ತ್ಯಾಗರಾಜ ಮಂಗಳಂ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ತ್ಯಾಗರಾಜ ಮಂಗಳಂ ಕರ್ನಾಟಕ ಸಂಗೀತದಲ್ಲಿ ಒಂದು ರಾಗವಾಗಿದೆ [೧] (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಪ್ರಕಾರ) ಈ ರಾಗವು ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ರಾಗವಾಗಿದ್ದು [೨] ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ಪದ್ದತಿಯ 23 ನೇ ಮೇಳಕರ್ತ ರಾಗ ಗೌರಿ ಮನೋಹರಿಯ ಜನ್ಯ ರಾಗವಾಗಿದೆ.
ಈರಾಗಕ್ಕೆ ಹಿಂದೂಸ್ತಾನಿ ಸಂಗೀತದಲ್ಲಿ ಸಮಾನವಾದ ರಾಗವಿಲ್ಲ.
ತ್ಯಾಗರಾಜ ಮಂಗಳಂ ಒಂದು ಔಡವ-ಸಂಪೂರ್ಣ ರಾಗವಾಗಿದ್ದು (ಅಥವಾ ಓಡವ ರಾಗಂ, ಅಂದರೆ ಪೆಂಟಾಟೋನಿಕ್ ಆರೋಹಣ ಪ್ರಮಾಣ) ಇದರ ಆರೋಹಣ ಮತ್ತು ಅವರೋಹಣ ಪ್ರಮಾಣ ಈ ಕೆಳಗಿನಂತಿರುತ್ತದೆ.
- ಆರೋಹಣ: ಸ ಗ₂ ಮ₁ ಪ ನಿ₃ ಸ
- ಅವರೋಹಣ: ಸ ನಿ₃ ದ₂ ಪ ಮ₁ ಗ₂ ರಿ₂ ಸ [೩]
ಈ ರಾಗದಲ್ಲಿ ಷಡ್ಜಂ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಪಂಚಮ ಮತ್ತು ಕಾಕಲಿ ನಿಷಾದ ಆರೋಹಣದಲ್ಲಿ ಮತ್ತು ಚತುಶ್ರುತಿ ಋಷಭ ಮತ್ತು ಚತುಶ್ರುತಿ ದೈವತ ಸ್ವರಗಳನ್ನು ಅವರೋಹಣದಲ್ಲಿ ಬಳಸಲಾಗುತ್ತದೆ. ಇದು ಔಡವ - ಸಂಪೂರ್ಣ ರಾಗವಾಗಿದೆ
ಸಂಯೋಜನೆಗಳು
[ಬದಲಾಯಿಸಿ]ಈ ರಾಗದಲ್ಲಿ ಸಂಯೋಜನೆ
ಧ್ಯಾನ ಮೂಲಂ - ವಿರುತ್ತಂ [೪] ಗಾಯಕರು: ಪ್ರಿಯದರ್ಶಿನಿ
ಟಿಪ್ಪಣಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Bengaluru composer creating new ragas". Deccan Herald (in ಇಂಗ್ಲಿಷ್). 2021-08-10. Retrieved 2023-01-13.
- ↑ Mary, S. B. Vijaya (2021-08-05). "Mahesh Mahadev's experiments with ragas". The Hindu (in Indian English). ISSN 0971-751X. Retrieved 2023-01-13.
- ↑ Mary, S. B. Vijaya (2021-08-05). "Mahesh Mahadev's experiments with ragas". The Hindu (in Indian English). ISSN 0971-751X. Retrieved 2023-01-13.Mary, S. B. Vijaya (5 August 2021). "Mahesh Mahadev's experiments with ragas". The Hindu. ISSN 0971-751X. Retrieved 13 January 2023.
- ↑ Guru Poornima D21- Priyadarshini | Hamsanadam Adi tala varnam & Gurulekha (Gowrimanohari) (in ಇಂಗ್ಲಿಷ್), retrieved 2023-01-13