ವಿಷಯಕ್ಕೆ ಹೋಗು

ದಾದಾ ಹರಿರ್ ವಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಟ್ಟಿಲುಬಾವಿಯ ಪಾವಟಿಗೆ

ದಾದಾ ಹರಿರ್ ವಾವ್ (ಗುಜರಾತಿ: દાદા હરિર વાવ) ಭಾರತದ ಗುಜರಾತ್ ರಾಜ್ಯದ ಅಹ್ಮದಾಬಾದ್‍ನಿಂದ ೧೫ ಕಿ.ಮಿ. ದೂರದಲ್ಲಿರುವ ಅಸರ್ವಾ ಪ್ರದೇಶದಲ್ಲಿರುವ ಒಂದು ಮೆಟ್ಟಿಲುಬಾವಿಯಾಗಿದೆ.

ಮೆಟ್ಟಿಲುಬಾವಿಯಲ್ಲಿರುವ ಪರ್ಷಿಯನ್ ಶಾಸನದ ಪರಕಾರ ಈ ಮೆಟ್ಟಿಲುಬಾವಿಯನ್ನು ಮಹ್ಮೂದ್ ಬೇಗಡಾನ ಮನೆಯ ಮಹಿಳೆಯಾಗಿದ್ದ ಧಾಯಿ ಹರಿರ್ ೧೪೮೫ರಲ್ಲಿ ಕಟ್ಟಿಸಿದರು.[] ಅವಳು ಅರಸರ ಜನಾನಾದ ಮೇಲ್ವಿಚಾರಕಿಯಾಗಿದ್ದಳು.

ಸೋಲಂಕಿ ವಾಸ್ತುಕಲಾ ಶೈಲಿಯಲ್ಲಿ ಮರಳುಗಲ್ಲನ್ನು ಬಳಸಿ ನಿರ್ಮಿಸಲ್ಪಟ್ಟಿರುವ ದಾದಾ ಹರಿರ್ ವಾವ್ ಐದು ಅಂತಸ್ತುಗಳಷ್ಟು ಆಳವಿದೆ. ನಕ್ಷೆ ಪ್ರಕಾರ ಮೇಲ್ಭಾಗದಲ್ಲಿ ಅಷ್ಟಭುಜಗಳನ್ನು ಹೊಂದಿದೆ ಮತ್ತು ಸಂಕೀರ್ಣವಾಗಿ ಕೆತ್ತಲ್ಪಟ್ಟ ಹೆಚ್ಚಿನ ಸಂಖ್ಯೆಯ ಕಂಬಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರತಿ ಅಂತಸ್ತು ಜನರು ಸಭೆ ಸೇರುವಷ್ಟು ವಿಶಾಲವಾಗಿದೆ. ಆ ಮಟ್ಟದಲ್ಲಿ ಅಂತರ್ಜಲವನ್ನು ಪಡೆಯಲು ಇದನ್ನು ಆಳವಾಗಿ ಅಗೆಯಲಾಯಿತು ಮತ್ತು ವರ್ಷದಲ್ಲಿ ಬೀಳುವ ಮಳೆಯ ಕಾರಣ ನೀರಿನ ಮಟ್ಟದಲ್ಲಿ ಆಗುವ ಕಾಲಿಕ ಏರಿಳಿತಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿತು.

ಉಲ್ಲೇಖಗಳು

[ಬದಲಾಯಿಸಿ]
  1. Gazetteer of the Bombay Presidency: Ahmedabad. Government Central Press. 1879. p. 282.


ಹೊರಗಿನ ಕೊಂಡಿಗಳು

[ಬದಲಾಯಿಸಿ]