ವಿಷಯಕ್ಕೆ ಹೋಗು

ಆಮ್ರಪಾಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಮ್ರಪಾಲಿ
ನಿರ್ದೇಶನಲೇಖ್ ಟಂಡನ್
ನಿರ್ಮಾಪಕಎಫ್.ಸಿ.ಮೆಹ್ರ
ಲೇಖಕStory & Screenplay: ಓಂಕಾರ್ ಸಾಹಿಬ್
Dialogue: ಅರ್ಜುನ್ ದೇವ್ ರಕ್ಷ್
ಬಲ್ಬೀರ್ ಸಿಂಗ್(Additional dialogue)
ಪಾತ್ರವರ್ಗಸುನಿಲ್ ದತ್
ವೈಜಯಂತಿ ಮಾಲಾ
ಪ್ರೇಮ್ ನಾಥ್
ಸಂಗೀತಶಂಕರ್-ಜೈಕಿಶನ್
ಛಾಯಾಗ್ರಹಣದ್ವಾರ್ಕಾ ದಿವೇಚ
ಸಂಕಲನಪ್ರಾಣ್ ಮೆಹ್ರ
ಸ್ಟುಡಿಯೋಈಗಲ್ ಫಿಲ್ಮ್ಸ್[]
ಬಿಡುಗಡೆಯಾಗಿದ್ದು11 September 1966
ದೇಶಭಾರತ
ಭಾಷೆಹಿಂದಿ

ಲೆಖ್ ಟಂಡನ್ ನಿರ್ದೇಶನದ ೧೯೬೬ರಲ್ಲಿ ತೆರೆಕಂಡ ಐತಿಹಾಸಿಕ ಹಿಂದಿ ಚಲನಚಿತ್ರ ಆಮ್ರಪಾಲಿ ಚಿತ್ರದಲ್ಲಿ ಸುನಿಲ್ ದತ್ ಮತ್ತು ವೈಜಯಂತಿಮಾಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಕರ್-ಜೈಕಿಶನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದು ಇಂದಿನ ಬಿಹಾರದ ಲಿಚ್ಛವಿ ಗಣರಾಜ್ಯದ ರಾಜಧಾನಿ ವೈಶಾಲಿಯಲ್ಲಿರುವ ಅಂಬಾಪಾಲಿ

ಮತ್ತು ಅವಳೊಂದಿಗೆ ಪ್ರೀತಿಯಲ್ಲಿ ಬೀಳುವ ಪ್ರಾಚೀನ ಭಾರತದಲ್ಲಿದ್ದ ಮಗಧ ಸಾಮ್ರಾಜ್ಯ ಹರ್ಯಂಕದ ಚಕ್ರವರ್ತಿ ಅಜಾತಶತ್ರು ಅವರ ಜೀವನವನ್ನು ಆಧರಿಸಿದೆ. ಇದರ ಕತೆ ಸುಮಾರು ಕ್ರಿ. ಪೂ. 500ರ ಆಜುಬಾಜಿನದು . ಅವನು ಅವಳನ್ನು ಪಡೆಯಲು ವೈಶಾಲಿಯನ್ನು ನಾಶಪಡಿಸಿದರೂ ಆಕೆಗೆ ಅವನ ಮೇಲೆ ಕ್ರೋಧವಿಲ್ಲ. ಯಾಕೆಂದರೆ ಈ ನಡುವೆ ಆಕೆ ಮತ್ತು ಗೌತಮ ಬುದ್ಧನ ಮುಖಾಮುಖಿಯಿಂದ ಅವಳು ರೂಪಾಂತರಗೊಂಡಿದ್ದಾಳೆ. ಅವರಲ್ಲಿ ಅವಳು ಶಿಷ್ಯ ಮತ್ತು ಅರಹಂತ್ ಆಗುತ್ತಾಳೆ. ಆಕೆಯ ಕಥೆಯನ್ನು ಹಳೆಯ ಪಾಲಿ ಪಠ್ಯಗಳು ಮತ್ತು ಬೌದ್ಧ ಸಂಪ್ರದಾಯಗಳಲ್ಲಿ ಉಲ್ಲೇಖಿಸಲಾಗಿದೆ.[][]

ಈ ಚಲನಚಿತ್ರವು ೩೯ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಭಾರತೀಯ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದನ್ನು ನಾಮನಿರ್ದೇಶನವಾಗಿ ಅಂಗೀಕರಿಸಲಿಲ್ಲ.[] ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಗಲಿಲ್ಲವಾದರೂ ಕಾಲಾಂತರದಲ್ಲಿ ಅದರ ಖ್ಯಾತಿಯು ಬೆಳೆದಿದೆ ಮತ್ತು ಈಗ ಇದನ್ನು ಹಿಂದಿ ಚಿತ್ರರಂಗದ ಶ್ರೇಷ್ಠ ಚಿತ್ರವೆಂದು ಪರಿಗಣಿಸಲಾಗಿದೆ. ಇದು ಅದರ ನಾಟಕೀಯ ಯುದ್ಧದ ದೃಶ್ಯಗಳು, ಭಾನು ಅಥೈಯಾ ಅವರ ವಿಶಿಷ್ಟ ವೇಷಭೂಷಣಗಳು ಮತ್ತು ಬಲವಾದ ಯುದ್ಧ-ವಿರೋಧಿ ಭಾವನೆಗಳಿಗೆ ಹೆಸರುವಾಸಿಯಾಗಿದೆ.[][][][]

ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಈ ಚಿತ್ರದ ಹಕ್ಕುಗಳನ್ನು ಹೊಂದಿದೆ.

ಕಥಾವಸ್ತು

[ಬದಲಾಯಿಸಿ]

ಪದೇ ಪದೇ ಜಯಗಳಿಸಿದ ನಂತರವೂ ವಿಜಯದ ಬಗೆಗಿನ ಸಾಮ್ರಾಟ್ ಅಜಾತಶತ್ರುವಿನ(ಸುನೀಲ್ ದತ್) ಹಸಿವು ಕಡಿಮೆಯಾಗಿರುವಿದಿಲ್ಲ. ವೈಶಾಲಿ ಮಾತ್ರ ಅಜೇಯ ನಗರವಾಗಿರುವುದರಿಂದ ಮಗಧ ಚಕ್ರವರ್ತಿ ಅಜಾತಶತ್ರು (ಸುನೀಲ್ ದತ್) ತನ್ನ ವಿಜಯದ ಓಟವನ್ನು ಇಲ್ಲೂ ಮುಂದುವರಿಸಲು ಬಯಸುತ್ತಾನೆ. ಅವನ ಜ್ಯೋತಿಷಿಗಳು ಈ ಯುದ್ಧ ಬೇಡ ಎಂದು ಮುಂಚಿತವಾಗಿ ಎಚ್ಚರಿಕೆ ನೀಡುತ್ತಾರೆ . ಅವನ ಸೇನಾಪತಿ ನಿರಂತರ ಯುದ್ಧದಿಂದ ಅವನ ಸೈನ್ಯವು ದಣಿದಿದೆ ಮತ್ತು ವಿಶ್ರಾಂತಿ ಪಡೆಯಬೇಕಾಗಿದೆ ಎಂದು ಎಚ್ಚರಿಸುತ್ತಾನೆ (ಜನರಲ್ ಪ್ರೇಮ್ ನಾಥ್) . ಅವನ ಸ್ವಂತ ತಾಯಿಯು ಯಾವುದೇ ಯುದ್ಧದಲ್ಲಿ ಭಾಗವಹಿಸುವುದು ಬೇಡ ಎಂದು ತಿಳಿಸುತ್ತಾಳೆ . ಆದರೆ ಅವನು ಯಾರ ಮಾತನ್ನೂ ಕೇಳಲು ನಿರಾಕರಿಸುತ್ತಾನೆ ಮತ್ತು ಯುದ್ಧಕ್ಕೆ ಧಾವಿಸುತ್ತಾನೆ. ಇದು ವೈಶಾಲಿ ಸೈನ್ಯದ ಕೈಯಲ್ಲಿನ ಸೋಲಿಗೆ ಕಾರಣವಾಗುತ್ತದೆ. ಗಾಯಗೊಂಡು, ತನ್ನ ಸೈನ್ಯದಿಂದ ಬೇರ್ಪಟ್ಟು, ಶತ್ರು ಸೈನಿಕರಿಂದ ತಪ್ಪಿಸಿಕೊಳ್ಳುತ್ತಾ ಅಜಾತಶತ್ರು ವೈಶಾಲಿ ಸೈನಿಕನ ವೇಷ ಧರಿಸಿ ಆಮ್ರಪಾಲಿ (ವೈಜಯಂತಿಮಾಲಾ) ಎಂಬ ಮಹಿಳೆಯೊಂದಿಗೆ ಆಶ್ರಯ ಪಡೆಯುತ್ತಾನೆ. ಅವಳು ಅವನನ್ನು ಮತ್ತೆ ಆರೋಗ್ಯವಂತನಾಗುವಂತೆ ಶುಶ್ರೂಷೆ ಮಾಡುತ್ತಾಳೆ . ಆಮ್ರಪಾಲಿಗೆ ಅವನು ಮಗಧದ ಅಜಾತಶತ್ರು ಎಂದು ತಿಳಿದಿಲ್ಲವಾದರೂ ಅವರು ಪರಸ್ಪರ ಪ್ರೀತಿಸುತ್ತಾರೆ.

ಅಜಾತಶತ್ರು ಸೇನಾಪತಿ ಬದ್ಬದ್ರ ಸಿಂಗ್ (ಕೆ. ಎನ್. ಸಿಂಗ್) ನಲ್ಲಿ ಮಿತ್ರನನ್ನು ಕಂಡುಕೊಳ್ಳುತ್ತಾನೆ ಮತ್ತು ಇಬ್ಬರೂ ವೈಶಾಲಿಯ ವಿರುದ್ಧ ಸಂಚು ರೂಪಿಸಲು ಪ್ರಾರಂಭಿಸುತ್ತಾರೆ.ಈ ಬಾರಿ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ, ಅವರನ್ನು ಮದ್ಯಕ್ಕೆ ವ್ಯಸನಿಯಾಗುವಂತೆ ಮಾಡುವ ಮೂಲಕ, ಕಳಪೆ ತರಬೇತಿ ವಿಧಾನಗಳು ಮತ್ತು ಕಳಪೆ ವೇತನ ಸಿಗುವಂತೆ ಮಾಡಿ ಸೈನಿಕರ ಮನೋಬಲವನ್ನು ಕುಗ್ಗಿಸುವಂತೆ ಮಾಡುತ್ತಾರೆ. ಇದರಿಂದ ಮಗಧದ ಸುಲಭ ವಿಜಯ ಸಾಧ್ಯವಾಗುತ್ತದೆ. ನೃತ್ಯ ಸ್ಪರ್ಧೆಯಲ್ಲಿ ಗೆದ್ದ ಆಮ್ರಪಾಲಿಯು ರಾಜ್ನಾರ್ಥಕಿ (ವೈಶಾಲಿಯ ರಾಯಲ್ ಡ್ಯಾನ್ಸರ್) ಎಂಬ ಕಿರೀಟವನ್ನು ಧರಿಸುತ್ತಾರೆ. ಆಕೆಯನ್ನು ಪ್ರತಿಯೊಬ್ಬರೂ ನಿಜವಾದ ದೇಶಭಕ್ತೆ ಎಂದು ಗೌರವಿಸುತ್ತಿರುತ್ತಾರೆ.


ಒಂದು ದಿನ ಆಕೆಗೆ ತಾನು ಪ್ರೀತಿಸುವ ಸೈನಿಕನು ಅಜತಾಶತ್ರುವಲ್ಲದೇ ಬೇರೆ ಯಾರೂ ಅಲ್ಲ ಎಂದು ಅವಳು ಕಂಡುಕೊಳ್ಳುತ್ತಾಳೆ. ನಿಜವಾದ ದೇಶಭಕ್ತಳಾಗಿರುವ ಆಕೆ ಆತನೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿಯುತ್ತಾಳೆ ಮತ್ತು ತನ್ನನ್ನು ಮತ್ತೆಂದೂ ನೋಡಬಾರದೆಂದು ಹೇಳುತ್ತಾಳೆ. ದುಃಖಿತಳಾದ ಆಕೆ ತಾನು ರಾಜ್ನಾರ್ಥಕಿಯ ಸ್ಥಾನವನ್ನು ತೊರೆಯಲು ಬಯಸುತ್ತೇನೆ ಎಂದು ವೈಶಾಲಿಯ ರಾಜನಿಗೆ ಹೇಳುತ್ತಾಳೆ. ಅದು ಯಾಕೆಂದು ತಿಳಿಯಲಿ ನ್ಯಾಯಾಲಯದ ಸದಸ್ಯರು ಆಕೆಯ ಮೇಲೆ ಒತ್ತಡ ಹೇರುತ್ತಾರೆ ಮತ್ತು ಆಕೆ ಅಜಾತಶತ್ರು ಅವರನ್ನು ಪ್ರೀತಿಸುತ್ತಿದ್ದಾಳೆ ಎಂದು ಎಲ್ಲರೂ ಕಂಡುಕೊಳ್ಳುತ್ತಾರೆ . ಇದರಿಂದ ಆಕೆಯನ್ನು ದೇಶದ್ರೋಹಿ ಎಂದು ಘೋಷಿಸುತ್ತಾರೆ.

ವೈಶಾಲಿಯ ರಾಜನು ಆಕೆಗೆ ಕತ್ತಲಕೋಣೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸುತ್ತಾನೆ ಮತ್ತು ಹುಣ್ಣಿಮೆಯ ರಾತ್ರಿ ಆಕೆಯನ್ನು ಕೊಲ್ಲಲು ಆದೇಶಿಸುತ್ತಾನೆ. ಇದನ್ನು ಕೇಳಿ ಕೋಪಗೊಂಡ ಅಜಾತಶತ್ರು ತನ್ನ ಸೈನ್ಯವನ್ನು ಒಟ್ಟುಗೂಡಿಸಿ ವೈಶಾಲಿಯ ಸಂದೇಹವಿಲ್ಲದ ಜನರನ್ನು ಹೊಡೆದುರುಳಿಸಿ, ನಗರವನ್ನು ಸುಟ್ಟುಹಾಕುತ್ತಾನೆ. ಅದರಲ್ಲಿದ್ದ ಬಹುತೇಕ ಎಲ್ಲರನ್ನೂ ಕೊಲ್ಲುತ್ತಾನೆ. ನಂತರ ಅವನು ತನ್ನ ಪ್ರಿಯಕರಳನ್ನು ಕತ್ತಲಕೋಣೆಯಿಂದ ಬಿಡುಗಡೆ ಮಾಡಲು ಧಾವಿಸುತ್ತಾನೆ. ಅವನು ಅವಳನ್ನು ಮುಕ್ತಗೊಳಿಸುತ್ತಾನೆ. ಆದರೆ ಅದು ಅದೇ ಆಮ್ರಪಾಲಿಯಾಗಿ ಉಳಿದಿರುವುದಿಲ್ಲ. ಈ ಆಮ್ರಪಾಲಿಯು ತುಂಬಾ ಭಿನ್ನವಾಗಿರುತ್ತಾಳೆ ಮತ್ತು ತನ್ನ ವಿಜಯಿಯಾದ ಪ್ರೇಮಿಯ ಉಪಸ್ಥಿತಿಯಲ್ಲಿ ಇರುವುದರಲ್ಲಿ ರೋಮಾಂಚನಗೊಳ್ಳುವುದಿಲ್ಲ


ವಿಭ್ರಮೆಗೊಳ್ಳುವ ಈತ ಆಕೆಯನ್ನು ಯುದ್ಧಭೂಮಿಗೆ ಕರೆದೊಯ್ಯುತ್ತಾನೆ . ಅಲ್ಲಿ ಆಕೆಯನ್ನು ಪಡೆಯಲು ತಾನು ಕೊಂದ ಎಲ್ಲರನ್ನೂ ತೋರಿಸುತ್ತಾನೆ. ಇಷ್ಟು ರಕ್ತಪಾತವನ್ನು ನೋಡಿ ಆಕೆ ಭಯಭೀತಳಾಗುತ್ತಾಳೆ. ತಾನು ಇನ್ನು ಮುಂದೆ ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ಗೌತಮ ಬುದ್ಧ (ನರೇಂದ್ರ ನಾಥ್)ನಿಗೆ ಶರಣಾಗುತ್ತಾಳೆ. ಅಜಾತಶತ್ರು ಕೂಡ ಅವಳನ್ನು ಹಿಂಬಾಲಿಸಿ ಬುದ್ಧನಿಗೆ ಶರಣಾಗುತ್ತಾನೆ.

ಪಾತ್ರವರ್ಗ

[ಬದಲಾಯಿಸಿ]
  • ಸುನಿಲ್ ದತ್-ಮಗಧ ಸಾಮ್ರಾಟ್ ಅಜಾತಶತ್ರುಅಜಾತಶತ್ರುವು
  • ವೈಜಯಂತಿಮಾಲಾ-ಆಮ್ರಪಾಲಿ
  • ಪ್ರೇಮ್ ನಾಥ್-ಮಗಧದ ಸೇನಾಪತಿ ವೀರ್
  • ಬಿಪಿನ್ ಗುಪ್ತಾ-ವೈಶಾಲಿ ಗಣ ಮುಖ್ಯ
  • ಗಜಾನನ್ ಜಾಗೀರ್ದಾರ್-ಕುಲಪತಿ ಮಹಾನಂ
  • ಕೆ. ಎನ್. ಸಿಂಗ್-ಸೇನಾಪತಿ ಬಲಭದ್ರ ಸಿಂಗ್
  • ಮಾಧವಿ-ರಾಜ್ ನರ್ತಕಿ
  • ಮೃದುಲಾ ರಾಣಿ-ರಾಜಮಾತಾ (ಆಜಾತ್ ಶತ್ರುವಿನ ತಾಯಿ)
  • ರೂಬಿ ಮೈಯರ್ಸ್-ವೈಶಾಲಿಯ ಪ್ರಥಮ ಮಹಿಳೆ
  • ನರೇಂದ್ರ ನಾಥ್-ಗೌತಮ ಬುದ್ಧ
  • ಬಾಬುರಾವ್ ಪೆಂಧರ್ಕರ್-ವೈಶಾಲಿ ಗಣ ಮುಖ್ಯರ ಸಲಹೆಗಾರ (ನೀಲ್ ಗಗನ್ ಕಿ...ಹಾಡಿನಲ್ಲಿ ಬರುತ್ತಾರೆ)
  • ಬೇಲಾ ಬೋಸ್-ವೈಶಾಲಿ ಹಳ್ಳಿಯ ಹುಡುಗಿ
  • ರಣಧೀರ್ (ನಟ-ಸೋಮ್, ಕುಲ್ಪತಿಯ ಮಗ
  • ನಜೀರ್ ಕಾಶ್ಮೀರಿ
  • ಕೇಶವ್ ರಾಣಾ-ವೈಶಾಲಿ ಸೈನಿಕ
  • ಗೋಪಿ ಕೃಷ್ಣ-ಸಂಭ್ರಮಾಚರಣೆಯ ನೃತ್ಯದಲ್ಲಿ ಪ್ರಮುಖ ನರ್ತಕ

ಸಿಬ್ಬಂದಿ

[ಬದಲಾಯಿಸಿ]
  • ಕಲಾ ನಿರ್ದೇಶನಃ ಎಂ. ಆರ್. ಆಚರೇಕರ್
  • ನೃತ್ಯ ನಿರ್ದೇಶಕಃ ಗೋಪಿ ಕೃಷ್ಣ
  • ಕಾಸ್ಟ್ಯೂಮ್ ಡಿಸೈನ್ಃ ಭಾನು ಅಥೈಯಾ

ಸಂಗೀತ

[ಬದಲಾಯಿಸಿ]

ಈ ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ಆಗ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಶಂಕರ್ ಜೈಕಿಶನ್ ಅವರ ಸಂಗೀತ. ಅವರು ನಾಲ್ಕು ಹಾಡುಗಳಲ್ಲಿ ಅತ್ಯಂತ ಸಂಯಮದ ಆದರೆ ಸಂಪೂರ್ಣ ಭಾರತೀಯ ಶಾಸ್ತ್ರೀಯ ಸಂಗೀತ ಆಧಾರಿತ ಸಂಗೀತವನ್ನು ನೀಡಿದರು. ಇದು ಆ ಕಾಲದ ಚಲನಚಿತ್ರಗಳಲ್ಲಿ ಅಪರೂಪದ ಮತ್ತೊಂದು ಚಿತ್ರವಾಗಿತ್ತು. "ತುಮ್ಹಾರೇ ಯಾದ್ ಕರತೇ ಕರತೇ", "ನೀಲ್ ಗಗನ್ ಕಿ ಛಾವೋನ್ ಮೇ" ಮತ್ತು "ಜಾವೊ ರೇ ಜೋಗಿ" ಸೇರಿದಂತೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ ಅವರು ಈ ಚಿತ್ರದ ಎಲ್ಲಾ ಹಾಡುಗಳನ್ನು ಹಾಡಿದ್ದಾರೆ.[]

ಹಾಡುಗಳ ಪಟ್ಟಿ

[ಬದಲಾಯಿಸಿ]
# ಶೀರ್ಷಿಕೆ ಗಾಯಕ (ರು) ಗೀತರಚನಕಾರರು
1 "ಜಾವ್ ರೇ" ಲತಾ ಮಂಗೇಶ್ಕರ್ ಶೈಲೇಂದ್ರ
2 "ತುಮೆನ್ ಯಾದ್ ಕರ್ತೆ ಕಾರ್ತೆ" ಲತಾ ಮಂಗೇಶ್ಕರ್ ಶೈಲೇಂದ್ರ
3 "ನೀಲ್ ಗಗನ್ ಕಿ ಛಾವೋನ್ ಮೇ" ಲತಾ ಮಂಗೇಶ್ಕರ್ ಹಸ್ರತ್ ಜೈಪುರಿ
4 "ತಡಪ್ ಯೇ ದಿನ್ ರಾತ್ ಕಿ" ಲತಾ ಮಂಗೇಶ್ಕರ್ ಶೈಲೇಂದ್ರ
5 "ನಾಚೋ ಗಾವೊ ನಾಚೋ ಧೂಮ್ ಮಚಾವೋ" ಲತಾ ಮಂಗೇಶ್ಕರ್ ಶೈಲೇಂದ್ರ

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಚಿತ್ರದ ಒಂದು ದೃಶ್ಯವನ್ನು ಓಂ ಶಾಂತಿ ಓಂ (2007) ಚಿತ್ರದ ಧೂಮ್ ತಾನಾ ಹಾಡಿನ ವೀಡಿಯೊದಲ್ಲಿ ಬಳಸಲಾಗಿದ್ದು ಇದರಲ್ಲಿ ದೀಪಿಕಾ ಪಡುಕೋಣೆ ವೈಜಯಂತಿಮಾಲಾ ಅವರ ಆಮ್ರಪಾಲಿಯಾಗಿ ನೃತ್ಯ ಮಾಡಿದ್ದಾರೆ. ದೀಪಿಕಾ 1970ರ ದಶಕದ ನಟಿಯಾಗಿ ನಟಿಸಿದ್ದರಿಂದ ಎರಡನೆಯದನ್ನು ಫ್ರೇಮ್ಗಳಿಂದ ಡಿಜಿಟಲ್ ರೂಪದಲ್ಲಿ ತೆಗೆದುಹಾಕಲಾಯಿತು.[೧೦]

ಇದನ್ನೂ ನೋಡಿ

[ಬದಲಾಯಿಸಿ]
  • ಏಷ್ಯಾದ ಐತಿಹಾಸಿಕ ನಾಟಕೀಯ ಚಲನಚಿತ್ರಗಳ ಪಟ್ಟಿ
  • ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ 39ನೇ ಅಕಾಡೆಮಿ ಪ್ರಶಸ್ತಿಗಳಿಗೆ ಸಲ್ಲಿಕೆಗಳ ಪಟ್ಟಿ
  • ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಭಾರತೀಯ ಸಲ್ಲಿಕೆಗಳ ಪಟ್ಟಿ
  • ಚಿತ್ರಲೇಖಾ (1964)

ಉಲ್ಲೇಖಗಳು

[ಬದಲಾಯಿಸಿ]
  1. "Office Office maker passes away". Screen. 31 July 2008. Archived from the original on 10 September 2012.
  2. History of Vaishali
  3. Ambapālī (Ambapālikā) in Buddhist Dictionary of Pali names
  4. Margaret Herrick Library, Academy of Motion Picture Arts and Sciences
  5. "V.K.MURTHY: Lens and Sensibility". Screen. 3 February 2006.
  6. "Are they calling the shots?". Screen. 29 March 2002.
  7. "Clothes maketh the film". The Hindu. 25 February 2010.
  8. What if Amrapali were remade today?
  9. "MUSIC DIRECTOR: Down Melody Lane". Screen. 22 March 2010.
  10. "Magical music video". Screen. 23 November 2007.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]