ವಿಷಯಕ್ಕೆ ಹೋಗು

ಇಟ್ರಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೯:೫೯, ೨೪ ಡಿಸೆಂಬರ್ ೨೦೨೨ ರಂತೆ Dhanalakshmi .K. T (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಇಟ್ರಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ವಿರಳ ಭಸ್ಮ ಲೋಹಗಳ ಖನಿಜಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನು ಪ್ರಮುಖವಾಗಿ ದೂರದರ್ಶನ ಪೆಟ್ಟಿಗೆಯ ಕೆಂಪು ಬಣ್ಣವನ್ನು ಪ್ರದರ್ಶಿಸುವ ರಂಜಕಗಳಲ್ಲಿ ಉಪಯೋಗಿಸಲಾಗುತ್ತದೆ. ಲೇಸರ್ಗಳಲ್ಲಿ ಮತ್ತು ಎಥಿಲೀನ್ ತಯಾರಿಕೆಯಲ್ಲಿ ಇದರ ಉಪಯೋಗವಿದೆ. ಇದನ್ನು ಫಿನ್ಲ್ಯಾಂಡ್ಜೊಹಾನ್ ಗಾಡೊಲಿನ್ ಎಂಬ ರಸಾಯನಶಾಸ್ತ್ರಜ್ಞ ೧೭೯೪ರಲ್ಲಿ ಕಂಡುಹಿಡಿದನು. ಇದರ ಹೆಸರು ಸ್ವೀಡನ್ ದೇಶದ ಯ್ಟೆರ್ಬಿ ನಗರದ ಹೆಸರಿಂದ ಬಂದಿದೆ. ಈ ಊರಿನ ಬಳಿಯಲ್ಲಿನ ಗಣಿಯೊಂದರಲ್ಲಿ ಸಿಗುವ ಖನಿಜಗಳಿಂದ ಅನೇಕ ಮೂಲಧಾತುಗಳನ್ನು ಮೊದಲು ಪಡೆಯಲಾಯಿತು. ಎರ್ಬಿಯಮ್, ಟೆರ್ಬಿಯಮ್, ಯ್ಟೆರ್ಬಿಯಮ್ ಮತ್ತು ಯ್ಟ್ರಿಯಮ್ ಎಲ್ಲವೂ ಈ ಪುಟ್ಟ ಊರಿನ ಹೆಸರಿಂದಲೇ ತಮ್ಮ ಹೆಸರನ್ನು ಪಡೆದಿರುವವು.