ವಿಷಯಕ್ಕೆ ಹೋಗು

ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಂತ್ರವು ಒಂದು ಉದ್ದೇಶಿತ ಕಾರ್ಯವನ್ನು ನೆರವೇರಿಸುವ ಸಲುವಾಗಿ ಬಲಗಳನ್ನು ಅನ್ವಯಿಸಲು ಮತ್ತು ಚಲನೆಯನ್ನು ನಿಯಂತ್ರಿಸಲು ಶಕ್ತಿಯನ್ನು ಬಳಸುವ ಸ್ವಯಂಚಾಲಿತ ರಚನೆಯಾಗಿದೆ. ಯಂತ್ರಗಳನ್ನು ಪ್ರಾಣಿಗಳು ಅಥವಾ ಜನರು ಚಾಲನೆ ಮಾಡಬಹುದು, ಅಥವಾ ಅವು ಗಾಳಿ ಹಾಗೂ ನೀರಿನಂತಹ ನೈಸರ್ಗಿಕ ಶಕ್ತಿಗಳಿಂದ, ಮತ್ತು ರಾಸಾಯನಿಕ, ಉಷ್ಣ ಅಥವಾ ವಿದ್ಯುತ್ ಶಕ್ತಿಯಿಂದ ಚಾಲಿತವಾಗಿರಬಹುದು. ಇವು ಪ್ರದಾನ ಬಲಗಳು ಹಾಗೂ ಚಲನೆಯ ಒಂದು ನಿರ್ದಿಷ್ಟ ಅನ್ವಯವನ್ನು ಸಾಧಿಸಲು ಚಾಲಕ ಆದಾನಕ್ಕೆ ರೂಪಕೊಡುವ ಕಾರ್ಯವಿಧಾನಗಳ ಒಂದು ವ್ಯವಸ್ಥೆಯನ್ನು ಒಳಗೊಂಡಿರುತ್ತವೆ. ಇವು ಕಾರ್ಯನಿರ್ವಹಣೆಯನ್ನು ಗಮನಿಸುವ ಕಂಪ್ಯೂಟರ್‍ಗಳು ಮತ್ತು ಸಂವೇದಕಗಳನ್ನು ಕೂಡ ಒಳಗೊಳ್ಳಬಹುದು. ಇವನ್ನು ಹಲವುವೇಳೆ ಯಾಂತ್ರಿಕ ವ್ಯವಸ್ಥೆಗಳು ಎಂದು ಕರೆಯಲಾಗುತ್ತದೆ.

ನವೋದಯದ ನೈಸರ್ಗಿಕ ತತ್ತ್ವಶಾಸ್ತ್ರಜ್ಞರು ಶಕ್ತಿಯನ್ನು ಚಲನೆಯಾಗಿ ಪರಿವರ್ತಿಸುವ ಪ್ರಾಥಮಿಕ ಸಾಧನಗಳಾದ ಆರು ಸರಳ ಯಂತ್ರಗಳನ್ನು ಗುರುತಿಸಿದರು. ಇವರು ಪ್ರದಾನ್ ಶಕ್ತಿ ಮತ್ತು ಆದಾನ ಶಕ್ತಿಯ ಅನುಪಾತವನ್ನು ಲೆಕ್ಕ ಹಾಕಿದರು. ಇಂದು ಇದು ಯಾಂತ್ರಿಕ ಸೌಕರ್ಯವೆಂದು ಪರಿಚಿತವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Usher, Abbott Payson (1988). A History of Mechanical Inventions. USA: Courier Dover Publications. p. 98. ISBN 978-0-486-25593-4. Archived from the original on 2016-08-18.