ಗಝಲ್
ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅಳವಡಿಸಿ ಅದಕ್ಕೆ ಸಂಗೀತವನ್ನು ನೀಡಲಾಗುತ್ತದೆ . ಗಝಲ್ ಹಲವರು ಕಡೆ ನೋವು ಮತ್ತು ವಿರಹವನ್ನು ಸೂಚಿಸಲು ಉಪಯೋಗಿಸಲಾಗಿದೆ .
ಇತಿಹಾಸ
[ಬದಲಾಯಿಸಿ]೧೨ ನೆ ಶತಮಾನದಲ್ಲಿ ಗಝಲ್ ಭಾರತ ಅಂತಹ ಹಲವರು ದೇಶಗಳಿಗೆ ತನ್ನ ರೆಕ್ಕೆಗಳನ್ನು ಅಗಲಿಸಿತು. ಪೆರ್ಸಿಯದ ಕವಿಗಳಾದ ರೂಮಿ,ಹಫೀಜ್, ಅಶೆರಿ ಅಂಥವರು ಗಝಲ್ಗಳನ್ನೂ ಬರೆದು ಅದರ ಗುಂಗಿನಲ್ಲಿ ಕುನಿಯುಥಿದ್ದರಂತೆ . ಅವರು ಬರೆದು ಕುನಿಯುವವರನ್ನು ದೆರ್ವಿಷೆಸ್ ಅಂದು ಕರೆಯಲಾಗುತ್ತದೆ. ಟರ್ಕಿ ದೇಶದಲ್ಲಿ ಅವರನ್ನು ಇವತ್ತಿಗೂ ನೋಡಬಹುದೆಂದು ಹೇಳಲಾಗಿದೆ .
ನೂತನವಾದ ಗಝಲ್ ಹಾಡುವವರು
[ಬದಲಾಯಿಸಿ]ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಗಝಲ್ ಶೈಲಿ ಬಹಳ ಪ್ರೇಕ್ಷಕರ ಮನ ಗೆದ್ದಿದರಿಂದ, ಹಲವಾರು ಗಝಲ್ ಗಾಯಕರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ . ಜಗಜಿತ್ ಸಿಂಗ್ ಮತ್ತು ಪಂಕಜ್ ಉದಾಸ್ ಭಾರತದ ಶ್ರೇಷ್ಟ ಗಾಯಕರಲ್ಲಿ ಇಬ್ಬರು. ಭಾರತದಲ್ಲಿ ತೆಲುಗು,ಗುಜರಾತಿ, ಕನ್ನಡ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಗಝಲ್ ಬರೆದು ಹಾಡಲಾಗಿದೆ.
ಕನ್ನಡದಲ್ಲಿ ಗಜಲ್‌ಗೆ ಒಂದು ಉದಾಹರಣೆ
ಗಜಲ್
ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ
ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||
ಜಗದ ಸುತ್ತ ಹುತ್ತ ಚಾಚಿದೆ, ಬಿತ್ತಿ ಬೆಳೆಯಲು ಬಿಟ್ಟರದು ಬರಡು
ನೆರೆದ ಮಂದಿಯ ನೂರು ಮಾತಿಗೆ ಕೆರೆಯು ಬತ್ತದಿರಲಿ, ಕೊನೆಗೆ. ||
ಹೊತ್ತು ಗೊತ್ತಿನ ಹುರುಳು ಇಲ್ಲದ ಕೊರಳೊಂದು ಕೆರಳಿದೆ ಬಿಡದೇ
ಸೋತು ಸವಿದು ಒಣಗಿರುವ ಬದುಕಿಗೆ ಬೆಂಕಿ ಹಚ್ಚದಿರಲಿ, ಕೊನೆಗೆ.||
ಬೆಡಗು ಬೆಂಗುಡಿಗೆ ನಡುಗಿದೆ ಮನ, ಕಡೆಗೂ ತಡೆವವರು ಯಾರು ?
ಹುಚ್ಹುದುಲ ಹೊಳೆಯಲಿ, ದೋಣಿ ದಾರಿಯು ಮುಚ್ಚದಿರಲಿ, ಕೊನೆಗೆ.||
ಮಬ್ಬಿನಲಿ ಹಬ್ಬಿದ ಹೊಗೆಯು, ಇಬ್ಬನಿಯು ತರದು, ಹುಬ್ಬೇರಿಸದಿರು
ಕಡಿಯುವುದೆ ಕತ್ತಲಿನ ನಾಯಿ ನೆರಳು! ಹುಸಿಯು ಹಬ್ಬದಿರಲಿ, ಕೊನೆಗೆ. ||
ಅಷ್ಟೂ ದಿಕ್ಕಿಗೂ ಎಷ್ಟು ತೂರಿದರೇನು ಕಸವು, ಗಾಳಿ ಬೀಸದೆ "ಬೋಧಿ"
ಸೊಕ್ಕಿದ ಸುಳಿಗಾಳಿಯ ದಿಕ್ಕಿಗೆ, ಮಿಕ್ಕಿ ತೆಕ್ಕೆಯು ಚಾಚದಿರಲಿ, ಕೊನೆಗೆ. ||
ರಚನೆ:- ದೇವೇಂದ್ರ ಕಟ್ಟಿಮನಿ
ಗಜ಼ಲ್
ಏನೇ ಎದುರಾಗಲಿ ನೀ ಬಿಡದಿರು ಛಲ
ಕಷ್ಟವೆಷ್ಟೇ ಬರಲಿ ಮರೆಯದಿರು ಛಲ
ಸಂಕಷ್ಟವೆದುರಿಸದ ಸಾಧಕರೆಲ್ಲೂ ಇಲ್ಲ
ಕಷ್ಟವೆಂದು ಬಿಟ್ಟು ಸರಿಯದಿರು ಛಲ
ಹಸಿದ ಹೆಬ್ಬುಲಿಯ ಕಾಲೆಂದೂ ಸೋಲದು
ಹಸಿದಂದು ಕಲಿತೆ ಪಾಠ ಕೊಲ್ಲದಿರು ಛಲ
ಚಂಚಲನಾಗಿರದೆ ನೀನು ಅಚಲನಾಗಿರು
ಸಾಧಿಸು ಸೋಲಿಸುವವರ ಎದಿರು ಛಲ
ನಿನ್ನೊಳು ನೀನಿರೆ ಶ್ರೀಗಿರೀಶ ನಿನ್ನವನು
ಕತ್ತರಿಸೆ ಚಿಗುರುವುದು ಬಿಡದೆ ಬಿದಿರು ಛಲ
- ಶ್ರೀಗಿರೀಶ
(ಹ ನಾ ಹಾವನೂರು)
(ಹ ನಾ ಹಾವನೂರು ಅವರ ಇತರ ಕವಿತೆಗಳನ್ನು ನೋಡಲು ಈ ಕೆಳಗಿನ ಲಿಂಕ್ ಬಳಸಿರಿ https://hava100.blogspot.com/2022/07/blog-post.html)
ಗಝಲ್ ಮತ್ತು ಭಾರತೀಯ ಚಲನಚಿತ್ರ
[ಬದಲಾಯಿಸಿ]ಭಾರತದ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ಗಝಲ್ ಗಾಯನವನ್ನು ಉಪಯೋಗಿಸಲಾಗಿದೆ. ಹಿಂದಿ ಭಾಷೆಯಲ್ಲಿ ಗರಿಷ್ಠವಾಗಿ ಉಪಯೋಗಿಸಲಾಗಿರುವ ಗಝಲ್ಗಳನ್ನೂ ಜನರು ಹಾಡಿ ಕೊಂಡಾಡಿದ್ದಾರೆ
ಇನ್ನಷ್ಟು ಮಾಹಿತಿ
[ಬದಲಾಯಿಸಿ]https://hava100.blogspot.com/2022/07/blog-post.html ಹನಾ ಹಾವನೂರು ಅವರ ಗಜಲ್