ಆಂಟೋನಿಯೊ ವಿವಾಲ್ಡಿ
ಗೋಚರ
ಆಂಟೋನಿಯೊ ಲೂಚಿಯೊ ವಿವಾಲ್ಡಿ (ಮಾರ್ಚ್ ೪ ೧೬೭೮ – ಜುಲೈ ೨೮ ೧೭೪೧) ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಬಾರೊಖ್ ಶೈಲಿಯ ಪ್ರಸಿದ್ದ ವಾಗ್ಗೇಯಕಾರ ಹಾಗು ಇಟಲಿಯ ಕ್ರೈಸ್ತ ಧರ್ಮ ಗುರು. ಇವರು ಪಿಯಾನೋ, ಚೇಂಬರ್ ಸಂಗೀತ, ಸಿಂಫೊನಿ ಸಂಗೀತ, ಧಾರ್ಮಿಕ ವೃಂದ ಗಾನ ಮತ್ತು ಆಪೇರಾ ಸಂಗೀತ ಶೈಲಿಗಳ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ಫೋರ್ ಸೀಜನ್ಸ್ (ಲೆ ಕ್ವಾತ್ರೊ ಸ್ಟಗಿನೋನಿ) ಕೃತಿ ಅಪಾರ ಜನಪ್ರಿಯತೆ ಕಂಡಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Antonio Vivaldi ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.