ವಿಷಯಕ್ಕೆ ಹೋಗು

ಪಂಕಜ್ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಕಜ್ ಕಪೂರ್
ಪಂಕಜ್ ಕಪೂರ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
May 29, 1954 (age 56)
ವೃತ್ತಿ Actor, Screenwriter
ವರ್ಷಗಳು ಸಕ್ರಿಯ 1976 - present
ಪತಿ/ಪತ್ನಿ Neelima Azeem (1975 - 1984)
Supriya Pathak (1986 - present)


ಪಂಕಜ್ ಕಪೂರ್ , ಭಾರತಪಂಜಾಬ್ ನ ಲೂಧಿಯಾನ ದವರಾದ ಅವರು, ಭಾರತೀಯ ರಂಗಮಂದಿರ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿದ್ದಾರೆ. ಇವರು ದೂರದರ್ಶನದ ಅನೇಕ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಇವರ ಚಲನಚಿತ್ರ ಪಾತ್ರಗಳು ಕೆಳಕಂಡಂತಿವೆ: ಏಕ್ ಡಾಕ್ಟರ್ ಕಿ ಮೌತ್ (1991)ಚಲನಚಿತ್ರದ ಡಾ. ದಿಪಂಕರ್ ರಾಯ್ ಹಾಗು ವಿಶಾಲ್ ಭಾರಧ್ವಜ್ ರವರ ಮಕ್ಬೂಲ್ (2003) ಚಲನಚಿತ್ರದ ಅಬ್ಬಾ ಜಿ. ಈ ಎರಡು ಚಿತ್ರಗಳಲ್ಲಿಯು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.

1980 ರ ಮತ್ತು 1990 ರ ಹೊತ್ತಿನಲ್ಲಿ ಮಾಡಲಾದ ಕರಮ್ ಚಂದ್ ನಂತಹ TV ಧಾರಾವಾಹಿಗಳಿಂದಾಗಿ ಅವರು ಎಲ್ಲರ ಮನೆ ಮಾತಾಗಿದ್ದರು. ಇದೊಂದು ಪತ್ತೆದಾರಿ ಪ್ರಕಾರದಲ್ಲಿ ಮಾಡಲಾದ, ಹಾಸ್ಯ ಪ್ರಧಾನ ದೂರದರ್ಶನ ಸರಣಿಯಾಗಿದೆ. ಅತ್ಯಂತ ಇತ್ತೀಚಿನ ಆಫೀಸ್ ಆಫೀಸ್ , ಕೂಡ ಹೆಚ್ಚು ಜನಪ್ರಿಯತೆ ಪಡೆಯಿತು.ಇದು ಪ್ರಚಲಿತ ಭ್ರಷ್ಟಾಚಾರದ ಬಗ್ಗೆ ಮಾಡಲಾಗಿರುವ ಹಾಸ್ಯ ವಿಡಂಬನೆಯಾಗಿದೆ.

ಬಯೋಗ್ರಫಿ (ಜೀವನ ಚರಿತ್ರೆ)

[ಬದಲಾಯಿಸಿ]

ಶಿಕ್ಷಣ

[ಬದಲಾಯಿಸಿ]

ಪಂಕಜ್ ಕಪೂರ್ ರವರು ಮೊದಲು ನವ ದೆಹಲಿಯಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಿದರು. ಅಲ್ಲದೇ ಕಾಲೇಜಿಗೇ ಮೊದಲ ಸ್ಥಾನ ಗಳಿಸುವುದರೊಂದಿಗೆ 1973 ರಲ್ಲಿ ಅಧ್ಯಯನವನ್ನು ಮುಗಿಸಿದರು. ತರುವಾಯ, ನವ ದೆಹಲಿಯಲ್ಲಿರುವ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ(NSD)(ರಾಷ್ಟ್ರೀಯ ನಾಟಕ ವಿದ್ಯಾಲಯ)ಕ್ಕೆ ಸೇರಿಕೊಂಡು 1976 ರಲ್ಲಿ ಪದವೀಧರರಾದರು; ಇಲ್ಲಿ ಮತ್ತೊಮ್ಮೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡರು.

ವೃತ್ತಿಜೀವನ

[ಬದಲಾಯಿಸಿ]

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ದಿಂದ ಪದವೀಧರರಾದ ಬಳಿಕ,ರಿಚರ್ಡ್ ಅಟೆನ್ ಬರೋ ರವರು ಗಾಂಧೀ ಚಲನಚಿತ್ರಕ್ಕಾಗಿ ಅವಕಾಶ ನೀಡುವವರೆಗೆ, ಮುಂದಿನ ನಾಲ್ಕು ವರ್ಷಗಳಿಗೆ ರಂಗ ಕರ್ಮಿಯಾಗಿ ಕಾರ್ಯನಿರ್ವಹಿಸಿದರು.

ನಿರ್ದೇಶಕರಾಗಿ ಅನೇಕ ವರ್ಷಗಳ ವರೆಗೆ, ಮೋಹನ್ ದಾಸ್ B.A.L.L.B. , ವ್ಹ್ ಬಾಯ್ ವ್ಹ್ , ಸಹಬ್ ಜಿ ಬೀವಿಜಿ ಗುಲ್ಮಾಜಿ ಮತ್ತು ದೃಷ್ಟಾಂತ್ , ಕನಕ್ ದಿ ಬಲ್ಲಿ , ಆಲ್ಬರ್ಟ್ಸ್ ಬ್ರಿಡ್ಜ್ ಮತ್ತು ಪಾಚ್ವಾ ಸವಾರ್ ಗಳನ್ನು ಒಳಗೊಂಡಂತೆ ಸುಮಾರು 74 ನಾಟಕ ಮತ್ತು ಧಾರಾವಾಹಿಗಳಲ್ಲಿ ನಟಿದ್ದಾರೆ.

ಇವರು ಶ್ಯಾಮ್ ಬೆನಗಲ್ ರವರ ಆರೋಹಣ್ (1982) ಚಲನಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಟಿಸಿದರು. 1982 ರಲ್ಲಿ ರಿಚರ್ಡ್ ಅಟೆನ್ ಬರೋ ರವರ ಗಾಂಧೀ ಚಲನಚಿತ್ರದಲ್ಲಿ, ಮಹಾತ್ಮ ಗಾಂಧಿಯವರ ಎರಡನೆಯ ಕಾರ್ಯದರ್ಶಿ ಪ್ಯಾರೆಲಾಲ್ ಪಾತ್ರದ ಮೂಲಕ ಅವರಿಗೆ ಶ್ಯಾಮ್ ಬೆನಗಲ್ ರವರ ಚಿತ್ರದಲ್ಲಿ ಪಾತ್ರ ದೊರಕಿತ್ತು. ಅನಂತರ ಈ ಚಲನಚಿತ್ರದ ಹಿಂದಿ ಆವೃತ್ತಿಯಲ್ಲಿ ಅವರು ಬೆನ್ ಕಿಂಗ್ಸ್ ಲೆ ಯವರಿಗೆ ಧ್ವನಿ ನೀಡಿದರು.

ತದನಂತರ ಅವರು ಕಲಾತ್ಮಕ ಚಲನಚಿತ್ರಗಳ ಪ್ರಮುಖ ನಿರ್ದೇಶಕರುಗಳೊಂದಿಗೆ, ಸಮಾಂತರ ಚಲನಚಿತ್ರ ವರ್ಗದಡಿ ಬರುವ ಕಲಾತ್ಮಕ ಚಲನಚಿತ್ರಗಳ ಪಂಕ್ತಿಯಲ್ಲಿ ಕಾಣಿಸಿಕೊಂಡರು. ಶ್ಯಾಮ್ ಬೆನಗಲ್ ರವರ ಮಂಡಿ (1983) ಚಲನಚಿತ್ರದೊಂದಿಗೆ ಪ್ರಾರಂಭಿಸಿ, 1983 ರಲ್ಲಿ ಕುಂದನ್ ಶಾ ರವರ ಜಾನೆ ಬಿ ದೋ ಯಾರೋ ಎಂಬ ಹಾಸ್ಯ ಪ್ರಧಾನ ಚಲನಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡರು. ಅನಂತರ ಅವರು ಸೈಯದ್ ಅಖ್ತರ್ ಮಿರ್ಜಾ ರವರ ಮೋಹನ್ ಜೋಷಿ ಹಾಜಿರ್ ಹೋ! ಎಂಬ ವಿಡಂಬನ ಶೀಲ ಕಲಾತ್ಮಕ ಚಲನಚಿತ್ರದಲ್ಲಿ ಅಭಿನಯಿಸಿದರು. (1984), ಅಲ್ಲದೇ ಮೃಣಾಲ್‌ ಸೇನ್‌ ರವರ ಖಂಡರ್ (1984)ನಲ್ಲಿ ಮತ್ತು 1985 ರಲ್ಲಿ ವಿಧು ವಿನೋದ್ ಚೋಪ್ರಾ ರವರ ನಿಗೂಢ ರೋಮಾಂಚಕ ಕಥೆಯನ್ನು ಒಳಗೊಂಡ ಕಾಮೋಷ್ ಚಲನಚಿತ್ರದಲ್ಲಿಯು ಕಾಣಿಸಿಕೊಂಡಿದ್ದಾರೆ. ಇವರು ಅಭಿನಯಿಸಿರುವಂತಹ ಅನೇಕ ಕಲಾತ್ಮಕ ಚಲನಚಿತ್ರಗಳು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.

1986 ರಲ್ಲಿ, ಕರಮ್ ಚಂದ್ ಜಾಸೂಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ದೂರದರ್ಶನದೆಡೆಗೆ ಒಲವು ತೋರಿದರು. ಇದು ಕರಮ್ ಚಂದ್ ಎಂಬ ಪತ್ತೆದಾರಿ ಹಾಸ್ಯ ಪ್ರಧಾನ ಧಾರಾವಾಹಿಯಾಗಿದ್ದು, ಇದರಲ್ಲಿ ಸುಶ್ಮಿತ ಮುಖರ್ಜಿಯವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ವರೆಗೆ ಇವರು, ಕಬ್ ತಕ್ ಪುಕರೂನ್ (ದೂರದರ್ಶನದಲ್ಲಿ) ಜಬಾನ್ ಸಂಬಾಲ್ ಕೆ (ಇದು ಮೈಂಡ್ ಯುವರ್ ಲಾಂಗ್ವೇಜ್ ಎಂಬ ಇಂಗ್ಲೀಷ್ TV ಧಾರಾವಾಹಿಯ ರೀಮೇಕ್ ಆಗಿದೆ), ವಿಜಯ್ ಮೆಹ್ತಾ ರೊಂದಿಗೆ ಲೈಫ್ ಲೈನ್ , ನೀಮ್ ಕ ಪೇಡ್ ಹಾಗು ಅಂತಿಮವಾಗಿ ಫಿಲಿಪ್ಸ್ ಟಾಪ್ 10 ನ ಅಂಕವಿರಾಮಗಳಲ್ಲಿ ಪ್ರಸಾರವಾಗುವ ವಿನೋದ ಪ್ರಸಂಗಗಳನ್ನು ಒಳಗೊಂಡಂತೆ ಅನೇಕ TV ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.

ಈ ನಡುವೆ ಚಮೇಲಿ ಕಿ ಶಾದಿ (1986), ಏಕ್ ರುಕಾ ಹುವಾ ಫೈಸಲಾ (1986), ಮತ್ತು ಯೇ ಓ ಮನ್ಜಿಲ್ ತೊ ನಹೀ (1987) ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಲಾತ್ಮಕ ಚಿತ್ರಗಳಲ್ಲೂ ಸತತವಾಗಿ ಕಾಣಿಸಿಕೊಂಡರು. 1987 ರಲ್ಲಿ, ಇವರ ಹಾಸ್ಯ ಪ್ರಧಾನ ಪಾತ್ರವನ್ನು ವಾಣಿಜ್ಯ ಸಾಹಸಮಯ ಚಲನಚಿತ್ರವಾದ ಜಲ್ವಾ ದಲ್ಲಿ ಮತ್ತೊಮ್ಮೆ ನೋಡಬಹುದಾಗಿದೆ. ಈ ಚಲನಚಿತ್ರದಲ್ಲಿ ನಸಿರುದ್ದೀನ್ ಷಾ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಆಗ 1989 ರ ರಾಖ್ ಚಲನಚಿತ್ರದಲ್ಲಿನ ಇವರ ಅಭಿನಯಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಈ ಚಲನಚಿತ್ರದಲ್ಲಿ ಅಮೀರ್ ಖಾನ್ ರವರು ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.

ಇವರು ಮರ್ ಹಿ ದಾ ದಿವಾ (1989) ಎಂಬ ಅತ್ಯುತ್ತಮ ಪಂಜಾಬೀ ಚಲನ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು. ಇವರು 1992 ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆದ ಮಣಿ ರತ್ನಂ ರವರ ರೋಜಾ ಚಲನಚಿತ್ರದಲ್ಲಿ ಅಭಿನಯಿಸಿದರು. ಇದನ್ನು ಮಣಿರತ್ನಂ ರವರೇ ನಿರ್ದೇಶಿಸಿದ್ದಾರೆ. (ರೋಜಾ ಚಲನಚಿತ್ರವನ್ನು ಮೊದಲು ತಮಿಳನಲ್ಲಿ ನಿರ್ಮಿಸಲಾಗಿದ್ದು , ಅನಂತರ ಹಿಂದಿ, ಮರಾಠಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಧ್ವನಿಮುದ್ರಿಸಲಾಗಿದೆ.)

ಅವರ ವೃತ್ತಿ ಜೀವನದ ಆರಂಭಿಕ ವರ್ಷಗಳಲ್ಲಿ ಪ್ರದರ್ಶಿಸಿದ ಅತ್ಯುತ್ತಮ ಅಭಿನಯವನ್ನು, ಏಕ್ ಡಾಕ್ಟರ್ ಕಿ ಮೌತ್ (1991) ಚಲನಚಿತ್ರದ, ಹೋರಾಡುತ್ತಿರುವ ವಿಜ್ಞಾನಿಯ ಮುಖ್ಯ ಪಾತ್ರದಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ಅವರಿಗೆ 1991 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭ್ಯವಾಯಿತು.

2000 ರಲ್ಲಿ ಅವರು ಆಫೀಸ್ ಆಫೀಸ್ ಎಂಬ ಧಾರಾವಾಹಿಯೊಂದಿಗೆ ದೂರದರ್ಶನದೆಡೆಗೆ ಮರಳಿದರು.

2003 ರಲ್ಲಿ ಅವರು, ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆದ ಮಕ್ಬೂಲ್ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವಿಶಾಲ್ ಭಾರಧ್ವಜ್ ರವರ ಶೇಕ್ಸಪಿಯರ್ ಮ್ಯಾಕ್ ಬೆತ್ ನ ರೂಪಾಂತರವಾಗಿದೆ. ಮಕ್ಬೂಲ್ ನ ಅಭಿನಯಕ್ಕಾಗಿ ಅವರಿಗೆ 2004 ರ ಅತ್ಯುತ್ತಮ ಪೋಷಕ ನಟನಿಗೆ ಕೊಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿದೊರೆಯಿತು. ಈ ನಡುವೆ ಅವರು ಅಭಿನಯಿಸಿದ ದಿ ಬ್ಯ್ಲೂ ಅಂಬ್ರೆಲ (2005), ದಸ್ (2005) ಮತ್ತು ಹಲ್ಲಾ ಬೋಲ್ (2007) ಎಂಬ ಚಲನಚಿತ್ರಗಳು ಬಿಡುಗಡೆಯಾದವು.

ಪ್ರಸ್ತುತದಲ್ಲಿ ಅವರು ನಯ ಆಫೀಸ್ ಆಫೀಸ್ ಎಂಬ TV ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರ ಹಿಂದಿನ ಜನಪ್ರಿಯ ಧಾರಾವಾಹಿಯಾದ ಆಫೀಸ್ ಆಫೀಸ್ ನ ಮುಂದಿನ ಭಾಗವಾಗಿದೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಬಾಲಿವುಡ್ ನ ನಟರಾದ ಶಾಹೀದ್ ಕಪೂರ್ ರವರು ಪಂಕಜ್ ರವರ ಮತ್ತು ಅವರ ಮೊದಲ ಪತ್ನಿಯಾದ ನೀಲಿಮ ಆಜಿಮ್ ರವರ ಪುತ್ರರಾಗಿದ್ದಾರೆ. 1984 ರಲ್ಲಿ ಪಂಕಜ್ ರವರು ಸುಪ್ರಿಯಾ ಪಾಠಕ್ ರವರನ್ನು ಮದುವೆಯಾಗಿದ್ದು, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
  • ಕಹಾಂ ಕಹಾಂ ಸೆ ಗುಜರ್ ಗಯ (2011)
  • ಆರೋಹಣ್ (1982)
  • ಗಾಂಧೀ (1982)
  • ಜಾನೇ ಬಿ ದೋ ಯಾರೋ (1983)

| ಟರ್ನೆಜಾ

  • ಮಂಡಿ (1983)
  • ಮೋಹನ್ ಜೋಷಿ ಹಾಜಿರ್ ಹೋ! (1984)
  • ಚಮೇಲಿ ಕಿ ಶಾದಿ (1986)

| ಕಲ್ಲೂ ಮಾಲ್ ಕೋಯ್ಲೆ ವಾಲ

  • ಏಕ್ ರುಕಾ ಹುವಾ ಫೈಸಲಾ (1986) ( 12 ಆಂಗ್ರಿ ಮೆನ್ ನ TV ರೂಪಾಂತರ)[]
  • ಜಲ್ವಾ (1987)

| ಆಲ್ಬರ್ಟ್ ಪಿಂಟೋ

  • ಯೇ ವೊ ಮನ್ಜಿಲ್ ತೋ ನಹೀ (1987)

| ರೋಹಿತ್, ವಿದ್ಯಾರ್ಥಿಗಳ ನಾಯಕ

  • ಏಕ್ ಡಾಕ್ಟರ್ ಕಿ ಮೌತ್ (1991)
  • ರೋಜಾ (1992)

| ಲಿಯಾಕತ್

| ಸತ್ಯ ಪ್ರಕಾಶ್

  • ಮಕ್ಬೂಲ್ (2003)

| ಜಹಂಗೀರ್ ಖಾನ್ (ಅಬ್ಬಾಜಿ)

  • ಸೆಹರ್ (2004)

| ಪ್ರೋ. ಭೋಲೆ ಶಂಕರ್ ತಿವಾರಿ

  • ದಸ್ (2005)

| ಜಂಭಾಲ್

  • ಧರ್ಮ್ (2007)

| ಪಂಡಿತ್ ಚತುರ್ವೇದಿ

  • ದಿ ಬ್ಯ್ಲೂ ಅಂಬ್ರೆಲ (2007)

|ರಾಮ್

  • ಹಲ್ಲಾ ಬೋಲ್ (2007)

| ಸಿಧು

ನಿರ್ದೇಶಕ

[ಬದಲಾಯಿಸಿ]
  • ಮೌಸಮ್ (2010)

| ಶಾಹೀದ್ ಕಪೂರ್ ಮತ್ತು ಸೋನಂ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ.

TV ಧಾರಾವಾಹಿಗಳು

[ಬದಲಾಯಿಸಿ]
  • ಕರಮ್ ಚಂದ್ (1985-1988 2006-?)
  • ಜಬಾನ್ ಸಂಬಾಲ್ ಕೆ (1993).... ಮೋಹನ್ ಭಾರತಿ
  • ನೀಮ್ ಕಾ ಪೇಡ್ (1991)
  • ಫಾಟಿಚರ್ (1991)
  • ವಿಜಯ್ ಮೆಹ್ತಾ ರವರೊಂದಿಗೆ ಲೈಫ್ ಲೈನ್
  • ಆಫೀಸ್ ಆಫೀಸ್ (2000-2004)
  • ತೆಹರೀರ್.... ದೂರದರ್ಶನದಿಂದ ಮುನ್ಷಿ ಪ್ರೇಮ್ ಚಂದ್ ಕಿ - ಗೋದಾನ್ (2004)
  • ಕಬ್ ತಕ್ ಪುಕಾರೂ
  • 'ಫಿಲಿಫ್ಸ್ ಟಾಪ್ 10'
  • ಮೋಹನ್ ದಾಸ್ B.A.L.L.B.
  • ನಯಾ ಆಫೀಸ್ ಆಫೀಸ್ (2006-)

ಪ್ರಶಸ್ತಿಗಳು

[ಬದಲಾಯಿಸಿ]
  • ರಾಖ್ ಚಲನಚಿತ್ರಕ್ಕಾಗಿ, 1989 ರ ಅತ್ಯುತ್ತಮ ಪೋಷಕ ನಟನಿಗಾಗಿ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.
  • 1990: ನಾಮನಿರ್ದೇಶನಗೊಂಡಿತು: ರಾಖ್ ಚಿತ್ರಕ್ಕಾಗಿ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ,
  • 1991: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ತೀರ್ಪುಗಾರ ಪ್ರಶಸ್ತಿ: ಚಲನಚಿತ್ರ- ಏಕ್ ಡಾಕ್ಟರ್ ಕಿ ಮೌತ್ (1991).
  • 2004:ಮಕ್ಬೂಲ್ ಚಲನಚಿತ್ರಕ್ಕಾಗಿ, ಅತ್ಯುತ್ತಮ ಪೋಷಕ ನಟನಿಗೆ ಕೊಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ,
  • 2005: ಮಕ್ಬೂಲ್ ಚಲನಚಿತ್ರಕ್ಕಾಗಿ, ಅತ್ಯುತ್ತಮ ಪ್ರದರ್ಶನಕ್ಕೆ ನೀಡುವ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿ,
  • 2006: ನಾಮನಿರ್ದೇಶನಗೊಂಡಿತು: ದಸ್ ಚಲನಚಿತ್ರಕ್ಕಾಗಿ, ಫಿಲ್ಮ್ ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ.
  • ಭಾರತೀಯ ಪತ್ರಕರ್ತರ ಸಂಘದ ವತಿಯಿಂದ 2007-08 ರ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು[] ನೀಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. [೧]
  2. [4] ^ [3][4] ^


ಬಾಹ್ಯ ಕೊಂಡಿಗಳು

[ಬದಲಾಯಿಸಿ]