ಅಭಿಜಿತ್ ಬ್ಯಾನರ್ಜಿ
ಅಭಿಜಿತ್ ವಿನಾಯಕ್ ಬ್ಯಾನರ್ಜಿ | |
---|---|
অভিজিৎ বিনায়ক বন্দ্যোপাধ্যায় | |
Born | ಅಭಿಜಿತ್ ವಿನಾಯಕ್ ಬ್ಯಾನರ್ಜಿ ೨೧ ಫೆಬ್ರವರಿ ೧೯೬೧ |
Citizenship | ಅಮೇರಿಕನ್, ಭಾರತೀಯ |
Spouse(s) | ಆರಂಧತಿ ತುಳಿ (divorced) ಎಸ್ತರ್ ಡುಫ್ಲೋ(೨೦೧೫) |
Institution | ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯ |
Field | ಅಭಿವೃದ್ಧಿ ಅರ್ಥಶಾಸ್ತ್ರ ಸಾಮಾಜಿಕ ಅರ್ಥಶಾಸ್ತ್ರ |
Alma mater | ಪ್ರೆಸಿಡೆನ್ಸಿ ಕಾಲೇಜು,ಕಲ್ಕತ್ತಾ ಕಲ್ಕತ್ತಾ ವಿಶ್ವವಿದ್ಯಾಲಯ(ಬ್ಯಾಚುಲರ್ ಆಫ್ ಸೈನ್ಸ್) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಮಾಸ್ಟರ್ ಆಫ್ ಆರ್ಟ್ಸ್) ಹಾರ್ವರ್ಡ್ ವಿಶ್ವವಿದ್ಯಾಲಯ (PhD) |
Doctoral advisor | ಎರಿಕ್ ಮಸ್ಕಿನ್ |
Doctoral students | ಎಸ್ತರ್ ಡುಫ್ಲೊ[೧] ಡೀನ್ ಕರ್ಲನ್[೨] ಬೆಂಜಮಿನ್ ಜೋನ್ಸ್[೩] ನ್ಯಾನ್ಸಿ ಕಿಯಾನ್[೪] |
Influences | ಡಾ. ಅಮರ್ತ್ಯ ಸೇನ್ |
Contributions | ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ ಬಡತನ ಕ್ರಿಯೆಗೆ ನಾವೀನ್ಯತೆಗಳು |
Awards | ಅರ್ಥಶಾಸ್ತ್ರದಲ್ಲಿ ನೊಬೆಲ್ ಮೆಮೊರಿಯಲ್ ಪ್ರಶಸ್ತಿ (೨೦೧೯) |
Information at IDEAS / RePEc |
ಅಭಿಜಿತ್ ವಿನಾಯಕ್ ಬ್ಯಾನರ್ಜಿ (೨೧ ಫೆಬ್ರವರಿ ೧೯೬೧)ರವರೊಒಬ್ಬ ಅಮೇರಿಕನ್ ಅರ್ಥಶಾಸ್ತ್ರಜ್ಞ ಹಾಗೂ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಫೋರ್ಡ್ ಫೌಂಡೇಷನ್ ಇಂಟರ್ನ್ಯಾಷನಲ್ ನ ಎಕನಾಮಿಕ್ಸ್ ಪ್ರೊಫೆಸರ್ . [೫]ಇವರು ೨೦೧೯ ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಹಂಚಿಕೊಂಡರು.[೬][೭]
ಬ್ಯಾನರ್ಜಿಯವರು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್‌ನ ಸಹ-ಸಂಸ್ಥಾಪಕ (ಅರ್ಥಶಾಸ್ತ್ರಜ್ಞರಾದ ಎಸ್ತರ್ ಡುಫ್ಲೋ ಮತ್ತು ಸೆಂಧಿಲ್ ಮುಲೈನಾಥನ್ ರವರೊಂದಿಗೆ) .[೮] ಇವರು ಇನೋವೇಷನ್ಸ್ ಫಾರ್ ಪೊವರ್ಟಿ ಆಕ್ಷನ್, ಹಣಕಾಸು ವ್ಯವಸ್ಥೆಗಳು ಮತ್ತು ಬಡತನದ ಒಕ್ಕೂಟದ ಸದಸ್ಯರಾಗಿದ್ದಾರೆ . ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನ ಸಂಶೋಧನಾ ಸಹವರ್ತಿಯಾದ ಬ್ಯಾನರ್ಜಿ ಬ್ಯೂರೋ ಫಾರ್ ದಿ ರಿಸರ್ಚ್ ಇನ್ ದಿ ಎಕನಾಮಿಕ್ ಅನಾಲಿಸಿಸ್ ಆಫ್ ಡೆವಲಪ್‌ಮೆಂಟ್‌ನ ಅಧ್ಯಕ್ಷರಾಗಿದ್ದರು. ಇವರು ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್ ನಲ್ಲಿ ಸಂಶೋಧನಾ ಸಹೋದ್ಯೋಗಿ , ಕೀಲ್ ಇನ್ಸ್ಟಿಟ್ಯೂಟ್ ನ ಅಂತರರಾಷ್ಟ್ರೀಯ ಸಂಶೋಧನಾ ಸಹೋದ್ಯೋಗಿ , ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಸಹವರ್ತಿ ಮತ್ತು ಎಕೋನೊಮೆಟ್ರಿಕ್ ಸೊಸೈಟಿಯಲ್ಲಿ ಸಹವರ್ತಿ.
ಆರಂಭಿಕ ಜೀವನ
[ಬದಲಾಯಿಸಿ]ಬ್ಯಾನರ್ಜಿ ಭಾರತದ ಮುಂಬೈಯಲ್ಲಿ ಜನಿಸಿದರು .[೯][೧೦][೧೧] ಇವರ ತಂದೆ ದೀಪಕ್ ಬ್ಯಾನರ್ಜಿ[೧೨] ಮತ್ತು ತಾಯಿ ನಿರ್ಮಲಾ ಬ್ಯಾನರ್ಜಿ . ಇವರು ಕೋಲ್ಕತ್ತಾದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಸೌತ್ ಪಾಯಿಂಟ್ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು.[೧೩]
ವೃತ್ತಿ
[ಬದಲಾಯಿಸಿ]ಬ್ಯಾನರ್ಜಿ ಯವರು ಪ್ರಸ್ತುತವಾಗಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ[೧೪] ಫೋರ್ಡ್ ಫೌಂಡೇಶನ್ ಇಂಟರ್ನ್ಯಾಷನಲ್ ಪ್ರೊಫೆಸರ್ ಆಫ್ ಎಕನಾಮಿಕ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ; ಇವರು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲೂ ಕಾರ್ಯ ನಿರ್ವಹಿಸಿದ್ದಾರೆ .[೧೫]
ಪ್ರಕಟಣೆಗಳು
[ಬದಲಾಯಿಸಿ]ಪುಸ್ತಕಗಳು
[ಬದಲಾಯಿಸಿ]- ವೊಲಟಿಲಿಟಿ ಅಂಡ್ ಗ್ರೋತ್ (ಚಂಚಲತೆ ಮತ್ತು ಬೆಳವಣಿಗೆ) .[೧೬]
- ಅಂಡರ್ಸ್ಟ್ಯಾಂಡಿಗ್ ಪೊವರ್ಟಿ .[೧೭]
- ಮೇಕಿಂಗ್ ಅಂಡ್ ವರ್ಕ್ .
- ಪೂವರ್ ಎಕನಾಮಿಕ್ಸ್ : ಎ ರ್ಯಾಡಿಕಲ್ ರಿಥಿಂಕಿಂಗ್ ಆಫ್ ದಿ ವೇ ಟು ಫೈಟ್ ಗ್ಲೋಬಲ್ ಪೊವರ್ಟಿ .
- ಹ್ಯಾಂಡ್ ಬುಕ್ ಆಫ್ ಫೀಲ್ಡ್ ಎಕ್ಸ್ಪರಿಮೆಂಟ್ಸ್ , ಸಂಪುಟ ೧ .[೧೮]
- ಹ್ಯಾಂಡ್ ಬುಕ್ ಆಫ್ ಫೀಲ್ಡ್ ಎಕ್ಸ್ಪರಿಮೆಂಟ್ಸ್ , ಸಂಪುಟ ೨ .[೧೯]
- ಎ ಶೋರ್ಟ್ ಹಿಸ್ಟರಿ ಆಫ್ ಪೊವರ್ಟಿ ಮೆಷರ್ಮೆಂಟ್ಸ್ .[೨೦]
- ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್ .[೨೧]
ಪ್ರಶಸ್ತಿಗಳು
[ಬದಲಾಯಿಸಿ]ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
[ಬದಲಾಯಿಸಿ]ಅಭಿಜಿತ್ ಬ್ಯಾನರ್ಜಿಯವರಿಗೆ ೨೦೧೯ ರಲ್ಲಿ ಅರ್ಥಶಾಸ್ತ್ರದಲ್ಲಿ, ಅವರ ಇಬ್ಬರು ಸಹ-ಸಂಶೋಧಕರಾದ ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು .[೨೨]
ಉಲ್ಲೇಖಗಳು
[ಬದಲಾಯಿಸಿ]- ↑ ಡುಫ್ಲೊ , ಎಸ್ತರ್ (೧೯೯೯) , Essays in empirical development economics. Ph.D. dissertation, Massachusetts Institute of Technology.
- ↑ ಕರ್ಲನ್ , ಡೀನ್ ಎಸ್. (೨೦೦೨) , Social capital and microfinance. Ph.D. dissertation, Massachusetts Institute of Technology.
- ↑ ಜೋನ್ಸ್ , ಬೆಂಜಮಿನ್(೨೦೦೩) , Essays on innovation, leadership, and growth. Ph.D. dissertation, Massachusetts Institute of Technology.
- ↑ ಕಿಯಾನ್ , ನ್ಯಾನ್ಸಿ(೨೦೦೫) , Three Essays on Development Economics in China. Ph.D. dissertation, Massachusetts Institute of Technology.
- ↑ https://www.tribuneindia.com/news/nation/economics-nobel-for-indian-american/847206.html Archived 2019-10-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://www.nobelprize.org/uploads/2019/10/press-economicsciences2019.pdf
- ↑ Abhijit Banerjee among three to receive Economics Nobel
- ↑ https://timesofindia.indiatimes.com/world/europe/indian-american-abhijit-banerjee-and-two-others-win-2019-nobel-economics-prize/articleshow/71579263.cms
- ↑ Mumbai-born Abhijit Banerjee wins Economics Nobel, over 5 mn Indian kids benefited from his study
- ↑ Nobel Prize in economics awarded to trio for work on poverty. One is the youngest winner ever
- ↑ Indian-origin prof wins Economics Nobel for poverty research
- ↑ https://timesofindia.indiatimes.com/india/abhijit-banerjee-moved-from-statistical-institute-to-presidency/articleshow/71589310.cms
- ↑ https://www.telegraphindia.com/opinion/teachers-do-not-die-dipak-banerjee-1930-2007/cid/1027696
- ↑ "Abhijit Banerjee". Archived from the original on 2019-09-27. Retrieved 2019-11-30.
- ↑ MIT economists Esther Duflo and Abhijit Banerjee win Nobel Prize
- ↑ ವೊಲಟಿಲಿಟಿ ಅಂಡ್ ಗ್ರೋತ್
- ↑ ಅಂಡರ್ಸ್ಟ್ಯಾಂಡಿಗ್ ಪೊವರ್ಟಿ
- ↑ Handbook of Field Experiments, Volume 1
- ↑ Handbook of Field Experiments, Volume 2
- ↑ ಎ ಶೋರ್ಟ್ ಹಿಸ್ಟರಿ ಆಫ್ ಪೊವರ್ಟಿ ಮೆಷರ್ಮೆಂಟ್ಸ್
- ↑ Good Economics for Hard Times by Abhijit V Banerjee and Esther Duflo review
- ↑ "Trio wins economics Nobel for science-based poverty fight". Archived from the original on 2019-10-14. Retrieved 2019-11-30.