ಮಸಾಲೆ
ಗೋಚರ
ಮಸಾಲೆಗಳು ಮಿಶ್ರಣಮಾಡಿದ ಸಂಬಾರ ಪದಾರ್ಥಗಳು ಅಥವಾ ಮೂಲಿಕೆಗಳು. ಅನೇಕ ವಿಭಿನ್ನ ಪಾಕಗಳಲ್ಲಿ ಮೂಲಿಕೆಗಳು ಅಥವಾ ಸಂಬಾರ ಪದಾರ್ಥಗಳ ನಿರ್ದಿಷ್ಟ ಸಂಯೋಜನೆಯು ಬೇಕಾದಾಗ, ಈ ಪದಾರ್ಥಗಳನ್ನು ಮೊದಲೇ ಮಿಶ್ರಣ ಮಾಡಿಟ್ಟುಕೊಂಡಿರುವುದು ಅನುಕೂಲಕರವಾಗಿರುತ್ತದೆ. ಉದಾಹರಣೆಗೆ ಖಾರದ ಪುಡಿ, ಕರಿ ಪೌಡರ್ ಇತ್ಯಾದಿ.
ಮಸಾಲೆ ಪದವು ಭಾರತೀಯ ಉಪಖಂಡದಲ್ಲಿ ಮೂಲ ಹೊಂದಿದೆ. ಇದರಲ್ಲಿ ಸಂಬಾರ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಲಾಗಿರುತ್ತದೆ.[೧] ಮಸಾಲೆಯು ಒಣ (ಸಾಮಾನ್ಯವಾಗಿ ಒಣವಾಗಿ ಹುರಿದಿರುವ) ಸಂಬಾರ ಪದಾರ್ಥಗಳ ಸಂಯೋಜನೆಯಾಗಿರಬಹುದು ಅಥವಾ ಸಂಬಾರ ಪದಾರ್ಥಗಳು ಹಾಗೂ ಇತರ ಪದಾರ್ಥಗಳಿಂದ (ಹಲವುವೇಳೆ ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಟೊಮೇಟೊ) ತಯಾರಿಸಿದ ಪೇಸ್ಟ್ ಆಗಿರಬಹುದು. ಭಾರತೀಯ ಪಾಕಶೈಲಿಯಲ್ಲಿ ಆಹಾರಗಳಿಗೆ ರುಚಿ ಹಾಗೂ ಸುವಾಸನೆಗಳನ್ನು ನೀಡಲು ಮಸಾಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "masala | Definition of masala in English by Oxford Dictionaries". Oxford Dictionaries | English. Archived from the original on 2018-05-01. Retrieved 2018-04-30.
- ↑ V.K. Modi; G.S. Sidde Gowda; P.Z. Sakhare; N.S. Mahendrakar; D. Narasimha Rao (2006). "Pre-processed spice mix formulation and changes in its quality during storage". LWT - Food Science and Technology. 39 (6): 613. doi:10.1016/j.lwt.2005.05.004. Archived from the original on 8 September 2012. Retrieved 25 March 2011.
{{cite journal}}
: Unknown parameter|lastauthoramp=
ignored (help)