ವಿಷಯಕ್ಕೆ ಹೋಗು

ಸಿಂಬಿಯಾನ್ ಓಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Symbian OS
ಡೆವಲಪರ್ಗಳುNokia/(Symbian Ltd.)
ಪ್ರೋಗ್ರಾಮಿಂಗ್ ಭಾಷೆC++[]
ಆಪರೇಟಿಂಗ್ ಸಿಸ್ಟಮ್ ಕುಟುಂಬMobile operating systems
ಕೆಲಸದ ಸ್ಥಾನdevelopment of the original Symbian OS code base has given way for an integrated development of the Symbian platform
ಮೂಲ ಮಾದರಿclosed source,
moved to open source as the Symbian platform
ಮಾರುಕಟ್ಟೆ ಗುರಿMobile devices
ಪ್ಲಾಟ್‌ಫಾರ್ಮ್ARM, x86 []
ಕರ್ನಲ್ ಪ್ರಕಾರMicrokernel
ಪ್ರಾಥಮಿಕ ಯೂಸರ್ ಇಂಟರ್ಫೆಸ್S60 platform, UIQ, MOAP
ಲೈಸೆನ್ಸ್original code base was proprietary, transition to EPL started with Symbian OS 9.1, completed with the Symbian platform
ಅಧಿಕೃತ ಜಾಲತಾಣdefunction - see the website of the Symbian Foundation

ಸಿಂಬಿಯಾನ್ OS ಒಂದು ಕಾರ್ಯನಿರ್ವಾಹಕ ವ್ಯವಸ್ಥೆ (ಓಎಸ್) ಇದನ್ನು ಸಂಚಾರಿ ಉಪಕರಣ(ಮೊಬೈಲ್)ಗಳಿಗಾಗಿ ಮತ್ತು ಸ್ಮಾರ್ಟ್ ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮೂಲತಃ ಸಿಂಬಿಯಾನ್ ಲಿಮಿಟೆಡ್ ನಿಂದ ಅಭಿವೃದ್ಧಿಗೊಂಡ ಲೈಬ್ರರಿಗಳು, ಬಳಕೆದಾರರ ಸಂಪರ್ಕ ಸಾಧನಗಳು, ಚೌಕಟ್ಟುಗಳು aಮತ್ತು ಸಾಮಾನ್ಯ ಸಾಧನಗಳ ಅಳವಡಿಕೆಗಳನ್ನು ಹೊಂದಿದೆ. ಇದು ಪ್ಸಿಯಾನ್ನ ಇಪೋಸಿಯ ಮುಂದುವರಿದ ವಿನ್ಯಾಸವಾಗಿದ್ದು, ಒಂದು ಬಿಡುಗಡೆಯಾಗದ x86 ಸಂಪರ್ಕಸ್ಥಳ ಇದ್ದರೂ ಸಹ, ವಿಶೇಷತಃ ARM ಕಾರ್ಯನಿರ್ವಾಹಕಗಳನ್ನು ಬಳಸಿ ಚಾಲನೆಗೊಳ್ಳುತ್ತದೆ.

2008ರಲ್ಲಿ, ಹಿಂದಿನ ಸಿಂಬಿಯಾನ್ ಸಾಫ್ಟ್‌ವೇರ್ ಲಿಮಿಟೆಡ್ ಕಂಪನಿಯು ನೋಕಿಯಾವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು ಮತ್ತು ಒಂದು ಹೊಸ ಲಾಭರಹಿತ ಸಂಸ್ಥೆ ಸಿಂಬಿಯಾನ್ ಫೌಂಡೇಶನ್ ಸ್ಥಾಪನೆಯಾಯಿತು. ಸಿಂಬಿಯಾನ್ ಓಎಸ್ ಮತ್ತು ಅದರ ಸಹಯೋಗಿ ಸಂಪರ್ಕಸಾಧನ‌ಗಳಾದ S60, UIQ ಮತ್ತು MOAP(S) ಗಳನ್ನು ಅವುಗಳ ಮಾಲೀಕರು ಸಿಂಬಿಯಾನ್ ನಿರೂಪಣೆಯೊಂದನ್ನು ಸೃಷ್ಟಿಸಿ ರಾಯಧನ-ರಹಿತವಾಗಿ ಮುಕ್ತವಾದ ಮೂಲ ತಂತ್ರಾಂಶವನ್ನು ನೀಡುವ ಉದ್ದೇಶದಿಂದ ಸಂಸ್ಥೆಗೆ ದೇಣಿಗೆಯಾಗಿ ಇತ್ತರು. ಏಪ್ರಿಲ್ 2009ರಲ್ಲಿ ಸಿಂಬಿಯಾನ್ ಸಂಸ್ಥೆಯ ಅಧಿಕೃತ ಪ್ರಾರಂಭದೊಂದಿಗೆ, ಆ ನಿರೂಪಣೆಯನ್ನು ಸಿಂಬಿಯಾನ್ ಓಎಸ್ ನ ವಾರಸುದಾರನೆಂದು ಹೇಳಲಾಗಿದೆ. ಸಿಂಬಿಯಾನ್ ನಿರೂಪಣೆಯನ್ನು ಅಧಿಕೃತವಾಗಿ ಒಂದು ಮುಕ್ತ ಮೂಲ ಸಂಕೇತವಾಗಿ ಫೆಬ್ರವರಿ 2010ರಲ್ಲಿ ಲೋಕಾರ್ಪಣೆ ಮಾಡಲಾಯಿತು.[]

ಸಿಂಬಿಯಾನ್ ಓಎಸ್ ಆಧಾರಿತ ಉಪಕರಣಗಳಲ್ಲಿ 46.9%ರಷ್ಟು ಸ್ಮಾರ್ಟ್ ಫೋನ್[[]] ಗಳು ವ್ಯಾಪಾರವಾಗಿದ್ದು, ಇದು ಜಗದ ಬಹಳ ಜನಪ್ರಿಯ ಕಾರ್ಯನಿರ್ವಾಹಕ ವ್ಯವಸ್ಥೆಯಾಗಿದೆ.[]

ವಿನ್ಯಾಸ

[ಬದಲಾಯಿಸಿ]

ಸಿಂಬಿಯಾನ್ ನಲ್ಲಿ ಪೂರ್ವ-ನಿಯೋಜಿತ ಬಹುಕಾರ್ಯಶೀಲತೆ(ಪ್ರಿಎಂಪ್ಟಿವ್ ಮಲ್ಟಿಟ್ಯಾಸ್ಕಿಂಗ್) ಮತ್ತು ಸ್ಮೃತಿ ರಕ್ಷಣೆ ಸೌಲಭ್ಯಗಳು, ಇತರ ಕಾರ್ಯನಿರ್ವಾಹಕ ವ್ಯವಸ್ಥೆಗಳಲ್ಲಿರುವಂತೆಯೇ ಇದೆ(ವಿಶೇಷತಃ ಡೆಸ್ಕ್ ಟಾಪ್ ಗಣಕಗಳಿಗಾಗಿ ರಚಿಸಿದಂತಹವು) ಬಹುಕಾರ್ಯಶೀಲತೆಯತ್ತ EPOCಯ ಧೋರಣೆಯು VMSಗಳಿಂದ ಪ್ರಚೋದಿತವಾಯಿತು ಮತ್ತು ಅ-ಸಮಕಾಲಿಕ ಪೂರೈಕೆಗಣಕ-ಆಧಾರಿತ ಪ್ರಸಕ್ತಿಗಳ ಮೇಲೆ ಅವಲಂಬಿತವಾಗಿದೆ.

ಸಿಂಬಿಯಾನ್ ಓಎಸ್ ಅನ್ನು ಮೂರು ವ್ಯವಸ್ಥೆಯ ರಚನಾ ತತ್ವಗಳನ್ನು ಮನದಲ್ಲಿರಿಸಿಕೊಂಡು ಸೃಷ್ಟಿಸಲಾಯಿತು:

  • ಬಳಕೆದಾರನ ಘನತೆ ಮತ್ತು ಮಾಹಿತಿ ರಕ್ಷಣೆಯು ಪ್ರಮುಖವಾದುದು,
  • ಬಳಕೆದಾರನ ಸಮಯವನ್ನು ಹಾಳು ಮಾಡಬಾರದು, ಮತ್ತು
  • ಎಲ್ಲಾ ದ್ರವ್ಯಗಳೂ ವಿರಳ.

ಈ ತತ್ವಗಳಂತೆಯೇ ನಡೆದುಕೊಳ್ಳಲೆಂದೇ ಸಿಂಬಿಯಾನ್ ಒಂದು ಮೈಕ್ರೋಕೆರ್ನೆಲ್ ಅನ್ನು ಉಪಯೋಗಿಸುತ್ತದೆ, ಸೇವೆಗಳಿಗೆ ಒಂದು ವಿನಂತಿ-ಮತ್ತು-ಕರೆ ಹಿಂತಿರುಗಿಸುವ ಕ್ರಮವಿರಿಸಿಕೊಂಡಿದೆ ಮತ್ತು ಬಳಕೆದಾರನ ಸಂಪರ್ಕ ಮತ್ತು ಎಂಜಿನ್ ಮಧ್ಯೆ ಬೇರ್ಪಡೆಯನ್ನು ಕಾಪಾಡಿಕೊಳ್ಳುತ್ತದೆ. ಓಎಸ್ ಕಡಿಮೆ ಶಕ್ತಿಯುಳ್ಳ ಬ್ಯಾಟರಿ ಉಪಕರಣಳಿಗೆ ಮತ್ತು ರೋಮ್-ಆಧಾರಿತ ವ್ಯವಸ್ಥೆಗಳಿಗೆ ಹೊಂದುವಂತೆ ರಚಿಸಲಾಗಿದೆ(ಉದಾಹರಣೆಗೆ ಹಂಚಿಕೊಂಡ ಗ್ರಂಥಾಲಯಗಳಲ್ಲಿ XIP ಮತ್ತು ರಿ-ಎಂಟ್ರೆನ್ಸಿ). ಅನ್ವಯಿಕಗಳು ಮತ್ತು ಸ್ವತಃ ಓಎಸ್ ಒಂದು ವಿಷಯ-ಸಂಬಂಧಿತ ವಿನ್ಯಾಸವನ್ನು ಅನುಸರಿಸುತ್ತವೆ: ಮಾಡಲ್-ವ್ಯೂ-ಕಂಟ್ರೋಲರ್ (MVC).


ನಂತರ ಓಎಸ್ ಪುನರಾವರ್ತನೆಯು ಮಾರುಕಟ್ಟೆಯ ಬೇಡಿಕೆಗಳಿಗೆ ಸ್ಪಂದಿಸುತ್ತಾ ಈ ಧೋರಣೆಯನ್ನು ತಗ್ಗಿಸಿತು, ಗಮನಾರ್ಹವಾಗಿ ರಿಯಲ್-ಟೈಂ ಕೆರ್ನೆಲ್ ಮತ್ತು ಒಂದು ನಿರೂಪಣಾ ಸಂರಕ್ಷಣ ಮಾದರಿಗಳನ್ನು ಆವೃತ್ತಿಗಳು 8 ಮತ್ತು 9ರಲ್ಲಿ ಪರಿಚಯಿಸುವ ಮೂಲಕ.

ಇಲ್ಲಿ ಮೂಲದ್ರವ್ಯಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುವುದನ್ನು ಸಿಂಬಿಯಾನ್ ಕ್ರಮವಿಧಿಯ ನುಡಿಗಟ್ಟುಗಳಾದ ಡಿಸ್ಕ್ರಿಪ್ಟರ್ ಗಳು ಮತ್ತು ಕ್ಲೀನಪ್ ಸ್ಟ್ಯಾಕ್ ನಂತಹವು ಸ್ಪಷ್ಟವಾಗಿ ಸಾರುತ್ತವೆ. ಅದೇ ರೀತಿ ಡಿಸ್ಕ್ ಜಾಗ (ಸಾಮಾನ್ಯವಾಗಿ ಸಿಂಬಿಯಾನ್ ಉಪಕರಣಗಳಲ್ಲಿ ಇರುವುದು ಫ್ಲ್ಯಾಷ್ ಮೆಮೊರಿ ಯದ್ದಾಗಿದ್ದಾಗ್ಯೂ)ವನ್ನು ಸಂರಕ್ಷಿಸಲೂ ವಿಧಾನಗಳಿವೆ. ಅಲ್ಲದೆ ಸಕಲ ಸಿಂಬಿಯಾನ್ ಕ್ರಮವಿಧಿಗಳು ಘಟನಾಧಾರವಾಗಿವೆ ಮತ್ತು CPUವು ಅನ್ವಯಿಕಗಳು ನೇರವಾಗಿ ಘಟನೆಗಳೊಂದಿಗೆ ಸಮನ್ವಯದಲ್ಲಿಲ್ಲದಿದ್ದಾಗ ಕಡಿಮೆ ಶಕ್ತಿಯ ವಿಧಿಗೆ ಸ್ವಿಚ್ ಆಗುತ್ತದೆ(ಬದಲಿಸಲ್ಪಡುತ್ತದೆ). ಇದನ್ನು ಆಕ್ಟಿವ್ ಆಬ್ಜೆಕ್ಟ್ಸ್ ಎಂಬ ಕ್ರಮವಿಧಿ ನುಡಿಗಟ್ಟಿನ ಮೂಲಕ ಸಾಧಿಸಲಾಗುತ್ತದೆ. ಅಂತೆಯೇ ತಂತುಗಳು ಮತ್ತು ವಿಧಿವಿಧಾನಗಳತ್ತ ಸಿಂಬಿಯಾನ್ ಧೋರಣೆಯು ಅನಗತ್ಯತೆಗಳನ್ನು ಕಡಿಮೆಗೊಳಿಸುವುದರ ಮೂಲಕ ಚಾಲಿತವಾಗುವಂತಹುಗಿದೆ.

ಸಿಂಬಿಯಾನ್ ಕೆರ್ನೆಲ್ EKA2 ಸಾಕಷ್ಟು-ವೇಗದ ರಿಯಲ್-ಟೈಂ ಸ್ಪಂದನವನ್ನು ಬೆಂಬಲಿಸಿ ಒಂದು ಏಕ-ಗರ್ಭ ಫೋನ್ ಅನ್ನು ಸದರ ಸುತ್ತಲೂ ನಿರ್ಮಿಸಲು ಅನುವಾಗುತ್ತದೆ - ಎಂದರೆ, ಒಂದೇ ಕಾರ್ಯಕಾರಿ ಗರ್ಭವು ಬಳಕೆದಾರನ ಅನ್ವಯಿಕಗಳನ್ನು ಮತ್ತು ಸೂಚನಾ ಒಟ್ಟುಗಳನ್ನೂ ನಿರ್ವಹಿಸುವಂತಹ ವ್ಯವಸ್ಥೆ ಹೊಂದಿರುವ ಫೋನ್.[] ಈ ಕಾರಣದಿಂದ ಸಿಂಬಿಯಾನ್ EKA2 ಫೋನ್ ಗಳು ಚಿಕ್ಕವು, ಕಡಿಮೆ ಬೆಲೆಯವು ಮತ್ತು ಹಿಂದಿನ ಮಾಡೆಲ್ ಗಳಿಗಿಂತಲೂ ಹೆಚ್ಚು ಶಕ್ತಿಕ್ಷಮವಾಗಲು ಸಾಧ್ಯವಾಗಿದೆ[ಸೂಕ್ತ ಉಲ್ಲೇಖನ ಬೇಕು].


ಪೈಪೋಟಿ

[ಬದಲಾಯಿಸಿ]

"ಸ್ಮಾರ್ಟ್ ಮೊಬೈಲ್ ಉಪಕರಣ"ಗಳ ಸರಕುಗಳಲ್ಲಿ ಸಿಂಬಿಯನ್ ಉಪಕರಣಗಳೇ ಮಾರುಕಟ್ಟೆಯಲ್ಲಿ ಪ್ರಧಾನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಫೆಬ್ರವರಿ 2010ರಲ್ಲಿ ಪಡೆದ ಅಂಕಿಅಂಶಗಳ ಪ್ರಕಾರ, 2009ರಲ್ಲಿ ಹಡಗಿನ ಮೂಲಕ ರವಾನೆಯಾದ ಸ್ಮಾರ್ಟ್ ಮೊಬೈಲ್ ಉಪಕರಣಗಳ ಪೈಕಿ 47.2% ಸಿಂಬಿಯಾನ್ ಉಪಕರಣಗಳಿದ್ದವು, RIM 20.8%, ಆಪಲ್ 15.1% (iಫೋನ್ ಓಎಸ್ ಮೂಲಕ), ಮೈಕ್ರೋಸಾಫ್ಟ್ ಉಪಕರಣಗಳು 8.8% (ವಿಂಡೋಸ್ CE ಮತ್ತು ವಿಂಡೋಸ್ ಮೊಬೈಲ್ ಮೂಲಕ) ಮತ್ತು ಆಂಡ್ರಾಯ್ಡ್ 4.7% ಇದ್ದವು.[] ಇತರ ಸ್ಪರ್ಧಿಗಳೆಂದರೆ ಪಾಮ್ ಓಎಸ್, ಕ್ವಾಲ್ ಕಾಮ್ಮ್'ಸ್ BREW, ಸವಾಜೆ,ಲೈನಕ್ಸ್ ಮತ್ತು ಮಾಂಟಾವಿಸ್ಟಾ ಸಾಫ್ಟ್ ವೇರ್.

ಸ್ಮಾರ್ಟ್ ಫೋನ್ ನ ಜಾಗತಿಕ ಮಾರುಕಟ್ಟೆಯ ಪಾಲು 2008ರಲ್ಲಿದ್ದ 52.4%ನಿಂದ 2009ರಲ್ಲಿ 47.2%ಕ್ಕೆ ಇಳಿದರೂ, ಹಡಗಿನಲ್ಲಿ ರವಾನೆ ಮಾಡುವ ಸಿಂಬಿಯಾನ್ ಉಪಕರಣಗಳ ಗಾತ್ರವು 74.9 ಮಿಲಿಯನ್ ಯೂನಿಟ್ ಗಳಿಂದ 78.5 ಮಿಲಿಯನ್ ಯೂನಿಟ್ ಗಳಿಗೆ, ಎಂದರೆ 4.8%ರಷ್ಟು ಏರಿತು.[]

ಸಿಂಬಿಯಾನ್ ವ್ಯವಸ್ಥೆಯ ಮಾದರಿಯು ಈ ಕೆಳಕಂಡ ಪದರಗಳನ್ನು, ಮೇಲಿನಿಂದ ಕೆಳಕ್ಕೆ, ಹೊಂದಿರುತ್ತದೆ:

  • UI ಚೌಕಟ್ಟು ಪದರ
  • ಅನ್ವಯಿಕ ಸೇವಾ ಪದರ
  • ಓಎಸ್ ಸೇವೆಗಳ ಪದರ
    • ವರ್ಗವಿಶಿಷ್ಟ ಓಎಸ್ ಸೇವೆಗಳು
    • ಸಂವಹನ ಸೇವೆಗಳು
    • ಬಹುಮಾಧ್ಯಮ ಮತ್ತು ಗ್ರಾಫಿಕ್ಸ್(ಚಿತ್ರ) ಸೇವೆಗಳು
    • ಸಂಪರ್ಕ ಸೇವೆಗಳು
  • ಮೂಲ ಸೇವಾ ಪದರ
  • ಕರ್ನೆಲ್ ಸೇವೆಗಳು ಮತ್ತು ಯಂತ್ರಾಂಶ ಸಂಪರ್ಕ ಪದರ

ಮೂಲ ಸೇವೆಗಳ ಪದರವು ಗ್ರಾಹಕ-ಬದಿಯ ಕಾರ್ಯಗಳಿಂದ ತಲುಪಲಾಗುವ ಅತಿ ಕೆಳ ಸ್ತರವಾಗಿದೆ; ಅದು ಕಡತ ಪೂರೈಕೆಗಣಕ ಮತ್ತು ಗ್ರಾಹಕ ಗ್ರಂಥಾಲಯ, ಎಲ್ಲಾ ಅಳವಡಿಕೆಗಳನ್ನೂ ನಿಭಾಯಿಸುವ ಒಂದು ಪ್ಲಗ್-ಇನ್ ಚೌಕಟ್ಟು, ಉಗ್ರಾಣ, ಕೇಂದ್ರೀಯ ಭಂಡಾರ, DBMS ಮತ್ತು ಸಂಕೇತಕಾರಕ ಸೌಲಭ್ಯಗಳನ್ನು ಹೊಂದಿರುತ್ತದೆ. ಅಲ್ಲದೆ ಅದು ಪಠ್ಯ ಕಿಟಕಿ ಸರ್ವರ್ ಮತ್ತು ಪಠ್ಯ ಕವಚಗಳನ್ನೂ ಹೊಂದಿರುತ್ತದೆ; ಈ ಎರಡು ಮೂಲ ಸೇವೆಗಳಿದ್ದರೆ ಬೇರಾವುದೇ ಹೆಚ್ಚಿನ ಪದರಗಳ ಸೇವೆಗಳ ನೆರವಿಲ್ಲದೆ ಸಂಪೂರ್ಣವಾಗಿ ಕ್ರಿಯಾತ್ಮಕವಾಗುವ ಸಂಪರ್ಕಸ್ಥಳಗಳನ್ನು ಸೃಷ್ಟಿಸಬಹುದು.

ಸಿಂಬಿಯಾನ್ ಮೈಕ್ರೋಕೆರ್ನೆಲ್ ರಚನಾವಿಧಿಯನ್ನು ಹೊಂದಿದೆ, ಎಂದರೆ ಬಲವರ್ಧನೆ, ಲಭ್ಯತಾವೃದ್ಧಿ ಮತ್ತು ಸ್ಪಂದನಕ್ರಿಯಾವೃದ್ಧಿಗಳನ್ನು ಹೊಂದಲು ಬೇಕಾದ ಕನಿಷ್ಠ ಸೌಲಭ್ಯಗಳು ಕೆರ್ನೆಲ್ ನಲ್ಲಿಯೇ ಲಭ್ಯವೆಂದರ್ಥ. ಅದು ಒಂದು ಕಾರ್ಯಕ್ರಮ ವಿವರಧಾರಿ, ಸ್ಮೃತಿ ವ್ಯವಸ್ಥಾಪನೆ ಮತ್ತು ಉಪಕರಣ ಚಾಲಕಗಳನ್ನು ಹೊಂದಿದೆ, ಆದರೆ ಇತರ ಸೇವೆಗಳಾದ ನೆಟ್ ವರ್ಕಿಂಗ್, ಟೆಲಿಫೋನಿ ಮತ್ತು ಕಡತವ್ಯವಸ್ಥೆಗಳ ಬೆಂಬಲಗಳನ್ನು ಮೂಲ ಸೇವೆಗಳ ಪದರದಲ್ಲಿರಿಸದೆ ಓಸ್ ಸೇವೆಗಳ ಪದರದಲ್ಲಿರಿಸಲಾಗಿದೆ. ಉಪಕರಣಗಳ ಚಾಲಕಗಳನ್ನು ಅಳವಡಿಸಿರುವುದರಿಂದ ಈ ಕೆರ್ನೆಲ್ ನಿಜವಾದ ಮೈಕ್ರೋಕೆರ್ನೆಲ್ ಅಲ್ಲವೆಂದಾಗುತ್ತದೆ. ನ್ಯಾನೋಕೆರ್ನೆಲ್ ಎಂದು ಕರೆಯಲ್ಪಟ್ಟ EKA42 ರಿಯಲ್-ಟೈಂ ಕೆರ್ನೆಲ್ ಮೂಲ ಹಾಗೂ ಪುರಾತನ ಅಂಶಗಳನ್ನು ಮಾತ್ರ ಹೊಂದಿರುವುದರಿಂದ ಬೇರಾವುದೇ ವಾಹಕಗಳನ್ನು ಅಳವಡಿಸಬೇಕಾದಲ್ಲಿ ವಿಸ್ತೃತ ಕೆರ್ನೆಲ್ ಗಳು ಬೇಕಾಗುತ್ತವೆ.

ಸಿಂಬಿಯಾನ್ ಇತರ ಉಪಕರಣಗಳೊಡನೆ ಸಮವರ್ತಿಯಾಗುವುದಕ್ಕೆ ಪ್ರಾಮುಖ್ಯತೆ ನೀಡುವ ರೀತಿಯಲ್ಲಿ ರಚಿತವಾಗಿದ್ದು, ವಿಶೇಷವಾಗಿ ರದ್ದಾಗಿಸುವ ಮಾಧ್ಯಮ ಕಡತ ವ್ಯವಸ್ಥೆಗೆ ಒತ್ತು ನೀಡಿತು. ಇಪಿಓಸಿಯ ತ್ವರಿತ ಅಭಿವೃದ್ಧಿಯಿಂದ FAT ಅನ್ನು ಆಂತರಿಕ ಕಡತ ವ್ಯವಸ್ಥೆಯನ್ನಾಗಿ ಅಳವಡಿಸಿಕೊಳ್ಳಲಾಯಿತು ಮತ್ತು ಇದು ಇಂದಿಗೂ ಇದೆ, ಆದರೆ ಒಂದು ವಸ್ತು-ನಿಷ್ಠವಾದ ಪರ್ಸಿಸ್ಟೆನ್ಸ್ ಮಾದರಿಯನ್ನು ಕೆಳಗಿರಿಸಿರುವ FAT ಮೇಲೆ ಇರಿಸಲಾಯಿತು ಮತ್ತು ಈ ರೀತಿ ಒಂದು POSIX-ಶೈಲಿಯ ಸಂಪರ್ಕಸಾಧನ ಮತ್ತು ಒಂದು ಸ್ಟ್ರೀಮಿಂಗ್ ಮಾಡೆಲ್ ಒದಗಿಸಲ್ಪಟ್ಟವು. ಆಂತರಿಕ ದತ್ತ ರಚನೆಗಳು ಎಲ್ಲಾ ಕಡತ ನಿರ್ವಾಹಗಳನ್ನು ಚಲಾಯಿಸಲೆಂದು ದತ್ತವನ್ನು ಸೃಷ್ಟಿಸುವ ಅದೇ APIಗಳನ್ನು ಬಳಸುವುದರ ಮೇಲೆಯೇ ಅವಲಂಬಿತವಾಗಿರುತ್ತವೆ ಫಲಿತವಾಗಿ ದತ್ತ-ಅವಲಂಬನೆ ಮತ್ತು ಬದಲಾವಣೆ ಸಂಬಂಧಿತ ತೊಂದರೆಗಳು ಹಾಗೂ ದತ್ತ ವಲಸೆಗಳು ಉಂಟಾಗಿವೆ.

ಒಂದು ಬೃಹತ್ ಜಾಲ (ನೆಟ್ ವರ್ಕಿಂಗ್) ಮತ್ತು ಸಂವಹನ ಉಪವ್ಯವಸ್ಥೆಯಿದೆ, ಅದರಲ್ಲಿ ಮೂರು ಪ್ರಮುಖ ಪೂರೈಕೆಗಣಕಗಳಿವೆ: ETEL (ಇಪಿಓಸಿ ಟೆಲಿಫೋನಿ), ESOCK (ಇಪಿಓಸಿ ಸಾಕೆಟ್ ಗಳು) ಮತ್ತು C32 (ಸರಣಿ ಸಂಸರ್ಗದ ಹೊಣೆ ಹೊರುವಂತಹದ್ದು.). ಇವೆಲ್ಲವೂ ಅಳವಡಿಕೆ-ಸಾಧನ ಹಂಚಿಕೆಯನ್ನು ಹೊಂದಿವೆ. ಉದಾಹರಣೆಗೆ ESOCK ವಿವಿಧ "PRT" ಶಿಷ್ಟಾಚಾರ ಸಂಹಿತೆ ಮಾದರಿಗಳನ್ನು ಅನುಮತಿಸಿ ಹಲವಾರು ನೆಟ್ ವರ್ಕಿಂಗ್ ಶಿಷ್ಟಾಚಾರ ಸಂಹಿತೆ ಹಂಚಿಕೆಗಳನ್ನು ಅಳವಡಿಸುತ್ತದೆ. ಈ ಉಪವ್ಯವಸ್ಥೆಯು ಬ್ಲೂಟೂತ್, IrDA, ಮತ್ತು USBಗಳಂತಹ ಕಡಿಮೆ-ವ್ಯಾಪ್ತಿಯ ಸಂಸರ್ಗ ಕೊಂಡಿಗಳನ್ನು ಬೆಂಬಲಿಸುವಂತಹ ಸಂಕೇತಗಳನ್ನು ಸಹ ಹೊಂದಿದೆ.

ಅಲ್ಲದೆ ಗ್ರಾಹಕ ಸಂಪರ್ಕಸಾಧನ (UI)ಸಂಕೇತದ ಬೃಹತ್ ಸಂಪುಟವೇ ಇದೆ. ಕೇವಲ ಮೂಲ ವರ್ಗಗಳು ಮತ್ತು ಕೆಳಗಿನ ನಿರ್ಮಾಣಗಳನ್ನು ಮಾತ್ರ ಸಿಂಬಿಯಾನ್ ಓಎಸ್ ನಲ್ಲಿ ಇರಿಸಿಕೊಳ್ಳಲಾಗಿತ್ತು, ಬಹುತೇಕ ಗ್ರಾಹಕ ಸಂಪರ್ಕಸಾಧನಗಳನ್ನು ಮೂರನೆಯ ಪಕ್ಷಗಳು ನಿರ್ವಹಿಸುತ್ತಿದ್ದವು. ಈಗ ಹಾಗಿಲ್ಲ. ಪ್ರಮುಖವಾದ ಮೂರು UIಗಳು - S60, UIQ ಮತ್ತು MOAP - 2009ರಲ್ಲಿ ಸಿಂಬಿಯಾನ್ ಓಎಸ್ ಗೆ ನೀಡಲ್ಪಟ್ಟವು. ಸಿಂಬಿಯಾನ್ ಚಿತ್ರಗಳು, ಪಠ್ಯ ರೂಪವಿನ್ಯಾಸಗಳು ಮತ್ತು ಅಕ್ಷರಾಕಾರಗಳನ್ನು ಸಮರ್ಪಿಸುವ ಗ್ರಂಥಾಲಯಗಳನ್ನು ಸಹ ಹೊಂದಿದೆ.

ಎಲ್ಲಾ ಸ್ಥಾನಿಕ ಸಿಂಬಿಯಾನ್ C++ ಅನ್ವಯಿಕಗಳು ಅನ್ವಯಿಕ ವಿನ್ಯಾಸಕಲೆಯಿಂದ ನಿರೂಪಿತವಾದ ಮೂರು ಚೌಕಟ್ಟಿನ ವರ್ಗಗಳಿಂದ ನಿರ್ಮಿತವಾಗುತ್ತವೆ: ಒಂದು ಅನ್ವಯಿಕ ವರ್ಗ, ಒಂದು ದಾಖಲಾತಿ ವರ್ಗ ಮತ್ತು ಒಂದು ಅನ್ವಯಿಕ ಗ್ರಾಹಕ ಸಂಪರ್ಕಸಾಧನ ವರ್ಗ. ಈ ವರ್ಗಗಳು ಮೂಲ ಅನ್ವಯಿಕ ನಡತೆಗಳನ್ನು ಸೃಷ್ಟಿಸುತ್ತವೆ. ಮಿಕ್ಕ ಅಗತ್ಯವಾದ ಕಾರ್ಯಭಾರಗಳು, ಅನ್ವಯಿಕ ನೋಟ,ದತ್ತ ಮಾದರಿ ಮತ್ತು ದತ್ತ ಸಂಪರ್ಕಸಾಧನಗಳನ್ನು ಸ್ವತಂತ್ರವಾಗಿ ಸೃಷ್ಟಿಸಲಾಗುತ್ತದೆ ಮತ್ತು ಅವುಗಳ APIಗಳ ಮೂಲಕವೇ ಇತರ ವರ್ಗಗಳೊಡನೆ ಸ್ಪಂದಿಸುತ್ತವೆ.

ಇನ್ನೂ ಹಲವಾರು ವಸ್ತುಗಳು ಈ ವಿನ್ಯಾಸಕ್ಕೆ ಅಳವಡಿಕೆಯಾಗುವುದಿಲ್ಲ - ಉದಾಹರಣೆಗೆ,SyncML, ಜಾವಾ ME ಮಲ್ಟಿಮೀಡಿಯಾ ಅಷ್ಟೇ ಅಲ್ಲದೆ ಮತ್ತೊಂದು ಜೊತೆ APIಗಳನ್ನು ಒದಗಿಸುವುದು. ಇವುಗಳಲ್ಲಿ ಬಲವಾರು ಚೌಕಟ್ಟುಗಳು ಮತ್ತು ಮಾರಾಟಗಾರರು ಮೂರನೆಯವರಿಂದ ಈ ಚೌಕಟ್ಟುಗಳಿಗೆ ಅಳವಡಿಕೆ ಸಾಧನಗಳನ್ನುಸರಬರಾಜು ಮಾಡಬೇಕೆಂದು ಅಪೇಕ್ಷಿಸಲಾಗುತ್ತದೆ(ಉದಾಹರಣೆಗೆ, ಮಲ್ಟಿಮೀಡಿಯಾ ಕೋಡೆಕ್ ಗಳಿಗೆ ಹೆಲಿಕ್ಸ್ ಪ್ಲೇಯರ್) ಇದರಿಂದ ಹಲವಾರು ಫೋನ್ ಮಾಡರಿಗಳಲ್ಲಿ ಈ ಕ್ಷೇತ್ರದ APIಗಳು ಒಂದೇ ರೀತಿಯದ್ದಾಗಿರುವಂತಹ ಕಾರ್ಯಭಾರವನ್ನು ಹೊಂದಿರುವಂತಹ ಪ್ರಯೋಜನವಿದೆ ಮತ್ತು ಮಾರಾಟಗಾರರಿಗೆ ಸಾಕಷ್ಟು ವಿಶಾಲ ಆಯ್ಕೆಗಳು ದೊರೆಯುತ್ತದೆ. ಆದರೆ ಇದರಿಂದ ಫೋನ್ ಮಾರಾಟಗಾರರು ಒಂದು ಸಿಂಬಿಯಾನ್ ಓಎಸ್ ಫೋನ್ ಮಾಡಲು ಬಹಳವೇ ಹೊಂದಿಸುವಿಕೆಗಳನ್ನು ಮಾಡಬೇಕಾಗುತ್ತದೆ.

ಸಿಂಬಿಯಾನ್ "ಟೆಕ್ ವ್ಯೂ" ಎಂಬ ಒಂದು ಅನ್ವಯ ಗ್ರಾಹಕ-ಸಂಪರ್ಕವನ್ನು ಒಳಗೊಂಡಿದೆ. ಅದು ಗ್ರಾಹಕೀಯಗೊಳಿಸುವಿಕೆಯನ್ನು ಆರಂಭಿಸಲು ಆಧಾರವನ್ನೊದಗಿಸುತ್ತದೆ ಮತ್ತು ಸಿಂಬಿಯಾನ್ ಪ್ರಯೋಗಗಳು ಹಾಗೂ ಉದಾಹರಣ ಸಂಕೇತಗಳು ಚಲಾವಣೆಯಾಗಲು ಇದು ಸೂಕ್ತ ವಾತಾವರಣವಾಗಿದೆ. ಪ್ಸಿಯಾನ್ ಸರಣಿ 5 ಪರ್ಸನಲ್ ಆರ್ಗನೈಸರ್ ನಲ್ಲಿರುವ ಗ್ರಾಹಕ ಸಂಪರ್ಕವನ್ನೇ ಇದು ಹೋಲುತ್ತದೆ ಮತ್ತು ಯಾವುದೇ ಉತ್ಪಾದಕ ಫೋನ್ ಬಳಕೆಯ ಸಂಪರ್ಕಗಳಿಗೆ ಇದನ್ನು ಬಳಸುವುದಿಲ್ಲ.

ಇತಿಹಾಸ

[ಬದಲಾಯಿಸಿ]

ಪ್ಸಿಯಾನ್

[ಬದಲಾಯಿಸಿ]

1980ರಲ್ಲಿ, Psion ಡೇವಿಡ್ ಪಾಟರ್‌ನಿಂದ ಕಂಡು ಹಿಡಿಯಲ್ಪಟ್ಟಿತು.

ಇಪಿಓಸಿ

[ಬದಲಾಯಿಸಿ]
ಒಸಾರಿಸ್ PDA ಒರೆಗಾವ್ ಸೈಂಟಿಫಿಕ್ ನಿಂದ,EPOC ಕಾರ್ಯನಿರ್ವಹಣ ವ್ಯವಸ್ಥೆಯೊಂದಿಗೆ.

ಇಪಿಓಸಿ ಒಂದು ಕೌಟುಂಬಿಕ, ಚಿತ್ರಗಳುಳ್ಳ ಕಾರ್ಯನಿರ್ವಾಹಕ ವ್ಯವಸ್ಥೆಯಾಗಿದ್ದು ಪ್ಸಿಯಾನ್ ನಿಂದ ಒಯ್ಯಬಹುದಾದ ಉಪಕರಣಿಗಳಿಗಾಗಿ, ಅದರಲ್ಲೂ ಪ್ರಮುಖವಾಗಿ PDAಗಳಿಗೆಂದು, ಅಭಿವೃದ್ಧಿಗೊಳಿಸಲಾಯಿತು. EPOCಯು ಇಪಾಕ್ ಅರ್ಥಾತ್ ಯುಗಾರಂಭ ಪದದಿಂದ ಉಗಮವಾಯಿತು, ಆದರೆ ಇಂಜಿನಿಯರ್ ಗಳು ಅದಕ್ಕೆ "ಎಲೆಕ್ಟ್ರಾನಿಕ್ ಪೀಸ್ ಆಫ್ ಚೀಸ್" ಎಂಬ ಅಕ್ಷರಾಧಾರಿತ ಪದಮಾಲೆಯಾಗಿ ಪರಿವರ್ತಿಸಿದರು.[]

ಇಪಿಓಸಿ16

[ಬದಲಾಯಿಸಿ]

ಮೊದಲು ಇಪಿಓಸಿ ಎಂದು ಮಾತ್ರ ಕರೆಯಲ್ಪಡುತ್ತಿದ್ದ ಇಪಿಓಸಿ16 1980ರ ದಶಕದ ಕೊನೆಯ ಭಾಗ ಮತ್ತು 1990ರ ಮೊದಲ ಭಾಗದಲ್ಲಿ ಪ್ಸಿಯಾನ್ ನ "SIBO"(ಸಿಕ್ಸ್ಟೀನ್ ಬಿಟ್ ಆರ್ಗನೈಸರ್ಸ್)ಗಾಗಿ ಪ್ಸಿಯಾನ್ ಅಭಿವೃದ್ಧಿಗೊಳಿಸಿದ ಕಾರ್ಯನಿರ್ವಹಣ ವ್ಯವಸ್ಥೆ. ಎಲ್ಲಾ ಇಪಿಓಸಿ16 ಉಪಕರಣಗಳು 8086-ಕುಟುಂಬ ವಿಧಿನಿಯಾಮಕ ಮತ್ತು ಒಂದು 16-ಬಿಟ್ ವಿನ್ಯಾಸಗಳ ಲಾಕ್ಷಣಿಕೆಗಳನ್ನು ಹೊಂದಿದ್ದವು. ಇಪಿಓಸಿ16 ಇಂಟೆಲ್ 8086ನಲ್ಲಿ ಅಸೆಂಬ್ಲರ್ ಭಾಷೆಯಲ್ಲಿ ಮತ್ತು Cಯಲ್ಲಿ ಬರೆದ ಮತ್ತು ROMಗೆ ಜೋಡಿಸಲೆಂದು ವಿನ್ಯಾಸಗೊಳಿಸಿದ ಒಂದು ಏಕ-ಗ್ರಾಹಕ ಪೂರ್ವವಿಕ್ರೀಡಿತ ವಿವಿಧೋದ್ದೇಶ ಕಾರ್ಯನಿರ್ವಹಣ ವ್ಯವಸ್ಥೆಯಾಗಿತ್ತು. ಅದು ಓಪನ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಎಂಬ ಒಂದು ಸರಳ ಕ್ರಮಯೋಜಕ ಭಾಷೆ(OPL)ಯನ್ನು, ಮತ್ತು OVAL ಎಂಬ ಒಂದು ಸಮಗ್ರ ಅಭಿವೃದ್ಧಿ ಪರಿಸರವನ್ನು (IDE) ಬೆಂಬಲಿಸಿತು. SIBO ಉಪಕರಣಗಳು ಇವನ್ನು ಒಳಗೊಂಡಿದ್ದವು: MC200, MC400, ಸರಣಿ 3 (1991–1998), ಸರಣಿ 3a, ಸರಣಿ 3c, ಸರಣಿ 3mx, ಸಿಯೆನಾ, ವರ್ಕಬೌಟ್ ಮತ್ತು ವರ್ಕಬೌಟ್ mx MC400 ಮತ್ತು MC200 ಎಂಬ ಮೊದಲ ಇಪಿಓಸಿ16 ಉಪಕರಣಗಳು 1989ರಲ್ಲಿ ನೌಕಾಚವಾನೆಯಾದವು.


ಇಪಿಓಸಿ16ರಲ್ಲಿ ಪ್ರಾಥಮಿಕವಾಗಿ 1-ಬಿಟ್-ಒಂದು ಪಿಕ್ಸೆಲ್ ನ, ಕೀಬೋರ್ಡ್-ಕಾರ್ಯಕ್ಷಮ ಚಿತ್ರಸಂಪರ್ಕಸಾಧನವಿದ್ದಿತು(ಇದನ್ನು ಯಾವುದಕ್ಕಾಗಿ ವಿನ್ಯಾಸಗೊಳಿಸಿತ್ತೋ ಅದರಲ್ಲಿ ಪಾಯಿಂಟರ್ ಇಂಪುಟ್ ಯಂತ್ರಾಂಶವಿರಲಿಲ್ಲ).

1990ರ ಅಂತ್ಯಭಾಗದಲ್ಲಿ, ಈ ಕಾರ್ಯನಿರ್ವಾಹಕ ವ್ಯವಸ್ಥೆಯನ್ನು ಪ್ಸಿಯಾನ್ ರ ಆಗ ನೂತನವಾದ ಇಪಿಓಸಿ32 OSನಿಂದ ಅನ್ಯವಾಗಿ ಗುರುತಿಸಲು ಇಪಿಓಸಿ ಎಂದು ಕರೆಯಲಾಯಿತು

ಇಪಿಓಸಿ32

[ಬದಲಾಯಿಸಿ]

ಇಪಿಓಸಿ32ರ ಮೊದಲ ಆವೃತ್ತಿಯಾದ ರಿಲೀಸ್ 1 ಪ್ಸಿಯಾನ್ ಸರಣಿ 5 ROM v1.0ರಲ್ಲಿ 1997ರಲ್ಲಿ ಹೊರಬಂದಿತು. ನಂತರ, ROM v1.1 ರಿಲೀಸ್ 3ಅನ್ನು ಹೊರತಂದಿತು (ರಿಲೀಸ್ 2 ಸಾರ್ವಜನಿಕವಾಗಿ ಎಂದೂ ಲಭ್ಯವಾಗಲಿಲ್ಲ.) ಇದರ ನಂತರ ಪ್ಸಿಯಾನ್ ಸರಣಿ 5mx, ರೆವೋ / ರೆವೋ ಪ್ಲಸ್, ಪ್ಸಿಯಾನ್ ಸರಣಿ 7 / ನೆಟ್ ಬುಕ್ ಮತ್ತು ನೆಟ್ ಪ್ಯಾಡ್ (ಇವೆಲ್ಲವುಗಳಲ್ಲೂ ರಿಲೀಸ್ 5 ಇದ್ದವು)ಗಳು ಹೊರಬಂದವು.


ಆಗ ಬರಿದೇ ಇಪಿಓಸಿ ಎಂದು ಕರೆಯಲ್ಪಡುತ್ತಿದ್ದ ಇಪಿಓಸಿ32 ಕಾರ್ಯನಿರ್ವಹಣ ವ್ಯವಸ್ಥೆಯನ್ನು ನಂತರ ಸಿಂಬಿಯಾನ್ ಓಎಸ್ ಎಂದು ಕರೆಯಲಾಯಿತು. ಹೆಸರಿನ ಗೊಂದಲಕ್ಕೆ ಮತ್ತಷ್ಟು ಸೇರ್ಪಡೆಯಾಗುವಂತೆ, ಸಿಂಬಿಯಾನ್ ಎಂದು ಬದಲಿಸುವ ಮುನ್ನ ಇಪಿಓಸಿ16ನ್ನು "ಹೊಸ" ಇಪಿಓಸಿಯೆಂದು ಗೊಂದಲವಾಗದಿರಲೆಂದು SIBO ಎನ್ನಲಾಗುತ್ತಿತ್ತು. ಹೆಸರುಗಳಲ್ಲಿ ಹೋಲಿಕೆಯಿದ್ದರೂ, ಇಪಿಯೋಸಿ32 ಮತ್ತು ಇಪಿಓಸಿ16 ಸಂಪೂರ್ಣ ವಿಭಿನ್ನ ಕಾರ್ಯನಿರ್ವಹಣ ವ್ಯವಸ್ಥೆಗಳಾಗಿದ್ದವು, ಇಪಿಓಸಿ32 C++ ಸಂಕೇತಾಧಾರಿತ ಭಾಷಯಲ್ಲಿ ಬರೆಯಲಾಗಿದ್ದು, 1990ರ ಮಧ್ಯಭಾಗದಲ್ಲಿ ಅಭಿವೃದ್ಧಿಗೊಳಿಸುವಿಕೆಯ ಆರಂಭವಾಯಿತು.

ಇಪಿಓಸಿ32 ಒಂದು ಏಕ-ಗ್ರಾಹಕ ಪೂರ್ವವಿಕ್ರೀಡಿತ ವಿವಿಧೋದ್ದೇಶ ಸ್ಮೃತಿ ರಕ್ಷಣೆಯುಳ್ಳ ಕಾರ್ಯನಿರ್ವಹಣ ವ್ಯವಸ್ಥೆಯಾಗಿದ್ದು, ಅನ್ವಯಿಕ ವೃದ್ಧಿಕಾರರು ತಮ್ಮ ಕ್ರಮವಿಧಿಗಳನ್ನು ಇಂಜಿನ್ ಅಥವಾ ಸಂಪರ್ಕಸಾಧನದಲ್ಲಿ ವಿಂಗಡಿಸುವುದಕ್ಕೆ ಪ್ರೋತ್ಸಾಹದಾಯಕವಾಗಿದೆ. ಪ್ಸಿಯಾನ್ ಸರಣಿಯ PDAಗಳು ಒಂದು ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (ಚಿತ್ರಗಳುಳ್ಳ ಗ್ರಾಹಕ ಸಂಪರ್ಕಸಾಧನ) ಆದ, ಕೀಬೋರ್ಡ್ಸಹಿತವಾದ ಕೈಯಲ್ಲಿ ಹಿಡಿದ ಯಂತ್ರಗಳಿಗೆ ಹೇಳಿಮಾಡಿಸಿದಂತಹ EIKON ನೊಡನೆ ದೊರೆಯುತ್ತವೆ(ಆದ್ದರಿಂದ ಪ್ರಾಯಶಃ ಪಾಮ್ ಟಾಪ್ GUIಗಳಿಗಿಂತಲೂ ಡೆಸ್ಟ್ ಟಾಪ್ GUIಗಳನ್ನೇ ಹೆಚ್ಚು ಹೋಲುತ್ತವೆ[೧]). ಆದರೆ, ಇಪಿಓಸಿಯ ಲಕ್ಷಣಗಳಲ್ಲಿ ಒಂದೆಂದರೆ ಹೊಸ GUIಗಳನ್ನು GUI ವರ್ಗಗಳ ಕೇಂದ್ರ ಜೊತೆಯನ್ನು ಆಧಾರವಾಗಿರಿಸಿಕೊಂಡು ಸುಲಭವಾಗಿ ಅಭಿವೃದ್ಧಿಗೊಳಿಸಬಹುದು, ಈ ಲಕ್ಷಣವನ್ನು ಎರಿಕ್ಸನ್ R380 ಮತ್ತು ನಂತರದವುಗಳಲ್ಲಿ ವಿಸ್ತಾರವಾಗಿ ಪರಿಶೋಧಿಸಲಾಗಿದೆ.

ಇಪಿಓಸಿ32ಅನ್ನು ಮೊದಲು ARM ಫ್ಯಾಮಿಲಿ ಆಫ್ ಪ್ರೋಸೆಸರ್ಸ್ ಗೆಂದು ಅಭಿವೃದ್ದಿಗೊಳಿಸಲಾಯಿತು, ಅದರಲ್ಲಿ ARM7, ARM9, ಸ್ಟ್ರಾಂಗಾರ್ಮ್ ಮತ್ತು ಇಂಟೆಲ್ ನ Xಸ್ಕೇಲ್ಗಳಿವೆ, ಆದರೆ ಲಕ್ಷ್ಯವಿರುವ ಉಪಕರಣಗಳತ್ತ ಜೋಡಿಸಬೇಕಾದರೆ ಹಲವಾರು ಇತ್ರ ಪ್ರೋಸೆಸರ್ ಮಾದರಿಗಳನ್ನು ಉಪಯೋಗಿಸಬೇಕಾಗುತ್ತದೆ.

ಇಪಿಓಸಿ32 ವೃದ್ಧಿಗೊಳಿಸುವ ಸಮಯದಲ್ಲಿ ಪ್ಸಿಯಾನ್ ಇಪಿಓಸಿಯ ಪರವಾನಗಿಯನ್ನು ಉಪಕರಣ ತಯಾರಿಸುವ ಅನ್ಯರಿಗೆ ನೀಡಿ, ಆ ಅನ್ಯರ ತಂತ್ರಾಂಶ ವಿಭಾಗವನ್ನು ಪ್ಸಿಯಾನ್ ತಂತ್ರಾಂಶವೆಂದು ಸ್ಥಾಪಿಸುವ ಹವಣಿಕೆ ಹೊಂದಿತ್ತು. ಹಾಗೆ ಪರವಾನಗಿ ಪಡೆದ ಮೊದಲಿಗರಲ್ಲಿ ಜಿಯೋಫಾಕ್ಸ್ ಎಂಬ ಅಲ್ಪಾಯುವೂ ಒಂದಾಗಿದ್ದು, ಕೇವಲ 1000 ಯೂನಿಟ್ ಗಳನ್ನು ಮಾರುವಷ್ಟರಲ್ಲಿ ಉತ್ಪಾದಿಸಲಾಗದೆ ಕೈಚೆಲ್ಲಿತು. ಎರಿಕ್ಸನ್ ಮರುಲಾಂಛನಗೊಂಡ ಪ್ಸಿಯಾನ್ ಸರಣಿ 5mxನ MC218 ಅನ್ನು ಮಾರಾಟಮಾಡಿತು, ಮತ್ತು ನಂತರ ಇಪಿಓಸಿ ರಿಲೀಸ್ 5.1 ಆಧಾರಿತ ಸ್ಮಾರ್ಟ್ ಫೋನ್ R380 ಯನ್ನು ತಯಾರಿಸಿತು. ಒರೆಗಾವ್ ಸೈಂಟಿಫಿಕ್ ಸಹ ಒಂದು ಕಡಿಮೆ ಬೆಲೆಯ ಇಪಿಓಸಿ, ಓಸಾರಿಸ್ ಅನ್ನು ಹೊರತಂದಿತು(ರಿಲೀಸ್ 4ರೊಡನೆ ನೌಕೆ ಹತ್ತಿದ ಏಕೈಕ ಇಪಿಓಸಿ ಉಪಕರಣ ಎಂಬುದೇ ಇದರ ಹೆಗ್ಗಳಿಕೆ).

ಜೂನ್ 1998ರಲ್ಲಿ ಪ್ಸಿಯಾನ್ ಸಾಫ್ಟ್ ವೇರ್ ಸಿಂಬಿಯಾನ್ ಲಿಮಿಟೆಡ್ ಆಯಿತು; ಪ್ಸಿಯಾನ್ ಮತ್ತು ಫೋನ್ ತಯಾರಕರಾದ ಎರಿಕ್ಸನ್, ಮೋಟರೋಲಾ ಮತ್ತು ನೋಕಿಯಾಗಳು ಕೈಜೋಡಿಸಿರುವ ಈ ಯೋಜನೆಯು ಒಂದು ಪ್ರಮುಖ ಜಂಟಿ ಉದ್ಯಮವಾಗಿದೆ. ರಿಲೀಸ್ 6ರ ನಂತರ ಇಪಿಓಸಿ ಸರಳವಾಗಿ ಸಿಂಬಿಯಾನ್ ಓಎಸ್ ಆಯಿತು.

ಇಪಿಓಸಿ ಓಎಸ್ ಬಿಡುಗಡೆಗಳು 1–5

[ಬದಲಾಯಿಸಿ]

32-ಬಿಟ್ ಗಳ ಆವೃತ್ತಿಯ ಪರ ಕೆಲಸವು 1994ರ ಅಂತ್ಯಭಾಗದಲ್ಲಿ ಆರಂಭವಾಯಿತು.

ಜೂನ್ 1997ರಲ್ಲಿ ಬಿಡುಗಡೆಯಾದ ಸರಣಿ 5 ಉಪಕರಣವು ಇಪಿಓಸಿ32 ಓಎಸ್ ನ "ಪ್ರೋಟೀ" ಮತ್ತು "ಐಕಾನ್" ಎಂಬ ಚಿತ್ರಸಹಿತ ಗ್ರಾಹಕ ಸಂಪರ್ಕಗಳ ಪ್ರಥಮ ಪುನರಾವೃತ್ತಿಗಳನ್ನು ಬಳಸಿತು.

ಒರೆಗಾವ್ ವೈಜ್ಞಾನಿಕ ಒಸಾರಿಸ್ ER4ಯನ್ನು ಬಳಸಿದ ಏಕೈಕ PDA ಆಗಿತ್ತು.

ಪ್ಸಿಯಾನ್ ಸರಣಿ 5mx, ಪ್ಸಿಯಾನ್ ಸರಣಿ 7, ಪ್ಸಿಯಾನ್ ರೇವೋ, ಡೈಮಂಡ್ ಮ್ಯಾಕೋ, ಪ್ಸಿಯಾನ್ ನೆಟ್ ಬುಕ್ ಮತ್ತು ಎರಿಕ್ಸನ್ MC218 ER5ನ್ನು ಬಳಸಿ 1999ರಲ್ಲಿ ಬಿಡುಗಡೆಯಾದವು. ಫಿಲಿಪ್ಸ್ ಇಲ್ಲಿಯಮ್/ಆಕ್ಸೆಂಟ್ ಎಂಬ ಒಂದು ಫೋನ್ ಯೋಜನೆಯನ್ನು CeBITನಲ್ಲಿ ಘೋಷಿಸಲಾಯಿತು, ಆದರೆ ಅದು ಆರ್ಥಿಕ ಯಶ ಗಳಿಸಲಿಲ್ಲ. ಈ ಬಿಡುಗಡೆಯನ್ನು ಬಿಡುಗಡೆಯ ನಂತರ ಯಾವುದೋ ಕಾಲಕ್ಕೆ ಸಿಂಬಿಯಾನ್ ಓಎಸ್ 5 ಎಂದು ಕರೆದರು.

ER5uವನ್ನು ಬಳಸಿದ ಮೊದಲ ಫೋನ್ ಆದ ಎರಿಕ್ಸನ್ R380 ನವೆಂಬರ್ 2000ದಲ್ಲಿ ಬಿಡುಗಡೆಯಾಯಿತು. ಅದು 'ತೆರೆದ' ಫೋನ್ ಆಗಿರಲಿಲ್ಲ – ತಂತ್ರಾಂಶವನ್ನು ಸ್ಥಾಪಿಸಲಾಗುತ್ತಿರಲಿಲ್ಲ. ಗಮನಾರ್ಹ ವಿಷಯವೆಂದರೆ,ಹಲವಾರು ಎಂದೂ ಬಿಡುಗಡೆಯಾಗದ ಮುಮದಿನ ಪೀಳಿಗೆಯ PDAಗಳ ಪ್ಸಿಯಾನ್ ಮಾದರಿಗಳು, ಬ್ಲೂತೂತ್ ನ ವಾರಸು ಆದ ಕೋನಾನ್ ಅನ್ನೂ ಒಳಗೊಂಡಂತೆ,ER5uವನ್ನು ಒಳಗೊಂಡಿದ್ದವು. ಹೆಸರಿನಲ್ಲಿನ 'u' ಅದು ಯೂನೀಕೋಡ್ ಅನ್ನು ಬೆಂಬಲಿಸುತ್ತದೆಂಬುದಕ್ಕೆ ಸೂಚನೆ.

ಸಿಂಬಿಯಾನ್ ಓಎಸ್ 6.0 ಮತ್ತು 6.1

[ಬದಲಾಯಿಸಿ]

ಓಎಸ್ ಅನ್ನು ಸಿಂಬಿಯಾನ್ ಓಎಸ್ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಹೊಸ ಶ್ರೇಣಿಯ ಸ್ಮಾರ್ಟ್ ಫೋನ್ ಗಳಿಗೆ ಇದು ಬುನಾದಿಯಾಗುವುದೆಂದು ಕಲ್ಪಿತವಾಯಿತು. ಈ ಮಾದರಿಯನ್ನು ಕೆಲವು ಬಾರಿ ER6 ಎಂದು ಕರೆಯುತ್ತಾರೆ. ಪ್ಸಿಯಾನ್ 130 ಪ್ರಮುಖ ಸಿಬ್ಬಂದಿಯನ್ನು ಹೊಸ ಕಂಪನಿಗೆ ನೀಡಿತು ಮತ್ತು 31% ಪಾಲುದಾರಿಕೆಯನ್ನು ಉತ್ಪನ್ನಗೊಂಡ ವ್ಯವಹಾರದಲ್ಲಿ ಉಳಿಸಿಕೊಂಡಿತು.

ಪ್ರಥಮ 'ಮುಕ್ತ' ಸಿಂಬಿಯಾನ್ ಓಎಸ್ ಫೋನ್ ಆದ ನೋಕಿಯಾ 9210 ಕಮ್ಯೂನಿಕೇಟರ್, ಜೂನ್ 2001ರಲ್ಲಿ ಬಿಡುಗಡಿಯಾಯಿತು. ಬ್ಲೂಟೂತ್ ಬೆಂಬಲವನ್ನು ಸೇರಿಸಲಾಯಿತು. ಸುಮಾರು 500,000 ಸಿಂಬಿಯಾನ್ ಪೋನ್ ಗಳು 2001ರಲ್ಲಿ ರವಾನೆಯಾದವು ಹಾಗೂ ಮರುವರ್ಷ ಆ ಸಂಖ್ಯೆಯು 2.1 ಮಿಲಿಯನ್ ಗೆ ಏರಿತು.

'ಸ್ಮಾರ್ಟ್ ಫೋನ್' ಅಥವಾ 'ಕಮ್ಯುನಿಕೇಟರ್' ಸಾಧನಗಳಿಗೆ, ಹಾಗೂ ಉಪವಿಂಗಡಣೆಯಾದ ಕೀಬೋರ್ಡ್-ಅಥವಾ ಟ್ಯಾಬ್ಲೆಟ್ ಆಧಾರಿತ ವಿನ್ಯಾಸಗಳಿಗೆ, "ಆಕರ ವಿನ್ಯಾಸ ಹಂಚಿಕೆ" ಹೊಂದುವಂತೆ ಮಾಡಿ ವಿವಿಧ UIಗಳನ್ನು ಅಭಿವೃದ್ಧಿಗೊಳಿಸಲಾಯಿತು. ಎರಡು ಆಕರ UIಗಳು (DFRDಗಳು ಅಥವಾ ಡಿವೈಸ್ ಫ್ಯಾಮಿಲಿ ರೆಫೆರೆನ್ಸ್ ಡಿಸೈನ್ಸ್) ರವಾನೆಯಾದವು – ಕ್ವಾರ್ಟ್ಝ್ ಮತ್ತು ಹರಳು. ಮೊದಲನೆಯದನ್ನು ಎರಿಕ್ಸನ್ ನ 'ರೋನ್ನೆಬಿ'ವಿನ್ಯಾಸದೊಂದಿಗೆ ಸೇರಿಸಲಾಯಿತು ಮತ್ತು UIQ ಸಂಪರ್ಕಸಾಧನಕ್ಕೆ ಇದು ಆಧಾರವಾಯಿತು; ನಂತರದ್ದು ಮಾರುಕಟ್ಟೆಯನ್ನು ನೋಕಿಯಾ ಸೀರೀಸ್ 80UI ಆಗಿ ತಲುಪಿತು.

ನಂತರದ DFRDಗಳು ಸಫೈರ್,ರೂಬಿ, ಮತ್ತು ಎಮರಾಲ್ಡ್. ಸಫೈರ್ ಮಾತ್ರ ಮಾರುಕಟ್ಟೆಗೆ ಬಂದಿತು ಮತ್ತು ಪರ್ಲ್ DFRD ಅಗಿ ಪರಿವರ್ತಿತವಾಗಿ, ನಂತರ ಮೊದಲ ದಿಟ ಸ್ಮಾರ್ಟ್ ಫೋನ್ ಗಳಿಗೆ ಕೀಪ್ಯಾಡ್ ಆಧಾರಿತ 'ಸ್ಕ್ವೇರ್' UI ಆದ ನೋಕಿಯಾ ಸರಣಿ 60 UI ಆಯಿತು. ಅದರಲ್ಲಿ ಮೊದಲನೆಯದು ನೋಕಿಯಾ 7650 ಸ್ಮಾರ್ಟ್ ಫೋನ್(ಸಿಂಬಿಯಾನ್ ಓಎಸ್ 6.1ರ ಲಕ್ಷಣಗಳನ್ನು ಹೊಂದಿತ್ತು)ಆಗಿದ್ದು, ಅದು VGA (0.3 Mpx = 640×480)ರಿಸಲ್ಯೂಷನ್ ಸಹಿತ ಅಂತರ್ನಿರ್ಮಿತ ಕ್ಯಾಮರಾವುಳ್ಳ ಮೊದಲ ಫೋನ್ ಆಗಿತ್ತು.

ಹೀಗೆ ಸಾಮಾನ್ಯವಾಗಿರಲು ಯತ್ನಿಸಿದರೂ, ಸ್ಪರ್ಧಿಸುವ ಕಂಪನಿಗಳ ನಡುವೆ UI ಸ್ಪಷ್ಟವಾಗಿ ವಿಭಜಿಸಲ್ಪಟ್ಟಿತು: ನೋಕಿಯಾಗೆ ಹರಳು ಅಥವಾ ಸಫೈರ್, ಎರಿಕ್ಸನ್ ಗೆ ಕ್ವಾರ್ಟ್ಝ್. 'ತಲೆಯಿಲ್ಲದ' ಬಟವಾಡೆಯ ಪರವಾಗಿ, UI ಅಭಿವೃದ್ಧಿಗೊಳಿಸುವಿಕೆಯಿಂದ ಹೊರಬರುವ ಪ್ರಕ್ರಿಯೆಯ ಒಂದು ಅಂಗವಾಗಿ, 2002ರ ಕೊನೆಯಲ್ಲಿ DFRDಯನ್ನು ಸಿಂಬಿಯಾನ್ ತೊರೆಯಿತು. ಪರ್ಲ್ ಅನ್ನು ನೋಕಿಯಾಗೆ ನೀಡಲಾಯಿತು, ಕ್ವಾರ್ಟ್ಝ್ ಅಭಿವೃದ್ಧಿಯನ್ನು UIQ ಟೆಕ್ನಾಲಜಿ AB ಯಾಗಿಸಲಾಯಿತು ಮತ್ತು ಜಪಾನ್ ನ ಸಂಸ್ಥೆಗಳೊಂದಿಗಿನ ಕೆಲಸಗಳನ್ನು ತ್ವರಿತವಾಗಿ MOAP ಮಟ್ಟಕ್ಕೆ ಮಡಿಸಲಾಯಿತು.

ಸಿಂಬಿಯಾನ್ ಓಎಸ್ 7.0 ಮತ್ತು 7.0s

[ಬದಲಾಯಿಸಿ]

ಮೊದಲು ರವಾನೆಯದದ್ದು 2003ರಲ್ಲಿ. ಇದು ಒಂದು ಬಹಳ ಪ್ರಮುಖ ಬಿಡುಗಡೆಯಾದ ಉತ್ಪಾದನೆಯಾಗಿದ್ದು ಎಲ್ಲಾ ಸಮಕಾಲೀನ ಗ್ರಾಹಕ ಪರಸ್ಪರಸಂಪರ್ಕಗಳೊಡನೆ ಗೋಚರವಾಯಿತು. ಅವುಗಳ ಪೈಕಿ ಯೂಐಕ್ಯೂ (ಸೋನಿ ಎರಿಕ್ಸನ್ P800, P900, P910, ಮೋಟರೋಲಾ A925, A1000), ಸರಣಿ 80 (ನೋಕಿಯಾ 9300, 9500), ಸರಣಿ 90 (ನೋಕಿಯಾ 7710), ಸರಣಿ 60 (ನೋಕಿಯಾ 3230, 6260, 6600, 6670, 7610) ಹಾಗೂ ಹಲವಾರು ಜಪಾನ್ ನ FOMA ಫೋನ್ ಗಳೂ ಸೇರಿವೆ. ಅದು EDGE ಸಪೋರ್ಟ್ ಮತ್ತು IPv6ಗಳನ್ನು ಸಹ ಸೇರಿಸಿಕೊಂಡಿತು. ಜಾವಾ ಬೆಂಬಲವನ್ನು pಜಾವಾ ಮತ್ತು ಜಾವಾಫೋನ್ ಗಳಿಂದ ಜಾವಾ ME ಮಟ್ಟವನ್ನು ಆಧರಿಸಿರುವುದಕ್ಕೆ ಬದಲಾಯಿಸಲಾಯಿತು.

2003ರ ಮೊದಲ ಮೂರು ತಿಂಗಳಲ್ಲಿ ಒಂದು ಮಿಲಿಯನ್ ಸಿಂಬಿಯಾನ್ ಫೋನ್ ಗಳು ನೌಕೆಯೇರಿದವು, ನಂತರದ ದಿನಗಳಲ್ಲಿ ಇದು ಮತ್ತೂ ವೃದ್ಧಿಸಿ 2003ರ ಕೊನೆಗೆ ತಿಂಗಳಿಗೆ ಒಂದು ಮಿಲಿಯನ್ ನೌಕೆಯನ್ನು ರವಾನೆಗೆಂದೇರುತ್ತಿದ್ದವು.

ಸಿಂಬಿಯಾನ್ ಓಎಸ್ 7.0 ಸಿಂಬಿಯಾನ್ ಓಎಸ್ 7.0 ಸ್ಪೆಷಲ್ ನ ಆವೃತ್ತಿಯಾಗಿದ್ದು, ಹೆಚ್ಚಿನ ಹಿನ್ನಡೆ ಹೊಂದಾಣಿಕೆಗಾಗಿ ಸಿಂಬಿಯಾನ್ ಓಎಸ್ 6.xನೊಂದಿಗೆ, ಭಾಗಶಃ ಕಮ್ಯೂನಿಕೇಟರ್ 9500ನೊಂದಿಗೆ ಮತ್ತು ಅದರ ಹಿಂದಿನ ಆವೃತ್ತಿಯಾದ ಕಮ್ಯೂನಿಕೇಟರ್ 9210ಗೆ ಹೊಂದಲು ಅಳವಡಿಸಲಾಗಿತ್ತು.


2004ರಲ್ಲಿ ಪ್ಸಿಯಾನ್ ಸಿಂಬಿಯಾನ್ ನಲ್ಲಿದ್ದ ತನ್ನ ಪಾಲನ್ನು ಮಾರಿತು. ಅದೇ ವರ್ಷ ಸಿಂಬಿಯಾನ್ ಓಎಸ್ ಬಳಸುವ ಮೊಬೈಲ್ ಫೋನ್ ಗಳ ಮೊದಲ ಹುಳು, ಕಾಬಿರ್ , ಅಭಿವೃದ್ಧಿಗೊಂಡು, ಬ್ಲೂಟೂತ್ ಮೂಲಕ ತಾನೇ ಹತ್ತಿರದ ಫೋನ್ ಗಳಿಗೆ ಪಸರಿಸತೊಡಗಿತು. ಕಾಬಿರ್ ಮತ್ತು ಸಿಂಬಿಯಾನ್ ಓಎಸ್ ಭೀತಿಗಳು ವನ್ನು ನೋಡಿ.

ಸಿಂಬಿಯಾನ್ ಓಎಸ್ 8.೦

[ಬದಲಾಯಿಸಿ]

2004ರಲ್ಲಿ ಮೊದಲು ನೌಕಾರವಾನೆಯಾದ ಇದರ ಉಪಯೋಗವೆಂದರೆ ಎರಡು ವಿಭಿನ್ನ ಕೆರ್ನೆಲ್ ಗಳ (EKA1 ಅಥವಾ EKA2)ಆಯ್ಕೆ. ಆದರೆ, EKA2 ಕೆರ್ನೆಲ್ ಆವೃತ್ತಿಯು ಸಿಂಬಿಯಾನ್ ಓಎಸ್ 8.1b ತಯಾರಾಗುವವರೆಗೂ ರವಾನೆಯಾಗಲಿಲ್ಲ. ಈ ಕೆರ್ನೆಲ್ ಗಳು ಗ್ರಾಹಕನ ದಿಕ್ಕಿನಿಂದ ಒಂದೇ ರೀತಿಯ ನಡವಳಿಕೆ ತೋರಿದರೂ, ಆಂತರಿಕವಾಗಿ ಬಹಳ ವಿಭಿನ್ನವಾಗಿವೆ. EKA1 ಅನ್ನು ಹಳೆಯ ಉಪಕರಣಗಳ ಚಾಲಕಗಳೊಡನೆ ಹೊಂದಾಣಿಕೆ ಮುಂದುವರಿಸಲು ಕೆಲವು ತಯಾರಕರು ಆಯ್ದುಕೊಂಡರು, EKA2 ರಿಯಲ್-ಟೈಂ ಕೆರ್ನೆಲ್ ಆಗಿತ್ತು. 8.0b 2003ರಲ್ಲಿ ನಿರುತ್ಪತ್ತಿಗೊಳಿಸಲಾಯಿತು.

ಮತ್ತೂ ಅಳವಡಿಸಿಕೊಂಡವುಗಳೆಂದರೆ CDMA ಬೆಂದಲಿಸಲು ಹೊಸ APIಗಳು, 3G, ದ್ವಿಮಾರ್ಗಿ ಮಾಹಿತಿ ಸ್ಟ್ರೀಮಿಂಗ್, DVB-H, ಮತ್ತು ಓಪನ್GL ES ನೊಡನೆ ವೆಕ್ಟಾರ್ ಚಿತ್ರಣಗಳು ಮತ್ತು ನೇರ ಪರದೆ ಪಥ.

ಸಿಂಬಿಯಾನ್ ಓಎಸ್ 8.1

[ಬದಲಾಯಿಸಿ]

8.0ರ ಅಭಿವೃದ್ಧಿಗೊಳಿಸಿದ ಆವೃತ್ತಿಯಾದ ಇದು, 8.1a ಮತ್ತು 8.1b ಆವೃತ್ತಿಗಳಲ್ಲಿ ಲಭ್ಯವಿತ್ತು;ಕ್ರಮವಾಗಿ EKA1 ಮತ್ತು EKA2 ಕೆರ್ನೆಲ್ ಗಳೊಂದಿಗೆ ಇದು ದೊರೆಯುತ್ತಿತ್ತು. EKA2ರ ಏಕ-ಚಿಪ್ ಫೋನ್ ಬೆಂಬಲವಿದ್ದು ಮತ್ತಾವುದೇ ರಕ್ಷಣಾ ಪದರಗಳಿಲ್ಲದ 8.೧ಬ್ ಆವೃತ್ತಿಯು ಮುಕ್ತ ಅನ್ವಯಿಕ ಸ್ಥಾಪನೆಗೆ ಎಡೆ ಕೊಡದ, ರಿಯಲ್ ಟೈಂ ಬೆಂಬಲ ಅಪೇಕ್ಷಿಸುವ ಜಪಾನಿನ ಫೋನ್ ಕಂಪನಿಗಳಲ್ಲಿ ಬಹಳ ಜನಪ್ರಿಯವಾಯಿತು. ಸಿಂಬಿಯಾನ್ ಓಎಸ್ 8.1a ಲಕ್ಷಣಗಳನ್ನು ಹೊಂದಿದ ಮೊದಲ ಮತ್ತು ಪ್ರಾಯಶಃ ಬಹಳ ಜನಪ್ರಿಯ ಸ್ಮಾರ್ಟ್ ಫೋನ್ ಎಂದರೆ 2005ರ ನೋಕಿಯಾ N90, ನೋಕಿಯಾNಸರಣಿಯ ಮೊದಲ ಫೋನ್.

ಸಿಂಬಿಯಾನ್ ಓಎಸ್ 9

[ಬದಲಾಯಿಸಿ]

ಸಿಂಬಿಯಾನ್ ಓಎಸ್ 9.0 ಸಿಂಬಿಯಾನ್ ನ ಆಂತರಿಕ ಬಳಕೆಗಳಿಗಾಗಿಯೇ ಸೀಮಿತವಾಗಿತ್ತು. ಅದು 2004ರಲ್ಲಿ ನಿರುತ್ಪಾದಿತವಾಯಿತು. 9.0 EKA1ನ ಹಾದಿಗೆ ಮಂಗಳ ಹಾಡಿತು. 8.1a ಸಿಂಬಿಯಾನ್ ಓಎಸ್ ನ ಕೊನೆಯ EKA1 ಆವೃತ್ತಿ.

ಸಿಂಬಿಯಾನ್ ಓಎಸ್ ಸಾಮಾನ್ಯವಾಗಿ ತಕ್ಕಮಟ್ಟಿನ ದ್ವಿಗುಣ ಸಂಕೇತ ಅನುಗುಣತ್ವವನ್ನು ನಿರ್ವಹಿಸಿದೆ. ಸೈದ್ಧಾಂತಿಕವಾಗಿ OS ER1-ER5ನಿಂದ BC ಆಗಿತ್ತು, ನಂತರ 6.0 ರಿಂದ 8.1b. ಉಪಕರಣಗಳು ಮತ್ತು ಭದ್ರತೆಗೆ ಸಂಬಂಧಿತವಾಗಿ 9.0ಗೆ ಗಮನಾರ್ಹ ಬದಲಾವಣೆಗಳು ಅಗತ್ಯವಾಗಿದ್ದವು, ಆದರೆ ಇದು ಒಮ್ಮೆ ಮಾತ್ರ ಅಗುವಂತಹ ಪ್ರಕ್ರಿಯೆಯಾಗಬೇಕು. ARMv4 ಬೇಕಾಗುವ ಸ್ಥಿತಿಯಿಂದ ARMv5 ಬೇಕಾದ ಸ್ಥಿತಿಗೆ ಚಲಿಸಿದುದು ಹಿನ್ನಡೆ ಅನುಗುಣತ್ವಕ್ಕೇನೂ ಭಂಗ ತರಲಿಲ್ಲ.

ಸಿಂಬಿಯಾನ್ ಓಎಸ್ 9.1 ಮತ್ತು ಮುಕ್ತ ಮೂಲ ಅಭಿವೃದ್ಧಿ

[ಬದಲಾಯಿಸಿ]

2005ರಲ್ಲಿ ಬಿಡುಗಡೆಯಾಯಿತು. ಅದು ಹಲವಾರು ರಕ್ಷಣಾ ಸಂಬಂಧಿತ ಗುಣಗಳನ್ನು ಹೊಂದಿದ್ದು, ಅದರಲ್ಲಿ ಕಡ್ಡಾಯವಾಗಿ ಸಂಕೇತಗಳನ್ನು ಸೂಚಿಸುವುದಕ್ಕೆ ಅನುವು ಮಾಡುವಂತಹ ಪ್ಲ್ಯಾಟ್ ಫಾರ್ಮ್ ರಕ್ಷಣಾ ಮಾದರಿಗಳು ಇವೆ. ನೂತನ ARM EABI ದ್ವಿಗುಣ ಮಾದರಿಯಿಂದ ಅಭಿವೃದ್ಧಿಕಾರರು ಸಾಧನಗಳನ್ನು ಮತ್ತೆ ತೆಗೆದುಕೊಳ್ಳಬೇಕಾಯಿತು ಮತ್ತು ಭದ್ರತೆಯ ಬದಲಾವಣೆಯಿಂದ ಅವರು ಮರುಸಂಕೇತಗೊಳಿಸಬೇಕಾಗಬಹುದು. S60 ಪ್ಲ್ಯಾಟ್ ಫಾರ್ಮ್ 3ನೆಯ ಆವೃತ್ತಿಯ ಫೋನ್ ಗಳು ಸಿಂಬಿಯಾನ್ ಓಎಸ್ 9.1 ಅನ್ನು ಹೊಂದಿವೆ. ಸೋನಿ ಎರಿಕ್ಸನ್ ಸಿಂಬಿಯಾನ್ ಓಎಸ್ 9.1 ಆಧಾರಿತ M600 ಮತ್ತು P990ಗಳನ್ನು ರವಾನಿಸುತ್ತಿದೆ. ಮೊದಲ ಆವೃತ್ತಿಗಳಲ್ಲಿ ಮಾಲಿಕನು ಬಹಳ ಎಸ್ಸೆಮ್ಮೆಸ್ ಗಳನ್ನು ಕಳುಹಿಸಿದಾಗ ಫೋನ್ ತಾತ್ಕಾಲಿಕವಾಗಿ ಹ್ಯಾಂಗ್ ಆಗುವ ದೋಷವಿತ್ತು. ಆದರೆ, ಸೆಪ್ಟೆಂಬರ್ 13, 2006ರಂದು ನೋಕಿಯಾ ಬಿಡುಗಡೆ ಮಾಡಿದ ಒಂದು ಸಣ್ಣ ಕ್ರಮವಿಧಿಯು ಈ ದೋಷವನ್ನು ಹೋಗಲಾಡಿಸಿತು.[] ಬ್ಲೂಟೂತ್ 2.0ಗೆ ಬೆಂಬಲವನ್ನೂ ಸೇರಿಸಲಾಯಿತು.

ಸಿಂಬಿಯಾನ್ 9.1 ಕೇಪೆಬಲಿಟೀಸ್ ಮತ್ತು ಒಂದು ಪ್ಲ್ಯಾಟ್ ಫಾರ್ಮ್ ರಕ್ಷಣಾ ಚೌಕಟ್ಟನ್ನು ಪರಿಚಯಿಸಿತು. ಕೆಲವು APIಗಳನ್ನು ತಲುಪಲು ಅಭವೃದ್ಧಿಕಾರರು ಅಮ್ಮ ಅರ್ಜಿಗಳಿಗೆ ಡಿಜಿಟಲ್ ಸಹಿ ಹಾಕಬೆಕಿತ್ತು. ಮೂಲ ಕೇಪೆಬಲಿಟೀಸ್ ಗ್ರಾಹಕ-ಅನುಮತಿದಾಯಕಗಳಾಗಿದ್ದು ಅಭಿವೃದ್ಧಿಕಾರರು ಸ್ವಂತ-ಸಹಿ ಮಾಡಬಹುದು, ಆದರೆ ಹೆಚ್ಚು ಆಧುನಿಕ ಕೇಪೆಬಲಿಟೀಸ್ ಗೆ ಸಿಂಬಿಯಾನ್ ರುಜುಗೊಂಡ Archived 2012-03-24 at the National and University Library of Iceland ಕ್ರಮವಿಧಿಯ ಮೂಲಕ ವಿವರಣೆ ಮತ್ತು ಸಹಿ ಇರಬೇಕು ಹಾಗೂ ಈ ಕ್ರಮವಿಧಿಯು ಸ್ವತಂತ್ರ 'ಪರೀಕ್ಷಾ ಗೃಹಗಳು' ಮತ್ತು ಫೋನ್ ತಯಾರಕರನ್ನು ಸಮ್ಮತಿಗಾಗಿ ಬಳಸುತ್ತವೆ. ಉದಾಹರಣೆಗೆ, ಕಡತ ಬರವಣಿಗೆಯು ಒಂದು ಗ್ರಾಹಕ-ಅನುಮತಿದಾಯಕ ಕೇಪೆಬಲಿಟಿ, ಆದರೆ ವಿವಿಧೋದ್ದೇಶ ಸಾಧನಗಳ ಚಾಲಕಗಳನ್ನು ತಲುಪಲು ಫೋನ್ ತಯಾರಕರ ಸಮ್ಮತಿ ಬೇಕು. ಅಭಿವೃದ್ಧಿಕಾರರು ತಮ್ಮ ಅನ್ವಯಿಕಗಳಿಗೆ ಸಹಿ ಹಾಕಲು ಒಂದು ಟಿಸಿ ಟ್ರಸ್ಟ್ ಸೆಂಟರ್ ಏಸಿಎಸ್ ಪಬ್ಲಿಷರ್ ID ಪ್ರಮಾಣಪತ್ರವನ್ನು ಹೊಂದಿರಬೇಕು.

ಸಿಂಬಿಯಾನ್ ಓಎಸ್ 9.2

[ಬದಲಾಯಿಸಿ]

ಬಿಡುಗಡೆ Q1 2006. OMA ಉಪಕರಣ ವ್ಯವಸ್ಥಾಪನೆ1.2 (ಮಾಜಿ 1.1.2)ಗೆ ಬೆಂಬಲ. ವಿಯೆಟ್ನಾಮೀ ಭಾಷೆಗೆ ಬೆಂಬಲ. S60 3ನೆಯ ಆವೃತ್ತಿಯ ಲಾಕ್ಷಣಿಕ ಪ್ಯಾಕ್ 1 ಫೋನ್ ಗಳು ಸಿಂಬಿಯಾನ್ ಓಎಸ್ 9.2ವನ್ನು ಹೊಂದಿವೆ.

ಸಿಂಬಿಯಾನ್ ಓಎಸ್ 9.2ವನ್ನು ಹೊಂದಿರುವ ನೋಕಿಯಾ ಫೋನ್ ಗಳೆಂದರೆ ನೋಕಿಯಾ E90, ನೋಕಿಯಾ N95, ನೋಕಿಯಾ N82 ಮತ್ತು ನೋಕಿಯಾ 5700.

ಸಿಂಬಿಯಾನ್ ಓಎಸ್ 9.3

[ಬದಲಾಯಿಸಿ]

ಜುಲೈ 12, 2006ರಂದು ಬಿಡುಗಡೆಯಾಯಿತು. ಉತ್ತಮತೆಗೊಂಡಂತಹವುಗಳು ಒಳಗೊಂಡಿರುವ ಅಂಶಗಳೆಂದರೆ ಈ ಕೆಳಕಂಡವುಗಳಿಗೆ ಉತ್ತಮಗೊಂಡ ಸ್ಮೃತಿ ನಿಭಾವಣೆ ಮತ್ತು ಸ್ಥಾನಿಕ ಬೆಂಬಲ ನೀಡುವಿಕೆ :Wifiವೈಫೈ 802.11, HSDPA.ನೋಕಿಯಾ E72, ನೋಕಿಯಾ 5730 Xಪ್ರೆಸ್ ಮ್ಯೂಸಿಕ್, ನೋಕಿಯಾ N79, ನೋಕಿಯಾ N96, ನೋಕಿಯಾ E52, ನೋಕಿಯಾ E75 ಮತ್ತು ಇತರ ಫೀಚರ್ ಸಿಂಬಿಯಾನ್ ಓಎಸ್9.3.

ಸಿಂಬಿಯಾನ್ ಓಎಸ್ 9.4

[ಬದಲಾಯಿಸಿ]

ಮಾರ್ಚ್ 2007ರಲ್ಲಿ ಘೋಷಿತವಾಯಿತು. v9.3 ನಂತರ ಲಭ್ಯವಿರುವ ಡಿಮ್ಯಾಂಡ್ ಪೇಜಿಂಗ್ ನ ಸವಲತ್ತುಗಳನ್ನು ಹೊಂದಿದೆ. ಅನ್ವಯಿಕಗಳು 75% ಹೆಚ್ಚು ವೇಗವಾಗಿ ಆರಂಭವಾಗುತ್ತವೆ. ಜೊತೆಗೆ, SQL ಬೆಂಬಲವು SQLite ನಿಂದ ನೀಡಲ್ಪಡುತ್ತದೆ. ಇವುಗಳೊಂದಿಗೆ ರವಾನೆಯಾಗುತ್ತದೆ: ಸ್ಯಾಂಸಂಗ್ i8910 ಆಮ್ನಿಯಾ ಹೆಚ್ ಡಿ, ನೋಕಿಯಾ N97, ನೋಕಿಯಾ 5800 Xಪ್ರೆಸ್ ಮ್ಯೂಸಿಕ್, ನೋಕಿಯಾ 5530 Xಪ್ರೆಸ್ ಮ್ಯೂಸಿಕ್ and ಸೋನಿ ಎರಿಕ್ಸನ್ ಸ್ಯಾಷಿಯೋ. ಸಿಂಬಿಯಾನ್ ಫ್ಲ್ಯಾಟ್ ಫಾರ್ಮ್ ನ ಪ್ರಥಮ ಬಿಡುಗಡೆಯಾದ ಸಿಂಬಿಯಾನ್ ^1ಗೆ ಆಧಾರವಾಗಿ ಬಳಸಲಾಗುತ್ತದೆ.

ಈ ಬಿಡುಗಡೆಯು, ಓಎಸ್ ನ ಒಟ್ಟಾಗಿಸಿದ ಪರಸ್ಪರಸಂಪರ್ಕವಾದುದರಿಂದ, ಇದು S60 5ನೆಯ ಆವೃತ್ತಿಯೆಂದೇ ಹೆಚ್ಚು ಜನಪ್ರಿಯವಾಗಿದೆ.

ಸಿಂಬಿಯಾನ್ ಓಎಸ್ 9.5

[ಬದಲಾಯಿಸಿ]

ಮಾರ್ಚ್ 26 , 2007ರಂದು ಸಿಂಬಿಯಾನ್ ಲಿಮಿಟೆಡ್ v9.5 ಅನ್ನು ಘೋಷಿಸಿತು; ಇದರಲ್ಲಿ ಮೊಬೈಲ್ ಡಿಜಿಟಲ್ ಟೆಲಿವಿಷನ್ ಪ್ರಸಾರಗಳು DVB-H ಮತ್ತು ISDB-T ಮಾದರಿಗಳಲ್ಲಿ ಲಭ್ಯವಿರುವುದಲ್ಲದೆ, ಸ್ಥಾನದ ಸೇವೆಗಳೂ ಲಭ್ಯವಿದೆ.[]

ಪುಕ್ಕಟೆ ಹಾಗೂ ಮುಕ್ತ ಆಕರ ತಂತ್ರಾಂಶವಾಗಿ ಬಿಡುಗಡೆಗೊಂಡಿತು.

[ಬದಲಾಯಿಸಿ]

ಸಿಂಬಿಯಾನ್ ಫೌಂಡೇಷನ್ ಜೂನ್ 2008ರಲ್ಲಿ ಘೋಷಿತವಾಯಿತು ಮತ್ತು 2009ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅದರ ಉದ್ದೇಶವು ಇಡೀ ಸಿಂಬಿಯಾನ್ ಪ್ಲ್ಯಾಟ್ ಫಾರ್ಮ್ ಗೆ OSI- ಮತ್ತು FSF-ಮನ್ನಣೆ ಪಡೆದ ಎಕ್ಲಿಪ್ಸ್ ಸಾರ್ವಜನಿಕ ಪರವಾನಗಿಯ (EPL)ಅಡಿಯಲ್ಲಿ ಮೂಲವನ್ನು ಪ್ರಕಟಿಸುವುದಾಗಿತ್ತು. ಸಿಂಬಿಯಾನ್ ಪ್ಲ್ಯಾಟ್ ಫಾರ್ಮ್ ಬಿಡುಗಡೆಯಾದನಂತರ ಸಿಂಬಿಯಾನ್ ಓಎಸ್ ಅಮೋಘ ಉತ್ಪಾದನೆ ಎನ್ನುವುದಕ್ಕೆ ತೆರೆ ಬಿದ್ದಿತು.

ಸಿಂಬಿಯಾನ್ ಓಎಸ್ ಅನ್ನು ಬಳಸುವ ಉಪಕರಣಗಳು

[ಬದಲಾಯಿಸಿ]

ನವೆಂಬರ್ 16, 2006ರಂದು, ಜಗದ 100ಮಿಲಿಯನ್ ಸಂಖ್ಯೆಯ, ಓಎಸ್ ಚಲಾಯಿಸುವ ಸ್ಮಾರ್ಟ್ ಫೋನ್ ಸರಬರಾಜಾಯಿತು.[೧೦]

  • ಎರಿಕ್ಸನ್ R380, ಸಿಂಬಿಯನ್ ಓಎಸ್ ಆಧಾರಿತವಾದ ಮಾರುಕಟ್ಟೆಯಲ್ಲಿ ಸಿಗುವಂತಹ ಮೊದಲ ಫೋನ್ ಆಗಿ 2000ದಲ್ಲಿ ಹೊರಬಂದಿತು. ಆಧುನಿಕ "FOMA" ಫೋನ್ ಗಳಂತೆಯೇ, ಈ ಉಪಕರಣದ ಉತ್ಪಾದನೆಯೂ ನಿಂತುಹೋಯಿತು ಮತ್ತು ಗ್ರಾಹಕನು ಹೊಸ C++ ಅನ್ವಯಿಕಗಳನ್ನು ಇದಕ್ಕೆ ಅಳವಡಿಸಲಾಗಲಿಲ್ಲ. ಆದರೆ, ಅವುಗಳಂತಲ್ಲದೆ, R380 ಜಾವಾ ಅನ್ವಯಿಕಗಳನ್ನೂ ಚಲಾಯಿಸಲಾಗಲಿಲ್ಲ ಮತ್ತು ಈ ಕಾರಣದಿಂದ ಕೆಲವರು ಅದನ್ನು ನಿಜಕ್ಕೂ 'ಸ್ಮಾರ್ಟ್ ಫೋನ್' ಎಂದು ಕರೆಯಬಹುದೇ ಎಂದು ಪ್ರಶ್ನಿಸಿದ್ದಾರೆ.
  • UIQ ಪರಸ್ಪರಸಂಪರ್ಕಗಳನ್ನು ಸೋನಿ ಎರಿಕ್ಸನ್ P800, P900, W950 ಮತ್ತು RIZR Z8 ಹಾಗೂ RIZR Z10 ನಂತಹ PDAಗಳಿಗೆ ಬಳಸಲಾಯಿತು .
  • ನೋಕಿಯಾ S60 ಪರಸ್ಪರಸಂಪರ್ಕವನ್ನು ಹಲವಾರು ಫೋನ್ ಗಳಲ್ಲಿ ಬಳಸಲಾಗುತ್ತದೆ, ಅದರಲ್ಲಿ ಮೊದಲನೆಯದು ನೋಕಿಯಾ 7650.
ನೋಕಿಯಾ N-ಗೇಜ್ ಮತ್ತು ನೋಕಿಯಾ N-ಗೇಜ್ QD

ಗೇಮಿಂಗ್/ಸ್ಮಾರ್ಟ್ ಫೋನ್ ಜೋಡಿಗಳೂ ಸಹ S60 ಪ್ಲಾಟ್ ಫಾರ್ಮ್ ಉಪಕರಣಗಳು.

ಇದನ್ನು ಬೇಗೆ ತಯಾರಕರ ಫೋನ್ ಗಳಾದ ಸೀಮನ್ಸ್ SX1 ಮತ್ತು ಸ್ಯಾಂಸಂಗ್ SGH-Z600 ಗಳಲ್ಲೂ ಬಳಸಲಾಗಿತ್ತು ಇತ್ತೀಚೆಗೆ ಹೆಚ್ಚು ಮುಂದುವರಿದ S60 ಬಳಸುವ ಉಪಕರಣಗಳಲ್ಲಿ ಹಲವೆಂದರೆ ನೋಕಿಯಾ 6xxx, Nಸೀರೀಸ್, Eಸೀರೀಸ್ ಮತ್ತು ಕೆಲವು ನೋಕಿಯಾ Xಪ್ರೆಸ್ ಮ್ಯೂಸಿಕ್ ನ ಕೆಲವು ಮಾದರಿ ಮೊಬೈಲ್ ಗಳು.
  • ನೋಕಿಯಾ 9210, 9300 ಮತ್ತು 9500 ಕಮ್ಯೂನಿಕೇಟರ್ ಸ್ಮಾರ್ಟ್ ಫೋನ್ ಗಳು ನೋಕಿಯಾ ಸೀರೀಸ್ 80ರ ಸಂಪರ್ಕಸಾಧನವನ್ನು ಬಳಸಿದವು.
  • ನೋಕಿಯಾ ಸೀರೀಸ್ 90 ಸಂಪರ್ಕಸಾಧನವನ್ನು ಬಳಸುತ್ತಿರುವ ಏಕೈಕ ಉಪಕರಣವೆಂದರೆ ನೋಕಿಯಾ 7710.
  • ಫ್ಯುಜಿತ್ಸು, ಮಿತ್ಸುಬಿಷಿ, ಸೋನಿ ಎರಿಕ್ಸನ್ ಮತ್ತು ಷಾರ್ಪ್ ಜಪಾನ್ ನಲ್ಲಿ NTT ಡೊಕೋಮೋ ಗಾಗಿ ಫೋನ್ ಗಳನ್ನು ತಯಾರಿಸಿದರು; ಇದಕ್ಕಾಗಿ ಡೊಕೋಮೋಗೆಂದೇ ನಿರ್ದಿಷ್ಟವಾಗಿ ಅಭಿವೃದ್ಧಿಗೊಳಿಸಿದ ಸಂಪರ್ಕಸಾಧನವಾದ FOMA "ಫ್ರೀಡಂ ಆಫ್ ಮೊಬೈಲ್ ಆಕ್ಸೆಸ್" ನೆಟ್ ವರ್ಕ್ ಲಾಂಛನವನ್ನು ಬಳಸಿದರು. ಈ UI ಪ್ಲ್ಯಾಟ್ ಫಾರ್ಮ್ ಅನ್ನು MOAP "ಮೊಬೈಲ್ ಓರಿಯೆಂಟೆಡ್ ಅಪ್ಲಿಕೇಷನ್ಸ್ ಪ್ಲ್ಯಾಟ್ ಫಾರ್ಮ್" ಎಂದು ಕರೆಯಲಾಗುತ್ತದೆ ಹಾಗೂ ಇದು ಮೊದಲಿನ ಫ್ಯುಜಿತ್ಸಲು FOMA ಮಾದರಿಗಳ UIಗಳ ಮೇಲೆ ಆಧಾರಿತವಾಗಿದೆ.

ಜುಲೈ 21, 2009ರವರೆಗೆ, 250 ಮಿಲಿಯನ್ ಗಿಂತಲೂ ಹೆಚ್ಚು ಸಿಂಬಿಯಾನ್ ಓಎಸ್ ಚಾಲಿತ ಉಪಕರಣಗಳು ರವಾನೆಯಾಗಿವೆ.[೧೧]

ಭದ್ರತೆ

[ಬದಲಾಯಿಸಿ]

ಮಾಲ್‌ವೇರ್‌

[ಬದಲಾಯಿಸಿ]

ಸಿಂಬಿಯನ್ ಓಎಸ್ ಹಲವಾರು ವೈರಸ್ ಗಳ ಧಾಳಿಗೆ ಈಡಾಗುತ್ತಿತ್ತು, ಪ್ರಮುಖವಾಗಿ ಕಾಬಿರ್ ಎಂಬ ವೈರಸ್ ಗೆ. ಸಾಮಾನ್ಯವಾಗಿ ಈ ವೈರಸ್ ಗಳು ತಾವಾಗಿಯೇ ಬ್ಲೂಟೂತ್ ಮೂಲಕ ಫೋನ್ ನಿಂದ ಫೋನ್ ಗೆ ರವಾನೆಯಾಗುತ್ತವೆ. ಇಲ್ಲಿಯವರೆಗೂ ಯಾವುವೂ ಸಿಂಬಿಯಾನ್ ಓಎಸ್ ನಲ್ಲಿರುವ ದೋಷಗಳ ದುರುಪಯೋಗ ಪಡೆದಿಲ್ಲ - ಬದಲಿಗೆ ಅವೆಲ್ಲವೂ ಗ್ರಾಹಕರನ್ನು ಅವರು ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಬಯಸುವರೇ ಎಂದು ಕೇಳಿವೆ ಮತ್ತು ಹಾಗೆ ಕೇಳುವಾಗ ಇವು ನಂಬಲರ್ಹವಲ್ಲವೆಂಬ ಪ್ರಮುಖವಾದ ಎಚ್ಚರಿಕೆಗಳನ್ನೂ ನೀಡಿವೆ

ಆದರೆ, ಸಾಮಾನ್ಯ ಮೊಬೈಲ್ ಫೋನ್ ಬಳಕೆದಾರನು ರಕ್ಷಣೆಯ ಬಗ್ಗೆ ಚಿಂತಿತನಾಗಬಾರದೆಂಬ ದೃಷ್ಟಿಯಿಂದ ಸಿಂಬಿಯಾನ್ ಓಎಸ್ 9.ಎಕ್ಸ್ UNIX-ಮಾದರಿಯ ಕೇಪೆಬಲಿಟಿ ವಿನ್ಯಾಸವನ್ನು ಅಳವಡಿಸಿತು(ಕಾರ್ಯರೀತಿಗೆ ಇಷ್ಟೆಂದು ಅನುಮತಿ, ವಸ್ತುವಿಗೆ ಇಂತಿಷ್ಟೆಂದಲ್ಲ) ಅಳವಡಿಸಲ್ಪಟ್ಟ ತಂತ್ರಾಂಶವು, ಡಿಜಿಟಲ್ ಮಾದರಿಯಲ್ಲಿ ಸಹಿ ಹಾಕದಿದ್ದಲ್ಲಿ, ಸೈದ್ಧಾಂತಿಕವಾಗಿ ಯಾವುದೇ ಹಾನಿಯನ್ನು ಮಾಡುವುದು ಸಾಧ್ಯವಿಲ್ಲ(ಜಾಲದಲ್ಲಿರುವ ಮಾಹಿತಿಯನ್ನು ಬಿಟ್ಟುಕೊಡುವ ಮೂಲಕ ಗ್ರಾಹಕನ ಹಣ ಮಾಯವಾಗುವ ಮಾದರಿಯದ್ದು)- ಹೀಗಾಗಿ ಅದನ್ನು ಪತ್ತೆ ಹಚ್ಚುವುದು ಸುಲಭ. ವೆಚ್ಚವನ್ನು ಭರಿಸಲು ಸಾಮರ್ಥ್ಯವಿರುವ ವಾಣಿಜ್ಯಪರ ಅಭಿವೃದ್ಧಿಕಾರರು ತಮ್ಮ ತಂತ್ರಾಂಶಗಳನ್ನು ಸಿಂಬಿಯನ್ ಸೈಂಡ್ Archived 2012-03-24 at the National and University Library of Iceland ಕ್ರಮವಿಧಿಯ ಮೂಲಕ ರುಜು ಮಾಡಿಸಬಹುದು. ಅಭಿವೃದ್ಧಿಕಾರರು ಬಯಸಿದಲ್ಲಿ ತಮ್ಮ ಕ್ರಮವಿಧಿಗಳಿಗೆ ಸ್ವಯಂ-ರುಜುವನ್ನೂ ಮಾಡಬಹುದು. ಆದರೆ ಲಭ್ಯವಾಗಿರುವ ಗುಣಲಕ್ಷಣಗಳಲ್ಲಿ ಬ್ಲೂಟೂತ್ ಗೆ ಪಥ, ಐಆರ್ ಡಿಎ, ಜಿಎಸ್ಎಮ್, ಸೆಲ್ಐಡಿ, ವಾಯ್ಸ್ ಕರೆಗಳು, ಜಿಪಿಎಸ್ ಮತ್ತು ಇತರ ಕೆಲವು ಸೌಲಭ್ಯಗಳಿರುವುದಿಲ್ಲ. ಕೆಲವು ಕಾರ್ಯಕರ್ತರು ಸಿಂಬಿಯನ್ ರುಜುಮಾಡಿದ ಅರ್ಹತಾಪತ್ರಗಳ ಹೊರತು ಇನ್ನೆಲ್ಲವನ್ನೂ ನಿಷ್ಕ್ರಿಯಗೊಳಿಸುವ ನಿಶ್ಚಯ ಕೈಗೊಂಡಿದ್ದಾರೆ.

ಇತರ ಕೆಲವು ವಿನಾಶಕರ ಕ್ರಮವಿಧಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ, ಆದರೆ ಅವೆಲ್ಲವೂ ಗ್ರಾಹಕನು ಅಳವಡಿಸಿದಾಗಲೇ ಚಟುವಟಿಕೆಗೊಳ್ಳಲು ಸಾಧ್ಯ.

  • ಡ್ರೆವರ್.A ಒಂದು ದುಷ್ಟ SIS ಕಡತ ಟ್ರೋಜಾನ್ ಆಗಿದ್ದು, ಅದು ಸಿಮ್ ವರ್ಕ್ ಗಳು ಮತ್ತು ಕ್ಯಾಸ್ಪೆರ್ಸ್ಕಿ ಸಿಂಬಿಯಾನ್ ವೈರಸ್-ವಿರೋಧಿ ಅನ್ವಯಿಕಗಳು ಸ್ವಯಂ ಚಾಲಿತ ಆರಂಭವನ್ನು ಮಾಡದಿರುವಂತೆ ತಡೆಗಟ್ಟಲು ಯತ್ನಿಸುತ್ತವೆ.
  • ಲಾಕ್ ನಟ್.B ಒಂದು ದುಷ್ಟ SIS ಕಡತ ಟ್ರೋಜಾನ್ ಆಗಿದ್ದು, ಮೊಬೈಲ್ ಫೋನ್ ಗಳಿಗೆ ಸಿಂಬಿಯಾನ್ S60ಯ ಪಟ್ಟಿಯೇಂಬ ರೀತಿಯಲ್ಲಿ ನಾಟಕವಾಡುತ್ತದೆ. ಸ್ಥಾಪಿತವಾದಾಗ, ಅದು ದ್ವಿಗುಣವೊಂದನ್ನು ಹಾಕುತ್ತದೆ, ಅದರಿಂದ ಪ್ರಮುಖ ವ್ಯವಸ್ಥಾ ಭಾಗಗಳು ನಾಶವಾಗುತ್ತವೆ. ಇದರಿಂದ ಫೋನ್ ನಲ್ಲಿ ಯಾವುದೇ ಅನ್ವಯಿಕವನ್ನು ಅಳವಡಿಸುವುದಕ್ಕೆ ಪ್ರತಿರೋಧವುಂಟಾಗುತ್ತದೆ.
  • ಮಾಬಿರ್.A ಮೂಲತಃ ಕಾಬಿರ್ ಆಗಿದ್ದು MMS ಕಾರ್ಯಭಾರತ್ವವು ಸಹ ಸೇರಿಸಲ್ಪಟ್ಟಿದೆ. ಈ ಎರಡನ್ನೂ ಒಬ್ಬರೇ ಲೇಖಕರು ಬರೆದಿರುವುದು ಮತ್ತು ಸಂಕೇತವು ಅನೇಕ ಹೋಲಿಕೆಗಳನ್ನು ಹಂಚಿಕೊಂಡಿದೆ. ಇದು ಕಾಬಿರ್ ನ ಮೊದಮೊದಲ ವಿವಿಧ ಮಾದರಿಗಳ ರೀತಿಯೇ, ಅದೇ ಮಾರ್ಗದಲ್ಲಿ, ಬ್ಲೂಟೂತ್ ಬಳಸಿ ಹರಡುತ್ತದೆ ಮಾಬಿರ್ ನ ಹಾಗೆ. A ಮೊದಲ ಫೋನ್ ದೊರೆತ ತಕ್ಷಣ ತನ್ನ ನಕಲುಗಳನ್ನೇ ಅದಕ್ಕೆ ಕಳುಹಿಸಲು ಆರಂಭಿಸುತ್ತದೆ.
  • ಫಾಂಟಲ್.ಒಂದು SIS ಕಡತ ಟ್ರೋಜಾನ್ ಆಗಿದ್ದು ಇದು ಫೋನ್ ಸ್ವಯಂಚಾಲತವಾಗದಂತಾಗಿಸುವ ಒಂದು ಕೆಟ್ಟಿರುವ ಕಡತವನ್ನು ಸ್ಥಾಪಿಸುತ್ತದೆ. ಬಳಕೆದಾರನು ಈ ವೈರಸ್ ಗ್ರಸ್ತ ಫೋನನ್ನು ರೀಬೂಟ್ ಮಾಡಲು ಯತ್ನಿಸಿದರೆ, ಅದು ಖಾಯಮ್ಮಾಗಿ ರೀಬೂಟ್ ಗೆ ಅಂಟಿಕೊಳ್ಳುತ್ತದೆ ಮತ್ತು ನಿರೋಗಗೊಳಿಸುವವರೆಗೆ ಫೋನ್ ಉಪಯೋಗಿಸಲಾಗದು- ಎಂದರೆ ಪುನಾರಚನೆಯ ಕೀಲಿಯ ಜೊತೆಯನ್ನು ಬಳಸಬೇಕಾಗುತ್ತದೆ, ಹಾಗಾದಾಗ ಫೋನ್ ನಲ್ಲಿರುವ ಎಲ್ಲಾ ಮಾಹಿತಿಗಳು ಹಾಳಾಗುತ್ತವೆ. ಟ್ರೋಜಾನ್ ಆದುದರಿಂದ, ಫಾಂಟಲ್ ತನಗೆ ತಾನೇ ಹರಡಲಾಗದು - ನಂಬಲರ್ಹವಲ್ಲಿ ಮೂಲಗಳಿಂದ ಪಡೆದ ಗ್ರಸ್ತ ಕಡತಗಳನ್ನು ಫೋನ್ ಗೆ, ತಿಳಿದೋ, ತಿಳಿಯದೆಯೋ, ಸ್ಥಾಪಿಸುವುದರ ಮೂಲಕ ಇದು ಒಳಸೇರಬಹುದು.

ಹ್ಯಾಕಿಂಗ್ ಸಿಂಬಿಯಾನ್

[ಬದಲಾಯಿಸಿ]

S60 v3 ಮತ್ತು v5 (OS 9.x) ಉಪಕರಣಗಳನ್ನು ಹ್ಯಾಕ್ (ಬಗೆದೊಗೆದು) ಮಾಡಿ ಓಎಸ್ ೯.1ರಿಂದ ನಂತರದವುಗಳಲ್ಲಿನ ಪ್ಲ್ಯಾಟ್ ಫಾರ್ಮ್ ಭದ್ರತೆಯನ್ನು ತೆಗೆದುಬಿಡಬಹುದಾಗಿದ್ದು, ಈ ಮೂಲಕ ಗ್ರಾಹಕರು "ರುಜುರಹಿತ" ಕಡತಗಳನ್ನು(ಸಿಂಬಿಯಾನ್ ನಿಂದ ಅರ್ಹತಾಪತ್ರವನ್ನು ಹೊಂದಿರದ ಕಡತಗಳು)ಸ್ಥಾಪಿಸಿಕೊಳ್ಳಲು ಮತ್ತು ಹಿಂದೆ ಬೀಗಜಡಿದಂತಹ ವ್ಯವಸ್ಥೆಯ ಕಡತಗಳಿಗೆ ಪಥವನ್ನು ಹೊಂಲು ಅನುವು ದೊರೆಯುತ್ತದೆ.[೧೨] ಇದರಿಂದ ಕಾರ್ಯನಿರತ ವ್ಯವಸ್ಥೆಗಳ ವೈಖರಿ ಬದಲಾಗಲು ಅನುವಾಗುತ್ತದೆ, ಗುಪ್ತವಾದ ಕಡತಗಳು ಗೋಚರವಾಗುತ್ತವೆ ಮತ್ತು ಕಾರ್ಯವೆಸಗುವ ವ್ಯವಸ್ಥೆಯು ಈಗ ಬಹಿರಂಗಗಗೊಳಿಸಲ್ಪಟ್ಟಿರುವುದರಿಂದ ಮೊಬೈಲ್ ವೈರಸ್ ಗಳು ಆಕ್ರಮಣ ಮಾಡಬಹದೆಂಬ ಭೀತಿ ಹೆಚ್ಚುತ್ತದೆ.[೧೩]

ಸಿಂಬಿಯಾನ್ ಓಎಸ್ ಮೇಲಿನ ಅಭಿವೃದ್ಧಿ

[ಬದಲಾಯಿಸಿ]

C++ ಸೂಕ್ತವಾದ ಅಳವಡಿಕಯಲ್ಲವಾದರೂ, ಅದೇ ಸಿಂಬಿಯಾನ್‌ನ ಮೂಲ ಭಾಷೆಯಾಗಿದೆ. ಸಿಂಬಿಯಾನ್ ಓಎಸ್ ಉಪಕರಣಗಳನ್ನು ಉದ್ದೇಶವಾಗಿರಿಸಿಕೊಂಡ ಅನ್ವಯಿಕ ವೃದ್ಧಿಕಾರರಿಗೆ SDKಗಳನ್ನು ಒದಗಿಸುವಂತಹ ಹಲವಾರು ಸಿಂಬಿಯಾನ್ ಓಎಸ್ ಆಧಾರಿತ ಪ್ಲ್ಯಾಟ್ ಫಾರ್ಮ್ ಗಳು ಇದ್ದವು. ವೈಯಕ್ತಿಕ ಫೋನ್ ಉತ್ಪಾದನೆಗಳು ಅಥವಾ ಕುಟುಂಬದ್ದು, ಸಾಮಾನ್ಯವಾಗಿ ತಯಾರಕರ ಜಾಲತಾಣದಿಂದ ಇಳಿಸಿಕೊಳ್ಳಬಹುದಾದ SDKಗಳನ್ನು ಅಥವಾ SDK ವಿಸ್ತರಣೆಗಳನ್ನು ಹೊಂದಿರುತ್ತಿದ್ದವು. ಹಲವಾರು UI ಪ್ಲ್ಯಾಟ್ ಫಾರ್ಮ್ ಗಳು ಈಗ ಸಿಂಬಿಯಾನ್ ಪ್ಲ್ಯಾಟ್ ಫಾರ್ಮ್ ನಲ್ಲಿಯೇ ಒಟ್ಟುಗೂಡಿರುವುದರಿಂದ 2010ರ ನಂತರದ ತಯಾರಕರ SDKಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ.

SDKಗಳು ಸಿಂಬಿಯಾನ್ ಓಎಸ್ ತಂತ್ರಾಂಶವನ್ನು ರಚಿಸಲು ಬೇಕಾದ ದಾಖಲಾತಿ, ಹೆಡರ್(ತಲೆಬರಹ) ಕಡತಗಳು ಮತ್ತು ಗ್ರಂಥಾಲಯ ಕಡತಗಳನ್ನು ಹಾಗೂ ಒಂದು ವಿಂಡೋಸ್-ಆಧಾರಿತ ಎಮ್ಯುಲೇಟರ್("WINS")ಗಳನ್ನು ಹೊಂದಿರುತ್ತವೆ. ಸಿಂಬಿಯಾನ್ ಓಎಸ್ ನ ಆವೃತ್ತಿ 8ರ ವರೆಗೂ, SDKಗಳು ಸಾಧನ ಬಳಸಿ ಕಾರ್ಯವೆಸಗಲು ಬೇಕಾದ ತಂತ್ರಾಂಶವಾದ GCC ಜೋಡಕ(ಒಂದು ಅಡ್ಡ-ಜೋಡಕ) ಗಳ ಒಂದು ಆವೃತ್ತಿಯನ್ನೂ ಹೊಂದಿರುತ್ತಿದ್ದವು .

ಸಿಂಬಿಯಾನ್ ಓಎಸ್ 9 ಮತ್ತು ಸಿಂಬಿಯಾನ್ ಪ್ಲ್ಯಾಟ್ ಫಾರ್ಮ್ ಗಳು ಹೊಸABI ಯನ್ನು ಬಳಸುತ್ತವೆ ಮತ್ತು ಅವಕ್ಕೆ ಬೇರೆ ಜೋಡಕಗಳು ಬೇಕಾಗುತ್ತವೆ – ಜೋಡಕಗಳ ಆಯ್ಕೆಯೇ ಲಭ್ಯವಿದ್ದು, ಜಿಸಿಸಿಯ ನೂತನ ಆವೃತ್ತಿಯೂ ಅದರಲ್ಲಿ ಸೇರಿದೆ(ಕೆಳಗೆ ಕೊಟ್ಟಿರುವ ಬಾಹ್ಯಕೊಂಡಿಗಳನ್ನು ನೋಡಿ).


ದುರದೃಷ್ಟವಶಾತ್, ಸಿಂಬಿಯಾನ್ C++ ಕ್ರಮವಿಧಿಯು ಬಹಳ ಕಡಿದಾದ ಕಲಿಕೆಯ ರೇಖೆಯನ್ನು ಹೊಂದಿದೆ, ಏಕೆಂದರೆ ಸಿಂಬಿಯಾನ್ ನಲ್ಲಿ ಡಿಸ್ಕ್ರಿಪ್ಟರ್ ಗಳು ಮತ್ತು ಕ್ಲೀನಪ್ ಸ್ಟ್ಯಾಕ್ ಗಳಂತಹ ವಿಶೇಷ ತಂತ್ರಗಳನ್ನು ಬಳಸಬೇಕಾಗುತ್ತದೆ. ಹೀಗಾಗಿ ಇತರ ಪರಿಸರಗಳಲ್ಲಿ ಸುಲಭವಾಗಿ ಸ್ಥಾಪಿಸಬಹುದಾದ ಸರಳ ಕ್ರಮವಿಧಿಗಳೂ ಇಲ್ಲಿ ಕ್ಲಿಷ್ಟವಾಗುತ್ತವೆ. ಅಲ್ಲದೆ, ಸ್ಮೃತಿ ವ್ಯವಸ್ಥಾಪನಾ ಕ್ರಿಯಾಮಾಲೆಯಂತಹ ಕೆಲವು ತಾಂತ್ರಿಕತೆಗಳು ನಿಜಕ್ಕೂ ಅವಶ್ಯವೇ ಎಂಬ ಪ್ರಶ್ನೆಯೂ ಏಳುತ್ತದೆ. ಕ್ರಮವಿಧಿಕಾರರು ಅನ್ವಯಿಕ-ಅನುಗಣವಾದ ಲಕ್ಷಣಗಳ ಬಗ್ಗೆ ಕೆಳ-ಮಟ್ಟದ ಮಾಮೂಲಿ ಕ್ರಿಯೆಗಳ ಬಗ್ಗೆಯೇ ಹೆಚ್ಚು ಗಮನವಿರಿಸಬೇಕಾದುದರಿಂದ, 1990ರ ಹೆಚ್ಚಿನ ತೊಡರುಗಳಿದ್ದ ಮೊಬೈಲ್ ಯಂತ್ರಾಂಶಕ್ಕೆ ಬಳಸಿದ ವಿಧಾನಗಳು ಈಗ ಅನಗತ್ಯ ಸಂಕೀರ್ಣತೆಗಳನ್ನು ಮೂಲ ಸಂಕೇತದಲ್ಲಿ ಉಂಟುಮಾಡುತ್ತಿರುವ ಸಾಧ್ಯತೆಯೂ ಇದೆ. ಆದರೆ ಹೆಚ್ಚು ಉನ್ನತ ಮಟ್ಟದ ಮತ್ತು ಆಧುನಿಕ ಕ್ರಮವಿಧಿಗಳ ಕ್ರಿಯಾಮಾಲೆಯತ್ತ ಸಾಗುವುದು ಕಷ್ಟವೆನಿಸುತ್ತದೆ.[೧೪]

ಸಿಂಬಿಯಾನ್ C++ ಕ್ರಮವಿಧಿಗಳನ್ನು ಸಾಮಾನ್ಯವಾಗಿ IDEಯಿಂದ ನೆರವೇರಿಸಲಾಗುತ್ತದೆ. ಸಿಂಬಿಯಾನ್ ಓಎಸ್ ನ ಹಿಂದಿನ ಆವೃತ್ತಿಗಳಿಗೆ, ಸಿಂಬಿಯಾನ್ನ್ ಓಎಸ್ ಗೆಂದೇ ವಾಣಿಜ್ಯಪರ IDE ಆದ ಕೋಡ್ ವಾರಿಯರ್ ಅನ್ನು ಆರಿಸಲಾಯಿತು. 2006ರಲ್ಲಿ ಎಕ್ಲಿಪ್ಸ್-ಆಧಾರಿತ ನೋಕಿಯಾದಿಂದ ಅಭಿವೃದ್ಧಿಗೊಂಡ ಕಾರ್ಬೈಡ್.c++ ಕೋಡ್ ವಾರಿಯರ್ ಸಲಕರಣೆಗಳನ್ನು ಸ್ಥಾನವನ್ನಲಂಕರಿಸಿತು. ಕಾರ್ಬೈಡ್.c++ ನಾಲ್ಕು ಆವೃತ್ತಿಗಳಲ್ಲಿ ಲಭ್ಯವಿದೆ: ಎಕ್ಸ್ ಪ್ರೆಸ್, ಡೆವಲಪರ್, ಪ್ರೊಫೆಷನಲ್, ಮತ್ತು OEM, ಕ್ರಮವಾಗಿ ಸಾಮರ್ಥ್ಯದ ಮಟ್ಟವು ಹೆಚ್ಚಿನದಾಗಿದೆ. ಪುಕ್ಕಟೆಯಾದ ಎಕ್ಸ್ ಪ್ರೆಸ್ ಆವೃತ್ತಿಯನ್ನು ಬಳಸಿ ಸಮಗ್ರ ಲಕ್ಷಣಗಳುಳ್ಳ ತಂತ್ರಾಂಶವನ್ನು ಸೃಷ್ಟಿಸಿ, ಬಿಡುಗಡೆಮಾಡಬಹುದು. UI ವಿನ್ಯಾಸ, ಅಪ್ಪಳಿಸುವಿಕೆಯ ದೋಷಸೂಚಕ ಮುಂತಾದ ಲಕ್ಷಣಗಳು ಇತರ, ಹಣ ತೆರಬೇಕಾದ, ಆವೃತ್ತಿಗಳಲ್ಲಿ ಲಭ್ಯವಿದೆ. ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ 2003 ಮತ್ತು 2005 ಸಹ ಕಾರ್ಬೈಡ್.vs ಅಳವಡಿಕೆ ಸಾಧನದ ಮೂಲಕ ಬೆಂಬಲಿತವಾಗಿವೆ.

ಸಿಂಬಿಯಾನ್ ನ C++ನ ಅಭಿರುಚಿಯೇ ಬಹಳ ವಿಶಿಷ್ಟವಾದುದು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ ಸಿಂಬಿಯಾನ್ ಸಾಧನಗಳನ್ನು ಯೋಜಿಸಲು ಈ ಕೆಳಕಂಡವನ್ನೂ ಬಳಸಬಹುದು: ಪೈಥಾನ್, ಜಾವಾ ME, ಫ್ಲ್ಯಾಷ್ ಲೈಟ್, ರೂಬಿ, .ನೆಟ್, ವೆಬ್ ರನ್ ಟೈಂ (WRT) ವಿಡ್ಜೆಟ್ ಗಳು ಮತ್ತು ಸ್ಟ್ಯಾಂಡರ್ಡ್ C/C++.[೧೫].

ವಿಷುಯಲ್ ಬೇಸಿಕ್ ಕ್ರಮವಿಧಿಕಾರರು ಎನ್ಎಸ್ ಬೇಸಿಕ್ ಅನ್ನು ಬಳಸಿ S60 3ನೆಯ ಆವೃತ್ತಿ ಮತ್ತು UIQ 3 ಉಪಕರಣಗಳಿಗೆ ಅನ್ವಯಿಕಗಳನ್ನು ಅಭಿವೃದ್ಧಿಗೊಳಿಸಬಹುದು.

ಹಿಂದಿನ ದಿನಗಳಲ್ಲಿ ಸಿಂಬಿಯಾನ್ ಗಾಗಿ ವಿಷುಯಲ್ ಬೇಸಿಕ್, VB.NET, ಮತ್ತು C# ಅಭಿವೃದ್ಧಿಯನ್ನು AppForge ಕ್ರಾಸ್ ಫೈರ್ ಎಂಬ ಮೈಕ್ರೋಷಾಫ್ಟ್ ವಿಷುಯಲ್ ಸ್ಟುಡಿಯೋ ಅಳವಡಿಕೆ ಸಾಧನದ ಮೂಲಕ ನಡೆಯುತ್ತಿತ್ತು. ಮಾರ್ಚ್ 13, 2007ರಂದು AppForge ಸ್ಥಗಿತಗೊಂಡಿತು; ಒರಾಕಲ್ ಬೌದ್ಧಿಕ ಆಸ್ತಿಯನ್ನು ಖರೀದಿ ಮಾಡಿತು, ಆದರೆ ಹಿಂದಿನ AppForge ಉತ್ಪಾದನೆಗಳನ್ನು ಮಾರುವ ಅಥವಾ ಬೆಂಬಲಿಸುವ ಆಲೋಚನೆ ತಮಗಿಲ್ಲವೆಂದು ಘೋಷಿಸಿತು. ಸಿಂಬಿಯಾನ್ ಗೆಂದೇ ರೆಡ್ ಫೈವ್ ಲ್ಯಾಬ್ಸ್ ನವರು ಅಭಿವೃದ್ಧಿಗೊಳಿಸಿರುವ ನೆಟ್ 60 Archived 2010-01-05 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ .ನೆಟ್ ಸಂಕ್ಷೇಪ ಚೌಕಟ್ಟು ಮಾರುಕಟ್ಟೆಯಲ್ಲಿ ವಾಣಿಜ್ಯೋತ್ಪಾದನವಾಗಿ ಮಾರಲಾಗುತ್ತದೆ. ನೆಟ್60ರೊಂದಿಗೆ VB.NET ಮತ್ತು C# (ಇತ್ಯಾದಿ) ,ಮೂಲ ಸಂಕೇತಗಲನ್ನು ಒಟ್ಟಾಗಿಸಿ ಒಂದು ಮಧ್ಯಂತರ ಭಾಷೆ (IL)ಯಾಗಿಸಿ ಜಸ್ಟ್-ಇನ್-ಟೈಂ ಹೂಡುವ ಸಾಧನವನ್ನು ಬಳಸಿ ಸಿಂಬಿಯಾನ್ ಓಎಸ್ ನಲ್ಲಿ ಕಾರ್ಯಗತಗೊಳಿಸಲಾಗುತ್ತದೆ. (18/1/10ರಿಂದ ರೆಡ್ ಫೈವ್ ಲ್ಯಾಬ್ಸ್ ನೆಟ್60ರ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಮತ್ತು ಈ ಘೋಷಣೆಯನ್ನು ತನ್ನ ಲ್ಯಾಂಡಿಂಗ್ ಪೇಜ್ ನಲ್ಲಿಯೂ ಹಾಕಿದೆ: ಈ ಪರಿಸ್ಥಿತಿಯಲ್ಲಿ ನಾವು IP ಯನ್ನು ಮಾರಲು ಕೆಲವು ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ;ಹೀಗೆ ಮಾಡುವುದರಿಂದ ನೆಟ್60ಕ್ಕೆ ಒಂದು ಭವಿಷ್ಯವನ್ನು ಒದಗಿಸುವುದೇ ಈ ಉದ್ದೇಶಿತ ಮಾರಾಟದ ಗುರಿ.)


ಸಿಂಬಿಯಾನ್ ಓಎಸ್ ಗೆ ಬೋರ್ಲ್ಯಾಂಡ್ IDEಯ ಒಂದು ಆವೃತ್ತಿಯೂ ಇದೆ. ಪ್ರಮುಖ ಸಲಕರಣೆಗಳ ಮೂಲ ಸಂಕೇತಗಳನ್ನು ಸಿಂಬಿಯಾನ್ ಭಾಗಶಃ ಬಿಡುಗಡೆ ಮಾಡುವುದರ ಮೂಲಕ, ಸಿಂಬಿಯಾನ್ ಓಎಸ್ ಅನ್ನು ಲೈನಕ್ಸ್ ಮತ್ತು ಮ್ಯಾಕ್ ಓಎಸ್ Xಗಳ ಮೂಲಕ, ಆ ಪಂಗಡದ ಸಾಧನಗಳು ಮತ್ತು ವಿಧಾನಗಳನ್ನನುಸರಿಸಿ ಸಹ ಅಭಿವೃದ್ಧಿಗೊಳಿಸಬಹುದು. ಮ್ಯಾಕ್ ಓಎಸ್ Xಗಾಗಿ ಆಪಲ್ ನ Xಕೋಡ್ IDEಯೊಳೆಗೆ ಸಿಂಬಿಯಾನ್ ಓಎಸ್ ಅಬ್ವಯಿಕಗಳನ್ನು ಅಭಿವೃದ್ಧಿಗೊಳಿಸುವ ಅಳವಡಿಕೆ ಸಾಧನಗಳಿವೆ.[೧೬]

ಅಭಿವೃದ್ಧಿಗೊಳಿಸಿದನಂತರ, ಸಿಂಬಿಯಾನ್ ಅನ್ವಯಿಕೆಗಳು ಗ್ರಾಹಕನ ಮೊಬೈಲ್ ಫೋನ್ ಗಳನ್ನು ತಲುಪಲು ಒಂದು ಮಾರ್ಗವನ್ನು ಹುಡುಕಬೇಕು. ಅವು SIS ಕಡತಗಳಲ್ಲಿ ಬಂಧಿತವಾಗಿರುತ್ತವೆ ಹಾಗೂ ವಾಯು-ಮಾರ್ಗದಲ್ಲಿಯೇ, PC ಕನೆಕ್ಟ್, ಬ್ಲೂಟೂತ್ ಅಥವಾ ಸ್ಮೃತಿ ಕಾರ್ಡ್ ಮೂಲಕ ಸ್ಥಾಪಿಸಬಹುದಾಗಿದೆ. ಬದಲಾಗಿ ಒಂದು ಫೋನ್ ತಯಾರಕನೊಂದಿಗೆ ಪಾಲುದಾರನಾಗಿ ತಂತ್ರಾಂಶವನ್ನು ಫೋನ್ ನಲ್ಲಿಯೇ ಸೇರಿಸಿಕೊಳ್ಳಬಹುದು. SIS ಕಡತ ಮಾರ್ಗವು ಸಿಂಬಿಯಾನ್ 9.xಗೆ ಹೆಚ್ಚು ಕಷ್ಟ, ಏಕೆಂದರೆ ಕನಿಷ್ಠಕ್ಕಿಂತಲೂ ಯಾವುದೇ ಸಾಮರ್ಥ್ಯವನ್ನು ಹೊಂದಲಿಚ್ಛಿಸುವ ಯಾವುದೇ ಅನ್ವಯಿಕವನ್ನು ಸಿಂಬಿಯಾನ್ ರುಜುಗೊಂಡ Archived 2012-03-24 at the National and University Library of Iceland ಕ್ರಮವಿಧಿಯ ಮೂಲಕವೇ ರುಜುಗೊಳಿಸಿ ಸೇರಿಸಬೇಕು. ಆದರೆ ಹಲವಾರು ಹ್ಯಾಕ್ ಗಳು ಸಹಿಯಿರದ ಕ್ರಮವಿಧಿಗಳನ್ನು ಯಾವುದೇ ಸಾಮರ್ಥ್ಯದ ಸಹಿತ ಸಿಂಬಿಯಾನ್ ಓಎಸ್ 9.xನಲ್ಲಿ ಸ್ಥಾಪನೆಯಾಗಲು ಅನುವು ಮಾಡಿಕೊಡುತ್ತವೆ.

ಅನ್ವಯಿಕ ವೃದ್ಧಿಗಾರರು ಕೆಲವು ಆಕರ್ಷಕ ಸ್ಮಾರ್ಟ್ ಫೋನ್ ನ ಲಕ್ಷಣಗಳನ್ನು (ಪಾಮ್ ಓಎಸ್ ಮತ್ತು ವಿಂಡೋಸ್ ಮೊಬೈಲ್ ಗಳಂತಲ್ಲದೆ) ಬಳಸಲು ಹಣ ತೆರಬೇಕಾದಂತಹ ಸಿಂಬಿಯಾನ್ ರುಜುಗೊಂಡ Archived 2012-03-24 at the National and University Library of Iceland ವ್ಯವಸ್ಥೆಯು, ಹಣ ತೆರಬೇಕಾದ ಕಾರಣದಿಂದ, ಮುಕ್ತ ಮೂಲ ಕ್ರಮವಿಧಿಗಳು[೧೭], ಸ್ವತಂತ್ರ ಅಭಿವೃದ್ಧಿಕಾರರು ಮತ್ತು ಸಣ್ಣ ಆರಂಭಿಕಗಳ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವ ಪ್ಲ್ಯಾಟ್ ಫಾರ್ಮ್ ಆಗಿದೆ. ಗ್ರಾಹಕ ಸಂಪರ್ಕಸಾಧನ ವ್ಯವಸ್ಥೆಗಳ (UIQ vs S60 vs MOAP)[೧೮]ವಿಭಜನೆಯಿಂದ ಪರಿಸ್ಥಿತಿ ಮತ್ತು ಬಿಗಡಾಯಿಸಿದೆ,ಇದರಿಂದ ಮೂಲದಲ್ಲಿ ಸಿಂಬಿಯಾನ್ ಆವೃತ್ತಿಯನ್ನೇ ಹೊಂದಿರುವ ವಿವಿಧ ಉಪಕರಣಗಳನ್ನು ಗುರಿಯಾಗಿರಿಸಿಕೊಂಡ ಅಭಿವೃದ್ಧಿಕಾರರು ತಮ್ಮ ತಂತ್ರಾಂಶದ[೧೯] ವಿವಿಧ ಪರಸ್ಪರ ಹೊಂದಾಣಿಕೆಯಾಗದ ಆವೃತ್ತಿಗಳನ್ನು ರಚಿಸಿ, ನಿರ್ವಹಿಸುವ ಕಾರ್ಯವನ್ನು ಮಾಡಲೇಬೇಕಾಗುತ್ತದೆ.


ಸಿಂಬಿಯಾನ್ ಓಎಸ್ ಗೆ ಬೇಕಾದ ಜಾವಾ ME ಅನ್ವಯಿಕಗಳನ್ನು ಸನ್ ಜಾವಾ ವೈರ್ಲೆಸ್ ಟೂಲ್ ಕಿಟ್ (ಮೊದಲಿಗೆ ದ J2ME ವೈರ್ಲೆಸ್ ಟೂಲ್ ಕಿಟ್)ನಂತಹ ಉತ್ತಮ ಸಲಕರಣೆಗಳು ಮತ್ತು ವಿಧಾನಗಳನ್ನು ಬಳಸಿ ಅಭಿವೃದ್ಧಿಗೊಳಿಸಲಾಗುತ್ತದೆ. ಅವುಗಳನ್ನು JAR (ಮತ್ತು ಬಹುಶಃ JAD) ಕಡತಗಳಾಗಿ ಬಂಧಿಸಲಾಗುತ್ತವೆ. CLDC ಮತ್ತು CDC ಅನ್ವಯಿಕಗಳೆರಡನ್ನೂ can be ನೆಟ್ ಬೀನ್ಸ್ನಿಂದ ಸೃಷ್ಟಿಸಬಹುದು. ಇತರ ಉಪಕರಣಗಳ ಪೈಕಿ ಸಿಂಬಿಯಾನ್ 7.0 ಮತ್ತು 7.0sಗಳನ್ನು ಜಾವಾ ಉಪಯೋಗಿಸಿ ರಚಿಸಬಹುದಾದ ಸೂಪರ್ ವಾಬಾಸಹ ಒಂದು.

ಬ್ಲೂಟೂತ್ ಮತ್ತು ಇತರ ಅಂತಹ ಬೆಂಬಲಗಳಿಗೆ ಅನುವು ಮಾಡುವ ಗಿರಾಕೀಕರಣಗೊಳಿಸಿದೆ API ಜೊತೆಗೆಅನುವಾದಕ S60ಗೆ ಪೈಥಾನ್ ಅನ್ನು ಸ್ಥಾಪಿಸಿದಾಗ, ನೋಕಿಯಾ S60i ಫೋನ್ ಗಳು ಪೈಥಾನ್ ಲಿಪಿಯನ್ನೂ ಸಹ ಚಲಾಯಿಸಬಹುದು. ಅಲ್ಲದೆ ಗ್ರಾಹಕನು ನೇರವಾಗಿ ಫೋನ್ ನಿಂದಲೇ ಪೈಥಾನ್ ಲಿಪಿಯನ್ನು ಬರೆಯಲು ಒಂದು ಪರಸ್ಪರಕ್ರಿಯೆಯುಳ್ಳ ಕನ್ಸೋಲ್ ಸಹ ಇದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]
  1. Lextrait, Vincent (2010). "The Programming Languages Beacon, v10.0". Retrieved 5 January 2010. {{cite web}}: Unknown parameter |month= ignored (help)
  2. "symbian on intel's atom architecture". Archived from the original on 2009-04-19. Retrieved 2010-06-07.
  3. "ಆರ್ಕೈವ್ ನಕಲು". Archived from the original on 2010-04-10. Retrieved 2010-06-07.
  4. "ಆರ್ಕೈವ್ ನಕಲು". Archived from the original on 2012-09-23. Retrieved 2010-06-07.
  5. EKA2 ಪರಿಚಯಿಸುವಿಕೆ, ಜೇನ್ ಸಾಲೆಸ್ ಮತ್ತು ಮಾರ್ಟಿನ್ ಟ್ಯಾಸ್ಕರ್ ರಿಂದ
  6. ೬.೦ ೬.೧ "ಆರ್ಕೈವ್ ನಕಲು". Archived from the original on 2012-02-08. Retrieved 2010-06-07.
  7. "ಆರ್ಕೈವ್ ನಕಲು". Archived from the original on 2009-04-23. Retrieved 2010-06-07.
  8. ನೋಕಿಯಾ ನಿಧಾನ ಎಸ್ಎಂಎಸ್/ ಹ್ಯಾಂಗ್ ಸಮಸ್ಯೆಗೆ ಪರಿಹಾರ
  9. http://www.allaboutsymbian.com/news/item/5075_Symbian_OS_95_.php
  10. ಆರು ವರ್ಷಗಳಲ್ಲಿ ಸಿಂಬಿಯಾನ್ Produces 100 ಮಾದರಿಗಳು ಮತ್ತು 100 ಮಿಲಿಯನ್ ನೌಕಾಹೊರೆಯಷ್ಟನ್ನು ಉತ್ಪಾದಿಸಿದೆ Archived 2012-06-30 ವೇಬ್ಯಾಕ್ ಮೆಷಿನ್ ನಲ್ಲಿ., ಸ ಸ್ಮಾರ್ಟ್ ಪಿಡಿಎ.
  11. "ಸಿಂಬಿಯಾನ್ ಫೌಂಡೇಷನ್ ಹೊಸ ಸದಸ್ಯನನ್ನು ಸೇರಿಸಿಕೊಂಡಿದೆ, ನೂಯಾನ್ಸ್". Archived from the original on 2009-07-25. Retrieved 2010-06-07.
  12. "ನೋಕಿಯಾದ S60 3ನೆಯ ಆವೃತ್ತಿಯ ರಕ್ಷಣಾವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿದೆಯೆ? - ಸಿಂಬಿಯಾನ್ ಫ್ರೀಕ್". Archived from the original on 2010-12-13. Retrieved 2010-06-07.
  13. "ಸಿಂಬಿಯನ್ ಫ್ರೀಕ್: S60 v3 ಹ್ಯಾಕಿಂಗ್ – ಗುರಿ ಸಾಧಿಸಿದ್ದಾಯಿತು, ಎಫ್ ಪಿಐ ಹ್ಯಾಕ್ ಮಾಡಲ್ಪಟ್ಟಿತು!!". Archived from the original on 2010-12-10. Retrieved 2010-06-07.
  14. ಸಿಂಬಿಯಾನ್ ಓಎಸ್ ರಚನಾ ದೋಷಗಳು
  15. http://developer.symbian.org
  16. "ಟಾಮ್ ಸಟ್ ಕ್ಲಿಫ್ ಮತ್ತು ಜ್ಯಾಸನ್ ಬ್ಯಾರೀ ಮಾರ್ಲೇ Xಕೋಡ್ ಸಿಂಬಿಯಾನ್ ಬೆಂಬಲ". Archived from the original on 2010-02-12. Retrieved 2010-06-07.
  17. ಸಿಂಬಿಯಾನ್ ರುಜುಗೊಂಡದ್ದು ಏಕೆ ಸಾಯಲೇಬೇಕು
  18. "ಪ್ಲ್ಯಾಟ್ ಫಾರ್ಮ್ ಹೊಂದಿದ ಸಿಂಬಿಯಾನ್ ಫೋನ್ ಗಳ ಪಟ್ಟಿ". Archived from the original on 2008-11-12. Retrieved 2010-06-07.
  19. "ವಿಶೇಷ ಪ್ಲ್ಯಾಟ್ ಫಾರ್ಮ್ ಗಳಿಗಾಗಿ SDKಗಳ ಪಟ್ಟಿ". Archived from the original on 2009-02-11. Retrieved 2010-06-07.

20. www.symbianism.com

ಗ್ರಂಥಸೂಚಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Table Mobile operating systems