ಜೋರ್ಡನ್ ಬೆಲ್ಫೋರ್ಟ್
ಜೋರ್ಡನ್ ಬೆಲ್ಫೋರ್ಟ್ | |
---|---|
ಜನನ | ಜೋರ್ಡನ್ ರಾಸ್ ಬೆಲ್ಫೋರ್ಟ್ ೯ ಜುಲೈ ೧೯೬೨ ನ್ಯೂಯಾರ್ಕ್ ನಗರ, ಯು.ಎಸ್. |
ವೃತ್ತಿ |
|
ಜೋರ್ಡನ್ ರಾಸ್ ಬೆಲ್ಫೋರ್ಟ್(/ˈbɛlfərt/; ಜನನ ಜುಲೈ ೯, ೧೯೬೨) ಒಬ್ಬ ಅಮೇರಿಕನ್ ಮಾಜಿ ಸ್ಟಾಕ್ ಬ್ರೋಕರ್, ಹಣಕಾಸು ಅಪರಾಧಿ ಮತ್ತು ಉದ್ಯಮಿ. ೧೯೯೯ ರಲ್ಲಿ ಅವರು ಷೇರು ಮಾರುಕಟ್ಟೆ ಮಣಿಪ್ಯುಲೇಷನ್ ಮತ್ತು ಪೆನ್ನಿ-ಷೇರು ಮೋಸದ ಭಾಗವಾಗಿ ಬೂಯಲರ್ ರೂಮ್ ನಡೆಸಿದ ಜತೆಗೆ ಮೋಸ ಮತ್ತು ಸಂಬಂಧಿತ ಅಪರಾಧಗಳಿಗೆ ದೋಷಸ್ವೀಕೃತಿಯನ್ನು ನೀಡಿದ್ದಾರೆ.[೧] ಬೆಲ್ಫೋರ್ಟ್ ಒಪ್ಪಂದದ ಭಾಗವಾಗಿ ೨೨ ತಿಂಗಳುಗಳನ್ನು ಜೈಲಿನಲ್ಲಿ ಕಳೆದರು. ಅವರು ೨೦೦೭ ರಲ್ಲಿ ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಎಂಬ ಆತ್ಮಚರಿತ್ರೆಯನ್ನು ಪ್ರಕಟಿಸಿದರು. ಅದೇ ಹೆಸರಿನ ಚಿತ್ರಕ್ಕೆ ಆದರ್ಶವಾಗಿದ್ದು, ೨೦೧೩ ರಲ್ಲಿ ಮಾರ್ಟಿನ್ ಸ್ಕೋರ್ಸೇಜೆ ನಿರ್ದೇಶನದಲ್ಲಿ ಬಿಡುಗಡೆಯಾಯಿತು. ಅದರಲ್ಲಿ ಲಿಯೋನಾರ್ಡೋ ಡಿಕ್ಯಾಪ್ರಿಯೋ ಅವರು ಬೆಲ್ಫೋರ್ಟ್ ಪಾತ್ರವನ್ನು ನಿರ್ವಹಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ಬೆಲ್ಫೋರ್ಟ್ ಅವರು ೧೯೬೨ ರಲ್ಲಿ ನ್ಯೂಯಾರ್ಕ್ ನಗರದ ಬರೋ ಬ್ರಾಂಕ್ಸ್ನಲ್ಲಿ ಯಹೂದಿ ಪೋಷಕರಾದ ಮ್ಯಾಕ್ಸ್ವೆಲ್ "ಮ್ಯಾಕ್ಸ್" ಬೆಲ್ಫೋರ್ಟ್ ಮತ್ತು ಲೇಹ್ (ನೀ ಮಾರ್ಕೊವಿಟ್ಜ್) ಗೆ ಜನಿಸಿದರು.[೨] ಅವರಿಬ್ಬರೂ ಲೆಕ್ಕಪರಿಶೋಧಕರಾಗಿದ್ದರು.[೩][೪][೫] ಅವರ ತಂದೆಯ ಅಜ್ಜ, ಜ್ಯಾಕ್ ಬೆಲ್ಫೋರ್ಟ್ (೧೯೦೪-೧೯೭೦), ರಷ್ಯಾದಿಂದ ವಲಸೆ ಬಂದವರು. ಅವರ ಅಜ್ಜಿ ನ್ಯೂಜೆರ್ಸಿಯಲ್ಲಿ ಲಿಥುವೇನಿಯನ್ ಪೋಷಕರಿಗೆ ಜನಿಸಿದ ಎರಡನೇ ತಲೆಮಾರಿನ ಅಮೇರಿಕನ್.[೬][೭] ಬೆಲ್ಫೋರ್ಟ್ ಅವರು ಕ್ವೀನ್ಸ್ನ ಬೇಸೈಡ್ನಲ್ಲಿ ಬೆಳೆದರು.[೮][೯][೪][೧೦][೧೧] ಪ್ರೌಢಶಾಲೆಯನ್ನು ಪೂರ್ಣಗೊಳಿಸುವ ಮತ್ತು ಕಾಲೇಜು ಪ್ರಾರಂಭಿಸುವ ನಡುವೆ, ಬೆಲ್ಫೋರ್ಟ್ ಮತ್ತು ಅವನ ನಿಕಟ ಬಾಲ್ಯದ ಸ್ನೇಹಿತ ಎಲಿಯಟ್ ಲೋವೆನ್ಸ್ಟರ್ನ್ ಸ್ಥಳೀಯ ಬೀಚ್ನಲ್ಲಿ ಜನರಿಗೆ ಸ್ಟೈರೋಫೊಮ್ ಕೂಲರ್ಗಳಿಂದ ಇಟಾಲಿಯನ್ ಐಸ್ ಅನ್ನು ಮಾರಾಟ ಮಾಡುವ ಮೂಲಕ $೨೦,೦೦೦ ಗಳಿಸಿದರು.[೧೨]
ಬೆಲ್ಫೋರ್ಟ್ ಅವರು ಜೀವಶಾಸ್ತ್ರದಲ್ಲಿ ಪದವಿಯೊಂದಿಗೆ ಅಮೇರಿಕನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.[೧೦][೧೩] ಬೆಲ್ಫೋರ್ಟ್ ಅವರು ಲೊವೆನ್ಸ್ಟರ್ನ್ನೊಂದಿಗೆ ಗಳಿಸಿದ ಹಣವನ್ನು ದಂತ ಶಾಲೆಗೆ ಪಾವತಿಸಲು ಬಳಸಲು ಯೋಜಿಸಿದರು.[೧೪] ಅವರು ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸ್ಕೂಲ್ ಆಫ್ ಡೆಂಟಿಸ್ಟ್ರಿಗೆ ಸೇರಿಕೊಂಡರು.
ವೃತ್ತಿ
[ಬದಲಾಯಿಸಿ]ಆರಂಭಿಕ ಉದ್ಯಮಗಳು
[ಬದಲಾಯಿಸಿ]ಬೆಲ್ಫೋರ್ಟ್ ಅವರು ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ ಮನೆ-ಮನೆಗೆ ಮಾಂಸ ಮತ್ತು ಸಮುದ್ರ ಆಹಾರ ಮಾರಾಟಗಾರರಾದರು. ಹಲವಾರು ಕೆಲಸಗಾರರನ್ನು ನೇಮಿಸಿಕೊಳ್ಳಲು ಮತ್ತು ವಾರಕ್ಕೆ ೫,೦೦೦ ಪೌಂಡ್ (೨,೩೦೦ ಕಿಲೋಗ್ರಾಂ) ಗೋಮಾಂಸ ಮತ್ತು ಮೀನುಗಳನ್ನು ಮಾರಾಟ ಮಾಡಲು ಅವನು ತನ್ನ ಮಾಂಸ-ಮಾರಾಟದ ವ್ಯಾಪಾರವನ್ನು ಬೆಳೆಸಿದರು. ವ್ಯಾಪಾರವು ಅಂತಿಮವಾಗಿ ವಿಫಲವಾಯಿತು.
ಸ್ಟ್ರಾಟನ್ ಓಕ್ಮಾಂಟ್
[ಬದಲಾಯಿಸಿ]ಬೆಲ್ಫೋರ್ಟ್ ಅವರು ಸ್ಟ್ರಾಟನ್ ಓಕ್ಮಾಂಟ್ ಅನ್ನು ಸ್ಟ್ರಾಟನ್ ಸೆಕ್ಯುರಿಟೀಸ್ನ ಫ್ರ್ಯಾಂಚೈಸ್ ಆಗಿ ಸ್ಥಾಪಿಸಿದರು. ನಂತರ ಮೂಲ ಸ್ಥಾಪಕನಿಂದ ಸಂಸ್ಥೆಯನ್ನು ಖರೀದಿಸಿದರು. ಸ್ಟ್ರಾಟನ್ ಓಕ್ಮಾಂಟ್ ಒಂದು ಬಾಯ್ಲರ್ ರೂಮ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅದು ಪೆನ್ನಿ ಸ್ಟಾಕ್ಗಳನ್ನು ಮಾರಾಟ ಮಾಡಿತು. "ಪಂಪ್ ಮತ್ತು ಡಂಪ್" ಸ್ಟಾಕ್ ಮಾರಾಟದೊಂದಿಗೆ ಹೂಡಿಕೆದಾರರನ್ನು ವಂಚಿಸಿತು.[೧೫] ಸ್ಟ್ರಾಟನ್ ಓಕ್ಮಾಂಟ್ ಒಂದು ಹಂತದಲ್ಲಿ ೧,೦೦೦- ಸ್ಟಾಕ್ ಬ್ರೋಕರ್ಗಳನ್ನು ನೇಮಿಸಿಕೊಂಡರು.
ಬೆಲ್ಫೋರ್ಟ್ ಎಫ್.ಬಿ.ಐ.ಗೆ ಮಾಹಿತಿದಾರರಾಗಿದ್ದು, ಅನೇಕ ಸಹಭಾಗಿಗಳು ಮತ್ತು ಸಂಬಂಧಿಕರ ವಿರುದ್ಧ ವಯರ್ ಧರಿಸಿ ಸಾಕ್ಷ್ಯ ನೀಡಿದರು. ಮತ್ತು ನಂತರ ಅವುಗಳ ವಿರುದ್ಧ ಸಾಕ್ಷ್ಯ ನೀಡಿದನು. ೨೦೦೩ ರ ಜುಲೈ ೧೮ ರಂದು, ಬೆಲ್ಫೋರ್ಟ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಬೆಲ್ಫೋರ್ಟ್ ಅವರು ೨೨ ತಿಂಗಳು ತಾಫ್ಟ್, ಕ್ಯಾಲಿಫೋನಿಯಾದ ತಾಫ್ಟ್ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದರು.
ಮರುಸ್ಥಾಪನೆ
[ಬದಲಾಯಿಸಿ]೨೦೦೯ ರವರೆಗೆ ವಂಚಿಸಿದ ೧,೫೧೩ ಕ್ಲೈಂಟ್ಗಳಿಗೆ ಮರುಪಾವತಿಗಾಗಿ ತನ್ನ ಆದಾಯದ ೫೦% ಅನ್ನು ಪಾವತಿಸಲು ಬೆಲ್ಫೋರ್ಟ್ನ ಮರುಪಾವತಿ ಒಪ್ಪಂದದ ಅಗತ್ಯವಿತ್ತು. ಒಟ್ಟು $೧೧೦ ಮಿಲಿಯನ್ ಮರುಪಾವತಿಯನ್ನು ಮತ್ತಷ್ಟು ಕಡ್ಡಾಯಗೊಳಿಸಲಾಯಿತು. ೨೦೧೩ ರ ವೇಳೆಗೆ ಬೆಲ್ಫೋರ್ಟ್ನ ಬಲಿಪಶುಗಳಿಂದ ಮರುಪಡೆಯಲಾದ $೧೧೦ ಮಿಲಿಯನ್ನಲ್ಲಿ ಸುಮಾರು $೧೦ ಮಿಲಿಯನ್ ಜಪ್ತಿ ಮಾಡಿದ ಆಸ್ತಿಗಳ ಮಾರಾಟದ ಫಲಿತಾಂಶವಾಗಿದೆ.[೧೬]
ಬರವಣಿಗೆ
[ಬದಲಾಯಿಸಿ]ಬೆಲ್ಫೋರ್ಟ್ ಅವರು ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಮತ್ತು ಕ್ಯಾಚಿಂಗ್ ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಎಂಬ ಎರಡು ಆತ್ಮಚರಿತ್ರೆಗಳನ್ನು ಬರೆದರು. ಇವುಗಳನ್ನು ಸುಮಾರು ೪೦ ದೇಶಗಳಲ್ಲಿ ಪ್ರಕಟಿಸಲಾಗಿದೆ ಮತ್ತು ೧೮ ಭಾಷೆಗಳಿಗೆ ಅನುವಾದಿಸಲಾಗಿದೆ. ಲಿಯೊನಾರ್ಡೊ ಡಿಕಾಪ್ರಿಯೊ (ಬೆಲ್ಫೋರ್ಟ್ ಆಗಿ), ಜೋನಾ ಹಿಲ್ ಮತ್ತು ಮಾರ್ಗಾಟ್ ರಾಬಿ ನಟಿಸಿದ ಅವರ ಪುಸ್ತಕಗಳನ್ನು ಆಧರಿಸಿದ ಚಲನಚಿತ್ರವು ೨೦೧೩ ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರವನ್ನು ಟೆರೆನ್ಸ್ ವಿಂಟರ್ ಅವರು ಬರೆದಿದ್ದಾರೆ ಮತ್ತು ಮಾರ್ಟಿನ್ ಸ್ಕೋರ್ಸೆಸೆ ಅವರು ನಿರ್ದೇಶಿಸಿದ್ದಾರೆ.
೨೦೧೭ ರಲ್ಲಿ, ಅವರು ವೇ ಆಫ್ ದಿ ವುಲ್ಫ್: ಸ್ಟ್ರೈಟ್ ಲೈನ್ ಸೆಲ್ಲಿಂಗ್: ಮಾಸ್ಟರ್ ದಿ ಆರ್ಟ್ ಆಫ್ ಪರ್ಸುವೇಶನ್, ಇನ್ಫ್ಲುಯೆನ್ಸ್ ಮತ್ತು ಸಕ್ಸಸ್ ಅನ್ನು ಬರೆಯಲು ಹೋದರು. ೨೦೨೩ ರಲ್ಲಿ, ಬೆಲ್ಫೋರ್ಟ್ ಅವರು ದಿ ವುಲ್ಫ್ ಆಫ್ ಇನ್ವೆಸ್ಟಿಂಗ್ ಅನ್ನು ಬಿಡುಗಡೆ ಮಾಡಿದರು.
ಪ್ರೇರಕ ಮಾತು
[ಬದಲಾಯಿಸಿ]ಬೆಲ್ಫೋರ್ಟ್ ಪ್ರೇರಕ ಭಾಷಣಗಳನ್ನು ನೀಡಿದ್ದಾರೆ. ಇದು ಇತರ ಪ್ರದರ್ಶನಗಳ ಜೊತೆಗೆ ಆಸ್ಟ್ರೇಲಿಯಾದಲ್ಲಿ "ದಿ ಟ್ರುತ್ ಬಿಹೈಂಡ್ ಹಿಸ್ ಸಕ್ಸಸ್" ಎಂಬ ನೇರ ಸೆಮಿನಾರ್ಗಳ ಪ್ರವಾಸವನ್ನು ಒಳಗೊಂಡಿದೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಬೆಲ್ಫೋರ್ಟ್ ತನ್ನ ಮೊದಲ ಪತ್ನಿ ಡೆನಿಸ್ ಲೊಂಬಾರ್ಡೊಳನ್ನು ೧೯೮೫ ರಲ್ಲಿ ವಿವಾಹವಾದರು.[೧೭] ಸ್ಟ್ರಾಟನ್ ಓಕ್ಮಾಂಟ್ ಅನ್ನು ನಡೆಸುತ್ತಿರುವಾಗ, ಬೆಲ್ಫೋರ್ಟ್ ಮತ್ತು ಲೊಂಬಾರ್ಡೊ ವಿಚ್ಛೇದನ ಪಡೆದರು. ನಂತರ ಅವರು ಬ್ರಿಟೀಷ್ ಮೂಲದ ನಾಡಿನ್ ಕ್ಯಾರಿಡಿಯನ್ನು ವಿವಾಹವಾದರು. ಅವಳೊಂದಿಗೆ ಅವನಿಗೆ ಇಬ್ಬರು ಮಕ್ಕಳಿದ್ದರು. ೨೦೦೫ ರಲ್ಲಿ ಬೆಲ್ಫೋರ್ಟ್ ಮತ್ತು ಕ್ಯಾರಿಡಿ ಅವರು ವಿಚ್ಛೇದನವನ್ನು ಪಡೆದರು.[೧೮][೧೯]
ಬೆಲ್ಫೋರ್ಟ್ ಐಷಾರಾಮಿ ವಿಹಾರ ನೌಕೆ ನಡೈನ್ನ ಅಂತಿಮ ಮಾಲೀಕರಾಗಿದ್ದರು. ಇದನ್ನು ಮೂಲತಃ ಫ್ರೆಂಚ್ ಫ್ಯಾಶನ್ ಡಿಸೈನರ್ ಮತ್ತು ಉದ್ಯಮಿ ಕೊಕೊ ಶನೆಲ್ಗಾಗಿ ೧೯೬೧ ರಲ್ಲಿ ನಿರ್ಮಿಸಲಾಯಿತು. ವಿಹಾರ ನೌಕೆಗೆ ಕ್ಯಾರಿಡಿಯ ಹೆಸರನ್ನು ಮರುನಾಮಕರಣ ಮಾಡಲಾಯಿತು. ಜೂನ್ ೧೯೯೬ ರಲ್ಲಿ, ವಿಹಾರ ನೌಕೆಯು ಸಾರ್ಡಿನಿಯಾದ ಪೂರ್ವ ಕರಾವಳಿಯಲ್ಲಿ ಮುಳುಗಿತು.[೨೦]
ಕೆಲಸಗಳು
[ಬದಲಾಯಿಸಿ]ಕಾಲ್ಪನಿಕವಲ್ಲದ
[ಬದಲಾಯಿಸಿ]ಆತ್ಮಚರಿತ್ರೆಗಳು
[ಬದಲಾಯಿಸಿ]- ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ (ಬಾಂಟಮ್, ೨೦೦೭). ISBN 978-0553805468.[೨೧]
- ಕ್ಯಾಚಿಂಗ್ ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್: ಮೋರ್ ಇನ್ಕ್ರೆಡಿಬಲ್ ಟ್ರೂ ಸ್ಟೋರೀಸ್ ಆಫ್ ಫಾರ್ಚೂನ್ಸ್, ಸ್ಕೀಮ್ಗಳು, ಪಾರ್ಟಿಗಳು ಮತ್ತು ಪ್ರಿಸನ್]] (ಬಾಂಟಮ್, 2009). ISBN 978-0553807042.[೨೨]
ಸ್ವಯಂ ಸಹಾಯ
[ಬದಲಾಯಿಸಿ]- ವೇ ಆಫ್ ದಿ ವುಲ್ಫ್: ಸ್ಟ್ರೈಟ್ ಲೈನ್ ಸೆಲ್ಲಿಂಗ್ನೊಂದಿಗೆ ಮಾಸ್ಟರ್ ಕ್ಲೋಸರ್ ಆಗಿರಿ (೨೦೧೭). ISBN 9781501164286.
ರೂಪಾಂತರಗಳು
[ಬದಲಾಯಿಸಿ]ಸ್ಕೋರ್ಸೆಜಿಯ ಬೆಲ್ಫೋರ್ಟ್ ಅವರ ಆತ್ಮಕಥನದ ಸಂಸ್ಕರಣೆಯ ಚಿತ್ರೀಕರಣವು ಆಗಸ್ಟ್ ೨೦೧೨ ರಲ್ಲಿ ಪ್ರಾರಂಭವಾಯಿತು. ಈ ಚಿತ್ರವು ಡಿಸೆಂಬರ್ ೨೫, ೨೦೧೩ ರಂದು ಬಿಡುಗಡೆಯಾಯಿತು.
ಬೆಲ್ಫೋರ್ಟ್ ಪಾತ್ರವನ್ನು ಲಿಯೋನಾರ್ಡೋ ಡಿಕಾಪ್ರಿಯೋ ಅವರು ನಟಿಸಿದ್ದಾರೆ. ಅವರು ಅತ್ಯುತ್ತಮ ನಟ - ಮೋಷನ್ ಪಿಕ್ಚರ್ ಮ್ಯೂಸಿಕಲ್ ಅಥವಾ ಕಾಮಿಡಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದರು ಮತ್ತು ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟನಿಗಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಜೋರ್ಡಾನ್ ಬೆಲ್ಫೋರ್ಟ್ "ದಿ ರಿಯಲ್ ವುಲ್ಫ್ ಆಫ್ ವಾಲ್ ಸ್ಟ್ರೀಟ್" ಎಂಬ ಅಮೇರಿಕನ್ ಗ್ರೀಡ್ (ಸೀಸನ್ ೯, ಸಂಚಿಕೆ ೮) ನ ಸಂಚಿಕೆಯಲ್ಲಿಯೂ ಕಾಣಿಸಿಕೊಂಡಿದ್ದಾನೆ.[೨೩]
ಉಲ್ಲೇಖಗಳು
[ಬದಲಾಯಿಸಿ]- ↑ "Wall Street Crime and Punishment: Jordan Belfort, the Boiler Room Wolf". ಡಿಸೆಂಬರ್ 15, 2023.
- ↑ New York City, Marriage Licenses Index, 1950-1955
- ↑ Belfort, Jordan (2007). The Wolf of Wall Street. New York City: Bantam Books. p. 244. ISBN 978-0-345-54933-4.
This was serious Mafia stuff, impossible for a Jew like me to fully grasp the nuances of.
- ↑ ೪.೦ ೪.೧ Gray, Geoffrey (ನವೆಂಬರ್ 24, 2013). "The Wolf of Wall Street Can't Sleep". New York. Retrieved ನವೆಂಬರ್ 26, 2014.
- ↑ Eshman, Rob (ಡಿಸೆಂಬರ್ 31, 2013). "'The Wolf' and the Jewish problem". The Jewish Journal of Greater Los Angeles. Retrieved ಡಿಸೆಂಬರ್ 29, 2014.
- ↑ United States Census 1940
- ↑ Contributor, Ron Marzlock, Chronicle (ಡಿಸೆಂಬರ್ 23, 2021). "Bay Terrace's Belfort was hungry like the wolf — for cash". Queens Chronicle (in ಇಂಗ್ಲಿಷ್). Retrieved ಫೆಬ್ರವರಿ 25, 2024.
{{cite web}}
:|last=
has generic name (help)CS1 maint: multiple names: authors list (link) - ↑ Belfort, Jordan (ಫೆಬ್ರವರಿ 24, 2009). Catching the Wolf of Wall Street. Bantam Dell. ISBN 9780553906011. Retrieved ಜೂನ್ 23, 2013.
- ↑ Veneziani, Vince (ಮಾರ್ಚ್ 25, 2010). "Revisiting The Amazing Story Of Jordan Belfort: "The Wolf Of Wall Street"". Business Insider. Retrieved ಜೂನ್ 23, 2013.
- ↑ ೧೦.೦ ೧೦.೧ Gray, Geoffrey (ಡಿಸೆಂಬರ್ 30, 2013). "Meet Jordan Belfort, the Real Wolf of Wall Street". Vulture. Retrieved ಡಿಸೆಂಬರ್ 30, 2013.
- ↑ Belfort, Jordan (ಸೆಪ್ಟೆಂಬರ್ 25, 2007). The Wolf of Wall Street. New York City: Random House Publishing Group. p. 47. ISBN 978-0-553-90424-6.
- ↑ Belfort, Jordan. "The Wolf of Wall Street". Random House. pp. 112. ISBN 978-0-553-80546-8
- ↑ Solomon, Brian (ಡಿಸೆಂಬರ್ 28, 2013). "Meet The Real 'Wolf Of Wall Street' In Forbes' Original Takedown Of Jordan Belfort". Forbes. Retrieved ಜನವರಿ 1, 2014.
- ↑ "Jordan Belfort Biography". Wolf of Wall Street Info. Archived from the original on ಫೆಬ್ರವರಿ 22, 2014. Retrieved ಮೇ 14, 2014.
- ↑ Gasparino, Charlie (ಮಾರ್ಚ್ 12, 2013). "'Wolf of Wall Street' Gets $1M Pay Day for Movie Rights". Fox Business. Archived from the original on ಫೆಬ್ರವರಿ 17, 2014. Retrieved ಅಕ್ಟೋಬರ್ 25, 2013.
- ↑ Dillon, Nancy (ಅಕ್ಟೋಬರ್ 19, 2013). "Real 'Wolf of Wall Street' Jordan Belfort still owes millions to victims: prosecutors". Daily News. Retrieved ಅಕ್ಟೋಬರ್ 25, 2013.
- ↑ Wanjiru, Florence (ಜನವರಿ 21, 2022). "Denise Lombardo: What happened to Jordan Belfort's first wife?". Tuko.co.ke - Kenya news. (in ಇಂಗ್ಲಿಷ್). Retrieved ಮೇ 22, 2024.
- ↑ Witheridge, Annette (ಮಾರ್ಚ್ 2, 2014). "Jordan Belfort: Meet the REAL Wolf of Wall Street as played by Leonardo DiCaprio". Daily Mirror.
- ↑ Walker, Rob (ಏಪ್ರಿಲ್ 10, 2002). "Genius of Capitalism: Steve Madden". Slate. Retrieved ಅಕ್ಟೋಬರ್ 28, 2010.
- ↑ "I naufraghi dello yacht miliardario salvati in extremis". Corriere Della Sera (in ಇಟಾಲಿಯನ್). No. paywall. ಜೂನ್ 24, 1996. Retrieved ಡಿಸೆಂಬರ್ 3, 2019.
- ↑ The wolf of Wall Street. OCLC. 2001–2014. OCLC 123912480 – via OCLC WorldCat.
- ↑ Catching the Wolf of Wall Street. OCLC. 2001–2014. OCLC 232129347 – via OCLC WorldCat.
- ↑ "CNBC - American Greed episode preview". CNBC. ಫೆಬ್ರವರಿ 2, 2018.
- Pages using the JsonConfig extension
- CS1 errors: generic name
- CS1 maint: multiple names: authors list
- CS1 ಇಂಗ್ಲಿಷ್-language sources (en)
- CS1 ಇಟಾಲಿಯನ್-language sources (it)
- Short description is different from Wikidata
- Wikipedia pages with incorrect protection templates
- Use mdy dates from January 2019
- ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ