ಇಂಚಗೇರಿ
ಇಂಚಗೇರಿ
ಇಂಚಗೇರಿ | |
---|---|
village | |
Population (೨೦೧೨) | |
• Total | ೧೫೦೦೦ |
ಇಂಚಗೇರಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿದೆ.
ಇತಿಹಾಸ
[ಬದಲಾಯಿಸಿ]ನಿಸರ್ಗ ರಮಣೀಯ ತಾಣವಾಗಿ, ಭಕ್ತಾದಿಗಳ ಬೀಡಾಗಿ, ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿ, ಭಾವೈಕ್ಯ ಹಾಗೂ ಕೋಮು ಸಾಮರಸ್ಯದ ಸಂಕೇತವಾಗಿ ಪ್ರಸಿದ್ಧಿಗೊಂಡಿರುವುದೇ ಶ್ರೀಕ್ಷೇತ್ರ ಇಂಚಗೇರಿ ಮಠ. ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಹೊರ್ತಿ ಗ್ರಾಮದ ಪಶ್ಚಿಮಕ್ಕೆ 11 ಕಿ.ಮೀ. ದೂರದಲ್ಲಿದೆ ಈ ಮಠ.
ಮಠದ ಗುರುಗಳಾದ ಭಾವೂಸಾಹೇಬ, ಗಿರಿಮಲ್ಲೇಶ್ವರ, ಗುರುಪುತ್ರೇಶ್ವರ ಹಾಗೂ ಜಗನ್ನಾಥ ಮಹಾರಾಜರ ಚತುರ್ವೇಣಿ ಸಂಗಮ (ಮಾಘ ಮಾಸದ ಪುಣ್ಯತಿಥಿ ಸಪ್ತಾಹ)ದ ಮಹೋತ್ಸವ ಜರುಗುವುದು. ಇಂಚಗೇರಿ ಮಠದ ಅಧ್ಯಾತ್ಮ ಸಂಪ್ರದಾಯವು ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗಗಳ ಚತುರ್ವೇಣಿ ಸಂಗಮ. ಪುರಾತನ ಋಷಿ ಆಶ್ರಮವನ್ನು ಹೋಲುವ ಯೋಗ ಕೇಂದ್ರ ಗುರುಲಿಂಗ ಜಂಗಮ ಮಹಾರಾಜರ ಗದ್ದುಗೆಯೆಂದೇ ಪ್ರಸಿದ್ಧಿ. ಗೋವಾ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯ ಮಾತ್ರವಲ್ಲದೆಯೇ ವಿದೇಶಿ ಭಕ್ತರನ್ನೂ ತನ್ನತ್ತ ಸೆಳೆದಿರುವ ಭಾವರಸಪೂರ್ವಕವಾದ ಮಠ ಇದು. ಎರಡು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ಈ ಮಠ ಅಧ್ಯಾತ್ಮ ಬೋಧಿಸುವ ಕೇಂದ್ರವೂ ಹೌದು.
ಈ ಪುಣ್ಯ ಕ್ಷೇತ್ರವು ಗುರುಲಿಂಗ ಜಂಗಮ ಮಹಾರಾಜರ ಸಾನಿಧ್ಯದಿಂದ ಹೆಸರುವಾಸಿಯಾಗಿತ್ತು. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಉಮದಿಯ ಭಾವೂಸಾಹೇಬ ಮಹಾರಾಜರು, ಜಮಖಂಡಿಯ ಗಿರಿಮಲ್ಲೇಶ್ವರ ಮಹಾರಾಜರು, ಅಂಬುರಾವ ಮಹಾರಾಜರು ಸೇರಿದಂತೆ ಹಲವು ಮಹಾರಾಜರು ಇದರ ಗುರುಗಳಾಗಿದ್ದಾರೆ. ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಮಠದ ಹಾಲಿ ಗುರುಗಳು. ಶ್ರೀಮಠದಲ್ಲಿ ಗೋರಕ್ಷ ಕೇಂದ್ರ, ಗೋಶಾಲೆಗಳಿವೆ. ಸಾಮೂಹಿಕ ಕೃಷಿ, ಸಾಮೂಹಿಕ ವಿವಾಹ, ಸಾಮೂಹಿಕ ದಾಸೋಹ ಕಾರ್ಯಕ್ರಮಗಳೂ ನಡೆಯುವುದು ವಿಶೇಷ.
ಹಿನ್ನೆಲೆ
ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಉಮದಿ ಗ್ರಾಮದ ದೇಶಪಾಂಡೆ ಮನೆತನದವರು ಭಾವೂಸಾಹೇಬರು. ಇವರು ಮಹಾತಪಸ್ವಿ. ಆತ್ಮ ಜ್ಞಾನದ ಅಕ್ಷಯ ನಿಧಿ ಎಂದೇ ಪ್ರಸಿದ್ಧಿ. ದಾಸಬೋಧ ಪಠಣೆಗೆ ಅಡಿಪಾಯ ಹಾಕಿದವರು ಇವರು. ಇವರ ಶಿಷ್ಯ ಗಿರಿಮಲ್ಲೇಶ್ವರ ಮಹಾರಾಜರು ಜಮಖಂಡಿಯವರು. ದೇಶದಾದ್ಯಂತ ಸಂಚರಿಸಿ ಗುರೂಪದೇಶವನ್ನು ಬಿತ್ತರಿಸಿದವರು ಇವರು. ಗಿರಿಮಲ್ಲೇಶ್ವರರ ಶಿಷ್ಯರಾದ ಮಹಾದೇವರ ಗರಡಿಯಲ್ಲಿ ತಯಾರಾದವರು ಗುರರುಪುತ್ರೇಶ್ವರ ಮಹಾರಾಜ.
ದೇಶಾದ್ಯಂತ ಸರ್ವೋದಯ ಪಾದಯಾತ್ರೆ ನಡೆಸಿ ಸರ್ವೋದಯದ ಹರಿಕಾರ ಎಂದೇ ಖ್ಯಾತಿವೆತ್ತಿದವರು ಇವರು. ಮಹಾದೇವರು ನಡೆದು ಬಂದ ದಾರಿಯಲ್ಲಿ ಇಂಚಗೇರಿ ಮಠ ಅಧ್ಯಾತ್ಮ ಸಂಪ್ರದಾಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಗುರುಪುತ್ರೇಶ್ವರ ಮಹಾರಾಜರು 1983ರಲ್ಲಿ ರಷ್ಯಾದಲ್ಲಿ ನಡೆದ ಜಾಗತಿಕ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಕೂಡ. ಗುರುಪುತ್ರೇಶ್ವರರ ನಂತರ ಪೀಠಕ್ಕೆ ಬಂದಿರುವವರು ಜಗನ್ನಾಥ ಮಹಾರಾಜರು. ಮಹಾದೇವರ ಗರಡಿಯಲ್ಲಿ ತಯಾರಾದ ಜಗನ್ನಾಥ ಮಹಾರಾಜರು ಮಹಾದೇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಅಧ್ಯಾತ್ಮ ಸಂಪ್ರದಾಯ ಪ್ರಚಾರದ ಜತೆಗೆ ದೇಶದಾದ್ಯಂತ ಗೋಹತ್ಯಾ ನಿಷೇಧಕ್ಕಾಗಿ ಪಾದಯಾತ್ರೆ ಕೈಕೊಂಡು ಸರ್ವೋದಯ ಹರಿಕಾರ ಎನಿಸಿದರು.ಸತತ 15 ವರ್ಷಗಳವರೆಗೆ ಹಳ್ಳಿ-ನಗರಗಳಲ್ಲಿ ಸಂಪ್ರದಾಯದ ಪ್ರಚಾರ, ಜ್ಞಾನೋಪದೇಶ, ಸಾಮೂಹಿಕ ಜೀವನ ಪದ್ಧತಿ-ಜೀವನ ಸೂತ್ರಗಳನ್ನು ನಡೆಸಿಕೊಂಡು ಬಂದಿದ್ದ ಜಗನ್ನಾಥ ಮಹಾರಾಜರು 2011ರ ನವೆಂಬರ್ ತಿಂಗಳಿನಲ್ಲಿ ಲಿಂಗೈಕ್ಯರಾದರು. ಜಗನ್ನಾಥ ಮಹಾರಾಜರು ಗದ್ದುಗೆ ಏರಿದ ನಂತರ ಮಹಾದೇವರ ವಾಣಿಯಂತೆ ಮಠದ ಅಧ್ಯಾತ್ಮ ಸಂಪ್ರದಾಯ ಮುಂದುವರಿಸಿಕೊಂಡು ಹೋಗಿದ್ದಾರೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ.
ಕಲೆ ಮತ್ತು ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಳಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
[ಬದಲಾಯಿಸಿ]ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ಭಾಷೆ
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
[ಬದಲಾಯಿಸಿ]- ಶ್ರೀ ಮಾಧವನಂದ ಮಠ
- ಶ್ರೀ ಕರಬಸವ ಮಠ
- ಶ್ರೀ ಕೌದೇಶ್ವರ ದೇವಾಲಯ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಹಣಮಂತ ದೇವಾಲಯ
ಮಸೀದಿ
[ಬದಲಾಯಿಸಿ]ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕೃಷಿ ಮತ್ತು ತೋಟಗಾರಿಕೆ
[ಬದಲಾಯಿಸಿ]ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
[ಬದಲಾಯಿಸಿ]ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
[ಬದಲಾಯಿಸಿ]ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಇಲ್ಲಿನ ಟೋಮ್ಯಾಟೊಗೆ ಹೆಚ್ಚಿನ ಬೇಡಿಕೆ ಇದೆ.ಬದನೆಕಾಯಿ,
ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಹಬ್ಬ
[ಬದಲಾಯಿಸಿ]ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.ಶ್ರೀ ಮಾಧವನಂದ ಪ್ರೌಢಶಾಲೆ, ಜ್ಞಾನಸಂಗಮ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ ಇದೆ.
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯ
[ಬದಲಾಯಿಸಿ]ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
- Pages with non-numeric formatnum arguments
- Short description with empty Wikidata description
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಇಂಡಿ ತಾಲ್ಲೂಕಿನ ಹಳ್ಳಿಗಳು
- ಬಿಜಾಪುರ ಜಿಲ್ಲೆ
- ಇಂಡಿ ತಾಲ್ಲೂಕು