ನಮ್ಮ ಮೆಟ್ರೊ
ಬೆಂಗಳೂರು ಮೆಟ್ರೋ ಎಂದೂ ಕರೆಯಲ್ಪಡುವ ನಮ್ಮ ಮೆಟ್ರೋ, ಭಾರತದ ಬೆಂಗಳೂರು ನಗರಕ್ಕೆ ಸೇವೆ ಸಲ್ಲಿಸುವ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ದೆಹಲಿ ಮೆಟ್ರೋ ನಂತರ ಇದು ಭಾರತದಲ್ಲಿ ಎರಡನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲವಾಗಿದೆ.[೧] ಇದರ ಉದ್ಘಾಟನೆಯ ನಂತರ, ಇದು ದಕ್ಷಿಣ ಭಾರತದಲ್ಲಿ ಮೊದಲ ಭೂಗತ ಮೆಟ್ರೋ ವ್ಯವಸ್ಥೆಯಾಯಿತು. ನಮ್ಮ ಮೆಟ್ರೋ ಭೂಗತ, ದರ್ಜೆಯ ಮತ್ತು ಎತ್ತರದ ನಿಲ್ದಾಣಗಳ ಮಿಶ್ರಣವನ್ನು ಹೊಂದಿದೆ. ಮಾರ್ಚ್ 2023 ರ ಹೊತ್ತಿಗೆ ನಮ್ಮ ಮೆಟ್ರೋದ ಕಾರ್ಯಾಚರಣೆಯ 64 ಮೆಟ್ರೋ ನಿಲ್ದಾಣಗಳಲ್ಲಿ 55 ಎತ್ತರದ ನಿಲ್ದಾಣಗಳು, 8 ಭೂಗತ ನಿಲ್ದಾಣಗಳು ಮತ್ತು 1 ದರ್ಜೆಯ ನಿಲ್ದಾಣಗಳಿವೆ. ಸಿಸ್ಟಮ್ ಸ್ಟ್ಯಾಂಡರ್ಡ್-ಗೇಜ್ ಟ್ರ್ಯಾಕ್‌ಗಳಲ್ಲಿ ಚಲಿಸುತ್ತದೆ.
ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಜಂಟಿ ಉದ್ಯಮವಾದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಮ್ಮ ಮೆಟ್ರೋ ಜಾಲವನ್ನು ನಿರ್ಮಿಸುವ, ನಿರ್ವಹಿಸುವ ಮತ್ತು ವಿಸ್ತರಿಸುವ ಸಂಸ್ಥೆಯಾಗಿದೆ. ಸೇವೆಗಳು ಪ್ರತಿದಿನ 05:00 ಮತ್ತು 24:00 ರ ನಡುವೆ ಕಾರ್ಯನಿರ್ವಹಿಸುತ್ತವೆ, ರೈಲುಗಳು ನಡುವೆ 5-15 ನಿಮಿಷಗಳ ವ್ಯತ್ಯಾಸವಿರುತ್ತದೆ. ರೈಲುಗಳು ಆರಂಭದಲ್ಲಿ ಮೂರು ಬೋಗಿಗಳೊಂದಿಗೆ ಪ್ರಾರಂಭವಾದವು ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ನಂತರ ಆರು ಬೋಗಿಗಳಾಗಿ ಪರಿವರ್ತಿಸಲಾಯಿತು. ಮೂರನೇ ರೈಲಿನ ಮೂಲಕ 750kV ನೇರ ಪ್ರವಾಹದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಏಪ್ರಿಲ್ 2023 ರ ಹೊತ್ತಿಗೆ, ಮೆಟ್ರೋ ವ್ಯವಸ್ಥೆಯು ಸರಾಸರಿ ದೈನಂದಿನ ಸುಮಾರು 570,000 ಪ್ರಯಾಣಿಕರನ್ನು ಹೊಂದಿದೆ.
ನಮ್ಮ ಮೆಟ್ರೊ | |||
---|---|---|---|
| |||
Info | |||
Owner | Bengaluru Metro Rail Corporation Limited (BMRCL) | ||
Locale | Bengaluru | ||
Transit type | Rapid transit | ||
Number of lines | 10 | ||
Number of stations | 64[೨] | ||
Annual ridership | 174.22 million (2020)[೩] | ||
Chief executive | Anjum Parvez (MD) | ||
Headquarters | BMTC Complex, Kengal Hanumanthaiah Road, Shanthinagara, Bengaluru | ||
Website | bmrc.co.in | ||
Operation | |||
Began operation | 20 ಅಕ್ಟೋಬರ್ 2011 | ||
Train length | 6 coaches[೪] | ||
Headway | 3–15 minutes[೫] | ||
Technical | |||
System length | Operational 69.9 km (43.4 mi)
Under Construction (Phase 2,2A & 2B) 103.3 km (64.2 mi) Approved in State cabinet and awaiting confirmation from central (Phase 3A) 44.65 km (27.74 mi) Under DPR preparation for Kempapura-Sarjapura line (Phase 3A) 35.0 km (21.7 mi) Announced (Phase 3B) 59.0 km (36.7 mi) Planned for inner ring metro (Phase 4) 35.0 km (21.7 mi) | ||
Track gauge | ೧,೪೩೫ mm (4 ft 8 1⁄2 in) standard gauge | ||
Electrification | ಟೆಂಪ್ಲೇಟು:750 V DC | ||
Average speed | 80 km/h (50 mph) | ||
Top speed | 120 km/h (75 mph) | ||
|
'ನಮ್ಮ ಮೆಟ್ರೋ' ವೈಶಿಷ್ಟ್ಯ
[ಬದಲಾಯಿಸಿ]- ನಮ್ಮ ಮೆಟ್ರೋ (ಬೆಂಗಳೂರು ಮೆಟ್ರೋ ಎಂದೂ ಹೆಸರು) ಇದು ಭಾರತದ ಕರ್ನಾಟಕದ ಬೆಂಗಳೂರು ನಗರದಲ್ಲಿನ ಸೇವೆಯ ಮೆಟ್ರೋ ವ್ಯವಸ್ಥೆ. ನಮ್ಮ ಮೆಟ್ರೋ, ಉದ್ದ ಮತ್ತು ಅತಿಹೆಚ್ಚು ನಿಲ್ದಾಣಗಳನ್ನು ಹೊಂದಿರುವ ಎರಡರಲ್ಲೂ ವ್ಯವಸ್ಥೆ ಗಳನ್ನು ಪರಿಗಣಿಸಿದಾಗ ದೆಹಲಿ ಮೆಟ್ರೋ ನಂತರ ಭಾರತದ ಎರಡನೇ ಅತಿದೊಡ್ಡ ಮೆಟ್ರೋ,. ಮತ್ತೊಂದೆಡೆ, ನಮ್ಮ ಮೆಟ್ರೋ ಉದ್ದದಲ್ಲಿ ಪ್ರಪಂಚದ ನ 99 ನೇ ಅತಿದೊಡ್ಡ ಮೆಟ್ರೋ ವ್ಯವಸ್ಥೆ ಮತ್ತು . ನೆಟ್ವರ್ಕ್ ಪರಿಭಾಷೆಯಲ್ಲಿ ಆಪರೇಟಿಂಗ್ ಕೇಂದ್ರಗಳ ಸಂಖ್ಯೆಯ ಪರಿಗಣನೆಯಲ್ಲಿ 92 ನೇ ಅತಿದೊಡ್ಡ ಮೆಟ್ರೋ. ಸ್ಥಾನ. ಇದು ದಕ್ಷಿಣ ಭಾರತದಲ್ಲಿ ಮೊದಲ ಭೂಗತ ಮೆಟ್ರೋ ವ್ಯವಸ್ಥೆಯನ್ನು ಹೊಂದಿರುತ್ತದೆ. ಮೆಟ್ರೋ ನೆಟ್ವರ್ಕ್ 30 ಕೇಂದ್ರಗಳಲ್ಲಿ ಸೇವೆ 31,52 ಕಿಲೋಮೀಟರ್ ಒಟ್ಟು ಉದ್ದದ ಎರಡು ಬಣ್ಣಗಳ ಕೋಡೆಡ್ ದಾರಿಗಳಿವೆ. ವ್ಯವಸ್ಥೆಯು ಪ್ರಮಾಣಿತ ಗೇಜ್ ಗಳನ್ನು ಬಳಸಿಕೊಂಡು ಮಿಶ್ರ ವ್ಯವಸ್ಥೆಯ ನಿಗದಿತ-ದರ್ಜೆಯ, ಭೂಗತ, ಮತ್ತು ಭೂ-ಮೇಲಿನ ಕೇಂದ್ರಗಳ ಮಿಶ್ರಣವನ್ನು ಹೊಂದಿದೆ. ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 140,000 ಪ್ರಯಾಣಿಕರು ಪ್ರಯಾಣ ಮಾಡುವವರು.[೬]
- ನಮ್ಮ ಮೆಟ್ರೋ ನಿರ್ಮಾಣ ಮತ್ತು ಕೆಲಸ ಕಾರ್ಯ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್), ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ, ಉದ್ಯಮ. ಮೆಟ್ರೊ ಸೇವೆಗಳು ಸಮಯ 06:00 ರಿಂದ 22:00 ಗಂಟೆಗಳ ನಡುವೆ ದೈನಂದಿನ ಕೆಲಸ ನಡೆಯುವುದು. 8-10 ನಿಮಿಷಗಳ ನಡುವೆ ವಿವಿಧ ನಿಲುಗಡೆ ವೇಗಗಳಲ್ಲಿ ನಡೆಯುತ್ತವೆ. ರೈಲುಗಳು ಮೂರು ಭೋಗಿಗಳು ಅಥವಾ ಕಾರುಗಳು ಇರುವಂತೆ ರಚಿತವಾಗಿದೆ. ವಿದ್ಯುತ್ ಉತ್ಪಾದನೆಯು ಮೂರನೇ ರೈಲು ಮೂಲಕ 750 ವೋಲ್ಟ್ ನೇರ ವಿದ್ಯುತ್ ಪೂರೈಸಲಾಗುತ್ತದೆ. . ‘ನಮ್ಮ ಮೆಟ್ರೋ’ ಭಾರತದಲ್ಲಿ 750 ವಿ ಡಿಸಿ ಮೂರನೇ ರೈಲು ಕಂಬಿ ಬಳಸುವ ವ್ಯವಸ್ಥೆಯ ಮೊದಲ ರೈಲು ಸಾರಿಗೆ.[೭]
ಇತಿಹಾಸ
[ಬದಲಾಯಿಸಿ]- ದೆಹಲಿ ಮೆಟ್ರೋ ರೈಲು ನಿಗಮ ಲಿಮಿಟೆಡ್ (DMRC) ವಿವರವಾದ ಯೋಜನೆಯನ್ನು ತಯಾರಿಸಿ ಮೊದಲ ಹಂತ ಯೋಜನೆಯನ್ನು ಮೇ 2003 ರಲ್ಲಿ ಬಿಎಂಆರ್ಸಿಎಲ್ ಗೆ ಸಲ್ಲಿಸಿತು. ಕೆಲಸ 2005 ಆರಂಭಿಸಲು ಯೋಜಿಸಲಾಗಿತ್ತು. ಆದರೆ ನಿರ್ಮಾಣ ಕೆಲಸದಲ್ಲಿ ಬಿಎಂಆರ್ಸಿಎಲ್ ಗೆ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಸಲ್ಲಿಸಿದ್ದರೂ ಆದರೆ 2006ರ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರದ ಬದಲಾವಣೆಯಿಂದ ನಿಧಾನವಾಯಿತು.. ಯೋಜನೆಯು ಹಣಕಾಸಿನ ದೃಷ್ಟಿಯಿಂದ ಕಾರ್ಯಸಾಧ್ಯವೇ ಮತ್ತು ನಗರಕ್ಕೆ ಸೂಕ್ತವೇ ಎಂದು ದೇಶವ್ಯಾಪಿ ಚರ್ಚೆಯಾಯಿತು.. ಯೋಜನೆಯು 2006 ಏಪ್ರಿಲ್ 25 ರಂದು ಕೇಂದ್ರ ಸಂಪುಟದಲ್ಲಿ ಅನುಮೋದನೆ ಪಡೆಯಿತು. ಮೊದಲ ವಿಭಾಗದಲ್ಲಿ ಕಾಮಗಾರಿಯ ನಿರ್ಮಾಣ, ರೀಚ್ 1 ಬೈಯ್ಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆ ನಡುವೆ ನೇರಳೆ ಮಾರ್ಗವು, ಏಪ್ರಿಲ್ 2007 15 ರಂದು ಆರಂಭವಾಯಿತು ಮತ್ತು ಅಕ್ಟೋಬರ್ 2011, 20 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಈ ಜಾಲದ ಅಭಿವೃದ್ಧಿಯನ್ನು ಹಂತಗಳಲ್ಲಿ ವಿಂಗಡಿಸಲಾಗಿದೆ 2 ಸಾಲುಗಳನ್ನು ಹೊಂದಿರುವ . ಒಂದನೇ ಹಂತ 2016 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಮತ್ತು 2ನೇ ಹಂತ .2022 ರಲ್ಲಿ ಮುಗಿಯುವ ಯೋಜನೆ ಇದೆ.
ಮೆಟ್ರೋ ಮಾರ್ಗಗಳು
[ಬದಲಾಯಿಸಿ]ಯೋಜನೆಯ ಮೊದಲ ಹಂತದ ಮಾರ್ಗ 42.3 ಕಿಲೋಮೀಟರ್ (26.3 ಮೈಲಿ) ಉದ್ದ ಒಳಗೊಂಡಿದೆ; 8.8 ಕಿಲೋಮೀಟರ್ (5.5 ಮೈಲಿ) ಭೂಗತಮಾರ್ಗ (ಸುರಂಗ) ಮತ್ತು ಉಳಿದಮಾರ್ಗ ಬಹುತೇಕ ಭೂತಲ (ಮೇಲಿನ) ಮಾರ್ಗ. ಎರಡನೆಯ ಹಂತದಲ್ಲಿ ಮೆಟ್ರೋನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ರೈಲು ಮಾರ್ಗ | ರೈಲಿನ ಕೊನೆಯ ನಿಲ್ದಾಣ | ಪ್ರಾರಂಭಿಸಿದ | ಉದ್ದ | ರೈಲು ನಿಲ್ದಾಣಗಳು | |
---|---|---|---|---|---|
೧ | ನಾಗಸಂದ್ರ | ರೇಷ್ಮೆ ಸಂಸ್ಥೆ | ೨೦೧೧ | ೩೦.೪ km | ೨೯ |
೨ | ಚಲ್ಲಘಟ್ಟ | ವೈಟ್ ಫೀಲ್ಡ್ | ೨೦೧೦ | ೪೩.೪೯ km | ೩೭ |
Total: | ೭೩.೮೧ km | ೬೬ |
ಹಸಿರು ಹಾದಿ (ಮಾರ್ಗ ೧)
ನೇರಳೆ ಹಾದಿ (ಮಾರ್ಗ ೨)
- ನೇರಳೆ ಹಾದಿ ಬಯ್ಯಪ್ಪನಹಳ್ಳಿ ಟರ್ಮಿನಲ್‍ನಿಂದ ಮೈಸೂರು ರಸ್ತೆಗೆ 17 ನಿಲ್ದಾಣಗಳನ್ನು ಹೊಂದಿದೆ; 18.22 ಕಿಮೀ ಲೈನ್/ ರೈಲುದಾರಿ 4.8 ಕಿಮೀ ಭೂಗತದಾರಿಯ (ಸುರಂಗ ದಾರಿ) ವಿಭಾಗ ಹೊಂದಿದೆ; ಉಳಿದ ರೈಲುಮಾರ್ಗ ಭೂತಲಮಾರ್ಗ (ನೆಲಮಾರ್ಗ). ಇದು ಬೆಂಗಳೂರು ಪೂರ್ವ ಮತ್ತು ಪಶ್ಚಿಮ ಪ್ರದೇಶಗಳನ್ನು ಸಂಪರ್ಕಿಸುತ್ತದೆ.[೮]
- ಎರಡನೆಯ ಹಂತದಲ್ಲಿ ಮೈಸೂರ ರಸ್ತೆಯಿಂದ ಚಲ್ಲಘಟ್ಟದವರೆಗೆ ಮತ್ತು ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ವಿಸ್ತರಿಸಲಾಯಿತು.
ಮೂಲ ಸೌಕರ್ಯಗಳು
[ಬದಲಾಯಿಸಿ]ಕಾರ್ಯನಿರ್ವಹಣೆ
[ಬದಲಾಯಿಸಿ]- ಬೆಂಗಳೂರಿನಲ್ಲಿ 21 Nov, 2016 ರಂದು ಬಸವನಗುಡಿ ನ್ಯಾಷನಲ್ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿಯತ್ತ ಭಾನುವಾರ ಪ್ರಯೋಗಾರ್ಥ ಮೆಟ್ರೊ ರೈಲು ಸಂಚಾರ ಆರಂಭವಾಯಿತು.‘ನಮ್ಮ ಮೆಟ್ರೊ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ಈ ಸಾಧನೆಗಾಗಿ ಬಹಳ ದಿನಗಳಿಂದ ನಾವು ಕಾತರರಾಗಿದ್ದೆವು’ ಎಂದು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದರು.‘ಚಿಕ್ಕಪೇಟೆ, ಮೆಜೆಸ್ಟಿಕ್ ಭಾಗದಲ್ಲಿ ಸುರಂಗ ಕೊರೆಯುವ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಎಂಜಿನಿಯರ್‌ಗಳು, ಗುತ್ತಿಗೆದಾರರು, ಕಾರ್ಮಿಕರ ಅವಿರತ ಶ್ರಮದಿಂದಾಗಿ ನಮ್ಮ ಮೆಟ್ರೊ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ’ ಎಂದು ಹೇಳಿದರು.
- ‘ಸಂಪಿಗೆ ರಸ್ತೆ– ನ್ಯಾಷನಲ್ ಕಾಲೇಜು ನಿಲ್ದಾಣ ನಡುವಿನ ಸುರಂಗ ಮಾರ್ಗ ನಿರ್ಮಿಸಲು ಸಾಕಷ್ಟು ತೊಂದರೆ ಉಂಟಾಗಿತ್ತು. ಅದೇ ರೀತಿಯಲ್ಲಿ ಸುರಂಗದಿಂದ ಮೆಟ್ರೊ ರೈಲನ್ನು ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಕೊಂಡೊಯ್ಯಲು ಎಂಜಿನಿಯರ್‌ಗಳು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸುರಂಗ ಮಾರ್ಗದಲ್ಲಿ ವಿದ್ಯುತ್ ಬಳಸಿ ಮೆಟ್ರೊ ರೈಲು ಓಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಲೋಕೋಮೋಟಿವ್ ಯಂತ್ರದ ಸಹಾಯದಿಂದ ರೈಲನ್ನು ನ್ಯಾಷನಲ್ ಕಾಲೇಜು ನಿಲ್ದಾಣದವರೆಗೆ ತಂದಿದ್ದೇವೆ’ ಎಂದರು.
- ‘ರೈಲಿನ ಬೋಗಿಗಳನ್ನು ಒಯ್ಯಲು ಸಾಮಾನ್ಯವಾಗಿ ಡೀಸೆಲ್ ಆಧಾರಿತ ಲೋಕೋಮೋಟಿವ್ ಯಂತ್ರವನ್ನು ಬಳಸಲಾಗುತ್ತದೆ. ಆದರೆ, ಇದು ಹೊಗೆಯನ್ನು ಉಗುಳುವುದರಿಂದ ಬ್ಯಾಟರಿಚಾಲಿತ ಲೋಕೋಮೋಟಿವ್ ಯಂತ್ರವನ್ನು ಬಳಸಿದ್ದೇವೆ. ಪ್ರತಿ ನಾಲ್ಕು ನಿಲ್ದಾಣಗಳಲ್ಲಿ ಈ ಯಂತ್ರವನ್ನು ಚಾರ್ಜ್ ಮಾಡಿದ ಬಳಿಕ ಉಪಯೋಗಿಸಬೇಕಿತ್ತು’ ಎಂದು ವಿವರಿಸಿದರು.
- ‘ಸದ್ಯ ಒಂದು ಹಳಿಯಲ್ಲಿ ಮಾತ್ರ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಂಡಿದೆ. ಡಿಸೆಂಬರ್ 31ರೊಳಗೆ ಮತ್ತೊಂದು ಹಳಿಯ ಮೇಲೆ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಗಂಟೆಗೆ 33 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ’ ಎಂದು ತಿಳಿಸಿದರು.
ಕೇಬಲ್, ಸಿಗ್ನಲ್ ಅಳವಡಿಕೆ
[ಬದಲಾಯಿಸಿ]- ಸಂಪಿಗೆ ರಸ್ತೆಯಿಂದ ನ್ಯಾಷನಲ್ ಕಾಲೇಜು ನಿಲ್ದಾಣದವರೆಗಿನ ಸುರಂಗ ಮಾರ್ಗದಲ್ಲಿ ಈಗಾಗಲೇ ಹಳಿ ಅಳವಡಿಸಲಾಗಿದೆ. ಕೇಬಲ್, ವೆಂಟಿಲೇಷನ್ ಮತ್ತು ಸಿಗ್ನಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು.‘ಪೀಣ್ಯದಿಂದ ಯಲಚೇನಹಳ್ಳಿವರೆಗೆ ರೈಲು ಸಂಚಾರ ಆರಂಭಗೊಂಡರೆ ಈ ಮಾರ್ಗದಲ್ಲಿ ವಾಹನದಟ್ಟಣೆ ಕಡಿಮೆಯಾಗಲಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಲಿದ್ದಾರೆ. ಮಾರ್ಚ್–ಏಪ್ರಿಲ್ ವೇಳೆಗೆ ಈ ಮಾರ್ಗವು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ’ ಎಂದರು. ‘ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.
2018ರೊಳಗೆ ಕಾಮಗಾರಿ ಪೂರ್ಣ
[ಬದಲಾಯಿಸಿ]- ‘ಎರಡನೇ ಹಂತದಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಿಸುತ್ತಿರುವ ಮೆಟ್ರೊ ರೈಲು ಮಾರ್ಗದ ಕಾಮಗಾರಿ 2018ರೊಳಗೆ ಪೂರ್ಣಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗ ಕಾಮಗಾರಿ 2020ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ’ ಎಂದು ಖರೋಲಾ ಹೇಳಿದರು.
- ಮೆಟ್ರೊ ನಿಲ್ದಾಣಗಳಲ್ಲಿ ಸಂಚಾರಿ ಎಟಿಎಂ:‘ನಗರದ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಸಂಚಾರಿ ಎಟಿಎಂಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ’ ಎಂದು ಜಾರ್ಜ್ ಹೇಳಿದರು.[೯]
(ಪ್ರಯಾಣದ) ಶುಲ್ಕ
[ಬದಲಾಯಿಸಿ]ಪ್ರಯಾಣದ ಶುಲ್ಕ ಸ್ವರೂಪ ರೂ.೭ ರಿಂದ ರೂ. ೧೫ ವರೆಗೆ.
ವರ್ತುಲ ರಸ್ತೆಯಲ್ಲಿ ಬರಲಿದೆ ಮೆಟ್ರೊ
[ಬದಲಾಯಿಸಿ]- ಮಾರ್ಚ್ 18
- ಸಿಲ್ಕ್ ಬೋರ್ಡ್– ಕೆ.ಆರ್.ಪುರ ಮಾರ್ಗಕ್ಕೆ ಡಿಪಿಆರ್
- ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲೇ ಸಿಲ್ಕ್‌ಬೋರ್ಡ್– ಕೆ.ಆರ್.ಪುರ ನಡುವೆ ಹೊಸ ಮಾರ್ಗ ನಿರ್ಮಿಸುವ ಪ್ರಸ್ತಾಪ ;ನವೆಂಬರ್ ತಿಂಗಳಲ್ಲಿ ಈ ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಿಸಿತು
- ಏಪ್ರಿಲ್ 19
- ಸುರಂಗದಿಂದ ಹೊರಬಂದ ಗೋದಾವರಿ :
- ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಗೋದಾವರಿ’ ಮಂಗಳವಾರ ಗುರಿ ಪೂರೈಸಿ ಮೆಜೆಸ್ಟಿಕ್‌ನಲ್ಲಿ ಸುರಂಗದಿಂದ ಹೊರಬಂತು. ಖೋಡೆ ವೃತ್ತದ ಸಮೀಪ 60 ಅಡಿಗಳಷ್ಟು ನೆಲದಾಳದಲ್ಲಿ ಬಂಡೆ ಕಲ್ಲನ್ನು ಕೊರೆಯುವಾಗ ‘ಗೋದಾವರಿ’ಯ ‘ಕಟರ್‌ಹೆಡ್’ಗೆ ಹಾನಿಯಾಗಿತ್ತು. ಇಟಲಿಯಿಂದ ಅದನ್ನು ತರಿಸಿ ಕೆಲಸ ಮುಂದುವರಿಸಲಾಗಿತ್ತು.
- ಏಪ್ರಿಲ್ 29
- ಸುರಂಗದಲ್ಲಿ ರೈಲು ಸಂಚಾರ ಶುರು:
- ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಸುರಂಗ ಮಾರ್ಗದಲ್ಲಿ (ಕಬ್ಬನ್ ಉದ್ಯಾನದಿಂದ–ಮಾಗಡಿ ರಸ್ತೆ ನಿಲ್ದಾಣವರೆಗೆ) ರೈಲು ಸಂಚಾರ ಆರಂಭ. ಇದು ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಎಂಬ ಖ್ಯಾತಿಗೂ ಪಾತ್ರವಾಗಿದೆ..
- ಜೂನ್ 8
- ಕೆಲಸ ಪೂರ್ಣಗೊಳಿಸಿದ ‘ಕಾವೇರಿ’ :
- ಚಿಕ್ಕಪೇಟೆಯಿಂದ-ಮೆಜೆಸ್ಟಿಕ್ ನಡುವಿನ ನಮ್ಮ ಮೆಟ್ರೊ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದ ಕಾವೇರಿ ಯಂತ್ರ ಮೆಜೆಸ್ಟಿಕ್ ಬಳಿ ಹೊರಬಂತು. 2015ರ ಮಾರ್ಚ್‌ನಲ್ಲಿ ಚಿಕ್ಕಪೇಟೆಯಿಂದ ಸುರಂಗ ಕೊರೆಯಲು ಆರಂಭಿಸಿತ್ತು.
- ಸೆಪ್ಟೆಂಬರ್ 14
- ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕಕ್ಕೆ ಪ್ರಸ್ತಾವ:
- ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವೀಸಸ್ (ರೈಟ್ಸ್) ಸಂಸ್ಥೆ ಸೂಚಿಸಿದ 9 ಮಾರ್ಗಗಳ ಪೈಕಿ ಒಂದನ್ನು ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಒಂಬತ್ತು ಮಾರ್ಗಗಳ ವಿವರಗಳನ್ನು ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತು.
- ಸೆಪ್ಟೆಂಬರ್ 23
- ಮೊದಲ ಹಂತ –ಸುರಂಗ ಪೂರ್ಣ
- ಚಿಕ್ಕಪೇಟೆ ಮತ್ತು ಮೆಜೆಸ್ಟಿಕ್ ನಡುವೆ ಸುರಂಗ ಕೊರೆಯುವಾಗ ಅನೇಕ ಅಡೆಗಡೆಗಳನ್ನು ಎದುರಿಸಿದ್ದ ಕೃಷ್ಣಾ ಯಂತ್ರವು ಮೆಜೆಸ್ಟಿಕ್‌ನಲ್ಲಿ ಹೊರಗೆ ಬಂತು. ನಾಗಸಂದ್ರ–ಯಲಚೇನಹಳ್ಳಿ ನಡುವಿನ ಉತ್ತರ ಮತ್ತು ದಕ್ಷಿಣದ ಮಾರ್ಗಗಳು ಪರಸ್ಪರ ಜೋಡಣೆಯಾದವು. ನಮ್ಮ ಮೆಟ್ರೊ ಮೊದಲ ಹಂತದಲ್ಲಿನ ಸುರಂಗ ಕೊರೆಯುವ ಎಲ್ಲ ಕಾಮಗಾರಿಗಳು ಪೂರ್ಣಗೊಂಡವು.
- ನವೆಂಬರ್ 20
- ದಕ್ಷಿಣದಲ್ಲಿ ಮೆಟ್ರೊ ಪ್ರಾಯೋಗಿಕ ಸಂಚಾರ
- ಬಸವನಗುಡಿ ನ್ಯಾಷನಲ್ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದ ನಡುವೆ ಪ್ರಯೋಗಾರ್ಥ ಮೆಟ್ರೊ ರೈಲು ಸಂಚಾರ ಆರಂಭ.
- 12 Nov, 2016
ಸಿಲ್ಕ್ ಬೋರ್ಡ್ – ಕೆ.ಆರ್.ಪುರ ಮಾರ್ಗದ ಯೋಜನಾ ವರದಿ ಪ್ರಕಟ;
- ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದವರೆಗೆ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಮೆಟ್ರೊ ಮಾರ್ಗದ ಕುರಿತು 267 ಪುಟಗಳ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಮೆಟ್ರೊ ರೈಲು ನಿಗಮದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
- ಒಟ್ಟಾರೆ ರೂ.4,203 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗದಲ್ಲಿ 13 ನಿಲ್ದಾಣಗಳು ಇರಲಿವೆ. ಯೋಜನೆಗೆ ಬೇಕಾದ ಹಣದಲ್ಲಿ ₹ 1,100 ಕೋಟಿಯಷ್ಟು ಮೊತ್ತವನ್ನು ವಿನೂತನ ಹಣಕಾಸು ತಂತ್ರಗಳ ಮೂಲಕ ಶೇಖರಣೆ ಮಾಡಲು ಉದ್ದೇಶಿಸಲಾಗಿದೆ.
- ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, 2017ರಲ್ಲಿ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ. 15,179 ಚದರ ಮೀಟರ್ ಭೂಸ್ವಾಧೀನ ಮಾಡಿಕೊಳ್ಳುವುದು ಈ ಯೋಜನೆಗೆ ಅಗತ್ಯವಾಗಿದೆ. ಅದರಲ್ಲಿ 5,911 ಚದರ ಮೀಟರ್ ಸರ್ಕಾರಿ ಭೂಮಿ ಸೇರಿದೆ. ಯೋಜನೆ ಅನುಷ್ಠಾನಕ್ಕಾಗಿ ಕತ್ತರಿಸಲು ಗುರುತಿಸಿರುವ ಮರಗಳು ಚಿಕ್ಕವಾಗಿವೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ.
- ‘ಕೆ.ಆರ್. ಪುರದಿಂದ ಹೆಬ್ಬಾಳದವರೆಗೆ ಮಾರ್ಗವನ್ನು ವಿಸ್ತರಣೆ ಮಾಡುವ ಉದ್ದೇಶವಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಿದೆ’ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ.
- ಹೊರವರ್ತುಲ ರಸ್ತೆಗೆ ಹೊಂದಿಕೊಂಡ ಈ ಕಾರಿಡಾರ್‌ನಲ್ಲಿ ನಗರದ ಶೇ 32ರಷ್ಟು ವಾಣಿಜ್ಯ ಸಂಸ್ಥೆಗಳ ಕಚೇರಿಗಳಿದ್ದು, ಸುಮಾರು 8 ಲಕ್ಷ ಜನ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಗಂಟೆಗೆ 18,750 ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತವೆ.
- ಈ ಯೋಜನೆಗೆ ರಾಜ್ಯ ಸರ್ಕಾರ ರೂ.500 ಕೋಟಿ ಸಹಾಯ ಧನ ನೀಡಲಿದ್ದು, ಮೆಟ್ರೊ ರೈಲು ನಿಗಮ ತನ್ನ ಒಡೆತನದ ಕೆಲ ಆಸ್ತಿಗಳನ್ನು ಗುತ್ತಿಗೆ ನೀಡಿ, ರೂ. 500 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ರೂ. 1,100 ಕೋಟಿಯನ್ನು ವಿಭಿನ್ನ ಮಾರುಕಟ್ಟೆ ತಂತ್ರಗಳ ಮೂಲಕ ಶೇಖರಿಸಲು ಉದ್ದೇಶಿಸಲಾಗಿದೆ. ಮಿಕ್ಕ ರೂ.2,100 ಕೋಟಿಯನ್ನು ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿದೆ.
13 ನಿಲ್ದಾಣಗಳು
[ಬದಲಾಯಿಸಿ]- ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬಸವನಹಳ್ಳಿ, ಮಾರತ್‌ಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಮಹದೇವಪುರ, ಕೆ.ಆರ್.ಪುರ.[೧೧]
ಆಂಕಿ ಅಂಶ
[ಬದಲಾಯಿಸಿ]- 2021ರಲ್ಲಿ ಈಮಾರ್ಗದಲ್ಲಿ ಪ್ರಯಾಣಿಕರ ಅಂದಾಜು ಸಂಕ್ಯೆ 3.52 ಲಕ್ಷ
- ಸಿಲ್ಕ್ ಬೋರ್ಡನಿಂದ ಕೆ.ಆರ್.ಪುರದವರೆಗೆ ಮಾರ್ಗ ನಿಮಾಣದಯೋಜನಾ ವೆಚ್ಚ ರೂ.4,202ಕೋಟಿ.
- ಯೋಜನೆಗಾಗಿ ಕಡಿತಲೆಯಾಗುವ ಮರಗಳು 1412
ವೆಚ್ಚದ ವಿವರ
[ಬದಲಾಯಿಸಿ]ಯೋಜನೆ | ಹಣ |
---|---|
ಭೂ ಸ್ವಾಧೀನ | 173 ಕೋಟಿ |
ಮರುವಿನ್ಯಾಸ | 868 ಕೋಟಿ |
ನಿಲ್ದಾಣಗಳು | 441 ಕೋಟಿ |
ಮಾರ್ಗ ನಿರ್ಮಾಣ | 220ಕೋಟಿ |
ಡಿಪೋ | 246 ಕೋಟಿ |
ಇತರೆ | 96 ಕೋಟಿ |
ವಿದ್ಯುತ್ ಸಂಪರ್ಕ | 290 ಕೋಟಿ |
ನಿರ್ವಹಣೆ | 201 ಕೋಟಿ |
ರೈಲುಗಳು | 1209 ಕೋಟಿ |
ಸಿಗ್ನಲ್ ವ್ಯವಸ್ಥೆ | 427 ಕೋಟಿ |
ರಸ್ತೆ ದುರಸ್ತಿ | 32 ಕೋಟಿ |
ಒಟ್ಟು | 4,203 ಕೋಟಿ |
ಮೆಟ್ರೊ ಅಪಘಾತ ಪರಿಹಾರ ನಿಯಮಾವಳಿ ರಚನೆ
[ಬದಲಾಯಿಸಿ]ಮೆಟ್ರೊ ಸಂಚಾರದ ವೇಳೆ ಅಪಘಾತ ಸಂಭವಿಸಿ ಪ್ರಯಾಣಿಕ ಮೃತಪಟ್ಟರೆ ೪ ಲಕ್ಷ ರೂಪಾಯಿ ಹಾಗೂ ಸಾಮಾನ್ಯ ಗಾಯಾಳುಗಳಿಗೆ ಗರಿಷ್ಠ ೮೦ ಸಾವಿರ ರೂಪಾಯಿ ಪರಿಹಾರ ಧನ ವಿತರಿಸುವುದಾಗಿ ಸರ್ಕಾರ ರೂಪಿಸಿರುವ ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.
ಮೆಟ್ರೊ ಸಂಚಾರದ ವೇಳೆ ಅಪಘಾತ ಸಂಭವಿಸಿ ಪ್ರಯಾಣಿಕ ಮೃತಪಟ್ಟರೆ ೪ ಲಕ್ಷ ರೂಪಾಯಿ ಹಾಗೂ ಸಾಮಾನ್ಯ ಗಾಯಾಳುಗಳಿಗೆ ಗರಿಷ್ಠ ೮೦ ಸಾವಿರ ರೂಪಾಯಿ ಪರಿಹಾರ ಧನ ವಿತರಿಸುವುದಾಗಿ ಸರ್ಕಾರ ರೂಪಿಸಿರುವ ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಅಲ್ಲದೇ ಪರಿಹಾರ ಒದಗಿಸುವ ಪರಿಹಾರ ಆಯುಕ್ತರ ವರ್ತನೆ ಕುರಿತಂತೆ ಕೂಡ ನಿಯಮಗಳನ್ನು ರೂಪಿಸಲಾಗಿದೆ.
ಬೆಂಗಳೂರು ಮೆಟ್ರೊ ರೈಲು (ಪರಿಹಾರ ಪ್ರಕ್ರಿಯೆ) ನಿಯಮಾವಳಿ ೨೦೧೦ ರ ಪ್ರಕಾರ ಅಪಘಾತ ಸಂಭವಿಸಿದರೆ ಪ್ರಯಾಣಿಕ ಅಥವಾ ಪ್ರಯಾಣಿಕರ ಸಂಬಂಧಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ವಿಚಾರಣೆ ನಡೆಸುವ, ಪರಿಹಾರ ಧನ ನೀಡುವ ಒದಗಿಸುವ ಹಕ್ಕು ಸರ್ಕಾರದಿಂದ ನೇಮಕವಾದ ಪರಿಹಾರ ಆಯುಕ್ತರಿಗೆ ಇದೆ. ಆಯುಕ್ತರು ಸಿವಿಲ್ ನ್ಯಾಯಾಲಯದಂತೆಯೇ ಅರ್ಜಿ ವಿಚಾರಣೆ ನಡೆಸುತ್ತಾರೆ. ಅಲ್ಲದೇ ಮಧ್ಯಂತರ ಅಥವಾ ಅಂತಿಮ ಆದೇಶವನ್ನು ನೀಡಬಹುದು. ಪ್ರಯಾಣಿಕ ಮೃತಪಟ್ಟಿದ್ದರೆ ಸಂಬಂಧಿಕರಲ್ಲಿ ಯಾರಿಗೆ ಪರಿಹಾರ ನೀಡಬೇಕು ಎಂಬುದನ್ನು ಇವರೇ ತೀರ್ಮಾನಿಸುತ್ತಾರೆ. ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೆಟ್ರೊ ರೈಲು ಆಡಳಿತಕ್ಕೆ ನೋಟಿಸ್ ನೀಡಬಹುದು. ಅರ್ಜಿದಾರರಿಗೆ ಸೂಕ್ತ ಸಾಕ್ಷ್ಯ ಒದಗಿಸುವಂತೆ ಸೂಚಿಸ ಬಹುದು.
ಆಯುಕ್ತರು ನೀಡಿದ ಪರಿಹಾರ ಸೂಕ್ತವಾಗಿ ಕಂಡು ಬರದೇ ಇದ್ದಲ್ಲಿ ಅರ್ಜಿ ಸಲ್ಲಿಸಿದ ೩೦ ದಿನಗಳ ಒಳಗೆ ಪರಾಮರ್ಶನಾ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮರುಪರಿಶೀಲನಾ ಅರ್ಜಿ ಸೂಕ್ತವಾಗಿಲ್ಲದೇ ಇದ್ದರೆ ಅದನ್ನು ತಿರಸ್ಕರಿಸುವ ಅಧಿಕಾರ ಆಯುಕ್ತರಿಗೆ ನೀಡಲಾಗಿದೆ.
ಪರಿಹಾರದ ಮೊತ್ತ: ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ೪ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರದ ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ಅಲ್ಲದೇ ಅಪಘಾತದಿಂದಾಗಿ ಎರಡೂ ಕೈ, ಅಥವಾ ಎರಡೂ ಕಾಲು, ಸಂಪೂರ್ಣ ದೃಷ್ಟಿ ವೈಕಲ್ಯ, ಮುಖ ಭಾಗಕ್ಕೆ ತೀವ್ರ ಹಾನಿ, ಸಂಪೂರ್ಣ ಕಿವುಡುತನ ಸಂಭವಿಸಿದ್ದರೆ ೪ ಲಕ್ಷ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡುವಂತೆ ನಿಯಮ ರೂಪಿಸಲಾಗಿದೆ. ಅಲ್ಲದೇ ವಿವಿಧ ಅಂಗಗಳು ಊನಗೊಂಡರೆ ಬೇರೆ ಬೇರೆ ಬಗೆಯ ಪರಿಹಾರ ಸೂಚಿಸುವ ಪಟ್ಟಿಯೊಂದನ್ನು ನಿಯಮಾವಳಿಯಲ್ಲಿ ನೀಡಲಾಗಿದೆ. ಅಪಘಾತದಲ್ಲಿ ಗಾಯಾಳುವಾಗಿದ್ದ ವ್ಯಕ್ತಿ ಮೃತಪಟ್ಟರೆ ಗಾಯಾಳುವಿಗೆ ನೀಡಿದ್ದ ಪರಿಹಾರವನ್ನು ಮೃತರಿಗೆ ನೀಡುವ ಪರಿಹಾರಕ್ಕೆ ಹೆಚ್ಚಳ ಮಾಡಬಹುದಾಗಿದೆ. ಅಂದರೆ ಗಾಯಾಳುವಿಗೆ ನೀಡುತ್ತಿದ್ದ ಪರಿಹಾರಕ್ಕೆ ಬದಲಾಗಿ ಗರಿಷ್ಠ ೪ ಲಕ್ಷ ರೂಪಾಯಿಗಳನ್ನು ಪರಿಹಾರ ರೂಪವಾಗಿ ಘೋಷಿಸಬಹುದಾಗಿದೆ.
ಅಲ್ಲದೇ ಅಪಘಾತ ಸಂಭವಿಸಿದಾಗ ಪ್ರಯಾಣಿಕರು ಸಾಗಿಸುತ್ತಿದ್ದ ಸರಕು ಸರಂಜಾಮುಗಳು ಹಾನಿಗೊಳಗಾಗಿದ್ದರೆ ಅವುಗಳಿಗೆ ಪರಿಹಾರ ಒದಗಿಸುವಂತೆ ಕೂಡ ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಅರ್ಜಿ ಬಿಎಂಆರ್‌ಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. [೧] Archived 23 October 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಪರಿಹಾರ ನೀಡುವ ಪರಿಹಾರ ಆಯುಕ್ತರ ಕುರಿತು ಕೂಡ ಕೆಲವು ನಿಯಮವಾಳಿಗಳನ್ನು ರೂಪಿಸಲಾಗಿದೆ. ಬೆಂಗಳೂರು ಮೆಟ್ರೊ ರೈಲು ಪರಿಹಾರ ಆಯುಕ್ತರ ಅನುಚಿತ ವರ್ತನೆ ತನಿಖೆ ಅಥವಾ ಅವರ ಅಸಾಮರ್ಥ್ಯ ನಿಯಮಾವಳಿ- ೨೦೧೦ರಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಪರಿಹಾರ ಆಯುಕ್ತ ತನ್ನ ಕಾರ್ಯ ನಿರ್ವಹಿಸುವಲ್ಲಿ ಅಸಮರ್ಥನಾಗಿದ್ದರೆ ಅಥವಾ ಅನುಚಿತವಾಗಿ ವರ್ತಿಸಿದರೆ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ನಿಯಮಾವಳಿ ರೂಪಿಸಲಾಗಿದೆ.
ಇದಕ್ಕಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿ ಇರುತ್ತಾರೆ. ಅಲ್ಲದೇ ಆಯುಕ್ತರ ಅಸಾಮರ್ಥ್ಯತೆ ಕುರಿತು ತನಿಖೆ ನಡೆಸಲು ಹೈಕೋರ್ಟ್ ನ್ಯಾಯಾಧೀಶರನ್ನು ಸರ್ಕಾರ ನೇಮಿಸಬಹುದಾಗಿದೆ. ಆಯುಕ್ತರ ದೈಹಿಕ ಅಥವಾ ಮಾನಸಿಕ ಅಸಾಮರ್ಥ್ಯತೆ ಕುರಿತಂತೆ ವೈದ್ಯಕೀಯ ವರದಿ ನೀಡಲು ವೈದ್ಯಕೀಯ ಮಂಡಳಿಯ ನೆರವು ಪಡೆಯಬಹುದಾಗಿದೆ.[೨]
ಮೊಬೈಲ್ ಅಪ್ಲಿಕೇಶನ್
[ಬದಲಾಯಿಸಿ]ಬಿಎಂಆರ್ಸಿಎಲ್ 2013 ಆಂಡ್ರಾಯ್ಡ್ ಸಾಧನಗಳಿಗೆ ಒಂದು ನಮ್ಮ ಮೆಟ್ರೋ ಅಪ್ಲಿಕೇಶನ್ ಆರಂಭಿಸಿತು. ಆದಾಗ್ಯೂ, ಇದು ಸೀಮಿತ ಲಕ್ಷಣಗಳನ್ನು ಹೊಂದಿತ್ತು. ಅಪ್ಲಿಕೇಶನ್ ಅಧಿಕೃತವಾಗಿ ಹೆಚ್ಚುವರಿ ವೈಶಿಷ್ಟ್ಯಗಳನ್ನು 4 ನವೆಂಬರ್ 2016 ರಂದು ಪುನಃ ಪ್ರಾರಂಭಿಸಲಾಯಿತು. ಅಪ್ಲಿಕೇಶನ್ ಬಳಕೆದಾರರು ಸ್ಮಾರ್ಟ್ ಕಾರ್ಡ್ಗಳನ್ನು ಖರೀದಿಸಲು ಮತ್ತು ಪುನರ್ಭರ್ತಿಸಲು ಅನುಮತಿಸುತ್ತದೆ, ಹತ್ತಿರದ ಮೆಟ್ರೋ ಕೇಂದ್ರಗಳು ಪತ್ತೆ ಮತ್ತು ಪಾರ್ಕಿಂಗ್, ರೈಲು ಆವರ್ತನ, ಮಾರ್ಗ ನಕ್ಷೆ, ಮತ್ತು ದರದ ವಿವರಗಳನ್ನು ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಹಲವಾರು ಚಲನಚಿತ್ರಗಳು ಜಾಹೀರಾತುಗಳು ನಮ್ಮ ಮೆಟ್ರೋ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಡಿಸೆಂಬರ್ 2016 ರಲ್ಲಿ, ತಮಿಳು ಚಲನಚಿತ್ರ Imaikkaa Nodigal ನೇರಳೆ ಮಾರ್ಗದ ಭೂಗತ ಸುರಂಗ ಏರಿಕೆಯ ಒಳಗೆ ದೃಶ್ಯಗಳನ್ನು ಚಿತ್ರಿಸಿದ ಮೊದಲ ಚಿತ್ರವಾಗಿದೆ. BMRC ಅಧಿಕಾರಿಗಳ ಪ್ರಕಾರ, ಈ ಚಿತ್ರದ ಮೊದಲು, ಒಂದು ಕನ್ನಡ ಚಿತ್ರ, ಒಂದು ತೆಲುಗು ಚಲನಚಿತ್ರ ಮತ್ತು ಅನೇಕ ಜಾಹೀರಾತುಗಳನ್ನು ನಮ್ಮ ಮೆಟ್ರೋ ಆವರಣದಲ್ಲಿ ಚಿತ್ರೀಕರಣ ಮಾಡಲಾಯಿತು.
ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣಾ ಯೋಜನೆ
[ಬದಲಾಯಿಸಿ]- ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣಾ ಯೋಜನೆಯಲ್ಲಿ ನಿರ್ಮಾಣವಾಗಲಿರುವ 13.79 ಕಿ.ಮೀ ಉದ್ದದ ಸುರಂಗಮಾರ್ಗಕ್ಕೆ ರೂ.3,700 ಕೋಟಿ ಸಾಲ ಪಡೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ. ‘ನಾಗವಾರ– ಗೊಟ್ಟಿಗೆರೆ (ರೀಚ್ 6) ಮಾರ್ಗದಲ್ಲಿ 13.9 ಕಿ.ಮೀ ಉದ್ದದ ಸುರಂಗ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಆರ್ಥಿಕ ನೆರವು ನೀಡಲು ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ತಾತ್ವಿಕ ಒಪ್ಪಿಗೆ ನೀಡಿದೆ (ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ).
- ‘ಮೆಟ್ರೊ ಮೊದಲ ಹಂತದಲ್ಲಿ 8.8 ಕಿ.ಮೀ ಉದ್ದದ ಸುರಂಗ ನಿರ್ಮಿಸಲಾಗಿದೆ.
- ಸಂಪಿಗೆ ರಸ್ತೆ– ಮೆಜೆಸ್ಟಿಕ್ ನಡುವೆ ನೆಲಮಟ್ಟದಿಂದ 60 ಅಡಿ ಆಳದಲ್ಲಿ ಸುರಂಗ ಕೊರೆಯುತ್ತಿದ್ದ ಗೋದಾವರಿ ಯಂತ್ರದ ಕಟರ್ ಹೆಡ್ ಹಾಳಾಗಿತ್ತು. ಅದನ್ನು ಬದಲಾಯಿಸಿ ಕಾಮಗಾರಿ ಮುಂದುವರಿಸಬೇಕಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಿಂದ ಚಿಕ್ಕಪೇಟೆ ಕಡೆಗೆ ಸುರಂಗ ಮಾರ್ಗ ಕೊರೆಯುವಾಗ ಅನೇಕ ಅಡ್ಡಿಗಳು ಎದುರಾಗಿದ್ದವು. ಅನಿರೀಕ್ಷಿತವಾಗಿ ಕಲ್ಲು ಬಂಡೆಗಳು, ಬಾವಿಗಳು, ರಾಜರ ಕಾಲದ ಸುರಂಗ ಮಾರ್ಗಗಳು ಎದುರಾಗಿದ್ದವು. ಇದರಿಂದಾಗಿ ಸುರಂಗ ನಿರ್ಮಾಣದ ವೇಗ ಕುಂಠಿತಗೊಂಡು ಪರಿಣಾಮ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರೈಸಲು ಸಾಧ್ಯವಾಗಿರಲಿಲ್ಲ.
- ಆರ್. ವೀ. ರಸ್ತೆ - ಬೊಮ್ಮಸಂದ್ರ - ೧೮.೮೦ km
- ಗೊಟ್ಟಿಗೆರೆ - ನಾಗವಾರ ೨೧.೨೫ km[೧೨]
- ಸದ್ಯದ ಮಾರ್ಗಗಳಿಗೆ ವಿಸ್ತರಣೆ: ನಾಗಸಂದ್ರ - ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರ - ೪.೦೨ km
ಮುಂದಿನ ಯೋಜನೆ
[ಬದಲಾಯಿಸಿ]- ಎರಡನೇ ಹಂತದಲ್ಲಿ ರೀಚ್ 6 ಮಾರ್ಗದಲ್ಲಿ ನಾಗವಾರದಿಂದ ಡೇರಿ ವೃತ್ತದವರೆಗೆ ಸುರಂಗ ಮಾರ್ಗ ಹಾಗೂ ಸ್ವಾಗತ್ ಕ್ರಾಸ್ ನಿಲ್ದಾಣದಿಂದ ಗೊಟ್ಟಿಗೆರೆ ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. ಸುರಂಗ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಮಾರ್ಗವು ಎಂ.ಜಿ. ರಸ್ತೆ, ಶಿವಾಜಿನಗರ, ದಂಡು (ಕಂಟೋನ್ಮೆಂಟ್) ರೈಲು ನಿಲ್ದಾಣದಂತಹ ಪ್ರಮುಖ ತಾಣಗಳಿಗೆ ಮೆಟ್ರೊ ಸಂಪರ್ಕ ಕಲ್ಪಿಸಲಿದೆ. ಕಾಮಗಾರಿ ಆರಂಭಿಸುವ ಮುನ್ನ 245 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ.
- ಮೊದಲ ಹಂತದಲ್ಲಿ ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲಿ ಸಿಟಿ ರೈಲು ನಿಲ್ದಾಣದಿಂದ (ಕುಷ್ಠರೋಗ ಆಸ್ಪತ್ರೆ ಬಳಿ) ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಹಾಗೂ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ನಿಲ್ದಾಣದವರೆಗೆ ಒಟ್ಟು 8.8 ಕಿ.ಮೀ ಉದ್ದದ ಜೋಡಿ ಮಾರ್ಗಕ್ಕೆ ಸುಮಾರು 17 ಕಿ.ಮೀ ಸುರಂಗ ನಿರ್ಮಿಸಲಾಗಿತ್ತು. ‘2020ರ ಒಳಗೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಮೊದಲ ಹಂತದ ಕಾಮಗಾರಿಯಲ್ಲಿ ಸುರಂಗ ಕೊರೆಯುವ ಆರು ಅತ್ಯಾಧುನಿಕ ಟಿಬಿಎಂಗಳನ್ನು ಯಂತ್ರಗಳನ್ನು ಬಳಕೆ ಮಾಡಲಾಗಿತ್ತು. ಎರಡನೇ ಹಂತದ ಸುರಂಗ ಕಾಮಗಾರಿಗೆ ಒಟ್ಟು 13 ಟಿಬಿಎಂಗಳನ್ನು ಬಳಸಲಾಗುತ್ತದೆ.
ಅಂಕಿಅಂಶ
[ಬದಲಾಯಿಸಿ]- 21.25ಕಿ.ಮೀ ನಾಗವಾರ– ಗೊಟ್ಟಿಗೆರೆ ಮಾರ್ಗದ ಉದ್ದ
- 13.79ಕಿ.ಮೀ ನಾಗವಾರದಿಂದ ಡೇರಿ ವೃತ್ತದವರೆಗಿನ ಸುರಂಗ ಮಾರ್ಗದ ಉದ್ದ
- 12 ನಿಲ್ದಾಣಗಳು ಸುರಂಗಮಾರ್ಗದಲ್ಲಿ ನಿರ್ಮಾಣವಾಗಲಿವೆ.[೧೩]
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ‘ನಮ್ಮ ಮೆಟ್ರೊ’
[ಬದಲಾಯಿಸಿ]- 24 Jun, 2017
- ನಾಗವಾರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದವರೆಗೆ ‘ನಮ್ಮ ಮೆಟ್ರೋ’ ಮಾರ್ಗ ನಿರ್ಮಿಸಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಈ ನಿಟ್ಟಿನಲ್ಲಿ ಆರಂಭಿಸಿದೆ. ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ನಿಗಮವು ಗೊಟ್ಟಿಗೆರೆಯಿಂದ ನಾಗವಾರದವರೆಗೆ ಹೊಸ ಮಾರ್ಗವನ್ನು ನಿರ್ಮಿಸಲಿದೆ. ಇದು ಸುಮಾರು 13.79 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು (ಡೇರಿ ವೃತ್ತದಿಂದ ನಾಗವಾರದವರೆಗೆ) ಒಳಗೊಂಡಿದೆ.[೧೪]
ನೋಡಿ
[ಬದಲಾಯಿಸಿ]- ಬೆಂಗಳೂರು
- ಕರ್ನಾಟಕ
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫
- ಬೆಂಗಳೂರು ಮಹಾನಗರ ಪಾಲಿಕೆ
- ಕರ್ನಾಟಕದ ಮಹಾನಗರಪಾಲಿಕೆಗಳು
ಇದನ್ನು ನೋಡಿ
[ಬದಲಾಯಿಸಿ]ಟೆಂಪ್ಲೇಟು:Portal ಟೆಂಪ್ಲೇಟು:Portal
- ಭಾರತದ ಮೆಟ್ರೋಗಳ ಪಟ್ಟಿ
- List of rapid transit systems
- ಭಾರತೀಯ ರೈಲ್ವೆ
- Rail transport in India
- 2010 in rail transport in India
- Delhi Metro
ಉಲ್ಲೇಖಗಳು
[ಬದಲಾಯಿಸಿ]- ↑ https://www.deccanherald.com/india/karnataka/bengaluru/metro-finally-comes-to-whitefield-take-a-ride-on-march-26-from-7-am-1203579.html
- ↑ "Metro Phase I Will be Ready by May, to Miss Deadline". The New Indian Express. 22 ಅಕ್ಟೋಬರ್ 2015. Archived from the original on 12 ಜನವರಿ 2016. Retrieved 23 ನವೆಂಬರ್ 2016.
- ↑ "14th Annual Report 2019-20" (PDF). Bangalore Metro Rail Corporation Limited. Archived from the original (PDF) on 28 ಮಾರ್ಚ್ 2023. Retrieved 4 ಏಪ್ರಿಲ್ 2023.
- ↑ "At 1 million passengers, Namma Metro records highest ridership on Friday - newindianexpress". The New Indian Express. Retrieved 1 ಸೆಪ್ಟೆಂಬರ್ 2019.
- ↑ "Passengers welcome higher Namma Metro frequency - KARNATAKA". The Hindu. 28 ಫೆಬ್ರವರಿ 2017. Retrieved 14 ಜನವರಿ 2018.
- ↑ South India's first underground Metro launch on April 29
- ↑ Purple Line sees six-fold increase in commuters
- ↑ Underground metro will be ready
- ↑ ಜಯನಗರಕ್ಕೆ ಬಂತು ಮೆಟ್ರೊ ರೈಲು!;ಪ್ರಜಾವಾಣಿ ;21 Nov, 2016
- ↑ ನಮ್ಮ ಮೆಟ್ರೊ;29 Dec, 2016
- ↑ ವರ್ತುಲ ರಸ್ತೆಯಲ್ಲಿ ಬರಲಿದೆ ಮೆಟ್ರೊ
- ↑ http://timesofindia.indiatimes.com/city/bangalore/Green-signal-for-Metros-Phase-II/articleshow/11983949.cms
- ↑ ಕಾಮಗಾರಿಗೆ ₹3,700 ಕೋಟಿ ಸಾಲ;ಪ್ರವೀಣ್ ಕುಮಾರ್ ಪಿ.ವಿ.;27 Apr, 2017
- ↑ ಮೇಲ್ಮೈ ವಿನ್ಯಾಸ, ಸ್ವತ್ತು ಸರ್ವೆಗೆ ಟೆಂಡರ್;ಪ್ರಜಾವಾಣಿ ವಾರ್ತೆ;24 Jun, 2017
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Bangalore Metro Rail Corporation Limited Archived 23 October 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Official route map Archived 2011-10-23 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Pages using duplicate arguments in template calls
- Short description is different from Wikidata
- Use dmy dates from October 2020
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- Namma Metro
- Bangalore Metro
- Transport in Bangalore
- Rapid transit in India
- WikiProject Bangalore
- ಮೆಟ್ರೋ ರೈಲು ಸಾರಿಗೆ
- ಸಮೂಹಿಕ ಕ್ಷಿಪ್ರ ಸಾರಿಗೆ
- ಸಾರಿಗೆ
- ಕರ್ನಾಟಕದ ಮಹಾನಗರಪಾಲಿಕೆಗಳು
- ಮಹಾನಗರಪಾಲಿಕೆಗಳು
- ಬೆಂಗಳೂರು