ವಿಷಯಕ್ಕೆ ಹೋಗು

ಹಿಮಕರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಮ ಕರಡಿ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
U. maritimus
Binomial name
Ursus maritimus
Polar bear range
Synonyms

Ursus eogroenlandicus
Ursus groenlandicus
Ursus jenaensis
Ursus labradorensis
Ursus marinus
Ursus polaris
Ursus spitzbergensis
Ursus ungavensis
Thalarctos maritimus

ಹಿಮಕರಡಿ ( ಉರ್ಸಸ್‌ ಮೆರಿಟೈಮಸ್‌ ) - ಇದು ಆರ್ಕ್ಟಿಕ್‌ ಸಾಗರ, ಅದರ ಸುತ್ತಮುತ್ತಲಿನ ಸಮುದ್ರ ಮತ್ತು ನೆಲೆಯನ್ನು ಒಳಗೊಂಡಿರುವ ಆರ್ಕ್ಟಿಕ್‌ ವೃತ್ತದಲ್ಲಿ ವಾಸಿಸುವ ಕರಡಿ. ಇದು ವಿಶ್ವದಲ್ಲೇ ಅತಿ ದೊಡ್ಡ ಗಾತ್ರದ ನೆಲವಾಸಿ ಮಾಂಸಾಹಾರಿ ಪ್ರಾಣಿ. ಹೆಚ್ಚುಕಡಿಮೆ ಅಷ್ಟೇ ಗಾತ್ರದ ಸರ್ವಭಕ್ಷಕ ಕೊಡಿಯಾಕ್‌ ಕರಡಿಯಂತೆಯೇ ಇದು ಕರಡಿಗಳಲ್ಲಿ ಅತಿ ದೊಡ್ಡ ಜಾತಿಯಾಗಿದೆ.[] ದೊಡ್ಡ ಗಂಡು ಹಿಮಕರಡಿಯು ಸುಮಾರು 350–680 kg (770–1,500 lb),[] ತೂಕ ಹೊಂದಿರುತ್ತದೆ, ದೊಡ್ಡ ಹೆಣ್ಣು ಹಿಮಕರಡಿಯು ಇದರ ಅರ್ಧದಷ್ಟಿರುತ್ತದೆ. ಹಿಮಕರಡಿಯು ಕಂದುಬಣ್ಣದ ಕರಡಿಗೆ ಹತ್ತಿರ ಸಂಬಂಧ ಹೊಂದಿದ್ದರೂ ಸಹ, ತನ್ನದೇ ಆದ ವಿಶೇಷ ಪರಿಸರೀಯ ಸ್ಥಾನವನ್ನು ಕಲ್ಪಿಸಿಕೊಳ್ಳಲು ಇದು ವಿಕಸನ ಹೊಂದಿದೆ. ಇದು ಬಹಳ ತಣ್ಣನೆಯ ಉಷ್ಣಾಂಶಗಳಿಗೆ ಹೊಂದಿಕೊಳ್ಳಲು ಮತ್ತು ಹಿಮ, ಇಬ್ಬನಿ ಮತ್ತು ನೀರಿನಲ್ಲಿ ಸಂಚರಿಸಲು ಹಲವು ಶಾರೀರಿಕ ಲಕ್ಷಣಗಳನ್ನು ಕಲ್ಪಿಸಿಕೊಂಡಿದೆ. ತನ್ನ ಆಹಾರದ ಪ್ರಮುಖಾಂಶವಾಗಿರುವ ನೀರುನಾಯಿಗಳನ್ನು ಬೇಟೆಯಾಡಲು ತಕ್ಕುದಾದ ಲಕ್ಷಣಗಳನ್ನು ಹೊಂದಿದೆ.[] ಹಲವು ಹಿಮಕರಡಿಗಳು ನೆಲೆಯಲ್ಲಿ ಜನಿಸಿದರೂ ಸಹ, ತಮ್ಮ ಬಹಳಷ್ಟು ಸಮಯವನ್ನು ಸಮುದ್ರದಲ್ಲಿಯೇ ಕಳೆಯಲು ಇಚ್ಛಿಸುತ್ತವೆ. ಅದಕ್ಕಾಗಿಯೇ ಇದರ ವೈಜ್ಞಾನಿಕ ಹೆಸರು 'ಕಡಲ‌ ಕರಡಿ (maritime bear)'. ಇವು ಕೇವಲ ಸಮುದ್ರದ ಇಬ್ಬನಿಯಲ್ಲಿಯೇ ಸುಸಂಗತವಾಗಿ ಬೇಟೆಯಾಡಬಲ್ಲದು. ಹಾಗಾಗಿ ಇ‌ವು ವರ್ಷದ ಬಹಳಷ್ಟು ಸಮಯವನ್ನು ಇಬ್ಬನಿಗಟ್ಟಿದ ಸಮುದ್ರದಲ್ಲಿಯೇ ಕಳೆಯುತ್ತವೆ.

ಹಿಮಕರಡಿಯನ್ನು 'ಅಳಿವಿಗೆ ಈಡಾಗಬಹುದಾದ ಪ್ರಭೇದ' ಎಂದು ವಿಂಗಡಿಸಲಾಗಿದೆ. ಹಿಮಕರಡಿಗಳ 19 ಉಪಪ್ರಭೇದಗಳಲ್ಲಿ 8 ಪ್ರಭೇದಗಳ ಅವಸಾನವಾಗುತ್ತಿದೆ.[] ದಶಕಗಳ ಕಾಲದಿಂದಲೂ, ಲಂಗುಲಗಾಮಿಲ್ಲದ ಹಿಮಕರಡಿಗಳ ಬೇಟೆ [clarification needed] ಮತ್ತು ಮಾರಣಹೋಮವಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಭೇದದ ಉಳಿವಿನ ಕುರಿತು ತಳಮಳ ವ್ಯಕ್ತವಾಗುತ್ತಿದೆ. ಬೇಟೆ ನಿಯಂತ್ರಣಾ ಕ್ರಮಗಳು ಮತ್ತು ಕೋಟಾಗಳು ಜಾರಿಗೊಳಿಸಿದ ನಂತರ ಹಿಮಕರಡಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ. [ಸೂಕ್ತ ಉಲ್ಲೇಖನ ಬೇಕು] ಸಾವಿರಾರು ವರ್ಷಗಳಿಂದಲೂ, ಆರ್ಕ್ಟಿಕ್‌ನಲ್ಲಿ ವಾಸಿಸುವ ಬುಡಕಟ್ಟು ಜನತೆಯ ಭೌತದ್ರವ್ಯದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಹಿಮಕರಡಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಅವರ ಸಂಸ್ಕೃತಿಯಲ್ಲಿ ಹಿಮಕರಡಿಯ ಬೇಟೆಯು ಪ್ರಮುಖ ಅಂಶವಾಗುಳಿದಿದೆ.

ಜಾಗತಿಕ ಉಷ್ಣಾಂಶ ಏರಿಕೆ ಹಿಮಕರಡಿಗೆ ಬಹಳ ಗಮನಾರ್ಹ ಅಪಾಯ ಎಂದು IUCN ಸೂಚಿಸಿದೆ. ಏಕೆಂದರೆ, ಸಮುದ್ರದ ಇಬ್ಬನಿ ಕರಗುವುದರಿಂದ ಹಿಮಕರಡಿ ಆಹಾರ ಹುಡುಕುವ ಸಾಮರ್ಥ್ಯಕ್ಕೆ ಅಡೆತಡೆಯುಂಟಾಗುತ್ತದೆ. 'ಹವಾಗುಣದ ಪರಿವರ್ತನೆಗಳು ಇದೇ ರೀತಿ ಮುಂದುವರೆದಲ್ಲಿ, 100 ವರ್ಷಗಳಲ್ಲಿ ಹಿಮಕರಡಿಗಳು ತಮ್ಮ ವ್ಯಾಪ್ತಿಯಿಂದ ಸಂಪೂರ್ಣವಾಗಿ ಅಳಿದುಹೋಗುವ ಸಾಧ್ಯತೆಯಿದೆ' ಎಂದು IUCN ತಿಳಿಸಿದೆ.[] ದಿನಾಂಕ 14 ಮೇ 2008ರಂದು, ಅಮೆರಿಕಾ ಸಂಯುಕ್ತ ಸಂಸ್ಥಾನದ ಒಳನಾಡು ವಿಭಾಗವು ವಿಪತ್ತಿಗೊಳಗಾದ ಪ್ರಭೇದ ಕಾಯಿದೆಯಡಿ ಹಿಮಕರಡಿಯನ್ನು ಅಪಾಯಕ್ಕೀಡಾಗಿರುವ ಪ್ರಭೇದಗಳ ಪಟ್ಟಿಯಲ್ಲಿ ಸೇರಿಸಿತು.

ನಾಮಕರಣ ಮತ್ತು ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ಹಿಮಕರಡಿ ಒಂದು ವಿಶಿಷ್ಟ ಪ್ರಭೇದ ಎಂದು ಕಾಂಸ್ಟಾಂಟಿನ್‌ ಜಾನ್‌ ಫಿಪ್ಸ್‌ ಮೊದಲ ಬಾರಿಗೆ ವಿವರಿಸಿದ್ದರು.[] ಅವರು ಹಿಮಕರಡಿಯ ನೈಸರ್ಗಿಕ ವಾಸಸ್ಥಾನವನ್ನು ಗಮನಿಸಿ, ಅರ್ಸಸ್‌ ಮೆರಿಟೈಮಸ್ (ಲ್ಯಾಟೀನ್‌: 'ಕಡಲ ಕರಡಿ')‌ [] ಎಂಬ ವೈಜ್ಞಾನಿಕ ಹೆಸರನ್ನು ಸೂಚಿಸಿದರು. ಇನೂಯಿಟ್‌ ಜನತೆಯು ತಮ್ಮ ಭಾಷೆ ಇನುಪಿಯಾಖ್‌ ಭಾಷೆಯಲ್ಲಿ ಹಿಮಕರಡಿಯನ್ನು ನಾನೂಕ್ [] (nanuuq ಎಂದು ಲಿಪ್ಯಂತರ) ಎಂದು ಉಲ್ಲೇಖಿಸುತ್ತದೆ.‌ [೧೦] ಯುಪಿಕ್‌ ಜನತೆಯೂ ಸಹ ತಮ್ಮ ಸೈಬೀರಿಯನ್‌ ಯುಪಿಕ್‌ ಭಾಷೆಯಲ್ಲಿ ಹಿಮಕರಡಿಯನ್ನು ನಾನೂಕ್ ‌ ಎಂದು ಉಲ್ಲೇಖಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು] ಚುಕ್ಚಿ ಭಾಷೆಯಲ್ಲಿ ಹಿಮಕರಡಿಯನ್ನು ಉಮ್ಕಾ ಎನ್ನಲಾಗಿದೆ. ರಷ್ಯನ್‌ ಭಾಷೆಯಲ್ಲಿ, ಅದನ್ನು ಸಾಮಾನ್ಯವಾಗಿ бе́лый медве́дь (bélyj medvédj , ಬಿಳಿಯ ಕರಡಿ) ಎನ್ನಲಾಗಿದೆ. ಆದರೂ, ошку́й (Oshkúj ) ಎಂಬ ಹಳೆಯ ಪದವೂ ಸಹ ಬಳಕೆಯಲ್ಲಿದೆ. ಇದು ಕೊಮಿ ಒಸ್ಕಿ , (ಕರಡಿ) ಎಂಬ ಪದಗಳಿಂದ ಉದ್ಭವವಾಗಿತ್ತು.[೧೧] ಫ್ರೆಂಚ್‌ ಭಾಷೆಯಲ್ಲಿ ಹಿಮಕರಡಿಯನ್ನು ಆವರ್ಸ್‌ ಬ್ಲಾಂಕ್‌ (ಬಿಳಿಯ ಕರಡಿ) ಅಥವಾ ಆವರ್ಸ್‌ ಪೊಲೇರ್ ‌ (ಹಿಮಕರಡಿ) ಎಂದು ಉಲ್ಲೇಖಿಸಲಾಗಿದೆ.[೧೨] ನಾರ್ವೇಜಿಯನ್‌-ಆಡಳಿತದ ಸ್ವಾಲ್ಬಾರ್ಡ್‌ ದ್ವೀಪಸಮೂಹದಲ್ಲಿ ಹಿಮಕರಡಿಯನ್ನು Isbjørn (ಇಬ್ಬನಿ ಕರಡಿ) ಎನ್ನಲಾಗಿದೆ.

ಹಿಂದೆ, ಹಿಮಕರಡಿಯನ್ನು ತನ್ನದೇ ಪ್ರಭೇದ ಥಾಲಾರ್ಕ್ಟೊಸ್‌ ನಲ್ಲಿ ವಿಂಗಡಿಸಲಾಗಿತ್ತು.[೧೩] ಆದರೆ, ಹಿಮಕರಡಿಗಳು ಮತ್ತು ಕಂದು ಕರಡಿಗಳ ನಡುವಿನ ಸಂಕರಗಳ ಸಾಕ್ಷ್ಯ ಮತ್ತು ಇವೆರಡೂ ಪ್ರಭೇದಗಳ ವಿಕಸನಾತ್ಮಕ ದಿಕ್ಚ್ಯುತಿಯು ಈ ಪ್ರತ್ಯೇಕ ಪ್ರಭೇದದ ಸ್ಥಾಪನೆಯನ್ನು ಸಮರ್ಥಿಸುವುದಿಲ್ಲ. ಹಾಗಾಗಿ, ಇಂದು ಒಪ್ಪಲಾದ ವೈಜ್ಞಾನಿಕ ಹೆಸರು ಉರ್ಸಸ್‌ ಮೆರಿಟೈಮಸ್ ‌ ಆಗಿದೆ. ಫಿಪ್ಸ್‌ ಮೂಲತಃ ಇದೇ ಹೆಸರನ್ನು ಪ್ರಸ್ತಾಪಿಸಿದ್ದರು.[೧೪]

ಜೀವವರ್ಗೀಕರಣ ಶಾಸ್ತ್ರ ಮತ್ತು ವಿಕಸನ

[ಬದಲಾಯಿಸಿ]
ನೀರುನಾಯಿ (ಸೀಲ್‌)ಗಳನ್ನು ಬೇಟೆಯಾಡಲು ಹಿಮಕರಡಿಗಳು ಸಮುದ್ರದ ಇಬ್ಬನಿಯನ್ನು ವೇದಿಕೆಯಾಗಿ ಬಳಸುತ್ತವೆ.ದೊಡ್ಡ ಪಾದಗಳು, ಮೊನಚಾದ, ಸ್ಥೂಲವಾದ ಉಗುರುಗಳು ಈ ಪರಿಸರಕ್ಕೆ ಹೊಂದಿಕೊಳ್ಳುವಂತಿವೆ.

ಸುಮಾರು 38 ದಶಲಕ್ಷ ವರ್ಷಗಳ ಹಿಂದೆ, ಕರಡಿಯ ಕುಟುಂಬ ಉರ್ಸಿಡೇ (Ursidae) ಇತರೆ ಮಾಂಸಾಹಾರಿ ಸಸ್ತನಿ ಕುಟುಂಬಗಳಿಂದ ಪ್ರತ್ಯೇಕವಾಯಿತು ಎಂದು ನಂಬಲಾಗಿದೆ. ಸುಮಾರು 4.2 ದಶಲಕ್ಷ ವರ್ಷಗಳ ಹಿಂದೆ ಉರ್ಸಿನೇ (Ursinae) ಉಪಕುಟುಂಬವು ಉಗಮಿಸಿತು. ಪಳೆಯುಳಿಕೆ ಮತ್ತು DNA ಇವೆರಡರ ಸಾಕ್ಷ್ಯಾಧಾರಗಳ ಪ್ರಕಾರ, ಹಿಮಕರಡಿಯು ಸ್ಥೂಲವಾಗಿ 150,000 ವರ್ಷಗಳ ಹಿಂದೆ ಕಂದು ಕರಡಿ ಉರ್ಸಸ್‌ ಆರ್ಕ್ಟೊಸ್ (Ursus arctos) ‌ನಿಂದ ದಿಕ್ಚ್ಯುತಿ ಹೊಂದಿತು.[೧೫] ಪ್ರಿನ್ಸ್‌ ಚಾರ್ಲ್ಸ್‌ ಫೋರ್ಲೆಂಡ್‌ನಲ್ಲಿ 2004ದ ಇಸವಿಯಲ್ಲಿ ಪತ್ತೆಯಾದ ಸುಮಾರು 130,000ದಿಂದ 110,000 ವರ್ಷ ಹಳೆಯ ದವಡೆ ಮೂಳೆಯು, ಹಿಮಕರಡಿಯ ಅತ್ಯಂತ ಹಳೆಯ ಪಳೆಯುಳಿಕೆಯಾಗಿದೆ.[೧೫] ಹತ್ತರಿಂದ ಇಪ್ಪತ್ತು ಸಾವಿರ ವರ್ಷಗಳ ಹಿಂದೆ, ಹಿಮಕರಡಿಯ ದವಡೆ ಹಲ್ಲಿನ ರೂಪವು ಕಂದುಕರಡಿಯದಕ್ಕಿಂತಲೂ ಗಮನಾರ್ಹವಾಗಿ ಬದಲಾಯಿತು ಎಂದು ಪಳೆಯುಳಿಕೆಗಳು ತೋರಿಸುತ್ತವೆ. ಪ್ಲೀಸ್ಟೊಸೀನ್‌ ಯುಗದಲ್ಲಿ ಹಿಮಕ್ರಿಯೆಯಾಗಿ ಪ್ರತ್ಯೇಕಗೊಂಡ ಕಂದು ಕರಡಿಗಳ ಗುಂಪಿನಿಂದ ಹಿಮಕರಡಿಗಳು ದಿಕ್ಚ್ಯುತಿಯಾದವು ಎಂದು ನಂಬಲಾಗಿದೆ.[೧೬]

ಇನ್ನಷ್ಟು ಇತ್ತೀಚೆಗಿನ ತಳೀಯ ಅಧ್ಯಯನಗಳು, ಕಂದು ಕರಡಿಯ ಕೆಲವು ಏಕಮೂಲ ವರ್ಗಗಳು ಇತರೆ ಕಂದು ಕರಡಿಗಳ ವರ್ಗಕ್ಕಿಂತಲೂ ಹಿಮಕರಡಿಗಳಿಗೆ ನಿಕಟ ಸಂಬಂಧ ಹೊಂದಿವೆ.[೧೭] ಇದರ ಅರ್ಥ, ಕೆಲವು ಪ್ರಭೇದ ಕಲ್ಪನೆಗಳ ಪ್ರಕಾರ ಹಿಮಕರಡಿಯು ನೈಜ ಪ್ರಭೇದವಲ್ಲ.[೧೮] ಜೊತೆಗೆ, ಹಿಮಕರಡಿಗಳು ಕಂದು ಕರಡಿಗಳೊಂದಿಗೆ ಸಂಕರೀಕರಿಸಿ, ಫಲವತ್ತಾದ ಕಂದುಕರಡಿ-ಹಿಮಕರಡಿ ಸಂಕರಗಳನ್ನು ಹುಟ್ಟುಹಾಕಬಹುದು.[೧೬][೧೯] ಇವೆರಡೂ ಪ್ರಭೇದಗಳು ಕೇವಲ ಇತ್ತೀಚೆಗೆ ದಿಕ್ಚ್ಯುತಿಯಾಗಿದ್ದು ಅವು ತಳೀಯವಾಗಿ ಒಂದೇ ರೀತಿಯದ್ದಾಗಿವೆ ಎಂಬುದನ್ನು ಸೂಚಿಸುತ್ತದೆ.[೨೦] ಆದಾಗ್ಯೂ, ಒಂದು ಪ್ರಭೇದವು ಇನ್ನೊಂದರ ಪರಿಸರೀಯ ಸ್ಥಾನದಲ್ಲಿ ಬಹಳ ಕಾಲ ಉಳಿಯದು ಹಾಗೂ, ಆಕೃತಿ, ಚಯಾಪಚಯ, ಸಾಮಾಜಿಕ ಮತ್ತು ಆಹಾರ-ಸೇವನೆಯ ವರ್ತನೆಗಳು ಮತ್ತು ಇತರೆ ಪ್ರಕಟಲಕ್ಷಣಗಳು ಎರಡು ಪ್ರಭೇದಗಳಲ್ಲಿ ಬೇರೆ-ಬೇರೆ ರೀತಿಯದ್ದಾಗಿರುವುದರಿಂದ, ಎರಡೂ ಕರಡಿಗಳನ್ನು ಪ್ರತ್ಯೇಕ ಪ್ರಭೇದಗಳನ್ನಾಗಿ ವಿಂಗಡಿಸಲಾಗಿದೆ.[೨೦]

ಹಿಮಕರಡಿಯನ್ನು ಮೂಲತಃ ದಾಖಲಿಸಿದಾಗ, ಎರಡು ಉಪಪ್ರಭೇದಗಳನ್ನು ಗುರುತಿಸಲಾಯಿತು: 1774ರಲ್ಲಿ ಕಾಂಸ್ಟನ್ಟೀನ್‌ ಜೆ. ಫಿಪ್ಸ್‌ರಿಂದ ಉರ್ಸಸ್‌ ಮೆರಿಟೈಮಸ್‌ (Ursus maritimus) ಮತ್ತು 1776ರಲ್ಲಿ ಪೀಟರ್‌ ಸೈಮನ್‌‌ ಪಲ್ಲಸ್‌ರಿಂದ ಉರ್ಸಸ್‌ ಮೆರಿಟೈಮಸ್‌ ಮೆರೈನಸ್‌ (Ursus maritimus marinus) [೨೧] ಈ ಪ್ರತ್ಯೇಕತೆಯನ್ನು ಅನೂರ್ಜಿತಗೊಳಿಸಲಾಗಿದೆ.

ಒಂದು ಪಳೆಯುಳಿಕೆಯ ಉಪಪ್ರಭೇದವನ್ನು ಗುರುತಿಸಲಾಗಿದೆ. ಉರ್ಸಸ್‌ ಮೆರಿಟೈಮಸ್‌ ಟಿರನಸ್ ‌ - ಇದು ಉರ್ಸಸ್‌ ಅರ್ಕ್ಟೊಸ್ ‌ನಿಂದ ಉಗಮಿಸಿದ್ದು, ಪ್ಲೀಸ್ಟೋಸೀನ್‌ ಯುಗದಲ್ಲಿ ಅಳಿಸಿಹೋಯಿತು. U.m. tyrannus ಈಗ ಬದುಕುಳಿದುರುವ ಪ್ರಭೇದಗಳಿಗಿಂತಲೂ ಗಮನಾರ್ಹವಾಗಿ ದೊಡ್ಡ ಗಾತ್ರದ್ದಾಗಿತ್ತು.[೧೬]

ಉತ್ತರ ಧ್ರುವದಿಂದ ಜಲಾಂತರ್ಗಾಮಿ USS ಹೊನೊಲುಲು [45]ವನ್ನು ಪರೀಕ್ಷಿಸುತ್ತಿರುವ ಹಿಮಕರಡಿಗಳು.

ಹಿಮಕರಡಿಗಳ ಸಂಖ್ಯೆ ಮತ್ತು ಅವುಗಳ ವ್ಯಾಪಿಸುವಿಕೆ

[ಬದಲಾಯಿಸಿ]

ಹಿಮಕರಡಿಗಳು ಆರ್ಕ್ಟಿಕ್‌ ವೃತ್ತ ಮತ್ತು ಅಕ್ಕಪಕ್ಕದ ನೆಲೆಗಳಲ್ಲಿ ವಾಸಿಸುತ್ತವೆ. ಇಂತಹ ದೂರದ ವಾಸಸ್ಥಾನದಲ್ಲಿ ಯಾವುದೇ ಮಾನವ ವಾಸಸ್ಥಳವಿರದ ಕಾರಣ, ಈಗಲೂ ಇರುವ ಬೇರೇ ಯಾವುದೇ ಮಾಂಸಾಹಾರಿ ಪ್ರಾಣಿಗೆ ಹೋಲಿಸಿದರೆ, ಹಿಮಕರಡಿಯು ತನ್ನ ಮೂಲ ವ್ಯಾಪ್ತಿಯ ಹೆಚ್ಚು ಭಾಗವನ್ನು ಉಳಿಸಿಕೊಂಡಿದೆ.[೨೨] 88°ಗೂ ಉತ್ತರ ಭಾಗದಲ್ಲಿ ಹಿಮಕರಡಿಗಳು ವಿರಳವಾಗಿವೆಯಾದರೂ, ಹಿಮಕರಡಿಗಳು ಆರ್ಕ್ಟಿಕ್‌ನಾದ್ಯಂತ ವ್ಯಾಪಿಸಿ, ಕೆನಡಾದ ಜೇಮ್ಸ್‌ ಬೇಯಷ್ಟು ದೂರದ ದಕ್ಷಿಣದ ವರೆಗೂ ವ್ಯಾಪಿಸಿವೆ. ಅವುಗಳು ಕೆಲವೊಮ್ಮೆ ಸಮುದ್ರ ಇಬ್ಬನಿಯೊಂದಿಗೆ ತೇಲಬಹುದು. ನಾರ್ವೇಜಿಯನ್‌ ಮುಖ್ಯಭೂಮಿಯಲ್ಲಿರುವ ಬರ್ಲೆವಾಗ್‌ ಹಾಗೂ ಒಖೊಟ್ಸ್ಕ್‌ ಸಮುದ್ರದಲ್ಲಿ ಕುರಿಲ್‌ ಐಲೆಂಡ್‌ನ ನಷ್ಟು ದೂರದ ದಕ್ಷಿಣದಲ್ಲಿಯೂ ಹಿಮಕರಡಿಗಳು ಕಂಡುಬಂದದ್ದು ವರದಿಯಾಗಿವೆ. ವ್ಯಾಪ್ತಿಯನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಲ್ಲದ ಕಾರಣ, ವಿಶ್ವಾದ್ಯಂತ ಎಷ್ಟು ಹಿಮಕರಡಿಗಳಿವೆಯೆಂದು ಅಂದಾಜು ಮಾಡಲಾಗದು. ಆದರೆ, ಜೀವವಿಜ್ಞಾನಿಗಳ ಅಂದಾಜಿನ ಪ್ರಕಾರ ವಿಶ್ವಾದ್ಯಂತ 20,000ದಿಂದ 25,000 ಹಿಮಕರಡಿಗಳಿವೆ.[][೨೩]

ಇದರಲ್ಲಿ 19 ಸಾಮಾನ್ಯವಾಗಿ ಗುರುತಿಸಲಾದ ಉಪಸಂಖ್ಯೆಗಳಿವೆ.[೨೩][೨೪] ಉಪಸಂಖ್ಯೆಗಳು ವಿಶಿಷ್ಟ ಕ್ಷೇತ್ರಗಳಿಗೆ ಋತುವಾರು ತಾಳೆಯಾಗುತ್ತಿದ್ದವು. ಆದರೆ DNA ಅಧ್ಯಯನಗಳ ಪ್ರಕಾರ ಅವುಗಳು ಪುನರುತ್ಪಾದಿಸುವಂತೆ ಪ್ರತ್ಯೇಕಿತವಾಗಿಲ್ಲ.[೨೫] ಉತ್ತರ ಅಮೆರಿಕಾದಲ್ಲಿರುವ ಹದಿಮೂರೂ ಉಪಸಂಖ್ಯೆಗಳು ಬ್ಯೂಫರ್ಟ್‌ ಸಮುದ್ರದಿಂದ ಹಡ್ಸನ್‌ ಬೇ ವರೆಗೆ ಹಾಗೂ ಬ್ಯಾಫಿನ್‌ ಬೇ ಇಂದ ಗ್ರೀನ್ಲೆಂಡ್‌ ವರೆಗೂ ವ್ಯಾಪಿಸಿವೆ. ಯುರೇಷ್ಯಾ ವಲಯದಲ್ಲಿ ಹಿಮಕರಡಿಯ ಸಂಖ್ಯೆಯನ್ನು ಪೂರ್ವ ಗ್ರೀನ್ಲೆಂಡ್‌, ಬರೆಂಟ್ಸ್‌ ಸಮುದ್ರ, ಖಾರಾ ಸಮುದ್ರ, ಲ್ಯಾಪ್ಟೆವ್‌ ಸಮುದ್ರ ಮತ್ತು ಚುಕ್ಚಿ ಸಮುದ್ರ ಕ್ಷೇತ್ರಗಳ ಉಪಸಂಖ್ಯೆಗಳಾಗಿ ವಿತರಿತವಾಗಿವೆ. ಆದರೆ, ಬಹಳ ಕಡಿಮೆ ಪ್ರಮಾಣದಲ್ಲಿ ಗುರುತಿಸುವಿಕೆ ಮತ್ತು ಮರುಗ್ರಾಹಿಕೆ ಮಾಹಿತಿ ಬಹಳ ಸೀಮಿತವಾಗಿರುವುದರಿಂದ ಇಂತಹ ಸಂಖ್ಯೆಯ ರೂಪರಚನೆ ಕುರಿತು ಬಹಳಷ್ಟು ಅನಿಶ್ಚಿತತೆಯಿದೆ.

ಆಟವಾಡುತ್ತಿರುವ ಹಿಮಕರಡಿಗಳು

ವ್ಯಾಪ್ತಿಯು ಐದು ರಾಷ್ಟ್ರಗಳ ಪ್ರಾಂತಗಳನ್ನು ಒಳಗೊಂಡಿದೆ: ಡೆನ್ಮಾರ್ಕ್‌ (ಗ್ರೀನ್ಲೆಂಡ್‌), ನಾರ್ವೇ (ಸ್ವಾಲ್ಬಾರ್ಡ್‌), ರಷ್ಯಾ, US (ಅಲಾಸ್ಕಾ) ಹಾಗೂ ಕೆನಡಾ. ಇಸವಿ 1973ರಲ್ಲಿ ರಚಿಸಲಾದ ಹಿಮಕರಡಿಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಪ್ಪಂದವು ಹಿಮಕರಡಿಯ ವ್ಯಾಪ್ತಿಯುದ್ದಕ್ಕೂ ಸಂಶೋಧನೆ ಮತ್ತು ಸಂರಕ್ಷಣಾ ಯತ್ನಗಳ ಕುರಿತು ಸಹಕಾರದ ಅಗತ್ಯವನ್ನು ಸಾರುತ್ತದೆ. ಈ ಐದೂ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.

ಹಿಮಕರಡಿ ಸಂಖ್ಯೆಗಳ ಜಾಡುಹಿಡಿಯುವ ಆಧುನಿಕ ರೀತಿಗಳನ್ನು ಕೇವಲ 1980ರ ದಶಕಗಳಿಂದ ಅಳವಡಿಸಲಾಗಿವೆ. ವಿಶಾಲ ವ್ಯಾಪ್ತಿಯಲ್ಲಿ ಈ ಕಾರ್ಯವನ್ನು ಸುಸಂಗತವಾಗಿ ನಡೆಸುವುದು ದುಬಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ.[೨೬] ಹಿಮಕರಡಿಗಳ ಸಂಖ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಬಹಳಷ್ಟು ನಿಖರ ರೀತಿಯೆಂದರೆ, ಹೆಲಿಕಾಪ್ಟರ್‌ನಲ್ಲಿ ಆರ್ಕ್ಟಿಕ್‌ ವಲಯದ ಮೇಲೆ ಹಾರಿ, ಹಿಮಕರಡಿಗಳನ್ನು ಪತ್ತೆ ಮಾಡಿ, ಅದರತ್ತ ಶಾಮಕ ಚುಚ್ಚುಮದ್ದು ಹಾರಿಸಿ, ಅದಕ್ಕೆ ಟ್ಯಾಗ್‌ ಹಾಕುವುದು.[೨೬] ನುನಾವುಟ್‌ನಲ್ಲಿ, ಮಾನವ ವಸತಿಗಳ ಸನಿಹದಲ್ಲಿ ಹಿಮಕರಡಿಗಳು ಕಂಡುಬಂದ ಘಟನೆಗಳು ಹೆಚ್ಚಾಗುತ್ತಿವೆಯೆಂದು ಕೆಲವು ಇನೂಯಿಟ್‌ಗಳು ವರದಿ ಮಾಡಿದ್ದಾರೆ. ಇದರಿಂದಾಗಿ ಹಿಮಕರಡಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೆಂದು ನಂಬಲಾಗಿದೆ. ಹಸಿದ ಹಿಮಕರಡಿಗಳು ಮಾನವ ವಸತಿಗಳ ಸಮೀಪ ಸೇರಿಕೊಳ್ಳುತ್ತಿರಬಹುದು ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ಇದರಿಂದಾಗಿ, ಹಿಮಕರಡಿಗಳ ಸಂಖ್ಯೆಯು ಅಂದುಕೊಂಡದ್ದಕ್ಕಿಂತಲೂ ಹೆಚ್ಚಾಗಿದೆ ಎಂಬ ಭ್ರಮೆಯೂ ಉಂಟು.[೨೬] ಸಮರ್ಥಿಸುವಂತಹ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದೆ, ಕೇವಲ ಸಾಂಪ್ರದಾಯಿಕ ಪರಿಸರೀಯ ಜ್ಞಾನದ ಮೇಲೆ ಉಪಸಂಖ್ಯೆಯ ಪ್ರಮಾಣ ಅಥವಾ ಉಳಿಸಿಕೊಳ್ಳಬಹುದಾದ ಕುಯ್ಲು ಪ್ರಮಾಣಗಳ ಅಂದಾಜು ಮಾಡಬಾರದು' ಎಂದು IUCN ಸಂಸ್ಥೆಯ ಪೋಲರ್‌ ಬೇರ್‌ ಸ್ಪೆಷಲಿಸ್ಟ್‌‌ ಗ್ರೂಪ್‌ ನಿಲುವು ತಿಳಿಸಿದೆ.[೨೭]

ಗುರುತಿಸಲಾದ ಹತ್ತೊಂಬತ್ತು ಹಿಮಕರಡಿ ಉಪಸಂಖ್ಯೆಗಳಲ್ಲಿ, ಎಂಟು ಅವಸಾನದಲ್ಲಿವೆ, ಮೂರು ಸ್ಥಿರವಾಗಿವೆ, ಒಂದು ಹೆಚ್ಚುತ್ತಿದೆ, ಏಳು ಉಪಸಂಖ್ಯೆಗಳ ಕುರಿತು ಮಾಹಿತಿ ಸಾಲದಾಗಿದೆ.[][೨೩]

ಆವಾಸಸ್ಥಾನ

[ಬದಲಾಯಿಸಿ]
ಹಿಮಕರಡಿಯ ಮರಿ

ಹಿಮಕರಡಿಯನ್ನು ಕಡಲ ಸಸ್ತನಿಯೆಂದು ಪರಿಗಣಿಸಲಾಗಿದೆ, ಏಕೆಂದರೆ ಅದು ವರ್ಷದಲ್ಲಿ ಹಲವು ತಿಂಗಳ ಕಾಲ ಸಮುದ್ರದಲ್ಲಿಯೇ ಇರುತ್ತದೆ.[೨೮] ವಾರ್ಷಿಕವಾಗಿ ಖಂಡದ ಅಂಚಿನಲ್ಲಿರುವ ಸಮುದ್ರದ ಆಳವಿಲ್ಲದ ಭಾಗ ಮತ್ತು ಅಕ್ಕಪಕ್ಕದಲ್ಲಿರುವ ಆರ್ಕ್ಟಿಕ್‌ ದ್ವೀಪಸಮೂಹಗಳ ಮೇಲೆ ಆವರಿಸುವ ಸಮುದ್ರದ ಇಬ್ಬನಿಯು ಹಿಮಕರಡಿಯ ನೆಚ್ಚಿನ ಆವಾಸಸ್ಥಾನವಾಗಿದೆ. ಆರ್ಕ್ಟಿಕ್‌ ವಲಯದ ಆಳವಾದ ಸಮುದ್ರಗಳಿಗೆ ಹೋಲಿಸಿದರೆ, ಆರ್ಕ್ಟಿಕ್‌ ಜೀವನಾ ವರ್ತುಲ ಎನ್ನಲಾದ ಈ ವಲಯಗಳು ಹೆಚ್ಚಿನ ಜೈವಿಕ ಉತ್ಪಾದಕತೆ ಹೊಂದಿವೆ.[೨೨][೨೯] ನೀರ್ಗಲ್ಲುಗಳ ನಡುವಣ ನೀರಿನ ಹರವುಗಳುಹಾಗೂ ಆರ್ಕ್ಟಿಕ್‌ ಇಬ್ಬನಿಯ ನಡುವೆ ನೀರಿನ ಪಟ್ಟೆಗಳು ಸೇರಿದಂತೆ, ಸಮದ್ರ ಇಬ್ಬನಿ ಮತ್ತು ನೀರಿನ ಮಿಲನಸ್ಥಳಗಳಿರುವ ವಲಯಗಳಲ್ಲಿ ಹಿಮಕರಡಿಗಳು ಹೆಚ್ಚಾಗಿ ಕಾಣಸಿಗುತ್ತವೆ. ಹಿಮಕರಡಿಗಳು ತಮ್ಮ ನೆಚ್ಚಿನ ಆಹಾರಕ್ಕಾಗಿ ನೀರುನಾಯಿಗಳ ಬೇಟೆಯಾಡಲು ಹೊಂಚುಹಾಕುತ್ತವೆ.[೩೦] ಹಾಗಾಗಿ, ನೀರುನಾಯಿಗಳ ಸಾಂದ್ರತೆ ಕಡಿಮೆಯಿರುವ ಉತ್ತರ ಧ್ರುವ ಸಮೀಪದ ಧ್ರುವೀಯ ಬೋಗುಣಿಯ ಬದಲಾಗಿ, ಹಿಮಕರಡಿಗಳು ಹೆಚ್ಚಾಗಿ ಧ್ರುವೀಯ ಇಬ್ಬನಿ ಗುಡ್ಡೆಯ ಪರಿಧಿಯಲ್ಲಿ ಕಾಣಸಿಗುತ್ತವೆ.[೩೧]

ಹಿಮಕರಡಿ.

ವಾರ್ಷಿಕ ಇಬ್ಬನಿಯಲ್ಲಿ, ಹವಾಮಾನವು ಬದಲಾದಾಗೆಲ್ಲ ವರ್ಷದುದ್ದಕ್ಕೂ ಉಗಮಿಸಿ, ಮಾಯವಾಗುವ ನೀರಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಲ್ಲಿ ನೀರುನಾಯಿಗಳು ವಲಸೆ ಹೋಗುತ್ತವೆ, ಹಿಮಕರಡಿಗಳು ಈ ಬೇಟೆಗಳನ್ನು ಹಿಂಬಾಲಿಸುತ್ತವೆ.[೨೯] ಪ್ರತಿ ಬೇಸಿಗೆಯಲ್ಲಿಯೂ, ಹಡ್ಸನ್‌ ಬೇ, ಜೇಮ್ಸ್‌ ಬೇ ಮತ್ತು ಇತರೆ ವಲಯಗಳಲ್ಲಿ ಇಬ್ಬನಿಯು ಸಂಪೂರ್ಣವಾಗಿ ಕರಗುತ್ತದೆ. ಇದರಿಂದಾಗಿ ಹಿಮಕರಡಿಗಳು ನೆಲಕ್ಕೆ ವಲಸೆ ಹೋಗಿ ಮುಂದಿನ ಸಲ ಇಬ್ಬನಿಯಾಗುವ ವರೆಗೂ ಕಾಯಬೇಕಾಗುತ್ತದೆ.[೨೯] ಚುಕ್ಚಿ ಮತ್ತು ಬ್ಯೂಫರ್ಟ್‌ ಸಮುದ್ರಗಳಲ್ಲಿ, ಹಿಮಕರಡಿಗಳು ಪ್ರತಿ ಬೇಸಿಗೆಯಲ್ಲೂ, ವರ್ಷಪೂರ್ತಿ ಇಬ್ಬನಿಯಾಗೇ ಉಳಿಯುವ ಉತ್ತರ ದಿಕ್ಕಿನ ಇಬ್ಬನಿಯತ್ತ ಹಿಂದೆ ಸರಿಯುತ್ತವೆ.

ಜೀವವಿಜ್ಞಾನ ಮತ್ತು ವರ್ತನೆ

[ಬದಲಾಯಿಸಿ]

ಭೌತಿಕ ಲಕ್ಷಣಗಳು

[ಬದಲಾಯಿಸಿ]
ಹಿಮಕರಡಿ ಆಸ್ಥಿಪಂಜರ

ಭೂಚರ ಮಾಂಸಾಹಾರಿ ಪ್ರಾಣಿಗಳ ಪೈಕಿ ಹಿಮಕರಡಿ ಅತಿ ದೊಡ್ಡದಾಗಿದೆ. ಇದು ಸೈಬೀರಿಯನ್‌ ಹುಲಿಯ ಎರಡರಷ್ಟು ಗಾತ್ರದ್ದಾಗಿದೆ.[೩೨] ಹಿಮಕರಡಿಯು, ನೆಲದ ಮೇಲಿನ ಅತಿದೊಡ್ಡ ಪರಭಕ್ಷಕ ಹಾಗೂ ಅತಿದೊಡ್ಡ ಕರಡಿಯ ಪ್ರಭೇದದ ಹಣೆಪಟ್ಟಿಗಳನ್ನು ಕೊಡಿಯಾಕ್‌ ಕರಡಿಯೊಂದಿಗೆ ಹಂಚಿಕೊಂಡಿದೆ.[೩೩] ಪೂರ್ತಿ ಬೆಳೆದ ಗಂಡು ಹಿಮಕರಡಿಗಳು ಸುಮಾರು 350-680 ಕೆಜಿ (770-1500 ಪೌಂಡ್‌ಗಳು) ತೂಕ ಹೊಂದಿ, 2.4–3 m (7.9–9.8 ft) ಉದ್ದವಿರುತ್ತವೆ.[೩೪] ಪೂರ್ತಿ ಬೆಳೆದ ಹೆಣ್ಣು ಹಿಮಕರಡಿಗಳು ಸ್ಥೂಲವಾಗಿ ಗಂಡು ಹಿಮಕರಡಿಗಳ ಅರ್ಧದಷ್ಟು ಗಾತ್ರ ಹೊಂದಿರುತ್ತದೆ. ಇವು ಸಾಮಾನ್ಯವಾಗಿ 150–249 kg (331–549 lb) ತೂಕವಿದ್ದು, 1.8–2.4 metres (5.9–7.9 ft) ಉದ್ದವಿದೆ. ಗರ್ಭಾವಸ್ಥೆಯಲ್ಲಿ ಅವು 499 kg (1,100 lb) ರಷ್ಟು ತೂಕವಿರಬಹುದು.[೩೪] ಹಿಮಕರಡಿಯು ಸಸ್ತನಿಗಳಲ್ಲಿ ಅತ್ಯಂತ ಲೈಂಗಿಕವಾಗಿ ದ್ವಿರೂಪಿಯಾಗಿದೆ. ಕೇವಲ ರೆಕ್ಕೆಪಾದಿ (ಪಿನಿಪೆಡ್‌) ಹಿಮಕರಡಿಯನ್ನು ಮೀರಿಸಿ ಈ ಗುಣವನ್ನು ಹೊಂದಿರುತ್ತದೆ.[೩೫] ವಾಯುವ್ಯ ಅಲಾಸ್ಕಾದ ಕೊಟ್ಜೆಬ್ಯೂ ಸೌಂಡ್‌ನಲ್ಲಿ 1960ರಲ್ಲಿ ಗುಂಡಿಕ್ಕಿ ಕೊಲ್ಲಲಾದ ಗಂಡು ಕರಡಿಯು ದಾಖಲಿತ ಅತಿದೊಡ್ಡ ಹಿಮಕರಡಿಯಾಗಿತ್ತು. ಅದು 1,002 kg (2,209 lb) ತೂಕವಿದ್ದದ್ದು ವರದಿಯಾಗಿತ್ತು.[೩೬]

ಹಿಮಕರಡಿಗಳು ಆರ್ಕ್ಟಿಕ್‌ ಜೀವನಕ್ಕಾಗಿ, ಇಬ್ಬನಿಯ ಮೇಲ್ಮೈಗೆ ಹೊಂದಿಕೊಳ್ಳುವಂತಹ ತುಪ್ಪಳುಳ್ಳ ಪಾದಗಳು ಸೇರಿದಂತೆ, ಅಪೂರ್ವ ಲಕ್ಷಣಗಳಲ್ಲಿ ವಿಕಸನ ಹೊಂದಿವೆ.

ತನ್ನ ಅತಿಸನಿಹದ ಸಂಬಂಧಿ ಕಂದು ಕರಡಿಗೆ ಹೋಲಿಸಿದರೆ, ಹಿಮಕರಡಿಯ ಶರೀರ, ತಲೆಬುರುಡೆ ಮತ್ತು ಮೂತಿ ಇನ್ನೂ ಉದ್ದವಾಗಿದೆ.[೨೦] ಉತ್ತರ ಗೋಲಾರ್ಧದ ಯಾವುದೇ ಪ್ರಾಣಿಗೆ ಅನ್ವಯಿಸುವ ಅಲೆನ್‌ರ ನಿಯಮವು ಮುಂಗಾಣುವಂತೆ, ಹಿಮಕರಡಿಯ ಕಾಲುಗಳು ಸ್ಥೂಲವಾಗಿವೆ, ಹಾಗೂ ಕಿವಿಗಳು ಮತ್ತು ಬಾಲ ಕಿರಿದಾಗಿವೆ.[೨೦] ಆದರೂ, ಹಿಮ ಅಥವಾ ಇಬ್ಬನಿಯ ಮೇಲೆ ನಡೆದಾಡಲು ಹಾಗೂ ಈಜುವಾಗ ಮುನ್ನುಗ್ಗಲು ಅನುಕೂಲವಾಗುವಂತೆ ಹಿಮಕರಡಿಯ ಪಾದಗಳು ಬಹಳ ದೊಡ್ಡದಾಗಿವೆ. ಪೂರ್ತಿ ಬೆಳೆದ ಹಿಮಕರಡಿಯ ಪಾದಗಳು 30 ಸೆಮೀ. (12 ಅಂಗುಲ) ಅಗಲವಿವೆ.[೩೭] ಪಂಜಗಳ ಮೆತ್ತೆಗಳು ಸಣ್ಣ, ಮೃದುವಾದ ಚೂಚುಕಗಳಿಂದ ಕೂಡಿವೆ. ಹಿಮಕರಡಿಯು ಇಬ್ಬನಿಯ ಮೇಲೆ ನಡೆಯುವಾಗ ಈ ಚೂಚುಕಗಳು ಹಿಡಿತ ಸಾಧಿಸುವಲ್ಲಿ ನೆರವಾಗುತ್ತವೆ.[೨೦] ಕಂದು ಕರಡಿಯ ಉಗುರುಗಳಿಗೆ ಹೋಲಿಸಿದರೆ, ಹಿಮಕರಡಿಯ ಉಗುರುಗಳು ಕಿರಿದಾಗಿ, ಸ್ಥೂಲವಾಗಿವೆ. ಭಾರೀ ಬೇಟೆಯನ್ನು ಹಿಡಿಯಲು ಮತ್ತು ಹಿಮದ ಮೇಲೆ ಹಿಡಿತ ಸಾಧಿಸಲು ಉಗುರುಗಳು ನೆರವಾಗುತ್ತವೆ.[೨೦] ಉಗುರುಗಳ ಒಳಭಾಗವು ಆಳವಾಗಿ ತೋಡಿದಂತಿವೆ. ಹಿಮಕರಡಿಯು ತನ್ನ ವಾಸಸ್ಥಾನದಲ್ಲಿನ ಇಬ್ಬನಿಯಲ್ಲಿ ಅಗೆಯಲು ನೆರವಾಗುತ್ತವೆ. ಎಲ್ಲಾ ಹಿಮಕರಡಿಗಳು ಎಡಚವಾಗಿವೆ ಎಂದು ಅಂತರಜಾಲದಲ್ಲಿ ವಿಷಯಗಳು ಪದೇ ಪದೇ ಹರಡಲಾಗುತ್ತಿದ್ದರೂ,[೩೮][೩೯] ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಾಗಿಲ್ಲ.[೪೦] ಕಂದುಕರಡಿಗೆ ತದ್ವಿರುದ್ಧವಾಗಿ, ಕೂಡಿಹಾಕಲಾದ ಹಿಮಕರಡಿಗಳು ಹೆಚ್ಚು ಸ್ಥೂಲವಾಗಿರುವುದು ಅಥವಾ ಹೆಚ್ಚು ತೂಕ ಹೊಂದಿರುವುದು ಅತಿ ವಿರಳ. ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಬೆಚ್ಚನೆಯ ಉಷ್ಣಾಂಶಗಳು ಹಿಮಕರಡಿಗಳಲ್ಲಿ ಇಂತಹ ಪ್ರತಿಕ್ರಿಯೆಗೆ ಕಾರಣವಾಗುತ್ತಿರಬಹುದು.

ಹಿಮಕರಡಿಯ 42 ಹಲ್ಲುಗಳು ತನ್ನ ಅತೀ ಮಾಂಸಾಹಾರ ಕ್ರಮವನ್ನು ನಿರೂಪಿಸುತ್ತದೆ.[೨೦] ಕಂದು ಕರಡಿಗೆ ಹೋಲಿಸಿದರೆ, ಹಿಮಕರಡಿಯ ಕಪೋಲ ಹಲ್ಲುಗಳು ಸಣ್ಣದಾಗಿದ್ದು, ಇನ್ನಷ್ಟು ಹರಿತವಾಗಿದೆ. ಅದರ ಕೋರೆಹಲ್ಲುಗಳು ದೊಡ್ಡದಾಗಿದ್ದು, ಮೊನಚಾಗಿರುತ್ತವೆ.[೨೦]

ಹಿಮಕರಡಿಗಳ ಶೀತ-ತಡೆಯುವ ವ್ಯವಸ್ಥೆಯು ತಿಮಿಕೊಬ್ಬಿನ 10 cm (3.9 in), ಚರ್ಮ ಮತ್ತು ತುಪ್ಪುಳಿನವರೆಗೂ ಉತ್ತಮ ರೀತಿಯಲ್ಲಿದೆ. 10 °C (50 °F)ಕ್ಕಿಂತಲೂ ಮೇಲ್ಪಟ್ಟ ಉಷ್ಣಾಂಶಗಳಲ್ಲಿ ಅವು ತಪ್ತವಾಗುತ್ತದೆ. ಅವಕೆಂಪು ಛಾಯಾಚಿತ್ರಣದಲ್ಲಿ ಅವು ಬಹುಶಃ ಕಾಣದಂತಾಗಿರುತ್ತದೆ.[೪೧] ಹಿಮಕರಡಿಯ ತುಪ್ಪುಳು ದಟ್ಟವಾದ ಒಳ-ತುಪ್ಪುಳು ಮತ್ತು ಹೊರಭಾಗದಲ್ಲಿ ರೋಮಗಳನ್ನು ಹೊಂದಿರುತ್ತದೆ. ಅವು ನೋಡಲು ಬಿಳಿಯ ಬಣ್ಣ ಅಥವಾ ಒಂದು ರೀತಿಯ ಕಂದು ಬಣ್ಣದಂತೆ ಕಂಡುಬಂದರೂ, ಅವು ನಿಜಕ್ಕೂ ಪಾರದರ್ಶಕವಾಗಿವೆ.[೩೭] ಹೊರ-ರೋಮವು ಹಿಮಕರಡಿಯ ಶರೀರದ ರಕ್ಷಣೆಗೆ 5–15 cm (2.0–5.9 in) ಇದೆ.[೪೨] ಹಿಮಕರಡಿಗಳು ಮೇ ತಿಂಗಳಿಂದ ಆಗಸ್ಟ್‌ ತಿಂಗಳ ಅವಧಿಯಲ್ಲಿ ಕೂದಲು ಉದುರಿಸುತ್ತವೆ. ಆದರೆ, ಇತರೆ ಆರ್ಕ್ಟಿಕ್‌ ಸಸ್ತನಿಗಳಿಗಿಂತ ಭಿನ್ನವಾಗಿದೆ. ಅವು ಬೇಸಿಗೆಯಲ್ಲಿ ತಮ್ಮನ್ನು ತಾವು ನಿಗೂಢಗೊಳಿಸಿಕೊಳ್ಳಲೆಂದು ತಮ್ಮ ಮೇಲ್ಪದರವನ್ನು ಬದಲಿಸಿಕೊಳ್ಳುವುದಿಲ್ಲ. ಹಿಮಕರಡಿಯ ಹೊರ-ರೋಮಗಳು ತನ್ನ ಚರ್ಮದತ್ತ ಬೆಳಕನ್ನು ರವಾನಿಸಲು ನಾರು-ದ್ಯುತಿವಹನ ವ್ಯವಸ್ಥೆಯೆಂದು ಊಹಿಸಲಾಗಿತ್ತು. ಆದರೆ, ಇತ್ತೀಚೆಗಿನ ಅಧ್ಯಯನಗಳು ಈ ಸಿದ್ಧಾಂತವನ್ನು ಅಲ್ಲಗಳೆದಿವೆ.[೪೩]

ಪ್ರಾಣಿಸಂಗ್ರಹಾಲಯದಲ್ಲಿ ಹಿಮಕರಡಿಯೊಂದು ಧುಮುಕುತ್ತಿರುವ ದೃಶ್ಯ.
ಆರ್ಕ್ಟಿಕ್‌ ಪ್ರಾಣಿಸಂಗ್ರಹಾಲಯದ ಸಂಶ್ಲೇಷಿತ ಪರಿಸರದಲ್ಲಿ ಹಿಮಕರಡಿ.

ಬಿಳಿಯ ತುಪ್ಪುಳು ಸಾಮಾನ್ಯವಾಗಿ ಹಿಮಕರಡಿಗೆ ವಯಸ್ಸಾದಂತೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಬೆಚ್ಚನೆಯ, ಆರ್ದ್ರ ಹವೆಯಲ್ಲಿ ಸಾಕಲಾದ ಹಿಮಕರಡಿಗಳ ತುಪ್ಪುಳು, ಹೊರ-ರೋಮಗಳಲ್ಲಿ ಬೆಳೆಯುವ ಪಾಚಿಗಳ ಕಾರಣ, ತಿಳಿ ಹಸಿರು ಬಣ್ಣಕ್ಕೆ ತಿರುಗಬಹುದು.[೪೪] ಗಂಡು ಹಿಮಕರಡಿಗಳ ಮುಂಗಾಲುಗಳಲ್ಲಿ ರೋಮಗಳು ಇನ್ನೂ ಉದ್ದವಿರುತ್ತವೆ. ಹಿಮಕರಡಿ 14 ವರ್ಷಗಳ ವಯಸ್ಸು ತಲುಪುವವರೆಗೂ ರೋಮಗಳು ಉದ್ದಕ್ಕೆ ಬೆಳೆಯುವುದು. ಸಿಂಹದ ಕೇಸರಗಳಂತೆಯೇ, ಗಂಡು ಹಿಮಕರಡಿಯ ಅಲಂಕಾರದ ಮುಂಗಾಲು ಕೂದಲುಗಳು ಹೆಣ್ಣು ಹಿಮಕರಡಿಗಳನ್ನು ಆಕರ್ಷಿಸುವುದು ಎಂದು ತಿಳಿಯಲಾಗಿದೆ.[೪೫]

ಹಿಮಕರಡಿ ಉತ್ತಮವಾದ ವಾಸನೆ ಗ್ರಹಿಸುವ ಶಕ್ತಿ ಹೊಂದಿದೆ. ಸರಿಸುಮಾರು 1 mi (1.6 km) ದೂರವಿರುವ ಹಾಗೂ ಸುಮಾರು 3 ft (0.91 m) ಹಿಮದಲ್ಲಿ ಹೂಳಲಾಗಿರುವ ನೀರುನಾಯಿಗಳ ಇರುವಿಕೆಯನ್ನು ಗ್ರಹಿಸಬಲ್ಲವು.[೪೬] ಇದರ ಗ್ರಹಣ ಮತ್ತು ಶ್ರವಣ ಶಕ್ತಿಯು ಮಾನವನಷ್ಟೇ ಚುರುಕಾಗಿದೆ, ಹಾಗೂ ಬಹಳ ದೂರದ ತನಕ ಜೀವಿ-ವಸ್ತುಗಳನ್ನು ಗುರುತಿಸುವಂತಹ ಚುರುಕಿನ ದೃಷ್ಟಿಯನ್ನೂ ಸಹ ಹೊಂದಿದೆ.[೪೬]

ಹಿಮಕರಡಿಯು ಉತ್ತಮವಾಗಿ ಈಜುವ ಪ್ರಾಣಿ. ಅದು ನೆಲದಿಂದ 200 mi (320 km) ದೂರದ ತನಕ ಉತ್ತರ ಧೃವದ ಆರ್ಕ್ಟಿಕ್‌ ಸಾಗರದಲ್ಲಿ ಈಜುವುದುಂಟು. ಅದರ ಶರೀರದ ಕೊಬ್ಬು ಪ್ರಮಾಣವು ಶಕ್ತಿ ನೀಡುವುದರೊಂದಿಗೆ, ಅದು ನಾಯಿಯ ಓಟದಂತೆ, ಅಗಲವಾದ ತನ್ನ ಮುಂಗಾಲು ಪಾದಗಳನ್ನು ಬಳಸಿ ನೀರಿನಲ್ಲಿ ತೇಲುವ ಶಕ್ತಿಯೊಂದಿಗೆ ಮುನ್ನುಗ್ಗುತ್ತದೆ.[೪೭] ಹಿಮಕರಡಿಗಳು ಪ್ರತಿ ಗಂಟೆಗೆ ಆರು ಮೈಲ್‌ಗಳ ವೇಗದಲ್ಲಿ ಈಜಬಲ್ಲವು. ನಡೆಯುವಾಗ, ಹಿಮಕರಡಿಯು ತಡವರಿಸಿ ನಡೆಯುವ ಭಂಗಿಯನ್ನು ಹೊಂದಿರುತ್ತದೆ. ಇದು ಪ್ರತಿಗಂಟೆಗೆ 5.5 ಕಿ.ಮೀ. (ಪ್ರತಿ ಗಂಟೆಗೆ 3.5 ಮೈಲ್‌ಗಳು) ವೇಗದಲ್ಲಿ ನಡೆಯುತ್ತದೆ.[೪೭]

ಬೇಟೆ ಮತ್ತು ಆಹಾರ

[ಬದಲಾಯಿಸಿ]
ಆಳವಾದ ಕಂದರಗಳಲ್ಲಿ ನೀರುನಾಯಿಗಳನ್ನು ಹುಡುಕಲು ಹಿಮಕರಡಿಯ ಉದ್ದನೆಯ ಮೂತಿ ಮತ್ತು ಕತ್ತು ನೆರವಾಗುತ್ತವೆ. ಪ್ರಬಲವಾದ ತನ್ನ ಹಿಂಗಾಲುಗಳು ದೊಡ್ಡಗಾತ್ರದ ಬೇಟೆಯನ್ನು ಎಳೆಯಲು ನೆರವಾಗುತ್ತವೆ.[೪೮]

ಕರಡಿಯ ಜಾತಿಯಲ್ಲಿ ಹಿಮಕರಡಿಯು ಅತ್ಯಂತ ಕಠಿಣ ಮಾಂಸಾಹಾರಿ. ಅದು ತನ್ನ ಆಹಾರಕ್ಕಾಗಿ ದುಂಡಾಗಿ ಮತ್ತು ಗಡ್ಡದ ನೀರುನಾಯಿಗಳನ್ನು ಬೇಟೆಯಾಡುತ್ತದೆ.[೪೯] ಆರ್ಕ್ಟಿಕ್‌ ವಲಯವು ದಶಲಕ್ಷದಷ್ಟು ನೀರುನಾಯಿಗಳಿಗೆ ತಾಣವಾಗಿದೆ. ಉಸಿರಾಡಲೆಂದು ಇಬ್ಬನಿಗಳಲ್ಲಿನ ಮಂಜುಗಡ್ಡೆಯ ಸಣ್ಣ ಗುಹೆಗಳಲ್ಲಿ ಕಾಣಿಸಿಕೊಂಡಾಗ, ಅಥವಾ, ವಿಶ್ರಮಿಸಲೆಂದು ಇಬ್ಬನಿಯಿಂದ ಹೊರಬರುವಾಗ ಅವು ಹಿಮಕರಡಿಗೆ ಬೇಟೆಯಾಗುತ್ತವೆ.[೪೮] ಹಿಮಕರಡಿಯು ಸಾಮಾನ್ಯವಾಗಿ ಇಬ್ಬನಿ, ನೀರು ಮತ್ತು ಗಾಳಿಯ ಮಿಲನಸ್ಥಾನದಲ್ಲಿ ಬೇಟೆಯಾಡುತ್ತವೆ. ಅವು ನೆಲದಲ್ಲಿ ಅಥವಾ ನೀರಿನಲ್ಲಿ ನೀರುನಾಯಿಗಳನ್ನು ಬೇಟೆಯಾಡಿ ಹಿಡಿಯುವುದು ವಿರಳ.[೫೦]

ಹಿಮಕರಡಿಯು ಸಾಮಾನ್ಯವಾಗಿ ತಟಸ್ಥ-ಬೇಟೆ [೫೧] ಎನ್ನಲಾದ ರೀತಿಯಲ್ಲಿ ಬೇಟೆಯಾಡುತ್ತದೆ. ತನ್ನ ಅದ್ಭುತವಾದ ವಾಸನೆ ಗ್ರಹಿಸುವ ಶಕ್ತಿಯನ್ನು ಬಳಸಿ, ನೀರುನಾಯಿಗಳು ಉಸಿರಾಡಲು ಬರುವ ಇಬ್ಬನಿ ಚಿಕ್ಕ ಗುಹಾತಾಣ ಗುರುತಿಸಿ, ಅದರ ಬಳಿ ನಿಃಶಬ್ಬವಾಗಿ ಬಂದು ಹೊಂಚುಹಾಕಿ, ನೀರುನಾಯಿ ಗೋಚರಿಸುವುದನ್ನು ಕಾಯುತ್ತದೆ.[೪೮] ನೀರುನಾಯಿಯು ಶ್ವಾಶೋಚ್ಛಾದ ಮಾಡಿದಾಗ, ಅದರ ಜಾಡು ಹಿಡಿದು ಹಿಮಕರಡಿ ಇದರ ವಾಸನೆಯನ್ನು ಗ್ರಹಿಸಿ, ತನ್ನ ಮುಂಗಾಲು ಪಂಜವನ್ನು ಇಬ್ಬನಿ ರಂಧ್ರದಲ್ಲಿ ಚಾಚಿ ನೀರುನಾಯಿಯನ್ನು ಹಿಡಿದು ಹೊರಗೆಳೆಯುತ್ತದೆ.[೪೮] ಹಿಮಕರಡಿಯು ನೀರುನಾಯಿಯ ತಲೆಯನ್ನು ಕಚ್ಚಿ ಬುರುಡೆಯನ್ನು ಪುಡಿಗೊಳಿಸಿ ಅದನ್ನು ಕೊಲ್ಲುತ್ತದೆ.[೪೮] ಇಬ್ಬನಿಯ ಮೇಲೆ ವಿಶ್ರಮಿಸುತ್ತಿರುವ ನೀರುನಾಯಿಗಳನ್ನೂ ಸಹ ಬೇಟೆಯಾಡುತ್ತದೆ. ನೀರುನಾಯಿಯನ್ನು ನೋಡಿದ ಕೂಡಲೆ, ಅದು ಸುಮಾರು 100 yd (91 m) ಸನಿಹದ ವರೆಗೂ ನಡೆದು, ನಂತರ ಮುದುರಿಕೊಳ್ಳುತ್ತದೆ. ನೀರುನಾಯಿಯು ಹತ್ತಿರ ನುಸುಳುತ್ತಿರುವ ಹಿಮಕರಡಿಯನ್ನು ಗಮನಿಸದಿದ್ದಲ್ಲಿ, ಅದು ನೀರುನಾಯಿಯ ಇನ್ನೂ 30 to 40 feet (9.1 to 12.2 m) ಸನಿಹಕ್ಕೆ ನುಸುಳಿ, ಹಠಾತ್ತನೆ ಮುನ್ನುಗ್ಗಿ ಅದರ ಮೇಲೆ ಅಪ್ಪಳಿಸುತ್ತದೆ.[೪೮] ಹಿಮದಲ್ಲಿ ಹೆಣ್ಣು ನೀರುನಾಯಿಗಳು ನಿರ್ಮಿಸುವ ಮರಿಹಾಕಲು ಬೇಕಾಗುವ ಗೂಡುಗಳ ಮೇಲೆ ಹಿಮಕರಡಿ ದಾಳಿ ನಡೆಸಿ ಬೇಟೆಯಾಡುವುದು ಮೂರನೆಯ ರೀತಿಯಾಗಿದೆ.[೫೧]

ತಿಮಿಂಗಿಲದ ಅವಶೇಷದೊಂದಿಗೆ ಹಿಮಕರಡಿ.

ವ್ಯಾಪಕವಾಗಿ ಹರಡಲಾದ ಕಟ್ಟುಕಥೆಯೊಂದರ ಪ್ರಕಾರ, ಬೇಟೆಯಾಡುವ ಸಮಯ ಹಿಮಕರಡಿಗಳು ತಮ್ಮ ಕಪ್ಪುಬಣ್ಣದ ಮೂಗುಗಳನ್ನು ತಮ್ಮ ಪಂಜಗಳಿಂದ ಮುಚ್ಚಿಕೊಳ್ಳುತ್ತವಂತೆ. ಇದು ನಿಜ ಎಂದು ಸಾಬೀತಾದರೂ, ಹಿಮಕರಡಿಗಳು ಈ ರೀತಿ ಮಾಡುವುದು ಬಹಳ ವಿರಳ. ಆದರೂ ಸ್ಥಳೀಯ ಮೌಖಿಕ ಇತಿಹಾಸ ಹಾಗೂ ಅರಂಭಿಕ ಆರ್ಕ್ಟಿಕ್‌ ಪರಿಶೋಧಕರ ಇತಿಹಾಸದಲ್ಲಿ ಈ ಕಥೆಯಿದೆ. ಇತ್ತೀಚೆಗಿನ ದಶಕಗಳಲ್ಲಿ ಹಿಮಕರಡಿಗಳ ಮೂಗುಮುಚ್ಚುವಿಕೆಗೆ ಯಾವುದೇ ಪ್ರತ್ಯಕ್ಷ-ಸಾಕ್ಷ್ಯಾಧಾರಗಳಿಲ್ಲ.[೪೭]

ಸಂಪೂರ್ಣವಾಗಿ ಬೆಳೆದ ಹಿಮಕರಡಿಗಳು ನೀರುನಾಯಿಯ ಕೇವಲ ಕ್ಯಾಲರಿಯುಕ್ತ ಚರ್ಮ ಮತ್ತು ತಿಮಿಕೊಬ್ಬನ್ನು ಮಾತ್ರ ತಿನ್ನುತ್ತವೆ. ಕಿರಿಯ ಹಿಮಕರಡಿಗಳು ನೀರುನಾಯಿಗಳ ಪ್ರೋಟೀನ್‌-ಯುಕ್ತ ಕೆಂಪು ಮಾಂಸವನ್ನು ಮಾತ್ರ ಭಕ್ಷಿಸುತ್ತದೆ.[೪೮] ತನ್ನ ತಾಯಿಯಿಂದ ಪ್ರತ್ಯೇಕವಾಗಿದ್ದು, ನೀರುನಾಯಿಗಳನ್ನು ಬೇಟೆಯಾಡಲು ಸಾಕಷ್ಟು ಅನುಭವ ಮತ್ತು ಶರೀರ ಗಾತ್ರವನ್ನು ಪಡೆಯದ ಕಿರಿಯ ಹಿಮಕರಡಿಗಳಿಗೆ ಇತರೆ ಹಿಮಕರಡಿಗಳ ಬೇಟೆಯಾಡಿದ ಸತ್ತ ಪ್ರಾಣಿಗಳು ಮುಖ್ಯ ಪೌಷ್ಟಿಕಾಂಶ ನೀಡುವ ಮೂಲಗಳಾಗಿವೆ. ಕಿರಿಯ ಹಿಮಕರಡಿಗಳು ನೀರುನಾಯಿಯೊಂದನ್ನು ಕೊಂದರೂ ಸಹ, ಇನ್ನೂ ದೊಡ್ಡ ಗಾತ್ರದ ಹಿಮಕರಡಿಗಳಿಂದ ಬೇಟೆಯನ್ನು ಉಳಿಸಿಕೊಳ್ಳಲಾಗದೆ, ಅರ್ಧ ತಿಂದುಹೋದ ಪ್ರಾಣಿಯನ್ನು ತಿನ್ನಬೇಕಾದೀತು. ಬೇಟೆಯನ್ನು ತಿಂದ ನಂತರ, ಹಿಮಕರಡಿಗಳು ತಮ್ಮನ್ನು ನೀರಿನಲ್ಲೋ, ಹಿಮದಲ್ಲೋ ಸ್ವಚ್ಛಗೊಳಿಸಿಕೊಳ್ಳುತ್ತವೆ.[೪೭]

ಹಿಮಕರಡಿಯು ಅಗಾಧ ಬಲವುಳ್ಳ ಪರಬಕ್ಷಕ. ಅದು ಸಂಪೂರ್ಣವಾಗಿ ಬೆಳೆದ ಕಡಲಸಿಂಹವನ್ನು ಕೊಲ್ಲಬಹುದು, ಆದರೆ ಕಡಲಸಿಂಹವು ಹಿಮಕರಡಿಗಿಂತಲೂ ಹೆಚ್ಚು ತೂಕ ಹೊಂದಿರುವ ಕಾರಣ, ಹಿಮಕರಡಿಯು ಅದನ್ನು ಬೇಟೆಯಾಡುವ ಸಾಧ್ಯತೆ ಬಹಳ ಕಡಿಮೆ.[೫೨] ಉಸಿರಾಡುವ ರಂಧ್ರಗಳಲ್ಲಿ ತಮ್ಮ ಪಂಜ ಬೀಸಿ ಬಿಳಿ (ಬಿಲೂಗ) ತಿಮಿಂಗಿಲಗಳನ್ನು ಬೇಟೆಯಾಡಿರುವುದುಂಟು. ತಿಮಿಂಗಿಲಗಳು ಕಡಲಸಿಂಹಗಳಂತೆ ದೊಡ್ಡ ಗಾತ್ರದ್ದಾಗಿದ್ದು, ಹಿಮಕರಡಿಗಳಿಗೆ ಇವುಗಳನ್ನು ನಿಗ್ರಹಿಸಲು ಕಷ್ಟವಾಗುತ್ತದೆ. ಆರ್ಕ್ಟಿಕ್‌ನಲ್ಲಿ ವಾಸಿಸುವ ಹಲವು ನೆಲ-ವಾಸಿ ಜೀವಿಗಳು ಹಿಮಕರಡಿಗಿಂತಲೂ ವೇಗವಾಗಿ ಓಡಿ ಅದನ್ನು ಮೀರಿಸಬಹುದು. ಏಕೆಂದರೆ, ಹಿಮಕರಡಿಗಳು ಬೇಗನೆ ತಪ್ತವಾಗುತ್ತವೆ. ಹಿಮಕರಡಿಯು ಎದುರಿಸುವಂತಹ ಹಲವು ಕಡಲ ಜೀವಿಗಳು ಈಜಿ ಅದನ್ನು ಹಿಂದಿಕ್ಕಬಹುದು. ಕೆಲವಡೆ, ಹಿಮಕರಡಿಯ ಆಹಾರಕ್ಕಾಗಿ ಕಡಲಸಿಂಹದ ಮರಿಗಳು ಮತ್ತು ಪೂರ್ಣವಾಗಿ ಬೆಳೆದ ಕಡಲ ಸಿಂಹ ಅಥವಾ ತಿಮಿಂಗಿಲದ ಮೃತ ದೇಹಗಳು ಪೂರಕವಾಗಿದೆ. ತಿಮಿಂಗಿಲದ ತಿಮಿಕೊಬ್ಬು ಕೊಳೆಯುತ್ತಿದ್ದಾಗಲೂ ಹಿಮಕರಡಿಯ ಆಹಾರವಾಗುತ್ತದೆ.[೫೩]

ಗರ್ಭಾವಸ್ಥೆಯಲ್ಲಿನ ಹೆಣ್ಣುಗಳನ್ನು ಹೊರತುಪಡಿಸಿ, ಹಿಮಕರಡಿಗಳು ವರ್ಷದುದ್ದಕ್ಕೂ ಸಕ್ರಿಯವಾಗಿರುತ್ತವೆ.[೫೪] ಆದರೂ ಅವುಗಳ ರಕ್ತದಲ್ಲಿ ಹೆಚ್ಚು ಉಪಯುಕ್ತವಲ್ಲದ ಚಳಿನಿದ್ದೆ ಜರುಗಿಸುವ ಪ್ರೇರಕವಿರುತ್ತದೆ. ಕಂದು ಮತ್ತು ಕರಿ ಕರಡಿಗಳಿಗಿಂತ ಭಿನ್ನವಾಗಿ, ಹಿಮಕರಡಿಗಳು ಬೇಸಿಗೆಯ ಅಪರಾರ್ಧ ಮತ್ತು ಆರಂಭಿಕ ಶರತ್ಕಾಲದ ಸಮಯ, ಹಲವು ತಿಂಗಳುಗಳ ಕಾಲ ಆಹಾರ ಸೇವಿಸದೆ ಉಳಿದುಕೊಳ್ಳಬಹುದು. ಈ ಸಮಯದಲ್ಲಿ ಸಾಗರದ ನೀರು ಕರಗಿರುವುದರಿಂದ ಹಿಮಕರಡಿಗಳು ನೀರುನಾಯಿಗಳನ್ನು ಬೇಟೆಯಾಡಲು ಸಾಧ್ಯವಾಗಿರುವುದಿಲ್ಲ.[೫೪] ಬೇಸಿಗೆ ಹಾಗೂ ಶರತ್ಕಾಲದ ಆರಂಭಿಕ ಸಮಯದಲ್ಲಿ ಸಾಗರದ ಇಬ್ಬನಿ ಅಲಭ್ಯವಾದಾಗ, ಕೆಲವು ಹಿಮಕರಡಿಗಳು ಹಲವು ತಿಂಗಳುಗಳ ಕಾಲ ತಮ್ಮ ಕೊಬ್ಬು ಶೇಖರಣೆಗಳನ್ನು ಬಳಸಿಕೊಂಡೇ ಜೀವಿಸಬಲ್ಲವು.[೪೧] ಹಿಮಕರಡಿಗಳು ಕಸ್ತೂರಿ-ಗೋವು, ಹಿಮಸಾರಂಗ, ಹಕ್ಕಿಗಳು, ಮೊಟ್ಟೆಗಳು, ದಂಶಕಗಳು, ಚಿಪ್ಪುಮೀನುಗಳು, ಏಡಿಗಳು, ಇತರೆ ಹಿಮಕರಡಿಗಳೂ ಸೇರಿದಂತೆ, ವಿಭಿನ್ನ ರೀತಿಯ ಇತರೆ ವನ್ಯ ಆಹಾರಗಳನ್ನು ತಿನ್ನುವುದು ಕಂಡುಬಂದಿದೆ. 'ಬೆರಿ'ಗಳು, ಬೇರುಗಳು ಮತ್ತು ಕಡಲುಚೇಣಿ ಸೇರಿದಂತೆ ಗಿಡಗಳನ್ನೂ ಸಹ ತಿನ್ನಬಹುದು. ಆದರೆ ಇವು ಯಾವುವೂ ಸಹ ಹಿಮಕರಡಿಗಳ ಆಹಾರಕ್ರಮದ ಗಮನಾರ್ಹ ಅಂಗವಾಗಿಲ್ಲ.[೫೨] ಕಡಲ ಪ್ರಾಣಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಪಡೆಯುವಂತೆ ಹಿಮಕರಡಿಯ ಶರೀರದ ವಿನ್ಯಾಸ ಮತ್ತು ರಚನೆ ವೈಶಿಷ್ಟ್ಯವಾಗಿದೆ. ಅದು ನೆಲದ ಮೇಲಿನ ಆಹಾರದಿಂದ ಸಾಕಷ್ಟು ಕ್ಯಾಲೊರಿಯುಕ್ತ ಪೌಷ್ಟಿಕಾಂಶ ಪಡೆದುಕೊಳ್ಳಲಾರದು.[೫೫][೫೬]

ಹಿಮಕರಡಿಗಳು ಬಹಳ ಕುತೂಹಲವುಳ್ಳ ಹಾಗೂ ಮಿಕ್ಕಿಹೋದ ಮಾಂಸವನ್ನು ತಿನ್ನುವ ಪ್ರಾಣಿಯಾಗಿರುವುದರಿಂದ,[೫೨][೫೭] ಮಾನವನ ವಾಸಸ್ಥಳಕ್ಕೆ ಬರುವ ಹಿಮಕರಡಿಗಳು ಮಾನವರು ಹಾಕುವ ಕಸ ತ್ಯಾಜ್ಯ ಆಯ್ದು ಪರಿಶೀಲಿಸಿ ತಿನ್ನುವುದುಂಟು. ಸ್ಟೈರೊಫೋಮ್‌, ಪ್ಲ್ಯಾಸ್ಟಿಕ್‌, ಕಾರ್‌ ವಿದ್ಯುತ್ಕೋಶಗಳು, ಇಥಿಲೀನ್‌ ಗ್ಲೈಕಾಲ್‌, ದ್ರವೀಯಗಳು ಹಾಗೂ ಮೋಟಾರ್‌ ತೈಲದಂತಹ ಅಪಾಯಕಾರಿ ವಸ್ತುಗಳೂ ಸೇರಿದಂತೆ ಹಿಮಕರಡಿಗಳು ಕಾಣಸಿಕ್ಕ ವಸ್ತುಗಳನ್ನೆಲ್ಲಾ ತಿನ್ನುವುದುಂಟು.[೫೨][೫೭]

ಹಿಮಕರಡಿಗಳನ್ನು ರಕ್ಷಿಸಲೆಂದು, ಕೆನಡಾ ದೇಶದ ಮ್ಯಾನಿಟೋಬಾಚರ್ಚಿಲ್‌ ನಗರದಲ್ಲಿರುವ ವಿಲೇವಾರಿ ಕೇಂದ್ರವನ್ನು 2006ರಲ್ಲಿ ಮುಚ್ಚಲಾಯಿತು. ಈಗ ತ್ಯಾಜ್ಯಗಳನ್ನು ಮರುಬಳಸಲಾಗಿದೆ. ಅಥವಾ ಮ್ಯಾನಿಟೋಬಾದ ಥಾಮ್ಸನ್‌ ನಗರಕ್ಕೆ ಒಯ್ಯಲಾಗಿದೆ.[೫೮][೫೯]

ಗಂಡು ಹಿಮಕರಡಿಗಳು ಆಗಾಗ್ಗೆ ಆಟವಾಡಿ ಕಾದಾಡುತ್ತವೆ.ಜತೆಗೂಡುವ ಸಮಯದಲ್ಲಿ, ಹಿಮಕರಡಿಗಳ ನಡುವಿನ ಕದನವು ಇನ್ನೂ ತೀವ್ರವಾಗಿದ್ದು, ಆಗಾಗ್ಗೆ ಗಾಯಗಳು ಮತ್ತು ಮುರಿದ ಹಲ್ಲುಗಳಲ್ಲಿ ಪರಿಣಮಿಸುತ್ತದೆ.

ನಡವಳಿಕೆ

[ಬದಲಾಯಿಸಿ]

ಕಂದು ಕರಡಿಗಳಿರುವಂತೆ, ಹಿಮಕರಡಿಗಳು ಆಯಾ ಪ್ರದೇಶರಕ್ಷಕಗಳಲ್ಲ. ಅವು ಒಂದೇ ತೆರನಾದ ನಡವಳಿಕೆ ಹೊಂದಿವೆ ಎಂದು ಹೇಳಲಾಗಿದ್ದರೂ, ಘರ್ಷಣೆಯ ಬದಲಿಗೆ ಅವು ಬಹಳ ಎಚ್ಚರಿಕೆಯಿಂದಿರುತ್ತವೆ. ಕಾದಾಡುವ ಬದಲು ತಪ್ಪಿಸಿಕೊಂಡು ಹೋಗಲು ಇಚ್ಛಿಸುತ್ತದೆ.[೬೦] ತೀವ್ರವಾಗಿ ಕೆರಳಿಸಿದ ಹೊರತು, ಸ್ಥೂಲವಾದ ಹಿಮಕರಡಿಗಳು ಮನುಷ್ಯರ ಮೇಲೆ ಹಲ್ಲೆ ಮಾಡುವುದು ವಿರಳ. ಆದರೆ ಹಸಿದ ಹಿಮಕರಡಿಗಳು ಮುಂದೇನು ಮಾಡುತ್ತವೆ; ಎಂದು ಊಹಿಸುವುದು ಬಹಳ ಕಷ್ಟ; ಅವು ಮನುಷ್ಯರನ್ನು ಕೊಂದು ತಿಂದ ಪ್ರಕರಣಗಳುಂಟು.[೫೩] ಹಿಮಕರಡಿಗಳು ಕದ್ದು ಮುಚ್ಚಿ ಬೇಟೆಯಾಡುವ ಸ್ವಭಾವದವು. ಹಿಮಕರಡಿ ಹಲ್ಲೆ ಮಾಡುವ ತನಕ, ಹಿಮಕರಡಿ ಹತ್ತಿರ ನುಸುಳುತ್ತಿರುವುದು ಬೇಟೆಗೆ ತಿಳಿದಿರುವುದಿಲ್ಲ.[೬೧] ಕಂದು ಕರಡಿಯು ಮನುಷ್ಯನ ಮೇಲೆ ಹಲ್ಲೆ ನಡೆಸಿ ಹೊರಟುಹೋದರೆ, ಹಿಮಕರಡಿಗಳು ಬೇಟೆಯಾಡುತ್ತವೆ. ಹಾಗಾಗಿ ಇಂತಹ ಹಲ್ಲೆಗಳು ಎಂದಿಗೂ ಮಾರಣಾಂತಿಕವಾಗಿರುತ್ತದೆ.[೬೧] ಆದರೂ, ಆರ್ಕ್ಟಿಕ್‌ ವಲಯದಲ್ಲಿ ಜನಸಂಖ್ಯೆಯು ಬಹಳ ಕಡಿಮೆಯಿರುವುದರಿಂದ, ಇಂತಹ ಹಲ್ಲೆಗಳು ಅಪರೂಪ.

ಸಾಮಾನ್ಯವಾಗಿ, ಪೂರ್ಣವಾಗಿ ಬೆಳೆದ ಹಿಮಕರಡಿಗಳು ಒಂಟಿಯಾಗಿಯೇ ಜೀವಿಸುತ್ತವೆ. ಆದರೂ, ಹಿಮಕರಡಿಗಳು ಗಂಟೆಗಟ್ಟಲೆ ಒಟ್ಟಿಗೆ ಆಟವಾಡಿ, ಒಂದನ್ನೊಂದು ಅಪ್ಪಿಕೊಂಡು ಮಲಗಿರುವುದು ಕಂಡುಬಂದಿವೆ.[೫೩] ಹಿಮಕರಡಿ ತಜ್ಞ ನಿಕಿತಾ ಒವ್ಸಿಯಾನಿಕೊವ್‌ರ ಪ್ರಕಾರ, ಪೂರ್ಣವಾಗಿ ಬೆಳೆದ ಹಿಮಕರಡಿಗಳು 'ಆಪ್ತ ಸ್ನೇಹ ಬೆಳೆಸಿಕೊಳ್ಳುವುದು' ರೂಢಿ.[೬೦] ಹಿಮಕರಡಿಯ ಮರಿಗಳು ಸಹ ಆಟವಾಡುವ ಪ್ರವೃತ್ತಿ ಹೊಂದಿರುತ್ತವೆ. ಕಿರಿಯ ಗಂಡು ಹಿಮಕರಡಿಗಳು ಕಾದಾಡುವ ಆಟವನ್ನು ಒಂದು ರೀತಿಯ ತಾಲೀಮಿನಂತೆ ಆಡುತ್ತವೆ. ಇದು ಮುಂದೆ ಒಟ್ಟುಗೂಡುವ ಋತುವಿನಲ್ಲಿ ತೀವ್ರ ಪೈಪೋಟಿಯ ಪರಿಸ್ಥಿತಿಯನ್ನು ಎದುರಿಸಲು ಉಪಯುಕ್ತವಾಗಬಹುದು.[೬೨] ಹಿಮಕರಡಿಗಳು ಗರ್ಜನೆ, ಅಬ್ಬರ, ಗುರುಗುಟ್ಟುವಿಕೆ, ತೃಪ್ತಿಸೂಚಕ ಧ್ವನಿಗಳು ಸೇರಿದಂತೆ ವಿವಿಧ ರೀತಿಯ ಧ್ವನಿಗಳನ್ನು ಮಾಡುತ್ತವೆ.[೬೩]

ಇಸವಿ 1992ರಲ್ಲಿ, ಹಿಮಕರಡಿಯು ತನ್ನ ಗಾತ್ರದ ಹತ್ತನೆಯ ಒಂದು ಭಾಗದಷ್ಟಿದ್ದ ಕೆನಡಿಯನ್‌ ಎಸ್ಕಿಮೊ ನಾಯಿಯೊಂದಿಗೆ ಸಲ್ಲಾಪವಾಡುತ್ತಿರುವ, ಇಂದು ವಿಸ್ತಾರವಾಗಿ ಹಂಚಲಾದ ಛಾಯಾಚಿತ್ರಗಳನ್ನು ಚರ್ಚಿಲ್‌ ಬಳಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದರು.[೬೪][೬೫] ಈ ಜೋಡಿಯು ಹತ್ತು ದಿನಗಳ ಕಾಲ, ಪ್ರತಿ ಮಧ್ಯಾಹ್ನವೂ ವಿನಾ ಕಾರಣ ವಿನೋದವಾಗಿ ಹೊರಳಾಡುತ್ತಿದ್ದವು. ನಾಯಿಯು ತನ್ನೊಂದಿಗೆ ಆಹಾರವನ್ನು ಹಂಚಿಕೊಳ್ಳಲೆಂದು ಹಿಮಕರಡಿಯು ನಾಯಿಯತ್ತ ಸ್ನೇಹ ಪ್ರವೃತ್ತಿ ತೋರುತ್ತಿತ್ತು ಎಂದು ಭಾಸವಾಗುತ್ತದೆ.[೬೪] ಇಂತಹ ಸಾಮಾಜಿಕ ಅನ್ಯೋನ್ಯತೆಯು ಬಹಳ ವಿರಳ, ಏಕೆಂದರೆ ಹಿಮಕರಡಿಗಳು ನಾಯಿಗಳತ್ತ ಆಕ್ರಮಕ ನಡತೆ ಪ್ರದರ್ಶಿಸುವುದು ರೂಢಿ.[೬೪]

ಸಂತಾನೋತ್ಪತ್ತಿ ಮತ್ತು ಜೀವನಚಕ್ರ

[ಬದಲಾಯಿಸಿ]
ಈಜುತ್ತಿರುವ ಹಿಮಕರಡಿ

ಏಪ್ರಿಲ್‌ ಮತ್ತು ಮೇ ತಿಂಗಳಂದು, ನೀರುನಾಯಿ ಬೇಟೆಯಾಡಲು ಅತ್ಯುತ್ತಮ ಸ್ಥಳಗಳಲ್ಲಿ ಹಿಮಕರಡಿಗಳು ಸೇರಿದಾಗ, ಹಿಮಕರಡಿ ಜೋಡಿಗಳು ಒಟ್ಟುಗೂಡುತ್ತವೆ.[೬೬] 100 km (62 mi)ಗಾಗಿ ಗಂಡು ಹಿಮಕರಡಿಯು ಮರಿ ಹಾಕುವ ಹೆಣ್ಣು ಹಿಮಕರಡಿಯ ಜಾಡು ಹಿಡಿಯಬಹುದು. ಅದನ್ನು ಪತ್ತೆ ಮಾಡಿದ ಮೇಲೆ, ಅದರ ಮೇಲೆ ಸ್ವಾಮ್ಯ ಸಾಧಿಸಲು ಈ ಗಂಡು ಹಿಮಕರಡಿಯು ಇತರೆ ಗಂಡು ಹಿಮಕರಡಿಗಳೊಂದಿಗೆ ಕಾದಾಡುತ್ತದೆ. ಇದರ ಪರಿಣಾಮವಾಗಿ, ಮೈಮೇಲೆ ತರಚುಗಾಯಗಳು ಮತ್ತು ಹಲ್ಲು ಮುರಿತ ಸಂಭವಿಸುತ್ತದೆ.[೬೬] ಹಿಮಕರಡಿಗಳಲ್ಲಿ ಸಾಮಾನ್ಯವಾಗಿ ಬಹುಪ್ರಾಣಿಗಳೊಂದಿಗೆ ಸೇರುವ ವ್ಯವಸ್ಥೆಯಿದೆ. ಆದರೂ ಸಹ, ಮರಿ ಹಾಕಿದ ಹಿಮಕರಡಿ ಮತ್ತು ಮರಿಗಳ ಮೇಲೆ ತಳೀಯ ಪ್ರಯೋಗ ನಡೆಸಿದಾಗ, ಮರಿಗಳು ಬೇರೆ-ಬೇರೆ ಗಂಡು ಹಿಮಕರಡಿಗಳೊಂದಿಗೆ ಸೇರಿ ಪಡೆದ ಸಂತತಿಯೆಂದು ತಿಳಿದುಬಂದಿದೆ.[೬೭] ಜೋಡಿಗಳು ಒಟ್ಟಿಗೆಯಿದ್ದು, ಇಡೀ ವಾರದ ಸಮಯ ಪದೇ ಪದೇ ಒಂದುಗೂಡುತ್ತವೆ. ಈ ಒಟ್ಟುಗೂಡುವಿಕೆಯು ಹೆಣ್ಣು ಹಿಮಕರಡಿಯಲ್ಲಿ ಅಂಡೋತ್ಪತ್ತಿಯಾಗುತ್ತದೆ.[೬೮]

ಒಟ್ಟುಗೂಡಿದ ನಂತರ, ಫಲವತ್ತಾದ ಅಂಡಾಣು ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತನಕ ಅದೇ ರೀತಿಯಲ್ಲಿ ತಟಸ್ಥವಾಗಿರುತ್ತದೆ. ಈ ನಾಲ್ಕು ತಿಂಗಳ ಕಾಲ, ಗರ್ಭಣಿ ಹೆಣ್ಣು ಹಿಮಕರಡಿಯು ಬೃಹತ್ಪ್ರಮಾಣದಲ್ಲಿ ಪೌಷ್ಟಿಕಾಹಾರ ಸೇವಿಸಿ, ತನ್ನ ಶರೀರ ಕನಿಷ್ಠ 200 kg (440 lb) ಹಾಗೂ ಸಾಮಾನ್ಯ ತೂಕದ ಎರಡಕ್ಕಿಂತಲೂ ಹೆಚ್ಚು ತೂಕ ಗಳಿಸುತ್ತದೆ.[೬೬]

ತಾಯ್ತನದ ಗುಹೆವಾಸ ಮತ್ತು ಆರಂಭಿಕ ಜೀವನ

[ಬದಲಾಯಿಸಿ]
ಮರಿಗಳು ಬಹಳ ದುರ್ಬಲ ಸ್ಥಿತಿಯಲ್ಲಿ ಜನಿಸುತ್ತವೆ. ಅವುಗಳಿಗೆ ಸುಮಾರು ಎರಡೂವರೆ ವರ್ಷಗಳ ಕಾಲ ಕಾವು ನೀಡಲಾಗುತ್ತದೆ.

ಶರತ್ಕಾಲದಲ್ಲಿ ಇಬ್ಬನಿಯು ಕರಗಿದಾಗ, ಬೇಟೆಯಾಡುವ ಸಾಧ್ಯತೆ ಅಂತ್ಯಗೊಳ್ಳುತ್ತದೆ. ಪ್ರತಿಯೊಂದು ಗರ್ಭಿಣಿ ಹೆಣ್ಣು ಹಿಮಕರಡಿಯೂ ಮಾತೃತ್ವದ ಗುಹೆ ಯನ್ನು ಅಗೆಯುತ್ತದೆ. ಈ ಗುಹೆಯು ಇಕ್ಕಟ್ಟಾದ ಪ್ರವೇಶ ಸುರಂಗ ಹೊಂದಿದ್ದು ಇದು ಮೂರು ಕೋಣೆಗಳತ್ತ ಹೋಗುತ್ತದೆ.[೬೬] ಹಲವು ಮಾತೃತ್ವ ಗುಹೆಗಳು ಹಿಮದ ರಾಶಿಗಳಲ್ಲಿರುತ್ತವೆ, ಆದರೂ, ಒಂದು ವೇಳೆ ಹಿಮ ಬೀಳುವಷ್ಟು ಶೈತ್ಯವಿಲ್ಲದಿದ್ದಲ್ಲಿ, ಹಿಮಕರಡಿಯು ಶೀತ ಕೆಳ ಭೂಸ್ತರದಲ್ಲಿ ಗುಹೆಯನ್ನು ಅಗೆಯುವುದುಂಟು.[೬೬] ಹಲವು ಹಿಮಕರಡಿ ಉಪಸಂಖ್ಯೆಗಳಲ್ಲಿ, ಮಾತೃತ್ವ ಗುಹೆಗಳು ಸಾಗರ ತೀರದಿಂದ ಕೆಲವು ಕಿಲೋಮೀಟರ್‌ ದೂರದ ನೆಲದಲ್ಲಿರುತ್ತವೆ. ಉಪ ಸಂಖ್ಯೆಯಲ್ಲಿರುವ ಪ್ರತಿಯೊಂದು ಹಿಮಕರಡಿಯು ಪ್ರತಿ ವರ್ಷವೂ ಅದೇ ಗುಹೆಯ ಕ್ಷೇತ್ರವನ್ನು ಬಳಸುವ ಪ್ರವೃತ್ತಿ ತೋರುತ್ತದೆ.[೨೨] ನೆಲದ ಮೇಲೆ ತಮ್ಮ ವಾಸದ ಗುಹೆ ನಿರ್ಮಿಸದ ಹಿಮಕರಡಿಗಳು ಸಾಗರದ ಇಬ್ಬನಿಯಲ್ಲಿ ತಮ್ಮ ಗುಹೆಗಳನ್ನು ಅಗೆದುಕೊಳ್ಳುತ್ತವೆ. ಗುಹೆಯಲ್ಲಿ, ಹೆಣ್ಣು ಹಿಮಕರಡಿಯು ಚಳಿನಿದ್ದೆಯ ತರಹದ ಸ್ಥಿತಿ ಪ್ರವೇಶಿಸುತ್ತದೆ. ಚಳಿನಿದ್ದೆಯಂತಹ ಸ್ಥಿತಿಯು ನಿರಂತರದ ನಿದ್ದೆಯನ್ನು ಒಳಗೊಳ್ಳುವುದಿಲ್ಲ; ಆದರೂ, ಈ ಹಿಮಕರಡಿಯ ಹೃದಯದ ಬಡಿತ ಪ್ರತಿನಿಮಿಷಕ್ಕೆ 46 ಇದ್ದದ್ದು 27ಕ್ಕಿಳಿಯುತ್ತದೆ.[೬೯] ಚಳಿನಿದ್ದೆಯಲ್ಲಿರುವ ಇತರೆ ಸಸ್ತನಿಗಳಂತೆ ಈ ಹೆಣ್ಣು ಹಿಮಕರಡಿಯ ಶಾರೀರಿಕ ಉಷ್ಣಾಂಶವು ಕಡಿಮೆಯಾಗುವುದಿಲ್ಲ.[೪೧][೭೦]

ನವೆಂಬರ್‌ ಮತ್ತು ಫೆಬ್ರವರಿ ತಿಂಗಳ ನಡುವೆ, ಹಿಮಕರಡಿ ಮರಿಗಳು ಹುಟ್ಟಿದಾಗ ಕುರುಡಾಗಿರುತ್ತವೆ. ಇವು ಕಡಿಮೆ ಹೊಳಪುಳ್ಳ ತುಪ್ಪುಳನ್ನು ಹೊಂದಿದ್ದು, 0.9 kg (2.0 lb)ಕ್ಕಿಂತಲೂ ಕಡಿಮೆ ತೂಕ ಹೊಂದಿರುತ್ತವೆ.[೬೮] ಸರಾಸರಿಯಲ್ಲಿ, ಒಮ್ಮೆಗೆ ಎರಡು ಸಂತತಿಗಳಿರುತ್ತವೆ.[೬೬] ಕುಟುಂಬವು ಫೆಬ್ರವರಿ ಅಥವಾ ಏಪ್ರಿಲ್‌ ತಿಂಗಳ ಮಧ್ಯದ ವರೆಗೂ ಗುಹೆಯಲ್ಲಿಯೇ ಇರುತ್ತದೆ. ತಾಯಿಯಾದ ಹಿಮಕರಡಿಯು ತನ್ನ ಆಹಾರ ರಹಿತ ಸ್ಥಿತಿಯಲ್ಲಿ ಮುಂದುವರೆದು, ತನ್ನ ಸಂತತಿಗಳಿಗೆ ಹೆಚ್ಚು ಕೊಬ್ಬಿನಾಂಶವುಳ್ಳ ಹಾಲು ಉಣಿಸುತ್ತದೆ.[೬೬] ತಾಯಿಯು ಗುಹೆಯ ಪ್ರವೇಶದ್ವಾರವನ್ನು ಒಡೆಯುವ ಸಮಯಕ್ಕೆ, ತನ್ನ ಸಂತತಿಗಳು ಸುಮಾರು 10 to 15 kilograms (22 to 33 lb) ತೂಕ ಹೊಂದಿರುತ್ತವೆ.[೬೬] ಸುಮಾರು 12ರಿಂದ 13 ದಿನಗಳ ಕಾಲ, ಹಿಮಕರಡಿಯ ಕುಟುಂಬವು ಗುಹೆಯ ಹೊರಭಾದಲ್ಲಿಯೇ ಕಾಲ ಕಳೆದು. ಅದೇ ಸ್ಥಳದಲ್ಲಿರುತ್ತದೆ. ತಾಯಿ ಹಿಮಕರಡಿಯು ಅಲ್ಲಿನ ಸಸ್ಯವರ್ಗದಲ್ಲಿ ಮೇಯುತ್ತಿರುವಾಗ, ಸಂತತಿಗಳು ನಡೆದಾಡುವುದು, ಆಟವಾಡುವುದನ್ನು ಕಲಿಯುತ್ತದೆ.[೬೬] ಆನಂತರ, ಅವು ಗುಹೆಯ ಕ್ಷೇತ್ರದಿಂದ ದೂರ ನಡೆದು ಸಾಗರದ ಇಬ್ಬನಿಯನ್ನು ಸಮೀಪಿಸುತ್ತವೆ. ಆಗ ತಾಯಿಯು ಪುನಃ ನೀರುನಾಯಿಗಳನ್ನು ಬೇಟೆಯಾಡುತ್ತದೆ.[೬೬] ಶರತ್ಕಾಲದಲ್ಲಿ ಸಾಗರದ ಹಿಮವು ಒಡೆಯುವ ಸಮಯವನ್ನು ಅವಲಂಬಿಸಿ, ತಾಯಿ ಹಿಮಕರಡಿಯು ಸುಮಾರು ಎಂಟು ತಿಂಗಳ ಕಾಲ ಆಹಾರವಿಲ್ಲದೆ ವಾಸಿಸಿರಬಹುದು.[೬೬]

ಹಿಮಕರಡಿಯ ಮರಿಗಳು ತೋಳಗಳ ಬೇಟೆಯಾಗಬಹುದು, ಅಥವಾ ಆಹಾರವಿಲ್ಲದೆ ಪ್ರಾಣ ಕಳೆದುಕೊಳ್ಳಬಹುದು. ಹೆಣ್ಣು ಹಿಮಕರಡಿಗಳು ತಮ್ಮ ಮರಿಗಳತ್ತ ವಾತ್ಸಲ್ಯ ತೋರಿಸಿದಷ್ಟೇ, ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಅವುಗಳನ್ನು ರಕ್ಷಿಸಲು ಸಕಲ ಪ್ರಯತ್ನ ಮಾಡುತ್ತವೆ. ತಳೀಯ ಪರೀಕ್ಷೆಗಳ ಮೂಲಕ ಹಿಮಕರಡಿಯು ಒಂದು ಮರಿಯನ್ನು ದತ್ತು ತೆಗೆದುಕೊಂಡಿರುವುದು ಖಚಿತಪಡಿಸಿದೆ.[೬೭] ಕೆಲವೊಮ್ಮೆ ಪೂರ್ಣವಾಗಿ ಬೆಳೆದ ಗಂಡು ಹಿಮಕರಡಿಗಳು ಮರಿ ಹಿಮಕರಡಿಗಳನ್ನು ಕೊಂದು ತಿನ್ನುವುದೂ ಉಂಟು;[೭೧] ಇದಕ್ಕೆ ಸಕಾರಣಗಳಿಲ್ಲ.[೭೨] ಅಲಾಸ್ಕಾ ವಲಯದಲ್ಲಿ, 15 ವರ್ಷಗಳ ಹಿಂದೆ ಹಿಮಕರಡಿ ಮರಿಗಳು 12 ತಿಂಗಳ ಆಯುಸ್ಸು ತಲುಪುತಿದ್ದದ್ದು, ಅದು ಇಂದು 42%ಕ್ಕೆ ಇಳಿದಿದೆ.[೭೩] ಹಲವು ಕ್ಷೇತ್ರಗಳಲ್ಲಿ, ತಾಯಿಯು ಹಿಮಕರಡಿ ಮರಿಗಳನ್ನು ಓಡಿಸುವುದರೊಂದಿಗೆ ಅಥವಾ ಅವುಗಳನ್ನು ತೊರೆಯುವುದೊಂದಿಗೆ, ಎರಡೂವರೆ ವರ್ಷದ ವಯಸ್ಸಿನಲ್ಲಿ [೬೬] ಅವುಗಳನ್ನು ಮೊಲೆಹಾಲಿನಿಂದ ಬಿಡಿಸಲಾಗುತ್ತದೆ. ಹಡ್ಸನ್‌ ಬೇಯ ಪಶ್ಚಿಮ ತೀರ ವಲಯದಲ್ಲಿ ಹಿಮಕರಡಿಗಳು ಕೆಲವೊಮ್ಮೆ ತಮ್ಮ ಪರಿಗಳನ್ನು ಕೇವಲ ಒಂದೂವರೆ ವರ್ಷ ಆಯಸ್ಸಿನಲ್ಲಿಯೇ ಮೊಲೆ ಹಾಲು ಬಿಡಿಸುವುದು ಕಂಡುಬಂದಿದೆ.[೬೬] 1980ರ ದಶಕದ ಆರಂಭದಲ್ಲಿ ಸುಮಾರು 40%ರಷ್ಟು ಹಿಮಕರಡಿ ಮರಿಗಳಿಗೆ ಮೊಲೆ ಹಾಲು ಬಿಡಿಸಲಾದ ಘಟನೆಗಳಿದ್ದವು. ಆದರೆ, 1990ರ ದಶಕದಲ್ಲಿ, ಇದು 20%ಕ್ಕೆ ಇಳಿದಿತ್ತು.[೭೪] ತಾಯಿಯು ತೊರೆದುಹೋದ ನಂತರ, ಸೋದರ-ಸೋದರಿ ಮರಿಗಳು ಕೆಲವೊಮ್ಮೆ ಒಟ್ಟಿಗೆ ಸಂಚರಿಸಿ ವಾರಗಳ ಅಥವಾ ತಿಂಗಳುಗಳ ಕಾಲ ಆಹಾರವನ್ನು ಒಟ್ಟಿಗೆ ಹಂಚಿಕೊಳ್ಳುತ್ತವೆ.[೫೩]

ತಾಯ್ತನದ ಗುಹೆಯಿಂದ ಹೊರಬರುತ್ತಿರುವ ಹೆಣ್ಣು ಹಿಮಕರಡಿ.

ಆನಂತರದ ಜೀವನ

[ಬದಲಾಯಿಸಿ]

ಹಲವು ವಲಯಗಳಲ್ಲಿ ಹೆಣ್ಣು ಹಿಮಕರಡಿಗಳು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಮರಿ ಹಾಕುತ್ತವೆ; ಬ್ಯೂಫರ್ಟ್‌ ಸಮುದ್ರ ವಯಲದಲ್ಲಿನ ಹಿಮಕರಡಿಗಳು ತಮ್ಮ ಐದನೆಯ ವಯಸ್ಸಿನಲ್ಲಿ ಮರಿ ಹಾಕುತ್ತವೆ.[೬೬] ಗಂಡು ಹಿಮಕರಡಿಗಳು ತಮ್ಮ ಆರನೆಯ ವಯಸ್ಸಿನಲ್ಲಿ ಲೈಂಗಿಕ ಪರಿಪಕ್ವತೆ ತಲುಪುತ್ತದೆ. ಆದರೆ, ಹೆಣ್ಣು ಹಿಮಕರಡಿಗಳಿಗಾಗಿ ಪೈಪೋಟಿ ತೀವ್ರವಾಗಿರುವುದರಿಂದ, ಹಲವು ಹಿಮಕರಡಿಗಳು ತಮ್ಮ ಎಂಟನೆಯ ಅಥವಾ ಹತ್ತನೆಯ ವಯಸ್ಸಿನ ತನಕ ಮರಿ ಹಾಕುವುದಿಲ್ಲ.[೬೬] ಹಡ್ಸನ್ ಬೇಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಹಿಮಕರಡಿಗಳ ಸಂತಾನೋತ್ಪತ್ತಿಯ ಸಾಫಲ್ಯ ಮತ್ತು ತಾಯ್ತನದ ತೂಕವೆರಡೂ ಹೆಚ್ಚಾಗಿದ್ದವು.[೭೫]

ಹಲವು ನೆಲವಾಸಿ ಸಸ್ತನಿಗಳಿಗೆ ಹೋಲಿಸಿದರೆ, ಹಿಮಕರಡಿಗಳು ಯಾವುದೇ ಸಾಂಕ್ರಾಮಿಕ ರೋಗ ಅಥವಾ ಪರಾವಲಂಬಿಯಿಂದ ಪೀಡಿತವಾದದ್ದು ಕಂಡುಬಂದಿಲ್ಲ.[೭೨] ಸ್ವಜಾತಿಭಕ್ಷಣೆ [೭೬] ಮೂಲಕ ಹಿಮಕರಡಿಗಳು ವಿಶಿಷ್ಟವಾಗಿ ಟ್ರೈಕಿನೆಲಾ ಎಂಬ ಪರಾವಲಂಬಿ ಜಂತುಹುಳುವಿಗೆ ಈಡಾಗಬಹುದು. ಆದರೂ ಈ ಸೋಂಕು ಮಾರಣಾಂತಿಕವಲ್ಲ.[೭೨]

ರೇಬೀಸ್‌ ವಾಹಕ ಎನ್ನಲಾದ ಆರ್ಕ್ಟಿಕ್‌ ನರಿಗಳೊಂದಿಗೆ ಹಿಮಕರಡಿಗಳು ಆಗಾಗ್ಗೆ ಸಂಪರ್ಕಿಸಿಕೊಂಡರೂ, ಕೇವಲ ಒಂದೇ ಒಂದು ನಿದರ್ಶನದಲ್ಲಿ ಹಿಮಕರಡಿಯು ರೇಬೀಸ್‌ ಸೋಂಕಿತವಾದದ್ದು ದಾಖಲಿತವಾಗಿದೆ.[೭೨] ಬ್ಯಾಕ್ಟೀರಿಯಾ-ರೀತಿಯ ಲೆಪ್ಟೊಸ್ಪಿರೊಸಿಸ್‌ ಮತ್ತು ಮೊರ್ಬಿಲಿವೈರಸ್‌ ದಾಖಲಾಗಿವೆ. ಕಜ್ಜಿ ಹುಳು ಅಥವಾ ಇತರೆ ಪರಾವಲಂಬಿಗಳು ತರುವ ವಿಭಿನ್ನ ಚರ್ಮರೋಗಗಳ ಸಮಸ್ಯೆಗೆ ಹಿಮಕರಡಿಗಳು ಈಡಾಗುವುದುಂಟು.

ಹಿಮಕರಡಿಗಳು 25 ವರ್ಷಗಳ ಮೇಲೆ ಬದುಕುವುದು ಅಪರೂಪ.[೭೭] ತನ್ನ 32ನೆಯ ವಯಸ್ಸಿನಲ್ಲಿ ಸತ್ತದ್ದು ಅತಿ ವಯಸ್ಸಾದ ವನವಾಸಿ ಹಿಮಕರಡಿಯೆಂದು ದಾಖಲಿಸಲಾಗಿದೆ. ಇಸವಿ 1991ರಲ್ಲಿ ತನ್ನ 43ನೆಯ ವಯಸ್ಸಿನಲ್ಲಿ ಸತ್ತ ಹೆಣ್ಣು ಹಿಮಕರಡಿಯು, ಬಂಧನದಲ್ಲಿದ್ದ ಅತಿ ಮುದಿ ಕರಡಿಯೆಂದು ದಾಖಲಾಗಿದೆ.[೭೮] ಡಿಸೆಂಬರ್‌ 1966ರಲ್ಲಿ, ಅಸಿನಿಬೊಯ್ನ್‌ ಪಾರ್ಕ್‌ ಪ್ರಾಣಿ ಸಂಗ್ರಹಾಲಯದಲ್ಲಿ ಜನಿಸಿದ 'ಡೆಬ್ಬಿ' ಹೆಸರಿನ ಹಿಮಕರಡಿ, ಜೀವಿತವಾದ ಅತಿ ಮುದಿ ಹಿಮಕರಡಿಯಾಗಿದೆ.[೭೮] ವನದಲ್ಲಿ ಸಂಪೂರ್ಣವಾಗಿ ಬೆಳೆದ ಹಿಮಕರಡಿಗಳ ಸಾವಿಗೆ ಕಾರಣಗಳು ಸರಿಯಾಗಿ ಅರ್ಥವಾಗಿಲ್ಲ. ಏಕೆಂದರೆ, ಈ ಪ್ರಭೇದದ ಕಡುಶೀತವಾದ ವಾಸಸ್ಥಾನದಲ್ಲಿ ಇದರ ಮೃತದೇಹಗಳು ಲಭ್ಯವಾಗಿರುವುದು ಅತಿ ವಿರಳ.[೭೨] ವನದಲ್ಲಿ, ಮುದಿ ಹಿಮಕರಡಿಗಳು ಬಹಳ ದುರ್ಬಲಗೊಂಡ ಕಾರಣ, ಆಹಾರವನ್ನು ಹಿಡಿಯಲಾಗದೆ ಹಂತ-ಹಂತವಾಗಿ ಆಹಾರವಿಲ್ಲದೆ ಸತ್ತುಹೋಗುತ್ತವೆ. ಕದನ ಅಥವಾ ಅಪಘಾತಗಳಲ್ಲಿ ಗಾಯಗೊಂಡ ಹಿಮಕರಡಿಗಳು ತಮಗಾದ ಗಾಯಗಳ ಅಥವಾ ಪ್ರಭಾವಶಾಲಿಯಾಗಿ ಬೇಟೆಯಾಡದ ಕಾರಣ ಆಹಾರವಿಲ್ಲದೆ ಹೋಗುತ್ತವೆ.[೭೨]

ಪರಿಸರದಲ್ಲಿ ಹಿಮಕರಡಿಯ ಪಾತ್ರ

[ಬದಲಾಯಿಸಿ]
ಎರಡು ವರ್ಷದ ಮರಿಗೆ ಕಾವು ನೀಡುತ್ತಿರುವ ಹೆಣ್ಣು ಹಿಮಕರಡಿ.

ಹಿಮಕರಡಿಯು ತನ್ನ ವ್ಯಾಪ್ತಿಯಲ್ಲಿ ಅಗ್ರ ಪರಭಕ್ಷಕವಾಗಿದೆ. ಹಲವು ಪ್ರಾಣಿ ಪ್ರಭೇದಗಳು, ಅದರಲ್ಲೂ ಆರ್ಕ್ಟಿಕ್‌ ನರಿಗಳು ಮತ್ತು ಗ್ಲಾಕಸ್‌ ಗಲ್‌ (ಮಾಸಲು ಬೂದು ಹಸಿರು-ನೀಲಿಯ ಗಲ್‌ ಹಕ್ಕಿ)ಗಳು ಆಗಾಗ್ಗೆ ಹಿಮಕರಡಿಯು ಬೇಟೆಯಾಡಿದ ಪ್ರಾಣಿಗಳ ಕೊಳೆತ ಮಾಂಸವನ್ನು ತಿನ್ನುತ್ತವೆ.[೪೭]

ಉಂಗುರದ ನೀರುನಾಯಿಗಳು ಮತ್ತು ಹಿಮಕರಡಿಗಳ ನಡುವಿನ ಸಂಬಂಧವು ಅದೆಷ್ಟು ನಿಕಟವಾಗಿದೆ ಎಂದರೆ, ಕೆಲವು ಕ್ಷೇತ್ರಗಳಲ್ಲಿ ಹೇರಳವಾಗಿರುವ ಉಂಗುರದ ನೀರುನಾಯಿಗಳು ಹಿಮಕರಡಿ ಸಂಖ್ಯೆಗಳ ಸಾಂದ್ರತೆಯನ್ನು ನಿಯಂತ್ರಿಸುವಂತಿದೆ. ಹಿಮಕರಡಿಯ ಪರಭಕ್ಷಣೆಯು ಉಂಗುರ ನೀರುನಾಯಿಗಳ ಸಾಂದ್ರತೆ ಮತ್ತು ಸಂತಾನೋತ್ಪತ್ತಿಯ ಮೇಲೆ ನಿಗಾ ವಹಿಸುತ್ತದೆ.[೫೦] ಹಿಮಕರಡಿಯ ಪರಭಕ್ಷಣೆಯಿಂದಾಗುವ ವಿಕಸನೀಯ ಒತ್ತಡವು ಆರ್ಕ್ಟಿಕ್‌ ಮತ್ತು ಅಂಟಾರ್ಕ್ಟಿಕ್‌ ನೀರುನಾಯಿಗಳ ನಡುವಿನ ಗಮನಾರ್ಹ ವ್ಯತ್ಯಾಸಗಳಿಗೆ ಕಾರಣವಾಗಿದೆ. ಯಾವುದೇ ನೆಲವಾಸಿ ಪರಭಕ್ಷಕವಿಲ್ಲದ ಅಂಟಾರ್ಕ್ಟಿಕ್‌ಗೆ ಹೋಲಿಸಿದರೆ, ಆರ್ಕ್ಟಿಕ್‌ ನೀರುನಾಯಿಗಳು ಪ್ರತಿಯೊಂದಕ್ಕೂ ಹೆಚ್ಚು ಉಸಿರಾಡುವ ರಂಧ್ರಗಳನ್ನು ಬಳಸುತ್ತವೆ; ಇಬ್ಬನಿಯ ಮೇಲೆ ಎಳೆತಂದಾಗ ತೀವ್ರವಾಗಿ ಅವಿಶ್ರಾಂತವಾಗಿರುತ್ತವೆ, ಹಾಗೂ ಅವು ಇಬ್ಬನಿಯ ಮೇಲೆ ಮಲವಿಸರ್ಜನೆ ಮಾಡುವುದಿಲ್ಲ.[೪೭] ಬಹಳಷ್ಟು ಆರ್ಕ್ಟಿಕ್‌ ನೀರುನಾಯಿ ಪ್ರಭೇದದ ತುಪ್ಪುಳು ಬಿಳಿ ಬಣ್ಣದ್ದಾಗಿರುತ್ತದೆ; ಬಹುಶಃ ಇದು ಪರಭಕ್ಷ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲೆಂದು ಈ ರೀತಿಯಿರುತ್ತದೆ; ಅಂಟಾರ್ಕ್ಟಿಕ್‌ ನೀರುನಾಯಿಗಳು ಜನಿಸಿದಾಗಿಂದಲೂ ಕಡುಬಣ್ಣದ ತುಪ್ಪುಳು ಹೊಂದಿರುತ್ತವೆ.[೪೭]

ಹಿಮಕರಡಿಗಳು ಇತರೆ ಪರಭಕ್ಷಕಗಳೊಂದಿಗೆ ಘರ್ಷಣೆಗಿಳಿಯುವುದು ಬಹಳ ವಿರಳ. ಅದರೂ ಹಿಮಕರಡಿ ವಲಯಗಳೊಳಗೆ ಕಂದು ಕರಡಿಗಳು ಅಕ್ರಮ-ಪ್ರವೇಶಿಸಿದ ಕಾರಣ, ಇವೆರಡರ ನಡುವೆ ಕಾದಾಟಗಳಾದ ನಿದರ್ಶನಗಳಿವೆ. ಬೇಟೆಯ ಮೃತ ದೇಹಗಳ ಕುರಿತು ಕಂದು ಕರಡಿಗಳು ಹಿಮಕರಡಿಗಳ ವಿರುದ್ಧ ಪ್ರಾಬಲ್ಯ ಮೆರೆಯುವುದುಂಟು.[೭೯] ಕಂದು ಕರಡಿಗಳ ಗುಹೆಗಳಲ್ಲಿ ಸತ್ತ ಹಿಮಕರಡಿ ಮರಿಗಳು ಕಂಡುಬಂದದ್ದೂ ಉಂಟು.[೮೦] ಹಿಮಕರಡಿಗಳು ತೋಳಗಳೊಂದಿಗೆ ಘರ್ಷಣೆಗಿಳಿಯುವುದು ಅಪರೂಪ. ಆದರೂ, ತೋಳಗಳು ಹಿಮಕರಡಿಯ ಮರಿಗಳನ್ನು ಕೊಂದ ಎರಡು ದಾಖಲೆಗಳಿವೆ.[೮೧] ಹಿಮಕರಡಿಗಳು ಕೆಲವೊಮ್ಮೆ ಅಲಾಸ್ಕೊಜೆಟ್ಸ್‌ ಅಂಟಾರ್ಕ್ಟಿಕಸ್‌ ನಂತಹ ಆರ್ಕ್ಟಿಕ್‌ ಕಜ್ಜಿ ಹುಳುಗಳ ವಾಹಕಗಳಾಗಿವೆ.[೪೭]

ಸ್ಥಳೀಯ ಜನರು

[ಬದಲಾಯಿಸಿ]
ಗ್ರೀನ್ಲೆಂಡ್‌ನ ಇಟೊಕೊರ್ಟೋರ್ಮಿಟ್‌ನಲ್ಲಿ ಬೇಟೆಯಾದ ಹಿಮಕರಡಿಗಳ ಚರ್ಮಗಳು.

ಇನೂಯಿಟ್‌, ಯೂಪಿಕ್‌, ಚುಕ್ಚಿ, ನೆನೆಟ್ಸ್‌, ರಷ್ಯನ್‌ ಪೊಮೊರ್ಸ್‌ ಮತ್ತು ಇತರೆ ಆರ್ಕ್ಟಿಕ್‌ ಸ್ಥಳೀಯ ಜನಾಂಗದವರು ಹಿಮಕರಡಿಯ ದೇಹಭಾಗಗಳನ್ನು ಕಚ್ಚಾ ವಸ್ತುಗಳನ್ನಾಗಿ ಬಳಸುತ್ತಾರೆ.

ಬೇಟೆಗಾರರು ಸಾಮಾನ್ಯವಾಗಿ ನಾಯಿಗಳ ತಂಡಗಳನ್ನು ಬಳಸಿ ಹಿಮಕರಡಿಯ ಗಮನವನ್ನು ಇನ್ನೆಲ್ಲೋ ಸೆಳೆಸುವರು. ಬೇಟೆಗಾರರು ಆಗ ಹತ್ತಿರದ ವ್ಯಾಪ್ತಿಯಿಂದ ಹಿಮಕರಡಿಯತ್ತ ಈಟಿ ಅಥವಾ ಬಿಲ್ಲು-ಬಾಣ ಪ್ರಯೋಗಿಸಿ ಕೊಲ್ಲುವರು.[೮೨] ಸೆರೆಹಿಡಿಯಲಾದ ಹಿಮಕರಡಿಗಳ ಬಹುಶಃ ಎಲ್ಲಾ ಅಂಗಗಳೂ ಸಹ ಒಂದೊಂದು ರೀತಿಯಲ್ಲಿ ಉಪಯುಕ್ತವಾಗಿದ್ದವು.[೮೩] ಹಿಮಕರಡಿಯ ತುಪ್ಪುಳನ್ನು ಷರಾಯಿಗಳನ್ನು ಹೊಲೆಯಲು ಬಳಸಲಾಗುತ್ತಿತ್ತು. ನೆನೆಟ್‌ ಜನಾಂಗದವರು ಹಿಮಕರಡಿಯ ತುಪ್ಪುಳನ್ನು ಟೊಬೊಕ್‌ ಎಂಬ ಹೊರಗಿನ ಪಾದರಕ್ಷೆಯನ್ನು ತಯಾರಿಸಲು ಬಳಸುತ್ತಿದ್ದರು. ಹಿಮಕರಡಿಯ ಮಾಂಸವು ಟ್ರೈಕೈನೊಸಿಸ್‌ ಅಪಾಯ ಹೊತ್ತಿದ್ದರೂ, ತಿನ್ನಬಹುದಾದ ಪದಾರ್ಥವಾಗಿದೆ. ನೀರುನಾಯಿಗಳ ಮತ್ತು ತಿಮಿಂಗಿಲಗಳ ತಿಮಿಕೊಬ್ಬಿನೊಂದಿಗೆ, ಹಿಮಕರಡಿಯ ಕೊಬ್ಬನ್ನು ಸಹ ಅಹಾರ ಮತ್ತು ಮನೆಗಳಲ್ಲಿ ದೀಪಗಳನ್ನು ಉರಿಸಲು ಬಳಸಲಾಗುತ್ತಿತ್ತು. ಹಿಮಕರಡಿಯ ರಜ್ಜುಗಳನ್ನು ಬಟ್ಟೆ ಹೊಲೆಯುವ ದಾರದ ರೂಪದಲ್ಲಿ ಬಳಸಲಾಗುತ್ತಿತ್ತು; ಪಿತ್ತ-ಕೋಶ ಮತ್ತು ಕೆಲವೊಮ್ಮೆ ಹೃದಯವನ್ನೂ ಸಹ ಒಣಗಿಸಿ, ಪುಡಿ ಮಾಡಿ ವೈದ್ಯಕೀಯ ಉಪಯೋಗಗಳಿಗೆ ಬಳಸಲಾಗುತ್ತಿದ್ದವು. ಕೋರೆಹಲ್ಲುಗಳನ್ನು ಒಂದು ರೀತಿಯ ಬೆಲೆಬಾಳುವ ರಕ್ಷೆಯಾಗಿ ಧರಿಸಲಾಗುತ್ತಿತ್ತು.[೮೪]

ಕೇವಲ ಪಿತ್ತಜನಕಾಂಗವನ್ನು ಮಾತ್ರ ಬಳಸಲಾಗುತ್ತಿರಲಿಲ್ಲ. ಏಕೆಂದರೆ ಅದರಲ್ಲಿ A ಜೀವಸತ್ತ್ವವು ಮಿತಿಮೀರಿದ ಸಾಂದ್ರತೆ ಹೊಂದಿದ್ದು ವಿಷಕಾರಿಯಾಗಿರುತ್ತದೆ.[೮೫] ಬೇಟೆಗಾರರು ತಮ್ಮ ನಾಯಿಗಳು ಅದನ್ನು ತಿನ್ನದಿರಲೆಂದು ಹಿಮಕರಡಿಯ ಪಿತ್ತಜನಕಾಂಗವನ್ನು ಸಾಗರದಲ್ಲಿ ಎಸೆಯುವರು ಅಥವಾ ಹೂಳುವರು.[೮೪]

ಸಾಂಪ್ರದಾಯಿಕ, ಜೀವನೋಪಾಯಕ್ಕಾಗಿ ಹಿಮಕರಡಿಗಳನ್ನು ಬೇಟೆಯಾಡುವ ಪ್ರಮಾಣವು ಹಿಮಕರಡಿಯ ಸಂಖ್ಯೆಯನ್ನು ಪಲ್ಲಟನ ಮಾಡದಷ್ಟು ಮಿತವಾಗಿಯೇ ಇತ್ತು. ಹಿಮಕರಡಿ ವಾಸಿಸುವ ಸ್ಥಾನಗಳಲ್ಲಿ ಮಾನವ ಜನಸಂಖ್ಯೆಯು ಕಡಿಮೆಯಿರುವುದು ಇದಕ್ಕೆ ಕಾರಣವಾಗಿದೆ.[೮೬]

ವಾಣಿಜ್ಯ ಕುಯ್ಲಿನ ಇತಿಹಾಸ

[ಬದಲಾಯಿಸಿ]

ರಷ್ಯಾದಲ್ಲಿ, 14ನೆಯ ಶತಮಾನದಲ್ಲಿ, ಹಿಮಕರಡಿಯ ತುಪ್ಪುಳುಗಳನ್ನು ಆಗಲೇ ವಾಣಿಜ್ಯ ರೀತಿಯಲ್ಲಿ ವಹಿವಾಟು ಮಾಡಲಾಗುತ್ತಿತ್ತು. ಆದರೆ, ಆರ್ಕ್ಟಿಕ್‌ ನರಿ ಅಥವಾ ಹಿಮಸಾರಂಗದ ತುಪ್ಪುಳಿಗೆ ಹೋಲಿಸಿದರೆ, ಹಿಮಕರಡಿಯ ತುಪ್ಪುಳಿಗೆ ಅಷ್ಟು ಬೆಲೆ ಲಭಿಸುತ್ತಿರಲಿಲ್ಲ.[೮೪] 16 ಮತ್ತು 17ನೆಯ ಶತಮಾನಗಳಲ್ಲಿ, ಯುರೇಷ್ಯನ್‌ ಆರ್ಕ್ಟಿಕ್‌ ವಲಯದಲ್ಲಿ ಮಾನವ ಜನಸಂಖ್ಯೆಯ ಹೆಚ್ಚಳ, ಜೊತೆಗೆ ಶಸ್ತ್ರಗಳು ಮತ್ತು ಹೆಚ್ಚುತ್ತಿರುವ ವಹಿವಾಟು, ಹಿಮಕರಡಿಯ ಕುಯ್ಲನ್ನು ಇನ್ನಷ್ಟು ಹೆಚ್ಚಿಸಿತು.[೪೧][೮೭] ಆದರೂ, ಹಿಮಕರಡಿಯ ತುಪ್ಪುಳು ಎಂದಿಗೂ ಸ್ವಲ್ಪಮಟ್ಟಿಗೆ ವಾಣಿಜ್ಯ ಪಾತ್ರ ವಹಿಸಿದ ಕಾರಣ, ಐತಿಹಾಸಿಕ ಕುಯ್ಲಿನ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ. ಉದಾಹರಣೆಗೆ, 1784/1785ರ ಚಳಿಗಾಲದಲ್ಲಿ, ನಾರ್ವೇ ದೇಶದ ದ್ವೀಪ ಸ್ಪಿಟ್ಜ್‌ಬರ್ಜನ್ನ ರಷ್ಯನ್‌ ಪೊಮೊರ್‌ ಜನರು ಮೆಗ್ಡಲೀನ್‌ಫ್ಜೊರ್ಡೆನ್‌ನಲ್ಲಿ 150 ಕರಡಿಗಳನ್ನು ಕೊಯ್ಲು ಮಾಡಿದರು.[೮೪] 20ನೆಯ ಶತಮಾನದ ಆರಂಭದಲ್ಲಿ, ನಾರ್ವೇ ದೇಶದ ಬೇಟೆಗಾರರು ಇದೇ ಸ್ಥಳದಲ್ಲಿ ವಾರ್ಷಿಕ 300 ಹಿಮಕರಡಿಗಳನ್ನು ಹಿಡಿಯುತ್ತಿದ್ದರು. ಒಟ್ಟು ಐತಿಹಾಸಿಕ ಕೊಯ್ಲಿನ ಅಂದಾಜಿನ ಪ್ರಕಾರ, 18ನೆಯ ಶತಮಾನದ ಆರಂಭದಿಂದಲೂ, ಯುರೇಷ್ಯಾ ವಲಯದಲ್ಲಿ ಸ್ಥೂಲವಾಗಿ 400-500 ಹಿಮಕರಡಿಗಳನ್ನು ವಾರ್ಷಿಕವಾಗಿ ಕೊಯ್ಲು ಮಾಡಲಾಗುತ್ತಿತ್ತು. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಅತಿಹೆಚ್ಚಿನ ಸಂಖ್ಯೆಯಾದ 1,300ರಿಂದ 1,500ಕ್ಕೇರಿತು. ಹಿಮಕರಡಿಗಳ ಸಂಖ್ಯೆ ಇಳಿಮುಖವಾದಾಗ, ಕೊಯ್ಲಾದವುಗಳ ಸಂಖ್ಯೆಯೂ ಇಳಿಮುಖವಾಯಿತು.[೮೪]

20ನೆಯ ಶತಮಾನದ ಪೂರ್ವಾರ್ಧದಲ್ಲಿ, ಯಂತ್ರೀಕೃತ ಹಾಗೂ ಪ್ರಬಲವಾಗಿ ದಕ್ಷವಾದ ಬೇಟೆಗಾರಿಕೆ ಮತ್ತು ಬೋನು ಮಾಡುವಿಕೆಯು ಉತ್ತರ ಅಮೆರಿಕಾದಲ್ಲೂ ಬಳಕೆಗೆ ಬಂದಿತು.[೮೮] ಹಿಮವಾಹನಗಳು, ಹಿಮದೋಣಿಗಳು ಮತ್ತು ವಿಮಾನಗಳನ್ನು ಬಳಸಿ ಹಿಮಕರಡಿಗಳನ್ನು ಅಟ್ಟಲಾಗುತ್ತಿತ್ತು. ಇಸವಿ 1965ರಲ್ಲಿ ಪ್ರಕಟವಾದ ನ್ಯೂಯಾರ್ಕ್‌ ಟೈಮ್ಸ್ ‌ ಸಂಪಾದಕೀಯವು ಇದನ್ನು 'ಹಸುವನ್ನು ಮೆಷಿನ್‌ಗನ್‌ನಲ್ಲಿ ಕೊಲ್ಲುವಂತಿದೆ' ಎಂದು ಹಿಮಕರಡಿಗಳ ಬೇಟೆಯನ್ನು ಬಣ್ಣಿಸಿತ್ತು.[೮೮] 1960ರ ದಶಕದಲ್ಲಿ, ಹಿಡಿಯಲಾದ ಹಿಮಕರಡಿಗಳ ಸಂಖ್ಯೆಯು ಅಗಾಧವಾಗಿ ಹೆಚ್ಚಿತು. 1968ರಲ್ಲಿ ಇದು ಉತ್ತುಂಗಕ್ಕೇರಿತು. ಆ ವರ್ಷ 1,250 ಹಿಮಕರಡಿಗಳನ್ನು ಹಿಡಿಯಲಾಗಿತ್ತು.[೮೯]

ಸಮಕಾಲೀನ ನಿಯಂತ್ರಣಗಳು

[ಬದಲಾಯಿಸಿ]

ಹಿಮಕರಡಿ ಪ್ರಭೇದಗಳ ಉಳಿವಿನ ಕುರಿತು ಬಹಳಷ್ಟು ತಳಮಳಗಳು ವ್ಯಕ್ತವಾದ ಮೇಲೆ, 1950ರ ದಶಕದಲ್ಲಿ ಆರಂಭಗೊಂಡು ಹಿಮಕರಡಿಗಳನ್ನು ಬೇಟೆಯಾಡುವುದರ ಮೇಲೆ ರಾಷ್ಟ್ರಾದ್ಯಂತ ನಿಯಂತ್ರಣಗಳನ್ನು ಹೇರಲಾಯಿತು.[೯೦] ಇಸವಿ 1973ರಲ್ಲಿ, ಇಂಟರ್ನ್ಯಾಷನಲ್‌ ಅಗ್ರೀಮೆಂಟ್‌ ಆನ್‌ ದಿ ಕಂಸರ್ವೇಷನ್‌ ಆಫ್‌ ಪೋಲರ್ ಬೇರ್ಸ್‌ (ಹಿಮಕರಡಿಗಳ ಸಂರಕ್ಷಣೆ ಕುರಿತು ಅಂತರರಾಷ್ಟ್ರೀಯ ಒಪ್ಪಂದ) ಹಿಮಕರಡಿ ವ್ಯಾಪ್ತಿಗಳನ್ನು ಹೊಂದಿರುವ ಐದೂ ದೇಶಗಳು (ಕೆನಡಾ, ಡೆನ್ಮಾರ್ಕ್‌ (ಗ್ರೀನ್ಲೆಂಡ್‌), ನಾರ್ವೇ (ಸ್ವಾಲ್ಬಾರ್ಡ್‌), USSR (ಇಂದು ರಷ್ಯನ್‌ ಫೆಡರೇಷನ್‌) ಹಾಗೂ USA (ಅಲಾಸ್ಕಾ)) ಈ ಒಪ್ಪಂದಕ್ಕೆ ಸಹಿ ಹಾಕಿದವು.

ನಾರ್ವೇಯ ಸ್ವಾಲ್ಬಾರ್ಡ್‌ನಲ್ಲಿ ಹಿಮಕರಡಿಗಳ ಕುರಿತು ಎಚ್ಚರಿಕೆ ಸೂಚಿಸುತ್ತಿರುವ ಫಲಕ.

ಇದನ್ನು ಒಸ್ಲೋ ಒಪ್ಪಂದ ಎನ್ನಲಾಗಿದೆ. ಶೀತಲ ಸಮರ ನಡೆಯುತ್ತಿರುವಾಗ, ಇದು ಅಂತರರಾಷ್ಟ್ರೀಯ ಸಹಕಾರದ ಒಂದು ನಿದರ್ಶನವಾಗಿತ್ತು. ಜೀವಶಾಸ್ತ್ರಜ್ಞ ಇಯಾನ್‌ ಸ್ಟರ್ಲಿಂಗ್‌ ಹೀಗೆ ಅಭಿಪ್ರಾಯಪಟ್ಟಿದ್ದಾರೆ: 'ಹಲವು ವರ್ಷಗಳ ಕಾಲ, ಇಡೀ ಆರ್ಕ್ಟಿಕ್ ವಲಯದಲ್ಲಿನಲ್ಲಿ ಐರನ್‌ ಕರ್ಟನ್‌ನ ಎರಡೂ ಬದಿಯಲ್ಲಿರುವ ದೇಶಗಳು‌ ಒಪ್ಪಂದವೊಂದಕ್ಕೆ ಸಹಿ ಹಾಕುವಷ್ಟು ಒಮ್ಮತವಿದ್ದದ್ದು ಒಂದೇ ವಿಷಯದಲ್ಲಿ - ಹಿಮಕರಡಿಗಳ ಸಂರಕ್ಷಣೆ. ಇಂತಹ ಅದ್ಭುತವಾದ ಪರಭಕ್ಷಕ ಹಾಗೂ ಏಕೈಕ ಕಡಲ ಕರಡಿ ಕುರಿತು ಮಾನವ ಅಷ್ಟೊಂದು ಕುತೂಹಲ ಹೊತ್ತಿದ್ದ ಎಂಬುದಕ್ಕೆ ಇದೇ ಸಾಕ್ಷಿ.' [೯೧]

ಈ ಒಪ್ಪಂದವು ಜಾರಿಗೊಳಿಸಲಾಗಿಲ್ಲದಿದ್ದರೂ, ಸದಸ್ಯ ದೇಶಗಳು ಮನರಂಜನಾತ್ಮಕ ಮತ್ತು ವಾಣಿಜ್ಯ ರೂಪದ ಹಿಮಕರಡಿ ಬೇಟೆ, ವಿಮಾನಗಳು ಮತ್ತು ಹಿಮದೋಣಿಗಳ ಮೂಲಕ ಹಿಮಕರಡಿಯ ಮೇಲೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಹೇರಲು, ಹಾಗೂ ಇನ್ನಷ್ಟು ಸಂಶೋಧನೆ ನಡೆಸಲು ಒಪ್ಪಿಕೊಂಡವು.[೯೨] ಈ ಒಪ್ಪಂದವು 'ಕೇವಲ ಸ್ಥಳೀಯ ಜನಾಂಗದವರಿಗೆ, ಸಾಂಪ್ರದಾಯಿಕ ರೀತಿಗಳನ್ನು ಬಳಸಿ ಹಿಮಕರಡಿಗಳನ್ನು ಬೇಟೆಯಾಡಲು' ಅನುಮತಿ ನೀಡಿದೆ. ಆದರೂ, ಸದಸ್ಯ ರಾಷ್ಟ್ರಗಳು ಇದನ್ನು ಯಥೇಚ್ಛವಾಗಿ ಅರ್ಥೈಸಿಕೊಂಡಿವೆ. ಈ ಐದು ರಾಷ್ಟ್ರಗಳ ಪೈಕಿ ನಾರ್ವೇ ದೇಶದಲ್ಲಿ ಮಾತ್ರ ಹಿಮಕರಡಿಯ ಎಲ್ಲಾ ರೀತಿಯ ಬೇಟೆ ಮತ್ತು ಕೊಯ್ಲನ್ನು ನಿಷೇಧಿಸಲಾಗಿದೆ.

ಹಂಚಲಾದ ತಮ್ಮ ಹಿಮಕರಡಿಗಳ ಉಪಸಂಖ್ಯೆಯನ್ನು ಜಂಟಿಯಾಗಿ ನಿರ್ವಹಿಸಲು ದೇಶಗಳ ನಡುವೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳ ಕಾಲ ಮಾತುಕತೆಗಳ ನಂತರ, ಅಲಾಸ್ಕಾ ಮತ್ತು ಚುಕೊಟ್ಕಾ ವಲಯಗಳಲ್ಲಿ ಸ್ಥಳೀಯ ಹೊಟ್ಟೆಪಾಡಿಗಾಗಿ ಬೇಟೆಗಾಗಿ ಕೋಟಾಗಳನ್ನು ನಿರ್ಧರಿಸಲು, ರಷ್ಯಾ ಮತ್ತು U.S. ಅಕ್ಟೋಬರ್‌ 2000ದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.[೯೩] ಈ ಒಪ್ಪಂದವನ್ನು ಅಕ್ಟೋಬರ್‌ 2007ರಲ್ಲಿ ಅಂಗೀಕರಿಸಲಾಯಿತು.[೯೪]

ರಷ್ಯಾ

[ಬದಲಾಯಿಸಿ]

ಸೋವಿಯತ್‌ ಒಕ್ಕೂಟ (ಇಂದಿನ ರಷ್ಯಾ) ಹಿಮಕರಡಿಗಳ ಎಲ್ಲಾ ರೀತಿಯ ಬೇಟೆ ಮತ್ತು ಕೊಯ್ಲನ್ನು 1956ರಲ್ಲಿ ನಿಷೇಧಿಸಿತು. ಆದರೂ ಕಾನೂನು-ಬಾಹಿರ ಹಿಮಕರಡಿ ಬೇಟೆಯು ಮುಂದುವರೆದಿದ್ದು, ಹಿಮಕರಡಿಯ ಸಂಖ್ಯೆಗೆ ತೀವ್ರ ಅಪಾಯ ತಂದೊಡ್ಡಿದೆಯೆಂದು ನಂಬಲಾಗಿದೆ.[೨೪] ಇತ್ತೀಚೆಗಿನ ವರ್ಷಗಳಲ್ಲಿ, ಸಾಗರದ ಇಬ್ಬನಿಯು ಕರಗುತ್ತಿರುವ ಕಾರಣ, ಹಿಮಕರಡಿಗಳು ಚುಕೊಟ್ಕಾ ವಲಯದಲ್ಲಿರುವ ಸಾಗರತೀರದ ಹಳ್ಳಿಗಳ ಹತ್ತಿರ ಪದೇ ಪದೇ ಆಗಮಿಸುತ್ತಿವೆ. ಇದರಿಂದ ಅಲ್ಲಿ ವಾಸಿಸುವ ಮನುಷ್ಯರಿಗೆ ಅಪಾಯದ ಜೊತೆಗೆ, ಕಾನೂನು-ಬಾಹಿರ ಬೇಟೆಯು ಇನ್ನಷ್ಟೂ ಹೆಚ್ಚಾಗುವ ಸಾಧ್ಯತೆಯಿದೆ.[೯೫] ಇಸವಿ 2007ರಲ್ಲಿ, ರಷ್ಯಾ ಸರ್ಕಾರವು ಕೇವಲ ಚುಕೊಟ್ಕಾ ಸ್ಥಳೀಯರಿಗೆ ಮಾತ್ರ ಹೊಟ್ಟೆಪಾಡಿನ ಬೇಟೆ ನ್ಯಾಯಸಮ್ಮತವೆಂದು ತಿದ್ದುಪಡಿ ತಂದಿತು. ಕಾನೂನು-ಬಾಹಿರ ಬೇಟೆಯಾಡುವುದನ್ನು ತಡಯುವ ಈ ಯತ್ನವನ್ನು ರಷ್ಯಾದ ಪ್ರಮುಖ ಹಿಮಕರಡಿ ಸಂಶೋಧಕರು ಮತ್ತು ವರ್ಲ್ಡ್‌ವೈಡ್‌ ಫಂಡ್‌ ಫಾರ್‌ ನೇಚರ್‌ ಸಂಸ್ಥೆಯು ಬೆಂಬಲ ಸೂಚಿಸಿದವು.[೯೫]

ಗ್ರೀನ್‌ಲೆಂಡ್

[ಬದಲಾಯಿಸಿ]

ಗ್ರೀನ್ಲೆಂಡ್‌ನಲ್ಲಿ ಈ ಪ್ರಭೇದದ ಕುರಿತು ನಿರ್ಬಂಧಗಳನ್ನು ಮೊದಲ ಬಾರಿಗೆ 1994ರಲ್ಲಿ ಜಾರಿಗೊಳಿಸಲಾಗಿ, ಕಾರ್ಯಕಾರಿ ಆದೇಶದ ಮೂಲಕ 2005ರಲ್ಲಿ ವಿಸ್ತರಿಸಲಾಯಿತು.[೨೪] ಇಸವಿ 2005ರ ತನಕ, ಗ್ರೀನ್ಲೆಂಡ್‌ ಸ್ಥಳೀಯ ಜನಾಂಗದವರು ಬೇಟೆಯಾಡುವುದರ ಮೇಲೆ ಯಾವುದೇ ಮಿತಿಯನ್ನು ಹೇರಿರಲಿಲ್ಲ. ಆ ದ್ವೀಪದ ಆಡಳಿತವು ಇಸವಿ 2006ಕ್ಕಾಗಿ 150ರ ಮಿತಿಯನ್ನು ವಿಧಿಸಿತು. ಮೊದಲ ಬಾರಿಗೆ ಮನರಂಜನಾತ್ಮಕ ಬೇಟೆಯಾಡುವಿಕೆಗೆ ಅನುಮತಿ ನೀಡಿತು.[೯೬] ಇತರೆ ವಿಧಿಗಳಲ್ಲಿ ತಾಯಿ ಮತ್ತು ಮರಿ ಹಿಮಕರಡಿಗಳಿಗೆ ವರ್ಷಪೂರ್ತಿ ರಕ್ಷಣೆ, ಬಂದೂಕುಗಳ ಬಳಕೆಯ ಮೇಲೆ ನಿರ್ಬಂಧಗಳು, ಬೇಟೆಗಳನ್ನು ದಾಖಲಿಸಲೆಂದು ಹಲವು ಆಡಳಿತಾತ್ಮಕ ಅಗತ್ಯಗಳು ಸೇರಿದ್ದವು.[೨೪]

ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ

[ಬದಲಾಯಿಸಿ]
ಕೆನಡಾದಲ್ಲಿ ಹಿಮಕರಡಿಗಳನ್ನು ಮನರಂಜನಾ ಬೇಟೆಯಾಡಲು ಬಳಸಲಾದ ಸ್ಲೆಜ್‌ ಗಾಡಿ.ಮೋಟಾರ್‌ ಚಾಲಿತ ವಾಹನಗಳನ್ನು ನಿಷೇಧಿಸಲಾಗಿದೆ.

ಕೆನಡಾ ದೇಶಾದ್ಯಂತ, ಮನುಷ್ಯರು ವಾರ್ಷಿಕ 500 ಹಿಮಕರಡಿಗಳನ್ನು ಕೊಲ್ಲುವರು.[೯೭] ಕೆಲವು ವಲಯಗಳಲ್ಲಿ - ಅದರಲ್ಲೂ ವಿಶಿಷ್ಟವಾಗಿ ಬ್ಯಾಫಿನ್‌ ಬೇಯಲ್ಲಿ ಈ ಪ್ರಮಾಣವು ತೀರಾ ಹೆಚ್ಚು ಎಂದು ವಿಜ್ಞಾನಿಗಳು ನಂಬಿದ್ದಾರೆ.[೨೩] ಕೆನಡಾ 1970ರಿಂದಲೂ, ಸ್ಥಳೀಯ ಮಾರ್ಗದರ್ಶಕರು ಮತ್ತು ನಾಯಿಗಾಡಿ ತಂಡಗಳ ಸಹಿತ, ಕ್ರೀಡೆಗಾಗಿ ಹಿಮಕರಡಿಗಳ ಬೇಟೆಯಾಡುವವರಿಗೆ ಅನುಮತಿ ನೀಡಿದೆ.[೯೮] ಆದರೆ ಈ ಪದ್ಧತಿಯು 1980ರ ದಶಕದ ತನಕ ರೂಢಿಯಾಗಿರಲಿಲ್ಲ.[೯೯] ಕ್ರೀಡಾ ಬೇಟೆಗಾರರಿಗಾಗಿ ಮಾರ್ಗದರ್ಶನವು, ಆರ್ಥಿಕ ಅವಕಾಶಗಳು ತೀರ ಕಡಿಮೆಯಿರುವ ವಲಯಗಳಲ್ಲಿ, ಸ್ಥಳೀಯ ಜನರಿಗೆ ಉದ್ಯೋಗಾವಕಾಶದ ಜೊತೆಗೆ, ಆದಾಯದ ಪ್ರಮುಖ ಮೂಲವಾಗಿದೆ.[೨೬] ಉತ್ತರದ (ಸ್ಥಳೀಯ) ಸಮುದಾಯದವರಿಗೆ ಕ್ರೀಡಾ ಬೇಟೆಯು, ಪ್ರತಿ ಹಿಮಕರಡಿ ಬೇಟೆಗೆ CDN$20,000ದಿಂದ $35,000ದಷ್ಟು ಆದಾಯ ನೀಡುತ್ತದೆ. ಇದು ಇದುವರೆಗೂ ಬಹುಶಃ ಅಮೆರಿಕಾ ಮೂಲದ ಬೇಟೆಗಾರರಿಂದ ಬರುತ್ತಿತ್ತು.[೧೦೦]

ದಿನಾಂಕ 15 ಮೇ 2008ರಂದು U.S. ಅಪಾಯಕ್ಕೀಡಾಗಿರುವ ಪ್ರಭೇದ ಕಾಯಿದೆಯಡಿ ಹಿಮಕರಡಿಯನ್ನು ಅಪಾಯಕ್ಕೀಡಾಗಿರುವ ಪ್ರಭೇದಗಳ ಪಟ್ಟಿಗೆ ಸೇರಿಸಿತು. ಎಲ್ಲಾ ರೀತಿಯ ಹಿಮಕರಡಿ ಸ್ಮಾರಕರೂಪಗಳ ಆಮುದನ್ನು ನಿಷೇಧಿಸಿತು. ಕಡಲ ಸಸ್ತನಿ ರಕ್ಷಣಾ ಕಾಯಿದೆಯಡಿ, ಹಿಮಕರಡಿಗಳ ಅಂಗಗಳಿಂದ ತಯಾರಿಸಲಾದ ಉತ್ಪನ್ನಗಳ ಆಮುದು 1972ರಿಂದ 1994ರ ವರೆಗೆ ನಿಷೇಧಿಸಿ, 1994ರಿಂದ 2008ರ ತನಕ ನಿರ್ಬಂಧಿತವಾಗಿತ್ತು. ಈ ನಿರ್ಬಂಧಗಳಡಿ, ಕೆನಡಾದಲ್ಲಿ ಬೇಟೆಯಾಡಿ ಕ್ರೀಡಾ-ಬೇಟೆಯಾದ ಹಿಮಕರಡಿಗಳ ಸ್ಮಾರಕರೂಪಗಳನ್ನು ಆಮುದು ಮಾಡಲು, ಅಮೆರಿಕಾ ಸಂಯುಕ್ತ ಸಂಸ್ಥಾನ ಮೀನು ಮತ್ತು ವನ್ಯಜೀವಿ ಸೇವೆಯಿಂದ ಅನುಪತಿ ಪಡೆಯುವ ಅಗತ್ಯವಿತ್ತು. ದೃಢವಾದ ನಿರ್ವಹಣಾ ತತ್ವಗಳನ್ನು ಆಧರಿಸಿ ಮಾಡಲಾದ ಕೋಟಾಗಳನ್ನು ಹೊಂದಿದ ವಲಯದಿಂದ ಹಿಮಕರಡಿಯನ್ನು ಒಯ್ದಿರತಕ್ಕದ್ದು ಎಂದು ಅನುಮತಿ ಪ್ರಕ್ರಿಯೆಯು ವಿಧಿಸುತ್ತದೆ.[೧೦೧] ಇಸವಿ 1994ರಿಂದಲೂ, ಸುಮಾರು 800ಕ್ಕಿಂತಲೂ ಹೆಚ್ಚು ಕ್ರೀಡಾ-ಬೇಟೆಯಾದ ಹಿಮಕರಡಿಯ ಸ್ಮಾರಕರೂಪಗಳನ್ನು U.S.ನೊಳಗೆ ಆಮುದು ಮಾಡಲಾಗಿದೆ.[೧೦೨]

ವಿಪರ್ಯಾಸವೆಂಬಂತೆ, ಕೆನಡಾದಲ್ಲಿ ಹಿಮಕರಡಿ ಬೇಟೆಯ ಕೋಟಾಗಳ ನಿರ್ವಹಣಾ ರೀತಿಯ ಕಾರಣ, ಹಿಮಕರಡಿಯ ಕ್ರೀಡಾ-ಬೇಟೆಗೆ ಅನುಮತಿಯನ್ನು ರದ್ದುಗೊಳಿಸುವ ಯಾವುದೇ ಯತ್ನವು, ಬೇಟೆಯಾದ ಹಿಮಕರಡಿಗಳ ಸಂಖ್ಯೆ ಅಲ್ಪಾವಧಿಯಲ್ಲೇ ಬಹಳ ಹೆಚ್ಚಾಗಲು ಕಾರಣವಾಗುತ್ತದೆ.[೨೬] ಕೆನಡಾ ದೇಶವು ಹಿಮಕರಡಿಗಳ ಕ್ರೀಡಾ ಹಾಗೂ ಹೊಟ್ಟೆಪಾಡಿನ ಬೇಟೆಗಾಗಿ ಪ್ರತಿ ವರ್ಷಕ್ಕೆ ನಿಗಧಿತ ಅನುಮತಿಗಳನ್ನು ನೀಡುತ್ತದೆ. ಕ್ರೀಡಾ ಬೇಟೆಗೆ ಬಳಸಿಲ್ಲದ ಅನುಮತಿಗಳನ್ನು ಸ್ಥಳೀಯರ ಹೊಟ್ಟೆಪಾಡಿನ ಬೇಟೆಗೆ ಮರುವಿತರಿಸಲಾಗುತ್ತದೆ. ಸ್ಥಳೀಯ ಸಮುದಾಯದವರು ತಮಗೆ ಪ್ರತಿ ವರ್ಷ ಕೊಲ್ಲಲು ಅನುಮತಿ ನೀಡಲಾದ ಎಲ್ಲಾ ಹಿಮಕರಡಿಗಳನ್ನು ಕೊಂದರೆ, ಅನುಮತಿ ಹೊಂದಿದ ಕ್ರೀಡಾ ಬೇಟೆಗಾರರಲ್ಲಿ 50%ರಷ್ಟು ಮಾತ್ರ ಒಂದು ಹಿಮಕರಡಿಯನ್ನು ಕೊಲ್ಲುವಲ್ಲಿ ಸಫಲರಾಗುವರು. ಒಬ್ಬ ಕ್ರೀಡಾ ಬೇಟೆಗಾರರು ಅನುಮತಿಪತ್ರವು ಅಸಿಂಧುವಾಗುವ ಮುಂಚೆ ಹಿಮಕರಡಿಯನ್ನು ಕೊಲ್ಲದಿದ್ದಲ್ಲಿ, ಈ ಅನುಮತಿಪತ್ರವು ಇನ್ನೊಬ್ಬ ಬೇಟೆಗಾರರಿಗೆ ವರ್ಗಾಯಿಸಲಾಗದು.[೨೬]

ಕೆನಡಾ ದೇಶದಲ್ಲಿ ಬೇಟೆಯಾದ ಹಿಮಕರಡಿಗಳ ಪೈಕಿ ನೂನಾವುಟ್‌ನದ್ದೇ 80%ರಷ್ಟು ಪಾಲಿದೆ.[೯೭] ಇಸವಿ 2005ರಲ್ಲಿ, ನೂನಾವುಟ್‌ ಸರ್ಕಾರವು ವೈಜ್ಞಾನಿಕ ಸಮುದಾಯಗಳ ಪ್ರತಿಭಟನೆಗಳನ್ನು ಲೆಕ್ಕಿಸದೆ, ಹಿಮಕರಡಿ ಬೇಟೆಯ ಕೋಟಾವನ್ನು 400ರಿಂದ 518ಕ್ಕೆ ಏರಿಸಿತು.[೧೦೩] ಹೆಚ್ಚಾಗಿ ಗೋಚರಿಸಿದ ಹಿಮಕರಡಿಗಳಿಗೆ ಅನುಗುಣವಾಗಿ ಬೇಟೆಯಾಡಬಹುದಾದ ಕೋಟಾ ಹೆಚ್ಚಿಸಲಾದ ಎರಡು ಕ್ಷೇತ್ರಗಳಲ್ಲಿ, ಹಿಮಕರಡಿಗಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂದು ವಿಜ್ಞಾನ-ಆಧಾರಿತ ಅಧ್ಯಯನಗಳು ಸೂಚಿಸಿವೆ. ಮೂರನೆಯ ಕ್ಷೇತ್ರದಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.[೧೦೪] ಈ ಕೋಟಾದಲ್ಲಿ ಬಹಳಷ್ಟು ಸ್ಥಳೀಯ ಇನೂಯಿಟ್‌ ಜನರು ಬೇಟೆಯಾಡಿದರೆ, ಇದರಲ್ಲಿ ನಿರ್ದಿಷ್ಟ ಪಾಲನ್ನು ಮನರಂಜನಾ ಬೇಟೆಗಾರರಿಗೆ ಮಾರಲಾಗುತ್ತದೆ. (1970ರ ದಶಕದಲ್ಲಿ 0.8%, 1980ರ ದಶಕದಲ್ಲಿ 7.1% ಹಾಗೂ 1990ರ ದಶಕದಲ್ಲಿ 14.6%) [೯೯] ಸದ್ಯದ ಬೇಟೆಯ ಮಿತಿಗಳೊಳಗೇ ಹಿಮಕರಡಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲಾಗಿದೆ ಎಂದು, ಮುಂಚೆ ನೂನಾವುಟ್‌ ಪ್ರಾಂತ್ಯದಲ್ಲಿ ಹಿಮಕರಡಿಗಳ ಸಂರಕ್ಷಣಾ ಜವಾಬ್ದಾರಿ ಹೊತ್ತಿದ್ದ ಜೀವವಿಜ್ಞಾನಿ ಮಿಚೆಲ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.[೧೦೫] ನಾರ್ತ್‌ವೆಸ್ಟ್‌ ಟೆರಿಟರೀಸ್ ಸರ್ಕಾರವು, ಇನುವಿಯಲುಟ್‌ ಸಮುದಾಯದೊಳಗೆ 72-103 ಕರಡಿಗಳನ್ನು ಒಳಗೊಂಡ ತಮ್ಮದೇ ಕೋಟಾವನ್ನು ಉಳಿಸಿಕೊಂಡು, ಇವುಗಳಲ್ಲಿ ಕೆಲವನ್ನು ಕ್ರೀಡಾ ಬೇಟೆಗಾರರಿಗೆ ಪಾಲು ಮಾಡಲಾಗುತ್ತದೆ.

ಇಸವಿ 2010ರಲ್ಲ್ಲಿ 2005ರಲ್ಲಿ ಕೋಟಾ ಹೆಚ್ಚಳವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಲಾಯಿತು. ಬ್ಯಾಫಿನ್‌ ಬೇ ವಲಯದಲ್ಲಿ ಹಿಮಕರಡಿ ಕೋಟಾವನ್ನು ಹಂತಹಂತವಾಗಿ ಕಡಿಮೆಗೊಳಿಸಿ, ಪ್ರತಿ ವರ್ಷ 105 ಇದ್ದದ್ದು 2013ರೊಳಗೆ 65ಕ್ಕೆ ಇಳಿಸಲಾಗುವುದು ನೂನಾವುಟ್‌ ಸರ್ಕಾರದ ಅಧಿಕಾರಿಗಳು ಘೋಷಿಸಿದರು.[೧೦೬] ಎನ್ವಿರಾನ್ಮೆಂಟ್‌ ಕೆನಡಾ ಪ್ರಾಧಿಕಾರವು ಸಹ, ದಿನಾಂಕ 1 ಜನವರಿ 2010ರಿಂದ ಬ್ಯಾಫಿನ್‌ ಬೇ ವಲಯದಲ್ಲಿ ಹಿಡಿಯಲಾದ ಹಿಮಕರಡಿಗಳ ತುಪ್ಪುಳು, ಉಗುರುಗಳು, ತಲೆಬುರುಡೆ ಮತ್ತು ಇತರೆ ಅಂಗಗಳ ಮಾರಾಟವನ್ನು ನಿಷೇಧಿಸಿತು.[೧೦೬]

ಸಂರಕ್ಷಣಾ ಸ್ಥಿತಿ, ಯತ್ನಗಳು ಮತ್ತು ವಿವಾದಗಳು

[ಬದಲಾಯಿಸಿ]
U.S. ಭೂವೈಜ್ಞಾನಿಕ ಸಮೀಕ್ಷೆಯ ಈ ನಕ್ಷೆಯು, 2001-2010ರಿಂದ 2041-2050 ವರೆಗೆ ಹಿಮಕರಡಿಯ ಆವಾಸಸ್ಥಾನದಲ್ಲಿ ಮುಂಗಾಣುವ ಬದಲಾವಣೆಗಳನ್ನು ತೋರಿಸುತ್ತದೆ. ಕೆಂಪು ಬಣ್ಣದಲ್ಲಿ ಸೂಚಿಸಲಾದ ವಲಯಗಳು ನೆಲೆಯ ನಷ್ಟ, ನೀಲಿ ಬಣ್ಣದ್ದು ನೆಲೆಯ ಲಾಭವನ್ನು ಸೂಚಿಸುತ್ತವೆ.

ಇಸವಿ 2008ರಲ್ಲಿ, ವಿಶ್ವಾದ್ಯಂತ ಹಿಮಕರಡಿಗಳ ಸಂಖ್ಯೆಯು 20,000ರಿಂದ 25,000ದ ವರೆಗಿದೆ, ಇದರ ಸಂಖ್ಯೆಯು ಇಳಿಮುಖವಾಗುತ್ತಿದೆಯೆಂದು ವರ್ಲ್ಡ್‌ ಕನ್ಸರ್ವೇಷನ್‌ ಯುನಿಯನ್‌ (IUCN) ವರದಿ ಮಾಡಿದೆ.[] ಇಸವಿ 2006ರಲ್ಲಿ, IUCN ಹಿಮಕರಡಿಯನ್ನು 'ಯಾವುದೇ ಅಪಾಯವಿಲ್ಲ' ಸ್ಥಿತಿಯಿಂದ 'ಅಪಾಯಕ್ಕೀಡಾಗಬಹುದಾದ ಪ್ರಭೇದ' ಸ್ಥಿತಿಗೆ ಬದಲಾಯಿಸಿತು.[೧೦೭] ಜಾಗತಿಕ ತಾಪಮಾನ ಏರಿಕೆಯ ಕಾರಣ, 'ಮೂರು ತಲೆಮಾರುಗಳಲ್ಲಿ (45 ವರ್ಷಗಳು) ಹಿಮಕರಡಿಗಳ ಸಂಖ್ಯೆಯು ಸುಮಾರು 30%ಕ್ಕಿಂತಲೂ ಕಡಿಮೆಯಾಗಬಹುದು' ಎಂಬ ಸಕಾರಣ ವಿವರಿಸಿತು.[] ಹಿಮಕರಡಿಗೆ ಇತರೆ ಅಪಾಯಗಳ ಪೈಕಿ, ವಿಷಮಯ ಕಶ್ಮಲಕಾರಕಗಳು, ಹಡಗು ಸೇವಾ ಉದ್ದಿಮೆಗಳೊಂದಿಗೆ ಘರ್ಷಣೆ, ಹಿಮಕರಡಿಯನ್ನು ವೀಕ್ಷಿಸಲು ಬಂದವರಿಂದ ಉಂಟಾಗುವ ಒತ್ತಡ, ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಸೇರಿವೆ.[] ಕಾನೂನು-ಸಮ್ಮತ ಮತ್ತು ಕಾನೂನು-ಬಾಹಿರ ಹಿಮಕರಡಿಯ ಬೇಟೆಯಿಂದ ಅತಿಯಾದ ಕೊಯ್ಲು ಸಹ ಅಪಾಯಕಾರಿ ಎಂದು IUCN ತಿಳಿಸಿದೆ.[]

ವಿಶ್ವ ವನ್ಯಜೀವ ನಿಧಿ ಪ್ರಕಾರ, ಆರ್ಕ್ಟಿಕ್‌ ಪರಿಸರೀಯ ಆರೋಗ್ಯದಲ್ಲಿ ಹಿಮಕರಡಿಯು ಒಂದು ಮುಖ್ಯ ಪಾತ್ರ ವಹಿಸುತ್ತದೆ. ಆರ್ಕ್ಟಿಕ್‌ ವಲಯದುದ್ದಕ್ಕೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಿಮಕರಡಿಯ ಅಧ್ಯಯನ ಮಾಡಲಾಗಿದೆ; ಏಕೆಂದರೆ, ಅಪಾಯಕ್ಕೀಡಾಗಿರುವ ಹಿಮಕರಡಿಗಳು ಆರ್ಕ್ಟಿಕ್‌ ಕಡಲ ಪರಿಸರ ವ್ಯವಸ್ಥೆಯಲ್ಲಿ ಏನೋ ಎಡವಟ್ಟಾಗಿದೆ ಎಂಬ ಸಂಕೇತಗಳನ್ನು ನೀಡುತ್ತದೆ.[೧೦೮]

ಜಾಗತಿಕ ತಾಪಮಾನ ಏರಿಕೆ

[ಬದಲಾಯಿಸಿ]

IUCN, ಆರ್ಕ್ಟಿಕ್‌ ಹವಾಗುಣ ಪ್ರಭಾವ ಮಾಪನ, ಅಮೆರಿಕಾ ಸಂಯುಕ್ತ ಸಂಸ್ಥಾನ ಭೂವೈಜ್ಞಾನಿಕ ಸಮೀಕ್ಷೆ ಹಾಗು ಹಲವು ಖ್ಯಾತ ಹಿಮಕರಡಿ ಜೀವವಿಜ್ಞಾನಿಗಳು ಜಾಗತಿಕ ತಾಪಮಾನ ಏರಿಕೆ ಕುರಿತು ತೀವ್ರ ತಳಮಳ ವ್ಯಕ್ತಪಡಿಸಿದ್ದಾರೆ. ಸದ್ಯದ ತಾಪಮಾನ ಏರಿಕೆಯ ದರದಲ್ಲಿ ಈ ಅದ್ಭುತ ಪ್ರಭೇದದ ಉಳಿವಿಗೆ ತೀವ್ರ ಅಪಾಯವೊಡ್ಡಬಹುದು ಎಂದೂ ನಂಬಲಾಗಿದೆ.[೨೨][೧೦೯][೧೧೦][೧೧೧][೧೧೨][೧೧೩]

ಜಾಗತಿಕ ತಾಪಮಾನ ಏರಿಕೆಯಿಂದ ವಾಸಸ್ಥಾನದ ನಷ್ಟ, ಪೌಷ್ಟಿಕಾಹಾರದ ಕೊರತೆ ಅಥವಾ ನಿರಾಹಾರ ಸ್ಥಿತಿ ಎದುರಾಗಬಹುದು. ಸಾಗರದ ಇಬ್ಬನಿಯ ವೇದಿಕೆಯಿಂದ ಹಿಮಕರಡಿಯು ನೀರುನಾಯಿಗಳನ್ನು ಬೇಟೆಯಾಡುತ್ತವೆ. ಏರುತ್ತಿರುವ ಉಷ್ಣಾಂಶದಿಂದ ಸಾಗರದ ಇಬ್ಬನಿಯು ವರ್ಷದಲ್ಲಿ ಸಮಯಕ್ಕಿಂತಲೂ ಮುಂಚೆಯೇ ಕರಗಿಹೋಗುತ್ತದೆ. ಇದರಿಂದಾಗಿ, ಬೇಸಿಗೆಯ ಅಪರಾರ್ಧ ಮತ್ತು ಶರತ್ಕಾಲದ ಆರಂಭದಲ್ಲಿ ಉಂಟಾಗುವ ಆಹಾರದ ಕೊರತೆಯನ್ನು ನಿಭಾಯಿಸಲು ಸಾಕಷ್ಟು ಕೊಬ್ಬು ಶೇಖರಿಸಿಕೊಳ್ಳುವ ಮುಂಚೆಯೇ, ಹಿಮಕರಡಿಗಳು ಸಾಗರತೀರಕ್ಕೆ ವಲಸೆ ಹೋಗಬೇಕಾದೀತು.[೭೪] ಸಾಗರದ ಇಬ್ಬನಿ ಹಾಸು ಕಡಿಮೆಯಾಗುವುದರಿಂದ, ಹಿಮಕರಡಿಗಳು ಇನ್ನೂ ಹೆಚ್ಚು ದೂರ ಈಜಬೇಕಾದೀತು. ತಮ್ಮ ಶರೀರದಲ್ಲಿನ ಶಕ್ತಿ ಶೇಖರಣೆಯನ್ನು ಬಳಸಿಕೊಳ್ಳಬೇಕಾದೀತು. ಕೆಲವೊಮ್ಮೆ ತನ್ನ ಶಕ್ತಿಯೆಲ್ಲಾ ಬಳಸಿದ ನಂತರ ಹಿಮಕರಡಿ ಮುಳುಗಿಹೋಗುವ ಅಪಾಯಗಳೂ ಸಂಭವಿಸಬಹುದು.[೧೧೪] ಬಹಳ ತೆಳುವಾದ ಸಾಗರ ಇಬ್ಬನಿಯು ಸುಲಭವಾಗಿ ಒಡೆದುಹೋಗಬಹುದು. ಇದರಿಂದಾಗಿ ಹಿಮಕರಡಿಗಳು ನೀರುನಾಯಿಗಳನ್ನು ಹಿಡಿಯುವುದು ಕಷ್ಟವಾದೀತು.[೫೦] ಸಾಲದಾದ ಪೌಷ್ಟಿಕಾಂಶದ ಪರಿಣಾಮವಾಗಿ, ಪೂರ್ಣವಾಗಿ ಬೆಳೆದ ಹೆಣ್ಣು ಹಿಮಕರಡಿಗಳಲ್ಲಿ ಕಡಿಮೆಯಾದ ಸಂತಾನೋತ್ಪತ್ತಿ ಹಾಗೂ ಮರಿಗಳು ಉಳಿಯುವ ಸಾಧ್ಯತೆ ಕಡಿಮೆ. ಜೊತೆಗೆ, ಎಲ್ಲಾ ವಯಸ್ಸಿನ ಹಿಮಕರಡಿಗಳಲ್ಲಿ ಶಾರೀರಿಕ ಸ್ಥಿತಿ ಕಳಪೆಯಾಗುವ ಸಂಭವವಿದೆ.[೨೨]

ಪೌಷ್ಟಿಕಾಂಶದ ಒತ್ತಡದ ಜೊತೆಗೆ, ಬೆಚ್ಚಗಿನ ಹವಾಗುಣವು ಹಿಮಕರಡಿಯ ಜೀವನದ ಇತರೆ ರೀತಿಗಳ ಮೇಲೂ ಪರಿಣಾಮ ಬೀರುತ್ತದೆ. ಸಾಗರ ಇಬ್ಬನಿ ಕರಗುವುದರಿಂದ ಗರ್ಭಿಣಿ ಹಿಮಕರಡಿಗಳು ತಮಗೆ ಸೂಕ್ತವಾದ ಮಾತೃತ್ವ ಗುಹೆಗಳನ್ನು ನಿರ್ಮಿಸುವ ಕ್ಷಮತೆಯ ಮೇಲೆ ಪ್ರಭಾವಬೀರುತ್ತದೆ. ಇಬ್ಬನಿಯ ರಾಶಿ ಮತ್ತು ಸಾಗರತೀರದ ನಡುವಿನ ಅಂತರವು ಹೆಚ್ಚಾಗುತ್ತಿದ್ದಂತೆ, ಹೆಣ್ಣು ಹಿಮಕರಡಿಗಳು ನೆಲದ ಮೇಲಿನ ಮಾತೃತ್ವ ಗುಹೆ ನಿರ್ಮಿಸಲು ತಮಗೆ ಅನುಕೂಲಕರವಾದ ಹೆಚ್ಚು ದೂರ ಈಜಬೇಕಾಗುವುದು.[೨೨] ಶೀತ ಕೆಳಭೂಸ್ತರವು ಕರಗುವುದರಿಂದ, ಭೂಮಿಯೊಳಗೆ ಗುಹೆ ತೋಡುವ ಹಿಮಕರಡಿಗಳ ಮೇಲೆ ಪ್ರಭಾವ ಬೀರಬಹುದು. ಚಳಿಗಾಲ ಬೆಚ್ಚಗಿರುವ ಕಾರಣ, ಗುಹೆಯ ಛಾವಣಿಯು ಕುಸಿದುಬೀಳುವ ಅಥವಾ ಶಾಖನಿರೋಧಕ ಮೌಲ್ಯ ತಗ್ಗಿಹೋಗಬಹುದು.[೨೨] ಹಲವು ವರ್ಷಗಳಿಂದ ಕೂಡಿದ ಇಬ್ಬನಿಯಲ್ಲಿ ಗುಹೆ ತೋಡುವ ಹಿಮಕರಡಿಗಳಿಗೆ, ಇಬ್ಬನಿ ತೇಲುವಿಕೆ ಹೆಚ್ಚಾದಲ್ಲಿ, ವಸಂತ ಋತುವಿನಲ್ಲಿ ನೀರುನಾಯಿಗಳ ಬೇಟೆಯಾಡಲು ವಾಪಸಾಗಲು ತಾಯಿ ಮತ್ತು ಮರಿ ಹಿಮಕರಡಿಗಳು ಹೆಚ್ಚು ದೂರ ನಡೆಯಬೇಕಾದೀತು.[೨೨] ಬೆಚ್ಚಗಿನ ಹವಾಗುಣದಲ್ಲಿ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು ಮೆರೆಯುತ್ತವೆ.[೫೦]

ಹಿಮಕರಡಿಗಳು ಮತ್ತು ಮನುಷ್ಯರ ನಡುವಿನ ಘರ್ಷಣೆಗಳು - ಉದಾಹರಣೆಗೆ, ಸ್ಥಳೀಯ ಹಿಮಕರಡಿಗಳ ಸಂಖ್ಯೆ ಕಡಿಮೆ ಹಾಗೂ ಹಿಮದ ರಾಶಿ ಒಡೆತ ಬಹಳ ಬೇಗ ಸಂಭವಿಸುವಾಗ ಹಿಮಕರಡಿಗಳು ಕಸದ ತೊಟ್ಟಿಗಳ ಬಳಿ ಬರುವುದು ಐತಿಹಾಸಿಕವಾಗಿ ಹೆಚ್ಚಾಗಿದೆ.[೧೦೯] ಹಿಮಕರಡಿಗಳಿಂದ ಮನುಷ್ಯರ ಮೇಲಿನ ಮಾರಣಾಂತಿಕ ಹಲ್ಲೆಯೂ ಸೇರಿದಂತೆ, ಹೆಚ್ಚಾದ ಮನುಷ್ಯ-ಹಿಮಕರಡಿ ಪರಸ್ಪರ ಕ್ರಿಯೆ ಹೆಚ್ಚಾಗುವ ಸಂಭವವಿದೆ, ಏಕೆಂದರೆ ಸಾಗರದ ಇಬ್ಬನಿಯು ಕ್ಷೀಣವಾಗಿ, ಹಸಿದ ಹಿಮಕರಡಿಗಳು ಆಹಾರವನ್ನು ಹುಡುಕಿಕೊಂಡು ನೆಲಕ್ಕೆ ಬರಬಹುದು.[೧೦೯][೧೧೫]

ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿತ ಗಮನಿಸಲಾದ ವಿಚಾರಗಳು

[ಬದಲಾಯಿಸಿ]

ಹಿಮಕರಡಿಯ ವ್ಯಾಪ್ತಿಯ ದಕ್ಷಿಣ ಭಾಗದಲ್ಲಿ ಜಾಗತಿಕ ತಾಪಮಾನ ಏರಿಕೆಯ ಪ್ರಭಾವ ಹೆಚ್ಚಾಗಿದೆ. ಇದರಿಂದಾಗಿ, ಸ್ಥಳೀಯ ಸಂಖ್ಯೆಯಲ್ಲಿ ಗಮನಾರ್ಹ ಅವಸಾನ ಗಮನಿಸಲಾಗಿದೆ.[೧೧೩] ವ್ಯಾಪ್ತಿಯ ದಕ್ಷಿಣ ಭಾಗದಲ್ಲಿರುವ ಪಶ್ಚಿಮ ಹಡ್ಸನ್‌ ಕೊಲ್ಲಿ ಉಪಸಂಖ್ಯೆ, ಅತ್ಯುತ್ತಮವಾಗಿ ಅಧ್ಯಯನ ಮಾಡಲಾದ ಹಿಮಕರಡಿಯ ಉಪಸಂಖ್ಯೆಗಳಲ್ಲಿ ಒಂದಾಗಿದೆ. ಈ ಉಪಸಂಖ್ಯೆಯು ವಸಂತ ಋತುವಿನ ಅಪರಾರ್ಧದಲ್ಲಿ ಉಂಗುರ ನೀರುನಾಯಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ. ಈ ಸಮಯದಲ್ಲಿ ಹೊಸದಾಗಿ ಮೊಲೆ ಹಾಲು ಬಿಡಿಸಲಾದ, ಸುಲಭ ಬೇಟೆಯಾಗಬಲ್ಲ ನೀರುನಾಯಿ ಮರಿಗಳು ಹೇರಳವಾಗಿರುತ್ತವೆ.[೧೦೪] ಇಬ್ಬನಿಯು ಕರಗಿ ಒಡೆದುಹೋದಾಗ, ಹಿಮಕರಡಿಗಳು ವಸಂತ ಋತುವಿನ ಅಪರಾರ್ಧದ ಬೇಟೆಯಾಡುವ ಕಾಲವು ಅಂತ್ಯಗೊಳ್ಳುತ್ತದೆ. ಸಮುದ್ರ ಪುನಃ ಇಬ್ಬನಿಗಟ್ಟುವ ವರೆಗೂ ಬೇಸಿಗೆ ಕಾಲದುದ್ದಕ್ಕೂ ಅವು ನಿರಾಹಾರವಾಗಿರುತ್ತವೆ ಅಥವಾ ಬಹಳ ಕಡಿಮೆ ತಿನ್ನುತ್ತವೆ.

ಬೆಚ್ಚಗಾಗುತ್ತಿರುವ ವಾತಾವರಣದ ಉಷ್ಣಾಂಶಗಳ ಕಾರಣ, ಪಶ್ಚಿಮ ಹಡ್ಸನ್‌ ಕೊಲ್ಲಿಯಲ್ಲಿ ಇಬ್ಬನಿ ರಾಶಿಯ ಮುರಿತ 30 ವರ್ಷಗಳ ಹಿಂದಿನಕ್ಕಿಂತಲೂ ಮೂರು ವಾರಗಳ ಮುಂಚೆಯೇ ಸಂಭವಿಸುತ್ತಿದೆ. ಇದರಿಂದಾಗಿ ಇದು ಹಿಮಕರಡಿ ಬೇಟೆಯಾಡಿ ಭಕ್ಷಿಸುವ ಋತುವಿನ ಅವಧಿ ಮೊಟಕಾಗಿರುತ್ತದೆ.[೧೦೪] ಈ ಅವಧಿಯಲ್ಲಿ ಹಿಮಕರಡಿಗಳ ಶಾರೀರಿಕ ಸ್ಥಿತಿಯು ಇಳಿಮುಖವಾಗಿದ್ದು, ಒಂಟಿ (ಮತ್ತು ಬಹುಶಃ ಗರ್ಭಿಣಿ ಹೆಣ್ಣು) ಹಿಮಕರಡಿಗಳ ಸರಾಸರಿ ತೂಕವು 1980ರಲ್ಲಿ 290 kg (640 lb) ಮತ್ತು 2004ರಲ್ಲಿ 230 kg (510 lb) ಇತ್ತು.[೧೦೪] 1987ರಿಂದ 2004ರ ತನಕ, ಪಶ್ಚಿಮ ಹಡ್ಸನ್‌ ಕೊಲ್ಲಿಯಲ್ಲಿ ಹಿಮಕರಡಿಗಳ ಸಂಖ್ಯೆಯು 22%ರಷ್ಟು ಕಡಿಮೆಯಾಯಿತು.[೧೧೬]

ತಾಯಿ ಮತ್ತು ಮರಿಗಳಿಗೆ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿರುತ್ತದೆ. ನೀರುನಾಯಿಗಳ ಬೇಟೆಯ ಋತು ಅಲ್ಪಾವಧಿಯಾಗಿದ್ದಲ್ಲಿ ಈ ಅಗತ್ಯದ ಪೂರೈಕೆಯಾಗುವುದಿಲ್ಲ.

ಅಲಾಸ್ಕಾದಲ್ಲಿ ಸಾಗರದ ಇಬ್ಬನಿ ಕ್ಷೀಣಿಸುವಿಕೆಯ ಪ್ರಭಾವವು ಹಿಮಕರಡಿ ಮರಿಗಳ ಸಾವಿಗೆ ಕಾರಣವಾಗಿದೆ. ಇದು ಗರ್ಭಿಣಿ ಹೆಣ್ಣು ಹಿಮಕರಡಿಗಳ ಮಾತೃತ್ವ ಗುಹೆಗಳ ಸ್ಥಳವನ್ನು ಬದಲಾಯಿಸಬೇಕಾಗುವುದು.[೭೩][೧೧೭] ಇತ್ತೀಚೆಗೆ, 2005ರಲ್ಲಿ ಸಂಭವಿಸಿದ ಅಗತ್ಯಕ್ಕಿಂತಲೂ ಹೆಚ್ಚಿನ ಇಬ್ಬನಿ ಕ್ಷೀಣಿಸುವಿಕೆಯ ಕಾರಣ, ಆರ್ಕ್ಟಿಕ್‌ನ ಹಿಮಕರಡಿಗಳು ತಮ್ಮ ಬೇಟೆಯನ್ನು ಹುಡುಕಲು ಎಂದಿನಕ್ಕಿಂತಲೂ ಹೆಚ್ಚು ಕಾಲ ಈಜಬೇಕಾಗಿದ್ದವು. ಇದರ ಪರಿಣಾಮವಾಗಿ, ಹಿಮಕರಡಿಗಳು ಮುಳುಗಿಹೋದ ಕುರಿತು ನಾಲ್ಕು ದಾಖಲಾಗಿದ್ದವು.[೧೧೪]

ಮಾಲಿನ್ಯ

[ಬದಲಾಯಿಸಿ]

ಹಿಮಕರಡಿಗಳು ಪುನರಾವರ್ತಿಸುವ ಸಾವಯವ ಮಲಿನಕಾರಕಗಳನ್ನು ಕೂಡಿಸಿಕೊಳ್ಳುತ್ತವೆ. ಇವುಗಳಲ್ಲಿ ಪಾಲಿಕ್ಲೋರಿನೇಟೆಡ್‌ ಬೈಫಿನೈಲ್‌ ಮತ್ತು ಕ್ಲೋರಿನೇಟೆಡ್‌ ಕೀಟನಾಶಕಗಳು ಸೇರಿವೆ. ಆಹಾರ ಪಿರಮಿಡ್‌ನ ಉತ್ತುಂಗದಲ್ಲಿರುವ ಹಾಗೂ, ಹ್ಯಾಲೊಕಾರ್ಬನ್‌ಗಳ ಸಾಂದ್ರತೆಯಿರುವ ತಿಮಿಕೊಬ್ಬು ಸೇರಿರುವ ಪಥ್ಯಾಹಾರವಿರುವ ಕಾರಣ, ಆರ್ಕ್ಟಿಕ್‌ ಪ್ರಾಣಿಗಳ ಪೈಕಿ ಅವುಗಳ ಶರೀರಗಳು ಅತ್ಯಂತ ಮಲಿನವಾಗಿರುತ್ತವೆ.[೧೧೮] ಹ್ಯಾಲೋಕಾರ್ಬನ್‌ಗಳು ಇತರೆ ಪ್ರಾಣಿಗಳಿಗೂ ಸಹ ವಿಷಮಯವಾಗಿರುತ್ತವೆ, ಏಕೆಂದರೆ ಅವು ಹಾರ್ಮೋನ್‌ಗಳ ರಸಾಯನವನ್ನು ಅಣಕಿಸುತ್ತದೆ. ಜೊತೆಗೆ, ಇಮ್ಯೂನೊಗ್ಲೊಬ್ಯೂಲಿನ್‌ G ಮತ್ತು ರೆಟಿನಾಲ್‌ನಂತಹ ಬಯೊಮಾರ್ಕರ್‌ಗಳು ಹಿಮಕರಡಿಗಳ ಮೇಲೆ ಅದೇ ರೀತಿಯ ಪ್ರಭಾವಗಳನ್ನು ಸೂಚಿಸುತ್ತವೆ. PCBಗಳ ಕುರಿತು ಅತಿ ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಅವುಗಳು ಜನ್ಮ ದೋಷಗಳು ಮತ್ತು ಪ್ರತಿರೋಧ ಶಕ್ತಿಯ ಕುಗ್ಗುವಿಕೆಗಳಿಗೆ ಕಾರಣವಾಗಿವೆ.[೧೧೯]

ಈ ರಾಸಾಯನಿಕಗಳಲ್ಲಿ ಅಪಾಯಕಾರಿಯಾಗಿರುವ PCBಗಳು ಮತ್ತು DDTಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಗಿದೆ. ನಿಷೇಧದ ನಂತರ ದಶಕಗಟ್ಟಲೆ ಈ ರಾಸಾಯನಿಕಗಳ ಸಾಂದ್ರತೆಯು ಹಿಮಕರಡಿಗಳ ಅಂಗಾಂಶಗಳಲ್ಲಿ ಹೆಚ್ಚಾಗುತ್ತಲೇ ಇತ್ತು. ಏಕೆಂದರೆ ಈ ರಾಸಾಯನಿಕಗಳು ಆಹಾರ ಸರಣಿಗಳ ಮೂಲಕ ಹರಡುತ್ತಿದ್ದವು. ಆದರೂ, 1989-1993 ಅವಧಿಯಲ್ಲಿನ ಅಧ್ಯಯನ ಮತ್ತು 1996-2002 ಅವಧಿಯಲ್ಲಿನ ಅಧ್ಯಯನಗಳ ನಡುವೆ ಈಗ ಸಾಂದ್ರತೆ ಕಡಿಮೆಯಾಗುತ್ತಿದೆ.[೧೨೦]

ಕೆಲವೊಮ್ಮೆ, ಹಿಮಕರಡಿಗಳಲ್ಲಿ ಭಾರೀ ಲೋಹಗಳು ಸಹ ಪತ್ತೆಯಾಗಿವೆ.

ತೈಲ ಮತ್ತು ಅನಿಲ ಅಭಿವೃದ್ಧಿ

[ಬದಲಾಯಿಸಿ]

ಹಿಮಕರಡಿ ವಾಸಸ್ಥಾನದಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿಯು ಹಿಮಕರಡಿಗಳ ಮೇಲೆ ವಿವಿಧ ರೂಪಗಳಲ್ಲಿ ಪ್ರಭಾವ ಬೀರಬಹುದು. ಆರ್ಕ್ಟಿಕ್‌ನಲ್ಲಿ ತೈಲ ಚೆಲ್ಲುವಿಕೆಯು ಹಿಮಕರಡಿ ಮತ್ತು ಅವುಗಳ ಬೇಟೆಗಳು ಹೆಚ್ಚಾಗಿ ವಾಸಿಸುವೆಡೆ ಹೆಚ್ಚಿನ ಸಾಂದ್ರತೆ ಹೊಂದಿರುತ್ತದೆ, ಉದಾಹರಣೆಗೆ, ಸಾಗರದ ಇಬ್ಬನಿ ತೀರಗಳು.[] ಹಿಮಕರಡಿಗಳು ಶಾಖನಿರೋಧನಕ್ಕಾಗಿ ಭಾಗಶಃ ತಮ್ಮ ತುಪ್ಪುಳುಗಳನ್ನು ಅವಲಂಬಿಸುತ್ತವೆ. ಹಾಗಾಗಿ ತೈಲವು ಅದರ ತುಪ್ಪುಳಿಗೆ ಮೆತ್ತಿಕೊಂಡಲ್ಲಿ ಅದರ ನಿರೋಧನ ಮೌಲ್ಯವು ಕಡಿಮೆಯಾಗುತ್ತದೆ. ತೈಲ ಚೆಲ್ಲುವಿಕೆಯಿಂದ ಹಿಮಕರಡಿಗಳು ಲಘೂಷ್ಣತೆಯ ಕಾರಣ ಸತ್ತುಹೋಗುವ ಅಪಾಯಕ್ಕೀಡಾಗುತ್ತವೆ.[೫೪] ತೈಲ ಚೆಲ್ಲುವಿಕೆಗೆ ಈಡಾದ ಹಿಮಕರಡಿಗಳು ತಮ್ಮ ತುಪ್ಪುಳುಗಳಿಂದ ತೈಲವನ್ನು ನೆಕ್ಕುತ್ತವೆ. ಇದರಿಂದಾಗಿ ಹಿಮಕರಡಿಗಳ ಮೂತ್ರಕೋಶಗಳು ವಿಫಲವಾಗುತ್ತವೆ.[೫೪] ಗರ್ಭಿಣಿ ಹೆಣ್ಣು ಹಿಮಕರಡಿಗಳು ಮತ್ತು ಮರಿ ಹಾಕಿರುವ ಹಿಮಕರಡಿಗಳು ವಾಸಿಸುವ ಮಾತೃತ್ವ ಗುಹೆಗಳಿಗೆ ಸನಿಹದಲ್ಲಿ ತೈಲ ಪರಿಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದ ತೊಂದರೆಯಾಗಬಹುದು. ಸಂವೇದನಾಶೀಲ ಸ್ಥಳಗಳಿಗೆ ಈ ರೀತಿ ತೊಂದರೆಯಾದಲ್ಲಿ, ತಾಯಿ ಹಿಮಕರಡಿಯು ಮುಂಚಿತವಾಗಿಯೇ ತನ್ನ ಗುಹೆ ಅಥವಾ ಮರಿಗಳನ್ನು ಮುಂಚಿತವಾಗಿಯೇ ತೊರೆದುಬಿಡಬಹುದು.[]

ಭವಿಷ್ಯನುಡಿಗಳು

[ಬದಲಾಯಿಸಿ]

ಜಾಗತಿಕ ತಾಪಮಾನ ಏರಿಕೆಯ ಕಾರಣ, ಬೇಸಿಗೆಯಲ್ಲಿ ಕ್ಷೀಣಿಸುತ್ತಿರುವ ಸಾಗರ ಇಬ್ಬನಿಯ ಮುನ್ನಂದಾಜಿನ ಪ್ರಕಾರ, ಇಸವಿ 2050ಕ್ಕೆ ವಿಶ್ವದ ಹಿಮಕರಡಿಗಳಲ್ಲಿ ಸುಮಾರು ಮೂರರ ಎರಡರಷ್ಟು ಅಳಿವಾಗುತ್ತವೆ ಎಂದು U.S. ಭೂವೈಜ್ಞಾನಿಕ ಸಮೀಕ್ಷೆ ಮನಗಂಡಿದೆ.[೫೦] ಹಿಮಕರಡಿಗಳು ಯುರೋಪ್‌, ಏಷ್ಯಾ ಹಾಗೂ ಅಲಾಸ್ಕಾದಿಂದ ಮಾಯವಾಗುವುದಲ್ಲದೆ, ಕೆನಡಾದ ದ್ವೀಪಸಮೂಹ ಮತ್ತು ಗ್ರೀನ್ಲೆಂಡ್‌ನ ಉತ್ತರ ತೀರದಾಚೆಗಿನ ವಲಯಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗಲಿದೆ. ಇಸವಿ 2080ಕ್ಕೆ ಅವು ಗ್ರೀನ್ಲೆಂಡ್‌ನಿಂದ ಸಂಪೂರ್ಣವಾಗಿ ಹಾಗೂ ಕೆನಡಾದ ಉತ್ತರ ತೀರದಿಂದ ಮಾಯವಾಗುತ್ತವೆ. ಆರ್ಕ್ಟಿಕ್‌ ದ್ವೀಪಸಮೂಹದ ಒಳವಲಯದಲ್ಲಿ ಮಾತ್ರ ಕಡಿಮೆ ಸಂಖ್ಯೆಗಳಲ್ಲಿ ಉಳಿಯುತ್ತವೆಯಷ್ಟೆ.[೫೦]

ನೆಲದಲ್ಲಿರುವ ಆಹಾರ ಮೂಲಗಳತ್ತ ವಲಸೆ ಹೋಗುವುದರ ಮೂಲಕ, ಹವಾಗುಣ ಬದಲಾವಣೆಗಳೊಂದಿಗೆ ಹಿಮಕರಡಿಗಳು ಎಷ್ಟರ ಮಟ್ಟಿಗೆ ಹೊಂದಿಕೊಳ್ಳಬಹುದೆಂಬ ಕುರಿತು ಭವಿಷ್ಯನುಡಿಗಳಲ್ಲಿ ವ್ಯತ್ಯಾಸಗಳಿವೆ. ನುನಾವುಟ್‌ ಸರ್ಕಾರದಲ್ಲಿ ವನ್ಯಜೀವಿ ಸಂಶೋಧನಾ ನಿರ್ದೇಶಕರಾಗಿದ್ದ ಮಿಚೆಲ್‌ ಟೇಲರ್‌, US ಮೀನು ಮತ್ತು ವನ್ಯಜೀವಿ ಸೇವಾ ಆಯೋಗಕ್ಕೆ ಬರೆದ ಪತ್ರವೊಂದರಲ್ಲಿ, ಈ ಸಮಯದಲ್ಲಿ ಸ್ಥಳೀಯ ಅಧ್ಯಯನಗಳು ಜಾಗತಿಕ ರಕ್ಷಣೆಗೆ ಸಾಲದಾದ ಆಧಾರಗಳಾಗಿವೆ ಎಂದು ವಾದಿಸಿದರು. ಪತ್ರದ ಪ್ರಕಾರ, 'ಸದ್ಯಕ್ಕೆ, ದೊಡ್ಡ ಗಾತ್ರದ ಆರ್ಕ್ಟಿಕ್‌ ಸಸ್ತನಿಗಳ ಪೈಕಿ ಹಿಮಕರಡಿ ಅತ್ಯುತ್ತಮವಾಗಿ ನಿರ್ವಹಿಸಲಾದ ಪ್ರಾಣಿಯಾಗಿದೆ. ಎಲ್ಲಾ ಆರ್ಕ್ಟಿಕ್‌ ರಾಷ್ಟ್ರಗಳೂ ಹಿಮಕರಡಿ ಒಪ್ಪಂದದ ನೀತಿ ನಿಯಮಾವಳಿಗಳೊಂದಿಗೆ ಹೊಂದಿಕೊಂಡಲ್ಲಿ, ಹಿಮಕರಡಿಗಳ ಭವಿಷ್ಯ ಸುರಕ್ಷಿತವಾಗಿದೆ.... ಹಿಮಕರಡಿಗಳು ಖಚಿತವಾಗಿಯೂ ಸಹ ಹವಾಗುಣ ಬದಲಾವಣೆಗಳೊಂದಿಗೆ ಹೊಂದಿಕೊಳ್ಳಬಹುದು. ಪರಿವರ್ತನೆಯಾಗುವ ಹವಾಗುಣಗಳುಳ್ಳ ಸಾವಿರ ವರ್ಷಗಳಿಂದಲೂ ಅವು ವಿಕಸನ ಹೊಂದಿ, ಮುಂದುವರೆದಿವೆ.' [೧೦೫] 'ಕಂದು ಕರಡಿಗಳಂತೆ ಹಿಮಕರಡಿಗಳೂ ಸಹ ಸ್ಯಾಲ್ಮೊನ್‌ ಮೀನುಗಳನ್ನು ತಿನ್ನಲು ಕಲಿತರೆ ನನಗೆ ಅಚ್ಚರಿಯಾಗದು' ಎಂದು ಅಲಾಸ್ಕಾ ಮೀನು ಮತ್ತು ಕ್ರೀಡಾ ಬೇಟೆ ಇಲಾಖೆಯ ಉಪ ಆಯುಕ್ತ ಕೆನ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.[೨೬]

ಆದರೆ, ಹಲವು ವಿಜ್ಞಾನಿಗಳು ಈ ಸಿದ್ಧಾಂತಗಳನ್ನು ನಿರಾಧಾರ ಎಂದಿದ್ದಾರೆ;[೨೬] ಏಕೆಂದರೆ, ನೆಲದ ಆಹಾರ ಮೂಲಗಳು ಸಾಕಷ್ಟಿರುವುದಿಲ್ಲದ ಕಾರಣ, ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಕರಿ ಮತ್ತು ಕಂದು ಕರಡಿಗಳು ಇತರೆಡೆ ವಾಸಿಸುವ ಕರಡಿಗಳಿಗಿಂತಲೂ ಸಣ್ಣ ಗಾತ್ರದ್ದಾಗಿರುತ್ತವೆ.[೧೦೪] ಪ್ರಭೇದಕ್ಕೆ ಇನ್ನೂ ಹೆಚ್ಚಿನ ಅಪಾಯವೇನೆಂದರೆ, ಹಿಮಕರಡಿಗಳು ನೆಲದ ಮೇಲೆ ಹೆಚ್ಚು ಸಮಯ ಕಳೆದರೆ ಅವು ಕಂದು ಅಥವಾ ಗ್ರಿಜ್ಲಿ ಕರಡಿಗಳೊಂದಿಗೆ ಸಂಕರಿಸುತ್ತವೆ.[೧೧೩] IUCN ಈ ರೀತಿ ಬರೆಯಿತು:

Polar bears exhibit low reproductive rates with long generational spans. These factors make facultative adaptation by polar bears to significantly reduced ice coverage scenarios unlikely. Polar bears did adapt to warmer climate periods of the past. Due to their long generation time and the current greater speed of global warming, it seems unlikely that polar bear will be able to adapt to the current warming trend in the Arctic. If climatic trends continue polar bears may become extirpated from most of their range within 100 years.[]

ಪ್ರಭೇದ ರಕ್ಷಣೆ ಕುರಿತು ವಿವಾದಗಳು

[ಬದಲಾಯಿಸಿ]
USAದ ನ್ಯೂಯಾರ್ಕ್‌ ಸಿಟಿಯ ಸೆಂಟ್ರಲ್‌ ಪಾರ್ಕ್‌ ಜೂನಲ್ಲಿ ಹಿಮಕರಡಿ.

ಹಿಮಕರಡಿಯ ಭವಿಷ್ಯ ಕುರಿತು ಎಚ್ಚರಿಕೆಯ ಸಂಕೇತಗಳನ್ನು ತದ್ವಿರುದ್ಧ ಎನ್ನಲಾಗಿದೆ. ವಿಶ್ವಾದ್ಯಂತ ಹಿಮಕರಡಿ ಅಂದಾಜು ಸಂಖ್ಯೆಗಳು ಕಳೆದ ಸುಮಾರು 50 ವರ್ಷಗಳಿಂದ ಹೆಚ್ಚಿದ್ದು, ಈಗ ಇಂದು ಸ್ಥಿರವಾಗಿದೆ.[೧೨೧][೧೨೨] ಜಾಗತಿಕ ಸಂಖ್ಯೆಯ ಅಂದಾಜನ್ನು 1970ರ ದಶಕದ ಪೂರ್ವಾರ್ಧದಲ್ಲಿ ಸುಮಾರು 5,000-10,000 ಇದ್ದವು [೧೨೩]; 1980ರ ದಶಕದಲ್ಲಿ ಇತರೆ ಅಂದಾಜುಗಳ ಪ್ರಕಾರ 20,000-40,0000 ಹಿಮಕರಡಿಗಳಿದ್ದವು.[೨೯][೪೧] ಸದ್ಯದ ಅಂದಾಜುಗಳ ಪ್ರಕಾರ, ಹಿಮಕರಡಿಯ ಜಾಗತಿಕ ಸಂಖ್ಯೆಯು 20,000ದಿಂದ 25,000ದ ವರೆಗಿದೆ.[೨೪]

ಹಿಮಕರಡಿಗಳ ಹಿಂದಿನ ಮತ್ತು ಮುನ್ನಂದಾಜಿನ ಸಂಖ್ಯೆ ಕುರಿತು ಭಿನ್ನಾಭಿಪ್ರಾಯಕ್ಕೆ ಹಲವು ಕಾರಣಗಳಿವೆ: 1950ರ ಮತ್ತು 1960ರ ದಶಕಗಳಲ್ಲಿನ ಅಂದಾಜುಗಳು, ವೈಜ್ಞಾನಿಕ ಸಮೀಕ್ಷೆಗಳಿಗಿಂತಲೂ ಹೆಚ್ಚಾಗಿ, ಪರಿಶೋಧಕರು ಮತ್ತು ಬೇಟೆಗಾರರು ನೀಡಿದ ವೃತ್ತಾಂತಗಳನ್ನು ಆಧರಿಸಿದ್ದವು.[೧೨೪][೧೨೫] ಎರಡನೆಯದಾಗಿ, ಕೊಯ್ಲಿನ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಿದ ನಂತರ, ಅತಿ ಹೆಚ್ಚಾಗಿ ಬೇಟೆಯಾದ ಪ್ರಭೇದಗಳ ಸಂಖ್ಯೆ ಪುನಃ ಚೇತರಿಸಿಕೊಂಡಿತು.[೧೨೪] ಮೂರನೆಯದಾಗಿ, ಜಾಗತಿಕ ತಾಪಮಾನ ಏರಿಕೆಯ ಇತ್ತೀಚೆಗಿನ ಪರಿಣಾಮಗಳು, ವಿವಿಧ ವಲಯಗಳಲ್ಲಿ ವಿವಿಧ ಮಟ್ಟಗಳ ವರೆಗೂ, ಸಾಗರದ ಇಬ್ಬನಿಯ ಮೇಲೆ ಪ್ರಭಾವ ಬೀರಿವೆ.[೧೨೪] WWF ಮಾಹಿತಿಯ ಪ್ರಕಾರ, 19 ಹಿಮಕರಡಿ ಉಪಸಂಖ್ಯೆಗಳ ಪೈಕಿ ಕೇವಲ ಒಂದೇ ಒಂದು ಮತ್ರ ಹೆಚ್ಚುತ್ತಿದ್ದು, ಮೂರು ಸ್ಥಿರವಾಗಿವೆ, ಎಂಟು ಕ್ಷೀಣಿಸುತ್ತಿವೆ, ಉಳಿದ ಏಳು ಉಪಸಂಖ್ಯೆಗಳ ಕುರಿತು, ಸಂಖ್ಯಾ ವಿದ್ಯಮಾನವನ್ನು ಅಳೆಯಲು ಅಗತ್ಯವಾದ ಮಾಹಿತಿಯಿಲ್ಲ.[೧೨೨]

ಅಪಾಯಕ್ಕೀಡಾಗಿರುವ ಪ್ರಭೇದ ಶಾಸನದಡಿ ಹಿಮಕರಡಿಯನ್ನು ಸೇರಿಸುವುದರ ಕುರಿತು ಚರ್ಚೆಯು ಸಂರಕ್ಷಣಾ ಸಮುದಾಯಗಳು ಮತ್ತು ಕೆನಡಾದ ಇನೂಯಿಟ್‌ ನಡುವೆ ಘರ್ಷಣೆಗೆ ಕಾರಣವಾಗಿದೆ.[೨೬] ಹಿಮಕರಡಿಯನ್ನು ಅಪಾಯಕ್ಕೀಡಾಗಿರುವ ಪ್ರಭೇದ ಕಾಯಿದೆಯಡಿ ಹಿಮಕರಡಿಯನ್ನು ಸೇರಿಸುವ U.S. ಯತ್ನವನ್ನು ಕೆನಡಾದ ನೂನಾವುಟ್‌ ಸರ್ಕಾರ ಮತ್ತು ನಲವು ಉತ್ತರ ತೀರದ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ.[೧೨೬][೧೨೭] ಹಿಮಕರಡಿಯ ಸಂಖ್ಯೆಯು ಹೆಚ್ಚುತಿದೆಯೆಂದು ಹಲವು ಇನೂಯಿಟ್‌ರು ನಂಬಿದ್ದಾರೆ. ಕ್ರೀಡಾ ಬೇಟೆ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದಲ್ಲಿ ಅವರ ಸಮುದಾಯಗಳಿಗೆ ಆದಾಯ ನಷ್ಟವಾಗುವುದು ಎನ್ನುತ್ತಾರೆ.[೨೬][೧೨೮]

U.S. ಅಪಾಯಕ್ಕೀಡಾದ ಪ್ರಭೇದ ಶಾಸನ

[ಬದಲಾಯಿಸಿ]

ದಿನಾಂಕ 14 ಮೇ 2008ರಂದು, U.S. ಒಳನಾಡು ವಲಯ ಇಲಾಖೆಯು ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯಡಿ ಅಪಾಯಕ್ಕೀಡಾದ ಪ್ರಭೇದ ಎಂದು ಪರಿಗಣಿಸಿತು. ಆರ್ಕ್ಟಿಕ್‌ ಸಾಗರದ ಇಬ್ಬನಿಯು ಕರಗುತ್ತಿರುವುದು ಹಿಮಕರಡಿಗೆ ಪ್ರಮುಖ ಅಪಾಯ ಎಂದು ಇದಕ್ಕೆ ಕಾರಣ ವಿವರಿಸಿತು.[೧೨೯] ಆದರೂ, ಈ ಪಟ್ಟಿಯ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲಾಗದು ಎಂದು ಇಲಾಖೆಯು ಕೂಡಲೇ ಹೇಳಿಕೆ ನೀಡಿತು. 'ಇದು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯ ಅಸಮರ್ಪಕ ಬಳಕೆಯಾಗುವುದು. U.S. ಹವಾಗುಣ ನೀತಿಯನ್ನು ನಿರ್ಣಯಿಸಲು ESA ಸಮರ್ಪಕ ಸಾಧನವಲ್ಲ.' [೧೩೦] ಆದರೂ, ಸರ್ಕಾರದ ನಿಲುವು ತಾಳಿದ್ದರೂ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಹೆಚ್ಚಿಸುವುದರ ಮೂಲಕ ಹಿಮಕರಡಿಗಳಿಗೆ ಅಪಾಯ ಒಡ್ಡುವಂತಹ ಯೋಜನೆಗಳಿಗೆ ಪರವಾನಗಿ ನಿರ್ಬಂಧಗಳನ್ನು ಹೇರಲು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯನ್ನು ಬಳಸಬಹುದು ಎಂದು ಕೆಲವು ನೀತಿ ವಿಶ್ಲೇಷಕರು ನಂಬಿದ್ದಾರೆ.[೧೨೯] ಅಪಾಯಕ್ಕೀಡಾದ ಪ್ರಭೇದ ಕಾಯಿದೆಯನ್ನು ಈ ರೀತಿ ನಿರೂಪಿಸುವಂತೆ ನ್ಯಾಯಾಲಯಕ್ಕೆ ಹೋಗಲು ಪರಿಸರ ಸಂರಕ್ಷಣಾ ಸಮುದಾಯಗಳು ಪಣ ತೊಟ್ಟಿವೆ.[೧೨೯] ಈ ನೀತಿಯನ್ನು ಮುಂದುವರೆಸಲಾಗುವುದೆಂದು ಬರಾಕ್‌ ಒಬಾಮಾ ಸರ್ಕಾರವು 8 ಮೇ 2009ರಂದು ಘೋಷಿಸಿತು.[೧೩೧]

ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಕ್ಕೆ ಸೇರಿಸಿದಾಗ, ಒಳನಾಡು ವಲಯ ಇಲಾಖೆಯು ಎಂದಿಗೂ ಬಳಸಲಾಗಿಲ್ಲದ ವಿಧಿಯೊಂದನ್ನು ಸಹ ಸೇರಿಸಿತು: ಕಡಲ ಸಸ್ತನಿ ರಕ್ಷಣಾ ಕಾಯಿದೆಯು ಈಗಾಗಲೇ ವಿಧಿಸಿದ ನಿರ್ಬಂಧಗಳೊಂದಿಗೆ ಉದ್ದಿಮೆಗಳು ಸಹಕರಿಸುತ್ತಿದ್ದಲ್ಲಿ, ಹಿಮರಡಿಗಳು ವಾಸಿಸುವ ವಲಯಗಳಲ್ಲಿ ಅಂತಹ ಉದ್ದಿಮೆಗಳು ತೈಲ ಮತ್ತು ಅನಿಲ ಪರಿಶೋಧನಾ ಚಟುವಟಿಕೆ ನಡೆಸಲು ಅವಕಾಶವಿದೆ.[೧೩೨] ಈ ಪಟ್ಟಿಯಲ್ಲಿ ಸೇರ್ಪಡೆಯ ನಿಯಮಾವಳಿಗಳಡಿ ಹಿಮಕರಡಿಗಳಿಗೆ ಹೊಸ ಪ್ರಮುಖ ರಕ್ಷೆಯೇನೆಂದರೆ ಬೇಟೆಗಾರರು ಕೆನಡಾ ದೇಶದಲ್ಲಿ ಬೇಟೆಯಾಡಿದ ಹಿಮಕರಡಿಗಳ ಸ್ಮಾರಕರೂಪಗಳನ್ನು ಆಮುದುಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ.[೧೩೨]

ಜಾಗತಿಕ ತಾಪಮಾನ ಏರಿಕೆಯ ಕಾರಣ ಅಪಾಯಕ್ಕೀಡಾದ ಪ್ರಭೇದಗಳ ಕಾಯಿದೆಯಡಿ, ಎಲ್ಕ್‌ ಹೆಜ್ಜಿಂಕೆ ಮತ್ತು ಕಡವೆಗಳ ನಂತರ ಹಿಮಕರಡಿಯು ರಕ್ಷಿಸಲಾದ ಮೂರನೆಯ ಪ್ರಭೇದವಾಗಿದೆ. ಅಲಾಸ್ಕಾ ರಾಜ್ಯವು ದಿನಾಂಕ 4 ಆಗಸ್ಟ್‌ 2008ರಂದು, ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಯಿಂದ ತೆಗೆಯಬೇಕೆಂದು U.S. ಒಳನಾಡು ಇಲಾಖೆಯ ಕಾರ್ಯದರ್ಶಿ ಡಿರ್ಕ್‌ ಕೆಂಪ್‌ಥಾರ್ನ್‌ ವಿರುದ್ಧ ಮೊಕದ್ದಮೆ ಹೂಡಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವುದರಿಂದ ಅಲಾಸ್ಕಾ ರಾಜ್ಯದಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂಬುದು ಕಾರಣವಾಗಿತ್ತು.[೧೩೩] ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ನಿರ್ಧಾರವು ಅತ್ಯುತ್ತಮ ವೈಜ್ಞಾನಿಕ ಮತ್ತು ವಾಣಿಜ್ಯ ಮಾಹಿತಿಯನ್ನು ಆಧರಿಸಿರಲಿಲ್ಲ ಎಂದು ಅಲಾಸ್ಕಾ ರಾಜ್ಯದ ಅಂದಿನ ರಾಜ್ಯಪಾಲ ಸಾರಾ ಪ್ಯಾಲಿನ್‌ ಹೇಳಿದ್ದರು. ಸಾರಾರ ಈ ಅಭಿಪ್ರಾಯವನ್ನು ಹಿಮಕರಡಿ ತಜ್ಞರು ತಳ್ಳಿಹಾಕಿದರು.[೧೩೩]

ಹಲವು ವರ್ಷಗಳ ವಿವಾದಗಳ ನಂತರ ಈ ತೀರ್ಪು ನೀಡಲಾಯಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸಬೇಕೆಂದು ಜೀವವಿಜ್ಞಾನದ ವೈವಿಧ್ಯ ಕೇಂದ್ರವು 17 ಫೆಬ್ರವರಿ 2005ರಂದು ಮೊಕದ್ದಮೆ ಹೂಡಿತು. ದಿನಾಂಕ 5 ಜೂನ್‌ 2006ರಂದು ಒಪ್ಪಂದವೊಂದಕ್ಕೆ ಸಹಿ ಹಾಕಿ ಸಂಯುಕ್ತತಾ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು. ಈ ಒಪ್ಪಂದದಂತೆ, ದಿನಾಂಕ 9 ಜನವರಿ 2007ರಂದು, US ಮೀನು ಮತ್ತು ವನ್ಯಜೀವಿ ಸೇವಾ ಸಂಸ್ಥೆಯು ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ದಿನಾಂಕ 9 ಜನವರಿ 2008ರೊಳಗೆ ಕಾನೂನಿನ ಪ್ರಕಾರ ಅಂತಿಮ ನಿರ್ಣಯದ ಅಗತ್ಯವಿತ್ತು. ಆಗ ನಿಯೋಗವು ಇನ್ನೂ ಒಂದು ತಿಂಗಳ ಸಮಯಾವಕಾಶ ಕೋರಿತು.[೧೩೪]

ನಿರ್ಧಾರ ತೆಗೆದುಕೊಳ್ಳಲು ಎರಡು ತಿಂಗಳ ವಿಳಂಬದ ಕಾರಣವನ್ನು ತಿಳಿಯಲು, U.S. ಒಳನಾಡು ವಲಯ ಇಲಾಖೆಯ ಮಹಾನಿರೀಕ್ಷಕರು 7 ಮಾರ್ಚ್‌ 2008ರಂದು ಆರಂಭಿಕ ತನಿಖೆ ನಡೆಸಿಸಿದರು.[೧೩೪] U.S. ಮೀನು ಮತ್ತು ವನ್ಯಜೀವಿ ನಿರ್ದೇಶಕ ಡೇಲ್‌ ಹಾಲ್‌, ನಿರ್ಧಾರವನ್ನು ಅನಗತ್ಯವಾಗಿ ವಿಳಂಬಗೊಳಿಸಿ, (ಹಿಮಕರಡಿಗಳ ಪ್ರಮುಖ ತಾಣವಾದ) ಅಲಾಸ್ಕಾದ ಚುಕ್ಚಿ ಸಮುದ್ರದಲ್ಲಿ ತೈಲ ಮತ್ತು ಅನಿಲ ಗುತ್ತಿಗೆ ಹರಾಜು ಮಾಡಲು ಸರ್ಕಾರಕ್ಕೆ ಆಸ್ಪದ ನೀಡಿದ ನಿಯೋಗದ ವೈಜ್ಞಾನಿಕ ನಿಯಮಾವಳಿಗಳನ್ನು ಉಲ್ಲಂಘಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಈ ತನಿಖೆ ನಡೆಸಲಾಯಿತು.[೧೩೪] ಫೆಬ್ರವರಿ 2008ರ ಆರಂಭದಲ್ಲಿ ಹರಾಜು ನಡೆಯಿತು.[೧೩೪] ನ್ಯೂಯಾರ್ಕ್‌ ಟೈಮ್ಸ್ ‌ನ ಸಂಪಾದಕೀಯವು, 'ಈ ಎರಡೂ ಕ್ರಮಗಳು ಖಚಿತವಾಗಿಯೂ, ಸಿನಿಕತನದಿಂದ ಕೂಡಿವೆ' ಎಂದು ಅಭಿಪ್ರಾಯಪಟ್ಟಿದೆ.[೨೬][೧೩೫] ಡೇಲ್‌ ಹಾಲ್‌ ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ಹಸ್ತಾಕ್ಷೇಪವನ್ನು ತಳ್ಳಿಹಾಕಿದರು. ನಿರ್ಧಾರವನ್ನು ಸುಲಭವಾಗಿ ಅರ್ಥವಾಗಬಲ್ಲ ರೂಪಕ್ಕೆ ತರಲೆಂದು ವಿಳಂಬ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.[೧೩೪] ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ಕುರಿತು ನಿರ್ಧಾರವನ್ನು ದಿನಾಂಕ 15 ಮೇ 2008ರೊಳಗೆ ತೆಗೆದುಕೊಳ್ಳಬೇಕೆಂದು ಸಂಯುಕ್ತತಾ ನ್ಯಾಯಾಲಯವು ದಿನಾಂಕ 28 ಏಪ್ರಿಲ್‌ 2008ರಂದು, ತೀರ್ಪು ನೀಡಿತು.[೧೩೬] ನಿರ್ಧಾರವನ್ನು 14 ಮೇ 2008ರಂದು ತೆಗೆದುಕೊಳ್ಳಲಾಯಿತು.[೧೩೨]

ಕೆನಡಿಯನ್‌ ಅಪಾಯಕ್ಕೀಡಾದ ಪ್ರಭೇದ ಶಾಸಸ

[ಬದಲಾಯಿಸಿ]

ಕೆನಡಾದ ಅಪಾಯಕ್ಕೀಡಾದ ವನ್ಯಜೀವಿಗಳ ಸ್ಥಿತಿ ಕುರಿತು ಸಮಿತಿ, ಸಂಯುಕ್ತತೆಯ ಅಪಾಯ ಎದುರಿಸುವ ಪ್ರಭೇದ ಕಾಯಿದೆ (SARA) ಅಡಿ ಹಿಮಕರಡಿಯನ್ನು ವಿಶೇಷ ಕಾಳಜಿಯ ಪ್ರಭೇದ ಎಂದು ಪರಿಗಣಿಸುವಂತೆ, ಏಪ್ರಿಲ್‌ 2008ರಲ್ಲಿ ಶಿಫಾರಸು ಮಾಡಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಯಲ್ಲಿ ಸೇರಿಸುವುದು ಅಂದರೆ, ಐದು ವರ್ಷಗಳೊಳಗೆ ವ್ಯವಸ್ಥಾಪನಾ ಯೋಜನೆಯನ್ನು ರಚಿಸಬೇಕಾಯಿತು. ಈ ಅವಧಿ ತೀರಾ ದೀರ್ಘಕಾಲದ್ದು, ಹವಾಗುಣ ಬದಲಾವಣೆಗಳಿಂದಾಗುವ ಗಮನಾರ್ಹವಾದ ವಾಸಸ್ಥಾನ ನಷ್ಟವನ್ನು ತಡೆಗಟ್ಟುವ ಯತ್ನ ಸಾಲದು ಎಂಬ ವ್ಯಾಪಕ ಟೀಕೆ ಕೇಳಿಬಂದಿತು.[೧೩೭]

ಸಂಸ್ಕೃತಿ-ಸಂಪ್ರದಾಯಗಳಲ್ಲಿ ಹಿಮಕರಡಿ

[ಬದಲಾಯಿಸಿ]
ಸುಮಾರು 1940ರ ದಶಕದಲ್ಲಿ ಚುಕ್ಚಿ ಕಲಾವಿದರು ಕಡಲಸಿಂಹದ ದಂತದಲ್ಲಿ ಮಾಡಿದ ಈ ಕೆತ್ತನೆಯಲ್ಲಿ ಹಿಮಕರಡಿ ಕಡಲಸಿಂಹವನ್ನು ಬೇಟೆಯಾಡುತ್ತಿರುವುದು.

ಸ್ಥಳೀಯ ಜನಪದ ಕಥೆಗಳು

[ಬದಲಾಯಿಸಿ]

ಆರ್ಕ್ಟಿಕ್‌ ವಲಯದಲ್ಲಿ ವಾಸಿಸುವ ಸ್ಥಳೀಯ ಜನತೆಗೆ, ಹಿಮಕರಡಿಗಳು ದೀರ್ಘಕಾಲದಿಂದಲೂ ಪ್ರಮುಖ ಸಾಂಸ್ಕೃತಿಕ ಮತ್ತು ವಸ್ತುದ್ರವ್ಯದ ಪಾತ್ರ ವಹಿಸಿದೆ.[೮೩][೮೪] ಸುಮಾರು 2,500ರಿಂದ 3,000 ವರ್ಷಗಳ ಹಿಂದಿನ ಕಾಲದ ಬೇಟೆಯಾಡುವ ಸ್ಥಳಗಳಲ್ಲಿ ಹಿಮಕರಡಿಗಳ ಅವಶೇಷಗಳು ದೊರೆತಿವೆ.[೮೬] ಚುಕೊಟ್ಕಾದಲ್ಲಿ ಹಿಮಕರಡಿಗಳನ್ನು ನಿರೂಪಿಸುವ 1,500 ವರ್ಷ ಹಳೆಯ ಗುಹೆಗಳ ಚಿತ್ರರಚನೆಗಳು ದೊರಕಿವೆ.[೮೪] ಖಚಿತವಾಗಿಯೂ, ಆರ್ಕ್ಟಿಕ್‌ ಜನತೆ ನೀರುನಾಯಿಗಳನ್ನು ಬೇಟೆಯಾಡುವ ಮತ್ತು ಮಂಜು ಗುಡಿಸಲು ನಿರ್ಮಿಸುವ ಕುಶಲತೆಯನ್ನು ಭಾಗಶಃ ಹಿಮಕರಡಿಗಳಿಂದಲೇ ಕಲಿತಂತಿದೆ.[೮೪]

ಹಿಮಕರಡಿಗಳ ಕುರಿತು ಇನೂಯಿಟ್‌ ಮತ್ತು ಎಸ್ಕಿಮೊ ಜನರಲ್ಲಿ ಹಲವು ಜನಪದ ಕಥೆಗಳಿವೆ. ಇವುಗಳಲ್ಲಿ ಕಟ್ಟುಕಥೆಗಳ ಪ್ರಕಾರ, ಹಿಮಕರಡಿಗಳು ತಮ್ಮ ಗುಹೆಗಳೊಳಗಿರುವಾಗ ಮನುಷ್ಯ ರೂಪದಲ್ಲಿದ್ದು, ಹೊರಗೆ ಹೋಗುವಾಗ ಹಿಮಕರಡಿ ಚರ್ಮಗಳನ್ನು ಹೊದ್ದಿಕೊಳ್ಳುತ್ತಿದ್ದವಂತೆ. ಬೃಹತ್‌ ಹಿಮಕರಡಿ ಮತ್ತು ಅದರ ಸುತ್ತಲೂ ನಾಯಿಗಳನ್ನು ಹೋಲುವ ತಾರಾಪುಂಜದ ಕುರಿತು ಕಥೆಗಳೂ ಸಹ ಕೇಳಿಬಂದಿದ್ದವು.[೮೨]

ಈ ಕಟ್ಟುಕಥೆಗಳು ಹಿಮಕರಡಿಯ ಕುರಿತು ಅಪಾರ ಮರ್ಯಾದಾ ಮನೋಭಾವವನ್ನು ತಿಳಿಸುತ್ತದೆ; ಏಕೆಂದರೆ, ಹಿಮಕರಡಿಯು ಅಧ್ಯಾತ್ಮಿಕವಾಗಿ ಬಲಶಾಲಿ ಹಾಗೂ ಮಾನವನಿಗೆ ಹೋಲಿಸುವಷ್ಟು ಸನಿಹ ಎನ್ನಲಾಗಿದೆ.[೮೨] ಹಿಮಕರಡಿಗಳು ಎರಡು ಕಾಲ ಮೇಲೆ ನಿಲ್ಲುವಾಗ ಮತ್ತು ಕೂರುವಾಗ ಮಾನವನಂತೆ ಕಾಣುವುದು; ಚರ್ಮ ತೆಗೆದಾಗ ಹಿಮಕರಡಿಯ ಮೃತದೇಹವು ಮಾನವನನ್ನು ಹೋಲುವ ವಿಚಾರವು, ಮಾನವ ಮತ್ತು ಹಿಮಕರಡಿಯ ಆತ್ಮವು ಪರಸ್ಪರ ಹೊಂದಿಕೊಳ್ಳುತ್ತವೆ ಎಂಬ ಕಲ್ಪನೆಗೆ ಆಧಾರವಾಯಿತು.[೮೨] ಎಸ್ಕಿಮೋ ಕಟ್ಟುಕಥೆಗಳ ಪ್ರಕಾರ, ಬೇಟೆಯಾಡುವುದನ್ನು ಮಾನವನು ಹಿಮಕರಡಿಗಳಿಂದ ಕಲಿತನಂತೆ. ಲಬ್ರೆಡಾರ್‌ನ ಇನೂಯಿಟ್‌ ಜನತೆಗೆ, ಹಿಮಕರಡಿಯು ಮಹಾ ಆತ್ಮವಾದ ಟೂರ್ನ್ಗಾಸುಕ್‌ನ ಒಂದು ರೂಪವೆಂದು ಪರಿಗಣಿಸಲಾಗಿದೆ.[೧೩೮] ಇನೂಯಿಟ್ ಮತ್ತು ಎಸ್ಕಿಮೊ ಜನಾಂಗದವರಿಗೆ ಹಿಮಕರಡಿಯ ಕುರಿತು ಬಹಳ ಮರ್ಯಾದಾಭಾವವಿದೆ.

ಪೂರ್ವ ಸೈಬೀರಿಯಾಚುಕ್ಚಿ ಮತ್ತು ಯುಪಿಕ್‌ ಜನಾಂಗಗಳಲ್ಲಿ, ದೀರ್ಘಕಾಲದಿಂದಲೂ ಅನುಸರಿಸಲಾದ ಷ್ಯಾಮನ್‌ ಮತದ ಧಾರ್ಮಿಕ ಕ್ರಿಯೆಯನ್ನು ಬೇಟೆಯಾದ ಹಿಮಕರಡಿಗೆ ಕೃತಜ್ಞನತಾ ನಿವೇದನೆಯ ರೂಪದಲ್ಲಿ ಸಲ್ಲಿಸುತ್ತಿದ್ದರು. ಪ್ರಾಣಿಯನ್ನು ಕೊಂದ ನಂತರ, ಅದರ ತಲೆ ಮತ್ತು ಚರ್ಮವನ್ನು ತೆಗೆದು, ಸ್ಚಚ್ಛಗೊಳಿಸಿ, ಮನೆಗೆ ತಂದು, ಬೇಟೆ ಶಿಬಿರದಲ್ಲಿ ಹಿಮಕರಡಿಯ ಗೌರವಾರ್ಥವಾಗಿ ಒಂದು ಔತಣ ಮಾಡುತ್ತಿದ್ದರು. ಹಿಮಕರಡಿಯ ಆತ್ಮವನ್ನು ಶಾಂತಗೊಳಿಸಲು, ಸಾಂಪ್ರದಾಯಿಕ ಹಾಡು ಮತ್ತು ಸಂಗೀತ ವಾದ್ಯ ನುಡಿಸುವರು; ಹಿಮಕರಡಿಯ ತಲೆಬುರುಡೆಗೆ ಶಾಸ್ತ್ರೋಕ್ತವಾಗಿ ಆಹಾರ ತುಂಬಿಸಿ, ಪೈಪು ಸಹ ನೀಡಲಾಗುತ್ತದೆ.[೧೩೯] ಹಿಮಕರಡಿಯ ಆತ್ಮ ಶಾಂತವಾದ ಮೇಲೆಯೇ ತಲೆಬುರುಡೆಯನ್ನು ಚರ್ಮದಿಂದ ಬೇರ್ಪಡಿಸಿ, ಊರಿನಿಂದ ಬಹಳ ದುರ ಒಯ್ದು, ನೆಲದಲ್ಲಿ ಉತ್ತರಾಭಿಮುಖವಾಗಿ ಇಡಲಾಗುವುದು.[೮೪] ಈ ಸಂಪ್ರದಾಯಗಳು ಕಾಲಾನಂತರದಲ್ಲಿ ಮಾಸಿಹೋದವು. ಸೋವಿಯತ್‌ ಒಕ್ಕೂಟವು (ಇಂದಿನ ರಷ್ಯಾ) 1955ರಿಂದಲೂ ಹಿಮಕರಡಿ ಬೇಟೆಯನ್ನು ನಿಷೇಧಿಸಿದ ಕಾರಣ ಈ ಕ್ರಿಯೆಗಳು ನಡೆಯುತ್ತಿಲ್ಲ.

ಉತ್ತರ-ಮಧ್ಯ ಸೈಬೀರಿಯಾದ ನೆನೆಟ್‌ಗಳು ಹಿಮಕರಡಿಯ ಪ್ರಮುಖ ಕೋರೆಹಲ್ಲುಗಳ ರಕ್ಷೆಯಂತಹ ಮಹತ್ತಿಗೆ ಬೆಲೆ ಕೊಡುತ್ತಿದ್ದರು. ಅವುಗಳನ್ನು ತಗ್ಗುಪ್ರದೇಶದ ಯೆನಿಸೇಯ್‌ ಮತ್ತು ಖತಂಗಾ ನದಿಗಳ ದಡದಲ್ಲಿರುವ ಹಳ್ಳಿಗಳು ಹಾಗೂ ಇನ್ನೂ ದಕ್ಷಿಣದ ಕಾಡುಗಳಲ್ಲಿ ವಾಸಿಸುವ ಜನರಿಗೆ ಮಾರಲಾಗುತ್ತಿತ್ತು. ಕಂದು ಕರಡಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದು ಈ ಜನರು ಈ ಹಲ್ಲುಗಳನ್ನು ತಮ್ಮ ಟೋಪಿಗಳಿಗೆ ಹೊಲಿದುಕೊಳ್ಳುತ್ತಿದ್ದರು. ತನ್ನ 'ದೊಡ್ಡ ಸೋದರಮಾವ' (ಹಿಮಕರಡಿ) ಹಲ್ಲನ್ನು ಧರಿಸಿರುವ ಮನುಷ್ಯನನ್ನು 'ಸಣ್ಣ ಸೋದರಳಿಯ' (ಕಂದು ಕರಡಿ) ಹಲ್ಲೆ ಮಾಡಲು ಧೈರ್ಯ ತೋರದು ಎಂದು ನಂಬಲಾಗಿತ್ತು.[೮೪] 'ಸೆದ್ಯಂಗಿ ' ಎಂಬ ವಿಶಿಷ್ಟ, ಪವಿತ್ರ ಸ್ಥಳಗಳು ಮತ್ತು ವೇದಿಕೆಗಳಲ್ಲಿ ಬೇಟೆಯಾಡಿ ಕೊಲ್ಲಲಾದ ಹಿಮಕರಡಿಗಳ ತಲೆಬುರುಡೆಗಳನ್ನು ಹೂಳಲಾಗಿತ್ತು. ಈ ಸೆದ್ಯಂಗಿಗಳನ್ನು ಹಿಮಕರಡಿಗಳ ತಲೆಬುರುಡೆಗಳಿಂದ ನಿರ್ಮಿಸಲಾಗುತ್ತಿತ್ತು. ಇಂತಹ ಹಲವು ಸ್ಥಳಗಳನ್ನು ಯಮಲ್‌ ಪರ್ಯಾಯ ದ್ವೀಪದಲ್ಲಿ ಸಂರಕ್ಷಿಸಲಾಗಿವೆ.[೮೪]

ಸಂಕೇತಗಳು ಮತ್ತು ಭಾಗ್ಯದಾಯಕ ಪ್ರಾಣಿಗಳಾಗಿ ಹಿಮಕರಡಿ

[ಬದಲಾಯಿಸಿ]
ಚಿತ್ರ:Pbear.jpg
ಹಿಮಕರಡಿಯ ಅಂಚೆಚೀಟಿಯನ್ನು ಹೊರಡಿಸಿದ ಕೆನಡಾ ದೇಶ.
ರಷ್ಯನ್‌ ಫೆಡೆರೇಷನ್‌ನಲ್ಲಿ ಚುಕೊಟ್ಕಾ ಆಟೊನಾಮಸ್‌ ಓಕ್ರುಗ್‌ನಲ್ಲಿ ಕೋಟ್‌ ಆಫ್‌ ಆರ್ಮ್ಸ್‌.

ಹಿಮಕರಡಿಯ ವಿಶಿಷ್ಟ ರೂಪ ಮತ್ತು ಆರ್ಕ್ಟಿಕ್‌ನೊಂದಿಗೆ ತಮ್ಮ ಒಡಂಬಡಿಕೆಯ ಕಾರಣ, ಹಿಮಕರಡಿಗಳು ಜನಪ್ರಿಯ ಸಂಕೇತಗಳಾಗಿವೆ, ಅದರಲ್ಲೂ ವಿಶಿಷ್ಟವಾಗಿ, ಅವು ಸ್ಥಳೀಯವೆಂದು ಪರಿಗಣಿಸಲಾದ ವಲಯಗಳಲ್ಲಿ ಅವು ಜನಪ್ರಿಯ ಸಂಕೇತಗಳಾಗಿವೆ. ಕೆನಡಿಯನ್‌ ಟೂನೀ (ಎರಡು ಡಾಲರ್‌ ನಾಣ್ಯ) ಹಿಮಕರಡಿಯ ಚಿತ್ರವನ್ನಹ ಹೊಂದಿದೆ. ಕೆನಡಾ ದೇಶದ ನಾರ್ತ್ವೆಸ್ಟ್‌ ಟೆರಿಟರೀಸ್‌ ಮತ್ತು ನೂನಾವುಟ್‌ ವಾಹನ ಸಂಖ್ಯಾ ಫಲಕಗಳು ಹಿಮಕರಡಿಯ ಆಕಾರದಲ್ಲಿವೆ. ಹಿಮಕರಡಿಯು ಮೇಯ್ನ್‌ನಲ್ಲಿರುವ ಬೊಡೊಯಿನ್‌ ಕಾಲೇಜ್‌ನ ಸಂಕೇತವಾಗಿದೆ. ಕ್ಯಾಲ್ಗ್ಯಾರಿಯಲ್ಲಿ ನಡೆದ 1988 ಶೀತಲ ಒಲಿಂಪಿಕ್ಸ್‌ನ ಲಾಂಛನವನ್ನಾಗಿ ಬಳಸಲಾಯಿತು.

ಕೊಕಾ ಕೋಲಾ, ಪೋಲರ್‌ ಬಿವರೇಜಸ್‌, ನೆಲ್ವಾನಾ, ಬುಂಡಾಬರ್ಗ್‌ ರಮ್ ಮತ್ತು ಗುಡ್‌ ಹ್ಯೂಮರ್‌-ಬ್ರೇಯರ್ಸ್‌ ನಂತಹ ಉದ್ದಿಮೆಗಳು ಹಿಮಕರಡಿಯ ಚಿತ್ರಗಳನ್ನು ತಮ್ಮ ಜಾಹೀರಾತುಗಳಲ್ಲಿ ಬಳಸಿವೆ.[೧೪೦] ಫಾಕ್ಸ್ ಗ್ಲೇಷಿಯರ್‌ ಮಿಂಟ್ಸ್‌ ಉದ್ದಿಮೆಯು ಪೆಪ್ಪಿ ಎಂಬ ಒಂದು ಹಿಮಕರಡಿಯನ್ನು 1922ರಿಂದಲೂ ಬ್ರ್ಯಾಂಡ್‌ ಮ್ಯಾಸ್ಕಟ್‌ ರೂಪದಲ್ಲಿ ಬಳಸುತ್ತಿದೆ.

ಸಾಹಿತ್ಯ

[ಬದಲಾಯಿಸಿ]

ಹಿಮಕರಡಿಗಳು ಕಲ್ಪನಾಕಥೆಗಳಲ್ಲಿ ಅದರಲ್ಲೂ ವಿಶಿಷ್ಟವಾಗಿ, ಕಿರಿಯರು ಮತ್ತು ಯುವಕರಿಗಾಗಿ ಪ್ರಕಟಿಸಲಾದ ಪುಸ್ತಕಗಳಲ್ಲಿ ಜನಪ್ರಿಯವಾಗಿವೆ. ಉದಾಹರಣೆಗೆ, ದಿ ಪೋಲರ್‌ ಬೇರ್‌ ಸನ್‌ ಎಂಬುದನ್ನು ಸಾಂಪ್ರದಾಯಿಕ ಇನೂಯಿಟ್‌ ಕಥೆಯಿಂದ ಆಯ್ದುಕೊಳ್ಳಲಾಗಿದೆ.[೧೪೧] ಇಡಿತ್‌ ಪಟ್ಟೌರವರ ಈಸ್ಟ್‌ (ನಾರ್ತ್‌ ಚೈಲ್ಡ್‌ ಎಂದೂ ಕರೆಯಲಾಗಿದೆ), ರೇಮಂಡ್‌ ಬ್ರಿಗ್ಸ್‌ದಿ ಬೇರ್‌ ಹಾಗೂ ಕ್ರಿಸ್‌ ಡಿ'ಲೇಸೀದಿ ಫಯರ್‌ ವಿದಿನ್‌ ಸರಣಿಗಳಲ್ಲಿ ಹಿಮಕರಡಿಗಳು ಕಾಣಸಿಗುತ್ತವೆ. ಫಿಲಿಪ್‌ ಪುಲ್ಮನ್ರ ಕಲ್ಪನಾಕಥಾ ಕೃತಿತ್ರಯ ಹಿಸ್‌ ಡಾರ್ಕ್‌ ಮೆಟೀರಿಯಲ್ಸ್‌ ನಲ್ಲಿ panserbjørne ಎಂಬುದು ವಿವೇಕಬುದ್ಧಿಯುಳ್ಳ, ಘನತೆಯುಳ್ಳ, ಮಾನವರೂಪಿ ಗುಣಗಳನ್ನು ಹೊಂದಿರುವ ಹಿಮಕರಡಿಗಳಾಗಿವೆ. ಇದು ದಿ ಗೋಲ್ಡನ್‌ ಕಾಂಪಾಸ್ ‌ ಕೃತಿಯ ಸಿನೆಮಾ ಅವತಾರವಾಗಿದ್ದು, 2007ರಲ್ಲಿ ತೆರೆಕಂಡಿತ್ತು.

ಆಕರಗಳು

[ಬದಲಾಯಿಸಿ]
  • Bruemmer, Fred (1989). World of the Polar Bear. Toronto, ON: Key Porter Books. ISBN 1-55013-107-9.
  • Matthews, Downs (1993). Polar Bear. San Francisco, CA: Chronicle Books. ISBN 0-8118-0050-X. {{cite book}}: Check |isbn= value: checksum (help); Cite has empty unknown parameter: |coauthors= (help)
  • Hemstock, Annie (1999). The Polar Bear. Manakato, MN: Capstone Press. ISBN 0-7368-0031-X. {{cite book}}: Cite has empty unknown parameter: |coauthors= (help)
  • Lockwood, Sophie (2006). Polar Bears. Chanhassen, MN: The Child's World. ISBN 1-59296-501-6. {{cite book}}: Cite has empty unknown parameter: |coauthors= (help)
  • Rosing, Norbert (1996). The World of the Polar Bear. Willowdale, ON: Firefly Books Ltd. ISBN 1-55209-068-X.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ೧.೨ Schliebe et al. (2008). Ursus maritimus Archived 2012-05-02 ವೇಬ್ಯಾಕ್ ಮೆಷಿನ್ ನಲ್ಲಿ.. IUCN Red List of Threatened Species. Retrieved on 5 January 2010.
  2. Phipps, John (1774). A voyage towards the North Pole undertaken by His Majesty's command, 1773 /by Constantine John Phipps. London :Printed by W. Bowyer and J. Nicols, for J. Nourse. p. 185. Retrieved 8 September 2008.
  3. "Polar bear, (Ursus maritimus)" (PDF). U.S. Fish and Wildlife service. Archived from the original (PDF) on 5 June 2008. Retrieved 9 September 2009. Appearance. The polar bear is the largest member of the bear family, with the exception of Alaska's Kodiak brown bears, which equal polar bears in size. (ಸ್ಥೂಲ ಸಮೀಕ್ಷಾ ಪುಟ Archived 2009-04-18 ವೇಬ್ಯಾಕ್ ಮೆಷಿನ್ ನಲ್ಲಿ.)
  4. Kindersley, Dorling (2001,2005). Animal. New York City: DK Publishing. ISBN 0-7894-7764-5. {{cite book}}: Check date values in: |year= (help)CS1 maint: year (link)
  5. Gunderson, Aren (2007). "Ursus Maritimus". Animal Diversity Web. University of Michigan Museum of Zoology. Retrieved 27 October 2007.
  6. ೬.೦ ೬.೧ IUCN ಪೊಲರ್‌ ಬೇರ್‌ ಸ್ಪೆಷಲಿಸ್ಟ್‌ ಗ್ರೂಪ್‌, 2009.2009ರಲ್ಲಿ ಡೆನ್ಮಾರ್ಕ್‌ನ ಕೊಪನ್‌ಹ್ಯಾಗೆನ್‌ನಲ್ಲಿ ನಡೆದ PBSGನ 15ನೆಯ ಸಭೆ: ಸುದ್ದಿ ಬಿಡುಗಡೆ Archived 2010-07-08 ವೇಬ್ಯಾಕ್ ಮೆಷಿನ್ ನಲ್ಲಿ. ದಿನಾಂಕ 10 ಜನವರಿ 2010ರಂದು ಪುನರ್ಪಡೆದದ್ದು.
  7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ Schliebe et al. (2008). Ursus maritimus. 2006. IUCN Red List of Threatened Species. IUCN 2006. www.iucnredlist.org. Retrieved on 9 May 2006. ದತ್ತಾಂಶ ನಮೂದನೆಯು ಈ ಪ್ರಭೇದವು ಏಕೆ ಅಳಿವಿಗೆ ಈಡಾಗಬಹುದು ಎಂದು ಪರಿಗಣಿಸಲಾಗಿದೆ ಎಂಬುದರ ಬಗ್ಗೆ ಸಮರ್ಥನೆಯ ಸಹ ಸುದೀರ್ಘ ವಿವರಣೆ.
  8. Kidd, D.A. (1973). Collins Latin Gem Dictionary. London: Collins. ISBN 0-00-458641-7.
  9. "ದಿ ಮೆರೈನ್‌ ಮ್ಯಾಮಲ್‌ ಸೆಂಟರ್‌". Archived from the original on 2009-06-04. Retrieved 2010-05-12.
  10. ದಿ ಆರ್ಕ್ಟಿಕ್‌ ಸೌಂಡರ್‌
  11. "Этимологический Словарь - ಪೀಟರ್‌ ಸಿಜರ್ವಿನ್ಸ್ಕಿ → ಒಷ್ಕುಯ್‌". Archived from the original on 2008-05-04. Retrieved 2010-05-12. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  12. ಗ್ರ್ಯಾಂಡ್‌ ಕ್ವೀಬೆಕ್‌
  13. ಪುರಾತನ ಗ್ರೀಕ್‌ ಶಬ್ದಗಳಾದ ಥಲಾಸ್ಸಾ /θαλασσα 'ಸಮುದ್ರ' ಹಾಗೂ ಆರ್ಕ್ಟೊಸ್‌ /αρκτος 'ಕರಡಿ' ಶಬ್ದಗಳನ್ನು ಜೋಡಿಸಿ, ಹಾಗೂ, ಅರ್ಸಾ ಮೇಜರ್‌, 'ಉತ್ತರ' ಅಥವಾ 'ಉತ್ತರ ಧ್ರುವೀಯ'ಕ್ಕೆ ಉಲ್ಲೇಖನ ಹೊಂದಿದೆ. Liddell, Henry George and Robert Scott (1980). A Greek-English Lexicon (Abridged Edition). United Kingdom: Oxford University Press. ISBN 0-19-910207-4.
  14. "IUCN Red List: Ursus maritimus". Retrieved 15 February 2008.
  15. ೧೫.೦ ೧೫.೧ Lindqvist, Charlotte; Schuster, Stephan C.; Sun, Yazhou; Talbot, Sandra L.; Qi, Ji; Ratan, Aakrosh; Tomsho, Lynn P.; Kasson, Lindsay; Zeyl, Eve (2010). "Complete mitochondrial genome of a Pleistocene jawbone unveils the origin of polar bear". PNAS. 107 (11): 5053–5057. doi:10.1073/pnas.0914266107..
  16. ೧೬.೦ ೧೬.೧ ೧೬.೨ DeMaster, Douglas P.; Stirling, Ian (8 May 1981). Ursus Maritimus. Vol. 145. American Society of Mammalogists. pp. 1–7. doi:10.2307/3503828. OCLC 46381503. Retrieved 21 January 2008. {{cite book}}: |journal= ignored (help); More than one of |periodical= and |journal= specified (help)CS1 maint: date and year (link)
  17. Lisette P. Waits, Sandra L. Talbot, R.H. Ward and G. F. Shields (1998). "Mitochondrial DNA Phylogeography of the North American Brown Bear and Implications for Conservation". Conservation Biology. pp. 408–417. Archived from the original on 12 ಮೇ 2011. Retrieved 1 August 2006. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help); Unknown parameter |month= ignored (help)CS1 maint: multiple names: authors list (link)
  18. Marris, E. (2007). "Linnaeus at 300: The species and the specious". Nature. 446 (7133): 250–253. doi:10.1038/446250a..
  19. Schliebe, Scott; Evans, Thomas; Johnson, Kurt; Roy, Michael; Miller, Susanne; Hamilton, Charles; Meehan, Rosa; Jahrsdoerfer, Sonja (21 December 2006). Range-wide Status Review of the Polar Bear (Ursus maritimus) (PDF). Anchorage, Alaska: U.S. Fish and Wildlife Service. Archived from the original (PDF) on 10 ಮೇ 2009. Retrieved 31 October 2007. {{cite book}}: More than one of |archivedate= and |archive-date= specified (help); More than one of |archiveurl= and |archive-url= specified (help)
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ ೨೦.೭ Stirling, Ian (1988). "The First Polar Bears". Polar Bears. Ann Arbor: University of Michigan Press. ISBN 0-472-10100-5.
  21. Rice, Dale W. (1998). Marine Mammals of the World: Systematics and Distribution. Special Publications of the Society for Marine Mammals. Vol. 4. Lawrence, Kansas: The Society for Marine Mammalogy. ISBN 1-891276-03-4.
  22. ೨೨.೦ ೨೨.೧ ೨೨.೨ ೨೨.೩ ೨೨.೪ ೨೨.೫ ೨೨.೬ ೨೨.೭ Derocher, Andrew E.; Lunn, Nicholas J.; Stirling, Ian (April 2004). "Polar Bears in a Warming Climate". Integrative and Comparative Biology. Vol. 44, no. 2. pp. 163–176. doi:10.1093/icb/44.2.163. Retrieved 12 October 2007. {{cite news}}: More than one of |periodical= and |journal= specified (help)
  23. ೨೩.೦ ೨೩.೧ ೨೩.೨ ೨೩.೩ ಹಿಮಕರಡಿಗಳು ಮತ್ತು ಸಂರಕ್ಷಣೆ Archived 2010-02-10 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು "Polar Bear FAQ". Polar Bears International. Retrieved 14 July 2009.
  24. ೨೪.೦ ೨೪.೧ ೨೪.೨ ೨೪.೩ ೨೪.೪ Compiled and edited by Jon Aars, ed. (2005). Status of the Polar Bear (PDF). Polar Bears. Vol. 32. Nicholas J. Lunn and Andrew E. Derocher. Gland, Switzerland: IUCN. pp. 33–55. ISBN 2-8317-0959-8. Archived from the original (PDF) on 22 June 2007. Retrieved 15 September 2007. {{cite conference}}: |editor= has generic name (help); Unknown parameter |booktitle= ignored (help); Unknown parameter |conferenceurl= ignored (help); Unknown parameter |month= ignored (help) HTML ಉದ್ಧೃತಗಳನ್ನೂ ಸಹ ನೋಡಿ: ಇಸವಿ 2005ರಲ್ಲಿ ಹಿಮಕರಡಿಯ ಸಂಖ್ಯಾಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸುವ ಸಂಖ್ಯಾ ಸ್ಥಿತಿ ಪರಿಶೀಲನೆ ಮತ್ತು ಪಟ್ಟಿ 1 Archived 2009-04-22 ವೇಬ್ಯಾಕ್ ಮೆಷಿನ್ ನಲ್ಲಿ..
  25. Paetkau, S.; Amstrup, C.; Born, E. W.; Calvert, W. (October 1999). "Genetic structure of the world's polar bear populations" (PDF). Molecular Ecology. Vol. 8, no. 10. Blackwell Science. pp. 1571–1584. ISSN 1471-8278. Archived from the original (PDF) on 25 May 2005. Retrieved 17 November 2007.
  26. ೨೬.೦೦ ೨೬.೦೧ ೨೬.೦೨ ೨೬.೦೩ ೨೬.೦೪ ೨೬.೦೫ ೨೬.೦೬ ೨೬.೦೭ ೨೬.೦೮ ೨೬.೦೯ ೨೬.೧೦ Campbell, Colin (25 January 2008). "The war over the polar bear: Who's telling the truth about the fate of a Canadian icon?". Maclean's. Archived from the original on 16 ಮೇ 2012. Retrieved 9 March 2008. {{cite news}}: Unknown parameter |coauthors= ignored (|author= suggested) (help)
  27. Compiled and edited by Jon Aars, ed. (2005). Press Release (PDF). Polar Bears. Vol. 32. Nicholas J. Lunn and Andrew E. Derocher. Gland, Switzerland: IUCN. pp. 61–62. ISBN 2-8317-0959-8. Archived from the original (PDF) on 22 June 2007. Retrieved 19 April 2008. {{cite conference}}: |editor= has generic name (help); Unknown parameter |booktitle= ignored (help); Unknown parameter |conferenceurl= ignored (help); Unknown parameter |month= ignored (help)
  28. Stirling, Ian (1988). "Introduction". Polar Bears. Ann Arbor: University of Michigan Press. ISBN 0-472-10100-5.
  29. ೨೯.೦ ೨೯.೧ ೨೯.೨ ೨೯.೩ Stirling, Ian (1988). "Distribution and Abundance". Polar Bears. Ann Arbor: University of Michigan Press. ISBN 0-472-10100-5.
  30. Stirling, Ian (January 1997). "The importance of polynyas, ice edges, and leads to marine mammals and birds". Journal of Marine Systems. Vol. 10, no. 1–4. Elsevier. pp. 9–21. doi:10.1016/S0924-7963(96)00054-1. {{cite news}}: More than one of |periodical= and |journal= specified (help)
  31. ಮ್ಯಾಥ್ಯೂಸ್‌, ಪು. 15
  32. Davids, Richard C. (1982). "Lords of the Arctic". Lords of the Arctic: A Journey Among the Polar Bears. New York: MacMillan Publishing Co., Inc. ISBN 0-02-529630-2. {{cite book}}: Unknown parameter |coauthors= ignored (|author= suggested) (help)
  33. "Polar bear, (Ursus maritimus)" (PDF). U.S. Fish and Wildlife service. Archived from the original (PDF) on 5 June 2008. Retrieved 22 March 2008. Appearance. The polar bear is the largest member of the bear family, with the exception of Alaska's Kodiak brown bears, which equal polar bears in size. (ಸ್ಥೂಲ ಸಮೀಕ್ಷಾ ಪುಟ Archived 2009-04-18 ವೇಬ್ಯಾಕ್ ಮೆಷಿನ್ ನಲ್ಲಿ.)
  34. ೩೪.೦ ೩೪.೧ ಹೆಮ್‌ಸ್ಟಾಕ್‌, ಪು. 4
  35. Perrin, William F. (2008). Encyclopedia of Marine Mammals (2 ed.). San Diego, CA: Academic Press. p. 1009. {{cite book}}: Unknown parameter |coauthors= ignored (|author= suggested) (help)
  36. Wood, G.L. (1981). The Guinness Book of Animal Records. p. 240.
  37. ೩೭.೦ ೩೭.೧ ಲಾಕ್ವುಡ್‌, ಪಿಪಿ. 10 - 16
  38. "Are polar bears left-handed or right-handed?". September 2006. Retrieved 25 November 2007.
  39. "Bear Facts: Myths and Misconceptions". 2007. Archived from the original on 21 ಆಗಸ್ಟ್ 2008. Retrieved 25 November 2007. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  40. ಹಿಮಕರಡಿಗಳ ಕುರಿತು ಸಂಶೋಧನೆ ನಡೆಸುವವರು ಹಿಮಕರಡಿಗಳಲ್ಲಿ ವಾಮಹಸ್ತತ್ವದ ಯಾವುದೇ ಸಾಕ್ಷ್ಯವನ್ನು ಹೊರತೆಗೆಯುವಲ್ಲಿ ಸಫಲರಾಗಿಲ್ಲ. ಹಿಮಕರಡಿಯ ಮುಂಗಾಲು ಗಾಯಗಳ ಅಧ್ಯಯನ ಮಾಡಿದಾಗ, ಎಡ ಮುಂಗಾಲಿಗಿಂತಲೂ ಹೆಚ್ಚಾಗಿ, ಬಲ ಮುಂಗಾಲಿಗೆ ಗಾಯಗಳಾಗಿದ್ದದ್ದು ಕಂಡುಬಂದಿತ್ತು. ಹಿಮಕರಡಿಗಳು ಬಲಗೈ ಬಳಕೆಯ ಪ್ರಾಣಿಗಳೆಂದು ಬಹುಶಃ ಇದೇ ಸೂಚಿಸಬಹುದು. "Fractures of the Radius and Ulna secondary to possible Vitamin 'D' deficiency in Captive Polar Bears (Ursus maritimus)". Archived from the original on 26 ಫೆಬ್ರವರಿ 2010. Retrieved 25 November 2007. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  41. ೪೧.೦ ೪೧.೧ ೪೧.೨ ೪೧.೩ ೪೧.೪ Stirling, Ian (1988). Polar Bears. Ann Arbor: University of Michigan Press. ISBN 0-472-10100-5.
  42. Uspenskii, S. M. (1977). The Polar Bear. Moscow: Nauka.
  43. Koon, Daniel W. (1998). "Is Polar Bear Hair Fiber Optic?". Applied Optics. Vol. 37, no. 15. Optical Society of America. pp. 3198–3200. doi:10.1364/AO.37.003198. PMID 18273269. {{cite news}}: More than one of |periodical= and |journal= specified (help)
  44. ಅಸಾಮಾನ್ಯವಾಗಿ ಬೆಚ್ಚಗಿನ ಸ್ಥಿತಿಯಲ್ಲಿ, ಖಾಲಿಯಾದ ಕೊಳವೆಗಳು ಪಾಚಿಗಳಿಗೆ ಸೂರಾಗುತ್ತವೆ. ಕರಡಿಗಳಿಗೆ ಈ ಪಾಚಿಗಳು ಯಾವುದೇ ಹಾನಿಯೊಡ್ಡದಿದ್ದರೂ, ಕರಡಿಗಳನ್ನು ಸಾಕುವ ಪ್ರಾಣಿ ಸಂಗ್ರಹಾಲಯಗಳಿಗೆ ಇದು ತಳಮಳ ತಂದೊಡ್ಡಿದೆ. ಅವುಗಳ ತುಪ್ಪಳು ಬೆಳ್ಳನೆಯ ಹೊಳಪು ನೀಡಲು, ಹಿಮಕರಡಿಗಳನ್ನು ಲವಣದ ದ್ರವ ಅಥವಾ ನಯವಾದ ಪೆರಾಕ್ಸೈಡ್‌ ಬ್ಲೀಚ್‌ ರಾಸಾಯನಿಕವನ್ನು ಬಳಸಿ ಸ್ನಾನ ಮಾಡಿಸಲಾಗುತ್ತದೆ.
  45. Derocher, Andrew E. (2005). "Sexual dimorphism of polar bears" (PDF). Journal of Mammalogy. 86 (5): 895–901. doi:10.1644/1545-1542(2005)86[895:SDOPB]2.0.CO;2. Archived from the original (PDF) on 2006-03-01. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
  46. ೪೬.೦ ೪೬.೧ ರೋಸಿಂಗ್‌, ಪಿಪಿ. 20-23
  47. ೪೭.೦ ೪೭.೧ ೪೭.೨ ೪೭.೩ ೪೭.೪ ೪೭.೫ ೪೭.೬ ೪೭.೭ Stirling, Ian (1988). "Behavior". Polar Bears. Ann Arbor: University of Michigan Press. ISBN 0-472-10100-5.
  48. ೪೮.೦ ೪೮.೧ ೪೮.೨ ೪೮.೩ ೪೮.೪ ೪೮.೫ ೪೮.೬ ಮ್ಯಾಥ್ಯೂಸ್‌, ಪಿಪಿ. 73-88
  49. "Arctic Bears". PBS Nature. 17 February 2008. http://www.pbs.org/wnet/nature/arcticbears/index.html. 
  50. ೫೦.೦ ೫೦.೧ ೫೦.೨ ೫೦.೩ ೫೦.೪ ೫೦.೫ Amstrup, Steven C.; Marcot, Bruce G.; Douglas, David C. (2007). Forecasting the Range-wide Status of Polar Bears at Selected Times in the 21st Century (PDF). Reston, Virginia: U.S. Geological Survey. Archived from the original (PDF) on 25 ಅಕ್ಟೋಬರ್ 2007. Retrieved 29 September 2007.
  51. ೫೧.೦ ೫೧.೧ ಹೆಮ್‌ಸ್ಟಾಕ್‌, ಪಿಪಿ. 24-27
  52. ೫೨.೦ ೫೨.೧ ೫೨.೨ ೫೨.೩ Clarkson, Peter L.; Stirling, Ian (1994). "Polar Bears". In Hygnstrom, Scott E.; Timm, Robert M.; Larson, Gary E. (eds.). Prevention and Control of Wildlife Damage. Lincoln: University of Nebraska. pp. C–25 to C–34. Archived from the original (PDF) on 20 ನವೆಂಬರ್ 2007. Retrieved 13 November 2007.
  53. ೫೩.೦ ೫೩.೧ ೫೩.೨ ೫೩.೩ ಬ್ರೂಮರ್‌, ಪಿಪಿ. 25-33
  54. ೫೪.೦ ೫೪.೧ ೫೪.೨ ೫೪.೩ Stirling, Ian (1988). "What Makes a Polar Bear Tick?". Polar Bears. Ann Arbor: University of Michigan Press. ISBN 0-472-10100-5.
  55. Ramsay, M. A.; Hobson, K. A. (May 1991). "Polar bears make little use of terrestrial food webs: evidence from stable-carbon isotope analysis". Oecologia. Vol. 86, no. 4. Berlin / Heidelberg: Springer. pp. 598–600. doi:10.1007/BF00318328. {{cite news}}: More than one of |periodical= and |journal= specified (help)
  56. Best, R. C. (1985). "Digestibility of ringed seals by the polar bear". Canadian Journal of Zoology. Vol. 63, no. 5. Ottawa: National Research Council of Canada. pp. 1033–1036. doi:10.1139/z85-155.
  57. ೫೭.೦ ೫೭.೧ Manning, T. H. (March 1961). "Comments on "Carnivorous walrus and some Arctic zoonoses"" (PDF). Arctic. Vol. 14, no. 1. pp. 76–77. ISSN 0004-0843. Archived from the original (PDF) on 9 ಏಪ್ರಿಲ್ 2008. Retrieved 13 November 2007. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  58. Lunn, N. J.; Stirling, Ian (1985). "The significance of supplemental food to polar bears during the ice-free period of Hudson Bay". Canadian Journal of Zoology. Vol. 63, no. 10. Toronto: NRC Research Press. pp. 2291–2297. doi:10.1139/z85-340.
  59. Eliasson, Kelsey (2004). "Hudson Bay Post - Goodbye Churchil Dump". Archived from the original on 9 ಮೇ 2008. Retrieved 9 June 2008. {{cite web}}: Unknown parameter |month= ignored (help)
  60. ೬೦.೦ ೬೦.೧ ಮ್ಯಾಥ್ಯೂಸ್‌, ಪಿಪಿ. 27-29
  61. ೬೧.೦ ೬೧.೧ Stirling, Ian (1988). "Distribution and Abundance". Polar Bears. Ann Arbor: University of Michigan Press. ISBN 0-472-10100-5.
  62. ಮ್ಯಾಥ್ಯೂಸ್‌, ಪಿ. 95
  63. ಗ್ಯಾರಿ ಬ್ರೌನ್‌‌ರ ದಿ ಗ್ರೇಟ್‌ ಬೇರ್ ಅಲ್ಮನ್ಯಾಕ್‌ ನಲ್ಲಿ ಬೇರ್ ಬಿಹೇವಿಯರ್‌ ಅಂಡ್‌ ಆಕ್ಟಿವಿಟೀಸ್ ‌ ಲಯನ್ಸ್‌ & ಬರ್ಫರ್ಡ್‌, ಪಬ್ಲಿಷರ್ಸ್‌, 1993.
  64. ೬೪.೦ ೬೪.೧ ೬೪.೨ ರೋಸಿಂಗ್‌, ಪಿಪಿ. 128-132
  65. ವೈ ಡಿನ್ಟ್‌ ದಿ ವೈಲ್ಡ್‌ ಪೋಲರ್‌ ಬೇರ್‌ ಈಟ್‌ ದಿ ಹಸ್ಕಿ? Archived 2014-03-18 ವೇಬ್ಯಾಕ್ ಮೆಷಿನ್ ನಲ್ಲಿ. ದಿ ನ್ಯಾಷನಲ್‌ ಇಂಸ್ಟಿಟ್ಯೂಟ್‌ ಫಾರ್ ಪ್ಲೇ
  66. ೬೬.೦೦ ೬೬.೦೧ ೬೬.೦೨ ೬೬.೦೩ ೬೬.೦೪ ೬೬.೦೫ ೬೬.೦೬ ೬೬.೦೭ ೬೬.೦೮ ೬೬.೦೯ ೬೬.೧೦ ೬೬.೧೧ ೬೬.೧೨ ೬೬.೧೩ ೬೬.೧೪ Stirling, Ian (1988). "Reproduction". Polar Bears. Ann Arbor: University of Michigan Press. ISBN 0-472-10100-5.
  67. ೬೭.೦ ೬೭.೧ Carpenter, Tom (November/December 2005). "Who's Your Daddy?". Canadian Geographic. Ottawa: The Royal Canadian Geographic Society: 44–56. {{cite journal}}: Check date values in: |date= (help)
  68. ೬೮.೦ ೬೮.೧ ರೋಸಿಂಗ್‌, ಪಿಪಿ. 42-48
  69. ಲಾಕ್ವುಡ್‌, ಪಿಪಿ.17-21
  70. Bruce, D. S.; Darling, N. K.; Seeland, K. J.; Oeltgen, P. R.; Nilekani, S. P.; Amstrup, S. C. (March 1990). "Is the polar bear (Ursus maritimus) a hibernator?: Continued studies on opioids and hibernation". Pharmacology Biochemistry and Behavior. Vol. 35, no. 3. pp. 705–711. doi:10.1016/0091-3057(90)90311-5. {{cite news}}: More than one of |periodical= and |journal= specified (help)
  71. ಡೆರೊಷರ್‌, AE ಮತ್ತು ವೀಗ್‌, ಓಯಿ; ಇನ್ಫೆಂಟಿಸೈಡ್‌‌ ಅಂಡ್‌ ಕ್ಯಾನಿಬಲಿಸ್ಮ್‌ ಇನ್‌ ಜುವೆನೈಲ್‌ ಪೋಲರ್‌ ಬೇರ್ಸ್‌ (ಉರ್ಸಸ್‌ ಮೆರಿಟೈಮಸ್‌) ಇನ್‌ ಸ್ವಾಲ್ಬಾರ್ಡ್‌ Archived 2017-08-08 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಕ್ಟಿಕ್‌ [ಅರ್ಕ್ಟಿಕ್‌]. ಸಂಪುಟ. 52, ಸಂಖ್ಯೆ. 3, ಪಿಪಿ. 307-310. ಸೆಪ್ಟೆಂಬರ್‌ 1999
  72. ೭೨.೦ ೭೨.೧ ೭೨.೨ ೭೨.೩ ೭೨.೪ ೭೨.೫ "Polar bears in depth: Survival". Polar Bears International. Archived from the original on 8 ಡಿಸೆಂಬರ್ 2009. Retrieved 20 October 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  73. ೭೩.೦ ೭೩.೧ Regehr, Eric V.; Amstrup, Steven C.; Stirling, Ian (2006). Written at Anchorage, Alaska. Polar Bear Population Status in the Southern Beaufort Sea (PDF). Reston, Virginia: U.S. Geological Survey. Open-File Report 2006-1337. Retrieved 15 September 2007.
  74. ೭೪.೦ ೭೪.೧ Stirling, Ian; Lunn, N. J.; Iacozza, J. (September 1999). "Long-term Trends in the Population Ecology of Polar Bears in Western Hudson Bay in Relation to Climatic Change" (PDF). Arctic. Vol. 52, no. 3. pp. 294–306. ISSN 0004-0843. Archived from the original (PDF) on 28 ಸೆಪ್ಟೆಂಬರ್ 2019. Retrieved 11 November 2007. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  75. ಈ ಹಂತದ ನಂತರ ತಾಯ್ತನದ ಸಾಫಲ್ಯವು ಕಡಿಮೆಯಾಯಿತು, ಏಕೆಂದರೆ, ತನ್ನ ಮರಿಗಳನ್ನು ಸಾಕಲು ಅಗತ್ಯ ಕೊಬ್ಬು ಶೇಖರಿಸಲು ವಿಘ್ನವೊಡ್ಡುವ ವಯಸ್ಸಿಗೆ ಸಂಬಂಧಿತ ತೊಂದರೆ. Derocher, A.E. (1994). "Age-specific reproductive performance of female polar bears (Ursus maritimus)". Journal of Zoology. 234 (4): 527–536. doi:10.1111/j.1469-7998.1994.tb04863.x. Archived from the original on 3 ಜೂನ್ 2013. Retrieved 15 February 2008. {{cite journal}}: Unknown parameter |coauthors= ignored (|author= suggested) (help)
  76. Larsen, Thor; Kjos-Hanssen, Bjørn (October 1983). Goldman, Helle V. (ed.). "Trichinella sp. in polar bears from Svalbard, in relation to hide length and age". Polar Research. Vol. 1, no. 1. Oslo: Norwegian Polar Institute. pp. 89–96. doi:10.1111/j.1751-8369.1983.tb00734.x. {{cite news}}: More than one of |periodical= and |journal= specified (help)
  77. ಹೆಮ್‌ಸ್ಟಾಕ್‌, ಪಿಪಿ. 29-35
  78. ೭೮.೦ ೭೮.೧ Wrigley, Robert E. (Spring 2008). "The Oldest Living Polar Bear" (PDF). Polar Bears International Newsletter. Polar Bears International. Archived from the original (PDF) on 26 June 2008. Retrieved 9 June 2008.
  79. "adn.com | front : ಉತ್ತರ ಇಳಿಜಾರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿರುವ ಹಿಮಕರಡಿಗಳು, ಬೂದುಗರಡಿಗಳು". Archived from the original on 2008-04-01. Retrieved 2010-05-12.
  80. "ABC News: Grizzlies Encroaching on Polar Bear Country". Abcnews.go.com. Retrieved 10 October 2009.
  81. ಕೆನಡಾ ದೇಶದ ನಾರ್ತ್ವೆಸ್ಟ್‌ ಟೆರಿಟರೀಸ್‌ನ ನಾರ್ತ್ವೆಸ್ಟರ್ನ್‌ ಬ್ಯಾನ್ಕ್ಸ್‌ ಐಲೆಂಡ್‌ ಆಚೆ ಸೀ ಐಸ್‌ನಲ್ಲಿ ಹಿಮಕರಡಿ (ಉರ್ಸಸ್‌ ಮೆರಿಟೈಮಸ್‌) ಮರಿಯನ್ನು ಕೊಂದು ತಿನ್ನುತ್ತಿರುವ ತೋಳ (ಕ್ಯಾನಿಸ್‌ ಲೂಪಸ್‌) Archived 2017-08-08 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಕ್ಟಿಕ್‌ ಸಂಪುಟ. 59, ಸಂಚಿಕೆ. 3 (ಸೆಪ್ಟೆಂಬರ್‌ 2006) ಪಿ. 322– 324 Archived 2017-08-08 ವೇಬ್ಯಾಕ್ ಮೆಷಿನ್ ನಲ್ಲಿ.
  82. ೮೨.೦ ೮೨.೧ ೮೨.೨ ೮೨.೩ Stirling, Ian (1988). "The Original Polar Bear Watchers". Polar Bears. Ann Arbor: University of Michigan Press. ISBN 0-472-10100-5.
  83. ೮೩.೦ ೮೩.೧ ಲಾಕ್ವುಡ್‌, ಪಿಪಿ 6-9
  84. ೮೪.೦೦ ೮೪.೦೧ ೮೪.೦೨ ೮೪.೦೩ ೮೪.೦೪ ೮೪.೦೫ ೮೪.೦೬ ೮೪.೦೭ ೮೪.೦೮ ೮೪.೦೯ ೮೪.೧೦ Uspensky, Savva Mikhailovich (1977). Белый Медведь (tr: Belyi Medved') - (in Russian). Moscow: Nauka.
  85. ಮೀನು ತಿನ್ನುವ ಮಾಂಸಭಕ್ಷಕ ಪ್ರಾಣಿಗಳನ್ನು ತಿನ್ನುವ ಮಾಂಸಭಕ್ಷಕ ಪ್ರಾಣಿಯಾಗಿ, ಹಿಮಕರಡಿಯು ಅವುಗಳ ಪಿತ್ತಜನಕಾಂಗದಲ್ಲಿರುವ A ಜೀವಸತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತದೆ. ಇದರಿಂದ ಪರಿಣಮಿಸುವ ಹೆಚ್ಚಿನ ಸಾಂದ್ರತೆಗಳು A ಹೈಪರ್ವಿಟಾಮಿನೊಸಿಸ್‌ ಸಮಸ್ಯೆಗೆ ಕಾರಣವಾಗುತ್ತದೆ. Rodahl, K.; Moore, T. (July 1943). "The vitamin A content and toxicity of bear and seal liver". The Biochemical Journal. Vol. 37, no. 2. London: Portland Press. pp. 166–168. ISSN 0264-6021. Retrieved 11 November 2007.
  86. ೮೬.೦ ೮೬.೧ ಲಾಕ್ವುಡ್‌, ಪಿಪಿ. 31-36
  87. "Polar Bear Management". Government of the Northwest Territories. Archived from the original on 4 ಮೇ 2008. Retrieved 14 March 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  88. ೮೮.೦ ೮೮.೧ ಬ್ರೂಮರ್‌, ಪಿಪಿ. 93-111
  89. Proceedings of the 2nd Working Meeting of Polar Bear Specialists. Polar Bears. Morges, Switzerland: IUCN. 1970. Archived from the original on 4 ಮೇ 2008. Retrieved 24 October 2007. {{cite conference}}: Unknown parameter |conferenceurl= ignored (help); Unknown parameter |month= ignored (help)
  90. ನಾರ್ವೇ ದೇಶವು 1965ರಿಂದ 1973ರ ತನಕ ಹಂತ-ಹಂತವಾಗಿ ಹೆಚ್ಚು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೊಳಿಸಿ, ಅಂದಿನಿಂದ ಬೇಟೆಯಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಸವಿ 1956ರಲ್ಲಿ ಸೋವಿಯತ್‌ ಒಕ್ಕೂಟವು ಎಲ್ಲಾ ರೀತಿಯ ಬೇಟೆಯಾಡುವುದನ್ನು ನಿಷೇಧಿಸಿತು. ಇಸವಿ 1968ರಲ್ಲಿ ಕೆನಡಾ ಬೇಟೆಯಾಡುವ ಕೋಟಾಗಳನ್ನು ಜಾರಿಗೊಳಿಸಲಾರಂಭಿಸಿತು. U.S. 1971ರಲ್ಲಿ ನಿಯಂತ್ರಣಗಳನ್ನು ಜಾರಿಗೊಳಿಸಲಾರಂಭಿಸಿ, ಮೆರೈನ್‌ ಮ್ಯಾಮಲ್‌ ಪ್ರೊಟೆಕ್ಷನ್‌ ಆಕ್ಟ್‌ ಕಾಯಿದೆಯನ್ನು 1972ರಲ್ಲಿ ಜಾರಿಗೊಳಿಸಿತು.
  91. ಸ್ಟರ್ಲಿಂಗ್‌, ಇಯಾನ್‌ ಫೋರ್ವರ್ಡ್‌ ಇನ್‌ Rosing, Norbert (1996). The World of the Polar Bear. Willowdale, ON: Firefly Books Ltd. ISBN 1-55209-068-X.
  92. ಇಂಟರ್ನ್ಯಾಷನಲ್‌ ಆಗ್ರೀಮೆಂಟ್‌ ಆನ್‌ ದಿ ಕನ್ಸರ್ವೇಷನ್ ಆಫ್‌ ಪೋಲರ್‌ ಬೇರ್ಸ್‌ Archived 2003-04-09 ವೇಬ್ಯಾಕ್ ಮೆಷಿನ್ ನಲ್ಲಿ., 15 ನವೆಂಬರ್‌ 1973, ಒಸ್ಲೊ.
  93. "U.S. and Russia Sign Pact To Protect the Polar Bear". New York Times. 17 October 2000. Retrieved 12 April 2008.
  94. "US-Russia Polar Bear Treaty Ratified". ScienceDaily. 18 October 2007. Retrieved 12 April 2008.
  95. ೯೫.೦ ೯೫.೧ Steven Lee Myers (16 April 2007). "Russia Tries to Save Polar Bears With Legal Hunt". New York Times. Retrieved 12 April 2008.
  96. "ದಿ ಹ್ಯೂಮೇನ್‌ ಸೊಸೈಟಿ ಆಫ್‌ ದಿ ಯುನೈಟೆಡ್‌ ಸ್ಟೇಟ್ಸ್‌ 'ಹಿಟ್ಟಿಂಗ್‌ ಪೋಲರ್‌ ಬೇರ್ಸ್‌ ವೆನ್‌ ದೇ ಆರ್‌ ಡೌನ್‌'". Archived from the original on 2009-02-15. Retrieved 2010-05-12. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  97. ೯೭.೦ ೯೭.೧ Lunn, N. J. (2005). Compiled and edited by Jon Aars (ed.). Polar Bear Management in Canada 2001-2004 (PDF). Polar Bears. Vol. 32. Nicholas J. Lunn and Andrew E. Derocher. Gland, Switzerland: IUCN. pp. 101–116. ISBN 2-8317-0959-8. Archived from the original (PDF) on 22 June 2007. Retrieved 15 September 2007. {{cite conference}}: |editor= has generic name (help); Unknown parameter |booktitle= ignored (help); Unknown parameter |coauthors= ignored (|author= suggested) (help); Unknown parameter |conferenceurl= ignored (help); Unknown parameter |month= ignored (help)
  98. Freeman, M.M.R.; Wenzel, G.W. (March 2006). "The nature and significance of polar bear conservation hunting in the Canadian Arctic". Arctic. Vol. 59, no. 1. pp. 21–30. ISSN 0004-0843.
  99. ೯೯.೦ ೯೯.೧ Wenzel, George W. (September 2004). "3rd NRF Open Meeting" (PDF). Yellowknife. Archived from the original (PDF) on 9 ಏಪ್ರಿಲ್ 2008. Retrieved 3 December 2007. {{cite web}}: |contribution= ignored (help)
  100. "Nunavut hunters can kill more polar bears this year". CBC News. 10 January 2005. Retrieved 15 September 2007.
  101. "Bear Facts: Harvesting/Hunting". Polar Bears International. Archived from the original on 27 ಮಾರ್ಚ್ 2008. Retrieved 14 March 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  102. "ದಿ ಹ್ಯೂಮೇನ್‌ ಸೊಸೈಟಿ ಆಪ್‌ ದಿ ಯುನೈಟೆಡ್‌ ಸ್ಟೇಟ್ಸ್‌ 'ಸಪೋರ್ಟ್‌ ದಿ ಪೋಲರ್‌ ಬೇರ್‌ ಪ್ರೊಟೆಕ್ಷನ್‌ ಆಕ್ಟ್‌'". Archived from the original on 2008-11-29. Retrieved 2010-05-12. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  103. CBC ನ್ಯೂಸ್‌, 4 ಜುಲೈ 2005, "ರೀಥಿಂಕ್‌ ಪೋಲರ್‌ ಬೇರ್‌ ಹಂಟ್‌ ಕೋಟಾಸ್‌, ಸೈಯಂಟಿಸ್ಟ್ಸ್‌ ಟೆಲ್‌ ನುನಾವುಟ್ ಹಂಟರ್ಸ್‌"
  104. ೧೦೪.೦ ೧೦೪.೧ ೧೦೪.೨ ೧೦೪.೩ ೧೦೪.೪ Stirling, Ian; Derocher, Andrew E. (Fall 2007). "Melting Under Pressure: The Real Scoop on Climate Warming and Polar Bears" (PDF). The Wildlife Professional. Vol. 1, no. 3. Lawrence, Kansas: The Wildlife Society. pp. 24–27, 43. Archived from the original (PDF) on 9 April 2008. Retrieved 17 November 2007.
  105. ೧೦೫.೦ ೧೦೫.೧ Taylor, Mitchell K. (6 April 2006). "Review of CBD Petition" (PDF). Letter to the U.S. Fish and Wildlife Service. Archived from the original (PDF) on 25 September 2007. Retrieved 8 September 2007. {{cite journal}}: Cite journal requires |journal= (help)
  106. ೧೦೬.೦ ೧೦೬.೧ George, Jane (April 2010). "Nunavut hunters still enraged over bear quotas". Iqaluit. Archived from the original on 11 ಏಪ್ರಿಲ್ 2010. Retrieved 4 April 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  107. "Release of the 2006 IUCN Red List of Threatened Species reveals ongoing decline of the status of plants and animals". World Conservation Union. Archived from the original on 12 ಮೇ 2006. Retrieved 1 February 2006. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  108. WWF: ಎ ಲೀಡರ್‌ ಇನ್‌ ಪೋಲರ್‌ ಬೇರ್‌ ಕನ್ಸರ್ವೇಷನ್‌. ದಿನಾಂಕ 29 ಜೂನ್‌ 2009ರಂದು WFFನಿಂದ ಪುನರ್ಪಡೆದದ್ದು - ಹಿಮಕರಡಿ ಜಾಲತಾಣ: http://www.worldwildlife.org/species/finder/polarbear/polarbear.html#
  109. ೧೦೯.೦ ೧೦೯.೧ ೧೦೯.೨ Stirling, Ian (2006). "Possible Effects of Climate Warming on Selected Populations of Polar Bears (Ursus maritimus) in the Canadian Arctic" (PDF). Arctic. 59 (3): 261–275. ISSN 0004-0843. Archived from the original (PDF) on 25 September 2007. Retrieved 15 September 2007. {{cite journal}}: Cite has empty unknown parameters: |laysource=, |laydate=, and |laysummary= (help); Unknown parameter |coauthors= ignored (|author= suggested) (help); Unknown parameter |month= ignored (help)
  110. Stirling, Ian (2004). "Polar Bear Distribution and Abundance on the Southwestern Hudson Bay Coast During Open Water Season, in Relation to Population Trends and Annual Ice Patterns" (PDF). Arctic. 57 (1): 15–26. ISSN 0004-0843. Archived from the original (PDF) on 25 September 2007. Retrieved 15 September 2007. {{cite journal}}: Cite has empty unknown parameters: |laysource=, |laydate=, and |laysummary= (help); Unknown parameter |coauthors= ignored (|author= suggested) (help); Unknown parameter |month= ignored (help)
  111. Barber, D.G. (2004). "Historical analysis of sea ice conditions in M'Clintock Channel and the Gulf of Boothia, Nunavut: implications for ringed seal and polar bear habitat" (PDF). Arctic. 57 (1): 1–14. ISSN 0004-0843. {{cite journal}}: Cite has empty unknown parameters: |laysource=, |laysummary=, and |laydate= (help); Unknown parameter |coauthors= ignored (|author= suggested) (help); Unknown parameter |month= ignored (help)
  112. ಟಿ. ಅಪೆನ್ಜೆಲರ್‌ ಮತ್ತು ಡಿ. ಆರ್‌. ಡಿಮಿಕ್‌, "ದಿ ಹೀಟ್‌ ಈಸ್‌ ಆನ್‌," ನ್ಯಾಷನಲ್‌ ಜಿಯೊಗ್ರಾಫಿಕ್‌ 206 (2004): 2-75. ಉಲ್ಲೇಖಿತ Flannery, Tim (2005). The Weather Makers. Toronto, Ontario: HarperCollins. pp. 101–103. ISBN 0-00-200751-7.
  113. ೧೧೩.೦ ೧೧೩.೧ ೧೧೩.೨ Arctic Climate Impact Assessment (2004). Impact of a Warming Arctic: Arctic Impact Climate Assessment. Cambridge: Cambridge University Press. ISBN 0 521 61778 2. OCLC 56942125.. ಕೀ ಫೈಂಡಿಂಗ್‌ 4 ಎಂಬುದು ಸಂಬಂಧಿತ ಪತ್ರ.
  114. ೧೧೪.೦ ೧೧೪.೧ Monnett, Charles; Gleason, Jeffrey S. (July 2006). "Observations of mortality associated with extended open-water swimming by polar bears in the Alaskan Beaufort Sea". Polar Biology. Vol. 29, no. 8. Berlin: Springer. pp. 681–687. doi:10.1007/s00300-005-0105-2. {{cite news}}: More than one of |periodical= and |journal= specified (help)
  115. ನುನಾವುಟ್‌ ಸರ್ಕಾರಕ್ಕಾಗಿ ಮಾಜಿ ಹಿಮಕರಡಿ ಸಂಶೋಧಕ ಮಿಟ್ಚೆಲ್‌ ಟೇಲರ್‌, ನೈಸರ್ಗಿಕ ಕ್ರಿಯೆಯಂದ ಆರ್ಕ್ಟಿಕ್‌ ತಾಪಮಾನ ಏರಿಕೆಯುಂಟಾಗುತ್ತಿದೆ, ಇದು ಹಿಮಕರಡಿಗೆ ಯಾವುದೇ ಅಪಾಯವನ್ನು ಒಡ್ಡುವುದಿಲ್ಲ ಎಂದು ನಂಬಿದ್ದಾರೆ. ನಿವೃತ್ತಿಯ ನಂತರ ಅವರನ್ನು ಇಂಟರ್ನ್ಯಾಷನಲ್‌ ಪೋಲರ್‌ ಬೇರ್‌ ಸ್ಪೆಷಲಿಸ್ಟ್‌ ಗ್ರೂಪ್‌ಗೆ ಪುನಃ ಸೇರಿಸಿಕೊಳ್ಳಲಿಲ್ಲ. ಜಾಗತಿಕ ತಾಪಮಾನ ಕುರಿತು ಅವರ ಅಭಿಪ್ರಾಯಗಳ ಕಾರಣ ಅವರನ್ನು ಈ ಸಂಘಟನೆಯಿಂದ ಹೊರಗಿಡಲಾಯಿತು ಎಂಬ ಮಾತುಗಳು ಕೇಳಿಬಂದವು. PBSG ಅಧ್ಯಕ್ಷರ ಪ್ರಕಾರ, ಹಿಮಕರಡಿ ಕುರಿತು ಸಂಶೋಧನೆಯಲ್ಲಿ ಸಕ್ರಿಯರಾಗಿರುವವರಿಗೆ PBSGಯಲ್ಲಿ ನೇಮಕಾತಿ ಮಾಡಲಾಗುತ್ತದೆ. ನಿವೃತ್ತರಾದ ಮಿಟ್ಚೆಲ್ ಟೇಲರ್‌ ಅರ್ಹರಾಗಿರಲಿಲ್ಲ. (ಉಲ್ಲೇಖಗಳು: Booker, Christopher (27 June 2009.). "Polar bear expert barred by global warmists". The Daily Telegraph. Retrieved 12 August 2009. {{cite news}}: Check date values in: |date= (help)
  116. Regehr, E. V.; Lunn, N. J.; Amstrup, N. C.; Stirling, I. (November 2007). "Effects of earlier sea ice breakup on survival and population size of polar bears in western Hudson Bay". Journal of Wildlife Management. Vol. 71, no. 8. Bethesda: The Wildlife Society. pp. 2673–2683. doi:10.2193/2006-180. {{cite news}}: More than one of |periodical= and |journal= specified (help)
  117. ತಾಯ್ತನದ ಗುಹೆಗಳ ಪ್ರಮಾಣವು 1985-1994 ಅವಧಿಯಲ್ಲಿ 62% ಇದ್ದದ್ದು, 1998-2004 ಅವಧಿಯಲ್ಲಿ 37%ಕ್ಕೆ ಇಳಿದಿತ್ತು. ಅಲಾಸ್ಕಾದಲ್ಲಿ ಸಂಖ್ಯೆಯು ಈಗ ಬಹುಶಃ ವಿಶ್ವ ಜನಸಂಖ್ಯೆಯನ್ನು ಹೋಲುತ್ತದೆ. ಇದರಲ್ಲಿ ಅದು ನೆಲದಲ್ಲಿಯೇ ಗುಹೆ ಮಾಡಿಕೊಳ್ಳುವ ಸಾಧ್ಯತೆಯಿದೆ. Fischbach, A. S.; Amstrup, S. C.; Douglas, D. C. (October 2007). "Landward and eastward shift of Alaskan polar bear denning associated with recent sea ice changes". Polar Biology. Vol. 30, no. 11. Berlin: Springer. pp. 1395–1405. doi:10.1007/s00300-007-0300-4. {{cite news}}: More than one of |periodical= and |journal= specified (help)
  118. "Polar Bears at the Top of POPs". The Science and the Environment Bulletin. Environment Canada. May/June 2000. Retrieved 20 October 2008. {{cite web}}: Check date values in: |date= (help)
  119. Skaare, Janneche Utne; Larsen, Hans Jørgen; Lie, Elisabeth; Bernhoft, Aksel; Derocher, AE; Norstrom, R; Ropstad, E; Lunn, NF; Wiig, O (December 2002). "Ecological risk assessment of persistent organic pollutants in the arctic" (PDF). Toxicology. Vol. 181–182. Shannon, Ireland: Elsevier Science. pp. 193–197. doi:10.1016/S0300-483X(02)00280-9. PMID 12505309. Archived from the original (PDF) on 5 November 2003. Retrieved 17 November 2007. {{cite news}}: More than one of |periodical= and |journal= specified (help)
  120. Verreault, Jonathan; Muir, Derek C.G.; Norstrom, Ross J.; Stirling, Ian; Fisk, AT; Gabrielsen, GW; Derocher, AE; Evans, TJ; Dietz, R (December 2005). "Chlorinated hydrocarbon contaminants and metabolites in polar bears (Ursus maritimus) from Alaska, Canada, East Greenland, and Svalbard: 1996-2002" (PDF). Science of The Total Environment. Vol. 351–352. Shannon, Ireland: Elsevier. pp. 369–390. doi:10.1016/j.scitotenv.2004.10.031. PMID 16115663. Archived from the original (PDF) on 1 March 2006. Retrieved 17 November 2007. {{cite news}}: More than one of |periodical= and |journal= specified (help)
  121. "Marine Mammals Management: Polar Bear". U.S. Fish and Wildlife Service, Alaska. Archived from the original on 15 ಮೇ 2008. Retrieved 9 June 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  122. ೧೨೨.೦ ೧೨೨.೧ "WWF - Polar bear status, distribution & population". World Wildlife Foundation. Retrieved 2010-03-22.
  123. Krauss, Clifford. "Bear Hunting Caught in Global Warming Debate". New York Times. Retrieved 11 March 2008.
  124. ೧೨೪.೦ ೧೨೪.೧ ೧೨೪.೨ Derocher, Andrew. "Ask the Experts: Are Polar Bear Populations Increasing?". Polar Bears International. Archived from the original on 29 ಫೆಬ್ರವರಿ 2008. Retrieved 9 March 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  125. ಬ್ರೂಮರ್‌, ಪಿ. 101. ದಿನಾಂಕ 6 ಸೆಪ್ಟೆಂಬರ್‌ 1965ರಂದುಮ ಐದು ಪರಿಧ್ರುವ ರಾಷ್ಟ್ರಗಳ ಸಭೆಯಲ್ಲಿ, ವಿಶ್ವಾದ್ಯಂತ ಹಿಮಕರಡಿಗಳ ಸಂಖ್ಯೆ 5,000ದಿಂದ 19,000ದ ವರೆಗಿತ್ತು. "ನಿಜವೇನೆಂದರೆ, ಯಾರಿಗೂ ತಿಳಿದಿರಲಿಲ್ಲ... ವೈಜ್ಞಾನಿಕ ಸಂಶೋಧನೆಯು ಹೆಚ್ಚು ಮಾಹಿತಿ ಹೊಂದಿರಲಿಲ್ಲ, ಹಿಮಕರಡಿಯ ಕುರಿತು ಜ್ಞಾನವು ಕೇವಲ ಪರಿಶೋಧಕರು ಮತ್ತು ಬೇಟೆಯಾಡುವವರ ವೃತ್ತಾಂತಗಳು ಮತ್ತು ಕಥೆಗಳನ್ನು ಅವಲಂಬಿಸಿದ್ದವು."
  126. "Nunavut MLAs condemn U.S. proposal to make polar bears threatened species". CBC News. 4 June 2007. Archived from the original on 3 July 2007. Retrieved 15 September 2007.
  127. "Inuit reject U.S. Polar Bear Proposal". CBC News. 21 June 2007. Archived from the original on 3 July 2007. Retrieved 15 September 2007.
  128. ನಾರ್ದರ್ನ್‌ ರಿಸರ್ಚ್‌ ಫೋರಮ್‌. ಪೋಲಾರ್‌ ಬೇರ್‌ ಆಸ್ ಎ ರಿಸೋರ್ಸ್‌ Archived 2008-04-09 ವೇಬ್ಯಾಕ್ ಮೆಷಿನ್ ನಲ್ಲಿ.. ಕೆನಡಾ ದೇಶದ ಯೆಲ್ಲೊನೈಫ್‌ ಮತ್ತು ರೇ ಎಡ್ಜೋದಲ್ಲಿ ನಡೆದ ಮೂರನೆಯ NRF ಓಪನ್‌ ಮೀಟಿಂಗ್‌ಗಾಗಿ ಪ್ರಸ್ತುತಪಡಿಸಲಾದ ಪತ್ರ. 15–18 ಸೆಪ್ಟೆಂಬರ್‌ 2004
  129. ೧೨೯.೦ ೧೨೯.೧ ೧೨೯.೨ Hassett, Kevin A (23 May 2008). "Bush's polar bear legal disaster". National Post. Retrieved 7 June 2008.
  130. ಅಂತರ್ದೇಶೀಯ ಕಾರ್ಯದರ್ಶಿ ಡಿರ್ಕ್‌ ಕೆಂಪ್ಥೋರ್ನ್‌ರಿಂದ ಉದ್ಧರಣ, Hassett, Kevin A (23 May 2008). "Bush's polar bear legal disaster". National Post. Retrieved 7 June 2008. ರಲ್ಲಿ
  131. U.S. ಟು ಕೀಪ್‌ ಬುಷ್‌ ಅಡ್ಮಿನಿಸ್ಟ್ರೇಷನ್‌ ರೂಲ್‌ ಆನ್‌ ಪೋಲರ್‌ ಬೇರ್ಸ್‌ Archived 2009-05-11 ವೇಬ್ಯಾಕ್ ಮೆಷಿನ್ ನಲ್ಲಿ., ಮೆಕ್ಲ್ಯಾಚಿ ನ್ಯೂಸ್ಪೇಪರ್ಸ್‌, 8 ಮೇ 2009
  132. ೧೩೨.೦ ೧೩೨.೧ ೧೩೨.೨ Barringer, Felicity (15 May 2008). "Polar Bear Is Made a Protected Species". New York Times. Retrieved 7 June 2008.
  133. ೧೩೩.೦ ೧೩೩.೧ ಟೆಂಪ್ಲೇಟು:Cite ews
  134. ೧೩೪.೦ ೧೩೪.೧ ೧೩೪.೨ ೧೩೪.೩ ೧೩೪.೪ Hebert, H. Josef (8 March 2008). "Delay in polar bear policy stirs probe". San Francisco Chronicle. Retrieved 9 March 2008.
  135. Editorial (15 January 2008). "Regulatory Games and the Polar Bear". New York Times. Retrieved 20 October 2008.
  136. Biello, David (30 April 2008). "Court Orders U.S. to Stop Keeping Polar Bear Status on Ice". Scientific American News. Retrieved 8 June 2008.
  137. Brach, Bal (25 April 2008). "Experts seek more protection for polar bears". Canwest News Service. Archived from the original on 6 ನವೆಂಬರ್ 2009. Retrieved 9 May 2008.
  138. ಬಾಲಿಸನ್ಸೆಟ್‌, (2008, 8 22). ದಿ ಬೇರ್‌ ಇನ್‌ ಮಿತ್‌, ಮಿತಾಲಜಿ ಅಂಡ್‌ ಫೊಲ್ಕ್‌ಲೋರ್‌. ಸೊಸೈಬರ್ಟಿ > ಫೊಲ್ಕ್‌ಲೋರ್‌ ಜಾಲತಾಣದಿಂದ 29 ಜೂನ್‌ 2009ರಂದು ಪುನರ್ಪಡೆದದ್ದು: http://www.socyberty.com/Folklore/The-Bear-in-Myth-Mythology-and-Folklore.222065/1
  139. Kochnev AA, Etylin VM, Kavry VI, Siv-Siv EB, Tanko IV (December 17–19, 2002). "Ritual Rites and Customs of the Natives of Chukotka connected with the Polar Bear". Preliminary report submitted for the meeting of the Alaska Nanuuq Commission (Nome, Alaska, USA): 1–3. {{cite journal}}: Cite journal requires |journal= (help)CS1 maint: multiple names: authors list (link)
  140. "Bundaberg Rum website - history section". Bundaberg Rum website. Archived from the original on 16 ಮೇ 2008. Retrieved 26 March 2008. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  141. Dabcovich, Lydia (1997). The Polar Bear Son: An Inuit Tale. New York: Clarion Books. ISBN 0-395-72766-9.


ಬಾಹ್ಯ ಕೊಂಡಿಗಳು

[ಬದಲಾಯಿಸಿ]