ವಿಷಯಕ್ಕೆ ಹೋಗು

ಬಕೆಟ್‌ಹೆಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈತನನ್ನು ನೃತ್ಯ ಸಂಗೀತಗಾರ ಕೆನ್ನಿ "ಡೋಪ್" ಗಾನ್ಜಲೆಜ್, ಅಲಿಯಾಸ್ "ಬಕೆಟ್‌ಹೆಡ್ಸ್" ಆಗಿ ತಪ್ಪಾಗಿ ತಿಳಿಯಬಾರದು.
Buckethead
ಚಿತ್ರ:Bucketheadsummercamp.jpeg
Buckethead
ಹಿನ್ನೆಲೆ ಮಾಹಿತಿ
ಜನ್ಮನಾಮBrian Patrick Carroll
ಅಡ್ಡಹೆಸರುDeath Cube K
Big B
The Boy
Bucky
Bucket
Mr. Buckethead
ಸಂಗೀತ ಶೈಲಿAvant-garde, noise rock, funk, thrash metal, bluegrass, instrumental rock, hard rock, progressive metal, heavy metal, progressive rock, experimental rock, funk metal, ambient, dark ambient, alternative metal, electronica, country rock, folk rock
ವೃತ್ತಿMusician, songwriter , painter
ವಾದ್ಯಗಳುGuitar, bass, mandolin, banjo, drums, keyboards, organ
ಸಕ್ರಿಯ ವರ್ಷಗಳು1988 - present
L‍abelsTDRS Music, Serjical Strike
Associated actsColonel Claypool's Bucket of Bernie Brains, Guns N' Roses, Praxis, Serj Tankian, Deli Creeps, Science Faxtion, Cornbugs, El Stew, Arcana, Thanatopsis, Primus
ಅಧೀಕೃತ ಜಾಲತಾಣwww.bucketheadland.com
Notable instruments
Gibson Les Paul (Buckethead Signature)
Jackson Y2KV

ಬ್ರಿಯಾನ್ ಕ್ಯಾರಲ್‌ (1969ರ ಮೇ 13ರಂದು ಜನಿಸಿದನು) ಹಲವು ಪ್ರಕಾರದ ಸಂಗೀತವನ್ನು ನುಡಿಸುವ ಗಿಟಾರ್-ವಾದಕನಾಗಿದ್ದಾನೆ, ಈತನು ಬಕೆಟ್‌ಹೆಡ್‌ ಎಂಬ ರಂಗನಾಮದಿಂದ ಹೆಸರುವಾಸಿಯಾಗಿದ್ದಾನೆ. ಆತನು 2010ರವರೆಗೆ ಸುಮಾರು 28 ಸ್ಟುಡಿಯೊ ಆಲ್ಬಂಗಳು, 4 ವಿಶೇಷ ಬಿಡುಗಡೆಗಳು, 1 EPಅನ್ನು ಬಿಡುಗಡೆಗೊಳಿಸಿದ್ದಾನೆ. ಅಲ್ಲದೇ ಸುಮಾರು 50ಕ್ಕೂ ಹೆಚ್ಚು ಇತರ ಕಲಾವಿದರೊಂದಿಗೆ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಆತನ ಸಂಗೀತವು ವಿಭಿನ್ನ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ, ಉದಾ. ಪ್ರೊಗ್ರೆಸ್ಸಿವ್ ಮೆಟಲ್‌, ತ್ರ್ಯಾಶ್ ಮೆಟಲ್‌, ಸರಳ ಭಾವುಕ ಸಂಗೀತ(ಫಂಕ್), ಎಲೆಕ್ಟ್ರೋನಿಕ, ಜಾಝ್, ಬ್ಲ್ಯೂಗ್ರಾಸ್‌ ಮತ್ತು ನವ್ಯ-ಪ್ರಯೋಗದ ಸಂಗೀತ.

ಸಂಗೀತ ಪ್ರದರ್ಶನ ನಡೆಸಿಕೊಡುವಾಗ ಬಕೆಟ್‌ಹೆಡ್‌, ಕಪ್ಪು ದಪ್ಪ ಅಕ್ಷರದಲ್ಲಿ "FUNERAL" ಎಂದು ಬರೆದ ಕಿತ್ತಳೆ ಬಣ್ಣದ ಬಂಪರ್ ಸ್ಟಿಕರ್ಅನ್ನು ಎದ್ದು ಕಾಣುವಂತೆ ಚಿತ್ರಿಸಲಾದ ಒಂದು KFC ಬಕೆಟ್ಅನ್ನು ಅವನ ತಲೆಯ ಮೇಲ್ಗಡೆ (ಹಾಕಿಕೊಳ್ಳುತ್ತಿದ್ದ) ಧರಿಸುತ್ತಿದ್ದನು. ಅಲ್ಲದೇ ಭಾವರಹಿತ ಸ್ಪಷ್ಟ ಬಿಳಿ ಬಣ್ಣದ ಮುಖವಾಡವನ್ನು ಬಳಸುತ್ತಿದ್ದನು. ಇತ್ತೀಚೆಗೆ ಆತನು KFC ಲೋಗೊವನ್ನು ಹೊಂದಿರದ ಸ್ಪಷ್ಟ ಬಿಳಿ ಬಣ್ಣದ ಬಕೆಟ್ಅನ್ನು ಬಳಸಲು ಆರಂಭಿಸಿದ್ದಾನೆ. ಇದು ಮಾತ್ರವಲ್ಲದೆ ಅವನು ಅವನ ಪ್ರದರ್ಶನಗಳಲ್ಲಿ ನನ್‌ಚಕ್‌ಗಳು, ರೋಬೋಟ್ ನೃತ್ಯ ಮತ್ತು ಟಾಯ್ ಟ್ರೇಡಿಂಗ್ ಮೊದಲಾದವನ್ನೂ ಸೇರಿಸಿಕೊಳ್ಳುತ್ತಾನೆ.[][] ಬಕೆಟ್‌ಹೆಡ್‌ನ ಪ್ರದರ್ಶನವು "ಕೋಳಿಗಳಿಂದ ಬೆಳೆದ" ವ್ಯಕ್ತಿಯನ್ನು ಬಿಂಬಿಸುತ್ತದೆ, ಆತನು "ಪ್ರಪಂಚದಾದ್ಯಂತ ಫಾಸ್ಟ್-ಫುಡ್‌ ಅಡ್ಡೆಗಳಲ್ಲಿ ಬಳಕೆಯಾಗುತ್ತಿರುವ ಕೋಳಿಗಳು ನಾಶವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಲು, ಇದನ್ನು ಜೀವನದ ಗುರಿಯಾಗಿ" ಮಾಡಿಕೊಂಡಿದ್ದಾನೆ.[]

ವಾದ್ಯ-ಸಂಗೀತಗಾರನಾದ ಬಕೆಟ್‌ಹೆಡ್‌ ಅವನ ವಿದ್ಯುತ್-ಗಿಟಾರ್ ವಾದನಕ್ಕೆ ಹೆಸರುವಾಸಿಯಾಗಿದ್ದಾನೆ.[][] ಆತನು ಗಿಟಾರ್ಒನ್‌ ನಿಯತಕಾಲಿಕದ "ಸಾರ್ವಕಾಲಿಕ ಪ್ರಮುಖ 20 ಶ್ರೇಷ್ಠ ಗಿಟಾರ್ ವಾದಕರ"[] ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದ್ದಾನೆ; ಗಿಟಾರ್ ವರ್ಲ್ಡ್‌ ನ "25 ಮಂದಿ ಸಾರ್ವಕಾಲಿಕ ಅದೃಷ್ಟಶಾಲಿ ಗಿಟಾರ್-ವಾದಕರ"[] ಪಟ್ಟಿಯಲ್ಲಿಯೂ ಸೇರಿದ್ದಾನೆ. ಮಾತ್ರವಲ್ಲದೆ ಆತನು "50 ಮಂದಿ ಸಾರ್ವಕಾಲಿಕ ಅತ್ಯಂತ ವೇಗದ ಗಿಟಾರ್-ವಾದಕರ ಪಟ್ಟಿ"ಯಲ್ಲಿಯೂ ಸ್ಥಾನ ಗಳಿಸಿ ಹೆಸರುವಾಸಿಯಾಗಿದ್ದಾನೆ.[]

ಬಕೆಟ್‌ಹೆಡ್‌ ಪ್ರಾಥಮಿಕವಾಗಿ ಏಕಾಂಗಿ-ಕಲಾವಿದನಾಗಿ ನಿರ್ವಹಿಸುತ್ತಿದ್ದನು. ಅಷ್ಟೇ ಅಲ್ಲದೆ ಆತನು ವ್ಯಾಪಕವಾಗಿ ಹಲವಾರು ಉನ್ನತ ಕಲಾವಿದರೊಂದಿಗೂ ಜತೆಗೂಡಿದ್ದಾನೆ, ಅವರಲ್ಲಿ ಕೆಲವರು - ಬಿಲ್ ಲಾಸ್‌ವೆಲ್, ಬೂಟ್ಸಿ ಕೊಲಿನ್ಸ್, ಬರ್ನೀ ವೊರೆಲ್, ಇಗ್ಗಿ ಪಾಪ್, ಲೆಸ್ ಕ್ಲೇಪೂಲ್, ಸರ್ಜ್ ಟ್ಯಾಂಕಿಯನ್, ಬಿಲ್ ಮೊಸೆಲಿ, ಮೈಕ್ ಪ್ಯಾಟನ್, ವಿಗ್ಗೊ ಮಾರ್ಟೆನ್ಸನ್‌. ಆತನು 2000ರಿಂದ 2004ರವರೆಗೆ ಗನ್ಸ್ N' ರೋಸಸ್‌ನ ಸದಸ್ಯನಾಗಿದ್ದನು. ಬಕೆಟ್‌ಹೆಡ್‌ ಪ್ರಮುಖ ಚಲನಚಿತ್ರಗಳಿಗೂ ಹಾಡನ್ನು ರಚಿಸಿದ್ದಾನೆ ಮತ್ತು ನುಡಿಸಿದ್ದಾನೆ, ಅವುಗಳೆಂದರೆ: ಸಾ II , ಘೋಸ್ಟ್ಸ್ ಆಫ್ ಮಾರ್ಸ್ , ಬೆವರ್ಲಿ ಹಿಲ್ಸ್ ನಿನ್ಜ , ಮೋರ್ಟಲ್ ಕೊಂಬ್ಯಾಟ್ ‌, ಮಾರ್ಟಲ್ ಕೊಂಬ್ಯಾಟ್‌: ಆನಿಹಿಲೇಶನ್‌ , ಲಾಸ್ಟ್ ಆಕ್ಷನ್ ಹೀರೊ ಹಾಗೂ ಮೈಟಿ ಮಾರ್ಫಿನ್ ಪವರ್ ರೇಂಜರ್ಸ್: ದಿ ಮೂವಿ ಯ ಮುಖ್ಯ ದ್ವನಿಮುದ್ರಿಕೆ.

ವೃತ್ತಿಜೀವನ

[ಬದಲಾಯಿಸಿ]

ಆರಂಭಿಕ ಜೀವನ

[ಬದಲಾಯಿಸಿ]

ಬಕೆಟ್‌ಹೆಡ್‌ ಆತನ ಹನ್ನೆರಡನೆ ವಯಸ್ಸಿನಲ್ಲೇ ಸಂಗೀತ ನುಡಿಸಲು ಆರಂಭಿಸಿದನು. ಆದರೆ ಆತನು ಒಂದು ವರ್ಷದವರೆಗೆ, ಕ್ಯಾಲಿಫೋರ್ನಿಯಾದ ಹಂಟಿಗ್ಟನ್ ಬೀಚ್‌ನಿಂದ ಕ್ಯಾಲಿಫೋರ್ನಿಯಾದ ಕ್ಲೇರ್‌ಮಂಟ್‌ಗೆ ಸ್ಥಳಾಂತರಗೊಳ್ಳುವವರೆಗೆ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೆಂದು ಹೇಳಿಕೊಂಡಿದ್ದಾನೆ. ನಂತರ ಅವನ ಸಂಗೀತ-ವಾದನವು ಹಲವಾರು ಗುರುಗಳ ಪಾಠದಿಂದ ಸುಧಾರಿಸಲು ಆರಂಭವಾಯಿತು, ಅವರಲ್ಲಿ ಪ್ರಮುಖರೆಂದರೆ ಜಾನಿ ಫೊರ್ಚೂನ್, ಮ್ಯಾಕ್ಸ್ ಮ್ಯಾಕ್‌ಗೈರ್, ಪೆಬ್ಬರ್ ಬ್ರೌನ್ ಮತ್ತು ಹೆಚ್ಚು ಗಮನಾರ್ಹವಾಗಿ ಪಾಲ್ ಗಿಲ್ಬರ್ಟ್‌. ಕ್ಯಾರಲ್ ನಂತರ ಅವನ ಸಂಗೀತ-ವಾದನದ ಮತ್ತು ಅವನು ಬರೆದ ಶೈಲಿಗಳ(ಪ್ರದರ್ಶನ-ಪ್ರಾತ್ಯಕ್ಷಿಕೆ) ಡೆಮೊ-ಧ್ವನಿ-ಮುದ್ರಣಗಳನ್ನು ಮಾಡಲು ಆರಂಭಿಸಿದನು, ಇವು ಮುಂದೆ ಸ್ಟುಡಿಯೊ ಆಲ್ಬಂಗಳಾಗಿ ಬಿಡುಗಡೆಯಾದವು.

1988–1994: ಏಕಾಂಗಿ ಪ್ರದರ್ಶನ ನೀಡಿದ ಆರಂಭಿಕ ವೃತ್ತಿ ಜೀವನ ಮತ್ತು ತಾಲೀಮು

[ಬದಲಾಯಿಸಿ]

1988ರಲ್ಲಿ ಕ್ಲಾಸ್-X ವಾದ್ಯ-ವೃಂದವನ್ನು ತ್ಯಜಿಸಿದ ನಂತರ, ಕ್ಯಾರಲ್ ಗಿಟಾರ್ ಪ್ಲೇಯರ್ ನಿಯತಕಾಲಿಕದ ಸ್ಪರ್ಧೆಗೆ "ಬ್ರೇಜೋಸ್‌" ಎಂಬ ಒಂದು ಹಾಡನ್ನು ಪ್ರದರ್ಶಿಸಿದನು, ಆ ಸ್ಪರ್ಧೆಯಲ್ಲಿ ಆ ಹಾಡು ಎರಡನೇ ಸ್ಥಾನ ಗಳಿಸಿತು:

An astonishingly skilled guitarist and bassist, he demonstrates post-Paul Gilbert speed and accuracy filtered through very kinky harmonic sensibilities. His psychotronic, demonic edge is very, very far removed from the clichés of classical metal and rock. A real talent to watch, also known as "Buckethead."[]

ಅದೇ ವರ್ಷದಲ್ಲಿ, ಈ ನಿಯತಕಾಲಿಕದ ಸ್ವಾಗತ ಸಮಾರಂಭ ಕೂಟದಲ್ಲಿ ಬ್ರಿಯಾನ್ ಮತ್ತು ಅವನ ಪೋಷಕರು ನಿಯತಕಾಲಿಕದ ಸಂಪಾದಕ ಜ್ಯಾಸ್ ಒಬ್ರೆಚ್ಟ್‌ಗಾಗಿ ಡೆಮೊ-ಧ್ವನಿ-ಮುದ್ರಣವೊಂದನ್ನು ನೀಡಿದಾಗ ಒಬ್ರೆಚ್ಟ್‌ ಬಕೆಟ್‌ಹೆಡ್‌ನ ಬಗ್ಗೆ ತಿಳಿದನು. ಈ ಡೆಮೊದಿಂದ ಆಕರ್ಷಿತನಾಗಿ ಅವನು ಆತುರದಿಂದ ಬಕೆಟ್‌ಹೆಡ್‌ ಮತ್ತು ಆತನ ಪೋಷಕರು ಊಟ ಮಾಡುತ್ತಿದ್ದ ರೆಸ್ಟಾರೆಂಟ್‌ಗೆ ಹೋಗಿ, ಬಕೆಟ್‌ಹೆಡ್‌ನಿಗೆ ಅವನ ಪ್ರತಿಭೆಯ ಉತ್ತಮ ರೀತಿಯಲ್ಲಿ ಬಳಸುವಂತೆ ಪ್ರೋತ್ಸಾಹಿಸಿದನು.[] ಅವರು ಅತಿ ಶೀಘ್ರದಲ್ಲಿ ಸ್ನೇಹಿತರಾದರು. 1989ರಲ್ಲಿ ಬಕೆಟ್‌ಹೆಡ್‌ನ "ಸೊವೀ" ಎಂಬ ಹಾಡು ಮತ್ತೊಂದು ಸಂಗೀತ-ಸ್ಪರ್ಧೆಯಲ್ಲಿ ಗೌರವದ ಉಲ್ಲೇಖವನ್ನು ಪಡೆಯಿತು. 1991ರಲ್ಲಿ ಬಕೆಟ್‌ಹೆಡ್‌ ಒಬ್ರೆಚ್ಟ್‌ನ ನೆಲಮಾಳಿಗೆಗೆ ಸ್ಥಳಾಂತರಗೊಂಡನು. (ಇಲ್ಲಿ ಯಂಗ್ ಬಕೆಟ್‌ಹೆಡ್‌ DVDಗಾಗಿ "ಬಕೆಟ್‌ಹೆಡ್‌ ಇನ್ ದಿ ಬೇಸ್‌ಮೆಂಟ್"ನ ಚಿತ್ರೀಕರಣವನ್ನು ಮಾಡಲಾಯಿತು). "ಬ್ರೇಜೋಸ್‌" ಹಾಡು ಅಂತಿಮವಾಗಿ ಅವನ ವಾದ್ಯ-ವೃಂದ ಡೆಲಿ ಕ್ರೀಪ್ಸ್‌‌ನ 1991ರ ಡೆಮೊ ಟೇಪ್‌ನಲ್ಲಿ "ಟ್ರೈಬಲ್ ರೈಟ್ಸ್‌" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಯಿತು. ಹಾಗೆಯೇ 2006 ರಲ್ಲಿ ಬಕೆಟ್‌ಹೆಡ್‌ನ ಸೀಕ್ರೆಟ್ ರೆಸಿಪಿ DVDಯಲ್ಲಿ ಮತ್ತೊಮ್ಮೆ ಪ್ರಕಟವಾಯಿತು. ಲ್ಯೂಕ್ ಸಾಕ್ಕೊ ಆತನ ಗುರುವಾಗಿದ್ದನು.

ಜೈಂಟ್ ರೋಬೋಟ್ (ಡೆಮೊ) ಮತ್ತು ಬಕೆಟ್‌ಹೆಡ್‌ಲ್ಯಾಂಡ್ ಬ್ಲೂಪ್ರಿಂಟ್ಸ್‌ ಎಂಬ ಮೊದಲ ಎರಡು ಡೆಮೊ-ಟೇ‌ಪ್‌ಗಳ ನಂತರ ಬಕೆಟ್‌ಹೆಡ್‌ 1992ರಲ್ಲಿ ಬಕೆಟ್‌ಹೆಡ್‌ಲ್ಯಾಂಡ್ ಅನ್ನು ಜಾನ್ ಜಾರ್ನ್‌ನ ಜಪಾನೀಸ್ ಅವಂಟ್ ಧ್ವನಿ-ಮುದ್ರಣ ಲೇಬಲ್‌ನಲ್ಲಿ ಬಿಡುಗಡೆಗೊಳಿಸಿದನು.' ಕೇವಲ ದುಬಾರಿ ಆಮದಾಗಿ ಲಭ್ಯವಾದರೂ, ಆ ಧ್ವನಿ-ಮುದ್ರಣವು ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಕೆಲವರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಬಕೆಟ್‌ಹೆಡ್‌ ಸಾಂದರ್ಭಿಕ ಜಾರ್ನ್ ಸಹಯೋಗಿ, ಬೇಸ್-ವಾದ್ಯಗಾರ/ನಿರ್ಮಾಪಕ ಬಿಲ್ ಲ್ಯಾಸ್‌ವೆಲ್‌‌ ಒಂದಿಗೆ ಸೇರಿಕೊಂಡನು; ಬಕೆಟ್‌ಹೆಡ್‌ (ನಿರ್ವಾಹಕ, ನಿರ್ಮಾಪಕ ಅಥವಾ ಸಂಯೋಜಕನಾಗಿ) ಲ್ಯಾಸ್‌ವೆಲ್‌‌ಗೆ ಲಿಂಬೊಮ್ಯಾನಿಯಾಕ್ಸ್ ಡ್ರಮ್-ವಾದಕ ಬ್ರಿಯಾನ್ "ಬ್ರೈನ್" ಮಾಂಟಿಯನ ಮೂಲಕ ಪರಿಚಯಿಸಲ್ಪಟ್ಟನು, ಆತನು ಲ್ಯಾಸ್‌ವೆಲ್‌ಗೆ ಬಕೆಟ್‌ಹೆಡ್‌ ಅವನ ಕೊಠಡಿಯಲ್ಲಿ ಸಂಗೀತ-ನುಡಿಸುವುದನ್ನು ಒಳಗೊಂಡ ಒಂದು ವೀಡಿಯೊವನ್ನು ನೀಡಿದನು.[೧೦] ಬಕೆಟ್‌ಹೆಡ್‌ ಅತಿ ಶೀಘ್ರದಲ್ಲಿ ನಿಕಿ ಸ್ಕೋಪೆಲಿಟಿಸ್‌ನ ನಂತರ ಲ್ಯಾಸ್‌ವೆಲ್‌ನ ಎರಡನೇ ಪ್ರಮುಖ ಗಿಟಾರ್ ವಾದಕನಾದನು.

1992ರಲ್ಲಿ ಬಕೆಟ್‌ಹೆಡ್‌ ಬಿಲ್ ಲ್ಯಾಸ್‌ವೆಲ್‌, ಬರ್ನೀ ವೋರೆಲ್‌, ಬೂಟ್ಸಿ ಕೊಲಿನ್ಸ್‌ ಮತ್ತು ಬ್ರಿಯಾನ್ "ಬ್ರೈನ್" ಮಾಂಟಿಯ ಮೊದಲಾದವರೊಂದಿಗೆ ಸೂಪರ್‌ಗ್ರೂಪ್(ಶ್ರೇಷ್ಠ-ತಂಡ) ಪ್ರ್ಯಾಕ್ಸಿಸ್‌ಅನ್ನು ರೂಪಿಸಿದನು. ಅವರ ಮೊದಲ ಆಲ್ಬಂ ಟ್ರಾನ್ಸ್‌ಮುಟೇಶನ್ (ಮುಟಾಟಿಸ್ ಮುಟಾಂಡಿಸ್) ಅನ್ನು ಅದೇ ವರ್ಷದಲ್ಲಿ ಬಿಡುಗಡೆಗೊಳಿಸಿದರು, ಅದು ಉತ್ತಮ ವಿಮರ್ಶೆಯನ್ನು ಪಡೆಯಿತು. ಈ ತಂಡವು ಬಿಲ್ ಲ್ಯಾಸ್‌ವೆಲ್‌ನ ಕಲ್ಪನೆಯಾಗಿತ್ತು. ಅನಂತರ ಇದು ಸಿಸ್ಟಮ್ ಆಫ್ ಎ ಡೌನ್‌ನ ಸರ್ಜ್ ಟ್ಯಾಂಕಿಯನ್‌‌ನಂತಹ ಹಲವಾರು ಇತರ ಸಂಗೀತಗಾರರನ್ನು ಸೇರಿಸಿಕೊಂಡಿತು. ಬಕೆಟ್‌ಹೆಡ್‌ ಆರಂಭಿಕ 1984 ರ ಬಿಡುಗಡೆ ಮತ್ತು ಮೋಲ್ಡ್ (1998)ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಬಿಡುಗಡೆಗಳಲ್ಲಿ ಭಾಗವಹಿಸಿದನು.

1994ರಲ್ಲಿ ಬಕೆಟ್‌ಹೆಡ್‌ ಡೆತ್ ಕ್ಯೂಬ್‌ K (ಇದು "ಬಕೆಟ್‌ಹೆಡ್‌"ನ ಅಕ್ಷರಪಲ್ಲಟವಾಗಿದೆ) ಎಂಬ ಹೆಸರಿನಲ್ಲಿ ಡ್ರೀಮಟೋರಿಯಂ ಎಂಬ ಆಲ್ಬಂನ್ನು ಬಿಡುಗಡೆಗೊಳಿಸಿದನು. ಈ ಹೆಸರನ್ನು ಟಾಮ್ "ಡಾಕ್" ಡಾರ್ಟರ್, ಸೋನಿ ಮ್ಯೂಸಿಕ್ ಎಂಟರ್ಟೈನ್ಮೆಂಟ್‌ ಒಂದಿಗಿನ ಕಾನೂನಿನ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಚಿಸಿದನು. ಆತನ ಶೈಲಿಯ ಬಗ್ಗೆ ಅಧಿಕೃತ FAQ ಹೀಗೆಂದು ಹೇಳುತ್ತದೆ -

Many believe, however, that Death Cube K is a separate entity that looks like a photographic negative version of Buckethead with a "black chrome mask, like Darth Vader." This apparition haunts Buckethead and appears in his nightmares.[೧೧]

ನಂತರ "ಡೆತ್ ಕ್ಯೂಬ್‌ K" ಎಂಬ ಹೆಸರನ್ನು ವೈಜ್ಞಾನಿಕ-ಕಾಲ್ಪನಿಕ ಲೇಖಕ ವಿಲಿಯಂ ಗಿಬ್ಸನ್‌ ಅವನ ಕಾದಂಬರಿ ಐಡೊರು ವಿನಲ್ಲಿ (1996) ಬಾರ್‌ಗೆ ನೀಡಿದನು. ಗಿಬ್ಸನ್‌ ಈ ಸೂಚನೆಯನ್ನು ಅಡಿಕ್ಡೆಡ್ ಟು ನಾಯ್ಸ್ ‌ನ ಸಂದರ್ಶನದಲ್ಲಿ ವಿವರಿಸಿದನು:

Death Cube K is actually the title of an album. I'm sorry I can't remember the name of the group, but Bill Laswell, who I don't really know but out of the kindness of his heart occasionally sends me big hunks of his output, groups that come out on his label. And Death Cube K was the title of some vicious ambient group that he had produced. And when I saw it, I thought: a Franz Kafka theme bar in Tokyo.

1994ರಲ್ಲಿ ಬಕೆಟ್‌ಹೆಡ್‌ ಆತನ ಎರಡನೇ ಸ್ಟುಡಿಯೊ ಆಲ್ಬಂ ಜೈಂಟ್ ರೋಬೋಟ್ ಅನ್ನು ಬಿಡುಗಡೆಗೊಳಿಸಿದನು. ಇದು ಇಗ್ಗಿ ಪಾಪ್‌ ಮತ್ತು ಬಿಲ್ ಮಾಸೆಲಿ ಮೊದಲಾದ ಹಲವಾರು ಅತಿಥಿ ಕಲಾವಿದರನ್ನು ಒಳಗೊಂಡಿದೆ. ಈ ಆಲ್ಬಂನ ಹೆಸರನ್ನು ಜಾನಿ ಸೊಕ್ಕೊ ಆಂಡ್ ಹಿಸ್ ಫ್ಲೈಯಿಂಗ್ ರೋಬೋಟ್ ಎಂಬ ಜಪಾನೀಸ್ ಭಾಷೆಯ ಸರಣಿಯಿಂದ ಪಡೆಯಲಾಗಿತ್ತು, ಬಕೆಟ್‌ಹೆಡ್‌ ಈ ಸರಣಿಯ ಅಭಿಮಾನಿಯಾಗಿದ್ದನು .[೧೨] ಆತನು ಪ್ರ್ಯಾಕ್ಸಿಸ್‌ ಒಂದಿಗೆ ಇತರ ಎರಡು ಆಲ್ಬಂಗಳನ್ನೂ ಬಿಡುಗಡೆಗೊಳಿಸಿದನು: ಸ್ಯಾಕ್ರಿಫಿಸ್ಟ್ ಮತ್ತು ಮೆಟಾಟ್ರಾನ್ .

ಆಂಥೋನಿ ಕೈಡಿಸ್‌ನ ಆತ್ಮಚರಿತ್ರೆ ಸ್ಕಾರ್ ಟಿಶ್ಯೂ ವಿನ ಪ್ರಕಾರ, ಬಕೆಟ್‌ಹೆಡ್‌ ಒಮ್ಮೆ ರೆಡ್ ಹಾಟ್ ಚಿಲಿ ಪೆಪ್ಪರ್ಸ್‌ಗಾಗಿ ಅದರ ಯಾವುದೇ ಹಾಡುಗಳನ್ನು ಕೇಳದೆಯೇ, ಜಾನ್ ಫ್ರುಸ್ಕಿಯಾಂಟೆಯು ಆ ವಾದ್ಯ-ವೃಂದವನ್ನು ಬಿಟ್ಟುಬಿಟ್ಟ ನಂತರ, ಗಿಟಾರ್ ವಾದಿಸುವ ಪರೀಕ್ಷೆಗೊಳಗಾಗಿದ್ದನು. ಆ ವಾದ್ಯ-ವೃಂದದ ಬೇಸ್-ವಾದ್ಯಗಾರ ಫ್ಲಿಯಾ ಇದನ್ನು ಹೀಗೆಂದು ಹೇಳಿದ್ದಾನ:

When he finished, the band applauded raucously. He was "sweet and normal", but they wanted someone "...who could also kick a groove."[೧೩]

1995–1998: ಸಹಯೋಗದ ಕೆಲಸ, ಚಲನಚಿತ್ರ ಧ್ವನಿಮುದ್ರಿಕೆಗಳು ಮತ್ತು ಪ್ರ್ಯಾಕ್ಸಿಸ್‌

[ಬದಲಾಯಿಸಿ]

1995ರಲ್ಲಿ ಬಕೆಟ್‌ಹೆಡ್‌ ಯಾವುದೇ ಏಕಾಂಗಿಯಾಗಿ-ನಿರ್ವಹಿಸಿದ ಆಲ್ಬಂಗಳನ್ನು (ಸೋಲೊ ಆಲ್ಬಂ) ಬಿಡುಗಡೆಗೊಳಿಸಲಿಲ್ಲ. ಬದಲಿಗೆ ಜೊನಾಸ್ ಹೆಲ್‌ಬಾರ್ಗ್ ಮತ್ತು ಮೈಕೆಲ್ ಶ್ರೀವ್ (ಒಕ್ಟೇವ್ ಆಫ್ ದಿ ಹಾಲಿ ಇನೋಸೆಂಟ್ಸ್ ) ಮೊದಲಾದ ಹಲವಾರು ಕಲಾವಿದರೊಂದಿಗೆ ಜತೆಗೂಡಿ ಕೆಲಸ ಮಾಡಿದನು. ಆತನು ಅನೇಕ ಚಲನಚಿತ್ರ-ಧ್ವನಿಮುದ್ರಿಕೆಗಳಿಗೂ ಸಂಗೀತ ನೀಡಿದ್ದಾನೆ, ಉದಾ. ಜಾನಿ ಮ್ನೆಮೋನಿಕ್ ಮತ್ತು ಮೋರ್ಟಲ್ ಕೊಂಬ್ಯಾಟ್‌ .

ನಂತರ 1996ರಲ್ಲಿ, ಬಕೆಟ್‌ಹೆಡ್‌ ಇಂಗ್ಲಿಷ್ ನಿರ್ಮಾಪಕ DJ ನಿನ್ಜ್ ಮತ್ತು ಲಾಸ್‌ವೆಲ್ ಒಂದಿಗೆ ಆತನ ಏಕಾಂಗಿಯಾಗಿ-ನಿರ್ವಹಿಸಿದ ಆಲ್ಬಂ ದಿ ಡೇ ಆಫ್ ದಿ ರೋಬೋಟ್ ಅನ್ನು ಬಿಡುಗಡೆಗೊಳಿಸಿದನು. ಜೈಂಟ್ ರೋಬೋಟ್ ಎಂಬ ಮತ್ತೊಂದು ಆಲ್ಬಂನ್ನು ಬ್ರೈನ್‌ ಮತ್ತು ಕೀಬೋರ್ಡ್-ವಾದಕ ಪೀಟ್ ಸ್ಕ್ಯಾಟುರ್ರೊ ಒಂದಿಗೆ ಸಣ್ಣ ಜಪಾನೀಸ್ ಲೇಬಲ್ NTT ರೆಕಾರ್ಡ್ಸ್‌ನಲ್ಲಿ ಪ್ರಕಟಿಸಿದನು. ಎರಡೂ ಆಲ್ಬಂಗಳನ್ನು ಸಣ್ಣ ಪ್ರಮಾಣದಲ್ಲಿ ಪ್ರಿಂಟ್ ಮಾಡಲಾಗಿತ್ತು ಹಾಗೂ ಈಗ ಅವು ಸಂಗ್ರಹಣೀಯ ವಸ್ತುಗಳಾಗಿವೆ. ಡೆಲಿ ಕ್ರೀಪ್ಸ್‌‌ನ ಎರಡನೇ ಡೆಮೊ ಟೇಪ್ಅನ್ನೂ ಸಹ ಧ್ವನಿಮುದ್ರಿಸಲಾಯಿತು.

1996ರಲ್ಲಿ ಅನೇಕ ಸೇಗ ಸ್ಯಾಟರ್ನ್ ದೂರದರ್ಶನ ಜಾಹೀರಾತುಗಳು ಬಕೆಟ್‌ಹೆಡ್‌ನ ಸಂಗೀತದೊಂದಿಗೆ ಬಿಡುಗಡೆಗೊಂಡವು‌, ಆ ಜಾಹೀರಾತುಗಳು ಸ್ಯಾಟರ್ನ್(ಶನಿಗ್ರಹ) ಲೋಗೊದ ನೀಲಿ ಬಣ್ಣದ ಗೋಳದ ಮೂಲಕ ಕಿರಿಚುವ ಮುಖವಾಡ-ರೀತಿಯ ಮುಖವನ್ನು ಒಳಗೊಂಡಿದ್ದವು.

1997ರಲ್ಲಿ ಬಕೆಟ್‌ಹೆಡ್‌ ಬಕೆಟ್‌ಹೆಡ್‌ ಪ್ಲೇಸ್ ಡಿಸ್ನಿ ಎಂಬ ಆಲ್ಬಂನಲ್ಲಿ ಕೆಲಸ ಮಾಡಲು ಆರಂಭಿಸಿದನು, ಆದರೆ ಆ ಆಲ್ಬಂ ಇದುವರೆಗೆ ಬಿಡುಗಡೆಯಾಗಿಲ್ಲ. ಆತನ ವೆಬ್ ಪುಟದ ಪ್ರಕಾರ:

This highly anticipated album, once listed in an Avant catalog, has yet to be completed. It is Buckethead's most precious personal project, so he won't record or release it until he knows he is ready.[೧೪]

1997ರಲ್ಲಿ ಬಕೆಟ್‌ಹೆಡ್‌ ಚಲನಚಿತ್ರ-ಧ್ವನಿಮುದ್ರಿಕೆಗಳಿಗೆ ಸಂಗೀತ ನೀಡುವುದನ್ನು ಮತ್ತೆ ಮುಂದುವರಿಸಿದನು, ಉದಾ. ಬೆವರ್ಲಿ ಹಿಲ್ಸ್ ನಿನ್ಜ ಮತ್ತು ಮೋರ್ಟಲ್ ಕೊಂಬ್ಯಾಟ್‌: ಆನಿಹಿಲೇಶನ್‌ , ಮೋರ್ಟಲ್ ಕೊಂಬ್ಯಾಟ್‌ ನ ಉತ್ತರಭಾಗ.

ನಂತರದ ಬಿಡುಗಡೆಗಳೆಂದರೆ ಅರ್ಕನಾದ ಎರಡನೇ ಮತ್ತು ಅಂತಿಮ ಸ್ಟುಡಿಯೊ ಆಲ್ಬಂ ಆರ್ಕ್ ಆಫ್ ದಿ ಟೆಸ್ಟಿಮನಿ ಮತ್ತು ಬ್ರೈನ್‌ ಒಂದಿಗೆ ಏಕಮಾತ್ರವಾಗಿ-ರಚಿಸಿದ ವಾದ್ಯ-ವೃಂದ ಪೀಸಸ್‌ . ಪ್ರ್ಯಾಕ್ಸಿಸ್‌ನಿಂದ ಟ್ರಾನ್ಸ್‌ಮುಟೇಶನ್ ಲೈವ್‌ ಮತ್ತು ಲೈವ್ ಇನ್ ಪೋಲೆಂಡ್ (ಯುರೋಪಿಯನ್ ಸಂಗೀತ-ಕಛೇರಿಗಳ ಧ್ವನಿಮುದ್ರಣಗಳನ್ನು ಒಳಗೊಂಡಿದೆ) ಎಂಬ ಎರಡು ನೇರ-ಆಲ್ಬಂಗಳೂ ಬಿಡುಗಡೆಗೊಂಡವು.

ಡೆತ್ ಕ್ಯೂಬ್‌ K ಅದೇ ವರ್ಷದಲ್ಲಿ ಡಿಸೆಂಬೊಡೈಡ್ ಎಂಬ ಒಂದು ಆಲ್ಬಂನ್ನು ಬಿಡುಗಡೆಗೊಳಿಸಿದನು.

1998ರಲ್ಲಿ ಬಕೆಟ್‌ಹೆಡ್‌ ಕೋಲ್ಮಾ ಎಂಬ ಒಂದು ಆಲ್ಬಂನ್ನು ಪ್ರಕಟಿಸಿದನು. ಈ ಆಲ್ಬಂನ್ನು ಆ ಸಂದರ್ಭದಲ್ಲಿ ದೊಡ್ಡ ಕರುಳು ಕ್ಯಾನ್ಸರ್‌ನಿಂದ ನರಳುತ್ತಿದ್ದ ಆತನ ತಾಯಿಗಾಗಿ ಸಮರ್ಪಿಸಿದನು.[೧೫] ಅದೇ ವರ್ಷದಲ್ಲಿ ಪ್ರ್ಯಾಕ್ಸಿಸ್‌ ಕಲೆಕ್ಷನ್ ಎಂಬ ಒಂದು ಸಂಕಲನ-ಆಲ್ಬಂನ್ನು ಬಿಡುಗಡೆಗೊಳಸಿತು.

1999–2004: ಹೊಸ ವಾದ್ಯ-ವೃಂದಗಳು, ಗನ್ಸ್ N' ರೋಸಸ್, ಮತ್ತು ಸಾರ್ವಜನಿಕ ಮನ್ನಣೆ

[ಬದಲಾಯಿಸಿ]

1999ರಲ್ಲಿ, ಬಕೆಟ್‌ಹೆಡ್‌ ಪ್ರಿಮಸ್ ವಾದ್ಯ-ವೃಂದದ ಲೆಸ್ ಕ್ಲೇಪೂಲ್‌‌ನ ಸಹಯೋಗದೊಂದಿಗೆ ಮಾಂಸ್ಟರ್ಸ್ ಆಂಡ್ ರೋಬೋಟ್ಸ್‌ ಎಂಬ ಶೀರ್ಷಿಕೆಯ ಆತನ ಐದನೇ ಆಲ್ಬಂನ್ನು ಬಿಡುಗಡೆಗೊಳಿಸಿದನು. ಇದು ಪ್ರಸ್ತುತ ಆತನ ವೃತ್ತಿಜೀವನದಲ್ಲೇ ಅತ್ಯಂತ ಹೆಚ್ಚು-ಮಾರಾಟವಾಗುತ್ತಿರುವ ಆಲ್ಬಂ ಆಗಿದೆ. ಈ ಆಲ್ಬಂ "ದಿ ಬಲ್ಲಾಡ್ ಆಫ್ ಬಕೆಟ್‌ಹೆಡ್‌" ಎಂಬ ಹಾಡನ್ನು ಒಳಗೊಂಡಿದೆ, ಈ ಹಾಡಿಗಾಗಿ ಆತನ ಮೊದಲ ಸಂಗೀತ-ವೀಡಿಯೊವನ್ನು ಮಾಡಲಾಗಿತ್ತು.[೧೬]

ಈ ವರ್ಷದಲ್ಲಿ ಆತನು ಮತ್ತೆ ಮೂರು ಹೊಸ ವಾದ್ಯ-ವೃಂದಗಳನ್ನು ಆರಂಭಿಸಿದನು. ಮೊದಲನೆಯದು ಕಾರ್ನ್‌ಬಗ್ಸ್‌ ವಾದ್ಯ-ವೃಂದ, ನಟ ಬಿಲ್ ಮಾಸೆಲಿಯ ಸಹಯೋಗದೊಂದಿಗೆ, ಡ್ರಮ್-ವಾದಕ ಪಿಂಚ್‌ಫೇಸ್ ಮತ್ತು ನಂತರ ಕೀಬೋರ್ಡ್-ವಾದಕ ಟ್ರಾವಿಸ್ ಡಿಕರ್ಸನ್‌ ಮೊದಲಾದವರ ಸಹಯೋಗದೊಂದಿಗೆ ಇದನ್ನು ರಚಿಸಿದನು. ದಿ 13ತ್ ಸ್ಕ್ರೋಲ್ ಎಂಬ ಆಲ್ಬಂ ಒಂದಿಗೆ ಮತ್ತೊಂದು ವಾದ್ಯ-ವೃಂದ ಕೋಬ್ರ ಸ್ಟ್ರೈಕ್‌ , ಇದು ಪಿಂಚ್‌ಫೇಸ್, ಬ್ರಿಯಾನ್ "ಬ್ರೈನ್" ಮಾಂಟಿಯ, DJ ಡಿಸ್ಕ್ ಮತ್ತು ಬಿಲ್ ಲ್ಯಾಸ್‌ವೆಲ್‌ ಮೊದಲಾದವರನ್ನು ಒಳಗೊಂಡಿತ್ತು. ಬಕೆಟ್‌ಹೆಡ್‌ ನಟ ವಿಗ್ಗೊ ಮಾರ್ಟೆನ್ಸನ್‌ ಒಂದಿಗೂ ಧ್ವನಿಮುದ್ರಣ ಮಾಡಿದ್ದಾನೆ, ಆತನನ್ನು ಮೊದಲು ಮಿತ್: ಡ್ರೀಮ್ಸ್ ಆಫ್ ದಿ ವರ್ಲ್ಡ್ [೧೭] ಎಂಬ ಧ್ವನಿಮುದ್ರಣ-ತಂಡದ ಮೂಲಕ 1996ರಲ್ಲಿ ಭೇಟಿಯಾದನು. ಒಟ್ಟಿಗೆ ಅವರು ಒನ್ ಮ್ಯಾನ್ಸ್ ಮೀಟ್ , ಒನ್ ಲೆಸ್ ಥಿಂಗ್ ಟು ವರಿ ಎಬೌಟ್ ಮತ್ತು ದಿ ಅದರ್ ಪೆರೇಡ್ ಮೊದಲಾದವನ್ನು ಬಿಡುಗಡೆಗೊಳಿಸಿದರು. ಆ ಬಿಡುಗಡೆಗಳು ಈಗ ಸ್ವಲ್ಪಮಟ್ಟಿಗೆ ವಿರಳವಾಗಿವೆ, ಇದನ್ನು ಸರಿದೂಗಿಸಲು 2004ರಲ್ಲಿ ದಿಸ್, ದಾಟ್ ಆಂಡ್ ದಿ ಅದರ್ ಎಂಬ ಒಂದು ಸಂಕಲನ-ಆಲ್ಬಂನ್ನು ಬಿಡುಗಡೆಗೊಳಿಸಲಾಯಿತು. ಪ್ರ್ಯಾಕ್ಸಿಸ್‌‌ನಿಂದ ಲೈವ್ ಇನ್ ಪೋಲೆಂಡ್ ‌ನ ಪುನಃರೂಪಿಸಿದ ಆವೃತ್ತಿ ವಾರ್ಸ್ಜವ ಮತ್ತು ಮೈಟಿ ಮಾರ್ಫಿನ್ ಪವರ್ ರೇಂಜರ್ಸ್‌ ಎಂಬ ಚಲನಚಿತ್ರದ ಧ್ವನಿಮುದ್ರಿಕೆಯೂ ಸಹ ಈ ವರ್ಷದಲ್ಲಿ ಪ್ರಕಟವಾದವು. ಇದಲ್ಲದೆ ಬಕೆಟ್‌ಹೆಡ್‌ ಅಭಿಮಾನಿಗಳಿಗೆ ವಿಶೇಷವಾದ ಅರ್ಧ ಗಂಟೆಯ ದೀರ್ಘ "ವೈಯಕ್ತಿಕ ಧ್ವನಿಮುದ್ರಣ"ಗಳನ್ನು ಪ್ರತಿಯೊಂದಕ್ಕೆ $50 ದರದಲ್ಲಿ ಒದಗಿಸಿದನು. ಕೊಳ್ಳುಗರು ಅನೇಕ ವರ್ಗಗಳಲ್ಲಿ ವಿಷಯವನ್ನು ಆರಿಸಬಹುದಾಗಿತ್ತು.[೧೮]

ಅನಂತರ ಡೆತ್ ಕ್ಯೂಬ್‌ Kಯ ಟ್ಯುನೆಲ್ ಎಂಬ ಶೀರ್ಷಿಕೆಯು ಮೂರನೇ ಬಿಡುಗಡೆಯು ಪ್ರಕಟವಾಯಿತು, ಇದು ಲಾಸ್‌ವೆಲ್ಅನ್ನು ಒಳಗೊಳ್ಳದೆ ಬದಲಿಗೆ ಟ್ರಾವಿಸ್ ಡಿಕರ್ಸನ್‌ನನ್ನು ಹೊಂದಿತ್ತು. 2000ರಲ್ಲಿ ಬಕೆಟ್‌ಹೆಡ್‌ ಕೋಬ್ರ ಸ್ಟ್ರೈಕ್‌ II - Y, Y+B, X+Y ಎಂಬ ಕೋಬ್ರ ಸ್ಟ್ರೈಕ್‌ ‌ನಿಂದ ಎರಡನೆ ಮತ್ತು ಕೊನೆಯ ಆಲ್ಬಂನ್ನು ಬಿಡುಗಡೆಗೊಳಿಸಿದನು.

ಬಕೆಟ್‌ಹೆಡ್‌ 2000ರಿಂದ 2004 ಗನ್ಸ್ N' ರೋಸಸ್ನ ಪ್ರಮುಖ ಗಿಟಾರ್-ವಾದಕನಾಗಿ ಹೆಚ್ಚು ಜನಪ್ರಿಯನಾದನು.[೧೯] ಆತನು ಈ ವಾದ್ಯ-ವೃಂದದೊಂದಿಗೆ ಹಲವು-ಬಾರಿ ಮುಂದೂಡಲ್ಪಟ್ಟ ಆಲ್ಬಂ ಚೈನೀಸ್ ಡೆಮೊಕ್ರಸಿ ಯನ್ನು ಬಿಡುಗಡೆಗೊಳಿಸಿದನು ಹಾಗೂ 2001 ಮತ್ತು 2002ರಲ್ಲಿ ನೇರವಾಗಿ ವೇದಿಕೆಯಲ್ಲಿ ಕಾಣಿಸಿಕೊಂಡನು, ಉದಾ. ರಾಕ್ ಇನ್ ರಿಯೊ 3 , MTVಯ ವೀಡಿಯೊ ಮ್ಯೂಸಿಕ್ ಅವಾರ್ಡ್ಸ್ ಮತ್ತು ಚೈನೀಸ್ ಡೆಮೊಕ್ರಸಿ ಟೂರ್‌ನ ಭಾಗವಾಗಿ.

GN'Rನ ಸದಸ್ಯನಾಗಿದ್ದರೂ, ಬಕೆಟ್‌ಹೆಡ್‌ 2001ರಲ್ಲಿ ಸಮ್‌ವೇರ್ ಓವರ್ ದಿ ಸ್ಲಾಟರ್‌ಹೌಸ್‌ ಎಂಬ ಆತನ ಆರನೇ ಸ್ಟುಡಿಯೊ ಆಲ್ಬಂನ್ನು ಮತ್ತು KFC ಸ್ಕಿನ್ ಪೈಲ್ಸ್‌ ಎಂಬ ಏಕೈಕ EPಯನ್ನು ಬಿಡುಗಡೆಗೊಳಿಸಿದನು. ಆತನು ಕಾರ್ನ್‌ಬಗ್ಸ್‌ ವಾದ್ಯ-ವೃಂದದೊಂದಿಗೆ ಎರಡು ಆಲ್ಬಂಗಳನ್ನು ಪ್ರಕಟಿಸಿದನು, ಅವುಗಳೆಂದರೆ ಸೆಮೆಟೆರಿ ಪಿಂಚ್ ಮತ್ತು ಹೌ ನೌ ಬ್ರೌನ್ ಕೌ . ನಂತರ ಆತನು ಎರಡು ಹೊಸ ವಾದ್ಯ-ವೃಂದಗಳೊಂದಿಗೆ ಸೇರಿಕೊಂಡನು, ಮೊದಲನೆಯದು ತನಟಾಪ್ಸಿಸ್‌, ಇದರಲ್ಲಿ ಡಿಕರ್ಸನ್ ಒಂದಿಗೆ ಸ್ವ-ಶೀರ್ಷಿಕೆಯ ಪ್ರಥಮ ಆಲ್ಬಂಅನ್ನು ಬಿಡುಗಡೆಗೊಳಿಸಿದನು; ಎರಡನೆಯದು ಲಾಸ್‌ವೆಲ್ ಮತ್ತು ಜಪಾನೀಸ್ ನಿರ್ಮಾಪಕ ಶಿನ್ ಟೆರೈ‌ ಒಂದಿಗೆ ಯೂನಿಸನ್ ಆಗಿ ಪ್ರಕಟವಾಯಿತು.

2002ರಲ್ಲಿ, ಬಕೆಟ್‌ಹೆಡ್‌ ಮೂರು ಸ್ಟುಡಿಯೊ ಆಲ್ಬಂಗಳನ್ನು ಬಿಡುಗಡೆಗೊಳಿಸಿದನು: ಫನೆಲ್ ವೀವರ್ -ಇದು 49 ಸಣ್ಣ ಹಾಡುಗಳ ಒಂದು ಸಂಗ್ರಹ, ಬರ್ಮುಡ ಟ್ರಿಯಾಂಗಲ್ ಮತ್ತು ಅಂತಿಮವಾಗಿ ಎಲೆಕ್ಟ್ರಿಕ್ ಟಿಯರ್ಸ್‌ -ಆತನ ಹಿಂದಿನ ಬಿಡುಗಡೆ ಕೋಲ್ಮಾ ದಂತೆಯೇ ಇರುವ ಒಂದು ಪ್ರಶಾಂತಗೊಳಿಸುವ-ಆಲ್ಬಂ(ಕಾಮಿಂಗ್ ಆಲ್ಬಂ) ಆಗಿದೆ. ಲಾಸ್‌ವೆಲ್‌ಗೆ ಬೊನ್ನಾರೊ ಮ್ಯೂಸಿಕ್ ಆಂಡ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ಪ್ರ್ಯಾಕ್ಸಿಸ್‌ ಒಂದಿಗೆ ಪ್ರದರ್ಶನ ನೀಡಲಾಗದಿದ್ದಾಗ, ಲೆಸ್ ಕ್ಲೇಪೂಲ್ ಬ್ರೈನ್‌, ಬರ್ನೀ ವೋರೆಲ್‌ ಮತ್ತು ಬಕೆಟ್‌ಹೆಡ್‌‌ ಮೊದಲಾದರನ್ನು ಸೇರಿಸಿಕೊಂಡು ಪ್ರದರ್ಶನ ನಡೆಸಿಕೊಟ್ಟನು, ಇವರ ಈ ತಂಡವು ಕೊಲೊನೆಲ್ ಕ್ಲೇಪೂಲ್ಸ್ ಬಕೆಟ್ ಆಫ್ ಬರ್ನೀ ಬ್ರೈನ್ಸ್‌ ಎಂಬ ಹೊಸ ಸೂಪರ್‌ಗ್ರೂಪ್ ಆಗಿ ರೂಪುಗೊಂಡಿತು. ಈ ಜ್ಯಾಮ್-ಬ್ಯಾಂಡ್ ಪ್ರಯೋಗವು ಕೆಲವು ನೇರ ಪ್ರದರ್ಶನಗಳನ್ನು ನಡೆಸಿಕೊಡುವಲ್ಲಿ ಯಶಸ್ವಿಯಾಯಿತು.

ನಂತರ 2003ರಲ್ಲಿ ಬಕೆಟ್‌ಹೆಡ್‌ ಆತನ ಹತ್ತನೇ ಸ್ಟುಡಿಯೊ ಆಲ್ಬಂ ಆಗಿ ಆತನ ಮೊದಲ ಬಕೆಟ್‌ಹೆಡ್‌ಲ್ಯಾಂಡ್ ‌ನ ಉತ್ತರ ಭಾಗವನ್ನು ಬಿಡುಗಡೆಗೊಳಿಸಿದನು, ಅದನು ಬಕೆಟ್‌ಹೆಡ್‌ಲ್ಯಾಂಡ್ 2 ಎಂದು ಕರೆದನು. ನಟ ವಿಗ್ಗೊ ಮಾರ್ಟೆನ್ಸನ್‌ ಒಂದಿಗೆ ಆತನು ಪ್ಯಾಂಡೆಮೋನಿಯಂಫ್ರೋಮಮೇರಿಕ ಹಾಗೂ ತನಟಾಪ್ಸಿಸ್‌ ವಾದ್ಯ-ವೃಂದದೊಂದಿಗೆ ಅದರ ಎರಡನೇ ಬಿಡುಗಡೆ ಆಕ್ಸಿಯಾಲಜಿ ಯನ್ನು ಪ್ರಕಟಿಸಿದನು.

2004ರ ಮಾರ್ಚ್‌ನಲ್ಲಿ ಬಕೆಟ್‌ಹೆಡ್‌ ಗನ್ಸ್ N' ರೋಸಸ್ಅನ್ನು ಬಿಟ್ಟುಬಿಟ್ಟನು. ಆತನ ವ್ಯವಸ್ಥಾಪಕನ ಪ್ರಕಾರ, "ಗನ್ಸ್" ಒಂದು ಆಲ್ಬಂ ಅಥವಾ ಪ್ರವಾಸವನ್ನು ಪೂರ್ಣಗೊಳಿಸಲು ಅಸಮರ್ಥವಾದುದು ಇದಕ್ಕೆ ಕಾರಣವಾಗಿದೆ.[೨೦]

ಬಕೆಟ್‌ಹೆಡ್‌ ಬಿಟ್ಟುಹೋದ ನಂತರದ ಗನ್ಸ್ N' ರೋಸಸ್‌ನ ಪ್ರತಿಕ್ರಿಯೆ ಈ ಕೆಳಗಿನಂತಿತ್ತು:

During his tenure with the band, Buckethead has been inconsistent and erratic in both his behavior and his commitment, despite being under contract, creating uncertainty and confusion and making it virtually impossible to move forward with recording, rehearsals, and live plans with confidence. His transient lifestyle has made it near impossible for even his closest friends to have nearly any form of communications with him whatsoever.[೨೧]

ಅಲ್ಲಿಂದೀಚಿಗೆ ಸಂಗೀತ ಸಮುದಾಯಗಳಲ್ಲಿನ ಆತನ ಅಭಿಮಾನಿ ವರ್ಗವು ದೃಢವಾಗಿ ಹೆಚ್ಚಾಯಿತು. ಆತನು ಸಾಧಾರಣವಾಗಿ ರಾಷ್ಟ್ರದಾದ್ಯಂತದ ಉತ್ಸವಗಳಲ್ಲಿ ಮತ್ತು ಕ್ಲಬ್‌ಗಳಲ್ಲಿ ಪ್ರದರ್ಶನ ನಡೆಸಿಕೊಡುತ್ತಾನೆ ಹಾಗೂ ವಿಶಿಷ್ಟ ಪ್ರದರ್ಶಕನಾಗಿ ಪ್ರವಾಸಗಳನ್ನೂ ಮಾಡುತ್ತಾನೆ.[೨೨][೨೩]

2004ರ ವರ್ಷದಲ್ಲಿ ಮೂರು ಹೊಸ ಸ್ಟುಡಿಯೊ ಆಲ್ಬಂಗಳು ಬಿಡುಗಡೆಗೊಂಡವು: ಐಲ್ಯಾಂಡ್ ಆಫ್ ಲೋಸ್ಟ್ ಮೈಂಡ್ಸ್‌ , ಆತನ ಮೊದಲ ಪ್ರವಾಸಕ್ಕೆ-ಮೀಸಲಾದ ಆಲ್ಬಂ ಆಗಿದೆ, ಇದು ನಂತರ TDRS ಮ್ಯೂಸಿಕ್‌ನಿಂದ ಪಾಪ್ಯುಲೇಶನ್ ಓವರ್‌ರೈಡ್‌ ಆಗಿ ಪುನಃ-ಬಿಡುಗಡೆಗೊಂಡಿತು, ಡಿಕರ್ಸನ್ ಒಂದಿಗೆ ಮಾಡಿದ ಬ್ಲೂಸ್ ರಾಕ್ ಪ್ರವಾಸ; ಮತ್ತು ದಿ ಕುಕೂ ಕ್ಲಾಕ್ಸ್ ಆಫ್ ಹೆಲ್‌ , ಇದನ್ನು ಇದುವರೆಗಿನ ಅತ್ಯಂತ ಹೆಚ್ಚಿನ ಪ್ರಯತ್ನವೆಂದು ಪರಿಗಣಿಸಲಾಗಿದೆ. ನಂತರದ ಬಿಡುಗಡೆಯೆಂದರೆ "ಸ್ಪೋಕ್ಸ್ ಫಾರ್ ದಿ ವೀಲ್ ಆಫ್ ಟೋರ್ಮೆಂಟ್", ಇದಕ್ಕಾಗಿ ಸಿಡ್ ಗ್ಯಾರನ್ ಮತ್ತು ಎರಿಕ್ ಹೆನ್ರಿ ಹೈರೊನಿಮಸ್ ಬೋಸ್ಚ್‌ನ ಪ್ರಸಿದ್ಧ ಮೂರಂಕಣ ಚಿತ್ರದ ಆಧಾರದಲ್ಲಿ ಒಂದು ಸಂಗೀತ-ವೀಡಿಯೊವನ್ನು ಮಾಡಿದರು. ಬಕೆಟ್‌ಹೆಡ್‌ ಕಾರ್ನ್‌ಬಗ್ಸ್‌‌ನ ಎರಡು ಅಂತಿಮ ಆಲ್ಬಂಗಳನ್ನೂ ಧ್ವನಿಮುದ್ರಣ ಮಾಡಿದನು, ಬ್ರೈನ್ ಸರ್ಕಸ್‌ ಮತ್ತು ಡಾಂಕಿ ಟೌನ್‌ . ಅಲ್ಲದೆ ಆತನು ವಿಗ್ಗೊ ಮಾರ್ಟೆನ್ಸನ್‌ ಒಂದಿಗೆ ಪ್ಲೀಸ್ ಟುಮಾರೊ ಅನ್ನು ಹಾಗೂ ಶಿನ್ ಟೆರೈ‌ ಒಂದಿಗೆ ಹೆವೆನ್ ಆಂಡ್ ಹೆಲ್‌ ಎಂಬ ಆಲ್ಬಂನ್ನು ಬಿಡುಗಡೆಗೊಳಿಸಿದನು. C2B3 ಸಹ ಅದರ ಏಕೈಕ ಆಲ್ಬಂ ದಿ ಬಿಗ್ ಐಬಾಲ್ ಇನ್ ದಿ ಸ್ಕೈ ಅನ್ನು ಬಿಡುಗಡೆಗೊಳಿಸಿತು ಮತ್ತು ಉತ್ತರ ಅಮೆರಿಕಾದಾದ್ಯಂತ ಪ್ರವಾಸ ಮಾಡಿತು.

ರಿವಾಲ್ವರ್ ಒಂದಿಗಿನ ಸಂದರ್ಶನದಲ್ಲಿ, ಓಜಿ ಓಸ್ಪರ್ನ್ ಆತನ ವಾದ್ಯ-ವೃಂದ ಓಜ್‌ಫೆಸ್ಟ್‌ನಲ್ಲಿ ಬಕೆಟ್‌ಹೆಡ್‌ಗೆ ಗಿಟಾರ್ ವಾದಿಸುವಂತೆ ಕೇಳಿದ್ದನೆಂದು ಹೇಳಿದ್ದಾನೆ. ಓಜಿ ಆತನನ್ನು ಭೇಟಿಯಾದ ನಂತರ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು ಹಾಗೂ ತಾನು ಹೇಳಿದ ಉಡುಗೆಯನ್ನು ತೊಡಲು ಬಕೆಟ್‌ಹೆಡ್‌ ತಯಾರಾಗಿಲ್ಲವೆಂಬುದನ್ನು ಮನಗಂಡನು, ಆತನು ಹೀಗೆ ಹೇಳಿದ್ದಾನೆ:

"I tried out that Buckethead guy. I met with him and asked him to work with me, but only if he got rid of the fucking bucket. So I came back a bit later, and he's wearing this green fucking Martian's-hat thing! I said, 'Look, just be yourself.' He told me his name was Brian, so I said that's what I'd call him. He says, 'No one calls me Brian except my mother.' So I said, 'Pretend I'm your mum then!' I haven't even got out of the room and I'm already playing fucking mind games with the guy. What happens if one day he's gone and there's a note saying, 'I've been beamed up'? Don't get me wrong, he's a great player. He plays like a motherfucker."[೨೪]

Ozzy Osbourne, Revolver.

2005–2006: ಬಕೆಟ್‌ಹೆಡ್‌ ಆಂಡ್ ಫ್ರೆಂಡ್ಸ್‌

[ಬದಲಾಯಿಸಿ]

2005ರಲ್ಲಿ, ಬಕೆಟ್‌ಹೆಡ್‌ ಸರ್ಜ್ ಟ್ಯಾಂಕಿಯನ್‌‌ನ ಧ್ವನಿಮುದ್ರಣ ಲೇಬಲ್ ಸೆರ್ಜಿಕಲ್ ಸ್ಟ್ರೈಕ್‌ನ ಮೂಲಕ ಎಂಟರ್ ದಿ ಚಿಕನ್‌ ಎಂಬ ಒಂದು ಆಲ್ಬಂನ್ನು "ಬಕೆಟ್‌ಹೆಡ್‌ ಆಂಡ್ ಫ್ರೆಂಡ್ಸ್‌" ಆಗಿ ಬಿಡುಗಡೆಗೊಳಿಸಿದನು. ಆ ಆಲ್ಬಂ ಟ್ಯಾಂಕಿಯನ್, ಮ್ಯಾಕ್ಸಿಮಮ್ ಬಾಬ್ (ಡೆಲಿ ಕ್ರೀಪ್ಸ್‌‌ನ), ಡೆತ್ ಬೈ ಸ್ಟೀರಿಯೊದ ಗಾಯಕ ಎಫ್ರೆಮ್ ಶುಲ್ಜ್, ಬ್ಯಾಡ್ ಆಸಿಡ್ ಟ್ರಿಪ್ ಮತ್ತು ಇತರರನ್ನು ಒಳಗೊಂಡಿದೆ.[೨೫] ಇದು ಹೆಚ್ಚು ಸಾಂಪ್ರದಾಯಿಕ ಹಾಡು ರಚನೆಗಳು ಮತ್ತು ಬಕೆಟ್‌ಹೆಡ್‌ನ ಗಿಟಾರ್ ಕೌಶಲಗಳಿಂದಾಗಿ ಹೆಸರುವಾಸಿಯಾಗಿದೆ. "ವಿ ಆರ್ ಒನ್" ಏಕಗೀತವಾಗಿ ಬಿಡುಗಡೆಯಾಯಿತು ಹಾಗೂ ಇದು ಮಾಸ್ಟರ್ಸ್ ಆಫ್ ಹಾರರ್ ‌ನ ಧ್ವನಿಮುದ್ರಿಕೆಯಲ್ಲೂ ಕಾಣಿಸಿಕೊಂಡಿದೆ. "ಥ್ರೀ ಫಿಂಗರ್ಸ್"ಅನ್ನು ಭಯಾನಕ-ಚಿತ್ರ ಸಾ II ರ ಧ್ವನಿಮುದ್ರಿಕೆಯಲ್ಲಿ ಬಳಸಲಾಗಿದೆ. ಅಂತಿಮ ಹಾಡು "ನಾಟ್ಟಿಂಗ್ಹ್ಯಾಮ್ ಲೇಸ್" ಮೊದಲು ಅವನ ಮುಖಪುಟದ ಮೂಲಕ ಸಾರ್ವಜನಿಕವಾಗಿ ಪ್ರಕಟಗೊಂಡಿತು ಹಾಗೂ ಅತಿ ಶೀಘ್ರದಲ್ಲಿ ಸಂಗೀತ-ಕಛೇರಿಯ ಪ್ರಮುಖ ಹಾಡಾಯಿತು ಮತ್ತು ಆತನ ಹೆಚ್ಚು ಜನಪ್ರಿಯ ಹಾಡುಗಳಲ್ಲಿ ಒಂದಾಯಿತು. ಬಕೆಟ್‌ಹೆಡ್‌ 2005ರಲ್ಲಿ ಎರಡು ಏಕಾಂಗಿಯಾಗಿ-ನಿರ್ವಹಿಸಿದ ಆಲ್ಬಂಗಳನ್ನೂ ಬಿಡುಗಡೆಗೊಳಿಸಿದನು, ಅವುಗಳೆಂದರೆ ಕ್ಯಾಲೈಡೊಸ್ಕಾಲ್ಪ್ ಮತ್ತು ಇನ್ಬ್ರೆಡ್ ಮೌಂಟೇನ್‌ . ಇನ್ಬ್ರೆಡ್ ಮೌಂಟೇನ್ ಆಲ್ಬಂ TDRS ಮ್ಯೂಸಿಕ್‌ ಲೇಬಲ್‌ನಲ್ಲಿ ಏಕಾಂಗಿ ಕಲಾವಿದನು ಬಿಡುಗಡೆಗೊಳಿಸಿದ ಮೊದಲ ಆಲ್ಬಂ ಆಗಿದೆ. ಎರಡೂ ಆಲ್ಬಂಗಳು ಆರಂಭದಲ್ಲಿ ಸಂಗೀತ-ಕಛೇರಿಗಳಲ್ಲಿ ವ್ಯಾಪಕವಾಗಿ ಮಾರಾಟವಾದವು. ಆದರೆ ನಂತರ ಲೇಬಲ್‌ನ ವೆಬ್‌ಸೈಟ್‌ನಲ್ಲಿ ಮೂಲಕ ಮಾತ್ರ ಅಧಿಕೃತವಾಗಿ ಬಿಡುಗಡೆಯಾದವು.

ಅದೇ ವರ್ಷದಲ್ಲಿ ಬಕೆಟ್‌ಹೆಡ್‌ ಆತನ ಮೊದಲ DVD ಸೀಕ್ರೆಟ್ ರೆಸಿಪಿ ಯನ್ನು ಬಿಡುಗಡೆಗೊಳಿಸಿದನು, ಅದು ಆರಂಭದಲ್ಲಿ ಪ್ರವಾಸದಲ್ಲಿ ಮಾತ್ರ ಮಾರಾಟವಾಯಿತು; ಇದನ್ನು ಪಡೆಯಲು ಇತರ ಅಭಿಮಾನಿಗಳಿದ್ದ (ಪ್ರದರ್ಶನಕ್ಕೆ ಹೋಗದ ಅಥವಾ ವಿದೇಶದಲ್ಲಿ ವಾಸಿಸುವ) ಏಕೈಕ ಸ್ಥಳಗಳೆಂದರೆ ಹರಾಜು-ಸೈಟ್‌ಗಳು, ಉದಾ. ಇಬೇ ಅಂತಿಮವಾಗಿ ಈ DVDಯ ನಕಲುಗಳಿಗಾಗಿ ಟ್ರಾವಿಸ್ ಡಿಕರ್ಸನ್‌ ಅವನ ವೆಬ್‌ಸೈಟ್‌ನಲ್ಲಿ ಲಾಟರಿ-ಮಾರಾಟವನ್ನು ನಿಯೋಜಿಸಿದನು. ಇದರ ನಕಲನ್ನು "ಗೆಲ್ಲಲು" ಬಯಸುವವರು ಅವರ ಹೆಸರು ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸಬೇಕಾಗಿತ್ತು. ನಮೂದುಗಳು ಮುಗಿದ ನಂತರ ಅವುಗಳಲ್ಲಿ ಆತನು 200 ಹೆಸರುಗಳನ್ನು ಯಾದೃಚ್ಛಿಕವಾಗಿ ಆರಿಸಿದನು ಹಾಗೂ ಆಯ್ಕೆಯಾದವರಿಗೆ ಆತನ ವೆಬ್‌ಸೈಟ್‌ನಿಂದ DVDಯ ಒಂದು ನಕಲನ್ನು ಖರೀದಿಸಲು ಅವಕಾಶ ಮಾಡಿಕೊಡಲಾಯಿತು. 2006ರ ಮಾರ್ಚ್‌ನಲ್ಲಿ ಅಂತಿಮವಾಗಿ ಈ DVDಯನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲಾಯಿತು.

ಮಾತ್ರವಲ್ಲದೆ ಬಕೆಟ್‌ಹೆಡ್‌ ಇತರ ವಾದ್ಯ-ವೃಂದಗಳೊಂದಿಗೂ ಆಲ್ಬಂಗಳನ್ನು ಬಿಡುಗಡೆಗೊಳಿಸಿದ್ದಾನೆ: ಕಾರ್ನ್‌ಬಗ್ಸ್‌ ಒಂದಿಗೆ ಆತನು ಎರಡು ಸಂಕಲನ-ಆಲ್ಬಂಗಳನ್ನು ಪ್ರಕಟಿಸಿದ್ದಾನೆ, ಅವುಗಳೆಂದರೆ ರೆಸ್ಟ್ ಹೋಮ್ ಫಾರ್ ರೋಬೋಟ್ಸ್ ಮತ್ತು ಸ್ಕೆಲಿಟನ್ ಫಾರ್ಮ್ ; ಆತನು ಡೆಲಿ ಕ್ರೀಪ್ಸ್‌ ವಾದ್ಯ-ವೃಂದದೊಂದಿಗೆ ಅದರ ಮೊದಲ ಮತ್ತು ಏಕೈಕ ಆಲ್ಬಂ ಡಾವ್ನ್ ಆಫ್ ದಿ ಡೆಲಿ ಕ್ರೀಪ್ಸ್‌ ಅನ್ನೂ ಬಿಡುಗಡೆಗೊಳಿಸಿದ್ದಾನೆ. ಬಕೆಟ್‌ಹೆಡ್‌ ಸ್ಟುಡಿಯೊ-ವಾದ್ಯ-ವೃಂದ ಗಾರ್ಗೋನ್ ಒಂದಿಗೆ ಅದರ ಸ್ವ-ಶೀರ್ಷಿಕೆ ಆಲ್ಬಂ ಗಾರ್ಗೋನ್ ಅನ್ನೂ ಬಿಡುಗಡೆಗೊಳಿಸಿದನು. ಈ ಆಲ್ಬಂನ್ನು ಬಕೆಟ್‌ಹೆಡ್‌ 2004ರಲ್ಲಿ ಬಿಡುಗಡೆಗೊಳಿಸಿದ ಆಲ್ಬಂ ಪಾಪ್ಯುಲೇಶನ್ ಓವರ್‌ರೈಡ್‌ ‌ನ ಧ್ವನಿಮುದ್ರಣದ ಅವಧಿಯಲ್ಲಿ ಧ್ವನಿಮುದ್ರಣಗೊಳಿಸಲಾಯಿತು. ಈ ಗಿಟಾರ್-ವಾದಕ ಬಕೆಟ್‌ಹೆಡ್‌ ನಟ ವಿಗ್ಗೊ ಮಾರ್ಟೆನ್ಸನ್‌ ಒಂದಿಗೂ ಇಂಟೆಲಿಜೆನ್ಸ್ ಫೈಲ್ಯೂರ್ ಎಂಬ ಒಂದು ಆಲ್ಬಂನ್ನು ಹಾಗೂ ಪ್ರ್ಯಾಕ್ಸಿಸ್‌ ವಾದ್ಯ-ವೃಂದದೊಂದಿಗೆ ಜುರಿಚ್ ಎಂಬ ಒಂದು ನೇರ-ಆಲ್ಬಂನ್ನು ಬಿಡುಗಡೆಗೊಳಿಸಿದನು.

2006ರಲ್ಲಿ ಪ್ರಮುಖ ಕ್ರಾಸ್-ಕನ್ಸೋಲ್ ವೀಡಿಯೊ ಗೇಮ್ ಗಿಟಾರ್ ಹೀರೊ II ಬಿಡುಗಡೆಯಾಯಿತು, ಇದು ಬಕೆಟ್‌ಹೆಡ್‌ನ ಹಾಡು "ಜೋರ್ಡಾನ್"ಅನ್ನು ಬೀಗ-ತೆಗೆಯುವ ಬೋನಸ್ ಹಾಡಾಗಿ ಹೊಂದಿದೆ. ಈ ಹಾಡನ್ನು ಹಿಂದೆ ನೇರ-ಪ್ರದರ್ಶನದಲ್ಲಿ ನಿರ್ವಹಿಸಲಾಗಿದ್ದರೂ, ವೀಡಿಯೊ ಗೇಮ್ ಆವೃತ್ತಿಯು ಹಾಡಿನ ಸ್ಟುಡಿಯೊ ಧ್ವನಿಮುದ್ರಣವಾಗಿದೆ. ನೇರ ಆವೃತ್ತಿಯು ಹೆಚ್ಚುಕಡಿಮೆ ಕೇವಲ "ಜೋರ್ಡಾನ್"‌ನ ಪದ್ಯ ಮತ್ತು ಪಲ್ಲವಿಯನ್ನು ಮಾತ್ರ ಹೊಂದಿದೆ; ನಂತರ ಮತ್ತೊಂದು ಹಾಡಿಗೆ ಸಾಮಾನ್ಯವಾಗಿ "ಪೋಸ್ಟ್ ಆಫೀಸ್ ಬಡ್ಡಿ"ಗೆ ಹೋಗುತ್ತದೆ; ನಂತರ ಮತ್ತೆ "ಜೋರ್ಡಾನ್"‌ನ ಪದ್ಯ ಮತ್ತು ಪಲ್ಲವಿಗೆ ಹಿಂದಿರುಗುತ್ತದೆ. ಆದರೆ ಗಿಟಾರ್ ಹೀರೊ II ಆವೃತ್ತಿಯು ನಿರ್ದಿಷ್ಟವಾಗಿ ಗೇಮ್‌ಗಾಗಿ ರಚಿಸಲಾದ ಒಂದು ವಿಶೇಷ ಒಂಟಿ-ವಾದನವನ್ನು ಹೊಂದಿದೆ.[೨೬] 2007ರ ಉತ್ತರಾರ್ಧದಿಂದ ಬಕೆಟ್‌ಹೆಡ್‌ ಏಕಾಂಗಿ-ಪ್ರದರ್ಶನವನ್ನೂ ಒಳಗೊಂಡಂತೆ ಆತನ ಸಂಗೀತ-ಕಛೇರಿಗಳಲ್ಲಿ "ಜೋರ್ಡಾನ್"ನ ಗಿಟಾರ್ ಹೀರೊ ಆವೃತ್ತಿಯನ್ನು ನಿರ್ವಹಿಸಲು ಆರಂಭಿಸಿದನು.

ಅದೇ ವರ್ಷದಲ್ಲಿ ಬಕೆಟ್‌ಹೆಡ್‌ ಎರಡು DVDಗಳನ್ನು ಬಿಡುಗಡೆಗೊಳಿಸಿದನು, ಅವುಗಳೆಂದರೆ ಯಂಗ್ ಬಕೆಟ್‌ಹೆಡ್‌ ವಾಲ್ಯೂಮ್ 1 ಮತ್ತು ಯಂಗ್ ಬಕೆಟ್‌ಹೆಡ್‌ ವಾಲ್ಯೂಮ್ 2 , ಇವು 1990 ಮತ್ತು 1991ರ ಅಪರೂಪದ ಚಿತ್ರಗಳನ್ನು ಒಳಗೊಂಡಿವೆ. ಈ DVDಗಳು ಡೆಲಿ ಕ್ರೀಪ್ಸ್‌‌ನ ಮೂರು ಸಂಪೂರ್ಣ ಪ್ರದರ್ಶನಗಳು, ಒಂದು ಧ್ವನಿ ಪರೀಕ್ಷೆ, ತೆರೆಮರೆಯ ಚಿತ್ರ ಮತ್ತು ಬಕೆಟ್‌ಹೆಡ್‌ನ ಒಂಟಿ-ಚಿತ್ರ ಮೊದಲಾದವನ್ನು ಹೊಂದಿವೆ. ಆತನು ದಿ ಎಲಿಫ್ಯಾಂಟ್ ಮ್ಯಾನ್ಸ್ ಅಲಾರ್ಮ್ ಕ್ಲಾಕ್‌ ಮತ್ತು ಕ್ರೈಮ್ ಸ್ಲಂಕ್ ಸೀನ್‌ ಆಲ್ಬಂಗಳನ್ನೂ ಬಿಡುಗಡೆಗೊಳಿಸಿದನು, ಇವೆರಡೂ ಅವನ ಪ್ರವಾಸದ ಸಂದರ್ಭಗಳಲ್ಲಿ ಮಾರಾಟವಾದವು, ನಂತರ TDRS ಮ್ಯೂಸಿಕ್ ವೆಬ್‌ಸೈಟ್‌ನಲ್ಲಿ ಮಾರಾಟವಾದವು. ಕೊನೆಯ ಆಲ್ಬಂ "ಸೂತ್‌ಸೇಯರ್(ಆತನ ಆಂಟಿ ಸ್ಯೂಜಿಗೆ ಸಮರ್ಪಿಸಲಾಗಿತ್ತು)" ಎಂಬ ಹಾಡನ್ನು ಒಳಗೊಂಡಿದೆ; ಈ ಹಾಡು ("ಜೋರ್ಡಾನ್" ಮತ್ತು "ನಾಟ್ಟಿಂಗ್ಹ್ಯಾಮ್ ಲೇಸ್" ಒಂದಿಗೆ) ಆತನ ಹೆಚ್ಚು ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ ಮತ್ತು ಇದನ್ನು ನೇರ ಪ್ರದರ್ಶನದಲ್ಲಿ ಹೆಚ್ಚಾಗಿ ನುಡಿಸಲಾಗಿದೆ.

ಅದೇ ವರ್ಷದಲ್ಲಿ ಬಕೆಟ್‌ಹೆಡ್‌ ಸೆಲೆಬ್ರಿಟಿ ಸೈಕೋಸ್ ಎಂಬ ಕಾರ್ನ್‌ಬಗ್ಸ್‌ ವಾದ್ಯ-ವೃಂದದೊಂದಿಗಿನ ಆತನ ಅಂತಿಮ ಸಂಕಲನ-ಆಲ್ಬಂನ್ನು ಬಿಡುಗಡೆಗೊಳಿಸಿದನು. ಆತನು ನಿರ್ಮಾಪಕ, ಕೀಬೋರ್ಡ್-ವಾದಕ ಮತ್ತು TDRS ಮ್ಯೂಸಿಕ್ ಲೇಬಲ್‌ನ ಮಾಲೀಕ ಟ್ರಾವಿಸ್ ಡಿಕರ್ಸನ್‌ ಒಂದಿಗೆ ಚಿಕನ್ ನೂಡಲ್ಸ್ ಎಂಬ ಹೆಸರಿನ ಒಂದು ಆಲ್ಬಂನ್ನು ಬಿಡುಗಡೆಗೊಳಿಸಿದನು. ಅದು ಪಾಪ್ಯುಲೇಶನ್ ಓವರ್‌ರೈಡ್‌ ಆಲ್ಬಂನ "ಕ್ರುಯೆಲ್ ರಿಯಾಲಿಟಿ ಆಫ್ ನೇಚರ್" ಎಂಬ ಹಾಡಿನಿಂದ ಸ್ಫೂರ್ತಿಯನ್ನು ಪಡೆದಿತ್ತು. ಆತನು ತನಟಾಪ್ಸಿಸ್‌ ವಾದ್ಯ-ವೃಂದದೊಂದಿಗೂ ಅನಾಟೊಮೈಜ್ ಎಂಬ ಹೆಸರಿನ ಒಂದು ಆಲ್ಬಂನ್ನು ಬಿಡುಗಡೆಗೊಳಿಸಿದನು.

2007–2008: ಮುಂದುವರೆದ ಸೋಲೋ ಕಾರ್ಯಗಳು

[ಬದಲಾಯಿಸಿ]
ಇನ್ ಸರ್ಚ್ ಆಫ್ ದಿ ಸಂಗ್ರಹ-ಆಲ್ಬಂ, ಬಕೆಟ್‌ಹೆಡ್‌ನ 13 ಆಲ್ಬಂಗಳ ಒಂದು ಸೆಟ್, ಪ್ರತಿಯೊಂದು ಕಾಪಿಯ ಹೊರಕವಚದ ಮೇಲೆ ವಿಭಿನ್ನವಾಗಿ ಕೈಯಿಂದ ಚಿತ್ರ ಬಿಡಿಸಲಾಗಿದೆ.

2007ರಲ್ಲಿ, ಬಕೆಟ್‌ಹೆಡ್‌ ಅಭೂತಪೂರ್ವ ಪ್ರಮಾಣದಲ್ಲಿ ಹೊಸ ಆಲ್ಬಂಗಳನ್ನು ಬಿಡುಗಡೆಗೊಳಿಸಿದನು. ಫೆಬ್ರವರಿಯಲ್ಲಿ, ಹಿಂದಿನ 13 ಆಲ್ಬಂಗಳನ್ನೊಳಗೊಂಡ ಇನ್ ಸರ್ಚ್ ಆಫ್ ದಿ ಎಂಬ ಶೀರ್ಷಿಕೆಯ ಒಂದು ಸಂಗ್ರಹ-ಆಲ್ಬಂ ಬಿಡುಗೊಂಡಿತು. ಇದನ್ನು ಬಕೆಟ್‌ಹೆಡ್‌ನೇ ಸ್ವತಃ ಕೈಕಸುಬಿನಿಂದ ತಯಾರಿಸಿದ್ದನು, ಸಂಖ್ಯೆಗಳನ್ನು ನೀಡಿದ್ದನು ಮತ್ತು ಸಂಯುಕ್ತಾಕ್ಷರ ಕೂಡಿಸಿದ್ದನು ಹಾಗೂ ಇದು ಸುಮಾರು ಒಂಬತ್ತು ಗಂಟೆಗಳ ಸಂಗೀತವನ್ನು ಒಳಗೊಂಡಿದೆ. ಒಂದು ನಿಯತ ಏಕಾಂಗಿಯಾಗಿ-ನಿರ್ವಹಿಸಿದ ಆಲ್ಬಂ ಪೆಪ್ಪರ್ಸ್ ಘೋಸ್ಟ್ ಮಾರ್ಚ್‌ನಲ್ಲಿ ಬಿಡುಗೊಂಡಿತು. ಅಕೌಸ್ಟಿಕ್ ಶಾರ್ಡ್ಸ್‌ ಎಂಬ ಧ್ವನಿ-ಆಶುರಚನೆಗಳ ಒಂದು ಡಿಸ್ಕ್ ಸಹ ಪ್ರಕಟಗೊಂಡಿತು, ಇದು ಅವನ ಅವನ ವೃತ್ತಿ ಜೀವನದಲ್ಲಿ ಬಿಡುಗಡೆಗೊಳಿಸಿದ ಇಪ್ಪತ್ತನೇ ಸ್ಟುಡಿಯೊ ಆಲ್ಬಂ ಆಯಿತು. ಈ ವರ್ಷದ ಮಧ್ಯದಲ್ಲಿ ಅವನು ಅವನ ಡೆಮೊ ಟೇಪ್ ಬಕೆಟ್‌ಹೆಡ್‌ಲ್ಯಾಂಡ್ ಬ್ಲೂಪ್ರಿಂಟ್ಸ್‌ ‌ಅನ್ನು ಎರಡು ಪರ್ಯಾಯ ಆಲ್ಬಂ ಮುಖಪುಟಗಳೊಂದಿಗೆ ಮತ್ತೊಮ್ಮೆ ಪ್ರಕಟಿಸಿದನು: ಆತನೇ ಸ್ವತಃ ಕೈಯಿಂದ-ಚಿತ್ರಿಸಿದ ಮುಖಪುಟವನ್ನೊಳಗೊಂಡ ಒಂದು ವಿಶೇಷ ಆವೃತ್ತಿ ಅಥವಾ ಮೂಲ ಮುಖಪುಟ ಚಿತ್ರವನ್ನು ಒಳಗೊಂಡ ಪ್ರಮಾಣಕ ಆವೃತ್ತಿ. ಅಕ್ಟೋಬರ್‌ನಲ್ಲಿ ಅವನ ಆ ವರ್ಷದ ಅಂತಿಮ ಎರಡು ಆಲ್ಬಂಗಳನ್ನು ಬಿಡುಗಡೆಗೊಳಿಸಿದನು, ಅವುಗಳೆಂದರೆ ಡಿಕೋಡಿಂಗ್ ದಿ ಟಾಂಬ್ ಆಫ್ ಬ್ಯಾನ್ಶೀಬಾಟ್‌ ಮತ್ತು ಸೈಬಾರ್ಗ್ ಸ್ಲಂಕ್ಸ್‌ . ಸೈಬಾರ್ಗ್ ಸ್ಲಂಕ್ಸ್ ಆಲ್ಬಂ ಕೈಯಿಂದ-ಚಿತ್ರಿಸಿದ ಸೀಮಿತ ಆವೃತ್ತಿಯಲ್ಲಿ ಮತ್ತು (ಕೆಲವು ವಾರಗಳ ನಂತರ) ಸಾಮಾನ್ಯ CDಯಾಗಿ ಮತ್ತೊಮ್ಮೆ ಬಿಡುಗಡೆಗೊಂಡಿತು.

ಡೆತ್ ಕ್ಯೂಬ್‌ K ಆಗಿ ಬಕೆಟ್‌ಹೆಡ್‌ 2007ರಲ್ಲಿ ಎರಡು ಆಲ್ಬಂಗಳನ್ನು ಬಿಡುಗಡೆಗೊಳಿಸಿದನು: DCK ಎಂಬ ಒಂದು ಆಲ್ಬಂ 400 ಕೈಯಿಂದ-ಸಂಖ್ಯೆ ನೀಡಿದ ನಕಲುಗಳನ್ನು ಒಳಗೊಂಡಿತ್ತು ಮತ್ತು ಇದು ಆಗಸ್ಟ್‌ನಲ್ಲಿ ಪ್ರಕಟಗೊಂಡಿತು; ಹಾಗೂ ಪ್ರತಿ CDಯಲ್ಲಿ ಒಂದು ನಿರಂತರ-ಹಾಡನ್ನು ಒಳಗೊಂಡ 5-CD ಸಂಗ್ರಹ-ಆಲ್ಬಂ ಮೋನೋಲಿತ್ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿತು.[೨೭]

2007ರಲ್ಲಿ ಬಕೆಟ್‌ಹೆಡ್‌ ಇತರ ಕಲಾವಿದರ ಸಹಯೋಗದೊಂದಿಗೆ ಹಲವಾರು ಆಲ್ಬಂಗಳಲ್ಲಿ ಕಾಣಿಸಿಕೊಂಡನು. ಚಿಕನ್ ನೂಡಲ್ಸ್ II ಎಂಬ ಚಿಕನ್ ನೂಡಲ್ಸ್ ‌ನ ಉತ್ತರ-ಭಾಗ (ಟ್ರಾವಿಸ್ ಡಿಕರ್ಸನ್‌ ಒಂದಿಗೆ) TDRSನಿಂದ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿತು.[೨೮] ಟೆನ್ನೆಸ್ಸೀ 2004 ಎಂಬ ಪ್ರ್ಯಾಕ್ಸಿಸ್‌‌ನಿಂದ ಒಂದು ನೇರ-ಧ್ವನಿಮುದ್ರಣ, ಲೈಟ್‌ಯಿಯರ್ಸ್ ಎಂಬ ಶೀರ್ಷಿಕೆಯ ಶಿನ್ ಟೆರೈ‌ ಒಂದಿಗಿನ ಮೂರನೇ ಆಲ್ಬಂ ಹಾಗೂ ಕೆವಿನ್ಸ್ ನೂಡಲ್ ಹೌಸ್ ಎಂಬ ಡ್ರಮ್-ವಾದಕ ಬ್ರಿಯಾನ್ ಮಾಂಟಿಯ ಒಂದಿಗಿನ ಮತ್ತೊಂದು ಆಲ್ಬಂ ಸಹ ಈ ವರ್ಷದಲ್ಲೇ ಬಿಡುಗಡೆಗೊಂಡವು.

ಬಕೆಟ್‌ಹೆಡ್‌ ಐದು ವರ್ಣಚಿತ್ರಗಳನ್ನೂ ರಚಿಸಿದನು, ಪ್ರತಿಯೊಂದನ್ನು 100 ನಕಲುಗಳಾಗಿ ಮಾಡಲಾಯಿತು ಮತ್ತು TDRSನ ಮೂಲಕ ಮಾರಾಟವಾದವು.[೨೯]

ಅದೇ ವರ್ಷದಲ್ಲಿ, ಬಕೆಟ್‌ಹೆಡ್‌ ಸೈನ್ಸ್ ಫ್ಯಾಕ್ಶನ್‌ ಎಂಬ ಹೆಸರಿನಲ್ಲಿ ವಾದ್ಯ-ವೃಂದವೊಂದನ್ನು ಸಂಯೋಜಿಸಿದನು ಎಂಬುದು ಬಹಿರಂಗಗೊಂಡಿತು, ಈ ವಾದ್ಯ-ವೃಂದವು ಬೇಸ್-ವಾದ್ಯಗಾರ ಬೂಟ್ಸಿ ಕೊಲಿನ್ಸ್‌, ಡ್ರಮ್-ವಾದಕ ಬ್ರಿಯಾನ್ "ಬ್ರೈನ್" ಮಾಂಟಿಯ ಮತ್ತು ಪ್ರಮಖ ಗಾಯಕ ಗ್ರೆಗ್ ಹ್ಯಾಂಪ್ಟನ್ ಮೊದಲಾದವರನ್ನು ಒಳಗೊಂಡಿತ್ತು. ಈ ವಾದ್ಯ-ವೃಂದದ ಮೊದಲ ಆಲ್ಬಂ ಲಿವಿಂಗ್ ಆನ್ ಎನದರ್ ಫ್ರೀಕ್ವೆನ್ಸಿ ಯ ಬಿಡುಗಡೆಯು ಹಲವು ಬಾರಿ ಮುಂದೂಡಲ್ಪಟ್ಟಿತು ಮತ್ತು ಅಂತಿಮವಾಗಿ 2008ರ ನವೆಂಬರ್‌ನಲ್ಲಿ ಬಿಡುಗಡೆಗೊಂಡಿತು.

2008ರ ಜನವರಿಯಲ್ಲಿ, ಪ್ರ್ಯಾಕ್ಸಿಸ್‌ ವಾದ್ಯ-ವೃಂದವು ಜಪಾನಿನಲ್ಲಿ ಬಹು-ನಿರೀಕ್ಷಿತ ಆಲ್ಬಂ ಪ್ರೊಫನೇಶನ್ (ಮುಂಬರುವ ಕತ್ತಲೆಗೆ ಸಿದ್ಧತೆ) ಅನ್ನು ಪ್ರಕಟಿಸಿತು. ಈ ಆಲ್ಬಂನ್ನು ನಿಜವಾಗಿ 2005ರಲ್ಲಿ ಧ್ವನಿಮುದ್ರಣ ಮಾಡಲಾಗಿತ್ತು, ಆದರೆ ಮೂಲ ಲೇಬಲ್ ದಿವಾಳಿಯೆದ್ದುದರಿಂದ ಅದರ ಬಿಡುಗಡೆಯನ್ನು ತಡೆಹಿಡಿಯಲಾಯಿತು.

ಚಿತ್ರ:Buckethead Painting -1.jpg
2007ರಲ್ಲಿ ಪ್ರಕಟವಾದ ಬಕೆಟ್‌ಹೆಡ್‌ನ ವರ್ಣಚಿತ್ರ #1.

2008ರ ಆರಂಭದಲ್ಲಿ ಫ್ರಮ್ ದಿ ಕೂಪ್‌ ಆಲ್ಬಂ ಅವಬೆಲ್ಲಾ ಲೇಬಲ್‌ನ (ಇದರಲ್ಲಿ ಆತನು ಅಕೌಸ್ಟಿಕ್ ಶಾರ್ಡ್ಸ್‌ ಅನ್ನು ಬಿಡುಗಡೆಗೊಳಿಸಿದ್ದನು) ಮೂಲಕ ಬಿಡುಗಡೆಗೊಂಡಿತು, ಇದು ಬಕೆಟ್‌ಹೆಡ್‌ 1988ರಲ್ಲಿ ಜ್ಯಾಸ್ ಒಬ್ರೆಚ್ಟ್‌ಗಾಗಿ ನೀಡಿದ ಡೆಮೊಗಳನ್ನು ಒಳಗೊಂಡಿತ್ತು. ಈ CDಯು ಆತನೇ ಬರೆದ ಮೊದಲ "ಅಧಿಕೃತ" ಆತ್ಮಚರಿತ್ರೆಯನ್ನೂ ಒಳಗೊಂಡಿತ್ತು. ಅದೇ ವರ್ಷದಲ್ಲಿ ನಂತರ ಆತನು ಆಲ್ಬಿನೊ ಸ್ಲಗ್‌ ಎಂಬ ಆಲ್ಬಂನ ಬಿಡುಗಡೆಯನ್ನು ಪ್ರಕಟಿಸಿದನು (ಇದು ಅದೇ ವರ್ಷದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವವರೆಗೆ ಪ್ರವಾಸಕ್ಕೆ-ಮೀಸಲಾದ CDಯಾಗಿತ್ತು). ಆ ಆಲ್ಬಂ ಜೊತೆಗೆ ಆತನು ಡಿಕರ್ಸನ್ ಮತ್ತು ಮಾಂಟಿಯ ಒಂದಿಗೆ ದಿ ಡ್ರ್ಯಾಗನ್ಸ್ ಆಫ್ ಎಡೆನ್ ಎಂಬ ಆಲ್ಬಂನಲ್ಲೂ ಕಾಣಿಸಿಕೊಂಡನು ಹಾಗೂ ಫ್ರ್ಯಾಂಕೆನ್‌ಸ್ಟೇನ್ ಬ್ರದರ್ಸ್ ಆಗಿ ದ್ಯಾಟ್ 1 ಗೇ ಸಹಯೋಗದೊಂದಿಗೆ ಬೋಲ್ಟ್ ಆನ್ ನೆಕ್ ಎಂಬ ಆಲ್ಬಂ ಬಿಡುಗಡೆಗೊಂಡಿತು. ದ್ಯಾಟ್ 1 ಗೇ ಮತ್ತು ಬಕೆಟ್‌ಹೆಡ್‌ ಜೊತೆಯಾಗಿ 2008ರ ಕೊನೆಯಲ್ಲಿ ಈ ಆಲ್ಬಂನ ಹಾಡುಗಳನ್ನು ನುಡಿಸುತ್ತಾ ಪ್ರವಾಸ ಮಾಡಿದರು.

ಬಕೆಟ್‌ಹೆಡ್‌ American Music: Off the Record ಎಂಬ ಸಾಕ್ಷ್ಯಚಿತ್ರದಲ್ಲೂ ಕಾಣಿಸಿಕೊಂಡನು, ಇದರಲ್ಲಿ ಆತನು ಕೇವಲ ವಾದಕನಾಗಿ ಕಾಣಿಸಿಕೊಂಡಿದ್ದಾನೆ.[೩೦] ಸರ್ಜ್ ಟ್ಯಾಂಕಿಯನ್‌‌ನ ಲೇಬಲ್ ಸರ್ಜಿಕಲ್ ಸ್ಟ್ರೈಕ್, ಎಂಟರ್ ದಿ ಚಿಕನ್‌ ಎಂಬ ಆಲ್ಬಂನ್ನು ಒಂದು ಹೆಚ್ಚುವರಿ ಹಾಡಿನೊಂದಿಗೆ ಮತ್ತೊಮ್ಮೆ ಪ್ರಕಟಿಸಿತು. ಅಷ್ಟೇ ಅಲ್ಲದೆ ಬಕೆಟ್‌ಹೆಡ್‌ ನಟ ವಿಗ್ಗೊ ಮಾರ್ಟೆನ್ಸನ್‌‌ನ ಆಲ್ಬಂ ಅಟ್ ಆಲ್ ‌ನ ಒಂದು ಹಾಡಿಗೆ ತನ್ನ ಕೊಡುಗೆಯನ್ನು ನೀಡಿದ್ದಾನೆ ಹಾಗೂ ಟ್ರಾವಿಸ್ ಡಿಕರ್ಸನ್‌ ಮತ್ತು ಚಿತ್ರನಿರ್ಮಾಪಕ ಅಲಿಕ್ಸ್ ಲ್ಯಾಂಬರ್ಟ್ ಒಂದಿಗೆ ರನ್ನಿಂಗ್ ಆಫ್ಟರ್ ಡೀರ್ ಎಂಬ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾನೆ.

ಬಕೆಟ್‌ಹೆಡ್‌ 2008ರ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಕ್ ದಿ ವೋಟ್‌ ಸಂಸ್ಥೆಗಾಗಿ ಮತ ಯಾಚಿಸಲು ಬೂಟ್ಸಿ ಕೊಲಿನ್ಸ್‌ ಒಂದಿಗೆ ಓಹಿಯೊದ ಸಿನ್ಸಿನಟಿಯಲ್ಲಿ ಕಾಣಿಸಿಕೊಂಡನು.[೩೧] ಆತನು ಫಾಲನ್ ಸೋಲ್ಜರ್ಸ್ ಮೆಮೋರಿಯಲ್ ಎಂಬ ಆಲ್ಬಂನಲ್ಲೂ ಕೊಲಿನ್ಸ್ ಒಂದಿಗೆ ಜೊತೆಗೂಡಿದನು, ಈ ಆಲ್ಬಂನ ಮಾರಾಟದಿಂದ ಬಂದ ಲಾಭವನ್ನು ನ್ಯಾಷನಲ್ ಫಾಲನ್ ಹೀರೋಸ್ ಫೌಂಡೇಶನ್‌ ‌ಗೆ ನೀಡಲಾಯಿತು.[೩೨]

ಆತನು ಗನ್ಸ್ N' ರೋಸಸ್ ವಾದ್ಯ-ವೃಂದವನ್ನು ಬಿಟ್ಟುಹೋದ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲದ ನಂತರ ಚೈನೀಸ್ ಡೆಮೊಕ್ರಸಿ ಯನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಬಕೆಟ್‌ಹೆಡ್‌ ಎರಡು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾನೆ ಹಾಗೂ "ಶಾಕ್ಲರ್ಸ್ ರಿವೆಂಜ್" (ಇದು ಪ್ರಸಿದ್ಧ ವೀಡಿಯೊ ಗೇಮ್ ರಾಕ್ ಬ್ಯಾಂಡ್ 2 ರಲ್ಲಿ ಕಂಡುಬಂದಿದೆ), "ಸ್ಕ್ರ್ಯಾಪ್ಡ್" ಮತ್ತು "ಸಾರಿ" ಎಂಬ ಹಾಡುಗಳನ್ನು ಬರೆದ ಪ್ರಶಂಸೆಗೆ ಪಾತ್ರನಾಗಿದ್ದಾನೆ, "ಸಾರಿ" ಹಾಡು ಅತಿಥಿ ಗಾಯಕ ಸೆಬಸ್ಟಿಯನ್ ಬ್ಯಾಚ್‌ನನ್ನು ಒಳಗೊಂಡಿದೆ. ಈ ಆಲ್ಬಂ ಹನ್ನೊಂದು ಬಕೆಟ್‌ಹೆಡ್‌ನ ಗಿಟಾರ್‌-ಏಕಾಂಗಿ-ನಿರ್ವಹಣೆಗಳನ್ನು(ಗಿಟಾರ್-ಸೋಲೋ) ಹೊಂದಿದೆ.

2009: MJ ಸಾವಿನ ಗೌರವ ಮತ್ತು ಸಿಗ್ನೇಚರ್ ಲೆಸ್ ಪಾಲ್

[ಬದಲಾಯಿಸಿ]

2008ರ ಡಿಸೆಂಬರ್ 30ರಂದು, ಬಕೆಟ್‌ಹೆಡ್‌ ಅವನ ವೆಬ್‌ಸೈಟ್‌ನ ಮೂಲಕ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್‌ನ 24ನೇ ಜನ್ಮದಿನದ ಗೌರವಸೂಚಕವಾಗಿ ಎರಡು ಹೊಸ ಹಾಡುಗಳನ್ನು ಬಿಡಗಡೆಗೊಳಿಸಿದನು.[೩೩][೩೪] ಈ ಹಾಡುಗಳನ್ನು ನಂತರ ಸ್ಲಾಟರ್‌ಹೌಸ್ ಆನ್ ದಿ ಪ್ರೇರಿ ಎಂಬ ಆಲ್ಬಂನಲ್ಲಿ ಲಭ್ಯವಾಗುವಂತೆ ಮಾಡಲಾಯಿತು, ಇದು ಒಂದು ತಿಂಗಳ ನಂತರ TDRS ಮ್ಯೂಸಿಕ್‌ನ ಮೂಲಕ ಬಿಡುಗಡೆಯಾಯಿತು. ನಂತರ 2009ರ ಮೇಯಲ್ಲಿ ಆತನು ಎ ರಿಯಲ್ ಡೈಮಂಡ್ ಇನ್ ದಿ ರಫ್ ಎಂಬ ಆಲ್ಬಂನ್ನು ಹಾಗೂ ಸ್ವಲ್ಪ ದಿನಗಳ ನಂತರ ಮತ್ತೊಂದು ಆಲ್ಬಂ ಫೋರೆನ್ಸಿಕ್ ಫೋಲ್ಲೀಸ್‌ ಅನ್ನು ಬಿಡುಗಡೆಗೊಳಿಸಿದನು, ಇದು ಮೊದಲು ಆತನ ಕೆಲವು ಪ್ರವಾಸದ ದಿನಗಳಲ್ಲಿ ಮಾರಾಟವಾಯಿತು, ಆದರೆ ನಂತರ TDRSನ ಮೂಲಕ ಬಿಡುಗಡೆಗೊಂಡಿತು.

ಬಕೆಟ್‌ಹೆಡ್‌ ಆತನ ವೆಬ್‌ಸೈಟ್‌ನಲ್ಲಿ "ದಿ ಹೋಮಿಂಗ್ ಬೀಕನ್" ಎಂಬ ಶೀರ್ಷಿಕೆಯ ಹಾಡೊಂದನ್ನು ಬಿಡುಗಡೆಗೊಳಿಸಿದನು, ಅದರೊಂದಿಗೆ ಮೈಕೆಲ್ ಜ್ಯಾಕ್ಸನ್‌‌ನ ಸಾವಿನ ಸುದ್ಧಿಯನ್ನು ಕೇಳಿದ ನಂತರ ಆತನಿಗೆ ಗೌರವ ಸಲ್ಲಿಸಲು ಆ ಗಾಯಕನ ಚಿತ್ರವನ್ನೂ ಪ್ರಕಟಿಸಿದನು.

ಫೋರೆನ್ಸಿಕ್ ಫೋಲ್ಲೀಸ್‌ನ ಭರ್ಜರಿ ಯಶಸ್ಸಿನ ನಂತರ ಆತನು ಸೆಪ್ಟೆಂಬರ್‌ನಲ್ಲಿ ನೀಡಲ್ ಇನ್ ಎ ಸ್ಲಂಕ್ ಸ್ಟ್ಯಾಕ್ಅನ್ನು ಬಿಡುಗಡೆಗೊಳಿಸಿದನು ಹಾಗೂ ಒಂದು ತಿಂಗಳ ನಂತರ ಡೆತ್ ಕ್ಯೂಬ್‌ K ಆಗಿ ಬಹುನಿರೀಕ್ಷಿತ-ಆಲ್ಬಂ ಟೋರ್ನ್ ಫ್ರಮ್ ಬ್ಲ್ಯಾಕ್ ಸ್ಪೇಸ್ ಅನ್ನು ಪ್ರಕಟಿಸಿದನು.

ಆ ವರ್ಷದ ಕೊನೆಯಲ್ಲಿ ನವೆಂಬರ್ 13ರಂದು ಗಿಬ್ಸನ್‌ ಬಕೆಟ್‌ಹೆಡ್‌ ಸಿಗ್ನೇಚರ್ ಲೆಸ್ ಪಾಲ್ಅನ್ನು ಬಿಡುಗಡೆಗೊಳಿಸಿದನು.[೩೫] ಈ ಗಿಟಾರ್ ಆ ತಿಂಗಳಾದ್ಯಂತ ಬಿಡುಗಡೆ ಮಾಡಲಾದ ಆಲ್ಬಂಗಳ ಸರಣಿ ಒಂದು ಭಾಗವಾಗಿತ್ತು. ಡಿಸೆಂಬರ್‌ನಲ್ಲಿ ಆತನು ಐಕೊನೊಗ್ರಫಿ ಎಂಬ ಟ್ರಾವಿಸ್ ಡಿಕರ್ಸನ್‌‌ನ (TDRS ಮ್ಯೂಸಿಕ್‌ ಲೇಬಲ್‌ನ ಸ್ಥಾಪಕ, ಇದರಲ್ಲಿ ಇದುವರೆಗೆ ಬಕೆಟ್‌ಹೆಡ್‌ ಅವನ ಹಲವಾರು ಆಲ್ಬಂಗಳನ್ನು ಬಿಡುಗಡೆಗೊಳಿಸಿದ್ದಾನೆ) ಪ್ರಥಮ ಆಲ್ಬಂನಲ್ಲಿ ಜತೆಗೂಡಿದನು.

2010: ಅನಾರೋಗ್ಯದಿಂದಾಗಿ ವಿರಾಮ

[ಬದಲಾಯಿಸಿ]

2010ರ ಫೆಬ್ರವರಿಯಲ್ಲಿ ಬಕೆಟ್‌ಹೆಡ್‌ ಶ್ಯಾಡೊ ಬಿಟ್ವೀನ್ ದಿ ಸ್ಕೈ ಎಂಬ ಒಂದು ಆಲ್ಬಂನ್ನು ಬಿಡುಗಡೆಗೊಳಿಸಿದನು ಹಾಗೂ ಆ ತಿಂಗಳ ನಂತರ ಗಿಬ್ಸನ್‌ ಬಕೆಟ್‌ಹೆಡ್‌ ಸಿಗ್ನೇಚರ್ ಲೆಸ್ ಪಾಲ್ಅನ್ನು ಬಿಡುಗಡೆಗೊಳಿಸಿದನು.

2010ರ ಎಪ್ರಿಲ್‌ನಲ್ಲಿ, ಬಕೆಟ್‌ಹೆಡ್‌‌ನ ವೆಬ್‌ಸೈಟ್‌ ಈ ಕೆಳಗಿನ ಸಂದೇಶದೊಂದಿಗೆ ನವೀಕರಿಸಲ್ಪಟ್ಟಿತು[೩೬] - "ಬಕೆಟ್‌ಹೆಡ್‌ಲ್ಯಾಂಡ್‌ನಿಂದ ಶುಭಾಶಯಗಳು... ಬಕೆಟ್‌ಹೆಡ್‌ ಈ ಎಲ್ಲಾ ವರ್ಷಗಳಲ್ಲಿ ನೀವು ನೀಡಿದ ಬೆಂಬಲಕ್ಕಾಗಿ ಕೃತಜ್ಞನಾಗಿರುವುದನ್ನು ತಿಳಿಸಲು ಬಯಸುತ್ತಾನೆ. ಬಕೆಟ್‌ಹೆಡ್‌ ಸ್ಥಾನ-ಆಕ್ರಮಿಸಿಕೊಂಡ ಆನಿಮ್ಯಾಟ್ರೋನಿಕ್ ಭಾಗಗಳನ್ನು ಹೊಂದಿದ್ದಾನೆ ಹಾಗೂ ಪಾರ್ಕ್‌ಗೆ ಸ್ಲಿಪ್ ಡಿಸ್ಕ್ ಗುಟ್ಟಾಗಿ ನುಸುಳಿ, ಹಾನಿಯನ್ನು ಉಂಟುಮಾಡಿದೆ." ಸ್ಲಿಪ್ ಡಿಸ್ಕ್‌ನ ಉಲ್ಲೇಖವು ಬಕೆಟ್‌ಹೆಡ್‌ಲ್ಯಾಂಡ್ ಆಲ್ಬಂನಲ್ಲಿ ಕಂಡುಬಂದ ಬಕೆಟ್‌ಹೆಡ್‌ಲ್ಯಾಂಡ್‌ನ ದುಃಸ್ಥಿತಿಯ ಸೂಚನೆಯಾಗಿದೆ.

ಮೇಯಲ್ಲಿ, ಸರಳ ಭಾವುಕ ಸಂಗೀತ ಬೇಸ್-ವಾದ್ಯಗಾರ ಬೂಟ್ಸಿ ಕೊಲಿನ್ಸ್‌, ಕೆಲವು ಅಭಿಮಾನಿಗಳು ಬಕೆಟ್‌ಹೆಡ್‌ನ ಸಂಗೀತವು ಇತ್ತೀಚೆಗೆ ಕಂಡಬರದಿರುವ ಬಗ್ಗೆ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದರೊಂದಿಗೆ ಬಕೆಟ್‌ಹೆಡ್‌ನ ಸ್ಥಿತಿಯ ಬಗೆಗಿನ ಕೆಲವು ಮಾಹಿತಿಗಳನ್ನು[೩೭] ಬಹಿರಂಗಗೊಳಿಸಿದನು. ಆ ಮಾಹಿತಿಗಳು ಹೀಗಿದ್ದವು - "ನಾನು ನನ್ನ ಆಪ್ತಮಿತ್ರ ಬಕೆಟ್‌ಹೆಡ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಅವನು ಅತಿ ಶೀಘ್ರದಲ್ಲಿ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ಅವನು ಈಗ ಸ್ವಲ್ಪ ಚೇತರಿಸಿಕೊಂಡಿದ್ದಾನೆ!" ಇದರೊಂದಿಗೆ, "ಅಸ್ಥಿಪಂಜರದ ಸಮಸ್ಯೆಯು ಅವನನ್ನು ಮುನ್ನಡೆಯಿಂದ ಕೆಲವು ಹೆಜ್ಜೆ ಹಿಂದಕ್ಕೆ ಸರಿಯುವಂತೆ ಮಾಡಿದೆ, ಆದರೆ ನಿಮ್ಮೆಲ್ಲರ ಬೆಂಬಲದಿಂದ ಅವನು ಮತ್ತೆ ಸಂಗೀತಕ್ಕೆ ಹಿಂದಿರುಗಿ ಬರುತ್ತಾನೆ." ಅಂತಿಮವಾಗಿ, "ನೀವು ನಿಮ್ಮ ಬಗ್ಗೆ ಎಚ್ಚರಿಕೆ ವಹಿಸಿದರೂ ಜೀವನ ಪಥವು ನಿಮ್ಮನ್ನು ಸೋಲಿಸುತ್ತದೆ. ಆತನ ದೇಹದಾದ್ಯಂತವಿರುವ ನೋವು ಏನೆಂದು ವೈದ್ಯರಿಗೆ ಇದುವರೆಗೆ ತಿಳಿದಿಲ್ಲ!".

ಬಕೆಟ್‌ಹೆಡ್‌ನ ಚೇತರಿಕೆಗೆ ಸಂಬಂಧಿಸಿದಂತೆ ಕೊಲಿನ್ಸ್ ನಂತರ ಹೀಗೆಂದು ಪ್ರಕಟಿಸಿದನು: “ಹೇ ಬಕೆಟ್‌ಬಾಟ್ಸ್! ಇಂದು ನಾನು ಬಕೆಟ್‌ಹೆಡ್‌ ಜೊತೆಗೆ ಮಾತನಾಡಿದೆ. ಅವನು ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತಾನೆ. 3 ವಾರಗಳೊಳಗಾಗಿ ಅವನು ಸಂಗೀತ-ಕ್ಷೇತ್ರಕ್ಕೆ ಹಿಂದಿರುಗಿ ಬರುತ್ತಾನೆ”. ಬೂಟ್ಸಿಯು ಬಕೆಟ್‌ಹೆಡ್‌‌ ಚೇತರಿಸಿಕೊಳ್ಳುತ್ತಿದ್ದಾನೆಂದು ಹೇಳುತ್ತಾ ಆತನ ವೈದ್ಯಕೀಯ ಸ್ಥಿತಿಯ ಬಗ್ಗೆ ಜೂನ್ ತಿಂಗಳಾದ್ಯಂತ ಮಾಹಿತಿಗಳನ್ನು ಒದಗಿಸಿದನು.[೩೮][೩೯] ಅವನು ತನ್ನ ಹೊಸ ಆಲ್ಬಂ "ಬೂಟ್ಸಿ ಕೊಲಿನ್ಸ್‌ ಫಂಕ್ ಯೂನಿವರ್ಸಿಟಿ"ಯ "ಮೈಂಡ್ಸ್ ಅಂಡರ್ ಕಂಸ್ಟ್ರಕ್ಷನ್" ಎಂಬ ಹಾಡಿನಲ್ಲಿ ತನ್ನೊಂದಿಗೆ ಜತೆಗೂಡುತ್ತಾನೆಂದೂ ಹೇಳಿಕೆ ನೀಡಿದನು.[೪೦] ಜುಲೈನ ಮಾಹಿತಿ ಪ್ರಕಾರ, ಆತನು ದೈಹಿಕ ಚಿಕಿತ್ಸೆಗೆ ಒಳಗಾಗುತ್ತಾನೆ, ಆದ್ದರಿಂದ ಇನ್ನೂ ಕೆಲವು ತಿಂಗಳ ಕಾಲ ಸಂಗೀತದಿಂದ ದೂರ ಉಳಿಯುತ್ತಾನೆ[೪೧]. ಚಿಕಿತ್ಸೆಯನ್ನು ಪಡೆಯುತ್ತಿರುವಾಗಲೇ ಜುಲೈನಲ್ಲಿ ಬಕೆಟ್‌ಹೆಡ್‌ ಬ್ರೈನ್‌ ಮತ್ತು ಮೆಲ್ಲಿಸ ರೀಸಿಯ ಸಹಯೋಗದೊಂದಿಗೆ ಬೆಸ್ಟ್ ರಿಗಾರ್ಡ್ಸ್‌ನ ಮೊದಲ ಸಂಪುಟವನ್ನು 5-CDಗಳ ಒಂದು ಸಂಗ್ರಹ-ಆಲ್ಬಂನಲ್ಲಿ ಬಿಡುಗಡೆ ಮಾಡಿದನು.

ಆಗಸ್ಟ್ 22ರಂದು ಕೊಲಿನ್ಸ್ ಮತ್ತೆ ಬಕೆಟ್‌ಹೆಡ್‌ನ ಆರೋಗ್ಯದ ಬಗ್ಗೆ ಹೀಗೆಂದು ಪ್ರಕಟಿಸಿದನು - "ಕಳೆದ ವಾರ ನಾನು ಬಕೆಟ್‌ಹೆಡ್‌ನೊಂದಿಗೆ ಮಾತನಾಡಿದೆ, ಅವನು ಮತ್ತಷ್ಟು ಚೇತರಿಸಿಕೊಂಡಿದ್ದಾನೆ. ಅವನು ಹ್ಯಾಲೊವೀನ್‌ಗಿಂತ ಮೊದಲೇ ಆ ಅನಾರೋಗ್ಯದ ಬಂಧನದಿಂದ ಹೊರಬರುತ್ತಾನೆ!"[೪೨] ಬಕೆಟ್‌ಹೆಡ್‌ ಅವನ 28ನೇ ಮತ್ತು ಮೊದಲ ಬ್ಯಾಂಜೊ ಗಿಟಾರ್ ಆಲ್ಬಂ "ಸ್ಪೈನಲ್ ಕ್ಲಾಕ್"ಅನ್ನು TDRS ಮೂಲಕ ಸೆಪ್ಟೆಂಬರ್ 15ರಂದು ಅಥವಾ ಹತ್ತಿರದ ದಿನಾಂಕದಂದು ಬಿಡುಗಡೆಗೊಳಿಸುವುದಾಗಿ ಆಗಸ್ಟ್ 25ರಂದು ಪ್ರಕಟಿಸಿದನು. ಸೆಪ್ಟೆಂಬರ್ 2ರಂದು ಬಕೆಟ್‌ಹೆಡ್‌ 23 ಹೊಸ ಸೀಮಿತ ಆವೃತ್ತಿಯ ಶಾಯಿ-ವರ್ಣ-ಚಿತ್ರಗಳನ್ನು ಪ್ರಕಟಿಸಿದನು.[೪೩] ಈ ಪ್ರತಿಯೊಂದು ಚಿತ್ರಗಳು 12 x 9 ಇಂಚು ಚೌಕಟ್ಟಿನ ಕ್ಯಾನ್ವಾಸ್‌ನಲ್ಲಿದ್ದವು ಮತ್ತು ಪ್ರತಿಯೊಂದು $75 ಬೆಲೆಗೆ ಮಾರಾಟವಾದವು.

ಪ್ರಭಾವಗಳು

[ಬದಲಾಯಿಸಿ]

ಬಕೆಟ್‌ಹೆಡ್‌ ಹಲವಾರು ಸಂಗೀತದ ಪ್ರಮುಖ-ವ್ಯಕ್ತಿಗಳ ಪ್ರಭಾವವನ್ನು ಪಡೆದಿದ್ದಾನೆ, ಅವರೆಂದರೆ - ಮೈಕೆಲ್ ಜ್ಯಾಕ್ಸನ್‌, ಪಾಲ್ ಗಿಲ್ಬರ್ಟ್‌, ಶಾನ್ ಲಾನೆ, ಯಂಗ್ವೀ ಮಾಲ್ಮ್‌ಸ್ಟೀನ್, ಬೂಟ್ಸಿ ಕೊಲಿನ್ಸ್‌, ಎಡ್ಡೀ ಹ್ಯಾಜೆಲ್, ರಾಂಡಿ ರೋಡ್ಸ್ ಮತ್ತು ಅಂಗುಸ್ ಯಂಗ್. ಅಷ್ಟೇ ಅಲ್ಲದೆ ಆತನು ಹಲವಾರು ಕಲಾವಿದರೊಂದಿಗೆ ಜತೆಗೂಡಿ ಕೆಲಸ ಮಾಡಿದ್ದಾನೆ.[೪೪] ಸಂಗೀತದ ಪ್ರಭಾವಗಳನ್ನು ಮಾತ್ರವಲ್ಲದೆ ಬಕೆಟ್‌ಹೆಡ್‌ ವ್ಯಾಪಕವಾದ ಸಂಗೀತ-ಕ್ಷೇತ್ರಕ್ಕೆ ಸೇರದವುಗಳಿಂದಲೂ ಪ್ರಭಾವಕ್ಕೊಳಗಾಗಿದ್ದಾನೆ, ಉದಾ. ಕ್ರೀಡಾಪಡುಗಳಾದ ಮೈಕೆಲ್ ಜೋರ್ಡನ್ ಮತ್ತು ಲೆಬ್ರಾನ್ ಜೇಮ್ಸ್ ಹಾಗೂ ಜೈಂಟ್ ರೋಬೋಟ್ಅನ್ನೂ ಒಳಗೊಂಡಂತೆ ಹಲವಾರು ವೈಜ್ಞಾನಿಕ ಕಾಲ್ಪನಿಕ ಮತ್ತು ಭಯಾನಕ TV ಪ್ರದರ್ಶನಗಳು ಮತ್ತು ಚಲನಚಿತ್ರಗಳು.[೪೪]

ಇತ್ತೀಚಿನ ಬಿಡುಗಡೆಗಳು

[ಬದಲಾಯಿಸಿ]
  • ಜುಲೈನಲ್ಲಿ, ಬಕೆಟ್‌ಹೆಡ್‌ ಬ್ರಿಯಾನ್‌ ಮಾಂಟಿಯ ಮತ್ತು ಮೆಲ್ಲಿಸ ಒಂದಿಗೆ ಬೆಸ್ಟ್ ರಿಗಾರ್ಡ್ಸ್ ಎಂಬ ಶೀರ್ಷಿಕೆಯ 5-CDಗಳ ಒಂದು ಸಂಗ್ರಹ-ಆಲ್ಬಂನ್ನು ಬಿಡುಗಡೆಗೊಳಿಸಿದನು, ಇದು ಮೂರು ಸರಣಿಗಳ ಮೊದಲನೇ ಸಂಪುಟವಾಗಿದೆ.
  • ಆಗಸ್ಟ್‌ನಲ್ಲಿ, ಬಕೆಟ್‌ಹೆಡ್‌ ಹೊಸ ಆಲ್ಬಂ ಸ್ಪೈನಲ್ ಕ್ಲಾಕ್ಅನ್ನು ಪ್ರಕಟಿಸಿದನು.[೪೫]
  • ಸೆಪ್ಟೆಂಬರ್‌ನಲ್ಲಿ, ಬಕೆಟ್‌ಹೆಡ್‌ 23 ಹೊಸ ಸೀಮಿತ ಆವೃತ್ತಿಯ ಶಾಯಿ-ವರ್ಣ-ಚಿತ್ರಗಳನ್ನು ಪ್ರಕಟಿಸಿದನು. ಈ ಪ್ರತಿಯೊಂದು ಚಿತ್ರಗಳು 12 x 9 ಇಂಚು ಚೌಕಟ್ಟಿನ ಕ್ಯಾನ್ವಾಸ್‌ನಲ್ಲಿದ್ದವು ಮತ್ತು ಪ್ರತಿಯೊಂದು $75 ಬೆಲೆಗೆ ಮಾರಾಟವಾದವು, ಇನ್ನಷ್ಟು ವರ್ಣಚಿತ್ರಗಳು ಮುಂದಿನ ಕೆಲವು ವಾರಗಳಲ್ಲಿ ಪ್ರಕಟವಾಗಲಿವೆ.[೪೬]

ಗಿಟಾರ್‌ಗಳು

[ಬದಲಾಯಿಸಿ]

ಪರಿಣಾಮಗಳು

[ಬದಲಾಯಿಸಿ]

ಧ್ವನಿವರ್ಧಕಗಳು

[ಬದಲಾಯಿಸಿ]

ಪಿಕ್‌ಗಳು

[ಬದಲಾಯಿಸಿ]

ಧ್ವನಿಮುದ್ರಿಕೆ ಪಟ್ಟಿಗಳು

[ಬದಲಾಯಿಸಿ]
ಸ್ಟುಡಿಯೊ ಆಲ್ಬಂಗಳು

ವಿಶೇಷ ಬಿಡುಗಡೆಗಳು

ಬಕೆಟ್‌ಹೆಡ್‌ನ ವಾದ್ಯ-ವೃಂದಗಳು

[ಬದಲಾಯಿಸಿ]

ಟಿಪ್ಪಣಿ: 1992ರಿಂದ ಏಕಾಂಗಿ-ಕಲಾವಿದನಾಗಿರುವುದರೊಂದಿಗೆ ಬಕೆಟ್‌ಹೆಡ್‌ ಡೆತ್ ಕ್ಯೂಬ್‌ K ಆಗಿಯೂ ಕೆಲವು ಆಲ್ಬಂಗಳನ್ನು ಬಿಡುಗಡೆಗೊಳಿಸಿದ್ದಾನೆ. ಆತನು ಈ ಹೆಸರನ್ನು ಅಲಿಯಾಸ್ ಆಗಿ 1994ರಿಂದ ಬಳಸಿದನು (ಆತನು ಇದನ್ನು ಇತ್ತೀಚೆಗೆ ಬಳಸಿದುದು 2009ರಲ್ಲಿ).

ವಾದ್ಯ-ವೃಂದಗಳು

[ಬದಲಾಯಿಸಿ]
ಪ್ರಸ್ತುತ
  • ಪ್ರ್ಯಾಕ್ಸಿಸ್‌ (1992–ಇತ್ತೀಚಿನವರೆಗೆ)
  • ಶೈನ್/ಶಿನ್ ಟೆರೈ‌ (2001–ಇತ್ತೀಚಿನವರೆಗೆ)
  • ತನಟಾಪ್ಸಿಸ್‌ (2001–ಇತ್ತೀಚಿನವರೆಗೆ)
  • ಸೈನ್ಸ್ ಫ್ಯಾಕ್ಶನ್‌ (2007–ಇತ್ತೀಚಿನವರೆಗೆ)
  • ಫ್ರ್ಯಾಂಕೆನ್‌ಸ್ಟೇನ್ ಬ್ರದರ್ಸ್ (2008–ಇತ್ತೀಚಿನವರೆಗೆ)
  • ಡೆತ್ ಕ್ಯೂಬ್‌ K (1994–ಇತ್ತೀಚಿನವರೆಗೆ)
ಹಿಂದಿನ
  • ಡೆಲಿ ಕ್ರೀಪ್ಸ್‌ (1990–2005)
  • ಜಿಲ್ಲಾಟ್ರನ್‌ (1993)
  • ಕಾರ್ನ್‌ಬಗ್ಸ್‌ (1995–2007)
  • ಜೈಂಟ್ ರೋಬೋಟ್ (1996)
  • ಪೀಸಸ್‌ (1997)
  • ಕೋಬ್ರ ಸ್ಟ್ರೈಕ್‌ (1999–2000)
  • ಎಲ್ ಸ್ಟಿವ್ (1999–2003)
  • ಗನ್ಸ್ N' ರೋಸಸ್ (2000–2004)
  • ಕೊಲೊನೆಲ್ ಕ್ಲೇಪೂಲ್ಸ್ ಬಕೆಟ್ ಆಫ್ ಬರ್ನೀ ಬ್ರೈನ್ಸ್‌ (2002–2004)
  • ಬಕೆಟ್‌ಹೆಡ್‌ ಆಂಡ್ ಫ್ರೆಂಡ್ಸ್‌ (2005)
  • ಗಾರ್ಗೋನ್ (2005)

ಕಲಾವಿದರೊಂದಿಗೆ

[ಬದಲಾಯಿಸಿ]
ಪ್ರಸ್ತುತ
  • ವಿಗ್ಗೊ ಮಾರ್ಟೆನ್ಸನ್‌ ಒಂದಿಗೆ (1999, 2003–2005, 2008–ಇತ್ತೀಚಿನವರೆಗೆ)
  • ಟ್ರಾವಿಸ್ ಡಿಕರ್ಸನ್‌ ಒಂದಿಗೆ (2004–ಇತ್ತೀಚಿನವರೆಗೆ)
  • ಬ್ರೈನ್‌ (2007–ಇತ್ತೀಚಿನವರೆಗೆ)
ಹಿಂದೆ
  • ಜೊನಾಸ್ ಹೆಲ್‌ಬಾರ್ಗ್ ಮತ್ತು ಮೈಕೆಲ್ ಶ್ರೀವ್ ಒಂದಿಗೆ (1995)

ಉಲ್ಲೇಖಗಳು

[ಬದಲಾಯಿಸಿ]
  1. ಸ್ಟಾಫ್ ಕ್ರೇಜಿಯೆಸ್ಟ್ ಕಾಸ್ಟ್ಯೂಮ್ಡ್ ಆಕ್ಟ್ಸ್: ನಂ. 17, ಸ್ಪಿನ್ನರ್ , ಅಕ್ಟೋಬರ್ 19, 2007, 2009ರ ಜನವರಿ 6ರಂದು ಸಂಕಲನಗೊಂಡಿದೆ
  2. ಕೇರ್‌ವಲ್, ರಿಚಾರ್ಡ್, ಎ ಕ್ಲೋಸರ್ ಲುಕ್ ಅಟ್ ಬಕೆಟ್‌ಹೆಡ್‌ Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಎಕೊ ಟೈಮ್ಸ್‌ , ಮಾರ್ಚ್ 3, 2008, 2009ರ ಜನವರಿ 6ರಂದು ಸಂಕಲನಗೊಂಡಿದೆ
  3. Loder, Kurt (2002-11-21). "Beneath The Bucket, Behind The Mask: Kurt Loder Meets GN'R's Buckethead". MTV. Archived from the original on 2012-01-10. Retrieved 2007-12-09.
  4. ೪.೦ ೪.೧ ಕೂಪರ್, ಸಿಯಾನ್, ಬಕೆಟ್‌ಹೆಡ್‌ ಬಯಾಗ್ರಫಿ, ಆಲ್‌ಮ್ಯೂಸಿಕ್ , 2009ರ ಜನವರಿ 6ರಂದು ಸಂಕಲನಗೊಂಡಿದೆ
  5. "Top Shredders of All Time". RandyCiak.com. Archived from the original on 2008-03-09. Retrieved 2008-02-26.
  6. ಗಿಟಾರ್ ವರ್ಲ್ಡ್‌, ಫೆಬ್ರವರಿ 2003
  7. 50 ಫಾಸ್ಟೆಸ್ಟ್ ಗಿಟಾರಿಸ್ಟ್ಸ್ ಆಫ್ ಆಲ್ ಟೈಮ್, ಗಿಟಾರ್ ವರ್ಲ್ಡ್‌ , ನವೆಂಬರ್ 2008
  8. Guitar Player magazine 1988
  9. http://youngbuckethead.com/ Archived 2014-05-21 ವೇಬ್ಯಾಕ್ ಮೆಷಿನ್ ನಲ್ಲಿ. "ಎಬೌಟ್" ವಿಭಾಗದಲ್ಲಿನ ಬಕೆಟ್‌ಹೆಡ್‌ ಪುಟ
  10. http://www.tedkurland.com/pbuild/linkbuilder.cfm?selection=doc.271 Archived 2006-12-15 ವೇಬ್ಯಾಕ್ ಮೆಷಿನ್ ನಲ್ಲಿ. ಬಿಲ್ ಲ್ಯಾಸ್‌ವೆಲ್‌ ಪ್ರ್ಯಾಕ್ಸಿಸ್‌ ಬಗ್ಗೆ ಮಾತನಾಡುತ್ತಿರುವುದು ಮತ್ತು ಅವನು ಬಕೆಟ್‌ಹೆಡ್‌ನನ್ನು ಭೇಟಿಯಾದುದು
  11. "Buckethead FAQ v 1.0". Archived from the original on 2011-12-30. Retrieved 2010-09-24.
  12. http://www.bucketheadland.com/faq/index.html#anchor6301 Archived 2011-12-30 ವೇಬ್ಯಾಕ್ ಮೆಷಿನ್ ನಲ್ಲಿ. ಕೆಳಗಿನ ಭಾಗವು "ಎಕ್ನಾಲಜ್ಮೆಂಟ್ಸ್" ಬಗ್ಗೆ ಹೇಳುತ್ತದೆ
  13. "FAQ 2.0". Archived from the original on 2012-11-15. Retrieved 2010-09-24.
  14. "FAQ 2.0". Archived from the original on 2012-11-15. Retrieved 2010-09-24.
  15. "ಬಕೆಟ್‌ಹೆಡ್‌". Archived from the original on 2009-09-13. Retrieved 2010-09-24.
  16. "FAQ 2.0". Archived from the original on 2012-11-15. Retrieved 2010-09-24.
  17. "ಆರ್ಕೈವ್ ನಕಲು". Archived from the original on 2012-04-21. Retrieved 2010-09-24.
  18. "ಆರ್ಕೈವ್ ನಕಲು". Archived from the original on 2012-11-15. Retrieved 2010-09-24.
  19. "MTV ನ್ಯೂಸ್ ಆನ್ "ಬಕೆಟ್‌ಹೆಡ್‌ ಇನ್, ಫ್ರೀಸ್ ಔಟ್"". Archived from the original on 2001-02-23. Retrieved 2010-09-24.
  20. "ಬಕೆಟ್‌ಹೆಡ್ಸ್ ಹ್ಯಾಂಜ್ ಪಪ್ಪೆಟ್ ಸೇಸ್ ಗುಡ್‌ಬೈ ಟು ಗನ್ಸ್ N' ರೋಸಸ್". Archived from the original on 2010-12-04. Retrieved 2010-09-24.
  21. "Axl Cancels Rock In Rio Show, Blames Buckethead". ultimate-guitar.com. Retrieved 2008-02-26.
  22. ಮೆಟ್ರೊಆಕ್ಟಿವ್ ಮ್ಯೂಸಿಕ್ | ಬಕೆಟ್‌ಹೆಡ್‌
  23. ಬಕೆಟ್‌ಹೆಡ್‌ @ Bingebuddies.Com – ಬಿಂಗ್ ಗುಡೀಸ್
  24. "OZZY OSBOURNE Says Ex–GUNS N' ROSES Guitarist BUCKETHEAD Auditioned For His Solo Band". Blabbermouth.net. Archived from the original on 2009-03-29. Retrieved 2008-02-26.
  25. ಲೆರಾಯ್, ಡ್ಯಾನ್, ಬಕೆಟ್‌ಹೆಡ್‌ ನೋಸ್ ಚಿಕನ್ Archived 2009-05-02 ವೇಬ್ಯಾಕ್ ಮೆಷಿನ್ ನಲ್ಲಿ., ರೋಲಿಂಗ್ ಸ್ಟೋನ್ , ಅಕ್ಟೋಬರ್ 13, 2005, 2009ರ ಜನವರಿ 6ರಂದು ಸಂಕಲನಗೊಂಡಿದೆ
  26. ಗಿಟಾರ್ ಹೀರೋಸ್ ಮಾರ್ಕಸ್ ಹಂಡರ್ಸನ್: ದಿ ಗಿಟಾರ್ ವರ್ಲ್ಡ್‌ ಇಂಟರ್‌ವ್ಯೂವ್, ಗಿಟಾರ್ ವರ್ಲ್ಡ್‌ , ಜೂನ್ 20, 2007, 2008ರ ಸೆಪ್ಟೆಂಬರ್ 25ರಂದು ಸಂಕಲನಗೊಂಡಿದೆ
  27. "ಮೋನೊಲಿತ್". Archived from the original on 2012-02-06. Retrieved 2010-09-24.
  28. "ಚಿಕನ್ ನೂಡಲ್ಸ್ 2". Archived from the original on 2012-02-06. Retrieved 2010-09-24.
  29. "ಬಕೆಟ್‌ಹೆಡ್‌ ಪೈಂಟಿಂಗ್". Archived from the original on 2010-01-16. Retrieved 2010-09-24.
  30. ಅಮೆರಿಕನ್ ಮ್ಯೂಸಿಕ್: ಆಫ್ ದಿ ರೆಕಾರ್ಡ್ (2008)
  31. ಬೂಟ್ಸಿ ಆಂಡ್ ಬಕೆಟ್‌ಹೆಡ್‌ ಆನ್ ರಾಕ್ ದಿ ವೋಟ್ ಆಡ್
  32. "ಆರ್ಕೈವ್ ನಕಲು". Archived from the original on 2012-02-24. Retrieved 2010-09-24.
  33. "Fantasy Clicks: Chickens, a king and free throws - SI.com - Fantasy". CNN. January 15, 2009. Archived from the original on ಜೂನ್ 29, 2011. Retrieved April 27, 2010.
  34. "ಆರ್ಕೈವ್ ನಕಲು". Archived from the original on 2012-03-04. Retrieved 2010-09-24.
  35. "ಆರ್ಕೈವ್ ನಕಲು". Archived from the original on 2013-02-10. Retrieved 2010-09-24.
  36. "ಆರ್ಕೈವ್ ನಕಲು". Archived from the original on 2011-02-23. Retrieved 2010-09-24.
  37. http://twitter.com/Bootsy_Collins
  38. ಬೂಟ್ಸಿ ಕೊಲಿನ್ಸ್‌ ಟ್ವಿಟ್ಟರ್ - ಜೂನ್ 7, 2010
  39. ಬೂಟ್ಸಿ ಕೊಲಿನ್ಸ್‌ ಟ್ವಿಟ್ಟರ್ - ಜೂನ್ 11, 2010
  40. ಬೂಟ್ಸಿ ಕೊಲಿನ್ಸ್‌ ಟ್ವಿಟ್ಟರ್ -ಜೂನ್ 24, 2010
  41. ಬೂಟ್ಸಿ ಕೊಲಿನ್ಸ್‌ ಟ್ವಿಟ್ಟರ್ - ಜುಲೈ 7, 2010
  42. https://twitter.com/Bootsy_Collins/status/21846342553
  43. "ಆರ್ಕೈವ್ ನಕಲು". Archived from the original on 2010-10-05. Retrieved 2010-09-24.
  44. ೪೪.೦ ೪೪.೧ "Buckethead FAQ v 1.0". www.bucketheadland.com. Archived from the original on 30 ಡಿಸೆಂಬರ್ 2011. Retrieved 25 July 2009.
  45. "ಆರ್ಕೈವ್ ನಕಲು". Archived from the original on 2010-09-28. Retrieved 2010-09-24.
  46. http://www.tdrsmusic.com/cgi-bin/yabb/YaBB.cgi?board=TDRS;action=display;num=1283488028
  47. ೪೭.೦ ೪೭.೧ ೪೭.೨ ೪೭.೩ ಉಬರ್‌ಪ್ರೊಆಡಿಯೊ– ಬಕೆಟ್‌ಹೆಡ್‌ ಗಿಟಾರ್ ಗಿಯರ್ ರಿಗ್ ಆಂಡ್ ಎಕ್ವಿಪ್ಮೆಂಟ್ Archived 2010-07-24 ವೇಬ್ಯಾಕ್ ಮೆಷಿನ್ ನಲ್ಲಿ. ಮರುಸಂಪಾದಿಸಿದುದು:2009-04-19
  48. FAQ Archived 2012-11-15 ವೇಬ್ಯಾಕ್ ಮೆಷಿನ್ ನಲ್ಲಿ., ಬಕೆಟ್‌ಹೆಡ್‌ಲ್ಯಾಂಡ್ , 2008ರ ಜನವರಿ 6ರಂದು ಸಂಕಲನಗೊಂಡಿದೆ
  49. ದಿ ಕೂಲೆಸ್ಟ್ ಗಿಟಾರ್ಸ್ ಇನ್ ರಾಕ್, ಗಿಗ್‌ವೈಸ್ , ಜುಲೈ 31, 2008, 2009ರ ಜನವರಿ 6ರಂದು ಸಂಕಲನಗೊಂಡಿದೆ
  50. http://www.bucketheadland.com/bucketheadscoop/doubleneck1.jpg Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ. ಬಕೆಟ್‌ಹೆಡ್‌ಲ್ಯಾಂಡ್ , 2009ರ ಜನವರಿ 6ರಂದು ಸಂಕಲನಗೊಂಡಿದೆ
  51. ೫೧.೦ ೫೧.೧ "ಆರ್ಕೈವ್ ನಕಲು". Archived from the original on 2012-11-15. Retrieved 2010-09-24.

ಹೊರಗಿನ ಕೊಂಡಿಗಳು

[ಬದಲಾಯಿಸಿ]