ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಟ್ಯಾಸಿಯಮ್

ವಿಕಿಸೋರ್ಸ್ದಿಂದ

ಪೊಟ್ಯಾಸಿಯಮ್ ರಾಸಾಯನಿಕಧಾತು. ಪ್ರತೀಕ K, ಪರಮಾಣು ಸಂಖ್ಯೆ 19 ಮತ್ತು ಪರಮಾಣು ತೂಕ 30.102. ವನಸ್ಪತಿಗಳ ಜ್ವಲನಾನಂತರ ದೊರೆಯುವ ಭಸ್ಮದಲ್ಲಿರುವ ಪೊಟ್ಯಾಶ್ (ಏ2ಅಔ3) ರೂಪದಲ್ಲಿ ಪೊಟ್ಯಾಸಿಯಮ್ ಮಾನವನಿಗೆ ಬಲು ಹಿಂದಿನಿಂದಲೂ ಪರಿಚಿತವಿದೆ. ಭೂಮಿಯಲ್ಲಿ ಹರಡಿಹೋಗಿರುವ ಧಾತುಗಳ ಪೈಕಿ ಬಾಹುಲ್ಯದಲ್ಲಿ ಪೊಟ್ಯಾಸಿಯಮ್ಮಿಗೆ ಏಳನೆಯ ಸ್ಥಾನ ಉಂಟು. ಇದರ ತೀಕ್ಷ್ಣ ರಾಸಾಯನಿಕ ತೀವ್ರತೆಯಿಂದಾಗಿ ಇದು ನಿಸರ್ಗದಲ್ಲಿ ಧಾತುರೂಪದಲ್ಲಲ್ಲದೆ ಸಂಯುಕ್ತ ರೂಪದಲ್ಲಿ ಮಾತ್ರ ದೊರೆಯುತ್ತದೆ. ಪೊಟ್ಯಾಸಿಯಮ್ಮಿನ ಅದುರು ಜರ್ಮನಿಯ ಸ್ಟ್ಯಾಸ್‍ಫರ್ಟ್ ಎಂಬಲ್ಲಿಯೂ ರಷ್ಯ, ಮೆಕ್ಸಿಕೋ ಇಂಗ್ಲೆಂಡ್ ಆಸ್ಟ್ರೇಲಿಯ ಸ್ಪೇನ್, ಚಿಲಿ, ಕೆನಡ, ಪೋಲಂಡ್ ಹಾಗೂ ಭಾರತ ದೇಶಗಳ ಅನೇಕ ಪ್ರದೇಶಗಳಲ್ಲಿಯೂ ಲಭ್ಯವಿದೆ.

ಅದುರಿನಿಂದ ಧಾತುವಿನ ಉದ್ಧøತಿ (ತಯಾರಿಕೆ): ಸರ್ ಹೆಂಫ್ರಿ ಡೇವಿ (1778-1829) ಎಂಬಾತ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ () ಎಂಬ ಪ್ರತ್ಯಾಮ್ಲವನ್ನು ಪ್ರವಾಹೀ ರೂಪದಲ್ಲಿ ವಿದ್ಯುದ್ವಿಶ್ಲೇಷಣೆಗೆ ಒಳಪಡಿಸಿ ಪೊಟ್ಯಾಸಿಯಮ್ ಧಾತುವನ್ನು ಮೊದಲ ಬಾರಿಗೆ ತಯಾರಿಸಿದ (1803). ಧಾತುವಿನ ಉದ್ಧøತಿಯ ಈ ವಿಧಾನದಲ್ಲಿ ಮುಂದೆ ಹಲವಾರು ಸುಧಾರಣೆಗಳಾಗಿ ಇತ್ತೀಚಿಗೆ ಪೊಟ್ಯಾಸಿಯಮ್ಮನ್ನು ಈ ಮುಂದಿನ ವಿಧಾನದಿಂದ ತೃಪ್ತಿಕರವಾಗಿ ಪಡೆಯಲಾಗುತ್ತಿದೆ.

ಪೊಟ್ಯಾಸಿಯಮ್ ಕ್ಲೋರೈಡ್ ಲವಣ ಏಅಟ ಪ್ರವಾಹೀ ರೂಪಧಾರಣೆ ಮಾಡುವಂತೆ ಅದಕ್ಕೆ ಉಷ್ಣ ಊಡಿ ಆ ಪ್ರವಾಹಿಯಲ್ಲಿ ಸೋಡಿಯಮ್ ಧಾತುವಿನ ಬಾಷ್ಪಗಳನ್ನು ಹಾಯಿಸುವುದರಿಂದ ಸೋಡಿಯಮ್ ಕ್ಲೋರೈಡ್ (ಓಚಿಅಟ) ತಯಾರಾಗಿ ಪೊಟ್ಯಾಸಿಯಮ್ ಧಾತುವಿನ ಬಾಷ್ಪಗಳು ಹೊರಬರುತ್ತವೆ. ಇದಕ್ಕೆ ವಿಶೇಷ ತಣ್ಪನ್ನು ಊಡಿದಾಗ ಇವು ಘನರೂಪ ತಳೆಯುತ್ತವೆ. ಈ ರೀತಿ ದೊರೆತ ಧಾತು ಸೇಕಡಾ 99.5 ರಷ್ಟು ಶುದ್ಧವಾಗಿರುತ್ತದೆ.

ಗುಣಧರ್ಮಗಳು: ಪೊಟ್ಯಾಸಿಯಮ್ ಬೆಳ್ಳಿಯಂತೆ ಶುಭ್ರವರ್ಣದ ಹಾಗೂ ಹೊಳಪುಳ್ಳ ಧಾತು. ಇದರ ಸಾಪೇಕ್ಷ ಸಾಂದ್ರತೆ 0.86. ಇದರ ದ್ರವನಬಿಂದು 63.70ಅ. ಕುದಿಬಿಂದು 1800ಅ ಅತಿ ಮೃದು. ಹೀಗಾಗಿ ಇದನ್ನು ಬೆರಳುಗಳಿಂದ ಒತ್ತಿ ಚಪ್ಪಟೆ ಮಾಡಬಹುದು. ಚೂರಿಯಿಂದ ಕತ್ತರಿಸಲೂಬಹುದು. ಇದಕ್ಕೆ ವಿಶೇಷ ರಾಸಾಯನಿಕ ತೀವ್ರತೆ ಉಂಟು. ರಾಸಾಯನಿಕ ಕ್ರಿಯೆಗಳಲ್ಲೆಲ್ಲ ಸೋಡಿಯಮ್ ಧಾತುವನ್ನು ಹೋಲುವುದಾದರೂ ಇದು ಸೋಡಿಯಮ್ಮಿಗಿಂತ ತೀವ್ರತರವಾಗಿದೆ. ವಾತಾವರಣಕ್ಕೆ ತೆರೆದಿಟ್ಟಾಗ ಇದರ ಮೇಲೆ ಪೊಟ್ಯಾಸಿಯಮ್ ಆಕ್ಸೈಡ್ ಪೊರೆ ಮೈದಳೆದು ಹೊಳಪು ಮಾಯವಾಗುತ್ತದೆ. ಸಾರಜನಕದೊಡನೆ ಮಾತ್ರ ವರ್ತಿಸದು. ಫ್ಲೋರೀನ್, ಕ್ಲೋರೀನ್, ಬ್ರೋಮೀನ್ ಹಾಗೂ ಅಯೊಡೀನುಗಳೊಂದಿಗೆ ವರ್ತಿಸಿದಾಗಲೆಲ್ಲ ಸ್ಫೋಟಗಳುಂಟಾಗುತ್ತವೆ - 2000ಅ ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಇದು ಹೈಡ್ರೊಜನ್ ಹಾಗೂ ಅಮೋನಿಯ ಅನಿಲಗಳೊಂದಿಗೆ ವರ್ತಿಸುತ್ತದೆ. ನೀರಿನೊಂದಿಗೆ ಪೊಟ್ಯಾಸಿಯಮ್ ವಿಶೇಷ ತೀವ್ರತೆಯಿಂದ ವರ್ತಿಸುತ್ತದೆ. ಈ ಕ್ರಿಯೆಯಿಂದ ಹೈಡ್ರೋಜನ್ ಅನಿಲವೂ ಅಧಿಕೋಷ್ಣತೆಯೂ ಉಂಟಾಗಿ ಹೈಡ್ರೋಜನ್ ಒಡನೆ ಉರಿಯತೊಡಗುತ್ತದೆ. ಜಲಮಿಶ್ರಿತ ಆಮ್ಲಗಳೊಡನೆ ಈ ಧಾತು ಇನ್ನೂ ಹೆಚ್ಚು ತೀವ್ರತೆಯಿಂದ ವರ್ತಿಸಿ ಆಯಾ ಲವಣಗಳನ್ನೂ ಜೊತೆಗೆ ಉಷ್ಣತೆಯನ್ನೂ ಉಂಟುಮಾಡುತ್ತದೆ. ಪೊಟ್ಯಾಸಿಯಮ್ಮಿಗೆ ಇಷ್ಟೊಂದು ವಿಶೇಷ ರಾಸಾಯನಿಕ ತೀವ್ರತೆ ಇದ್ದಾಗ್ಗೂ ಇದು ನಿರಾದ್ರ್ರ ಆಮ್ಲಜನಕದ ಜೊತೆಗೆ ವರ್ತಿಸುವುದಿಲ್ಲವೆಂಬುದು ವಿಸ್ಮಯಕರ ಸತ್ಯ. ಅಂತೆಯೇ ಉರಿಯುತ್ತಿರುವ ಪೊಟ್ಯಾಸಿಯಮ್ಮಿನಿಂದ ಜ್ವಾಲೆಗಳನ್ನು ನಂದಿಸಲು ರೂಕ್ಷ (ಜಲಾಂಶರಹಿತ) ಆಮ್ಲಜನಕವನ್ನು ಉಪಯೋಗಿಸುತ್ತಾರೆ.

ಪೊಟ್ಯಾಸಿಯಮ್ ಆದ್ರ್ರ ಹವೆಯಲ್ಲಿ ಉರಿದು ಪೊಟ್ಯಾಸಿಯಮ್ ಸೂಪರ್ ಆಕ್ಸೈಡ್ (ಏಔ2) ಎಂಬ ಕಿತ್ತಳೆಯ ವರ್ಣದ ಭಸ್ಮವನ್ನು ಕೊಡುತ್ತದೆ. ಇದು ನೀರಿನೊಂದಿಗೆ ವರ್ತಿಸಿದಾಗ ಹಲವಾರು ರಾಸಾಯನಿಕ ಕ್ರಿಯೆಗಳು ನಡೆದು ಕೊನೆಯ ಹಂತದಲ್ಲಿ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ದ್ರಾವಣವೂ ಆಮ್ಲಜನಕವೂ ಸಿದ್ಧವಾಗುತ್ತವೆ. ಭಸ್ಮವನ್ನು ನಿದ್ರ್ರವ್ಯತೆಯಲ್ಲಿ ಕಾಸಲು ಅದು ವಿಭಜನೆಗೊಂಡು ಪೊಟ್ಯಾಸಿಯಮ್ ಪೆರಾಕ್ಸೈಡ್ (ಏ2ಔ2) ಹಾಗೂ ಆಮ್ಲಜನಕ ತಯಾರಾಗುತ್ತವೆ. ಪೊಟ್ಯಾಸಿಯಮ್ಮನ್ನು ಸೋರುಪ್ಪಿನೊಂದಿಗೆ (ಏಓಔ3) ಕಾಸಲು ತಿಳಿಹಳದಿ ವರ್ಣದ ಪೊಟ್ಯಾಸಿಯಮ್ ಸಬ್ ಆಕ್ಸೈಡ್ (ಏ2ಔ) ತಯಾರಾಗುತ್ತದೆ. ಇಂಗಾಲದ ಮಾನಾಕ್ಸೈಡ್ ಹಾಗೂ ಡೈಆಕ್ಸೈಡುಗಳೊಂದಿಗೆ ವರ್ತಿಸಿದಾಗಲೆಲ್ಲ ಸ್ಫೋಟಗಳಾಗುತ್ತವೆ ಎಂದೇ ಪೊಟ್ಯಾಸಿಯಮ್ಮಿನ ಜ್ವಾಲೆಗಳನ್ನು ನಂದಿಸಲು ನೀರನ್ನಾಗಲಿ ಇಂಗಾಲ ಡೈ ಆಕ್ಸೈಡನ್ನಾಗಲಿ ಉಪಯೋಗಿಸುವುದು ನಿಷ್ಪ್ರಯೋಜಕ. ಬಟ್ಟೆ ಒಗೆಯಲು ಉಪಯೋಗಿಸುವ ಸೋಡಖಾರ (ಓಚಿ2ಅಔ3) ಮಾತ್ರ ಈ ಕಾರ್ಯ ಮಾಡಬಲ್ಲದು. ಪೊಟ್ಯಾಸಿಯಮ್ಮನ್ನು ಸದಾ ಕಲ್ಲೆಣ್ಣೆಯಂಥ ದ್ರವದಲ್ಲಿ ಮುಳುಗಿಸಿಟ್ಟು ಕಾಯ್ದಿರಿಸಬೇಕಾಗುತ್ತದೆ.

ಉಪಯೋಗಗಳು: ಪೊಟ್ಯಾಸಿಯಮ್ ಸೂಪರ್ ಆಕ್ಸೈಡ್ ತಯಾರಿಸುವಲ್ಲಿ ಪೊಟ್ಯಾಸಿಯಮ್ಮಿನ ವಿಶೇಷ ಉಪಯೋಗ ಉಂಟು. ಈ ಆಕ್ಸೈಡ್ ಶ್ವಾಸೋಚ್ಛ್ವಾಸ ಕ್ರಿಯೆಯಿಂದ ಹುಟ್ಟುವ ನೀರಿನ ಬಾಷ್ಪ ಹಾಗೂ ಇಂಗಾಲ ಡೈ ಆಕ್ಸೈಡುಗಳನ್ನು ಹೀರಿಕೊಂಡು ಆಮ್ಲಜನಕವನ್ನು ಹೊರಬಿಡುವುದರಿಂದ ಆಕಾಶ ಯಾನಕ್ಕಾಗಿ ಉಪಯೋಗಿಸುವ ನೌಕೆಗಳಲ್ಲಿ ಇದರ ಉಪಯೋಗವಿದೆ. ಪೊಟ್ಯಾಸಿಯಮ್ ಅದರ ಹಲವಾರು ಸಂಯುಕ್ತಗಳ ರೂಪದಲ್ಲಿ ಬಹಳ ಬಳಕೆಯಲ್ಲಿದೆ. ಇವುಗಳ ಪೈಕಿ ಮುಖ್ಯವಾದದ್ದು ಪೊಟ್ಯಾಶ್. ರಾಸಾಯನಿಕ ಗೊಬ್ಬರದ ಮಿಶ್ರಣ ಮಾಡುವಲ್ಲಿ ಪೊಟ್ಯಾಸಿಯಮ್ ಕ್ಲೋರೈಡಿನ ಉಪಯೋಗವಿದೆ. ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಸಾಬೂನು ತಯಾರಿಕೆಯಲ್ಲಿಯೂ ಪೊಟ್ಯಾಸಿಯಮ್ ನೈಟ್ರೇಟ್ ಸಿಡಿಮದ್ದು. ಮದ್ದು, ಬೆಂಕಿಪೆಟ್ಟಿಗೆ ಮುಂತಾದುವುಗಳ ತಯಾರಿಕೆಯಲ್ಲಿಯೂ ಬೇಕಾಗುತ್ತದೆ. (ಎಂ.ಆರ್.ಜಿ.ಎ.)