ವಿಷಯಕ್ಕೆ ಹೋಗು

ಆಗಾಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಗಾಖಾನ್ ಷಿಯ ಮುಸ್ಲಿಮರಲ್ಲಿ ಇಸ್ಮೈಲಿ ಪಂಥದವರ ಧರ್ಮಗುರು[]). ಈ ಗುರುತ್ವ ವಂಶಪಾರಂಪರ್ಯವಾಗಿ ಬಂದಿದೆ.

ಚರಿತ್ರೆ

[ಬದಲಾಯಿಸಿ]

ಪೈಗಂಬರ್ ಮಹಮ್ಮದನ ಅಳಿಯನಾದ ಅಲಿ ಮತ್ತು ಅವನ ಹೆಂಡತಿ ಫಾತಿಮರ ಸಂತತಿಯವನಾದ ಹಸನ್ ಅಲಿ ಷಾಗೆ (೧೮೦೦-೧೮೫೧) ಪರ್ಷಿಯಾದ ದೊರೆ ಕೊಟ್ಟ ಬಿರುದು ಆಗಾಖಾನ್ ಎಂಬುದು.[] ಹಸನ್ ಅಲಿಗೂಪರ್ಷಿಯದ ದೊರೆಗೂ ವೈಮನಸ್ಯ ಬೆಳೆದು ಆತ ಭಾರತಕ್ಕೆ ಬಂದು ನೆಲೆಸಬೇಕಾಯಿತು. ಮೊದಲು ಆಫ್ಘನ್ ಯುದ್ಧದಲ್ಲಿಯೂ (೧೮೩೯-೧೮೪೨) ಮುಂದೆ ಸಿಂಧೂ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದರಲ್ಲಿ ಆತ ಬ್ರಿಟಿಷರಿಗೆ ನೆರವು ನೀಡಿದ್ದರಿಂದ ಅವರು ಅವನಿಗೆ ಹಿಸ್ ಹೈನೆಸ್ ಎಂಬ ಬಿರುದನ್ನೂ ಜೀವನಾಂಶವನ್ನೂ ಕೊಟ್ಟರು.

ಮೂರನೆಯ ಆಗಾಖಾನ್

[ಬದಲಾಯಿಸಿ]

ಆತನ ಮೊಮ್ಮಗ ಮೂರನೆಯ ಆಗಾಖಾನ್ (೧೮೭೮-೧೯೫೭) ಅಂತರಾಷ್ಟ್ರೀಯ ಖ್ಯಾತಿ ಪಡೆದ. ಅವನ ಹೆಸರು ಸುಲ್ತಾನ್ ಸರ್ ಮಹಮ್ಮದ್ ಷಾ. ಬಾಲ್ಯದಿಂದಲೂ ಧಾರ್ಮಿಕ ಶಿಕ್ಷಣವನ್ನಲ್ಲದೆ ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ತನ್ನ ಅಸಾಧಾರಣ ವ್ಯಕ್ತಿತ್ವದಿಂದ ಇಸ್ಮೈಲಿ ಪಂಥದವರಿಗೆ ಮಾತ್ರ ಅಲ್ಲ, ಭಾರತದ ಇಡಿ ಮುಸ್ಲಿಮರ ಮುಖಂಡನಾಗಿ ನಿಂತು ಅವರ ರಾಜಕೀಯ ಹಕ್ಕುಬಾಧ್ಯತೆಗಳಿಗಾಗಿ ಶ್ರಮಿಸಿದ. ಬ್ರಿಟಿಷ್ ಆಡಳಿತಕ್ಕೆ ಬೆಂಬಲಕೊಡಲು ಅಖಿಲ ಭಾರತ ಮುಸ್ಲಿಮ್ ಸಂಘವನ್ನು ಸ್ಥಾಪಿಸಿದ (೧೯೦೬). ೧೯೩೦ ರ ದಶಕದಲ್ಲಿ ಲೀಗ್ ಆಫ್ ನೇಷನ್ಸ್‍ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ. ೧೯೩೭ ರಲ್ಲಿ ಲೀಗಿನ ಅಧ್ಯಕ್ಷನಾದ. ೧೯೩೦-೩೨ ರ ಚಕ್ರ ಗೋಷ್ಠಿಗಳಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸಿದ. ನಾನಾ ದೇಶಗಳಲ್ಲಿ ನೆಲೆಸಿದ್ದ ಅವನ ಇಸ್ಮೈಲಿ ಅನುಯಾಯಿಗಳ ಐಹಿಕ ಪುರೋಭಿವೃದ್ಧಿಗಾಗಿ ದುಡಿದ. ಶುದ್ಧತಳಿ ಕುದುರೆಗಳನ್ನು ಸಾಕುವುದರಲ್ಲಿ ಈತ ನಿಷ್ಣಾತ. ಐದು ಬಾರಿ ಈತನ ಕುದುರೆಗಳು ಡರ್ಬಿ ಪಂದ್ಯದಲ್ಲಿ ಗೆದ್ದಿವೆ. ೧೯೩೬ ರಲ್ಲಿ ಧರ್ಮಗುರು ಕಾರ್ಯದಿಂದ ನಿವೃತ್ತನಾಗಿ ಮೊಮ್ಮಗನಾದ ಪ್ರಿನ್ಸ್ ಕರೀಂ ನನ್ನು ಗುರುವನ್ನಾಗಿ (ನಾಲ್ಕನೆಯ ಆಗಾಖಾನ್) ನೇಮಿಸಿದ.

ಉಲ್ಲೇಖಗಳು

[ಬದಲಾಯಿಸಿ]
  1. Daftary, Farhad (2007). The Ismailis: Their History and Doctrines Second Ed. Cambridge: Cambridge University Press. ISBN 978-0-511-35561-5. {{cite book}}: Check |first= value (help)
  2. Daftary, Farhad (2004). Ismaili Literature: A Bibliography Of Sources And Studies. Institute of Ismaili Studies. ISBN 978-1-850-43439-9. {{cite book}}: Check |first= value (help)