ಇಂಡೋ - ಆರ್ಯನ್ ಭಾಷೆಗಳು
ಈಗ ಭಾರತದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಮತ್ತು ಅದರಿಂದ ಹುಟ್ಟಿದ ಭಾಷೆಗಳು. ಜಗತ್ತಿನ ಭಾಷೆಯ ಗುಂಪುಗಳಲ್ಲಿ ಇದೂ ಒಂದು ಪ್ರಮುಖ ಗುಂಪು. ಆದರೆ ಇದು ಒಂದು ಸ್ವತಂತ್ರ ಘಟಕವಾಗಿರದೆ ಜಗತ್ತಿನ ಅತಿ ಮಹತ್ತ್ವದ ಇಂಡೋ-ಯೂರೋಪಿಯನ್ ಭಾಷಾವರ್ಗದ ಅತಿಮಹತ್ತ್ವದ ಶಾಖೆಯಾಗಿದೆ. (ನೋಡಿ- ಇಂಡೋ-ಯೂರೋಪಿಯನ್-ಭಾಷೆಗಳು) ಇಂಡೋ-ಯೂರೋಪಿಯನ್ ಶಾಖೆಯ (ಶತಮ್) ಗುಂಪಿಗೆ ಇವು ಸೇರಿವೆ. ಕೆಂಟುಮ್ ಇನ್ನೊಂದು ಗುಂಪು. ಇನ್ನು ಕೆಲವರ ಪ್ರಕಾರ ಇದಕ್ಕೂ ಹಿಂದಿನದು ಇಂಡೋಹೆಟ್ಟೈಟ್ ಶಾಖೆ. ವಿವಾದಾಸ್ಪದವಾದ ಈ ಇಂಡೋಹೆಟ್ಟೈಟ್ ಗುಂಪಿನ ಸ್ಥಾನದ ಉಲ್ಲೇಖವನ್ನು ಕಡೆಗಣಿಸಿ, ಇಂಡೋ-ಯೂರೋಪಿಯನ್ ಗುಂಪಿನಿಂದ ವಂಶವೃಕ್ಷವನ್ನು ಪ್ರಾರಂಭಿಸಿದರೆ ಅದರಲ್ಲಿ ಇಂಡೋ-ಇರಾನಿಯನ್, ಗ್ರೀಕ್, ಲ್ಯಾಟಿನ್ ಮುಂತಾದ ಶಾಖೆಗಳಾಗುತ್ತವೆ. ಆಮೇಲೆ ಈ ಇಂಡೋ-ಇರಾನಿಯನ್ ಶಾಖೆಯಲ್ಲಿ ಇರಾನಿಯನ್ ಮತ್ತು ಇಂಡೋ-ಆರ್ಯನ್ ಎಂಬ ಶಾಖೆಗಳೊಡೆಯುತ್ತವೆ. ಇಂಡೋ-ಇರಾನಿಯನ್ ಶಾಖೆ ಆರ್ಯರು ಇನ್ನೂ ಭಾರತವನ್ನು ಪ್ರವೇಶಿಸುವುದಕ್ಕಿಂತ ಮುಂಚಿನ ಘಟ್ಟ. ಇದು ಕ್ರಿ.ಪೂ. 2000 ವರ್ಷಗಳಷ್ಟು ಪೂರ್ವದಲ್ಲಿಯೇ ಮೆಸೊಪೊಟೇಮಿಯ ಪ್ರದೇಶದಲ್ಲಿ ಬಳಕೆಯಲ್ಲಿತ್ತು. ಇಲ್ಲಿ ಇಂದ್ರ, ಮಿತ್ರ, ವರುಣ, ಸೂರ್ಯ ಮುಂತಾದ ಮುಂದಿನ ಆರ್ಯದೇವತೆ0ಗಳು ಪ್ರಚಾರದಲ್ಲಿದ್ದುದು, ಈ ಮಾತಿಗೆ ಪುಷ್ಟಿಯನ್ನೊದಗಿಸುತ್ತವೆ. ಈ ಆರ್ಯರಲ್ಲಿಯ ಒಂದು ಗುಂಪು ಈಗಿನ ಇರಾನ್ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶದಲ್ಲಿ ನೆಲೆನಿಂತು ಇರಾನೀ ಶಾಖೆಗೆ ಕಾರಣವಾಯಿತು. ಇನ್ನೊಂದು ಗುಂಪು ಹಾಗೇ ಮುಂದುವರಿದು ಭಾರತವನ್ನು ಪ್ರವೇಶಿಸಿದ ಮೇಲೆ ಇಂಡೋ-ಆರ್ಯನ್ ಶಾಖೆ ಉಂಟಾಯಿತು. ಇಂಡೋ-ಆರ್ಯನ್ ಭಾಷೆಗಳ ಇತಿಹಾಸ ಪ್ರಾರಂಭವಾಗುವುದು ಆರ್ಯರು ಭಾರತದಲ್ಲಿ ಕಾಲಿಟ್ಟಿದಿನಿಂದ.[೧]
ಇಂಡೋ-ಇರಾನಿಯನ್ ಮತ್ತು ಇಂಡೋ-ಆರ್ಯನ್‍ಗಳಲ್ಲಿಯ ಭಿನ್ನತೆ
ಇಂಡೋ-ಇರಾನಿಯನ್ ಮತ್ತು ಇಂಡೋ-ಆರ್ಯನ್‍ಗಳಲ್ಲಿಯ ಭಿನ್ನತೆಯನ್ನು ಕುರಿತು ವಿವೇಚಿಸುವಾಗ ಧ್ವನಿಭಿನ್ನತೆಯನ್ನು ಉದಾಹರಣೆಯಾಗಿ ಗಮಿನಿಸಬಹದು.1 ಇಂಡೋ-ಇರಾನಿಯನ್ gzh, bzh ಮುಂತಾದ ಘೋಷಧ್ವನಿಗಳು ಇಂಡೋ-ಆರ್ಯನ್‍ನಲ್ಲಿ ಅಘೋಷಗಳಾಗಿವೆ (ದವ್ಹಾ-ದಿಪ್ಸಾ). 2 z ಎಲ್ಲ ಕಡೆಗೂ ಲೋಪವಾಗಿದೆ. (ಮಜ್ಜಾ-ಮೇಧಾ). 3 ಸ್ ಧ್ವನಿಮಾ ಹ ಆಗಿ ಮಾರ್ಪಡುತ್ತದೆ (ಅಹುರ್-ಅಸುರ). 4 ಜh ಮತ್ತು bhಗಳು h ಆಗುತ್ತವೆ (ಇಧ-ಇಹ).ಭಾರತದ ನೆಲದಲ್ಲಿ ಕಾಲಿಟ್ಟವರಲ್ಲಿ ಆರ್ಯರೇ ಪ್ರಥಮರೇನಲ್ಲ. ಅವರಿಗಿಂತಲೂ ಹಿಂದೆ ನಿಗ್ರಿಟೊ. ಆಸ್ಟ್ರಿಕ್ ಮತ್ತು ದ್ರಾವಿಡ ಜನಾಂಗಗಳು ಇಲ್ಲಿದ್ದುವು. ಅವೆಲ್ಲ ಭಾಷೆಗಳ ಅವಶೇಷಗಳನ್ನು ವೇದ ಮತ್ತು ಸಂಸ್ಕøತ ಭಾಷೆ ಉಳಿಸಿಕೊಂಡಿವೆ.ಇಂಡೋ-ಆರ್ಯನ್ ಶಾಖೆಯ ಅತಿ ಪ್ರಾಚೀನ ಉಲ್ಲೇಖವೆಂದರೆ ಋಗ್ವೇದ. ವೇದಗಳ ಕಾಲದ ಬಗೆಗಿನ ಅನೇಕ ಸಿದ್ಧಾಂತಗಳನ್ನು ತೂಗಿನೋಡಿ ಭಾಷಾಶಾಸ್ತ್ರದ ಆಧಾರದಿಂದ ಪರಿಶೀಲಿಸಿದರೆ ಅದು ಕ್ರಿ. ಪೂ. 1500-1300ರ ಸುಮಾರು ಎಂದು ಹೇಳಬಹುದು. ವೇದಗಳಿಂದ ಪ್ರಾರಂಭವಾಗಿ ಈಗ ಎಲ್ಲೆಡೆಗೂ ಪ್ರಚಾರದಲ್ಲಿರುವ ಆ ಶಾಖೆಯ ಅನೇಕ ಭಾಷೆಗಳಿಗೆ ಸುಮಾರು 3000 ವರ್ಷಗಳ ಅವ್ಯಾಹತ ಇತಿಹಾಸವಿದೆ. ಭಾಷೆಗಳು ಯಾವಾಗಲೂ ಬದಲಾಗುತ್ತಿರುವುದು ಅನಿವಾರ್ಯ. ಇಂಥ ಸುದೀರ್ಘ ಇತಿಹಾಸವನ್ನುಳ್ಳ ಇಂಡೋ-ಆರ್ಯನ್ ಭಾಷೆಗಳು ಬದಲಾವಣೆಯ ಅನೇಕ ಘಟ್ಟಗಳನ್ನು ಕಾಣಬಹುದು. 1 ಪೂರ್ವ ಇಂಡೋ-ಆರ್ಯನ್ : ವೇದದ ಸಂಸ್ಕøತ ಮತ್ತು ಅಭಿಜಾತ ಸಂಸ್ಕøತ; 2 ಮಧ್ಯ ಇಂಡೋ-ಆರ್ಯನ್ : ಪಾಲಿ, ಪ್ರಾಕೃತ, ಅಪಭ್ರಂಶ; 3 ನವ ಇಂಡೋ-ಆರ್ಯನ್; ಹಿಂದಿ, ಬಂಗಾಲಿ, ಗುಜರಾತಿ, ಲಹಂದಾ, ಪಂಜಾಬಿ, ಪಹಾಡಿ, ಬಿಹಾರಿ, ಮರಾಠಿ, ಸಿಂಧಿ, ರಾಜಾಸ್ತಾನಿ, ಉಡಿಯಾ, ಅಸ್ಸಾಮೀ.[೨]
ಪೂರ್ವ ಇಂಡೋ-ಆರ್ಯನ್
ಈ ಘಟ್ಟದ ಪ್ರಮುಖ ಅಂಗಗಳಾದ ವೈದಿಕ ಸಂಸ್ಕøತ ಮತ್ತು ಅಭಿಜಾತ ಸಂಸ್ಕøತ ಭಾಷೆಗಳಲ್ಲೇ ಬೇಕಾದಷ್ಟು ಭಿನ್ನತೆ ಕಂಡುಬರುತ್ತದೆ. ಇವೆರಡರ ರಚನೆ ಇದಕ್ಕೆ ಬೇಕಾದಷ್ಟು ಸಾಮಗ್ರಿಯನ್ನು ಒದಗಿಸುತ್ತದೆ. ಈ ವಿಭಾಗವೇನೂ ಹೊಸದಾಗಿ ಮಾಡಿದ್ದಲ್ಲ. ಹಿಂದಿನ ಸಂಸ್ಕøತ ವೈಯಾಕರಣರೇ ಅದನ್ನು ಮಾಡಿದ್ದಾರೆ. ವೇದದಿಂದ ಪ್ರಾರಂಭವಾಗಿ ಪಾಣಿನಿಯವರೆಗೆ (ಕ್ರಿ.ಪೂ 4ನೆಯ ಶತಮಾನ) ಪೂರ್ವ ಇಂಡೋ-ಆರ್ಯನ್ ಯುಗ, ವೇದಗಳು ಆಡುನುಡಿಗೆ ಬಹಳ ಸಮೀಪವಿದ್ದುವು. ಅಂತೆಯೆ ಆ ಪ್ರಯೋಗಗಳಲ್ಲಿ ಸ್ವಚ್ಛಂದತೆ ಇತ್ತು. ವೈವಿಧ್ಯವಿತ್ತು. ಇವೆರಡೂ ಅಭಿಜಾತ ಸಂಸ್ಕøತದಲ್ಲಿ ಕಾಣುವುದಿಲ್ಲ. ಧ್ವನಿ ವಿಭಾಗದಲ್ಲಿ ಬಹಳಷ್ಟು ಬದಲಾವಣೆಯಿದೆ. ಧ್ವನಿ ವಿಭಾಗದಲ್ಲಿ ಬಹುಪ್ರಮುಖ ವಿಷಯವೆಂದರೆ ವೇದಗಳಲ್ಲಿ ಬರುವ ಸ್ವರಾಘಾತದ (ಉದಾತ್ತ, ಅನುದಾತ್ತ, ಸ್ವರಿತ) ಪ್ರಾಬಲ್ಯ ಮುಂದೆ ಕಡಿಮೆಯಾಗುವುದು.ವ್ಯಾಕರಣ ವಿಭಾಗದಲ್ಲಿ ವೇದಭಾಷೆ ವಿವಿಧ ಪ್ರಯೋಗಗಳ ಮೂಲಕ ಬಹು ಶ್ರೀಮಂತವಾಗಿದೆ. ಇದು - ಇಂಡೋ-ಯೂರೋಪಿಯನ್ ಅಂಶವನ್ನು ಉಳಿಸಿಕೊಂಡುದರ ಸಂಕೇತ. ಅಭಿಜಾತ ಸಂಸ್ಕøತದಲ್ಲಿ ನಾಮಪದೋತ್ಪತ್ತಿಯ ವಿಷಯದಲ್ಲಿ ವೈವಿಧ್ಯ ಕಡಿಮೆಯಾಗುತ್ತದೆ. ವೇದದ ನಾಮಪ್ರತ್ಯಯ-ಯು (ಯಜ್ಯ-ಧಾರ್ಮಿಕ, ದೇವಯು-ದೇವಭಕ್ತ) ಮುಂದೆ ಉಳಿಯಲಿಲ್ಲ. ವೇದಗಳ ಕ್ರಿಯಾ ರೂಪಗಳಲ್ಲಿ ಶ್ರೀಮಂತಿಕೆ ಇದ್ದು ಅವು ಪೂರ್ಣವಾಗಿವೆ. ಅದೇ ಅಭಿಜಾತ ಸಂಸ್ಕøತದಲ್ಲಿ ಅನೇಕ ಪ್ರಯೋಗಗಳು ನಶಿಸಿ, ವ್ಯವಸ್ಥೆ ಮತ್ತು ಸರಳತೆ ಕಾಣುತ್ತದೆ. ವೇದಗಳಲ್ಲಿನ ಪುನುರುಕ್ತಿ ಮತ್ತು ಸಹಾಯಕ ಕ್ರಿಯಾಪದಗಳು ಭೂತಕಾಲದಲ್ಲಿ ಮುಂದೆ ಕಂಡುಬರುತ್ತವೆ (ಜೂ-ಜೂಜು, ವಚ್-ವವಾಚೇ, ಭೂ-ಬಭೂವ). ವೇದಗಳಲ್ಲಿ ಪೂರ್ವ ಪ್ರತ್ಯಯ ವಿಷಯದಲ್ಲಿ ಸ್ವಚ್ಛಂದತೆಯಿತ್ತು. ಅದು ಕ್ರಿಯಾಪದಕ್ಕಿಂತ ನಾಲ್ಕಾರು ಶಬ್ದಗಳ ಮೊದಲು ಇಲ್ಲವೆ ಸ್ವತಂತ್ರವಾಗಿಯೂ ಬಳಕೆಯಾಗುತ್ತಿತ್ತು. ಮುಂದೆ ಅದರ ಸ್ಥಾನ ನಿರ್ದಿಷ್ಟವಾಯಿತು.ವೇದಗಳಲ್ಲಿ ಪ್ರಚುರವಾಗಿದ್ದ ಅನೇಕ ಶಬ್ದಗಳು ಶಬ್ದವಿಭಾಗದಲ್ಲಿ ಮುಂದೆ ಇಲ್ಲವಾಗಿವೆ (ಅತಕ್-ಅಡುಗೆ, ಅಪಸ್-ಕೆಲಸ, ಆಪಿ-ಗೆಳೆಯ, ಗಾತು-ಮಾರ್ಗ). ಎಷ್ಟೋ ಶಬ್ದಗಳು ಹೊಸತಾಗಿ ಸೇರಿವೆ.
ಮಧ್ಯ ಇಂಡೋ-ಆರ್ಯನ್
ಸಂಸ್ಕøತ ಬಳಕೆಯಲ್ಲಿದ್ದಾಗಲೇ ಮಧ್ಯ ಇಂಡೋ-ಆರ್ಯನ್ ಭಾಷೆಗಳು ಅದರ ಸ್ಪರ್ಧಿಗಳೆಂಬಂತೆ ಅನೇಕ ರೂಪದಲ್ಲಿ ಬೆಳೆದಿದ್ದವು. ಅವು ಹೆಚ್ಚಾಗಿ ಆಡುಮಾತುಗಳಾಗಿದ್ದರೂ ಗ್ರಂಥಸ್ಥವಾಗಿಯೂ ಇದ್ದುವು. ಈ ಸ್ಪರ್ಧೆ ಮೊದಮೊದಲು ಅತಿಯಾಗಿತ್ತು. ವಿಚಿತ್ರವೆಂದರೆ, ಸಂಸ್ಕøತಭಾಷೆ ಸಂಸ್ಕøತಿ ಮತ್ತು ಆಡಳಿತಗಳ ಭಾಷೆಯಾಗಿ ಪೂರ್ಣ ಬೆಳೆವಣಿಗೆ ಹೊಂದಿದ್ದು ಅದು ತಾಯಿನುಡಿಯ ಸ್ಥಾನದಿಂದ ದೂರವಾದ ಮೇಲೆ, ಕ್ರಿ. ಪೂ. 500 ರ ಸುಮಾರಿಗೆ ಬೌದ್ಧ ಮತ್ತು ಜೈನ ಧರ್ಮಗಳ ಉದಯದೊಂದಿಗೆ ಮಧ್ಯ ಇಂಡೋ-ಆರ್ಯನ್ ಭಾಷೆಗಳೂ ಪ್ರಾಮುಖ್ಯ ಪಡೆದುವು. ಈ ಮತಸ್ಥಾಪಕರು ಪ್ರe್ಞÁಪೂರ್ವಕವಾಗಿ ಆಡುನುಡಿಯನ್ನೇ ತಮ್ಮ ಧರ್ಮ ಪ್ರಚಾರಕ್ಕೆ ಉಪಯೋಗಿಸಿದ್ದೇ ಇದಕ್ಕೆ ಕಾರಣ. ಅಶೋಕನ ಶಾಸನಗಳೆಲ್ಲ ಪ್ರಾಕೃತದಲ್ಲೇ ಇರುವುದು ಈ ಮಾತಿಗೆ ನಿದರ್ಶನ. ಶಾಸನಗಳಲ್ಲಿ ಸಂಸ್ಕøತಕ್ಕಿಂತ ಮೊದಲು ಪ್ರಾಕೃತ ಬಳಕೆಯಾದದ್ದನ್ನು ಗಮನಿಸಬೇಕು. ಜೈನ ಬೌದ್ಧಮತಗಳ ಪ್ರಾರಂಭದ ಗ್ರಂಥಗಳೆಲ್ಲ ಮಧ್ಯ ಇಂಡೋ-ಆರ್ಯನ್ ಭಾಷೆಗಳಲ್ಲೇ ಇವೆ. ಬರಬರುತ್ತ ಸಂಸ್ಕøತದ ಕೈಮೇಲಾಗಿ ಬೌದ್ಧ ಜೈನಧರ್ಮಿಗ್ರಂಥಗಳಿಗೂ (ಸ್ವಲ್ಪ ತಡವಾಗಿಯಾದರೂ) ಸಂಸ್ಕøತವೇ ಮಾಧ್ಯಮವಾಯಿತು. ಸಂಸ್ಕøತ ಮತ್ತು ಪ್ರಾಕೃತಗಳ ಏರು ಪೇರು ಬ್ರಾಹ್ಮಣ ಧರ್ಮ ಮತ್ತು ಜೈನಧರ್ಮಗಳ ಏರುಪೇರುಗಳೊಡನೆ ಹೆಣೆದುಕೊಂಡಿದೆ. ಕೊನೆಗೆ ಬ್ರಾಹ್ಮಣಧರ್ಮ ಮತ್ತೆ ಪ್ರಬಲವಾಗಿ ಸಂಸ್ಕøತವೇ ಭರತಖಂಡಕ್ಕೆಲ್ಲ ಏಕಮುಖ ಭಾಷಾಸಾಧನವಾಯಿತು. ಸಂಸ್ಕøತ ನಾಟಕಗಳಿಂದ ಬೇಕಾದಷ್ಟು ನಿದರ್ಶನಗಳು ಸಿಕ್ಕುತ್ತವೆ. ನಾಟಕಗಳಲ್ಲಿ ಕೆಲವು ಪಾತ್ರಗಳು ಸಂಸ್ಕøತದಲ್ಲೂ ಇನ್ನೂ ಕೆಲವು ಪಾತ್ರಗಳು ಪ್ರಾಕೃತದಲ್ಲೂ ಮಾತನಾಡುವುದು ಪದ್ಧತಿ. ರಾಜರು, ಮಂತ್ರಿಗಳು, ಬ್ರಾಹ್ಮಣರು ಮುಂತಾದ ಉಚ್ಚವರ್ಗದವರು ಸಂಸ್ಕøತವನ್ನೂ ಸ್ತ್ರೀಯರು, ಮಕ್ಕಳು, ವಿದೂಷಕ್ (ಇವನು; ಬ್ರಾಹ್ಮಣನಾಗಿದ್ದರೂ) ಪ್ರಾಕೃತವನ್ನೂ ಮಾತನಾಡಬೇಕು. ತಾತ್ಪರ್ಯವಿಷ್ಣು. ಪ್ರಾಕೃತಗಳು ಆಡುನುಡಿಗಳಾಗಿದ್ದುವು. ಸಾಮಾನ್ಯ ಜನರೇಕೆ, ಸಾಮಾನ್ಯ ಬ್ರಾಹ್ಮಣರು ಕೂಡ ಅವುಗಳನ್ನೇ ಬಳಸುತ್ತಿದ್ದರು. ಸಂಸ್ಕøತ ಗ್ರಂಥಭಾಷೆಯಾಗಿತ್ತು. ಧರ್ಮಚರ್ಚೆ, ಆಡಳಿತ ಮುಂತಾದವುಗಳಿಗಾಗಿ ಮಾತ್ರ ಅದರ ಉಪಯೋಗವಾಗುತ್ತಿತ್ತು.
ಇಂಡೋ-ಆರ್ಯನ್ ಭಾಷೆಗಳಲ್ಲಿ ಪ್ರಾದೇಶಿಕ ಭಿನ್ನತೆಯ ವೈವಿಧ್ಯತೆ
ಈ ಮಧ್ಯೆ ಇಂಡೋ-ಆರ್ಯನ್ ಭಾಷೆಗಳಲ್ಲಿ ಪ್ರಾದೇಶಿಕ ಭಿನ್ನತೆಯಿಂದಾಗಿ ಉಂಟಾಗಿರುವ ವೈವಿಧ್ಯ ಮೂರು ತೆರನಾಗಿದೆ; 1 ಉದೀಚ್ಯ, 2 ಮಧ್ಯದೇಶ ಮತ್ತು 3 ಪ್ರಾಚ್ಯ. ಉದೀಚ್ಯದಲ್ಲಿ ಧ್ವನಿಸಾಂಪ್ರದಾಯಿಕತೆ ಹೆಚ್ಚು. ಪ್ರಾಚ್ಯದಲ್ಲಿ ಧ್ವನಿ ನಾಶ ಹೆಚ್ಚಾಗಿ ಕಂಡುಬರುತ್ತದೆ. ಮೂರ್ಧನ್ಯ ಧ್ವನಿಗಳು ಈ ಗುಂಪಿನ ಭಾಷೆಯ ಒಂದು ವೈಶಿಷ್ಟ್ಯ. ದ್ರಾವಿಡ ಭಾಷೆಗಳ ಪ್ರಭಾವವೇ ಇರಲಿ, ಮತ್ತೇನೇ ಇರಲಿ, ಲ್ + ತ್ (ಹ್) (ಟ್ (ಹ್), ಲ್+ದ್(ಹ್)-> ಡ್(ಹ್), ಲ್+ನ್->ಣ್ ಆಗುವುದನ್ನು ಕಾಣುತ್ತೇವೆ. ಶಬ್ದಾಂತ್ಯ ವ್ಯಂಜನಗಳು ಲೋಪವಾಗುತ್ತವೆ (ವಿದ್ಯುತ್->ವಿಜ್ಜು). ಸ್ವರಮಧ್ಯಸ್ಪರ್ಶ (ಸ್ಟಾಪ್) ಧ್ವನಿ ಘರ್ಷಧ್ವನಿಯಂತೆ ಉಚ್ಚರಿಸಲ್ಪಡುತ್ತವೆ (ಟಿಚಿಜi) (ನದಿ) -> ಓಚಿಜi, ಚಿಣi (ಅತಿ) - ಂಜi). ಮಧ್ಯ ಇಂಡೋ-ಆರ್ಯನ್ನಿನಲ್ಲಿ ಸಮರೂಪಧಾರಣೆ (ಅಸಿಮಿಲೇಷನ್) ಒಂದು ಮಹತ್ತ್ವದ ಅಂಶ. ಈ ಅಂಶವೇ ಪೂರ್ವಘಟ್ಟದಿಂದ ಮಧ್ಯಘಟ್ಟವನ್ನು ಬೇರ್ಪಡಿಸುವ ಮಹತ್ತ್ವದ ಸಾಧನ. ಈ ಸಮರೂಪಧಾರಣೆ ವ್ಯಂಜನದ್ವಿತ್ವಾಕ್ಷರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ (ಅದ್-> ಉತ್ತುಮ್, ಲಭ್-> ಲಬ್ದುಮ್ ಎರಡೂ ಕಡೆಗಳಲ್ಲಿ - ತ ಪ್ರತ್ಯಯವಿದೆ). ಅನುನಾಸಿಕಗಳು ಹಿಂದಿನ ಸ್ಪರ್ಶಧ್ವನಿಯೊಡನೆ ಸಮರೂಪಧಾರಣೆ ಮಾಡುತ್ತವೆ (ಅಗ್ನಿಸ್ಕಂಧಾನಿ-> ಅಗ್ನಿಕಂಧನಿ, ಆತ್ಮ->ಅತ್ತ :: ಅಶೋಕನ ಶಾಸನಗಳು).
ನವ ಇಂಡೋ-ಆರ್ಯನ್
ಕ್ರಿ.ಶ 1000ದ ಸುಮಾರಿಗೆ ಆರ್ಯನ್ ಭಾಷೆ ತನ್ನ ಮುಂದಿನ ಹಂತದಲ್ಲಿ ಕಾಲಿಟ್ಟಿತು. ಅದೇ ನವ ಇಂಡೋ-ಆರ್ಯನ್. ಪ್ರಾಕೃತ ಭಾಷೆಗಳು ಪ್ರಾದೇಶಿಕ ಅಪಭ್ರಂಶಗಳ ಮುಖಾಂತರ ನವ ಇಂಡೋ-ಆರ್ಯನ್ ಭಾಷೆಗಳಾಗಿ ಪರಿವರ್ತಿತವಾದವು. ಸಂಸ್ಕøತವಂತೂ ಇದ್ದೇ ಇತ್ತು. ಹೆಚ್ಚಾಗಿ ಬರಹದ ಭಾಷೆಯಾಗಿ. ಈ ಪ್ರಾದೇಶಿಕ ಭಾಷೆಗಳೆಲ್ಲ ಆಡುನುಡಿಗಳಾದುದರಿಂದ (ಮುಂದೆ ಒಂದೆರಡು ಶತಮಾನಗಳಲ್ಲಿ ಗ್ರಂಥಸ್ಥ ಭಾಷೆಗಳೂ ಆದವು) ಮೂಲಕ್ಕಿಂತ ಭಿನ್ನ ಭಿನ್ನ ರೀತಿಯಲ್ಲಿಯೇ ಬೆಳೆಯಲಾರಂಭಿಸಿದುವು. ಸಂಸ್ಕøತ ತನ್ನ ಗತವೈಭವವನ್ನು ಹೊತ್ತುಕೊಂಡು ನಿಂತಿದ್ದರೂ ಪ್ರಾದೇಶಿಕ ಭಾಷೆಗಳು ವರ್ತಮಾನವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸಬೇಕಾಗಿತ್ತು.ನವ ಇಂಡೋ-ಆರ್ಯನ್ ಭಾಷೆಗಳಿಗೆ ಕಾವ್ಯಸಾಹಿತ್ಯ ಬಂದದ್ದು ಸಂಸ್ಕøತ, ಪಾಲಿ, ಪ್ರಾಕೃತಗಳ ಬಳುವಳಿಯಾಗಿ, ಗದ್ಯಸಾಹಿತ್ಯ ಹಿಂದೆಯೂ ಅಪೂರ್ವವಾಗಿದ್ದಿತಾದರೂ ಇದ್ದಷ್ಟು ಪ್ರಮಾಣದಲ್ಲೂ ಅದು ನವ ಇಂಡೋ-ಆರ್ಯನ್ ಭಾಷೆಗಳಲ್ಲಿ ಮುಂದುವರಿಯಲಿಲ್ಲ. ಎಲ್ಲ ನವ ಇಂಡೋ-ಆರ್ಯನ್ ಭಾಷೆಗಳಲ್ಲಿ ಸಾಹಿತ್ಯರಚನೆ ಸಾಮಾನ್ಯವಾಗಿ ಸಮಕಾಲೀನವಾಗಿದ್ದುದು ಕಂಡುಬರುತ್ತದೆ. ಮರಾಠಿಯಲ್ಲಿ 10ನೆಯ ಶತಮಾನ ಗುಜರಾತಿಯಲ್ಲಿ 12ನೆಯ ಶತಮಾನ, ಪಂಜಾಬಿಯಲ್ಲಿ 11ನೆಯ ಶತಮಾನ, ಅಸ್ಸಾಮಿನಲ್ಲಿ 13ನೆಯ ಶತಮಾನ, ಹಿಂದಿಯಲ್ಲಿ 13ನೆಯ ಶತಮಾನಗಳಲ್ಲಿ ಕೃತಿಗಳ ರಚನೆ ಮೊದಲಾಯಿತೆಂದು ತಿಳಿಯುತ್ತದೆ.ಹಿಂದಿನ ಘಟ್ಟಗಳಿಂದ ನವ ಇಂಡೋ-ಆರ್ಯನ್ ಭಾಷೆಗಳ ಭಿನ್ನತೆಯನ್ನು ಲೋಕಿಸುವಾಗ, ಧ್ವನಿವಿಭಾಗದಲ್ಲಿ ವ್ಯತ್ಯಾಸವಾಗಿದ್ದರೂ ಅದು ನಿಚ್ಚಳವಾಗಿಲ್ಲ. ಭಾಷೆಗಳಲ್ಲಿ ಪ್ರಾದೇಶಿಕ ಭಿನ್ನತೆಯಿಂದ ವೈಯಕ್ತಿಕತೆ ಹೆಚ್ಚಿ, ಒಂದೊಂದು ಭಾಷೆಯಲ್ಲಿ ಒಂದೊಂದು ರೀತಿಯ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಉದಾ: ಪೂರ್ವ ಮತ್ತು ಮಧ್ಯ ಇಂಡೋ-ಆರ್ಯನ್ ಛಿ, ರಿ ಮರಾಠಿಯಲ್ಲಿ (ಕೆಲ ಪರಿಸರಗಳಲ್ಲಿ ಮಾತ್ರ), ಉಡಿಯಾ ಭಾಷೆಯಲ್ಲಿ, ಗುಜರಾತಿಯಲ್ಲಿ ಕೆಲ ರಾಜಾಸ್ತಾನೀ ಉಪ ಭಾಷೆಗಳಲ್ಲಿ ಗೋರ್ಖಾಲಿಯಲ್ಲಿ ಮತ್ತು ಪೂರ್ವ ಬಂಗಾಲಿಯಲ್ಲಿ ಣs, ಜz ಆಗಿವೆ.
ಪರ್ಷಿಯನ್ ಭಾಷೆಯ ಸಂಪರ್ಕ
ಪರ್ಷಿಯನ್ ಭಾಷೆಯ ಸಂಪರ್ಕದಿಂದ ಹಿಂದಿಯಲ್ಲಿ ಜಿ, x, x, ಥಿ, s, z ಧ್ವನಿಗಳು ಸಮಾವೇಶವಾಗಿವೆ. ಧ್ವನಿನಾಶ ತತ್ತ್ವ ಹಾಗೇ ಮುಂದುವರಿದು (ದ್) ಕೆಲವು ಭಾಷೆಗಳಲ್ಲಿ ಲೋಪವಾಗಿದೆ; ಇನ್ನು ಕೆಲವು ಭಾಷೆಗಳಲ್ಲಿ (?) ಆಗಿದೆ. ಅದೇ ಹಿಂದಿಯಲ್ಲಿ ಇದು ಸ್ಪಷ್ಟವಾಗಿ ಉಳಿದಿದೆ. (ಬಾರಹ್-12. ಬಾಫ್-ಹುಲಿ, ~ ಸಾಂಝ್ - ಸಂಜೆ).ಆಕೃತಿಮಾ ವಿಭಾಗದಲ್ಲಿ ಹಳೆಯ ಸಾಮಗ್ರಿಯ ಕಲಸುಮೇಲೋಗರವಾಗಿದೆ. ಒಂದು ವಿಭಕ್ತಿಪ್ರತ್ಯಯದ ಅರ್ಥವನ್ನು ತಿಳಿಸಲು, ಅದಕ್ಕೆ ಬದಲಾಗಿ ಬೇರೆ ವಿಧಾನಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿ ಬಂದುವು (ತಸ್ಮೈದತ್ತಮ್‍ಗೆ ಬದಲಾಗಿ ತಸ್ಯಾರ್ಥೇ ಅಥವಾ ತಸ್ಯಕೃತೇ ದತ್ತಮ್). ಹಿಂದಿನ ಪೂರ್ವ ಪ್ರತ್ಯಯಗಳು ಕೇವಲ ಕ್ರಿಯಾಪೂರ್ವಿಗಳಾಗಿ ಪರಿಣಾಮ ಹೊಂದಿದ್ದರಿಂದ ಕ್ರಿಯೆಯೊಡನೆ ಒಟ್ಟು ವಾಕ್ಯದಲ್ಲಿ ಸಂಬಂಧ ಸೂಚಿಸುವ ಅವುಗಳ ಸತ್ತ್ವ ಅಡಗಿತು. ಹೊಸ ಪ್ರತ್ಯಯಗಳು ಹುಟ್ಟಿಕೊಂಡವು. ಬಂಗಾಲಿ ಷಷ್ಠಿ ಎರ್,-ರ್; ಸಿಂಧೀ ಷಷ್ಠಿ-ಜೋ,-ಜೀ; ರಾಜಾಸ್ತಾನೀ, ಗುಜರಾತೀ ಚತುರ್ಥಿ-ನೆ; ಪಂಜಾಬೀ ಚತುರ್ಥಿ-ನು ಇತ್ಯಾದಿ. ಸಮಾನಾರ್ಥಕ ಪದಗಳ ಕ್ರಮೇಣ ಬೆಳೆವಣಿಗೆ ನವ ಇಂಡೋ-ಆರ್ಯನ್ ಭಾಷೆಗಳ ವೈಶಿಷ್ಟ್ಯವೆನ್ನಬೇಕು.ನವ ಇಂಡೋ-ಆರ್ಯನ್ ಭಾಷೆಗಳು, ಸಂಸ್ಕøತದ ವಾತಾವರಣದಲ್ಲಿಯೇ ಬೆಳೆದವೆನ್ನಬಹುದು. ಸಂಸ್ಕøತದಿಂದ ನೇರ ಸ್ವೀಕರಣ ಇಲ್ಲಿ ಅತಿಯಾಗಿ ಕಂಡುಬರುತ್ತದೆ. ಅನೇಕ ಭಾಷೆಗಳನ್ನು - ಕೆಲ ಆರ್ಯೇತರ ಭಾಷೆಗಳನ್ನು ಕೂಡ-ಸಂಸ್ಕøತವಿಲ್ಲದೆ ಕಲ್ಪಿಸಲು; ಕೂಡ ಸಾಧ್ಯವಿಲ್ಲ. ತತ್ಸಮ, ಅರ್ಧತತ್ಸಮ, ತದ್ಭವ ಹೀಗೆ ನಾನಾ ರೂಪಗಳಲ್ಲಿ ಭಾರತದ ಎಲ್ಲಾ ಭಾಷೆಗಳೂ ಸಂಸ್ಕøತದಿಂದ ಎರವಲು ಪಡೆದಿವೆ.
ಉಲ್ಲೇಖಗಳು