ವಿಷಯಕ್ಕೆ ಹೋಗು

ಪ್ರೋಟಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೪:೪೬, ೧೫ ಜನವರಿ ೨೦೧೮ ರಂತೆ Olaf (ಚರ್ಚೆ | ಕಾಣಿಕೆಗಳು) ಇವರಿಂದ (corrected version of the proton structure image (see http://backreaction.blogspot.co.uk/2017/12/get-your-protons-right.html ))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಪ್ರೋಟಾನ್

ಪ್ರೋಟಾನ ಕ್ವಾರ್ಕ್ ರಚನೆ.
ರಚನೆ: ೨ up, 1 down
ವರ್ಗ: ಫರ್ಮಿಯಾನ್
ಗುಂಪು: ಕ್ವಾರ್ಕ್
ಒಡನಾಟ: ಗುರುತ್ವ, ವಿದ್ಯುತ್‌ಕಾಂತೀಯ, ದುರ್ಬಲ, ಸಬಲ
ಪ್ರತಿಕಣ: ಆಂಟಿಪ್ರೋಟಾನ್
ಆವಿಷ್ಕಾರ: ಅರ್ನೆಸ್ಟ್ ರುದರ್‌ಫೊರ್ಡ್ (೧೯೧೯)
ಚಿಹ್ನೆ: p+
ದ್ರವ್ಯರಾಶಿ: ೧.೬೭೨ ೬೨೧ ೭೧(೨೯) × ೧೦−೨೭ ಕಿ.ಗ್ರಾಂ.

೯೩೮.೨೭೨ ೦೨೯(೮೦) MeV/c

೧.೦೦೭ ೨೭೬ ೪೬೬ ೮೮(೧೩) u
ವಿದ್ಯುದಾವೇಶ: ೧.೬೦೨ ೧೭೬ ೫೩(೧೪) × ೧೦−೧೯ C
ಗಿರಕಿ: ½

ಭೌತಶಾಸ್ತ್ರದಲ್ಲಿ ಪ್ರೋಟಾನ್ ಅಥವಾ ಧನವಿದ್ಯುತ್ಕಣವು (ಗ್ರೀಕ್ ಭಾಷೆಯಲ್ಲಿ πρώτον / ಪ್ರೋಟಾನ್ = ಮೊದಲನೆಯ) ಒಂದು ಮೂಲ ಆವೇಶದಷ್ಟು (೧.೬೦೨ × ೧೦−೧೯ coulomb) ಧನ ವಿದ್ಯುದಾವೇಶವನ್ನು ಹೊಂದಿರುವ ಒಂದು ಉಪಪರಮಾಣು ಕಣ. ಇದರ ವ್ಯಾಸವು ೧.೬ ರಿಂದ ೧.೭×೧೦−೧೫ ಮೀ.ನಷ್ಟು [] ಇದ್ದು, ದ್ರವ್ಯರಾಶಿಯು ೯೩೮.೨೭೨೩೧(೨೮) MeV/c2 (೧.೬೭೨೬ × ೧೦−೨೭ ಕಿ.ಗ್ರಾಂ.), ೧.೦೦೭ ೨೭೬ ೪೬೬ ೮೮(೧೩) u ಅಥವಾಾ ಎಲೆಕ್ಟ್ರಾನ್ನ ೧೮೩೬ ಪಟ್ಟು ಇರುತ್ತದೆ.

ಪ್ರೋಟಾನ್‌ಗಳು ಗಿರಕಿ-1/2 ಫರ್ಮಿಯಾನ್ಗಳಾಗಿದ್ದು, ಮೂರು ಕ್ವಾರ್ಕ್ಗಳನ್ನು ಹೊಂದಿರುವ ಕಾರಣ[], ಬೇರಿಯಾನ್ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್‌ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು ಮೇಲು ಕ್ವಾರ್ಕ್ಗಳು ಸಬಲ ಅಂತರಕ್ರಿಯೆಯ ಸಹಾಯದಿಂದ ಮತ್ತು ಗ್ಲುಆನ್‌ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.

ಸ್ಥಿರತೆ

[ಬದಲಾಯಿಸಿ]

೧×೧೦೩೬ ವರ್ಷಗಳ ಸೈದ್ಧಾಂತಿಕ ಅರ್ಧಾಯುವನ್ನು ಹೊಂದಿರುವ ಪ್ರೋಟಾನ್‌ಗಳನ್ನು ಸಮಾನ್ಯವಾಗಿ ಸ್ಥಿರ ಕಣಗಳೆಂದು ಪರಿಗಣಿಸಲಾಗುತ್ತದೆ. ಮಹತ್ ಏಕೀಕೃತ ಸಿದ್ಧಾಂತಗಳ ಸಾಮಾನ್ಯ ನುಡಿಯ ಪ್ರಕಾರ ಪ್ರೋಟಾನ್ ಕ್ಷಯವು ಉಂಟಾಗಬೇಕಾದರೂ, ಪ್ರಯೋಗಗಳಿಂದ ಬಂದಿರುವ ಫಲಿತಾಂಶಗಳು ಪ್ರೋಟಾನ್‌ನ ಜೀವಮಾನವು ಕಡೇಪಕ್ಷ ೧೦೩೫ ವರ್ಷಗಳಿರಬಹುದೆಂದು ಸೂಚಿಸುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪ್ರೊಟಾನ್ ಕ್ಷಯವನ್ನು ಇದುವರೆಗೆ ಯಾರೂ ಗಮನಿಸಿಲ್ಲ.

ಆದರೆ, ಎಲೆಕ್ಟ್ರಾನ್ ಸ್ವಾಧೀನ ಪ್ರಕ್ರಿಯೆಯಿಂದ ಪ್ರೋಟಾನ್‌ಗಳು ನ್ಯೂಟ್ರಾನ್‌ಗಳಾಗಿ ಮಾರ್ಪಡುತ್ತವೆ ಎಂದು ಈಗಾಲಲೇ ತಿಳಿದಿದೆ. ಈ ಪ್ರಕ್ರಿಯೆಯು ಸ್ವಯಂಪ್ರೇರಿತವಲ್ಲದೆ, ಶಕ್ತಿಯ ಅಸ್ತಿತ್ವದಲ್ಲಿ ಮಾತ್ರ ಆಗುತ್ತದೆ. ಇದರ ಸಮೀಕರಣವು ಈ ಕೆಳಗಿನಂತಿದೆ:

ಇಲ್ಲಿ

p - ಪ್ರೋಟಾನ್
e - ಎಲೆಕ್ಟ್ರಾನ್,
n - ನ್ಯೂಟ್ರಾನ್, ಮತ್ತು
- ಎಲೆಕ್ಟ್ರಾನ್ ನ್ಯೂಟ್ರಿನೊ

ಇದು ಒಂದು ವಿಪರ್ಯಯಶೀಲ ಪ್ರಕ್ರಿಯೆ: ವಿಕಿರಣ ಕ್ಷಯದ ಒಂದು ಸಾಮಾನ್ಯ ರೂಪವಾದ ಬೀಟಾ ಕ್ಷಯದ ಮೂಲಕ ನ್ಯೂಟ್ರಾನ್‌ಗಳು ಮರಳಿ ಪ್ರೋಟಾನ್‌ಗಳಾಗಿ ಮಾರ್ಪಡಬಹುದು. ವಾಸ್ತವದಲ್ಲಿ ಈ ರೀತಿಯ ಸ್ವತಂತ್ರ ನ್ಯೂಟ್ರಾನ್ಗಳು ಸುಮಾರು ೧೫ ನಿಮಿಷಗಳ ಸರಾಸರಿ ಜೀವಾವಧಿಯ ನಂತರ ಕ್ಷಯಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Weisstein, Eric (1996–2007). "Proton -- from Eric Weisstein's World of Physics". Wolfram Research, Inc. Retrieved 2007-01-16.{{cite web}}: CS1 maint: date format (link)
  2. Adair, Robert K.: "The Great Design: Particles, Fields, and Creation.", page 214. New York: Oxford University Press, 1989.