೆ ಸೇರುವುದನ್ನು ಅಲ್ಲಗಳೆಯದಿದ್ದರೂ, 'ಎಲ್ಲಾ ಮೂಲ ಸದಸ್ಯರ ಜತೆ ಪುನರ್ಮಿಲನವಾಗುವ' ಭರವಸೆಯನ್ನು ಆಸ್ಬಾರ್ನ್ ಹೊಂದಿರಲಿಲ್ಲ. ಓಜ್ಜೀ ಹೇಳುವರು, 'ತಂಡ ಪುನಃ ಒಟ್ಟಿಗೆ ಬರುವುದನ್ನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ, ಆದರೂ ಇದೀಗ ಅದಕ್ಕೆ ಅವಕಾಶವಿದೆ ಎಂದು ನನಗನಿಸುತ್ತಿಲ್ಲ. ನನ್ನ ಭವಿಷ್ಯದ ಬಗ್ಗೆ ಯಾರಿಗೆ ಗೊತ್ತು? ಅದು ನನ್ನ ಹಣೆಬರಹ ಅಂತಿದ್ರೆ, ಸರಿ." ಆಸ್ಬಾರ್ನ್ ಇದನ್ನು ಒಬ್ಬ ಹಳೆಯ ಗೆಳತಿಯ ಜತೆ ಪುನರ್ಮಿಲನಕ್ಕೆ ಹೋಲಿಸುತ್ತಾರೆ. 'ನಾನು ಯುವಕನಾಗಿದ್ದಾಗ, ನನಗೆ ಗೆಳತಿಯರಿದ್ದರು. ಆಗ ನಾನು, 'ಓಹ್, ನಾನು ನಿಜವಾಗಿಯೂ ಷರ್ಲೀಯೊಂದಿಗೆ ಪುನಃ ಸೇರಬಯಸುವೆ' ಎಂದು ಯೋಚಿಸಿ, ಅದಾದ ನಂತರ, 'ಛೆ! ನಾನೇನು ಯೋಚಿಸ್ತಿದ್ದೆ?' ಎಂದು ನಿಮಗೆ ನೀವೇ ಹೇಳಿಕೊಳ್ಳಬಹುದಲ್ಲವೆ?' [೧೨೪]
ಸಂಗೀತ ಶೈಲಿ
[ಬದಲಾಯಿಸಿ]ಬ್ಯ್ಲಾಕ್ ಸಬ್ಬತ್ ತನ್ನ ಸದಸ್ಯತ್ವ ಮತ್ತು ಶೈಲಿಗಳಲ್ಲಿ ಹಲವು ಬದಲಾವಣೆಗಳನ್ನು ಕಂಡರೂ ಸಹ, ಅವರ ಮೂಲ ಸಂಗೀತವು ಅಪಶಕುನ ಸೂಚಕ ಗೀತರಚನೆ ಮತ್ತು ವಿನಾಶಸೂಚಕ ಸಂಗೀತದ ಕಡೆ ಗಮನಹರಿಸಿತು.[೧೯] ಆಗಾಗ್ಗೆ ಇದು ಸಂಗೀತದ ಟ್ರೈಟೋನ್ ಅರ್ಥಾತ್ 'ಡೆವಿಲ್ಸ್ ಇಂಟರ್ವಲ್'ನ್ನು ಬಳಸಿಕೊಂಡಿತ್ತು.[೧೮] 1970ರ ದಶಕದ ಜನಪ್ರಿಯ ಸಂಗೀತಕ್ಕೆ ವಿರುದ್ಧವಾಗಿ, ಬ್ಲ್ಯಾಕ್ ಸಬ್ಬತ್‌ನ 'ಕರಾಳ' ಸಂಗೀತವು ಅಂದಿನ ರಾಕ್ ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿತು.[೨೨] ಹೆವಿ ಮೆಟಲ್ ಶೈಲಿಯ ತಮ್ಮ ಸಮಕಾಲೀನ ಅನೇಕ ಮುಂಚಿನ ವಾದ್ಯಮೇಳಗಳಂತೆಯೇ, ಈ ತಂಡದ ಹಾಡುಗಳು ರಾಕ್ ರೇಡಿಯೊದಲ್ಲಿ ಅಕ್ಷರಶಃ ಪ್ರಸಾರವಾಗುತ್ತಲೇ ಇರಲಿಲ್ಲ.[೧೨೫]
ಆಸ್ಬಾರ್ನ್ ಗಾಯನ ಮಧುರಗೀತೆಗಳನ್ನು, ಹಾಗೂ ಮಂದ್ರವಾದ್ಯ-ವಾದಕ ಗೀಜರ್ ಬಟ್ಲರ್ ಹಾಡುಗಳನ್ನು ಬರೆಯುತ್ತಿದ್ದರೆ, ವಾದ್ಯ-ಮೇಳದ ಪ್ರಮುಖ ಗೀತರಚನೆಕಾರ ಟೋನಿ ಐಯೋಮಿ ಬ್ಲ್ಯಾಕ್ ಸಬ್ಬತ್ ತಂಡದ ಬಹುತೇಕ ಸಂಗೀತಗಳನ್ನು ಸಂಯೋಜಿಸಿದರು. ಈ ಪ್ರಕ್ರಿಯೆಯು ಐಯೋಮಿಗೆ ಬಹಳ ಬೇಸರದ ಕೆಲಸವಾಯಿತು. ಏನಾದರೂ ಹೊಸತು ತರುವ ಒತ್ತಡಕ್ಕೆ ಅವರು ಒಳಗಾಗುತ್ತಿದ್ದರು. 'ನಾನೇನಾದರೂ ಹೊಸತು ತರಲಿಲ್ಲವೆಂದರೆ, ಯಾರೂ ಏನನ್ನೂ ಮಾಡಲಾಗುತ್ತಿರಲಿಲ್ಲ.' [೪೧] ನಂತರ, ಐಯೋಮಿಯವರ ಪ್ರಭಾವದ ಕುರಿತು ಆಸ್ಬಾರ್ನ್ ಹೀಗೆ ಹೇಳಿದರು:
Black Sabbath never used to write a structured song. There'd be a long intro that would go into a jazz piece, then go all folky... and it worked. Tony Iommi—and I have said this a zillion times—should be up there with the greats. He can pick up a guitar, play a riff, and you say, 'He's gotta be out now, he can't top that.' Then you come back, and I bet you a billion dollars, he'd come up with a riff that'd knock your fucking socks off.[೧೨೬]
ಆರಂಭದಲ್ಲಿ, ಬ್ಲ್ಯಾಕ್ ಸಬ್ಬತ್ ಆಲ್ಬಮ್‌ಗಳು ಶ್ರುತಿ ತಗ್ಗಿಸಿದ ಗಿಟಾರ್‌ಗಳನ್ನು ಒಳಗೊಂಡಿದ್ದವು. ಇದು ಅವರ ಸಂಗೀತಕ್ಕೆ 'ಕರಾಳ ಭಾವನೆ' ನೀಡುತ್ತಿತ್ತು.[೨೨] ಇಸವಿ 1966ರಲ್ಲಿ, ಬ್ಲ್ಯಾಕ್ ಸಬ್ಬತ್ ರಚನೆಯಾಗುವ ಮೊದಲು, ಲೋಹದ ಹಾಳೆ ಉತ್ಪಾದನಾ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಗಿಟಾರ್ ವಾದಕ ಟೋನಿ ಐಯೊಮಿ ಅಪಘಾತವೊಂದರಲ್ಲಿ ತಮ್ಮ ಬಲಗೈಯ ಎರಡು ಬೆರಳುಗಳ ತುದಿ ಕುಯ್ದುಹೋಗಿತ್ತು. ಐಯೋಮಿ ಬಹುಶಃ ಸಂಗೀತದ ಆಸೆ ಬಿಟ್ಟಿದ್ದರು, ಆದರೆ ಅವರ ಸ್ನೇಹಿತರೊಬ್ಬರು ಅವರಿಗೆ ಜಾಂಗೊ ರೇನ್ಹಾರ್ಟ್‌ರ ಜ್ಯಾಝ್ ಸಂಗೀತವನ್ನು ಆಲಿಸಲು ಹೇಳಿದರು. ಜಾಂಗೋ ಸಹ ತಮ್ಮ ಎರಡು ಬೆರಳುಗಳನ್ನು ಕಳೆದುಕೊಂಡು ಗಿಟಾರ್ ನುಡಿಸುವವರಾಗಿದ್ದರು.[೧೨೭] ಜಾಂಗೊ ರೇನ್ಹಾರ್ಟ್‌ರಿಂದ ಸ್ಫೂರ್ತಿ ಪಡೆದ ಐಯೋಮಿ, ಕುಯ್ದುಹೋದ ಬೆರಳತುದಿಗಳಿಗೆ ಪ್ಲ್ಯಾಸ್ಟಿಕ್ ಮತ್ತು ತೊಗಲಿನ ಬೆರಳುಟೋಪಿಗಳನ್ನು ಧರಿಸಲಾರಂಭಿಸಿದರು. ಗಿಟಾರ್-ವಾದಕ ಐಯೋಮಿ ಇನ್ನೂ ತೆಳುವಾದ ತಂತಿಗಳನ್ನು ಬಳಸಿ, ತಮ್ಮ ಕೃತಕ ಅವಯವಗಳಿಗೆ ಹೊಂದಿಕೊಳ್ಳುವಂತೆ ಗಿಟಾರಿನ ತಂತಿಗಳನ್ನು ಪರಿವರ್ತಿಸಿದರು. ಇದರಿಂದಾಗಿ ಸಂಗೀತಕ್ಕೆ ಪ್ರಮಾದವಶಾತ್ ಕರಾಳತೆಯ ಛಾಪು ನೀಡಿತು.[೧೨೭] ವಾದ್ಯ-ಮೇಳದ ಇತಿಹಾಸದ ಆರಂಭದಲ್ಲಿ ಐಯೋಮಿ C# ಶೃತಿ, ಅಥವಾ 'ಮೂರು ಸೆಮಿಟೋನ್ ಇಳಿಸುವಿಕೆ' ಸೇರಿದಂತೆ ವಿವಿಧ ರೂಪದ ತಗ್ಗಿಸಿದ ಶ್ರುತಿಗಳೊಂದಿಗೆ ಪ್ರಯೋಗಗಳನ್ನು ನಡೆಸಿದರು. ನಂತರ ಅವರು E♭ ಶೃತಿ, ಅಥವಾ ಪ್ರಮಾಣಿತ ಶೃತಿಗಿಂತ ಅರ್ಧ ಹೆಜ್ಜೆ ಕಡಿಮೆಯ ಶೃತಿಯನ್ನು ಆಯ್ದುಕೊಂಡರು.[೧೨೮]
ಪರಂಪರೆ
[ಬದಲಾಯಿಸಿ]ಬ್ಲ್ಯಾಕ್ ಸಬ್ಬತ್ ವಿವಾದಾತೀತವಾಗಿ ಸರ್ವಕಾಲಿಕವಾಗಿ ಅತ್ಯಂತ ಪ್ರಭಾವೀ ಹೆವಿ ಮೆಟಲ್ ವಾದ್ಯಮೇಳವಾಗಿದೆ. ಪ್ಯಾರನಾಯ್ಡ್ ನಂತಹ ಮಹತ್ವದ ಆಲ್ಬಮ್‌ನ ಬಿಡುಗಡೆಯೊಂದಿಗೆ ಅಂತಹ ಶೈಲಿಯನ್ನು ಸೃಷ್ಟಿಸಲು ಈ ವಾದ್ಯ-ಮೇಳವು ನೆರವಾಯಿತು. 'ಪ್ಯಾರನಾಯ್ಡ್ ಸಂಗೀತ ಲೋಕವನ್ನೇ ಬದಲಾಯಿಸಿತು ಎಂದು ರೋಲಿಂಗ್ ಸ್ಟೋನ್ ನಿಯತಕಾಲಿಕ ಬಣ್ಣಿಸಿತು.ಬ್ಯಾಂಡ್‌ನ್ನು [೧೨೯] ಹೆವಿ ಮೆಟಲ್ ಶೈಲಿಯ ಬೀಟಲ್ಸ್ ಎಂದೂ ಕರೆಯಿತು.[೧೩೦] ಪ್ಯಾರನಾಯ್ಡ್ ನ್ನು 'ಹೆವಿ ಮೆಟಲ್ ಶೈಲಿಯ ಉಗಮಸ್ಥಾನ' ಎಂದು ಬಣ್ಣಿಸಿದ ಟೈಮ್ ಮ್ಯಾಗಜೀನ್ ತಮ್ಮ ಸರ್ವಕಾಲಿಕ ಟಾಪ್ 100 ಆಲ್ಬಮ್‌ಗಳಲ್ಲಿ ಸೇರಿಸಿಕೊಂಡಿತು.[೧೩೧] ತಮ್ಮ ಟಾಪ್ ಟೆನ್ ಹೆವಿ ಮೆಟಲ್ ವಾದ್ಯ-ಮೇಳಗಳಲ್ಲಿ [೧೩೨] MTV ಮೊದಲ ಸ್ಥಾನವನ್ನು ಬ್ಲ್ಯಾಕ್ ಸಬ್ಬತ್‌ಗೆ ನೀಡಿತು. 100 ಗ್ರೇಟೆಸ್ಟ್ ಆರ್ಟಿಸ್ಟ್ಸ್ ಆಫ್ ಹಾರ್ಡ್ ರಾಕ್ ಪಟ್ಟಿಯಲ್ಲಿ VH1 ಬ್ಲ್ಯಾಕ್ ಸಬ್ಬತ್‌ಗೆ ಎರಡನೆಯ ಸ್ಥಾನ ನೀಡಿತು.[೧೩೩] ತಮ್ಮ 40 ಗ್ರೇಟೆಸ್ಟ್ ಮೆಟಲ್ ಸಾಂಗ್ಸ್ ಗಣನೆಯಲ್ಲಿ VH1, ಬ್ಲ್ಯಾಕ್ ಸಬ್ಬತ್‌ದ 'ಐರನ್ ಮ್ಯಾನ್'ಗೆ ಮೊದಲ ಹಾಡಿನ ಸ್ಥಾನ ನೀಡಿತು. [೧೩೪] ಆಲ್‌ಮ್ಯೂಸಿಕ್‌ನ ವಿಲಿಯಮ್ ರುಹ್ಲ್‌ಮನ್ ಹೀಗೆ ಹೇಳಿದರು:
Black Sabbath has been so influential in the development of heavy metal rock music as to be a defining force in the style. The group took the blues-rock sound of late '60s acts like Cream, Blue Cheer, and Vanilla Fudge to its logical conclusion, slowing the tempo, accentuating the bass, and emphasising screaming guitar solos and howled vocals full of lyrics expressing mental anguish and macabre fantasies. If their predecessors clearly came out of an electrified blues tradition, Black Sabbath took that tradition in a new direction, and in so doing helped give birth to a musical style that continued to attract millions of fans decades later.[೨೨]
ಪ್ರಭಾವ ಮತ್ತು ನಾವೀನ್ಯ
[ಬದಲಾಯಿಸಿ]ಹೆವಿ ಮೆಟಲ್ ಶೈಲಿಯ ಸಂಗೀತದ ಮೇಲೆ ಬ್ಲ್ಯಾಕ್ ಸಬ್ಬತ್‌ನ ಪ್ರಭಾವಕ್ಕೆ ಯಾವುದೇ ಸರಿಸಾಟಿಯಿಲ್ಲ. ಮೆಟಾಲಿಕಾ,[೧೧] ಐರನ್ ಮೇಡೆನ್,[೧೩೫] ಸ್ಲೇಯರ್,[೧೧] ಡೆತ್,[೧೧] ಕೋರ್ನ್,[೧೧] ಮೇಹೆಮ್,[೧೧] ವೆನೊಮ್,[೧೧] ಅಲೀಸ್ ಇನ್ ಚೇನ್ಸ್, ಆಂತ್ರ್ಯಾಕ್ಸ್, ಡಿಸ್ಟರ್ಬ್ಡ್, ಐಸ್ಡ್ ಅರ್ಥ್, ಮೆಲ್ವಿನ್ಸ್, ಓಪೆತ್,[೧೩೬] ಪ್ಯಾಂಟೆರಾ,[೧೧] ಮೆಗಾಡೆಟ್,[೧೩೭] ದಿ ಸ್ಮ್ಯಾಷಿಂಗ್ ಪಂಪ್ಕಿನ್ಸ್,[೧೩೮] ಸ್ಲಿಪ್‌ನಾಟ್,[೧೩೯] ಫೂ ಫೈಟರ್ಸ್,[೧೪೦] ಫಿಯರ್ ಫ್ಯಾಕ್ಟರಿ,[೧೪೧] ಕ್ಯಾಂಡ್ಲ್‌ಮಾಸ್,[೧೪೨] ಹಾಗೂ ಗಾಡ್‌ಸ್ಮ್ಯಾಕ್ ಸೇರಿದಂತೆ ಹಲವು ಅಸಂಖ್ಯಾತ ವಾದ್ಯ-ಮೇಳಗಳು ಬ್ಲ್ಯಾಕ್ ಸಬ್ಬತ್ ಅತ್ಯಂತ ಪ್ರಭಾವಶಾಲಿ ಎಂದು ಉದಾಹರಿಸಿವೆ.[೧೪೩] ಎರಡು ಪ್ರಮುಖ ಗೌರವ-ಸೂಚೀ ಆಲ್ಬಮ್‌ಗಳು ಬಿಡುಗಡೆಯಾಗಿವೆ. ಅವು ನೇಟಿವಿಟಿ ಇನ್ ಬ್ಲ್ಯಾಕ್ ವಾಲ್ಯೂಮ್ 1 & 2 . ಸೆಪಲ್ಚುರಾ, ವೈಟ್ ಜೊಂಬೀ, ಟೈಪ್ ಓ ನೆಗಟೀವ್, ಫೇತ್ ನೋ ಮೋರ್, ಮೆಷೀನ್ ಹೆಡ್, ಸಿಸ್ಟಮ್ ಆಫ್ ಎ ಡೌನ್ ಹಾಗೂ ಮಾನ್ಸ್ಟರ್ ಮ್ಯಾಗ್ನೆಟ್ ಪ್ರಥಮ ದ್ವನಿಮುದ್ರಣಗಳೂ ಸೇರಿವೆ.
ಇಸವಿ 2006ರಲ್ಲಿ ಮೆಟಾಲಿಕಾದ ಲಾರ್ಸ್ ಉಲ್ರಿಕ್, ಹಾಗೂ ಅವರ ಸಹಯೋಗಿ ಜೇಮ್ಸ್ ಹೆಟ್ಫೀಲ್ಡ್, ಬ್ಲ್ಯಾಕ್ ಸಬ್ಬತ್‌ನ್ನು ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್‌ನಲ್ಲಿ ಸೇರಿಸಿಕೊಂಡರು. 'ಬ್ಲ್ಯಾಕ್ ಸಬ್ಬತ್ ಎಂದಿಗೂ ಹೆವಿ ಮೆಟಲ್ ಸಂಗೀತದ ಸಮಾನಾರ್ಥಕವಾಗಿದೆ' ಎಂದು ಲಾರ್ಸ್ ಉಲ್ರಿಕ್ ಹೇಳಿದರು.[೧೪೪] 'ಸಬ್ಬತ್ ತಂಡದ ಕೇಡನ್ನು ಧ್ವನಿಸುವ ಸಂಗೀತ ನನ್ನನ್ನು ಆಕರ್ಷಿಸಿತು. ಅದು ನನ್ನಲ್ಲಿ ಅಚ್ಚಳಿಯದೇ ಉಳಿದಿದೆ. ಟೋನಿ ಐಯೋಮಿ ಈ ರೀತಿಯ ಶೈಲಿಯ ಸಾಮ್ರಾಟ' ಎಂದು ಜೇಮ್ಸ್ ಹೆಟ್ಫೀಲ್ಡ್ ಹೇಳಿದರು.[೧೪೫] ಪ್ಯಾರನಾಯ್ಡ್ ಆಲ್ಬಮ್ ಕುರಿತು ಗನ್ಸ್ ಎನ್ ರೋಸಸ್ ತಂಡದ ಮಾಜಿ ಗಿಟಾರ್-ವಾದಕ ಸ್ಲ್ಯಾಷ್ ಹೇಳಿದ್ದು ಹೀಗೆ: 'ಈ ಇಡೀ ರೆಕಾರ್ಡ್ ಕುರಿತು ಅದೇನೊ ವಿಶೇಷತೆಯಿದೆ - ನೀವು ಸಣ್ಣ ಮಗುವಾಗಿದ್ದಾಗ ಈ ಹಾಡನ್ನು ಕೇಳಿದರೆ ಅದು ಇಡೀ ಭಿನ್ನ ಪ್ರಪಂಚದ ರೀತಿ ಕಾಣುತ್ತದೆ.
ಅದು ಇನ್ನೊಂದು ಆಯಾಮಕ್ಕೆ ನಿಮ್ಮ ಮನವನ್ನು ತೆರೆಯುತ್ತದೆ... ಪ್ಯಾರನಾಯ್ಡ್ ಎಂಬುದು ಒಂದು ಪರಿಪೂರ್ಣ ಸಬ್ಬತ್ ಅನುಭವವಾಗಿದೆ. ಆ ಸಮಯದಲ್ಲಿ ಸಬ್ಬತ್ ಧ್ಯೇಯವೇನೆಂಬುದನ್ನು ಸೂಚಿಸುತ್ತದೆ. ಟೋನಿಯವರ ಗಿಟಾರ್ ನುಡಿಸುವ ಶೈಲಿ - ಅದು 'ಪ್ಯಾರನಾಯ್ಡ್' ಅಥವಾ 'ಹೆವೆನ್ ಆಂಡ್ ಹೆಲ್'ನಿಂದ ಹೊರತಾಗಿದ್ದರೂ, ಅದು ಬಹಳ ವಿಭಿನ್ನವಾಗಿದೆ."[೧೪೫]
ಆಂತ್ರ್ಯಾಕ್ಸ್ ಗಿಟಾರ್-ವಾದಕ ಸ್ಕಾಟ್ ಇಯಾನ್ ಹೇಳಿದ್ದು, "ನಾನು ನೀಡುವ ಪ್ರತಿಯೊಂದು ಸಂದರ್ಶನದಲ್ಲಿಯೂ 'ನಿಮ್ಮ ಅತಿ ನೆಚ್ಚಿನ ಐದು ಮೆಟಲ್ ಆಲ್ಬಮ್‌ಗಳು ಯಾವುವು?' ಎಂಬ ಪ್ರಶ್ನೆ ಕೇಳಲಾಗುತ್ತದೆ. ಮೊದಲ ಐದು ಸಬ್ಬತ್ ಆಲ್ಬಮ್‌ಗಳು ಎಂದು ಉತ್ತರಿಸಿ ನನ್ನ ಕೆಲಸ ಸುಲಭವಾಗಿಸಿಕೊಳ್ಳುತ್ತೇನೆ."[೧೪೫] ಲ್ಯಾಮ್ ಆಫ್ ಗಾಡ್ನ ಕ್ರಿಸ್ ಆಡ್ಲರ್ ಹೇಳಿದ್ದು: "ತಾವು ಬ್ಲ್ಯಾಕ್ ಸಬ್ಬತ್ ತಂಡದ ಸಂಗೀತದಿಂದ ಪ್ರಭಾವಿತರಾಗಿಲ್ಲವೆಂದು ಹೆವಿ ಮೆಟಲ್ ನುಡಿಸುವ ಕಲಾವಿದರು ಯಾರಾದರೂ ಹೇಳಿದ್ದಲ್ಲಿ, ಅವರು ನಿಮಗೆ ಸುಳ್ಳು ಹೇಳುತ್ತಿದ್ದಾರೆಂದು ನಾನು ಯೋಚಿಸುತ್ತೇನೆ. ಎಲ್ಲಾ ಹೆವಿ ಮೆಟಲ್ ಶೈಲಿಯ ಸಂಗೀತವು ಬ್ಲ್ಯಾಕ್ ಸಬ್ಬತ್ ಸಂಗೀತ ರಚನೆಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿತವಾಗಿದ್ದವು."[೧೪೬]
ಹೆವಿ ಮೆಟಲ್ ಶೈಲಿಯ ಸಂಗೀತದ ಹರಿಕಾರರಾಗಿದ್ದಲ್ಲದೆ, ಸ್ಟೋನರ್ ರಾಕ್,[೧೪೭] ಸ್ಲಜ್ ಮೆಟಲ್,[೧೪೮][೧೪೯] ಬ್ಲ್ಯಾಕ್ ಮೆಟಲ್ ಹಾಗೂ ಡೂಮ್ ಮೆಟಲ್‌ನಂತಹ ಉಪ-ಶೈಲಿಗಳಿಗೆ ಬ್ಲ್ಯಾಕ್ ಸಬ್ಬತ್ ಅಡಿಪಾಯ ಹಾಕಿದ ಹಿರಿಮೆಗೆ ಪಾತ್ರವಾಗಿದೆ.
ಗಾತ್ ಸಂಗೀತವನ್ನು ಒಂದು ಶೈಲಿಯಾಗಿಸುವುದರಲ್ಲಿ ಸಬ್ಬತ್ ತಂಡದವರು ಮೊದಲಿಗರಾಗಿದ್ದರು.[೧೫೦]
ಸದಸ್ಯರು
[ಬದಲಾಯಿಸಿ]- ಪ್ರಸ್ತುತ ತಂಡ
- ಓಜ್ಜೀ ಆಸ್ಬಾರ್ನ್ – ಮುಖ್ಯ ಗಾಯನ, ಹಾರ್ಮೊನಿಕಾ (1968–1979, 1985, 1994, 1997–2006)
- ಟೋನಿ ಐಯೋಮಿ – ಮುಖ್ಯ ಗಿಟಾರ್, ಕೀಬೋರ್ಡ್ಗಳು, ಕೊಳಲು(1968–2006)
- ಗೀಜರ್ ಬಟ್ಲರ್ – ಮಂದ್ರವಾದ್ಯ, ಸಂಯೋಜಕಗಳು (1968–1985, 1990–1994, 1997–2006)
- ಬಿಲ್ ವಾರ್ಡ್ – ಡ್ರಮ್, ತಾಳವಾದ್ಯ (1968–1980, 1983-1985, 1994, 1997–2006)
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]
|
|
ಟಿಪ್ಪಣಿಗಳು
[ಬದಲಾಯಿಸಿ]- ↑ Fletcher, Gordon (Feb 14, 1974). "Rolling Stone review of Sabbath Bloody Sabbath 1974". Archived from the original on 2007-12-30. Retrieved 2009-01-24.
- ↑ ೨.೦ ೨.೧ Huey, Steve. "AMG Paranoid Review". Allmusic.com. Retrieved 2008-02-11.
- ↑ "Greatest Metal Artists of All Time". MTV. Archived from the original on 2008-03-19. Retrieved 2008-03-29.
- ↑ [೧]
- ↑ "RIAA Top Selling Artists". Retrieved 2009-02-07.
- ↑ ರೋಲಿಂಗ್ ಸ್ಟೋನ್ ಎನ್ಸೈಕ್ಲೊಪೀಡಿಯಾ ಆಫ್ ರಾಕ್ ಅಂಡ್ ರೋಲ್, 3ನೆಯ ಆವೃತ್ತಿ, 2001, ರೋಲಿಂಗ್ ಸ್ಟೋನ್ ಪ್ರೆಸ್, U.S. ಪುಟ.1028
- ↑ ""Heavy Metal"". Seven Ages of Rock. 2009-03-05. 8 minutes in. Yesterday.
- ↑ Osbourne, Ozzy; Ayres, Chris, I Am Ozzy, Grand Central Publishing, p. 63, ISBN 0446569895
- ↑ Dwyer, Robert. "Black Sabbath Live Project - Beginnings". Sabbathlive.com. Archived from the original on 2008-01-20. Retrieved 2007-12-09.
{{cite web}}
: CS1 maint: bot: original URL status unknown (link) - ↑ Siegler, Joe. "Black Sabbath Online: Band Lineup History". Blacksabbath.com. Archived from the original on 2007-10-20. Retrieved 2007-12-09.
- ↑ ೧೧.೦ ೧೧.೧ ೧೧.೨ ೧೧.೩ ೧೧.೪ ೧೧.೫ ೧೧.೬ ೧೧.೭ Gill, Chris (December 2008). "The Eternal Idol". Guitar World.
- ↑ "Melody Maker 1968-12-21". Melody Maker Magazine. Archived from the original on 2007-06-04. Retrieved 2008-02-14.
{{cite web}}
: Italic or bold markup not allowed in:|publisher=
(help) - ↑ Rosen 1996, p. 34
- ↑ "Ozzy Osbourne: The Godfather of Metal". NYRock.com. June 2002. Archived from the original on 2013-10-31. Retrieved 2008-02-14.
- ↑ Charles Strong, Martin (2006). The Essential Rock Discography. Vol. 1 (8 ed.). Canongate. p. 97. ISBN 1841958603.
{{cite book}}
:|access-date=
requires|url=
(help) - ↑ Wilson, Dave (2004). Rock Formations: Categorical Answers to How Band Names Were Formed. Cidermill Books. p. 51. ISBN 0974848352.
{{cite book}}
:|access-date=
requires|url=
(help) - ↑ ಓಜ್ಜೀ ಆಸ್ಬಾರ್ನ್: ಬಿಹೈಂಡ್ ದಿ ಮ್ಯೂಸಿಕ್ ಬೈ VH1; ಮೊದಲ ಬಾರಿ ಪ್ರಸಾರವಾದದ್ದು 1998-04-19ರಂದು.
- ↑ ೧೮.೦ ೧೮.೧ R. Lewis, James (2001). Satanism today: an encyclopedia of religion, folklore, and popular culture. ABC-CLIO. p. 72. ISBN 1576072924.
{{cite book}}
:|access-date=
requires|url=
(help) - ↑ ೧೯.೦ ೧೯.೧ Torreano, Bradley. "Song Review: Black Sabbath". Allmusic. Macrovision. Retrieved 2009-04-23.
- ↑ Koskoff, Ellen (2005). "Popular Musics". Music Cultures in the United States. Routledge. p. 356. ISBN 0415965896.
- ↑ ೨೧.೦೦ ೨೧.೦೧ ೨೧.೦೨ ೨೧.೦೩ ೨೧.೦೪ ೨೧.೦೫ ೨೧.೦೬ ೨೧.೦೭ ೨೧.೦೮ ೨೧.೦೯ ೨೧.೧೦ ೨೧.೧೧ ೨೧.೧೨ Sharpe-Young, Garry. "MusicMight.com Black Sabbath Biography". MusicMight.com.
- ↑ ೨೨.೦೦ ೨೨.೦೧ ೨೨.೦೨ ೨೨.೦೩ ೨೨.೦೪ ೨೨.೦೫ ೨೨.೦೬ ೨೨.೦೭ ೨೨.೦೮ ೨೨.೦೯ ೨೨.೧೦ ೨೨.೧೧ ೨೨.೧೨ ೨೨.೧೩ ೨೨.೧೪ ೨೨.೧೫ ೨೨.೧೬ ೨೨.೧೭ ೨೨.೧೮ Ruhlmann, William. ""AMG Biography"". Allmusic. Retrieved 2008-02-14.
- ↑ ೨೩.೦ ೨೩.೧ ೨೩.೨ ""Rolling Stone Biography"". RollingStone.com. Archived from the original on 2008-02-22. Retrieved 2008-02-14.
- ↑ Bangs, Lester (1970). "Black Sabbath Album Review". Rolling Stone Magazine #66, May 1970. Archived from the original on 2007-12-11. Retrieved 2008-02-14.
{{cite web}}
: Italic or bold markup not allowed in:|publisher=
(help); Unknown parameter|month=
ignored (help) - ↑ ಬ್ಲ್ಯಾಕ್ ಸಬ್ಬತ್ ಆಲ್ಬಮ್, ಇನ್ಸೈಡ್ ಬುಕ್ ಡೀಟೇಲ್ಸ್, ರಿ-ರಿಲೀಸ್, ಕಾಂಪ್ಯಾಕ್ಟ್ ಡಿಸ್ಕ್ ಆವೃತ್ತಿ
- ↑ "RIAA Gold & Platinum database -Black Sabbath". Archived from the original on 2012-06-23. Retrieved 2009-02-22.
- ↑ "Certified Awards". British Phonographic Industry. Archived from the original on 2012-05-04. Retrieved 2009-04-23.
- ↑ Rosen 1996, p. 57
- ↑ "RIAA Gold & Platinum database-Paranoid". Archived from the original on 2012-03-02. Retrieved 2009-02-22.
- ↑ Rosen 1996, p. 63
- ↑ ೩೧.೦ ೩೧.೧ ೩೧.೨ "RIAA Gold & Platinum database-Master of Reality". Archived from the original on 2012-06-23. Retrieved 2009-02-22.
- ↑ Erlewine, Stephen Thomas. "AMG Master of Reality Review". Allmusic.com. Retrieved 2008-02-18.
- ↑ Levy, Joe (2006) [2005]. Rolling Stone The 500 Greatest Album of All Time (3rd ed.). London: Turnaround. ISBN 1932958614. OCLC 70672814.
{{cite book}}
:|access-date=
requires|url=
(help); Unknown parameter|coauthors=
ignored (|author=
suggested) (help) - ↑ Rosen 1996, p. 64-65
- ↑ Rosen 1996, p. 73
- ↑ Rosen 1996, p. 73-74
- ↑ Rosen 1996, p. 65
- ↑ ೩೮.೦ ೩೮.೧ "RIAA Gold & Platinum database-Vol. 4". Retrieved 2009-02-22.
- ↑ Huey, Steve. "AMG Volume 4 Review". Allmusic.com. Retrieved 2008-04-10.
- ↑ ೪೦.೦ ೪೦.೧ ೪೦.೨ ೪೦.೩ ೪೦.೪ ೪೦.೫ ೪೦.೬ ೪೦.೭ "Chart History". Billboard. Retrieved 29 November 2009.
- ↑ ೪೧.೦ ೪೧.೧ ೪೧.೨ Rosen 1996, p. 76
- ↑ Rosen 1996, p. 77
- ↑ Rosen 1996, p. 79
- ↑ Fletcher, Gordon (1974). "Sabbath, Bloody Sabbath Album Review". Rolling Stone Magazine #154, 14 February 1974. Archived from the original on 2007-12-30. Retrieved 2008-02-25.
{{cite web}}
: Italic or bold markup not allowed in:|publisher=
(help); Unknown parameter|month=
ignored (help) - ↑ Rivadavia, Eduardo. "Sabbath, Bloody Sabbath AMG Review". Allmusic.com. Retrieved 2008-02-25.
- ↑ "RIAA Gold & Platinum database-Sabbath Bloody Sabbath". Archived from the original on 2013-08-08. Retrieved 2009-02-22.
- ↑ Rosen 1996, p. 80
- ↑ Altman, Billy (1975). "Sabotage Album Review". Rolling Stone Magazine #196, 25 September 1975. Archived from the original on 2007-12-31. Retrieved 2008-02-25.
{{cite web}}
: Italic or bold markup not allowed in:|publisher=
(help); Unknown parameter|month=
ignored (help) - ↑ ೪೯.೦ ೪೯.೧ Prato, Greg. "Sabotage AMG Album Review". Allmusic.com. Retrieved 2008-03-20.
- ↑ "RIAA Gold & Platinum database-Sabotage". Archived from the original on 2015-09-24. Retrieved 2009-02-22.
- ↑ "RIAA Gold & Platinum Database-We Sold Our Soul for Rock 'n' Roll". Archived from the original on 2015-09-24. Retrieved 2009-02-22.
- ↑ ೫೨.೦ ೫೨.೧ Prato, Greg. "Technical Ecstasy AMG Review". Allmusic.com. Retrieved 2008-03-17.
- ↑ "RIAA Gold & Platinum database-Technical Ecstasy". Archived from the original on 2015-09-24. Retrieved 2009-02-22.
- ↑ ೫೪.೦ ೫೪.೧ ೫೪.೨ Rosen 1996, p. 93-94
- ↑ Rivadavia, Eduardo. "Never Say Die! AMG Review". Allmusic.com. Retrieved 2008-02-27.
- ↑ "RIAA Gold & Platinum database-Never Say Die!". Archived from the original on 2015-09-24. Retrieved 2009-02-22.
- ↑ Rosen 1996, p. 95
- ↑ Rosen 1996, p. 97
- ↑ Rosen 1996, p. 98
- ↑ "ಒಡಿಸ್ಸಿ ಆಫ್ ದಿ ಡೆವಿಲ್ ಹಾರ್ನ್ಸ್ - ಲೇಖಕರು: ಸ್ಟೀವ್ ಆಪ್ಲ್‌ಫೋರ್ಡ್". Archived from the original on 2007-11-22. Retrieved 2021-08-10.
- ↑ "ದಿ ಡೆವಿಲ್ಸ್ ಹಾರ್ನ್ಸ್: ಎ ರಾಕ್ ಅಂಡ್ ರೋಲ್ ಸಿಂಬಲ್". Archived from the original on 2014-02-22. Retrieved 2010-06-14.
- ↑ Prato, Greg. "AMG Heaven and Hell Review". Allmusic.com. Retrieved 2008-02-29.
- ↑ "RIAA Gold & Platinum database-Heaven and Hell". Archived from the original on 2015-09-24. Retrieved 2009-02-22.
- ↑ "Brief Reviews: New Films". New York Magazine. 14 (1). New York Media: 72. 5 January 1981. ISSN 0028-7369.
{{cite journal}}
:|access-date=
requires|url=
(help) - ↑ "Stadiums & Festivals". Billboard. 92 (32). Nielsen Business Media: 34. 9 August 1980. ISSN 0006-2510.
{{cite journal}}
:|access-date=
requires|url=
(help) - ↑ Rosen 1996, p. 104
- ↑ Rosen 1996, p. 111
- ↑ ೬೮.೦ ೬೮.೧ ೬೮.೨ Reesman, Bryan (1981). Mob Rules (Media notes). Burbank, ಕ್ಯಾಲಿಫೊರ್ನಿಯ: Warner Bros./Rhino. pp. 2–9.
{{cite AV media notes}}
:|format=
requires|url=
(help); Cite has empty unknown parameters:|albumlink=
and|notestitle=
(help); Unknown parameter|bandname=
ignored (help); Unknown parameter|publisherid=
ignored (help) - ↑ Considine, J. D. "Rolling Stone Mob Rules Review". RollingStone.com. Archived from the original on 2008-02-16. Retrieved 2008-02-29.
- ↑ Rivadavia, Eduardo. "AMG Mob Rules review". Allmusic.com. Retrieved 2008-02-29.
- ↑ "RIAA Gold & Platinum database-Mob Rules". Archived from the original on 2015-09-24. Retrieved 2009-02-22.
- ↑ Gilmour, Hugh (1983). Live Evil (Media notes). England: Gimcastle/Castle Communications. pp. 3–5.
{{cite AV media notes}}
:|format=
requires|url=
(help); Unknown parameter|bandname=
ignored (help); Unknown parameter|notestitle=
ignored (help); Unknown parameter|publisherid=
ignored (help) - ↑ Goodman, Dean (2006-10-26). "Black Sabbath reunites without Ozzy". News Limited. Archived from the original on 2008-12-07. Retrieved 2008-05-13.
- ↑ Rosen 1996, p. 118
- ↑ Rosen 1996, p. 107-108
- ↑ "RIAA Gold & Platinum database-Speak of the Devil". Archived from the original on 2015-09-24. Retrieved 2009-02-22.
- ↑ ೭೭.೦ ೭೭.೧ ೭೭.೨ ೭೭.೩ ೭೭.೪ ೭೭.೫ Thompson, Dave (2004). "As the Colors Fade". Smoke on the Water: The Deep Purple Story. ECW Press. pp. 233–239. ISBN 1550226185.
- ↑ Rivadavia, Eduardo. "AMG Born Again Review". Allmusic.com. Retrieved 2008-03-04.
- ↑ "From Jazz to Black Sabbath". AllAboutJazz.com. Retrieved 2008-03-02.
- ↑ ೮೦.೦ ೮೦.೧ "Geezer Butler Interview". ClassicRockRevisited.com. Archived from the original on 2006-08-29. Retrieved 2008-03-02.
- ↑ Kaufman, Gil (29 June 2005). "Live Aid: A Look Back at a Concert That Actually Changed the World". MTV News. MTV Networks. Archived from the original on 2010-07-14. Retrieved 2009-04-24.
- ↑ ೮೨.೦ ೮೨.೧ Rosen 1996, p. 123
- ↑ ೮೩.೦ ೮೩.೧ Rivadavia, Eduardo. "AMG Seventh Star Review". Allmusic.com. Retrieved 2008-03-05.
- ↑ Ann Vare, Ethlie (8 March 1986). "Sabbath's 'Seventh Star' Spotlights Iommi". Billboard. 98 (10). Los Angeles: Nielsen Business Media: 47. ISSN 0006-2510.
- ↑ Rosen 1996, p. 125
- ↑ Dwyer, Robert. "Sabbath Live Cancelled tourdates 1985". SabbathLive.com. Archived from the original on 2007-12-29. Retrieved 2008-03-05.
- ↑ "Sabbath Bloody Sabbath: The Battle for Black Sabbath, book details". Google Book Search. Google. Retrieved 2009-04-24.
- ↑ Drewett, Michael (2006). "The Cultural Boycott against Apartheid South Africa". Popular Music Censorship in Africa. Ashgate Publishing. p. 27. ISBN 0754652912.
- ↑ Rivadavia, Eduardo. "AMG Eternal Idol Review". Allmusic.com. Retrieved 2008-03-10.
- ↑ "Blender Eternal Idol Review". Blender.com. Retrieved 2008-03-10.
- ↑ ೯೧.೦ ೯೧.೧ Dwyer, Robert. "Sabbath Live Timeline 1980s". SabbathLive.com. Archived from the original on 2007-12-11. Retrieved 2008-03-10.
- ↑ ೯೨.೦ ೯೨.೧ ೯೨.೨ ೯೨.೩ Rosen 1996, p. 129
- ↑ Rivadavia, Eduardo. "Headless Cross AMG review". Allmusic.com. Retrieved 2008-03-10.
- ↑ Chrispell, James. "Tyr AMG review". Allmusic.com. Retrieved 2008-03-11.Chrispell, James. "Tyr AMG review". Allmusic.com. Retrieved 2008-03-11.
- ↑ Mitchell, Ben. "Tyr Blender review". Blender.com. Retrieved 2008-03-11.
- ↑ Dwyer, Robert. "Sabbath Live Timeline 1990s Cancelled shows". SabbathLive.com. Archived from the original on 2005-12-19. Retrieved 2008-03-11.
- ↑ Dwyer, Robert. "Sabbath Live Timeline 1990s". SabbathLive.com. Archived from the original on 2006-01-16. Retrieved 2008-03-11.
- ↑ ೯೮.೦ ೯೮.೧ "Blender Dehumanizer Review". Blender.com. Retrieved 2008-03-17.
- ↑ Rosen 1996, p. 128
- ↑ ೧೦೦.೦ ೧೦೦.೧ Wiederhorn, Jon. "Interview with Ronnie James Dio and Tony Iommi". Blabbermouth.net. Archived from the original on 2008-04-23. Retrieved 2008-03-17.
- ↑ "Revelation Z Magazine Dehumanizer Review". RevolutionZ.net. Retrieved 2008-03-17.
- ↑ Henderson, Tim. "Rob Halford Reminisces About Covering For OZZY!". BraveWords.com. Archived from the original on 2008-01-24. Retrieved 2008-03-17.
- ↑ ೧೦೩.೦ ೧೦೩.೧ Rosen 1996, p. 130
- ↑ Torreano, Bradley. "AMG Cross Purposes Review". Allmusic.com. Retrieved 2008-03-18.
- ↑ Rosen 1996, p. 51
- ↑ Rosen 1996, p. 131
- ↑ "Billboard Black Sabbath album chart history". Billboard.com. Archived from the original on 2008-06-03. Retrieved 2008-03-20.
- ↑ "Every Hit.com UK Black Sabbath album chart history". EveryHit.com. Retrieved 2008-03-20.
- ↑ Torreano, Bradley. "Allmusic Forbidden review". Allmusic.com. Retrieved 2008-03-20.
- ↑ Mitchell, Ben. "Blender Forbidden review". Blender.com. Retrieved 2008-03-20.
- ↑ Rivadavia, Eduardo. "AMG The 1996 DEP Sessions Review". Allmusic.com. Retrieved 2008-03-21.
- ↑ "Tony Martin.net Q&A". TonyMartin.net. Archived from the original on 2007-12-21. Retrieved 2008-03-20.
- ↑ "RIAA Gold & Platinum database-Reunion". Archived from the original on 2015-09-24. Retrieved 2009-02-22.
- ↑ "HEAVEN AND HELL Drummer: RONNIE JAMES DIO Is 'Singing Better Than He Has Ever Sung'". Blabbermouth.net. Archived from the original on 2008-06-02. Retrieved 2008-04-08.
- ↑ Saraceno, Christina. "Sabbath Scrap Disturbed Dates". RollingStone.com. Archived from the original on 2008-06-17. Retrieved 2008-04-08.
- ↑ ೧೧೬.೦ ೧೧೬.೧ "BLACK SABBATH Guitarist Says It's A 'Shame' The Band Didn't Complete New Studio Album". Blabbermouth.net. Retrieved 2008-04-08.
- ↑ Sprague, David. "Rock and Roll Hall of Fame 2006: Black Sabbath - Ozzy Osbourne recalls his band's heavy, scary journey". Rollingstone.com. Archived from the original on 2008-06-03. Retrieved 2008-04-08.
- ↑ "METALLICA: Video Footage Of BLACK SABBATH Rock Hall Induction, Performance Posted Online". Blabbermouth.net. Archived from the original on 2008-06-02. Retrieved 2008-04-08.
- ↑ Russell, Tom (20 February 2010). "Ward On Quitting Heaven & Hell: I Was Uncomfortable With Some Things Surrounding The Project". Blabbermouth. Archived from the original on 22 ಫೆಬ್ರವರಿ 2010. Retrieved 21 February 2010.
- ↑ Elliott, Mike. "Komodo Rock Talks With Ronnie James Dio". Komodorock.com. Retrieved 2008-04-08.
- ↑ "JUDAS PRIEST Frontman On 'Metal Masters' Tour: 'We Insisted On A Classic Metal Package'". Blabbermouth.net. Archived from the original on 2008-04-22. Retrieved 2008-04-25.
- ↑ Cohen, Jonathan (February 10, 2009). ""Heaven & Hell Feeling Devilish On New Album"". Billboard. Howard Appelbaum. Retrieved 2009-02-13.
{{cite web}}
: Cite has empty unknown parameter:|coauthors=
(help) - ↑ "Ozzy Osbourne sues over Black Sabbath name Accuses bandmate Tony Iommi of costing him merchandise royalties". MSNBC. AP. 2009-05-30. Archived from the original on 2009-06-02. Retrieved 2009-05-30.
{{cite news}}
: Cite has empty unknown parameter:|coauthors=
(help); line feed character in|title=
at position 43 (help) - ↑ "Ozzy: Sabbath not regrouping". Canoe. AP. 2010-01-25. Retrieved 2010-01-25.
{{cite news}}
: Cite has empty unknown parameter:|coauthors=
(help) - ↑ D. Barnet, Richard (2001). "Messages of Death". Controversies of the music industry. D. Fisher, Paul. Greenwood Publishing Group. pp. 87–88. ISBN 0313310947.
{{cite book}}
: Unknown parameter|coauthors=
ignored (|author=
suggested) (help) - ↑ Sprague, David. "Rock and Roll Hall of Fame 2006: Black Sabbath". Rollingstone.com. Retrieved 2008-04-25.
- ↑ ೧೨೭.೦ ೧೨೭.೧ Rosen 1996, p. 135
- ↑ "Tony Iommi interview". Archived from the original on 2009-03-05. Retrieved 2009-03-01.
- ↑ Diehl, Matt. "The Holy Sabbath". Rollingstone.com. Archived from the original on 2008-06-17. Retrieved 2008-04-25.
- ↑ "The Greatest Artists of All Time". Rollingstone.com. Archived from the original on 2008-06-17. Retrieved 2008-04-25.
- ↑ "All Time 100". Rollingstone.com. Archived from the original on 2010-06-17. Retrieved 2008-04-25.
- ↑ "BLACK SABBATH, JUDAS PRIEST And METALLICA Are 'Greatest Heavy Metal Bands Of All Time". Blabbermouth.net. Archived from the original on 2008-06-02. Retrieved 2008-04-25.
- ↑ "Rock the Net-VH1: 100 Greatest Hard Rock Artists". Retrieved 2009-04-09.
- ↑ "BLACK SABBATH's 'Iron Man' Tops VH1 List As the Greatest Metal Song of All Time". Blabbermouth.net. Archived from the original on 2011-06-06. Retrieved 2008-04-25.
- ↑ "IRON MAIDEN Bassist Talks About His Technique And Influences". Blabbermouth.net. Archived from the original on 2008-06-02. Retrieved 2008-04-25.
- ↑ "OPETH Pays Tribute To Classic Heavy Metal Artists". Blabbermouth.net. Archived from the original on 2007-09-12. Retrieved 2008-04-25.
- ↑ Turman, Katherine. "Black Sabbath - Bank One Ballpark, Phoenix, December 31, 1998". Rollingstone.com. Archived from the original on 2008-06-17. Retrieved 2008-04-25.
- ↑ ಡಿ ಪೆರ್ನಾ, ಅಲ್ಯಾನ್. "ಜೀರೊ ವರ್ಷಿಪ್", ಗಿಟಾರ್ ವರ್ಲ್ಡ್ . ಡಿಸೆಂಬರ್ 1995.
- ↑ "BLACK SABBATH Bassist: 'It's Great When Bands Cite Us As Their Influence". Blabbermouth.net. Archived from the original on 2011-08-10. Retrieved 2008-04-25.
- ↑ "HEAVEN AND HELL, MEGADETH Perform In Los Angeles; Photos Available". Blabbermouth.net. Archived from the original on 2011-08-11. Retrieved 2008-04-25.
- ↑ "Ex-FEAR FACTORY Axeman DINO CAZARES Talks Guitars". Blabbermouth.net. Archived from the original on 2008-06-02. Retrieved 2008-04-25.
- ↑ "Candlemass (Leif Edling) 02/04/2009". MetalObsession.net. Retrieved 2009-04-28.
- ↑ "GODSMACK'S Next Album Will Rock In A Bluesier Way". Blabbermouth.net. Archived from the original on 2011-09-29. Retrieved 2008-04-25.
- ↑ "METALLICA Induct BLACK SABBATH Into ROCK AND ROLL HALL OF FAME: Photos Available". Blabbermouth.net. Archived from the original on 2008-06-02. Retrieved 2008-04-25.
- ↑ ೧೪೫.೦ ೧೪೫.೧ ೧೪೫.೨ "Metal/Hard Rock Musicians Pay Tribute To BLACK SABBATH's 'Paranoid'". Blabbermouth.net. Archived from the original on 2008-06-02. Retrieved 2008-04-25.
- ↑ Morgan, Anthony. "LAMB OF GOD To Switch Record Labels For Non-U.S. Territories". Blabbermouth.net. Archived from the original on 2008-04-21. Retrieved 2008-04-25.
- ↑ Ratliff, Ben (June 22, 2000). "Rated R review". Rolling Stone. Archived from the original on ಡಿಸೆಂಬರ್ 3, 2007. Retrieved December 19, 2009.
- ↑ Huey, Steve. "Eyehategod". Allmusic. Retrieved 2009-12-31.
- ↑ ದಿ ನ್ಯೂ ಯಾರ್ಕ್ ಟೈಮ್ಸ್ , ಪಾಪ್/ಜಾಝ್ ಲಿಸ್ಟಿಂಗ್ಸ್, ಪುಟ 2, 5 ಅಕ್ಟೋಬರ್ 2007 [೨] 31 ಡಿಸೆಂಬರ್ 2009ರಂದು ಮರುಪಡೆದದ್ದು.
- ↑ ಸ್ಕಾರುಫಿ 2003, ಪು. 105, "ಬಹಳ ಪ್ರಭಾವೀ ಸಂಗೀತ ತಂಡವಾಗಿರುವ ಬ್ಲ್ಯಾಕ್ ಸಬ್ಬತ್ (2), ಹಾರ್ಡ್ ರಾಕ್ ಶೈಲಿಯ ಸಂಗೀತವನ್ನು ನುಡಿಸಲು ಅಗತ್ಯ ಕೌಶಲ್ಯಗಳ ಮಟ್ಟವನ್ನು ಇನ್ನೂ ತಗ್ಗಿಸಿತು. ಆದರೆ ಅವುಗಳ ವಿಕೃತ ಹಾಗೂ ಮೊಳಗುವ ಪುನರಾವರ್ತಿಸುವಂತಹ ಗೀತಭಾಗಗಳು, ಅವುಗಳ ರಾಕ್ಷಸಸ್ವರೂಪಿ ನೃತ್ಯಗಳು ಅವರ ಯುದ್ಧೋತ್ಸಾಹಿ ಲಯಗಳು, ಏಕತಾನತೆಯ ಹಾಡುಗಾರಿಕೆ ಹಾಗೂ ಅವುಗಳ ಭಯಾನಕ ಕಥಾವಸ್ತುಗಳು ಭವಿಷ್ಯದಲ್ಲಿ ವಿಶ್ವಾಸವಿರುವ ಮಧ್ಯಕಾಲೀನ ವಿಶ್ವದ ಮುನ್ನೋಟವನ್ನು ಪ್ರಚೋದಿಸಿತು, ಬ್ಲಾಕ್ ಮೆಟಲ್ ಮತ್ತು ಡೂಮ್ ಮೆಟಲ್ ಸಂಗೀತಗಳಿಗೆ ಅಡಿಪಾಯಗಳನ್ನು ಹಾಕಿತು .ತಂಡದ ವೈಶಿಷ್ಟ್ಯದ ಆಲ್ಬಮ್‌ಗಳಾದ ಪ್ಯಾರಾನಾಯ್ಡ್ (1971) ಮತ್ತು ಮಾಸ್ಟರ್ ಆಫ್ ರಿಯಾಲಿಟಿ (1971)ನಲ್ಲಿ ಮಧುರ ಸಂಗೀತವಾಗಲೀ ಅಥವಾ ಯಾವುದೇ ವಾದ್ಯಸಂಗೀತದ ಪ್ರಾವೀಣ್ಯವು ಅತ್ಯಲ್ಪ ಅಂಶಗಳಾಗಿದ್ದವು. ಅವರು ಗಾತಿಕ್ ಶೈಲಿಯ ಸಂಗೀತದ ಸೃಷ್ಟಿಕರ್ತರಾಗಿರಲಿಲ್ಲ, ಆದರೆ ಅದನ್ನು ಒಂದು ಶೈಲಿಯಾಗಿಸುವುದರಲ್ಲಿ ಅವರು ಮೊದಲಿಗರು."
ಆಕರಗಳು
[ಬದಲಾಯಿಸಿ]- Rosen, Steven (1996), The Story of Black Sabbath: Wheels of Confusion, Castle Communications, ISBN 1-86074-149-5
- Sharpe-Young, Garry (2006), Sabbath Bloody Sabbath: The Battle for Black Sabbath, Zonda Books, ISBN 0-9582684-2-8
- Scaruffi, Piero (2003). A History of Rock Music:1951-2000. ¡Universe, Inc. ISBN 0-595-29565-7.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 maint: bot: original URL status unknown
- CS1 errors: markup
- CS1 errors: access-date without URL
- CS1 errors: unsupported parameter
- CS1 errors: empty unknown parameters
- CS1 errors: format without URL
- CS1 errors: invisible characters
- Articles with hatnote templates targeting a nonexistent page
- Articles with hCards
- Commons category link from Wikidata
- 1960ರ ದಶಕದ ಸಂಗೀತ ತಂಡಗಳು
- 1970ರ ದಶಕದ ಸಂಗೀತ ತಂಡಗಳು
- 1980ರ ದಶಕದ ಸಂಗೀತ ತಂಡಗಳು
- 1990ರ ದಶಕದ ಸಂಗೀತ ತಂಡಗಳು
- 2000ದ ದಶಕದ ಸಂಗೀತ ತಂಡಗಳು
- ಬ್ಲ್ಯಾಕ್ ಸಬ್ಬತ್
- ಇಂಗ್ಲಿಷ್ 'ಹೆವಿ ಮೆಟಲ್' ಸಂಗೀತ ತಂಡಗಳು
- ಇಂಗ್ಲಿಷ್ ರಾಕ್ ಸಂಗೀತ ತಂಡಗಳು
- ಗ್ರ್ಯಾಮ್ಮಿ ಪ್ರಶಸ್ತಿ ವಿಜೇತರು
- I.R.S. ರೆಕಾರ್ಡ್ಸ್ ಕಲಾವಿದರು
- ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಸಂಗೀತ ತಂಡಗಳು
- ಇಸವಿ 1968ರಲ್ಲಿ ರಚಿಸಲಾದ ಸಂಗೀತ ತಂಡಗಳು
- ನಾಲ್ವರು ಗಾಯಕರ ಸಂಗೀತ
- ರಾಕ್ ಆಂಡ್ ರೋಲ್ ಕೀರ್ತಿಭವನದಲ್ಲಿ ದಾಖಲಾದವರು
- ರಾಕ್ ಶೈಲಿಯ ಸಂಗೀತಗಾರರು
- ಪಾಶ್ಚಾತ್ಯ ಸಂಗೀತಗಾರರು