ಕೇತು
ವೈದಿಕ ಅಥವಾ ಹಿಂದೂ ಜ್ಯೋತಿಷದಲ್ಲಿ, ಕೇತು ಅವರೋಹಣ ಮಾಡುತ್ತಿರುವ ಚಾಂದ್ರ ಸಂಪಾತ. ಒಬ್ಬ ಅಸುರನಾದ ಸ್ವರಭಾನುವಿನ ತಲೆಯನ್ನು ವಿಷ್ಣುವು ಕತ್ತರಿಸಿದ ನಂತರ, ಅವನ ತಲೆ ಮತ್ತು ದೇಹ ಒಂದು ಹಾವಿನೊಂದಿಗೆ ಸೇರಿಕೊಂಡು, ತಲೆಯಿಲ್ಲದ ದೇಹವನ್ನು ಪ್ರತಿನಿಧಿಸುವ 'ಕೇತು'ವಿನ, ಮತ್ತು ದೇಹವಿಲ್ಲದ ತಲೆಯನ್ನು ಪ್ರತಿನಿಧಿಸುವ ರಾಹುವಿನ ರಚನೆಯಾಯಿತು.[೧] ಹಿಂದೂ ಪುರಾಣಗಳಲ್ಲಿನ ಕೆಲವು ಕಥನಗಳ ಪ್ರಕಾರ, ಕೇತು ಜೈಮಿನಿ ಗೋತ್ರಕ್ಕೆ ಸೇರಿದ್ದರೆ, ರಾಹು ಪೈತೀನಸ ಗೋತ್ರಕ್ಕೆ ಸೇರಿದ್ದಾನೆ. ಹಾಗಾಗಿ ಇಬ್ಬರೂ ನಿರ್ದಿಷ್ಟ ಲಕ್ಷಣಗಳಿರುವ ಸಂಪೂರ್ಣವಾಗಿ ಭಿನ್ನ ಅಸ್ತಿತ್ವಗಳು ಮತ್ತು ಒಂದು ಸಮಾನ ದೇಹದ ಎರಡು ಭಾಗಗಳಲ್ಲ. ಕೇತುವನ್ನು ಸಾಮಾನ್ಯವಾಗಿ ಛಾಯಾ ಗೃಹವೆಂದು ಸೂಚಿಸಲಾಗುತ್ತದೆ. ಇದು ಮಾನವ ಜೀವಿಗಳು ಮತ್ತು ಸಂಪೂರ್ಣ ಸೃಷ್ಟಿಯ ಮೇಲೂ ಮಹತ್ತರ ಪ್ರಭಾವ ಹೊಂದಿದೆ ಎಂದು ನಂಬಲಾಗಿದೆ. ಕೆಲವು ವಿಶೇಷ ಪ್ರಸಂಗಗಳಲ್ಲಿ ಇದು ಯಾರಿಗಾದರೂ ಪ್ರಖ್ಯಾತಿಯ ಉತ್ತುಂಗವನ್ನು ಸಾಧಿಸಲು ನೆರವಾಗುತ್ತದೆ. ಕೇತುವನ್ನು ಹಲವುವೇಳೆ ತಲೆಯ ಮೇಲೆ ರಹಸ್ಯ ದೀಪವನ್ನು ಸೂಚಿಸುವ ರತ್ನ ಅಥವಾ ತಾರೆಯೊಂದಿಗೆ ಚಿತ್ರಿಸಲಾಗುತ್ತದೆ.
ಖಗೋಳ ವಿಜ್ಞಾನ ರೀತ್ಯಾ, ರಾಹು ಮತ್ತು ಕೇತುಗಳು ಸೂರ್ಯ ಮತ್ತು ಚಂದ್ರರು ಖಗೋಳದ ಮೇಲೆ ಚಲಿಸುವ ಪಥಗಳ ಛೇದಕ ಬಿಂದುಗಳನ್ನು ಸೂಚಿಸುತ್ತವೆ. ಹಾಗಾಗಿ, ರಾಹು ಮತ್ತು ಕೇತುವನ್ನು ಅನುಕ್ರಮವಾಗಿ ಉತ್ತರ ಮತ್ತು ದಕ್ಷಿಣ ಚಾಂದ್ರ ಸಂಪಾತಗಳೆಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಚಂದ್ರ ಈ ಬಿಂದುಗಳಲ್ಲಿ ಒಂದರಲ್ಲಿ ಇದ್ದಾಗ ಗ್ರಹಣಗಳು ಸಂಭವಿಸುತ್ತವೆ ಎಂಬ ವಾಸ್ತವಾಂಶವು ಹಾವಿನಿಂದ ಸೂರ್ಯ ಮತ್ತು ಚಂದ್ರರ ನುಂಗುವಿಕೆಯ ತಿಳಿವಳಿಕೆಗೆ ಮೂಲವಾಗಿದೆ.
ಪ್ರಾಚೀನ ತಮಿಳು ಜ್ಯೋತಿಷ ಹಸ್ತಪ್ರತಿಗಳಲ್ಲಿ, ಕೇತುವನ್ನು ಇಂದ್ರನ ಅವತಾರವೆಂದು ಪರಿಗಣಿಸಲಾಗಿತ್ತು. ಅಸುರರೊಂದಿಗಿನ ಒಂದು ಯುದ್ಧದಲ್ಲಿ, ಇಂದ್ರನು ಪರಾಭವಗೊಂಡು ಕೇತುವಾಗಿ ನಿಷ್ಕ್ರಿಯ ರೂಪ ಹಾಗೂ ಸೂಕ್ಷ ಸ್ಥಿತಿಯನ್ನು ತೆಗೆದುಕೊಂಡನು. ಈ ಸಮಯವನ್ನು ಇಂದ್ರನು ತನ್ನ ಹಿಂದಿನ ತಪ್ಪುಗಳನ್ನು, ಮತ್ತು ವೈಫಲ್ಯಗಳನ್ನು ಅರಿಯಲು ಕಳೆದನು ಮತ್ತು ಇದು ಭಗವಾನ್ ಶಿವನ ಕಡೆಗೆ ಆಧ್ಯಾತ್ಮಿಕತೆಗೆ ಕಾರಣವಾಯಿತು.
ಜ್ಯೋತಿಷದಲ್ಲಿ, ಕೇತು ಒಳ್ಳೆಯ ಮತ್ತು ಕೆಟ್ಟ, ಎರಡೂ ರೀತಿಯ ಕರ್ಮ ಸಂಗ್ರಹಗಳನ್ನು, ಆಧ್ಯಾತ್ಮಿಕತೆ ಮತ್ತು ಅಲೌಕಿಕ ಪ್ರಭಾವಗಳನ್ನು ಪ್ರತಿನಿಧಿಸುತ್ತಾನೆ. ಕೇತುವು ಆತ್ಮಕ್ಕೆ ಮೂರ್ತೀಕರಣದ ಪರಿಷ್ಕರಣದ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಸೂಚಿಸುತ್ತಾನೆ ಮತ್ತು ಉಪದ್ರವಕಾರಿ ಹಾಗೂ ಪ್ರಯೋಜನಕಾರಿ ಎಂದು ಪರಿಗಣಿಸಲ್ಪಡುತ್ತಾನೆ, ಏಕೆಂದರೆ ಇದು ದುಃಖ ಮತ್ತು ನಷ್ಟವನ್ನು ಉಂಟುಮಾಡುತ್ತದೆ, ಆದರೆ ಅದೇ ವೇಳೆಗೆ ವ್ಯಕ್ತಿಯನ್ನು ದೇವರ ಕಡೆಗೆ ತಿರುಗಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವ್ಯಕ್ತಿಯಲ್ಲಿ ಹೆಚ್ಚು ಆಧ್ಯಾತ್ಮಿಕ ದೃಷ್ಟಿಕೋನವನ್ನು ಬಲಾತ್ಕರಿಸಲು ಇದು ವಸ್ತು ನಷ್ಟ ಉಂಟುಮಾಡುತ್ತದೆ. ಕೇತು ಒಬ್ಬ ಕಾರಕ ಅಥವಾ ಬುದ್ಧಿಮತ್ತೆ, ಬುದ್ಧಿವಂತಿಕೆ, ಅನಾಸಕ್ತಿ, ಕಲ್ಪನಾಶಕ್ತಿ, ಒಳನೋಟ, ಅವ್ಯವಸ್ಥೆ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳ ಸೂಚಕನಾಗಿದ್ದಾನೆ.
ಉಲ್ಲೇಖಗಳು
[ಬದಲಾಯಿಸಿ]