ಜೂಡೋ
ಗಮನ | Grappling |
---|---|
ಗಡಸುತನ | Full Contact |
ಮೂಲ ದೇಶ | Japan |
ನಿರ್ಮಾತೃ | Kano Jigoro |
ಪ್ರಸಿದ್ಧ ಪಟು | Tsunejiro Tomita, Mitsuo Maeda, Kyuzo Mifune, Keiko Fukuda, Masahiko Kimura, Gene LeBell, Anton Geesink, Yasuhiro Yamashita, Neil Adams, Hidehiko Yoshida, Kosei Inoue |
ಮೂಲತನ | Various jujutsu schools, principally Tenjin Shin'yō-ryū, Kito-ryū, and Fusen-ryū |
ವಂಶಸ್ಥ ಕಲೆಗಳು | Brazilian Jiu-Jitsu, Kawaishi-ryū jujutsu, Kosen Judo, Sambo, Daido Juku |
ಒಲಂಪಿಕ್ ಆಟಗಳು | Since 1964[೧] (men) and 1992[೨][೩] (women) |
ಅಧಿಕೃತ ಜಾಲ ತಾಣ | kodokan.org |
Judo or Jūdō (柔道 jūdō?, meaning "gentle way") ಒಂದು ಆಧುನಿಕ ಜಪಾನೀಸ್ ಕದನ ಕಲೆ, ಮತ್ತು ಕಾದಾಡುವ ಕ್ರೀಡೆಯಾಗಿದೆ, ಇದನ್ನು 1882ರಲ್ಲಿ ಜಪಾನಿನಲ್ಲಿ ಡಾ. ಕ್ಯಾನೊ ಜಿಗೋರೊ ಆರಂಭಿಸಿದನು. ಸ್ಫರ್ಧಾತ್ಮಕ ಅಂಶವೇ ಇದರ ಅತ್ಯಂತ ಪ್ರಮುಖ ಲಕ್ಷಣವಾಗಿದೆ. ವಿರೋಧಿಯನ್ನು ನೆಲಕ್ಕೆ ಹೊಡೆದುರುಳಿಸುವುದು, ಕೈಕೈ ಮಿಲಾಯಿಸುವ ಕುಶಲಚಲನೆಯೊಂದಿಗೆ ವಿರೋಧಿಯನ್ನು ನಿಶ್ಚಲಗೊಳಿಸುವುದು ಅಥವಾ ನಿಗ್ರಹಿಸುವುದು ಅಥವಾ ಕೀಲುಗಳಿಗೆ ಪಟ್ಟು ಹಾಕುವ ಮೂಲಕ ಅಥವಾ ಕತ್ತನ್ನು ಬಿಗಿಯಾಗಿ ಹಿಡಿದು ಅಥವಾ ಉಸಿರು ಒತ್ತಡಕ್ಕೆ ಗುರಿ ಮಾಡಿ ಸ್ಪರ್ಧಿಯನ್ನು ಶರಣಾಗುವಂತೆ ಮಾಡುವುದು ಈ ಕ್ರೀಡೆಯ ಮುಖ್ಯ ಗುರಿಯಾಗಿರುತ್ತದೆ. ಕೈ ಮತ್ತು ಪಾದದಿಂದ ಮಾತ್ರವಲ್ಲದೆ ರಕ್ಷಣಾ-ಆಯುಧಗಳಿಂದ ಪ್ರಹಾರ ಮಾಡುವ ಹೊಡೆತಗಳು ಮತ್ತು ತಿವಿತಗಳು ಜೂಡೋದ ಭಾಗವಾಗಿವೆ. ಆದರೆ ಇದು ಪೂರ್ವ-ನಿಯೋಜಿತ ರೂಪಗಳಲ್ಲಿ (ಕಾಟಾ) (ಸಹಾಯಕ ಪಟ್ಟುಗಳು)ಮಾತ್ರ ಕಂಡುಬರುತ್ತದೆ. ಅದಲ್ಲದೇ ಜೂಡೋ ಸ್ಪರ್ಧೆ ಮತ್ತು ಸ್ವತಂತ್ರ ಅಭ್ಯಾಸದಲ್ಲಿ (ರಾಂಡೊರಿ) ಇದಕ್ಕೆ ಅವಕಾಶವಿರುವುದಿಲ್ಲ.
ಜೂಡೋವನ್ನು ಕಲಿಸುವ-ವಿಧಾನ ಮತ್ತು ಅನಂತರ ಅಭಿವೃದ್ಧಿಯಾದ ಶಿಕ್ಷಣ ಕಲೆಯು ಸಾಂಪ್ರದಾಯಿಕ ಶಾಲೆಗಳಿಂದ (ಕೊರ್ಯು ) ಬೆಳೆದ ಜಪಾನಿನ ಇತರ ಆಧುನಿಕ ಕದನ ಕಲೆಗಳಿಗೆ ಮಾದರಿಯಾಯಿತು. ಜೂಡೋದ ವಿಶ್ವವ್ಯಾಪಿ ಹರಡಿಕೆಯು ಅದರ ಅನೇಕ ಉಪಕ್ರೀಡೆಗಳು ಅಭಿವೃದ್ಧಿಯಾಗುವಂತೆ ಮಾಡಿತು, ಉದಾ. ಸ್ಯಾಂಬೊ, ಬಾರ್ಟಿಟ್ಸು ಮತ್ತು ಬ್ರೆಜಿಲಿಯಿನ್ ಜಿಯು-ಜಿಟ್ಸು. ಅವೆಲ್ಲವೂ ಮಿಟ್ಸುಯೊ ಮಯೇಡ ಜೂಡೋವನ್ನು 1914ರಲ್ಲಿ ಬ್ರೆಜಿಲ್‌ಗೆ ಪರಿಚಯಿಸಿದ ನಂತರ ಅಭಿವೃದ್ಧಿಯಾದವು. ಜೂಡೋ ಅಭ್ಯಾಸನಿರತರನ್ನು ಜೂಡೋಕ ಎಂದು ಕರೆಯುತ್ತಾರೆ.
ಇತಿಹಾಸ ಮತ್ತು ಕಲಿಯುವ-ವಿಧಾನ
ಸ್ಥಾಪಕನ ಆರಂಭಿಕ ಜೀವನ
ಜೂಡೋದ ಆರಂಭಿಕ ಇತಿಹಾಸವು ಅದರ ಸ್ಥಾಪಕ ಜಪಾನಿನ ಮಹಾವಿದ್ವಾಂಸ ಮತ್ತು ಶಿಕ್ಷಣ-ಶಾಸ್ತ್ರಜ್ಞ ಜಿಗೋರೊ ಕ್ಯಾನೊಗೆ (嘉納 治五郎 ಕ್ಯಾನೊ ಜಿಗೋರೊ , 1860–1938) ಸಂಬಂಧಿಸಿದೆ. ಕ್ಯಾನೊ ಜಪಾನಿನ ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದನು. ಆತನ ಅಜ್ಜನು ಸ್ವಾವಲಂಬಿಯಾಗಿದ್ದು, ಕೇಂದ್ರ ಜಪಾನಿನ ಶಿಗಾ ಪ್ರಿಫೆಕ್ಚರ್‌ನಲ್ಲಿ ಬಿಯರ್-ತಯಾರಕನಾಗಿದ್ದನು. ಆದರೆ ಕ್ಯಾನೊನ ತಂದೆಯು ಹಿರಿಯ ಮಗನಲ್ಲದ್ದರಿಂದ ಆ ವ್ಯವಹಾರವನ್ನು ಪಾರಂಪರಿಕವಾಗಿ ಪಡೆಯಲಿಲ್ಲ. ಬದಲಿಗೆ ಆತನು ಶಿಂಟೊ ಪಾದ್ರಿಯಾದನು. ಅಲ್ಲದೇ ಸರ್ಕಾರಿ ಉದ್ಯೋಗಿಯಾದನು, ತನ್ನ ಮಗನಿಗೆ ಟೋಕಿಯೊ ಇಂಪೀರಿಯಲ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿಸಲು ಸಾಕಷ್ಟು ಪ್ರಭಾವ ಬೀರಿದನು.
ಸ್ಥಾಪಕನು ಗುರಿಯಾಗಿಟ್ಟುಕೊಂಡ ಜುಜುಟ್ಸು
ಕ್ಯಾನೊ ಗಿಡ್ಡ, ದುರ್ಬಲ ಹುಡುಗನಾಗಿದ್ದನು, ಆತನು ತನ್ನ ಇಪ್ಪತ್ತನೇ ವಯಸ್ಸಿನಲ್ಲೂ ನೂರು ಪೌಂಡ್‌ಗಳಿಗಿಂತ (45 ಕೆಜಿ) ಹೆಚ್ಚು ತೂಕವನ್ನು ಹೊಂದಿರಲಿಲ್ಲ ಮತ್ತು ಹೆಚ್ಚಾಗಿ ದಡೂತಿ ವ್ಯಕ್ತಿಗಳಿಂದ ತುಳಿತಕ್ಕೊಳಗಾಗುತ್ತಿದ್ದನು. ಆತನು ಆ ಸಂದರ್ಭದಲ್ಲಿ ಅಳಿಸಿಹೋಗುತ್ತಿದ್ದ ಕಲೆಯಾದ[೪] ಜುಜುಟ್ಸು ವಿನಲ್ಲಿ ತೊಡಗಲು ಮೊದಲ ಬಾರಿಗೆ ತನ್ನ 17ನೇ ವಯಸ್ಸಿನಲ್ಲಿ ಆರಂಭಿಸಿದನು, ಆದರೆ ಯಶಸ್ಸು ಗಳಿಸಲಿಲ್ಲ. ಇದಕ್ಕೆ ಕಾರಣ ಆತನನ್ನು ಶಿಷ್ಯನಾಗಿ ತೆಗೆದುಕೊಳ್ಳುವ ಗುರುವನ್ನು ಹುಡುಕುವುದರಲ್ಲಿನ ಸಮಸ್ಯೆಯಾಗಿತ್ತು. ಆತನು 18ನೇ ವಯಸ್ಸಿನಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಾಹಿತ್ಯವನ್ನು ಅಧ್ಯಯನ ಮಾಡಲು ಹೋದಾಗ, ಆತನು ತನ್ನ ಕದನ ಕಲೆಗಳ ಅಧ್ಯಯನವನ್ನೂ ಮುಂದುವರಿಸಿದನು. ಅಂತಿಮವಾಗಿ ಫುಕುಡ ಹ್ಯಾಚಿನೊಸುಕೆಯ (ಸುಮಾರು 1828–1880) ಹತ್ತಿರ ಅಭ್ಯಾಸ ಮಾಡಲು ಅವಕಾಶವನ್ನು ಪಡೆದನು. ಫುಕುಡ ಹ್ಯಾಚಿನೊಸುಕೆಯು ಟೆಂಜಿನ್ ಶಿನ್ಯೊ-ರ್ಯು ವಿನ ತರಬೇತಿದಾರ ಮತ್ತು ಕೈಕೊ ಫುಕುಡಾಳ (1913ರಲ್ಲಿ ಜನಿಸಿದಳು) ಅಜ್ಜನಾಗಿದ್ದಾನೆ. ಕೈಕೊ ಫುಕುಡಾಳು ಕ್ಯಾನೊವಿನ ಈಗ ಬದುಕಿರುವ ಏಕೈಕ ಶಿಷ್ಯೆಯಾಗಿದ್ದಾಳೆ ಮತ್ತು ಪ್ರಪಂಚದಲ್ಲೇ ಅತ್ಯಂತ ಉನ್ನತ ಶ್ರೇಣಿಯಲ್ಲಿರುವ ಮಹಿಳಾ ಜೂಡೋಕ ಆಗಿದ್ದಾಳೆ. ಫುಕುಡ ಹ್ಯಾಚಿನೊಸುಕೆಯು ಸಾಂಪ್ರದಾಯಿಕ ಅಭ್ಯಾಸದ ತಂತ್ರದಲ್ಲಿ ಹೆಚ್ಚು ಪ್ರಸಿದ್ಧನಾಗಿದ್ದನು. ಈತನು ಕ್ಯಾನೊ ಜೂಡೋದ ಸ್ವತಂತ್ರ ಅಭ್ಯಾಸದಲ್ಲಿ (ರಾಂಡೊರಿ ) ತೊಡಗುವ ಭಾವನೆಯನ್ನು ಬಿತ್ತಿದನು.
ಕ್ಯಾನೊ ಫುಕುಡಾನ ಶಾಲೆಯನ್ನು ಸೇರಿದ ಒಂದು ವರ್ಷದೊಳಗೆ ಫುಕುಡ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದನು. ಕ್ಯಾನೊ ನಂತರ ಮತ್ತೊಂದು ಟೆಂಜಿನ್ ಶಿನ್ಯೊ-ರ್ಯು ಶಾಲೆಯಲ್ಲಿ ಐಸೊ ಮ್ಯಾಸಟೋಮೊನ (ಸುಮಾರು 1820–1881) ಶಿಷ್ಯನಾದನು. ಈತನು ಫುಕುಡ ನೀಡಿದುದಕ್ಕೆ ವಿರುದ್ಧವಾಗಿ ಪೂರ್ವನಿಯೋಜಿತ ರೀತಿಯ ಅಭ್ಯಾಸಕ್ಕೆ (ಕಾಟ ) ಹೆಚ್ಚು ಮಹತ್ವ ನೀಡಿದನು. ಜೂಡೋ ಅಭ್ಯಾಸದಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡಿದುದರಿಂದ ಕ್ಯಾನೊ ಅತಿ ಶೀಘ್ರದಲ್ಲಿ ಪ್ರಮುಖ ಮಾರ್ಗದರ್ಶಕನೆಂಬ (ಶಿಹಾನ್ ) ಹೆಸರನ್ನು ಗಳಿಸಿದನು ಮತ್ತು ತನ್ನ 21ನೇ ವಯಸ್ಸಿನಲ್ಲೇ ಐಸೊನ ಸಹಾಯಕ ಮಾರ್ಗದರ್ಶಕನಾದನು. ದುರದೃಷ್ಟವಶಾತ್ ಐಸೊ ಸಹ ಅನಾರೋಗ್ಯಕ್ಕೆ ಒಳಗಾದನು. ಇದರಿಂದಾಗಿ ಕ್ಯಾನೊ ತಾನು ಕಲಿಯಬೇಕಾದುದು ಇನ್ನೂ ಇದೆ ಎಂದು ತಿಳಿದು, ಕಿಟೊ-ರ್ಯು ವಿನ ಐಕುಬೊ ತ್ಸುನೆಟೋಶಿಯ (1835–1889) ಶಿಷ್ಯನಾದನು. ಫುಕುಡನಂತೆ ಐಕುಬೊ ಸಹ ಸ್ವತಂತ್ರ ಅಭ್ಯಾಸಕ್ಕೆ ಹೆಚ್ಚು ಮಹತ್ವ ನೀಡಿದನು. ಕಿಟೊ-ರ್ಯು ಟೆಂಜಿನ್ ಶಿನ್ಯೊ-ರ್ಯು ಗಿಂತ ಹೆಚ್ಚು ಉತ್ತಮ ರೀತಿಯಲ್ಲಿ ಕಲಾತಂತ್ರಗಳನ್ನು ಕಲಿಸುತ್ತಿತ್ತು.
ಆರಂಭ
ಈ ಸಂದರ್ಭದಲ್ಲಿ ಕ್ಯಾನೊ ಹೊಸ ಪ್ರಯೋಗ ವಿಧಾನಗಳನ್ನು ಯೋಜಿಸುತ್ತಿದ್ದನು, ಉದಾ. "ಹೆಗಲಿನಿಂದ ಚಕ್ರಾಕಾರವಾಗಿ ಸುತ್ತಿಸುವುದು" (ಕಾಟ-ಗುರುಮಾ , ಈ ಪ್ರಯೋಗ ವಿಧಾನಕ್ಕೆ ಸ್ವಲ್ಪ ಭಿನ್ನವಾದ ಕೌಶಲವನ್ನು ಬಳಸುವ ಪಾಶ್ಚಿಮಾತ್ಯ ಕುಸ್ತಿಪಟುಗಳು ಇದನ್ನು ಫೈರ್‌ಮ್ಯಾನ್ಸ್ ಕ್ಯಾರಿ ಎನ್ನುತ್ತಾರೆ) ಮತ್ತು "ನಡುವನ್ನು ಗಾಳಿಯಲ್ಲಿ ತೇಲಿಸಿ ಎಸೆಯುವುದು" (ಉಕಿ ಗೋಶಿ ). ಆದರೆ ಆತನು ಕೇವಲ ಕಿಟೊ-ರ್ಯು ಮತ್ತು ಟೆಂಜಿನ್ ಶಿನ್ಯೊ-ರ್ಯು ವಿನ ಮಾನದಂಡಗಳನ್ನು ವಿಸ್ತರಿಸುವುದಕ್ಕಿಂತ ಹೆಚ್ಚಾಗಿ ಏನಾದರೂ ಮಾಡುವ ಬಗ್ಗೆ ಯೋಚಿಸುತ್ತಿದ್ದನು. ಹೊಸ ಆಲೋಚನೆಗಳೊಂದಿಗೆ ಕ್ಯಾನೊ ಪ್ರಬಲ ವೈಜ್ಞಾನಿಕ ನಿಯಮಗಳ ಆಧಾರದ ಪ್ರಯೋಗ ವಿಧಾನಗಳೊಂದಿಗೆ, ಯುವಕರ ಶರೀರ, ಮನಸ್ಸು ಮತ್ತು ವರ್ತನೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕೇಂದ್ರೀಕರಿಸಿಕೊಂಡು ಹಾಗೂ ಕಾದಾಡುವ ಕೌಶಲಗಳ ಅಭಿವೃದ್ಧಿಯೊಂದಿಗೆ ಜುಜುಟ್ಸುವನ್ನು ಪುನಃರೂಪಿಸುವ ಆಲೋಚನೆಯನ್ನು ಹೊಂದಿದ್ದನು. 1882ರ ಮೇಯಲ್ಲಿ ತನ್ನ 22ನೇ ವಯಸ್ಸಿನಲ್ಲಿ ವಿಶ್ವವಿದ್ಯಾನಿಲಯದ ಪದವಿಯನ್ನು ಮುಗಿಸುವ ಹೊತ್ತಿಗೆ ಕ್ಯಾನೊ ಐಕುಬೊ ಶಾಲೆಯ ಒಂಬತ್ತು ವಿದ್ಯಾರ್ಥಿಗಳಿಗೆ ಕಾಮಕುರದಲ್ಲಿನ ಬೌದ್ಧ ದೇವಾಲಯ ಐಶೊ-ಜಿಯಲ್ಲಿ ಜುಜುಟ್ಸುವನ್ನು ಕಲಿಸಲು ಆರಂಭಿಸಿದನು. ಐಕುಬೊ ವಾರಕ್ಕೆ ಮೂರು ಬಾರಿ ಈ ದೇವಾಲಯಕ್ಕೆ ಬಂದು ಆತನಿಗೆ ಕಲಿಸಿ ಕೊಡಲು ಸಹಾಯ ಮಾಡುತ್ತಿದ್ದನು. ಆದರೂ ಆ ದೇವಾಲಯವು "ಕೊಡೊಕಾನ್" ಅಥವಾ "ಮಾರ್ಗವನ್ನು ಕಲಿಸಿಕೊಡುವ ಸ್ಥಳ" ಎಂಬ ಹೆಸರನ್ನು ಪಡೆಯಲು ಎರಡು ವರ್ಷಗಳು ಬೇಕಾದವು ಮತ್ತು ಅದುವರೆಗೆ ಕ್ಯಾನೊ ಕಿಟೊ-ರ್ಯು ವಿನಲ್ಲಿ "ಮಾಸ್ಟರ್" ಎಂಬ ಹೆಸರನ್ನು ಪಡೆದಿರಲಿಲ್ಲ, ಕಿಟೊ-ರ್ಯುವನ್ನು ಈಗ ಕೊಡೊಕಾನ್‌ನ ಆಧಾರವೆಂದು ಪರಿಗಣಿಸಲಾಗುತ್ತದೆ.
ಜೂಡೋ[೫] ವನ್ನು ಆರಂಭದಲ್ಲಿ ಕ್ಯಾನೊ ಜಿಯು-ಜಿಟ್ಸು ಅಥವಾ ಕ್ಯಾನೊ ಜಿಯು-ಡೊ ಎಂದು ಕರೆಯಲಾಗುತ್ತಿತ್ತು. ಇದನ್ನು ನಂತರ ಕೊಡೊಕಾನ್ ಜಿಯು-ಡೊ ಅಥವಾ ಸರಳವಾಗಿ ಜಿಯು-ಡೊ ಅಥವಾ ಜೂಡೋ ಎಂದು ಕರೆಯಲಾಯಿತು. ಆರಂಭಿಕ ದಿನಗಳಲ್ಲಿ ಇದನ್ನು ಸಾಮಾನ್ಯವಾಗಿ ಸರಳವಾಗಿ ಜಿಯು-ಜಿಟ್ಸು ಎಂದೂ ಸೂಚಿಸಲಾಗುತ್ತಿತ್ತು.[೬]
ಜೂಡೋದ ಅರ್ಥ
ಜೂಡೋ: "ಸೌಜನ್ಯವನ್ನು ಪಡೆಯುವ ಮಾರ್ಗ".
"ಜೂಡೋ" ಪದವು "ಜುಜುಟ್ಸು"ವಿನದೇ ಭಾವಾರ್ಥವನ್ನು ಹೊಂದಿದೆ: "jū" (柔?) ಇದು ಸಂದರ್ಭಕ್ಕನುಗುಣವಾಗಿ "ಸೌಜನ್ಯ", "ಮೃದುತ್ವ", "ವಿನಯತೆ" ಮತ್ತು "ಸರಳ" ಎಂಬ ಅರ್ಥವನ್ನು ಕೊಡುತ್ತದೆ. ಜು ವನ್ನು ಅನುವಾದಗೊಳಿಸುವ ಅಂತಹ ಪ್ರಯತ್ನಗಳು ತಪ್ಪು ಅರ್ಥ ನೀಡುತ್ತವೆ. ಈ ಪದಗಳಲ್ಲಿ ಜು ಪದದ ಬಳಕೆಯು "soft method" (柔法 jūhō?)ರ ಕದನ ಕಲೆಗಳಿಗೆ ಸ್ಪಷ್ಟ ಸೂಚನೆಯಾಗಿದೆ. ಈ ಸರಳ ವಿಧಾನವು ವಿರೋಧಿಯನ್ನು ಸೋಲಿಸಲು ಪರೋಕ್ಷವಾಗಿ ಬಲ ಪ್ರಯೋಗಿಸುವುದನ್ನು ನಿರೂಪಿಸುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ವಿರೋಧಿಯ ಬಲವನ್ನು ಅವನ ವಿರುದ್ಧ ಬಳಸುವ ಮತ್ತು ಬದಲಾಗುವ ಪರಿಸ್ಥಿತಿಗೆ ಉತ್ತಮ ರೀತಿಯಲ್ಲಿ ಸರಿಹೊಂದಿಸಿಕೊಳ್ಳುವ ನಿಯಮವಾಗಿದೆ. ಉದಾಹರಣೆಗಾಗಿ, ದಾಳಿಕಾರನು ವಿರೋಧಿಯನ್ನು ತಳ್ಳಬೇಕೆಂದರೆ ಆತನು ತನ್ನ ವಿರೋಧಿಯು ಬದಿಗೆ ಸರಿಯುವಂತೆ ನೋಡಿಕೊಳ್ಳಬೇಕು ಮತ್ತು ಆತನ ಚಲನೆಯೇ (ಹೆಚ್ಚಾಗಿ ಕಾಲಿನ ಸಹಾಯದಿಂದ ಮುಗ್ಗರಿಸುವಂತೆ ಮಾಡಿ) ಆತನನ್ನು ಮುಂದಕ್ಕೆ ಎಸೆಯುವಂತೆ ಮಾಡಬೇಕು (ಇದಕ್ಕೆ ವಿರುದ್ಧವಾದುದನ್ನು ಎಳೆಯುವ ಸಂದರ್ಭದಲ್ಲಿ ಉಪಯುಕ್ತಕಾರಿಯಾಗಿರುತ್ತದೆ). ಕ್ಯಾನೊವಿಗೆ ಜುಜುಟ್ಸು ಬೇರ್ಪಟ್ಟ ತಂತ್ರಗಳ ಗುಂಪಾಗಿ ಕಂಡುಬಂದಿತು ಹಾಗೂ ಆತನು ಇದನ್ನು "ಗರಿಷ್ಠ ಪರಿಣಾಮಕಾರಿ"ಯೆಂದು ಭಾವಿಸಿದ ನಿಯಮಕ್ಕೆ ಅನುಸಾರವಾಗಿ ಏಕೀಕರಿಸಲು ಪ್ರಯತ್ನಿಸಿದನು. ಕೇವಲ ಅತಿ ಹೆಚ್ಚಿನ ಸಾಮರ್ಥ್ಯವನ್ನು ಅವಲಂಬಿಸಿದ್ದ ಜುಜುಟ್ಸು ಪ್ರಯೋಗ ವಿಧಾನಗಳನ್ನು ಬಿಟ್ಟುಬಿಡಲಾಯಿತು ಅಥವಾ ಅವನ್ನು ಪರಿವರ್ತಿಸಿ ವಿರೋಧಿಯ ಬಲವನ್ನು ಪುನಃನಿರ್ದೇಶಿಸಲು, ವಿರೋಧಿಯನ್ನು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಲು ಅಥವಾ ಉತ್ಕೃಷ್ಟ ಸಾಮರ್ಥ್ಯವನ್ನು ಉಪಯೋಗಕ್ಕೆ ಬರುವಂತೆ ಮಾಡಲು ಬಳಸಲಾಯಿತು.
ಜೂಡೋ ಮತ್ತು ಜುಜುಟ್ಸುವಿನ ಎರಡನೇ ಅಕ್ಷರಗಳು ಭಿನ್ನವಾಗಿವೆ. jujutsu (柔術 jūjutsu?) ಅಂದರೆ "ಕಲೆ", "ವಿಜ್ಞಾನ" ಅಥವಾ ಮೃದುತ್ವದ "ಪ್ರಯೋಗ ವಿಧಾನಗಳು" ಹಾಗೂ judo (柔道 jūdō?) ಅಂದರೆ ಮೃದುತ್ವದ "ಮಾರ್ಗ". ಮಾರ್ಗ, ರಸ್ತೆ ಅಥವಾ ಪಥ ಎಂಬರ್ಥವಿರುವ "dō" (道?) (ಮತ್ತು ಇದು "ಟಾವೊ" ಎಂಬ ಚೈನೀಸ್ ಪದ) ತಾತ್ತ್ವಿಕ ಮಹತ್ವವನ್ನು ಹೊಂದಿದೆ. ಇದು ಬುಡೊ ಮತ್ತು ಬುಜುಟ್ಸುವಿನ ನಡುವಿನಂತಹುದೇ ವ್ಯತ್ಯಾಸವಾಗಿದೆ. ಈ ಪದದ ಬಳಕೆಯು ಸಾಯಿಸುವುದೇ ಮೂಲ ಉದ್ದೇಶವಾಗಿದ್ದ ಪುರಾತನ ಕದನ ಕಲೆಗಳಿಗಿಂತ ಭಿನ್ನವಾಗಿದೆ. ಕ್ಯಾನೊ ಜೂಡೋವ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ತನ್ನನ್ನು ತಾನು ನಿಯಂತ್ರಿಸಲು ಮತ್ತು ಸುಧಾರಿಸಿಕೊಳ್ಳುವ ಒಂದು ಸಾಧನವೆಂದು ಪರಿಗಣಿಸಿದನು. ಆತನು ಗರಿಷ್ಠ ಪರಿಣಾಮದ ಈ ದೈಹಿಕ ನಿಯಮವನ್ನು ದಿನನಿತ್ಯದ ಜೀವನದಲ್ಲೂ ಬಳಸಬಹುದೆಂದು ಸೂಚಿಸಿದನು. ಅಲ್ಲದೆ ಇದನ್ನು "ಅನ್ಯೋನ್ಯತೆಯ ಅಭಿವೃದ್ಧಿ"ಯೆಂದೂ ನಿರೂಪಿಸಿದನು. ಇದಕ್ಕೆ ಸಂಬಂಧಿಸಿದಂತೆ ಜೂಡೋವನ್ನು ಡೋಜೋದ ಎಲ್ಲೆಯಾಚೆಗಿನ ಜೀವನಕ್ಕೆ ಸಮಗ್ರತಾ ದೃಷ್ಟಿಯ ಮಾರ್ಗವಾಗಿ ಕಾಣಲಾಯಿತು.
ಜೂಡೋಕ (ಅಭ್ಯಾಸನಿರತ)
ಜೂಡೋ ಅಭ್ಯಾಸನಿರತನನ್ನು ಜೂಡೋಕ ಅಥವಾ "ಜೂಡೋ ಅಭ್ಯಾಸನಿರತ"ನೆಂದು ಕರೆಯಲಾಗುತ್ತದೆ. ಆದರೂ ಸಾಂಪ್ರದಾಯಿಕವಾಗಿ ಕೇವಲ 4ನೇ ಡ್ಯಾನ್ ಅಥವಾ ಅದಕ್ಕಿಂತ ಹೆಚ್ಚಿನವರನ್ನು ಮಾತ್ರ "ಜೂಡೋಕ" ಎನ್ನಲಾಗುತ್ತದೆ. ಉತ್ತರ ಪದ -ಕ ವನ್ನು ನಾಮಪದಕ್ಕೆ ಸೇರಿಸಿದಾಗ, ಆ ವಿಷಯದಲ್ಲಿ ವಿಶೇಷ ಜ್ಞಾನವನ್ನು ಪಡೆದ ಅಥವಾ ಪರಿಣಿತನಾದ ವ್ಯಕ್ತಿಯೆಂಬ ಅರ್ಥವನ್ನು ನೀಡುತ್ತದೆ. 4ನೇ ಡ್ಯಾನ್ ಶ್ರೇಣಿಗಿಂತ ಕೆಳಗಿನ ಅಭ್ಯಾಸನಿರತರನ್ನು ಕೆಂಕಿಯು-ಸೈ ಅಥವಾ "ತರಬೇತಿ ಪಡೆಯುವವರೆಂದು" ಕರೆಯಲಾಗುತ್ತದೆ. ಜೂಡೋಕದ ಆಧುನಿಕ ಅರ್ಥವು ಯಾವುದೇ ಹಂತದ ಪರಿಣತಿಯ ಜೂಡೋ ಅಭ್ಯಾಸನಿರತರನ್ನು ಸೂಚಿಸುತ್ತದೆ.
ಜೂಡೋ ತರಬೇತಿದಾರನನ್ನು ಸೆನ್ಸೈ ಎಂದು ಕರೆಯುತ್ತಾರೆ. ಸೆನ್ಸೈ ಪದವು ಸೆನ್ ಅಥವಾ ಸಾಕಿ (ಮೊದಲು) ಮತ್ತು ಸೈ ಯಿಂದ (ಜೀವನ) ಬಂದಿದೆ - ಅಂದರೆ ನಿಮಗಿಂತ ಮೊದಲಿಗರು. ಪಾಶ್ಚಿಮಾತ್ಯ ಡೋಜೋಗಳಲ್ಲಿ, ಡ್ಯಾನ್ ಶ್ರೇಣಿಯ ಮಾರ್ಗದರ್ಶಕರನ್ನು ಸೆನ್ಸೈ ಎಂದು ಕರೆಯುವುದು ಸಾಮಾನ್ಯವಾಗಿತ್ತು. ಸಾಂಪ್ರದಾಯಿಕವಾಗಿ, ಆ ಹೆಸರು 4ನೇ ಡ್ಯಾನ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣೀಕೃತರಿಗೆ ಮೀಸಲಾಗಿತ್ತು.
ಜೂಡೋಗಿ (ಸಮವಸ್ತ್ರ)
ಜೂಡೋ ಅಭ್ಯಾಸನಿರತರು ಜೂಡೋವನ್ನು ಅಭ್ಯಾಸ ಮಾಡಲು ಸಾಂಪ್ರದಾಯಿಕವಾಗಿ ಬಿಳಿ ಸಮವಸ್ತ್ರವನ್ನು ಧರಿಸುತ್ತಾರೆ, ಅದನ್ನು ಜೂಡೋಗಿ ಎಂದು ಕರೆಯಲಾಗುತ್ತದೆ, ಅಂದರೆ "ಜೂಡೋ ಉಡುಪು". ಕೆಲವೊಮ್ಮೆ ಈ ಪದವನ್ನು ಸರಳವಾಗಿ ಸಣ್ಣದಾಗಿ ಗಿ (ಸಮವಸ್ತ್ರ) ಎಂದು ಹೇಳಲಾಗುತ್ತದೆ. ಜೂಡೋಗಿ ಯನ್ನು ಮೊದಲು ಕ್ಯಾನೊ 1907ರಲ್ಲಿ ರೂಪಿಸಿದನು. ನಂತರ ಅಂತಹುದೇ ಸಮವಸ್ತ್ರಗಳನ್ನು ಅನೇಕ ಇತರ ಕದನ ಕಲೆಗಳಿಂದ ಆರಿಸಿಕೊಳ್ಳಲಾಯಿತು. ಆಧುನಿಕ ಜೂಡೋಗಿ ಯು ಬಿಳಿ ಅಥವಾ ನೀಲಿ ಬಣ್ಣದ ಪಟ್ಟಿಗಳಿರುವ ಹತ್ತಿಯ ಪ್ಯಾಂಟು ಮತ್ತು ಅದಕ್ಕೆ ಸರಿಹೊಂದುವ ಬಿಳಿ ಅಥವಾ ನೀಲಿ ಬಣ್ಣದ ಜಾಕೆಟ್ಅನ್ನು ಒಳಗೊಂಡಿರುತ್ತದೆ, ಅದರ ಮೇಲೆ ಒಂದು ಬೆಲ್ಟ್ಅನ್ನು (ಓಬಿ ) ಬಿಗಿಯಲಾಗಿರುತ್ತದೆ. ಆ ಬೆಲ್ಟ್‌ಗೆ ಸಾಮಾನ್ಯವಾಗಿ ಶ್ರೇಣಿಯನ್ನು ಗುರುತಿಸುವ ಬಣ್ಣ ನೀಡಲಾಗಿರುತ್ತದೆ. ಜಾಕೆಟ್ ಕೈಕೈ ಮಿಲಾಯಿಸಿಕೊಳ್ಳುವುದನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕಾಗಿರುತ್ತದೆ. ಆದ್ದರಿಂದ ಅದು ಕರಾಟೆಯ ಸಮವಸ್ತ್ರಕ್ಕಿಂತ (ಕರಾಟೆಗಿ ) ಹೆಚ್ಚು ದಪ್ಪವಾಗಿರುತ್ತದೆ. ಜೂಡೋಗಿಯನ್ನು ವಿರೋಧಿಯು ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಅದೇ ಕರಾಟೆಗಿಯನ್ನು ವಿರೋಧಿಗೆ ಅದರ ಮೇಲೆ ಹಿಡಿತ ಸಿಗಲಾರದಂತೆ ನುಣುಪು ಬಟ್ಟೆಯಿಂದ ತಯಾರಿಸಲಾಗಿರುತ್ತದೆ.
ಆಧುನಿಕ ನೀಲಿ ಜೂಡೋಗಿಯ ಬಳಕೆಯನ್ನು ಮೊದಲು ಆಂಟನ್ ಗೀನ್ಸಿಂಕ್ 1986ರ ಮಾಸ್‌ಟ್ರಿಚ್ಟ್ IJF DC ಸಭೆಯಲ್ಲಿ ಸೂಚಿಸಿದನು.[೭] ಸ್ಪರ್ಧೆಯಲ್ಲಿ ತೀರ್ಪುಗಾರರಿಗೆ, ರೆಫರಿಗಳಿಗೆ ಮತ್ತು ವೀಕ್ಷಕರಿಗೆ ಸ್ಪರ್ಧಿಗಳನ್ನು ಪ್ರತ್ಯೇಕಿಸಲು ಸುಲಭವಾಗುವುದಕ್ಕಾಗಿ ನೀಲಿ ಜೂಡೋಗಿ ಯನ್ನು ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಮಾತ್ರ ಧರಿಸುತ್ತಾರೆ. ಜಪಾನಿನಲ್ಲಿ ಇಬ್ಬರೂ ಜೂಡೋಕ ಬಿಳಿ ಜೂಡೋಗಿಯನ್ನು ಧರಿಸುತ್ತಾರೆ ಮತ್ತು ಸಾಂಪ್ರದಾಯಿಕ ಕೆಂಪು ಹೆಗಲಪಟ್ಟಿಯು (ಜಪಾನಿನ ಧ್ವಜದ ಬಣ್ಣಗಳ ಆಧಾರದಲ್ಲಿ) ಒಬ್ಬ ಸ್ಪರ್ಧಿಯ ಬೆಲ್ಟ್‌ನಲ್ಲಿ ಕೂಡಿಸಲಾಗಿರುತ್ತದೆ. ಜಪಾನಿನಿಂದ ಹೊರಗೆ, ಸಣ್ಣ ಸ್ಪರ್ಧೆಗಳಲ್ಲಿ ಅನುಕೂಲಕ್ಕಾಗಿ ಬಣ್ಣಗಳಿಂದ ಕೂಡಿದ ಹೆಗಲುಪಟ್ಟಿಯನ್ನೂ ಬಳಸಲಾಗುತ್ತದೆ. ನೀಲಿ ಜೂಡೋಗಿ ಯು ಪ್ರಾದೇಶಿಕ ಅಥವಾ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಮಾತ್ರ ಕಡ್ಡಾಯವಾಗಿರುತ್ತದೆ. ಜಪಾನಿನ ಅಭ್ಯಾಸನಿರತರು ಮತ್ತು ವೃತ್ತಿಪರರು ನೀಲಿ ಬಣ್ಣದ ಜೂಡೋಗಿ ಯ ಬಗ್ಗೆ ಅಷ್ಟೊಂದು ಉತ್ತಮ ಅಭಿಪ್ರಾಯವನ್ನು ಹೊಂದಿರಲಿಲ್ಲ.[೭]
ಪ್ರಯೋಗ ವಿಧಾನಗಳು ಮತ್ತು ಅಭ್ಯಾಸ
ಜೂಡೋ ವಿವಿಧ ರೀತಿಯ ಉರುಳಿಸುವಿಕೆ, ಕೆಡವುದು, ಒಗೆತ, ತಡೆತ, ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವುದು, ಕೀಲುಗಳಿಗೆ ಪಟ್ಟು-ಹಾಕುವುದು ಮತ್ತು ಹೊಡೆತಗಳನ್ನು ಒಳಗೊಳ್ಳುತ್ತಾದರೂ, ಇದು ಪ್ರಾಥಮಿಕವಾಗಿ throwing (投げ技 nage-waza?) ಮತ್ತು groundwork (寝技 ne-waza?) ಮೇಲೆ ಕೇಂದ್ರೀಕರಿಸುತ್ತದೆ. ಒಗೆತಗಳನ್ನು ಎರಡು ಗುಂಪುಗಳ ಪ್ರಯೋಗ ವಿಧಾನಗಳಾಗಿ ವಿಂಗಡಿಸಲಾಗುತ್ತದೆ, ನಿಂತುಕೊಂಡು ಮಾಡುವ ಪ್ರಯೋಗ ವಿಧಾನಗಳು (ಟಾಶಿ-ವಾಜ ) ಮತ್ತು sacrifice techniques (捨身技 sutemi-waza?). ನಿಂತುಕೊಂಡು ಮಾಡುವ ಪ್ರಯೋಗ ವಿಧಾನಗಳನ್ನು ಮತ್ತೆ hand techniques (手技 te-waza?), hip techniques (腰技 koshi-waza?) ಮತ್ತು foot and leg techniques (足技 ashi-waza?) ಆಗಿ ವಿಂಗಡಿಸಲಾಗುತ್ತದೆ. ಬಿಟ್ಟುಕೊಡುವ ಪ್ರಯೋಗ ವಿಧಾನಗಳನ್ನು those in which the thrower falls directly backwards (真捨身技 ma-sutemi-waza?) ಮತ್ತು those in which he falls onto his side (橫捨身技 yoko-sutemi-waza?) ಆಗಿ ವಿಂಗಡಿಸಲಾಗುತ್ತದೆ.
ನೆಲದ ಮೇಲಿನ ಮುಷ್ಟಿ ಯುದ್ಧದ ಪ್ರಯೋಗ ವಿಧಾನಗಳನ್ನು (ನೆ-ವಾಜ) attacks against the joints or joint locks (関節技 kansetsu-waza?), strangleholds or chokeholds (絞技 shime-waza?) ಮತ್ತು holding or pinning techniques (押込技 osaekomi-waza?) ಆಗಿ ವಿಭಾಗಿಸಲಾಗುತ್ತದೆ.
ಒಂದು ರೀತಿಯ ಮುಷ್ಟಿಯುದ್ಧದ ವರಿಸೆಯನ್ನು ಜೂಡೋದಲ್ಲಿ ಅಭ್ಯಾಸ ಮಾಡಲಾಗುತ್ತದೆ, ಇದನ್ನು randori (乱取り?) ಎಂದು ಕರೆಯಲಾಗುತ್ತದೆ, ಅಂದರೆ "ಸ್ವತಂತ್ರ ಅಭ್ಯಾಸ". ರಾಂಡೊರಿ ಯಲ್ಲಿ ಇಬ್ಬರು ಪ್ರತಿಸ್ಪರ್ಧಿಗಳು ಯಾವುದೇ ರೀತಿಯ ಜೂಡೋ ಒಗೆತ ಅಥವಾ ಕೈಕೈ ಮಿಲಾಯಿಸುವ ಪ್ರಯೋಗ ವಿಧಾನದೊಂದಿಗೆ ಪರಸ್ಪರ ದಾಳಿ ಮಾಡಬಹುದು. ಒದೆಯುವ ಮತ್ತು ಮುಷ್ಟಿಯೇಟಿಂತಹ ಹೊಡೆಯುವ ಪ್ರಯೋಗ ವಿಧಾನಗಳು (ಅಟೆಮಿ-ವಾಜ ) ಚಾಕು ಮತ್ತು ಖಡ್ಗದ ಪ್ರಯೋಗ ವಿಧಾನಗಳೊಂದಿಗೆ ಕಾಟ ದಲ್ಲಿ ಉಳಿದುಕೊಂಡಿವೆ. ಈ ರೀತಿಯ ಶಿಕ್ಷಣಶಾಸ್ತ್ರವು ಸಾಮಾನ್ಯವಾಗಿ ಹೆಚ್ಚಿನ ಶ್ರೇಣಿಯ ಅಭ್ಯಾಸನಿರತರಿಗೆ (ಉದಾ. ಕಿಮೆ-ನೊ--ಕಾಟ ದಲ್ಲಿ) ಮೀಸಲಾಗಿರುತ್ತದೆ. ಆದರೆ ಇದು ಸ್ಪರ್ಧೆಯಲ್ಲಿ ನಿಷೇಧಿಸಲ್ಪಟ್ಟಿದೆ ಮತ್ತು ಸುರಕ್ಷತೆಯ ಕಾರಣದಿಂದ ಸಾಮಾನ್ಯವಾಗಿ ರಾಂಡೊರಿ ಯಲ್ಲಿ ಪ್ರತಿಬಂಧಿಸಲ್ಪಟ್ಟಿದೆ. ಸುರಕ್ಷತೆಯ ಕಾರಣಗಳಿಂದಾಗಿ, ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ, ಕೀಲುಗಳಿಗೆ ಪಟ್ಟು ಹಾಕುವ ಮತ್ತು ಬಿಟ್ಟುಕೊಡುವ ಪ್ರಯೋಗ ವಿಧಾನಗಳು ವಯಸ್ಸಿನ ಅಥವಾ ಶ್ರೇಣಿಯ ನಿರ್ಬಂಧಗಳನ್ನು ಹೊಂದಿರುತ್ತವೆ. ಉದಾಹರಣೆಗಾಗಿ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉಸಿರು ಕಾಟ್ಟುವಂತೆ ಬಿಗಿಯಾಗಿ ಹಿಡಿಯುವ ಪ್ರಯೋಗ ವಿಧಾನವನ್ನು ಬಳಸಲು ಸ್ಪರ್ಧಿಯು 13 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವನಾಗಿರಬೇಕು ಹಾಗೂ ಬಾಹುಗಳಿಗೆ ಪಟ್ಟು ಹಾಕಲು 16 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವನಾಗಿರಬೇಕು.
ರಾಂಡೊರಿ ಮತ್ತು ಪಂದ್ಯಗಳಲ್ಲಿ (ಶಿಯೈ ), ವಿರೋಧಿಯು ಯಶಸ್ವಿಯಾಗಿ ಉಸಿರು ಕಾಟ್ಟುವಂತೆ ಬಿಗಿಯಾಗಿ ಹಿಡಿದಾಗ ಅಥವಾ ಕೀಲುಗಳಿಗೆ ಪಟ್ಟು ಹಾಕಿದಾಗ ಮತ್ತೊಬ್ಬನು ಶರಣಾದರೆ ಅಥವಾ ಕನಿಷ್ಠ ಎರಡು ಬಾರಿ ಕೆಳಕ್ಕೆ ಬಿದ್ದರೆ ಅದನ್ನು ಸ್ಪಷ್ಟವಾಗಿ ಸೋಲು ಎಂದು ಪರಿಗಣಿಸಲಾಗುತ್ತದೆ. ಇದು ಸಂಭವಿಸಿದಾಗ ಪಂದ್ಯ ಕೊನೆಗೊಳ್ಳುತ್ತದೆ, ಕೆಳಕ್ಕೆ ಬಿದ್ದ ವ್ಯಕ್ತಿಯು ಸೋಲುತ್ತಾನೆ ಮತ್ತು ಉಸಿರು ಕಾಟ್ಟುವಂತೆ ಬಿಗಿಯಾಗಿ ಹಿಡಿಯುವುದು ಮತ್ತು ಕೀಲುಗಳಿಗೆ ಪಟ್ಟು ಹಾಕುವುದು ಅಂತ್ಯಗೊಳ್ಳುತ್ತದೆ.
ಕಾಟ ರೂಪಗಳು
ಕಾಟ ರೂಪಗಳು ದಾಳಿ ಮಾಡುವ ಮತ್ತು ರಕ್ಷಿಸಿಕೊಳ್ಳುವ ಪೂರ್ವ-ನಿಯೋಜಿತ ಕ್ರಮಗಳಾಗಿವೆ, ಇವನ್ನು ಜೂಡೋದಲ್ಲಿ ಪ್ರಯೋಗ ವಿಧಾನಗಳನ್ನು ಉತ್ತಮಗೊಳಿಸುವ ಉದ್ದೇಶಕ್ಕಾಗಿ ಅಭ್ಯಾಸ ಮಾಡಲಾಗುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ಅವುಗಳ ಮುಖ್ಯ ಉದ್ದೇಶಗಳೆಂದರೆ ಜೂಡೋದ ಮೂಲ ನಿಯಮಗಳನ್ನು ಸ್ಪಷ್ಟಪಡಿಸುವುದು, ಒಂದು ಪ್ರಯೋಗ ವಿಧಾನವನ್ನು ಸರಿಯಾದ ರೀತಿಯಲ್ಲಿ ಬಳಸುವುದು, ಜೂಡೋ ಆಧರಿಸಿರುವ ದಾರ್ಶನಿಕ ಸೂತ್ರಗಳನ್ನು ಕಲಿಸುವುದು, ಸ್ಪರ್ಧೆಯಲ್ಲಿ ಪ್ರವೇಶವಿಲ್ಲದ ಪ್ರಯೋಗ ವಿಧಾನಗಳನ್ನು ಕಲಿಯಲು ಅವಕಾಶ ನೀಡುವುದು ಮತ್ತು ಐತಿಹಾಸಿಕ ಮಹತ್ವವನ್ನು ಪಡೆದ ಆದರೆ ಆಧುನಿಕ ಜೂಡೋದಲ್ಲಿ ಬಳಸದ ಪುರಾತನ ಪ್ರಯೋಗ ವಿಧಾನಗಳನ್ನು ಉಳಿಸುವುದು.
ವಿವಿಧ ಕಾಟ ಬಗೆಗಿನ ಜ್ಞಾನವು ಹೆಚ್ಚಿನ ಶ್ರೇಣಿಯನ್ನು ಪಡೆಯಲು ಅಗತ್ಯವಾಗಿರುತ್ತದೆ.
ಕೊಡೊಕಾನ್ ಗುರುತಿಸಿದ ಒಟ್ಟು ಏಳು ಕಾಟ ರೂಪಗಳು ಅಸ್ತಿತ್ವದಲ್ಲಿವೆ:
- ಸ್ವಸಂತ್ರ ಅಭ್ಯಾಸ ರೂಪಗಳು ರಾಂಡೊರಿ ), ಇದು ಎರಡು ಕಾಟ ರೂಪಗಳನ್ನು ಒಳಗೊಂಡಿದೆ:
- ಎಸೆಯುವ ರೂಪಗಳು (ನೇಗ್ ನೊ ಕಾಟ )
- ಕೈಕೈ ಮಿಲಾಯಿಸುವ ರೂಪಗಳು (ಕಾಟಮಿ ನೊ ಕಾಟ )
- ಹಳೆಯ ಶೈಲಿಯ ಸ್ವ-ರಕ್ಷಿಸಿಕೊಳ್ಳುವ ರೂಪಗಳು (ಕಿಮೆ ನೊ ಕಾಟ )
- ಆಧುನಿಕ ಸ್ವ-ರಕ್ಷಿಸಿಕೊಳ್ಳುವ ರೂಪಗಳು (ಕೊಡೊಕಾನ್ ಗೋಶಿನ್ ಜುಟ್ಸು )
- "ಸೌಜನ್ಯ"ದ ರೂಪಗಳು (ಜು ನೊ ಕಾಟ )
- ಐದು ರೂಪಗಳು (ಇಟ್ಸುಟ್ಸು ನೊ ಕಾಟ )
- ಪುರಾತನ ರೂಪಗಳು (ಕೊಶಿಕಿ ನೊ ಕಾಟ ) [೪]
- ಗರಿಷ್ಠ-ಪರಿಣಾಮಕಾರಿತ್ವದ ರಾಷ್ಟ್ರೀಯ ದೈಹಿಕ ಶಿಕ್ಷಣದ ಕಾಟ (ಸೈರ್ಯೊಕು ಜೆನ್ಯೊ ಕೊಕುಮಿನ್ ಟಾಯಿಕು ನೊ ಕಾಟ )
ಇತರ ಕಾಟ ರೂಪಗಳೂ ಇವೆ, ಅವನ್ನು ಕೊಡೊಕಾನ್‌ನಿಂದ ಅಧಿಕೃತವಾಗಿ ಗುರುತಿಸಲಾಗುವುದಿಲ್ಲ ಆದರೂ ಅವು ಬಳಕೆಯಲ್ಲಿವೆ. ಇವಕ್ಕೆ ಪ್ರಮುಖ ಉದಾಹರಣೆಯೆಂದರ ಗೊ ನೊ ಸೆನ್ ನೊ ಕಾಟ, ಇದು ಹೊಡೆತಗಳಿಗೆ ವಿರುದ್ಧವಾಗಿ ದಾಳಿ ಮಾಡುವುದನ್ನು ಕೇಂದ್ರೀಕರಿಸುವ ಒಂದು ಕಾಟ ರೂಪವಾಗಿದೆ.
ರಾಂಡೊರಿ (ಮುಷ್ಟಿ ಯುದ್ಧದ ವರಿಸೆ)
ಜೂಡೋ ರಾಂಡೊರಿ ಎಂಬ ಸ್ವತಂತ್ರ-ಶೈಲಿಯ ಮುಷ್ಟಿ ಯುದ್ಧದ ವರಿಸೆಗೆ ಅದರ ತರಬೇತಿಯ ಪ್ರಮುಖ ರೂಪಗಳಲ್ಲಿ ಒಂದಾಗಿ ಮಹತ್ವ ನೀಡುತ್ತದೆ. ಈ ಕಾದಾಟದ ಸಂದರ್ಭದಲ್ಲಿ ಭಾಗಶಃ ಸಮಯವನ್ನು ನಿಂತುಕೊಂಡು ಮಾಡುವ ಮುಷ್ಟಿ ಯುದ್ಧದಲ್ಲಿ ಕಳೆಯಲಾಗುತ್ತದೆ, ಇದನ್ನು ಟಾಶಿ-ವಾಜ ಎಂದು ಕರೆಯಲಾಗುತ್ತದೆ, ಮತ್ತು ಉಳಿದ ಸಮಯವನ್ನು ನೆಲದ ಮೇಲೆ ಕಳೆಯಲಾಗುತ್ತದೆ, ಇದನ್ನು ನೆ-ವಾಜ ಎನ್ನಲಾಗುತ್ತದೆ. ನಿಯಮಗಳಿಗೆ ಒಳಪಟ್ಟಂತೆ ಮುಷ್ಟಿ ಯುದ್ಧ ಮಾಡುವುದು ಜುಜುಟ್ಸುಕಾ ಪ್ರಯೋಗಿಸುತ್ತಿದ್ದ ಕೇವಲ ತಮ್ಮ ಸ್ವಂತದ ಪ್ರಯೋಗ ವಿಧಾನಗಳನ್ನು ಬಳಸುವುದಕ್ಕಿಂತ ಹೆಚ್ಚು ಚುರುಕಿನ ಪ್ರಯೋಗವಾಗಿರುತ್ತದೆ. ಸಂಪೂರ್ಣ ಸಾಮರ್ಥ್ಯವನ್ನು ಬಳಸುವುದು ದೈಹಿಕ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾಯು ಮತ್ತು ಹೃದಯ-ನಾಳ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಮಾನಸಿಕ ವಿಷಯಕ್ಕೆ ಸಂಬಂಧಿಸಿದಂತೆ ಇದು ನಿರ್ವಹಣಾ ಚಾತುರ್ಯ ಮತ್ತು ಪ್ರತಿಕ್ರಿಯಿಸುವ ಸಮಯವನ್ನು ಅಭಿವೃದ್ಧಿಪಡಿಸುತ್ತದೆ ಹಾಗೂ ಇದು ಅಭ್ಯಾಸನಿರತರಿಗೆ ವಿರೋಧಿಯ ವಿರುದ್ಧ ಪ್ರಯೋಗ ವಿಧಾನಗಳನ್ನು ಬಳಸುವುದನ್ನು ಕಲಿಯಲು ಸಹಾಯ ಮಾಡುತ್ತದೆ. ಜೂಡೋಕರಲ್ಲಿರುವ ಒಂದು ಸಾಮಾನ್ಯ ಮಾತೆಂದರೆ "ಜೂಡೋದ ಉತ್ತಮ ತರಬೇತಿಯೆಂದರೆ ಜೂಡೋ".
ಅನೇಕ ರೀತಿಯ ಮುಷ್ಟಿ ಯುದ್ಧದ ಅಭ್ಯಾಸಗಳಿವೆ, ಉದಾ. ಜು ರೆನ್ಶು (ಇಬ್ಬರೂ ಜೂಡೋಕ ತುಂಬಾ ಸೌಮ್ಯವಾಗಿ ದಾಳಿ ಮಾಡುತ್ತಾರೆ, ಯಾವುದೇ ಪ್ರತಿರೋಧವು ಕಂಡುಬರುವುದಿಲ್ಲ); ಮತ್ತು ಕಕರಿ ಜೈಕೊ (ಕೇವಲ ಒಬ್ಬ ಜೂಡೋಕ ದಾಳಿ ಮಾಡುತ್ತಾನೆ, ಮತ್ತೊಬ್ಬನು ಏಕಮಾತ್ರವಾಗಿ ರಕ್ಷಣಾತ್ಮಕ ಮತ್ತು ತಪ್ಪಿಸಿಕೊಳ್ಳುವ ಕೌಶಲಗಳನ್ನು ಅವಲಂಬಿಸುತ್ತಾನೆ, ಆದರೆ ಸಂಪೂರ್ಣ ಬಲವನ್ನು ಬಳಸುವುದಿಲ್ಲ).
ಕಾದಾಟದ ಹಂತಗಳು
ಜೂಡೋದಲ್ಲಿ ಎರಡು ಪ್ರಮುಖ ಹಂತದ ಕಾದಾಟಗಳಿವೆ: ನಿಂತುಕೊಳ್ಳುವ ಹಂತ, ಟಾಶಿ-ವಾಜ ; ಮತ್ತು ನೆಲದ ಮೇಲಿನ ಹಂತ, ನೆ-ವಾಜ ; ಎರಡು ಹಂತದಲ್ಲೂ ಅದರದೇ ಆದ (ಹೆಚ್ಚಾಗಿ ಬೇರೆಬೇರೆಯಾದ) ಪ್ರಯೋಗ ವಿಧಾನಗಳು, ನಿರ್ವಹಣಾ ಚಾತುರ್ಯಗಳು, ರಾಂಡೊರಿ , ನಿಯಮಗಳು ಮತ್ತು ಇತ್ಯಾದಿಗಳು ಇರುತ್ತವೆ. ಅಂತರವನ್ನು ಸರಿಹೊಂದಿಸಲು "ಬದಲಾವಣೆಯ" ಪ್ರಯೋಗ ವಿಧಾನಗಳಿಗಾಗಿ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ. ಜೂಡೋಕ ಒಂದು ಹಂತದಲ್ಲಿ ಹೆಚ್ಚು ಕೌಶಲ ಹೊಂದಿರಬಹುದು, ಮತ್ತೊಂದರಲ್ಲಿ ಕಡಿಮೆ ಕೌಶಲ ಹೊಂದಿರಬಹುದು, ಇದು ಅವರು ಯಾವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂಬುದನ್ನು ಆಧರಿಸಿರುತ್ತದೆ. ಆದರೂ ಹೆಚ್ಚಿನವರು ಎರಡೂ ಹಂತದಲ್ಲೂ ಸಮತೋಲನವನ್ನು ಹೊಂದಿರುತ್ತಾರೆ. ಜೂಡೋದಲ್ಲಿನ ನಿಂತುಕೊಳ್ಳುವ ಮತ್ತು ನೆಲದ ಮೇಲಿನ ಹಂತಗಳೆರಡೂ ಜೂಡೋಕರಿಗೆ ನಿಂತುಕೊಳ್ಳುವ ವಿರೋಧಿಗಳನ್ನು ಸೋಲಿಸುವ ಸಾಮರ್ಥ್ಯವನ್ನು ನೀಡುತ್ತದೆ ಹಾಗೂ ನಂತರ ಅವರನ್ನು ಭದ್ರವಾಗಿ ಹಿಡಿದುಕೊಂಡು ನೆಲದ ಮೇಲೆ ಶರಣಾಗುವಂತೆ ಮಾಡುತ್ತಾರೆ.
ನಿಂತುಕೊಳ್ಳುವ ಹಂತ
ಸ್ಪರ್ಧೆಯ ನಿಯಮಗಳ ಪ್ರಕಾರ ಹೆಚ್ಚು ಆದ್ಯತೆಯನ್ನು ಹೊಂದಿರುವ ನಿಂತುಕೊಳ್ಳುವ ಹಂತದಲ್ಲಿ, ವಿರೋಧಿಗಳು ಪರಸ್ಪರ ಎಸೆಯಲು ಪ್ರಯತ್ನಿಸುತ್ತಾರೆ ಅಥವಾ ನಿಂತುಕೊಂಡು ಕೀಲುಗಳಿಗೆ ಪಟ್ಟು-ಹಾಕುವ ಮತ್ತು ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ/ಕತ್ತು ಹಿಸುಕುವ ಸೋಲಿಸುವ ಪ್ರಯೋಗ ವಿಧಾನಗಳನ್ನು ಬಳಸುತ್ತಾರೆ. ಇವು ಈ ಹಂತದಲ್ಲಿ ನಿಯಮಬದ್ಧವಾದವುಗಳಾದರೂ, ನಿಂತುಕೊಂಡು ಮಾಡಲು ಹೆಚ್ಚು ಕಷ್ಟಕರವಾದುದರಿಂದ ಇವು ವಿರಳವಾಗಿ ಕಂಡುಬರುತ್ತವೆ.[೮] ಕೆಲವು ಜೂಡೋಕ ರು ಕೆಡವುವ ಕಲೆಯನ್ನು ಶರಣಾಗಿಸುವ ಕಲೆಯೊಂದಿಗೆ ಸೇರಿಸುವುದರಲ್ಲಿ ಹೆಚ್ಚು ಚಾತುರ್ಯವನ್ನು ಹೊಂದಿರುತ್ತಾರೆ. ಶರಣಾಗಿಸುವ ಕೌಶಲವು ನಿಂತುಕೊಂಡು ಆರಂಭವಾಗಿ ನೆಲದ ಮೇಲೆ ಕೊನೆಗೊಳ್ಳುತ್ತದೆ. ಆದರೆ ಕೀಲುಗಳಿಗೆ ಪಟ್ಟು-ಹಾಕುವುದರೊಂದಿಗೆ ಒಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ.
ಒಗೆಯುವ ಪ್ರಯೋಗ ವಿಧಾನದ (ನ್ಯಾಗೆ-ವಾಜ ) ಪ್ರಮುಖ ಉದ್ದೇಶವೆಂದರೆ ತನ್ನ ಕಾಲ ಮೇಲೆ ನಿಂತುಕೊಂಡು, ಚಲನೀಯವಾಗಿರುವ ಮತ್ತು ಅಪಾಯಕಾರಿಯಾಗಿರುವ ವಿರೋಧಿಯನ್ನು ಆತನ ಹಿಂದಿನ ಸ್ಥಿತಿಗೆ ಮರಳುವಂತೆ ಮಾಡುವುದು, ಅಲ್ಲಿ ಆತನು ಅಷ್ಟೊಂದು ಪರಿಣಾಮಕಾರಿಯಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿರೋಧಿಯನ್ನು ತನ್ನ ಹತೋಟಿಗೆ ತೆಗೆದುಕೊಂಡು, ತನ್ನನ್ನು ಪ್ರಬಲ ಸ್ಥಾನದಲ್ಲಿರಿಸುವುದು ಈ ಒಗೆಯುವ ಪ್ರಯೋಗ ವಿಧಾನದ ಪ್ರಮುಖ ಗುರಿಯಾಗಿರುತ್ತದೆ. ಈ ರೀತಿಯಲ್ಲಿ ಅಭ್ಯಾಸನಿರತರು ನಿರ್ಣಾಯಕ ಪರಿಣಾಮವನ್ನು ಬೀರಲು ಹೆಚ್ಚು ಪ್ರಬಲತೆಯನ್ನು ಹೊಂದಿರುತ್ತಾರೆ. ವಿರೋಧಿಯನ್ನು ಒಗೆಯುವ ಮತ್ತೊಂದು ಉದ್ದೇಶವೆಂದರೆ ಆತನನ್ನು ನೆಲದ ಮೇಲೆ ಬಲಯುತವಾಗಿ ಅಪ್ಪಳಿಸುವ ಮೂಲಕ ಆತನ ಶರೀರಕ್ಕೆ ಆಘಾತವನ್ನುಂಟುಮಾಡುವುದು. ವಿರೋಧಿಯು ಪ್ರಬಲವಾದ ಸಂಪೂರ್ಣ ನಿಯಂತ್ರಣದ ಒಗೆತವನ್ನು ನೀಡಿದರೆ, ಆ ಪಂದ್ಯದಲ್ಲಿ ಸಾಕಷ್ಟು ಹೆಚ್ಚುಗಾರಿಕೆಯನ್ನು ಗಳಿಸುವುದರೊಂದಿಗೆ ಪೂರ್ತಿಯಾಗಿ ಜಯಗಳಿಸಬಹುದು (ಇಪ್ಪನ್ ಮೂಲಕ), ಕಡಿಮೆ ಒಗೆತಗಳಿಗೆ ಕಡಿಮೆ ಅಂಕವನ್ನು ನೀಡಲಾಗುತ್ತದೆ. ನಿಂತುಕೊಂಡ ಭಂಗಿಯಿಂದ ಆರಂಭಗೊಳಿಸಿ ನೀಡಿದ ಒಗೆತಕ್ಕೆ ಮಾತ್ರ ಅಂಕವನ್ನು ಕೊಡಲಾಗುತ್ತದೆ.
ವೈಜ್ಞಾನಿಕ ವಿಶ್ಲೇಷಣೆ ಮತ್ತು ತಾರ್ಕಿಕ ವಿಧಾನಕ್ಕೆ ಕ್ಯಾನೊ ನೀಡಿದ ಮಹತ್ವವನ್ನು ಉಳಿಸಿಕೊಂಡು ಪ್ರಮಾಣಿತ ಕೊಡೊಕಾನ್ ಜೂಡೋ ಕಲಿಸುವ ಕಲೆಯು, ಯಾವುದೇ ಒಗೆಯುವ ಪ್ರಯೋಗ ವಿಧಾನವು ತಾತ್ತ್ವಿಕವಾಗಿ ನಾಲ್ಕು ಹಂತದ ಸಂಗತಿಯಾಗಿದೆ ಎಂದು ಸೂಚಿಸಿದೆ: ಸಮತೋಲನ ತಪ್ಪಿಸುವುದು, (ಕುಜುಶಿ ); body positioning (作り tsukuri?); execution (掛け kake?); ಮತ್ತು ಅಂತಿಮವಾಗಿ the finish or coup de grâce (極め kime?). ಪ್ರತಿಯೊಂದು ಹಂತವು ಹಿಂದಿನ ಹಂತವನ್ನು ಅತಿ ಶೀಘ್ರವಾಗಿ ಅನುಸರಿಸುತ್ತದೆ; ತಾತ್ತ್ವಿಕವಾಗಿ ಅವು ಹೆಚ್ಚುಕಡಿಮೆ ಒಂದೇ ಕಾಲದಲ್ಲಿ ಸಂಭವಿಸುತ್ತವೆ. ಅದೇ ರೀತಿ, ಹೊಡೆತಗಳು (ಅಂದರೆ ಮುಷ್ಟಿಯೇಟುಗಳು, ಒದೆತಗಳು, ಇತ್ಯಾದಿ) ಖಂಡಿತವಾಗಿ ಆಘಾತವನ್ನು ಉಂಟುಮಾಡಬಹುದಾದ್ದರಿಂದ ಅವುಗಳಿಗೆ ಅವಕಾಶವಿರುವುದಿಲ್ಲ. ಆದರೆ ಜೂಡೋ-ಕ್ರೀಡಾಪಟುವಿಗೆ ತರಬೇತಿ ನೀಡುವಾಗ ಇವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಉದಾಹರಣೆಗಾಗಿ, ಬಾಗಿದ ಸ್ಥಿತಿಯಲ್ಲಿ ಹೆಚ್ಚು ಹೊತ್ತು ಕಾದಾಡದ ಹಾಗೆ ಹೇಳಿಕೊಡಲಾಗುತ್ತದೆ ಏಕೆಂದರೆ ಈ ಭಂಗಿಯು ಮಂಡಿ-ಹೊಡೆತಗಳು ಮತ್ತು ಇತರ ಹೊಡೆತಗಳ ದಾಳಿಗೆ ತುತ್ತಾಗುವಂತೆ ಮಾಡುತ್ತದೆ.
ನೆಲದ ಮೇಲಿನ ಹಂತ
ಸ್ಪರ್ಧೆಯಲ್ಲಿ ಒಗೆತ ಕಂಡುಬಂದ ನಂತರ ಕಾದಾಟವು ನೆಲದ ಮೇಲೆ ಮುಂದುವರಿಯಬಹುದು ಅಥವಾ ಸ್ಪರ್ಧಿಗಳು ನೆಲೆದ ಮೇಲೆ ನಿಯಮಬದ್ಧವಾಗಿ ಸ್ಪರ್ಧೆಯನ್ನು ಕೊನೆಗೊಳಿಸಬಹುದು; ಸ್ಪರ್ಧಿಗೆ ನೆ-ವಾಜ ವನ್ನು ಮಾಡಲು ಸುಮ್ಮನೆ ನೆಲಕ್ಕೆ ಕುಸಿಯಲು ಅವಕಾಶವಿರುವುದಿಲ್ಲ.[೯] ನೆಲದ ಮೇಲೆ ಸ್ಪರ್ಧಿಗಳು ವಿರೋಧಿಯ ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ ಅಥವಾ ಕೈಗಳಿಗೆ ಪಟ್ಟು ಹಾಕುವ ಮೂಲಕ ಆತನನ್ನು ತಡೆಯುವ ಅಥವಾ ಶರಣಾಗುವಂತೆ ಮಾಡುವ ಗುರಿಯನ್ನು ಹೊಂದಿರುತ್ತಾರೆ.
ತಡೆಯುವುದು
Hold downs (押さえ込み osaekomi?) ಸ್ವ-ರಕ್ಷಣೆಗೆ, ಪೋಲೀಸ್ ಕೆಲಸ ಮತ್ತು ಮಿಲಿಟರಿಯ ಶಸ್ತ್ರಾಸ್ತ್ರಗಳಿಲ್ಲದ ಬರಿಗೈಯ ಕಾದಾಟದಲ್ಲಿ ಅತಿ ಮುಖ್ಯವಾಗಿರುತ್ತದೆ ಏಕೆಂದರೆ ತನ್ನ ವಿರೋಧಿಯ ಹತೋಟಿಯನ್ನು ಹೊಂದಿರುವ ವ್ಯಕ್ತಿಯು ತುಂಬಾ ಸುಲಭವಾಗಿ ತನ್ನನ್ನು ರಕ್ಷಿಸಿಕೊಳ್ಳಬಹುದು ಅಥವಾ ಹೊಡೆತಗಳನ್ನು ನೀಡಬಹುದು. ಜೂಡೋದಲ್ಲಿ ತಡೆಯುವುದನ್ನು ಅಥವಾ ನಿಗ್ರಹಿಸುವುದನ್ನು (ಒಸೆಕೋಮಿ) ಇಪ್ಪತ್ತೈದು ಸೆಕೆಂಡುಗಳವರೆಗೆ ಮುಂದುವರಿಸಿದರೆ, ಆ ಪಟ್ಟನ್ನು ಹಾಕುವವನು ಪಂದ್ಯದಲ್ಲಿ ಜಯಗಳಿಸುತ್ತಾನೆ. ಒಸೆಕೋಮಿ ಯು ವಿರೋಧಿಯನ್ನು ಆತನ ಹಿಂದಿನಿಂದ ಹಿಡಿದುಕೊಳ್ಳುವುದನ್ನು ಒಳಗೊಳ್ಳುತ್ತದೆ ಹಾಗೂ ಆತನು ಮುಂದಕ್ಕೆ ಅಥವಾ ಬದಿಗೆ ತಿರುಗಿದರೆ ಅದನ್ನು ಮ್ಯಾಟ್ಟೆ ಎಂದು ಕರೆಯಲಾಗುತ್ತದೆ. (ಮ್ಯಾಟ್ಟೆ ಅಂದರೆ ಹೊಡೆದುರುಳಿಸುವುದು). ನಂತರ ಇಬ್ಬರು ಜೂಡೋಕರು ಮತ್ತೆ ನಿಂತುಕೊಂಡು ಕಾದಾಟವನ್ನು ಮುಂದುವರಿಸುತ್ತಾರೆ. (ಇದನ್ನು ಯೋಶಿ ಎಂದು ಕರೆಯುತ್ತಾರೆ.)
1905ರ ನಿಯಮಗಳ ಪ್ರಕಾರ, ವಿರೋಧಿಯನ್ನು ಆತನ ಭುಜಗಳಲ್ಲಿ ಎರಡು ಸೆಕೆಂಡುಗಳ ಕಾಲ ಮಾತ್ರ ತಡೆಯಬಹುದಿತ್ತು. ಈ ಅವಧಿಯು ಸ್ಯಾಮುರೈ ಆತನ ಚಾಕು ಅಥವಾ ಖಡ್ಗವನ್ನು ತಲುಪಿ ತನ್ನ ವಿರೋಧಿಯನ್ನು ಮುಗಿಸಿಬಿಡಲು ಬೇಕಾಗುವ ಸಮಯವನ್ನು ಪ್ರತಿಬಿಂಬಿಸುತ್ತದೆಂದು ಹೇಳಲಾಗಿದೆ. ಹೊಸ ದೀರ್ಘ ಕಾಲದ ಅಗತ್ಯಗಳು ಕಾದಾಳಿ, ಪೋಲೀಸ್ ಅಧಿಕಾರಿ ಅಥವಾ ಸೈನಿಕರು ಸ್ಥಿತಿಯನ್ನು ನಿಯಂತ್ರಿಸಲು ತಮ್ಮ ವಿರೋಧಿಯನ್ನು ಗಣನೀಯ ಪ್ರಮಾಣದ ಸಮಯಕ್ಕೆ ಹದ್ದುಬಸ್ತಿನಲ್ಲಿಡಬೇಕಾದ ನೈಜ ಕಾದಾಟಕ್ಕೆ ಸಂಬಂಧಿಸಿರಬಹುದು.
ಜೂಡೋದಲ್ಲಿ ಪಟ್ಟು ಹಾಕುವುದು ಕೆಲವೊಮ್ಮೆ ವಿರೋಧಿಯ ಶರಣಾಗತಿಗೆ ಕಾರಣವಾಗಬಹುದು ಏಕೆಂದರೆ ವಿರೋಧಿಗೆ ಆ ಪಟ್ಟಿನ ಬಲವನ್ನು ಸಹಿಸಿಕೊಳ್ಳಲು ಅಸಾಧ್ಯವಾಗಬಹುದು ಅಥವಾ ಪಟ್ಟನ್ನು ನಿರ್ವಹಿಸುವ ಪ್ರಯತ್ನವಾಗಿ ಆತನು ಸೋಲನ್ನು ಒಪ್ಪಿಕೊಳ್ಳಬಹುದು. ಉಸಿರು ಕಟ್ಟಿಸುವಂತೆ ಹಿಡಿಯುವ ಬಿಗಿಹಿಡಿತ ಅಥವಾ ಕೈಗಳಿಗೆ ಪಟ್ಟು ಹಾಕುವುದನ್ನು ಜೂಡೋಕನಿಗೆ ತಡೆದುಕೊಳ್ಳಲು ಅಸಾಧ್ಯವಾದಾಗ ಅಥವಾ ಜುಡೋಕನಿಗೆ ನೋವಾಗಿದ್ದರೆ ಅಥವಾ ಗಾಯವಾಗಿದ್ದರೆ ಆತನು ಶರಣಾಗಬಹುದು.
ರಕ್ಷಣೆ
ತಡೆಯುವವನು ತನ್ನ ಕಾಲುಗಳನ್ನು ವಿರೋಧಿಯ ದೇಹದ ಕೆಳಗಿನ ಭಾಗ ಅಥವಾ ಮುಂಡ ಭಾಗದ ಸುತ್ತ ಸುತ್ತಿಕೊಂಡರೆ, ವಿರೋಧಿಯು ನಿರ್ಬಂಧಿಸುವವರೆಗೆ ಆತನು ವಿರೋಧಿಯನ್ನು ತಡೆಯಬಹುದು, ಏಕೆಂದರೆ ದೇಹದ ಕೆಳಭಾಗದಲ್ಲಿ ಹಿಡಿದವನು ತನ್ನ ಹಿಡಿತವನ್ನು ಸಡಿಲಗೊಳಿಸುವವರೆಗೆ ವಿರೋಧಿಗೆ ಏಳಲು ಮತ್ತು ದೂರಸರಿಯಲು ಸಾಧ್ಯವಾಗುವುದಿಲ್ಲ. ತನ್ನ ಕಾಲುಗಳನ್ನು ವಿರೋಧಿಯ ಸುತ್ತ ಸುತ್ತಿಕೊಂಡಿರುವಾಗ, ವಿರೋಧಿಯು ಅನೇಕ ದಾಳಿಯ ಕೌಶಲಗಳನ್ನು ಬಳಸಬಹುದು, ಅವುಗಳೆಂದರೆ ಕತ್ತನ್ನು ಬಿಗಿಯುವುದು, ಕೈಗಳಿಗೆ ಪಟ್ಟು ಹಾಕುವುದು ಮತ್ತು "ದೇಹಕ್ಕೆ ಕತ್ತರಿ-ಪಟ್ಟು ಹಾಕುವುದು" (ಡು-ಜಿಮೆ ), ಈ ಮೂಲಕ ತನ್ನ ವಿರೋಧಿಯು ಮೇಲಿನಿಂದ ಪ್ರಬಲ ಹೊಡೆತಗಳನ್ನು ನೀಡದಂತೆ ನಿಯಂತ್ರಿಸಬಹುದು. ಜಪಾನೀಸ್‌ನಲ್ಲಿ "ಡು-ಓಸೆ ", ಎಂದರೆ "ಮುಂಡ-ಪಟ್ಟು",[೧೦] ಎಂದು ಸೂಚಿಸಲಾಗುವ ಈ ಸ್ಥಿತಿಯಲ್ಲಿ ಮೇಲಿರುವವನು ತನ್ನ ವಿರೋಧಿಯ ವಿರುದ್ಧ ಸಾಕಷ್ಟು ನಿಯಂತ್ರಣವನ್ನು ಹೊಂದಿರುವುದಿಲ್ಲ, ಈ ಸ್ಥಿತಿಯನ್ನು ಒಸೆಕೋಮಿ ಎಂದು ಹೇಳಲಾಗುತ್ತದೆ. (ರಕ್ಷಣೆಯನ್ನು ಸಾಮಾನ್ಯವಾಗಿ ಬಳಸಿದರೆ, ಡು-ಜಿಮೆ ಯು ಜೂಡೋದಲ್ಲಿ ನಿಯಮಬದ್ಧವಾಗಿರುವುದಿಲ್ಲ.[೧೧]) ಮೇಲಿರುವವನು ತನ್ನ ವಿರೋಧಿಯ ಕಾಲುಗಳಿಂದ ತಪ್ಪಿಸಿಕೊಂಡು ಆತನನ್ನು ತಡೆಯಲು ಅಥವಾ ಶರಣಾಗಿಸಲು ಪ್ರಯತ್ನಿಸಬಹುದು ಅಥವಾ ವಿರೋಧಿಯ ರಕ್ಷಣೆಯಿಂದ ಭೇದಿಸಿ, ನಿಂತುಕೊಳ್ಳಲು ಪ್ರಯತ್ನಿಸಬಹುದು. ಕೆಳಗಿರುವವನು ತನ್ನ ರಕ್ಷಣಾತ್ಮಕ ಪ್ರಯೋಗ ವಿಧಾನದ ಮೂಲಕ ವಿರೋಧಿಯನ್ನು ಶರಣಾಗಿಸಲು ಅಥವಾ ಆತನನ್ನು ಹೊರಳಾಡಿಸಿ ತಾನು ಆತನ ಮೇಲೆ ಬರುವಂತೆ ಮಾಡಲು ಪ್ರಯತ್ನಿಸಬಹುದು.
ಕೀಲುಗಳಿಗೆ ಪಟ್ಟು ಹಾಕುವುದು
ಕೀಲುಗಳಿಗೆ ಪಟ್ಟು ಹಾಕುವುದನ್ನು (ಕನ್ಸೆಟ್ಸು-ವಾಜ ) ಸಾಮಾನ್ಯವಾಗಿ ಕೈಗಳಿಗೆ ಪಟ್ಟು ಹಾಕುವುದಾಗಿ ಹೇಳಲಾಗುತ್ತದೆ. ಇದು ಒಂದು ಪರಿಣಾಮಕಾರಿ ಕದನ ಪ್ರಯೋಗ ವಿಧಾನವಾಗಿದೆ ಏಕೆಂದರೆ ಇದು ಜೂಡೋಕ ನು ತನ್ನ ವಿರೋಧಿಗೆ ನೋವನ್ನು ನೀಡುವ ಮೂಲಕ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಂತೆ ಮಾಡಲು ಅಥವಾ ಅಗತ್ಯವಾಗಿದ್ದರೆ ಪಟ್ಟು ಹಾಕಿದ ಕೀಲು ಮುರಿಯುವಂತೆ ಮಾಡಲು ಅನುವು ಮಾಡುತ್ತದೆ. ಸ್ಪರ್ಧೆಯಲ್ಲಿ ಸಂಪೂರ್ಣ ಬಲದೊಂದಿಗೆ ವಿರೋಧಿಯನ್ನು ಶರಣಾಗುವಂತೆ ಮಾಡಲು ಮೊಣಕೈ ಕೀಲುಗಳಿಗೆ ಪಟ್ಟು ಹಾಕುವುದು ಹೆಚ್ಚು ಸುರಕ್ಷಿತವಾದುದೆಂದು ಪರಿಗಣಿಸಲಾಗುತ್ತದೆ. ಜೂಡೋದಲ್ಲಿ ಹಿಂದೆ ಕಾಲುಗಳಿಗೆ ಪಟ್ಟು ಹಾಕುವುದು, ಮಣಿಕಟ್ಟುಗಳಿಗೆ ಪಟ್ಟು ಹಾಕುವುದು, ಬೆನ್ನು ಮೂಳೆಗೆ ಪಟ್ಟು ಹಾಕುವುದು ಮತ್ತು ಇತರ ವಿವಿಧ ಪ್ರಯೋಗ ವಿಧಾನಗಳಿಗೆ ಅವಕಾಶವಿತ್ತು. ಆದರೆ ಇಂದು ಸ್ಪರ್ಧೆಯಲ್ಲಿ ಸ್ಪರ್ಧಿಗಳ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ಇವನ್ನು ರದ್ದುಗೊಳಿಸಲಾಗಿದೆ. ಆ ಕೀಲುಗಳ ಮೇಲೆ ದಾಳಿ ಮಾಡುವುದರಿಂದ ಕ್ರೀಡಾಳುಗಳಿಗೆ ಹಲವಾರು ರೀತಿಯ ಹಾನಿಗಳಾಗಬಹುದು ಮತ್ತು ಆ ಕೀಲುಗಳ ಕ್ರಮೇಣ ತಮ್ಮ ಕಾರ್ಯವನ್ನು ನಿಲ್ಲಿಸಬಹುದು. ಆದರೂ ಕೆಲವು ಜೂಡೋಕ ರು ಸಾಂಪ್ರದಾಯಿಕ ಸ್ಪರ್ಧೆಗಳಿಂದ ನಿಷೇಧಿಸಲ್ಪಟ್ಟ ಈ ಪ್ರಯೋಗ ವಿಧಾನಗಳನ್ನು ಬಳಸಿಕೊಂಡು ವಿಧಿವತ್ತಾಗಿಲ್ಲದೆ ಕಾದಾಡಲು ಮತ್ತು ಕಲಿಯಲು ಬಯಸುತ್ತಾರೆ. ಅಲ್ಲದೆ ಹೆಚ್ಚಿನ ಈ ಪ್ರಯೋಗ ವಿಧಾನಗಳನ್ನು ಸಂಬಂಧಿತ ಕಲೆಗಳಾದ ಸ್ಯಾಂಬೊ, ಬ್ರೆಜಿಲಿಯಿನ್ ಜಿಯು-ಜಿಟ್ಸು ಮತ್ತು ಜುಜುಟ್ಸುವಿನಲ್ಲಿ ಈಗಲೂ ಬಳಸಲಾಗುತ್ತದೆ.
ಉಸಿರು ಕಟ್ಟುವಂತೆ ಹಿಡಿಯುವುದು ಮತ್ತು ಕತ್ತು ಹಿಸುಕುವುದು
Chokes and strangulations (締め技 shime-waza?) ಸಾಮಾನ್ಯವಾಗಿ ಮತ್ತು ಸರಳವಾಗಿ ಕುತ್ತಿಗೆ ಹಿಸುಕುವುದೆಂದು ಹೇಳಲಾಗುತ್ತದೆ. ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವುದು ವಿರೋಧಿಯು ಪ್ರಜ್ಞೆ ತಪ್ಪುವಂತೆ ಮತ್ತು ಸಾಯುವಂತೆಯೂ ಮಾಡಬಹುದು. ಕತ್ತು ಹಿಸುಕುವುದು ಕತ್ತಿನ ಶೀರ್ಷಧಮನಿಯ ಬದಿಯನ್ನು ಸಂಕುಚಿತಗೊಳಿಸುವ ಮೂಲಕ ಮಿದುಳಿಗೆ ರಕ್ತ ಪರಿಚಲನೆಯಾಗದಂತೆ ತಡೆಯುತ್ತದೆ ಹಾಗೂ ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವುದು ಕುತ್ತಿಗೆಯ ಮುಂಭಾಗದ ಗಾಳಿ ಹೋಗುವ ದಾರಿಯನ್ನು ನಿರ್ಬಂಧಿಸುತ್ತದೆ. ಈ ಪದಗಳನ್ನು ಹೆಚ್ಚಾಗಿ ಸಾಮಾನ್ಯ ಬಳಕೆಯಲ್ಲಿ ಅದಲುಬದಲು ಮಾಡಲಾಗುತ್ತದೆ ಮತ್ತು ಹೆಚ್ಚಿನ ಜೂಡೋಕ ರು ವಿಧಿಬದ್ಧ ವ್ಯತ್ಯಾಸವನ್ನು ಮಾಡುವುದಿಲ್ಲ.[೧೨] ಸ್ಪರ್ಧೆಯಲ್ಲಿ ವಿರೋಧಿಯು ಶರಣಾದರೆ ಅಥವಾ ಪ್ರಜ್ಞೆ ಕಳೆದುಕೊಂಡರೆ ಆ ಜೂಡೋಕ ನು ಗೆಲ್ಲುತ್ತಾನೆ. ಕತ್ತು ಹಿಸುಕುವುದು ಕೆಲವು ಸೆಕೆಂಡುಗಳವರೆಗೆ ವಿರೋಧಿಯನ್ನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತದೆ. ಒಡನೆಯೇ ಬಿಟ್ಟುಬಿಟ್ಟರೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
ಕ್ರೀಡೆಯಾಗಿ
ಸಂಪೂರ್ಣವಾಗಿ ಕದನ ಕಲೆಯಾಗಿ ಪ್ರಾಮುಖ್ಯತೆಯನ್ನು ಹೊಂದಿರುವ ಜೂಡೋ ಒಂದು ಕ್ರೀಡೆಯಾಗಿಯೂ ಅಭಿವೃದ್ಧಿಹೊಂದಿದೆ.
ಜೂಡೋ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಲಾಸ್ ಏಂಜಲೀಸ್‍ನಲ್ಲಿ ನಡೆದ 1932ರ ಕ್ರೀಡೆಗಳಲ್ಲಿ ಕಾಣಿಸಿಕೊಂಡಿತು, ಇದರಲ್ಲಿ ಕ್ಯಾನೊ ಮತ್ತು ಸುಮರು 200 ಜೂಡೋ ವಿದ್ಯಾರ್ಥಿಗಳು ತಮ್ಮ ಬಲದ ಪ್ರದರ್ಶನವನ್ನು ನೀಡಿದರು.[೧೩] ಜೂಡೋ ಟೋಕಿಯೊದಲ್ಲಿ ನಡೆದ 1964ರ ಕ್ರೀಡೆಗಳಲ್ಲಿ ಪುರುಷರ ಒಲಂಪಿಕ್ ಕ್ರೀಡೆಯಾಯಿತು. ಅಮೇರಿಕಾದ ರೇನ ಕ್ಯಾನಕೋಗಿ ಮತ್ತು ಅನೇಕ ಮಂದಿ ಇತರರ ಪಟ್ಟು ಹಿಡಿದು ಮಾಡಿದ ಪ್ರಯತ್ನದಿಂದ ಜೂಡೋ 1988ರಲ್ಲಿ ಮಹಿಳೆಯರ ಒಲಿಂಪಿಕ್ ಕ್ರೀಡೆಯಾಯಿತು. 1964ರಲ್ಲಿ ನಡೆದ ಪುರುಷರ ಜೂಡೋ ಪ್ರದರ್ಶನ-ಸಂಗತಿಯಾಗಿತ್ತು ಎಂದು ಹೇಳಲಾಗಿದೆ. ಆದರೆ ಇಂಟರ್‌ನ್ಯಾಷನಲ್ ಜೂಡೋ ಫೆಡರೇಶನ್ (IJF) ಮತ್ತು ಇಂಟರ್‌ನ್ಯಾಷನಲ್ ಒಲಿಂಪಿಕ್ ಕಮಿಟಿಯ ಪ್ರಕಾರ, ಜೂಡೋ ವಾಸ್ತವವಾಗಿ 1964ರ ಕ್ರೀಡೆಗಳಲ್ಲಿ ಒಂದು ಅಧಿಕೃತ ಕ್ರೀಡೆಯಾಗಿತ್ತು. ಡಚ್‌ನವನಾದ ಆಂಟನ್ ಗೀಸಿಂಕ್ ಜೂಡೋದ ಮುಕ್ತ ವಿಭಾಗದಲ್ಲಿ ಜಪಾನಿನ ಆಕಿಯೊ ಕಾಮಿನಗನನ್ನು ಸೋಲಿಸಿ ಮೊದಲ ಒಲಂಪಿಕ್ ಚಿನ್ನದ ಪದಕವನ್ನು ಗೆದ್ದನು. ನಂತರ ಜೂಡೋ "ಜಪಾನಿಯರು ಮಾತ್ರ" ಎಂಬ ಕಲ್ಪನೆಯನ್ನು ಕಳೆದುಕೊಂಡಿತು ಮತ್ತು ಪ್ರಪಂಚದಲ್ಲೇ ಅತ್ಯಂತ ವ್ಯಾಪಕವಾಗಿ ಅಭ್ಯಾಸ ಮಾಡಲಾಗುವ ಕ್ರೀಡೆಗಳಲ್ಲಿ ಒಂದಾಯಿತು. ಮಹಿಳೆಯರ ಪಂದ್ಯವು 1988ರಲ್ಲಿ ಪ್ರದರ್ಶನ ಪಂದ್ಯವಾಗಿತ್ತು ಮತ್ತು ನಾಲ್ಕು ವರ್ಷಗಳ ನಂತರ ಅದು ಅಧಿಕೃತ ಪದಕದ ಪಂದ್ಯವಾಯಿತು. ಪುರುಷರು ಮತ್ತು ಮಹಿಳೆಯರು ಬೇರೆ ಬೇರೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಅವರಿಗೆ ಒಟ್ಟಿಗೆ ತರಬೇತಿ ನೀಡಲಾಗುತ್ತದೆ. ಪ್ಯಾರಾಲಿಂಪಿಕ್ ಜೂಡೋ 1988ರಿಂದ ಪ್ಯಾರಾಲಿಂಪಿಕ್ ಕ್ರೀಡೆಯಾಗಿದೆ; ಇದು ಸ್ಪೆಶಲ್ ಒಲಿಂಪಿಕ್ಸ್‌ನಲ್ಲಿನ ಕ್ರೀಡೆಗಳಲ್ಲೂ ಒಂದಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಕಾಲೇಜಿನ ಸ್ಪರ್ಧೆಯು, ವಿಶೇಷವಾಗಿ UC ಬರ್ಕೆಲಿ ಮತ್ತು ಸ್ಯಾನ್ ಜೋಸ್ ಸ್ಟೇಟ್ ಯೂನಿವರ್ಸಿಟಿ ನಡುವಿನ, ಜೂಡೋವನ್ನು ಒಲಿಂಪಿಕ್ ಕ್ರೀಡೆಗಳು ಮತ್ತು ಪ್ರಪಂಚ ಚಾಂಪಿಯನ್‌ಶಿಪ್‌ಗಳಲ್ಲಿನ ಕ್ರೀಡೆಯಾಗಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದೆ. 1940ರಲ್ಲಿ ಕ್ಯಾಲ್ ಮತ್ತು SJSU ನ ಪ್ರಮುಖ ತರಬೇತಿದಾರರಾದ ಹೆನ್ರಿ ಸ್ಟೋನ್ ಮತ್ತು ಯೋಶ್ ಉಚಿದ ಶಾಲೆಗಳ ಮಧ್ಯೆ ನಡೆಯುವ ಸ್ಪರ್ಧೆಗಳಿಗಾಗಿ ತೂಕದ ತರಗತಿ(ವೈಟ್ ಕ್ಲಾಸ್) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. 1953ರಲ್ಲಿ ಸ್ಟೋನ್ ಮತ್ತು ಉಚಿದ ಅವರ ತೂಕದ ತರಗತಿ ವ್ಯವಸ್ಥೆಯನ್ನು ಅಧಿಕೃತ ಅಂಶವಾಗಿರಿಸಿಕೊಂಡು ಜೂಡೋವನ್ನು ಒಂದು ಕ್ರೀಡೆಯಾಗಿ ಅಂಗೀಕರಿಸಲು ಯಶಸ್ವಿಯಾಗಿ ಅಮಾಚ್ಯುವರ್ ಅಥ್ಲೆಟಿಕ್ ಯೂನಿಯನ್‌ಗಾಗಿ ಅರಿಕೆ ಮಾಡಿಕೊಂಡರು. 1961ರಲ್ಲಿ ಉಚಿದನು ಪ್ಯಾರಿಸ್‌ನಲ್ಲಿನ IJF ಸಭೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಪ್ರತಿನಿಧಿಸಿದನು. ಇಲ್ಲಿ IJF ಎಲ್ಲಾ ಭವಿಷ್ಯದ ಚಾಂಪಿಯನ್‌ಪಟ್ಟಗಳಿಗಾಗಿ ತೂಕದ ತರಗತಿಗಳನ್ನು ಆರಂಭಿಸಿತು. IJFಅನ್ನು ಆರಂಭಿಕ ಯುರೋಪಿಯನ್ ಜೂಡೋ ಯೂನಿಯನ್‌ನ ಆಧಾರದಲ್ಲಿ ಸ್ಥಾಪಿಸಲಾಗಿತ್ತು, ಇಲ್ಲಿ ತೂಕದ ತರಗತಿಗಳನ್ನೂ ಅನೇಕ ವರ್ಷಗಳ ಕಾಲ ನಡೆಸಲಾಗುತ್ತಿತ್ತು.
ತೂಕದ ವಿಭಾಗಗಳು
ಪ್ರಸ್ತುತ ಏಳು ತೂಕದ ವಿಭಾಗಗಳಿವೆ, ಇದು ಸ್ಪರ್ಧೆಯನ್ನು ನಡೆಸುವ ಸಂಸ್ಥೆಗಳಿಂದ ಬದಲಾಗಬಹುದು ಮತ್ತು ಸ್ಪರ್ಧಿಗಳ ವಯಸ್ಸಿನ ಆಧಾರದಲ್ಲಿ :
ಪುರುಷರು | ||||||
---|---|---|---|---|---|---|
60 ಕೆಜಿ ತೂಕಕ್ಕಿಂತ ಕೆಳಗಿನವರು | 60–66 ಕೆಜಿ | 66–73 ಕೆಜಿ | 73–81 ಕೆಜಿ | 81–90 ಕೆಜಿ | 90–100 ಕೆಜಿ | ಸುಮಾರು 100 ಕೆಜಿ |
ಮಹಿಳೆಯರು | ||||||
48 ಕೆಜಿ ತೂಕಕ್ಕಿಂತ ಕೆಳಗಿನವರು | 48–52 ಕೆಜಿ | 52–57 ಕೆಜಿ | 57–63 ಕೆಜಿ | 63–70 ಕೆಜಿ | 70–78 ಕೆಜಿ | ಸುಮಾರು 78 ಕೆಜಿ |
ನಿಯಮಗಳು
ಜೂಡೋದ ಸಾಂಪ್ರದಾಯಿಕ ನಿಯಮಗಳು ಸ್ಪರ್ಧಿಗಳಿಗೆ ಆಗಬಹುದಾದ ಹಾನಿಗಳನ್ನು ತಪ್ಪಿಸುವ ಮತ್ತು ಸರಿಯಾದ ರೀತಿನೀತಿಗಳ ಬಗ್ಗೆ ಖಾತ್ರಿ ನೀಡುವ ಗುರಿಯನ್ನು ಹೊಂದಿರುತ್ತವೆ. ಈ ಕ್ರೀಡೆಯನ್ನು ವೀಕ್ಷಕರಿಗೆ ಹೆಚ್ಚು ಆಸಕ್ತಿದಾಯಕವಾಗಿ ಮಾಡುವ ಉದ್ದೇಶದಿಂದ ಇವುಗಳಿಗೆ ಇನ್ನಷ್ಟು ನಿಯಮಗಳನ್ನು ಸೇರಿಸಲಾಯಿತು.
ಪಂದ್ಯದಲ್ಲಿ ಜಡವಾಗಿದ್ದರೆ ಅಥವಾ ನಿಯಮಬಾಹಿರ ಪ್ರಯೋಗ ವಿಧಾನಗಳನ್ನು ಬಳಸಿದರೆ ದಂಡಗಳನ್ನು ವಿಧಿಸಲಾಗುತ್ತದೆ. ಸ್ಪರ್ಧಿಯು ಮ್ಯಾಟ್‌ನಲ್ಲಿನ (ಟಾಟಮಿ ) ಸೂಚಿತ ಪ್ರದೇಶದಿಂದ ಹೊರಗಿದ್ದರೆ ಕಾದಾಟವನ್ನು ನಿಲ್ಲಿಸಲಾಗುತ್ತದೆ. ರೆಫರಿ ಮತ್ತು ತೀರ್ಪುಗಾರರು ಕಾದಾಟದ ಸಂದರ್ಭದಲ್ಲಿ ಏನಾದರೂ ಚರ್ಚಿಸಬೇಕಿದ್ದರೆ, ರೆಫರಿಯು ಸೋನೊ-ಮಾಮ (ಇದನ್ನು "ಚಲಿಸಬೇಡಿ", ಅಕ್ಷರಶಃ "ಹೇಗಿದ್ದೀರೊ ಹಾಗೆ", ಎಂಬರ್ಥದಲ್ಲಿ ಬಳಸಲಾಗುತ್ತದೆ) ಎಂದು ಹೇಳುತ್ತಾನೆ, ಆಗ ಇಬ್ಬರೂ ಕಾದಾಳಿಗಳು ಎಲ್ಲಿರುತ್ತಾರೋ ಅಲ್ಲೇ ನಿಲ್ಲಬೇಕು. ತಮ್ಮ ಚರ್ಚೆಯನ್ನು ಮುಗಿಸಿದ ನಂತರ, ರೆಫರಿಯು ಯೋಶಿ ಎಂದಾಗ ಪಂದ್ಯವು ಮುಂದುವರಿಯುತ್ತದೆ.
ಎಲ್ಲಾ ಅಂಕಗಳು ಮತ್ತು ದಂಡಗಳನ್ನು ರೆಫರಿಯು ನೀಡುತ್ತಾನೆ. ರೆಫರಿಯು ನೀಡಿದ ಅಂಕ ಅಥವಾ ದಂಡದಲ್ಲಿ ಯಾವುದೇ ಬದಲಾವಣೆಗಳಿದ್ದರೆ ತೀರ್ಪುಗಾರರು ನಿರ್ಣಯ ಮಾಡಬಹುದು.
ಕುರುಡು ಜೂಡೋವನ್ನು ನಡೆಸುವಾಗ IJF ನಿಯಮಗಳಲ್ಲಿ ಸ್ವಲ್ಪ ಬದಲಾವಣೆಗಳಿರುತ್ತವೆ.
ಸ್ಪರ್ಧೆಯ ಅಂಕಗಳು
ಜೂಡೊ ಪಂದ್ಯದ ಉದ್ದೇಶವೆಂದರೆ ವಿರೋಧಿಯನ್ನು ತನ್ನ ಬಾಹುಗಳಿಂದ ನೆಲಕ್ಕೆ ಅಪ್ಪಳಿಸುವುದು; ಆತನ ಹಿಂದಿನಿಂದ ನೆಲಕ್ಕೆ ಭದ್ರವಾಗಿ ಹಿಡಿದುಕೊಳ್ಳುವುದು; ಅಥವಾ ಆತನನ್ನು ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ, ಕತ್ತು ಹಿಸುಕುವ ಅಥವಾ ಕೈಗಳಿಗೆ ಪಟ್ಟು ಹಾಕುವ ಮೂಲಕ ಶರಣಾಗುವಂತೆ ಮಾಡುವುದು. ಇವುಗಳಲ್ಲಿ ಯಾವುದಾದರೂ ಅಂಕವು ಇಪ್ಪನ್ (一本) ಆದರೆ ತಕ್ಷಣವೇ ಪಂದ್ಯದಲ್ಲಿ ಜಯಗಳಿಸುತ್ತಾರೆ.
ಜೂಡೋ ಮೂರು ಶ್ರೇಣಿಯ ಅಂಕಗಳನ್ನು ಹೊಂದಿದೆ: ಇಪ್ಪನ್ , ವಾಜ-ಅರಿ ಮತ್ತು ಯೂಕೊ . ಇಪ್ಪನ್ ಅಂದರೆ ಅಕ್ಷರಾರ್ಥದಲ್ಲಿ "ಒಂದು ಅಂಕ" ಮತ್ತು ಇದು ಪಂದ್ಯದಲ್ಲಿ ಜಯಗಳಿಸುವಂತೆ ಮಾಡುತ್ತದೆ. ಇಪ್ಪನ್ ಇವುಗಳಿಗೆಲ್ಲಾ ನೀಡಲಾಗುತ್ತದೆ - (a) ವೇಗ ಮತ್ತು ಬಲದೊಂದಿಗೆ ನಿಯಂತ್ರಿತ ರೀತಿಯಲ್ಲಿ ವಿರೋಧಿಯ ಹಿಂದಿನಿಂದ ಆತನನ್ನು ನೆಲಕ್ಕುರುಳಿಸುವ ಹೊಡೆತಕ್ಕೆ; (b) ಸಾಕಷ್ಟು ಅವಧಿಯ (ಇಪ್ಪತ್ತೈದು ಸೆಕೆಂಡುಗಳು) ಮ್ಯಾಟ್ ಹಿಡಿತಕ್ಕೆ; ಅಥವಾ (c) ವಿರೋಧಿಯ ಶರಣಾಗತಿಗೆ. ವಾಜ-ಅರಿ ಯನ್ನು ಇವುಗಳಿಗೆ ನೀಡಲಾಗುತ್ತದೆ - ಇಪ್ಪನ್ ಎಂದು ಪರಿಗಣಿಸುವಷ್ಟು ಪ್ರಬಲತೆ ಅಥವಾ ನಿಯಂತ್ರಣವನ್ನು ಹೊಂದಿರದ ಹೊಡೆತಕ್ಕೆ; ಅಥವಾ ಇಪ್ಪತ್ತು ಸೆಕೆಂಡುಗಳ ಹಿಡಿತಕ್ಕೆ. ವಾಜ-ಅರಿ ಯು ಅರ್ಧ ಅಂಕವಾಗಿದೆ ಹಾಗೂ ಇಬ್ಬರು ಸ್ಪರ್ಧಿಗಳೂ ಅಂಕವನ್ನು ಗಳಿಸಿದರೆ, ಇದು ಜಯಗಳಿಸಲು ಬೇಕಾದ ಸಂಪೂರ್ಣ ಅಂಕವನ್ನು ನೀಡುತ್ತದೆ.
ಯೂಕೊ ಕೆಳಮಟ್ಟದ ಶ್ರೇಣಿಯ ಅಂಕವಾಗಿದೆ ಮತ್ತು ಇದನ್ನು ಪಂದ್ಯ ಸಮವಾದಾಗ ಅದನ್ನು ಮುರಿಯಲು ಬಳಸಲಾಗುತ್ತದೆ; ಇದು ಇತರ ಯೂಕೊ ಅಂಕಗಳೊಂದಿಗೆ ಒಟ್ಟುಗೂಡುವುದಿಲ್ಲ. ಅಂಕ ನೀಡುವುದು ಲೆಕ್ಸಿಕೊಗ್ರಾಫಿಕ್(ನಿಘಂಟು ರಚನೆಗೆ ಸಂಬಂಧಿಸಿದೆ) ಆಗಿದೆ; ಒಂದು ವಾಜ-ಅರಿ ಯು ಯಾವುದೇ ಸಂಖ್ಯೆಯು ಯೂಕೊ ವನ್ನು ಮೀರಿಸುತ್ತದೆ, ಆದರೆ ಒಂದು ವಾಜ-ಅರಿ ಮತ್ತು ಒಂದು ಯೂಕೊ ಸೇರಿ ಯೂಕೊ ಇಲ್ಲದೆಯೇ ವಾಜ-ಅರಿ ಯನ್ನು ಮೀರಿಸುತ್ತವೆ.
(ಹಿಂದೆ ಕೋಕ ಎಂದು ಕರೆಯುವ ನಾಲ್ಕನೇ ಅಂಕವನ್ನು ಬಳಸಲಾಗುತ್ತಿತ್ತು, ಆದರೆ ಇದು ನಂತರ 2009ರಲ್ಲಿ ರದ್ದುಗೊಂಡಿತು). ಕೋಕವು ಬಳಕೆಯಲ್ಲಿದ್ದಾಗ, ಇದು ಯೂಕೊ ಗಿಂತ ಕಡಿಮೆ ಅಂಕವಾಗಿತ್ತು. ಯೂಕೊ ದಂತೆ, ಕೋಕವೂ ಸಹ ಪಂದ್ಯ ಸಮವಾದಾಗ ಅದನ್ನು ಮುರಿಯುತ್ತದೆ. ಸ್ಪರ್ಧಿಗಳು ಒಂದೇ ರೀತಿಯ ವಾಜ-ಅರಿ ಮತ್ತು ಯೂಕೊ ವನ್ನು ಹೊಂದಿದ್ದಾಗ ಮಾತ್ರ ಇದನ್ನು ಗಣಿಸಲಾಗುತ್ತದೆ. (ಒಂದು ಯೂಕೊ ಯಾವುದೇ ಸಂಖ್ಯೆಯ ಕೋಕ ವನ್ನು ಮೀರಿಸಬಹುದು.)
ಹದಿನೈದು-ಸೆಕೆಂಡ್ ಅವಧಿಯ ತಡೆತವು ಯೂಕೊ ವನ್ನು ನೀಡುತ್ತದೆ. ಈಗಾಗಲೇ ವಾಜ-ಅರಿ ಯನ್ನು ಹೊಂದಿರುವ ತಡೆತವನ್ನು ಉಳಿಸಿಕೊಂಡಿರುವವನು, ಎರಡು ವಾಜ-ಅರಿ ಯ (ವಾಜ-ಅರಿ-ಅವಸೆಟೆ-ಇಪ್ಪನ್ ) ಮೂಲಕ ಇಪ್ಪನ್ ಅನ್ನು ಗಳಿಸಲು ಆ ತಡೆತವನ್ನು ಇಪ್ಪತ್ತು ಸೆಕೆಂಡುಗಳ ಕಾಲ ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ಇಪ್ಪನ್ ಅಥವಾ ವಾಜ-ಅರಿ ಯನ್ನು ಗಳಿಸಲು ಸಾಕಷ್ಟಿಲ್ಲದ ಹೊಡೆತಗಳು ಯೂಕೊ ವನ್ನು ಗಳಿಸಿಕೊಡುತ್ತವೆ. ಆದ್ದರಿಂದ "ಕೌಶಲಪೂರ್ಣ ಕೆಡುವು"ಗಳೆಂದು ಕರೆಯಲ್ಪಡುವವುಗಳಿಗೂ ಅವಕಾಶವಿರುತ್ತದೆ (ಉದಾ. ಫ್ಲೈಯಿಂಗ್ ಆರ್ಮ್-ಬಾರ್) ಆದರೆ ಅವು ಅಂಕವನ್ನು ಗಳಿಸುವುದಿಲ್ಲ.
ಪಂದ್ಯದ ಅಂತ್ಯದಲ್ಲಿ ಅಂಕಗಳು ಒಂದೇ ರೀತಿ ಇದ್ದರೆ, ಆ ವಿವಾದವನ್ನು ಗೋಲ್ಡನ್ ಸ್ಕೋರ್ ನಿಯಮದಿಂದ ಪರಿಹರಿಸಲಾಗುತ್ತದೆ. ಗೋಲ್ಡನ್ ಸ್ಕೋರ್ ತಕ್ಷಣವೇ ತೀರ್ಪನ್ನು ನೀಡುವ ಸ್ಥಿತಿಯಾಗಿದೆ, ಇದರಲ್ಲಿ ಸಮಯವನ್ನು ಪಂದ್ಯದ-ಅವಧಿಗೆ ಪುನಃಹೊಂದಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ ಮೊದಲು ಯಾವುದೇ ಅಂಕವನ್ನು ಗಳಿಸುವ ಸ್ಪರ್ಧಿಯು ಜಯಗಳಿಸುತ್ತಾನೆ. ಈ ಅವಧಿಯಲ್ಲಿ ಯಾವುದೇ ಅಂಕವನ್ನು ಗಳಿಸದಿದ್ದರೆ, ಜಯಶಾಲಿಯನ್ನು ಹಾಂಟೈ ಯಿಂದ ನಿರ್ಧರಿಸಲಾಗುತ್ತದೆ, ಹಾಂಟೈ ಅಂದರೆ ರೆಫರಿ ಮತ್ತು ಇಬ್ಬರು ಮೂಲೆಯ ತೀರ್ಪುಗಾರರ ಬಹುಮತದ ಅಭಿಪ್ರಾಯವಾಗಿದೆ.
ಅಂಕಗಳ ಪ್ರದರ್ಶನ
ಜೂಡೋ ಅಂಕಫಲಕಗಳು ಪ್ರತಿಯೊಬ್ಬ ಆಟಗಾರನು ಗಳಿಸಿದ ವಾಜ-ಅರಿ ಮತ್ತು ಯೂಕೊ ಅಂಕಗಳನ್ನು ತೋರಿಸುತ್ತವೆ. (ಕೋಕ ಅಂಕವನ್ನೂ ಅದರ ಬಳಕೆಯು 2009ರಲ್ಲಿ ರದ್ದುಗೊಳ್ಳುವವರೆಗೆ ಪ್ರದರ್ಶಿಸಲಾಗುತ್ತಿತ್ತು.) ಹೆಚ್ಚಾಗಿ ಇಪ್ಪನ್ ಅನ್ನು ಅಂಕಫಲಕದಲ್ಲಿ ತೋರಿಸಲಾಗುವುದಿಲ್ಲ ಏಕೆಂದರೆ ಇಪ್ಪನ್ ಅನ್ನು ನೀಡಿದ ಕೂಡಲೇ ಪಂದ್ಯವು ಕೊನೆಗೊಳ್ಳುತ್ತದೆ. ಕೆಲವು ಕಂಪ್ಯೂಟರೀಕೃತ ಅಂಕಫಲಕಗಳು ಇಪ್ಪನ್ ಅಂಕ ನೀಡಿದುದನ್ನು ಸಂಕ್ಷಿಪ್ತವಾಗಿ ಸೂಚಿಸುತ್ತವೆ.
ಅಂಕಫಲಕಗಳು ಸಾಮಾನ್ಯವಾಗಿ ಪ್ರತಿಯೊಬ್ಬ ಸ್ಪರ್ಧಿಗೆ ವಿಧಿಸಲಾದ ದಂಡಗಳನ್ನು ಸಂಖ್ಯೆಯನ್ನೂ ತೋರಿಸುತ್ತವೆ ಮತ್ತು ಕೆಲವೊಮ್ಮೆ ವೈದ್ಯಕೀಯ ಚಿಕಿತ್ಸೆಗಾಗಿ ಭೇಟಿ ನೀಡಿದುದನ್ನೂ ಪ್ರದರ್ಶಿಸುತ್ತವೆ. (ಒಂದು ಪಂದ್ಯದಲ್ಲಿ ಒಬ್ಬ ಸ್ಪರ್ಧಿಗೆ ಕೇವಲ ಎರಡು "ವೈದ್ಯಕೀಯ ಚಿಕಿತ್ಸೆ"ಯ ಭೇಟಿಗೆ ಅವಕಾಶವಿರುತ್ತದೆ-ಹೆಚ್ಚಾಗಿ ಸಣ್ಣ ಪ್ರಮಾಣದ ರಕ್ತ ಸೋರಿಕೆಗಾಗಿ.)
ವಿದ್ಯುಚ್ಚಾಲಿತ ಅಂಕಫಲಕಗಳು ಸಾಮಾನ್ಯವಾಗಿ ಸ್ಪರ್ಧೆಯ ಸಮಯ ಮತ್ತು ಓಸೆಕಾಮಿ ಸಮಯಗಳೆರಡನ್ನೂ ಮಾಪನ ಮಾಡಲು ಟೈಮರ್‌ಗಳನ್ನು ಒಳಗೊಂಡಿರುತ್ತವೆ.
ನಿಯಮಗಳಲ್ಲಿನ ಬದಲಾವಣೆಗಳು
ಜೂಡೋದ ನಿಯಮಗಳು ರಕ್ಷಣೆಗೆ-ಸಂಬಂಧಿಸಿದ ವಿವಿಧ ಉದ್ದೇಶಗಳಿಗಾಗಿ ಯಾವಾಗಲೂ ಬದಲಾಗುತ್ತಿರುತ್ತದೆ. ಅವು ಜೂಡೋಕನ ವಯಸ್ಸು, ಶ್ರೇಣಿ ಅಥವಾ ಅನುಭವದ ಆಧಾರದಲ್ಲೂ ಬದಲಾಗಬಹುದು. ಅವು ರಾಷ್ಟ್ರ, ಕ್ಲಬ್ ಅಥಾ ಸ್ಪರ್ಧೆಯ ಮಟ್ಟದ ಆಧಾರದಲ್ಲೂ ವ್ಯತ್ಯಾಸಗೊಳ್ಳಬಹುದು (ಅಂದರೆ ಒಲಿಂಪಿಕ್ಸ್-ಅಂತಾರಾಷ್ಟ್ರೀಯ ಸ್ಪರ್ಧೆ-ರಾಷ್ಟ್ರೀಯ ಸ್ಪರ್ಧೆ).
ದಂಡಗಳು
ಮೊದಲ ದಂಡವು ಎಚ್ಚರಿಕೆಯಾಗಿರುತ್ತದೆ, ಅದನ್ನು ಅಂಕಫಲಕದಲ್ಲಿ ಸೂಚಿಸಲಾಗುತ್ತದೆ. ಎರಡನೇ ದಂಡವನ್ನು ವಿರೋಧಿಗೆ "ಯೂಕೊ" ಆಗಿ ನೀಡಲಾಗುತ್ತದೆ. ಮೂರನೇ ದಂಡವನ್ನು "ವಾಜ-ಅರಿ"ಯಾಗಿ ವಿಧಿಸಲಾಗುತ್ತದೆ. ನಾಲ್ಕನೇ ದಂಡವನ್ನು "ಹಾನ್ಸೊಕು ಮೇಕ್" ಎಂದು ಕರೆಯುತ್ತಾರೆ ಮತ್ತು ಇದನ್ನು ವಿರೋಧಿಗೆ "ಇಪ್ಪನ್" ಆಗಿ ನೀಡಲಾಗುತ್ತದೆ. "ಹಾನ್ಸೊಕು ಮೇಕ್" ಒಂದಿಗೆ ಪಂದ್ಯವು ಶಾಶ್ವತವಾಗಿ ಕೊನೆಗೊಳ್ಳುತ್ತದೆ. ಗಂಭೀರವಾದ ನಿಯಮ ಉಲ್ಲಂಘನೆಗಳಿಗೂ ಸ್ಪರ್ಧಿಗಳು ನೇರ "ಹಾನ್ಸೊಕು ಮೇಕ್"ಅನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ "ಹಾನ್ಸೊಕು ಮೇಕ್"ಅನ್ನು ಪಡೆಯುವ ಸ್ಪರ್ಧಿಯು ಪಂದ್ಯದಿಂದ ಅನರ್ಹಗೊಳ್ಳುತ್ತಾನೆ.
ಸ್ವ-ರಕ್ಷಣೆಯಾಗಿ
ಜೂಡೋ ಪ್ರಪಂಚದಾದ್ಯಂತ ತರಬೇತಿ ನೀಡುವ ಅನೇಕ ಮಿಲಿಟರಿ ಹೋರಾಟದ ಮತ್ತು ರಕ್ಷಣಾತ್ಮಕ ತಂತ್ರಗಳಿಗೆ ಆಧಾರವಾಗಿದೆ.[೧೪]
ಇದಕ್ಕೆ ಹೆಚ್ಚುವರಿಯಾಗಿ, ಸಾಂಪ್ರದಾಯಿಕ ಜುಜಿಟ್ಸುವಿನಲ್ಲಿನ ಜೂಡೋದ ಹಿನ್ನೆಲೆಯು ಅದರ ಪೋಲೀಸ್ ಮತ್ತು ಮಿಲಿಟರಿ ಅನ್ವಯಗಳೊಂದಿಗೆ ಸೇರಿಕೊಂಡಿದೆ, ಇದು ವಿಶೇಷವಾಗಿ ಸ್ವ-ರಕ್ಷಣೆಗಾಗಿ ತಾಂತ್ರಿಕ ನಿಯಮಗಳನ್ನು ಕಲಿಸಲು ವಿನ್ಯಾಸಗೊಳಿಸಲಾದ ಕಾಟವಾಗಿ ಪರಿಣಿಮಿಸಿದೆ: ಕಿಮೆ ನೊ ಕಾಟ (ನಿರ್ಧಾರದ ರೂಪಗಳು) ಮತ್ತು ಕೊಡೊಕಾನ್ ಗೋಶಿನ್ ಜುಟ್ಸು (ಸ್ವ-ರಕ್ಷಣೆಯ ರೂಪಗಳು). ರೆಂಕೋಹೊ ವಾಜವು ವಿಶೇಷವಾಗಿ ಪೋಲೀಸರಿಗೆ ವಿನ್ಯಾಸಗೊಳಿಸಿದ ತಂತ್ರಗಳನ್ನು ಒಳಗೊಳ್ಳುತ್ತದೆ.[೧೫] ಜೋಶಿ ಜೂಡೋ ಗೋಶಿನ್ಹೊ ಮಹಿಳೆಯರ ಸ್ವ-ರಕ್ಷಣೆಯ ತಂತ್ರಗಳನ್ನು ಒಳಗೊಳ್ಳುತ್ತದೆ.[೧೬] ಇತರ ಕಾಟ ರೂಪಗಳು ಹೆಚ್ಚು ಸೂಕ್ಷ್ಮ ರೀತಿಯ ಸ್ವ-ರಕ್ಷಣೆಯ ಅನ್ವಯಗಳನ್ನು ಒಳಗೊಳ್ಳುತ್ತದೆ.
ಜೂಡೋ ನಿಯಮಗಳು ಮತ್ತು ತರಬೇತಿಯ ವಿಧಾನಗಳ ವಿವಿಧ ಅಂಶಗಳು ಸ್ವ-ರಕ್ಷಣೆಗೆ ಅಗತ್ಯವಾದ ಲಕ್ಷಣಗಳು ಮತ್ತು ಕೌಶಲಗಳನ್ನು ಉತ್ತೇಜಿಸುತ್ತವೆ:[೧೭]
- ಪ್ರತಿರೋಧಿಸುವ ವಿರೋಧಿಯ ವಿರುದ್ಧ ಸಂಪೂರ್ಣ ಬಲ ಮತ್ತು ವೇಗದೊಂದಿಗೆ ಕಾದಾಡುವ ತರಬೇತಿ ನೀಡವುದು: ಇದು ವೇಗ, ಸಾಮರ್ಥ್ಯ, ಬಲ ಮತ್ತು ದೃಢತೆಯನ್ನು ಹೆಚ್ಚಿಸುತ್ತದೆ.
- ಗಮನಾರ್ಹ ಬಲದೊಂದಿಗೆ ನಿರಂತರವಾಗಿ ಹೊಡೆತಗಳನ್ನು ನೀಡುವ ಮೂಲಕ ದೇಹ ಮತ್ತು ಮನಸ್ಸನ್ನು ಒಗ್ಗಿಸಿಕೊಳ್ಳುವುದು.
- ವಿರೋಧಿಯನ್ನು ಬೀಳಿಸುವ ಬಗ್ಗೆ ಸುರಕ್ಷಿತ ವಿಧಾನಗಳಲ್ಲಿ ತರಬೇತಿ ನೀಡುವುದು.
- ಚಾತುರ್ಯವುಳ್ಳ ವಿರೋಧಿಯ ವಿರುದ್ಧ ಸಂಪೂರ್ಣವಾಗಿ ನಿರ್ಬಂಧಿಸುವ ಮುಷ್ಟಿ ಯುದ್ಧದ ವರಿಸೆಯೊಂದಿಗೆ ಸಮತೋಲನ, ದೂರ ಮತ್ತು ಸಮಯವನ್ನು ಸರಿಯಾಗಿ ಮತ್ತು ಅತಿ ಶೀಘ್ರವಾಗಿ ಬಳಸುವ ಸಾಮರ್ಥ್ಯವನ್ನು ಸುಧಾರಿಸುವುದು. ಜೂಡೋ ಅಭ್ಯಾಸನಿರತರು ತಮ್ಮ ಸಮತೋಲನವನ್ನು ಕಾಪಾಡಿಕೊಳ್ಳುವಾಗ ವಿರೋಧಿಯ ಸಮತೋಲನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರಲ್ಲಿ ನಿಪುಣರಾಗಿರುತ್ತಾರೆ.
- ಕ್ರೀಡೆಯ ಜೂಡೋ ನಿಯಮಗಳು ಒಮ್ಮೆ ಹೊಡೆದುರುಳಿಸಿದ ನಂತರ ಅತಿ ಶೀಘ್ರದಲ್ಲಿ ನಿರ್ಬಂಧಿಸುವಂತೆ ಅಥವಾ ಶರಣಾಗಿಸುವಂತೆ ಮಾಡುವುದಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಇದು ಸ್ವ-ರಕ್ಷಣೆಯ ಸ್ಥಿತಿಗಳಲ್ಲಿ ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ ಮತ್ತು ಪಟ್ಟು ಹಾಕುವ ಕೌಶಲಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತೆ ಮಾಡುತ್ತದೆ.
- ಹೊಡೆತವನ್ನು ನೀಡುವ ಸಂದರ್ಭದಲ್ಲಿ ವಿರೋಧಿಯನ್ನು ನಿಯಂತ್ರಿಸುವ ಪ್ರಾಮುಖ್ಯತೆಯು ಅಭ್ಯಾಸನಿರತರಿಗೆ ವಿರೋಧಿಯು ಯಾವ ಭಂಗಿ, ದಿಕ್ಕು ಮತ್ತು ಬಲದಿಂದ ನೆಲಕ್ಕುರುಳುತ್ತಾನೆ ಎಂಬುದನ್ನು ತಿಳಿಯುವಲ್ಲಿ ಸಹಾಯ ಮಾಡುತ್ತದೆ. ಇದರ ಪರಿಣಾಮವು ಸಾಧಾರಣವಾಗಿರಬಹುದು ಅಥವಾ ಮಾರಕವಾಗಿರಬಹುದು, ಇದು ಜೂಡೋ ಅಭ್ಯಾಸನಿರತರ ಉದ್ದೇಶಗಳನ್ನು ಆಧರಿಸಿರುತ್ತದೆ.
ಆದರೆ ಜೂಡೋವನ್ನು ಸ್ವ-ರಕ್ಷಣೆಯ ತರಬೇತಿಗಾಗಿ ಬಳಸುವ ಬಗ್ಗೆ ಕೆಲವು ಟೀಕೆಗಳಿವೆ:
- ಜೂಡೋ-ಗಿ (ಉಡುಪು) ಬಳಕೆಯನ್ನು ಅತಿ ಹೆಚ್ಚಾಗಿ ಅವಲಂಬಿಸುವುದು: ಸ್ವ-ರಕ್ಷಣೆಯ ಜೂಡೋ ತರಬೇತಿಗೆ ಗಿಯನ್ನು ಧರಿಸದವರ ವಿರುದ್ಧ ಮುಷ್ಟಿ ಯುದ್ಧದ ವರಿಸೆಯನ್ನು ಪ್ರದರ್ಶಿಸುವ ಅನುಭವದ ಅಗತ್ಯವಿರುತ್ತದೆ. ಆದರೆ ಹೆಚ್ಚಿನ ಪ್ರಯೋಗ ವಿಧಾನಗಳು ಸಂಪೂರ್ಣವಾಗಿ ಗಿ ಧರಿಸುವುದನ್ನು ಅವಲಂಬಿಸುವುದಿಲ್ಲ; ವಾಸ್ತವವಾಗಿ ಕೆಲವು ಪ್ರಯೋಗ ವಿಧಾನಗಳು (ವಿಶೇಷವಾಗಿ ನೆಲದ ಮೇಲಿನ ಕಾದಾಟ ಅಥವಾ ನಿ ವಾಜ) ಗಿಯನ್ನು ಬಳಸುವುದೇ ಇಲ್ಲ.
- ಕ್ರೀಡೆಯ ಜೂಡೋದ ನಿಯಮಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು: ಕೆಲವು ಜೂಡೋ ಕ್ಲಬ್‌ಗಳು ಅಥವಾ ಗುರುಗಳು ಜೂಡೋವನ್ನು ಕಟ್ಟುನಿಟ್ಟಾಗಿ ಕ್ರೀಡೆಯ ಸಂದರ್ಭದಲ್ಲಿ ಮಾತ್ರ ಕಲಿಸುತ್ತಾರೆ.
- ಹೊಡೆಯುವ ಪ್ರಯೋಗ ವಿಧಾನಗಳ ಕೊರತೆ: ಜೂಡೋದ ಹೊಡೆತದ ಪ್ರಯೋಗ ವಿಧಾನಗಳನ್ನು ಸಾಮಾನ್ಯವಾಗಿ ಡ್ಯಾನ್ ಶ್ರೇಣಿಯವರಿಗೆ (ಅಂದರೆ ಕಪ್ಪು ಬೆಲ್ಟ್ ಬಳಸುವವರು) ಮಾತ್ರ ಪ್ರದರ್ಶನಕ್ಕಾಗಿ ಮತ್ತು ಕಾಟ ರೂಪಗಳಲ್ಲಿ ಕಲಿಸಿಕೊಡಲಾಗುತ್ತದೆ.
ಮಿಶ್ರ ಕದನ ಕಲೆಗಳು
ನೆ-ವಾಜ/ಪಟ್ಟು ಹಾಕುವ ಮತ್ತು ಟಾಶಿ-ವಾಜ/ನಿಂತುಕೊಂಡು-ಪಟ್ಟು ಹಾಕುವ ಕಲೆಗಳನ್ನು ಬಳಸಿಕೊಂಡು, ಜೂಡೋ ಅಭ್ಯಾಸನಿರತರು ಮಿಶ್ರ ಕದನ ಕಲೆಗಳ ಪಂದ್ಯಗಳಲ್ಲೂ ಸ್ಪರ್ಧಿಸಿದ್ದಾರೆ. ರಷ್ಯಾದ ಮಾಜಿ ರಾಷ್ಟ್ರೀಯ ಜೂಡೋ ಚಾಂಪಿಯನ್ ಫೆಡರ್ ಎಮೆಲಿಯನೆಂಕೊ ಪ್ರಪಂಚದಲ್ಲೇ ಮಿಶ್ರ ಕದನ ಕಲೆಗಳಲ್ಲಿ ಮೊದಲನೇ ಸ್ಥಾನದ ಅತ್ಯಂತ ಹೆಚ್ಚು ತೂಕದ ವ್ಯಕ್ತಿಯೆಂಬ ಹೆಸರು ಪಡೆದಿದ್ದಾನೆ. ಕ್ಯಾರೊ ಪ್ಯಾರಿಸ್ಯಾನ್ ಜೂಡೋ ಅಭ್ಯಾಸನಿರತನಾಗಿದ್ದು, ಈತನು UFCಯಲ್ಲಿ ಯಶಸ್ವಿಯಾಗಿ ಕಾದಾಡಿದ್ದಾನೆ. ರಮೆಯು ಥಿಯೆರಿ ಸೊಕೌಡ್ಜೌ, ಕಾಜುಹಿರೊ ನಾಕಮುರ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಹೈಡೆಹಿಕೊ ಯೋಶಿದ ಈಗ ಇಲ್ಲದ PRIDE FCನಲ್ಲಿ ಕಾದಾಳಿಗಳಾಗಿದ್ದರು. ಪಾವೆಲ್ ನಸ್ತುಲ ಮತ್ತು ಯೂನ್ ಡಾಂಗ್-ಸಿಕ್ ಮೊದಲಾದ ಇತರ ಒಲಿಂಪಿಕ್ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜೂಡೋಕರು MMAಯಲ್ಲೂ ಕಾದಾಡಿದ್ದಾರೆ. ಯುರೋಪಿಯನ್ ಜೂಡೋ ಕಂಚಿನ ಪದಕ ವಿಜೇತ ಫೆರಿಡ್ ಖೇದರ್ ಮತ್ತೊಬ್ಬ MMA ಕಾದಾಳಿಯಾಗಿದ್ದಾನೆ ಹಾಗೂ ಯೋಶಿಹಿರೊ ಅಕಿಯಾಮ ಮತ್ತು ಮಾಜಿ ಒಲಿಂಪಿಕ್ ಜೂಡೋ ಸ್ಪರ್ಧಿ ಹೆಕ್ಟರ್ ಲೊಂಬಾರ್ಡ್ ಸಹ ಇವರಲ್ಲಿ ಸೇರಿದ್ದಾರೆ. ಮಾಜಿ WEC ಮಧ್ಯಮ-ತೂಕದ ಚಾಂಪಿಯನ್ ಪಾಲೊ ಫಿಲ್ಹೊ ಜೂಡೋ ಮತ್ತು ಜಿಯು-ಜಿಟ್ಸುವಿನಲ್ಲಿನ ಯಶಸ್ಸಿಗೆ ಹೆಸರುವಾಸಿಯಾಗಿದ್ದಾನೆ.[೧೮] ಕಾದಾಳಿಗಳಾದ ಸ್ಯಾನೆ ಕಿಕುಟ ಮತ್ತು ಹಯಾಟೊ ಸಾಕುರೈ ಸಹ ಜೂಡೋ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಜೂಡೋಕರಿಗೆ ತರಬೇತಿ ನೀಡುತ್ತಿರುವ ಮಾಜಿ UFC ಚಾಂಪಿಯನ್ ಡಾನ್ ಫ್ರಿಯೆ ಜಡೋವನ್ನು ಆತನ ಅಧಿಕೃತ ಕಾದಾಟದ ಶೈಲಿಗಳಲ್ಲಿ ಒಂದಾಗಿ ಸೂಚಿಸಿದ್ದಾನೆ. ಪ್ರಪಂಚದ ಪ್ರಮುಖ ಮೂವರು ಹಗುರ-ತೂಕದ ಮಿಶ್ರ ಕದನ ಕಲೆಗಳ ಅಭ್ಯಾಸನಿರತರಲ್ಲಿ ಒಬ್ಬನಾದ ಶಿನ್ಯ ಅಯೋಕಿ ಇಂದೂ ಸಹ ಜೂಡೋದಲ್ಲಿ ತೊಡಗಿದ್ದಾನೆ.
2008ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಸತೋಶಿ ಐಶಿಯು MMAಯಲ್ಲಿ ಪೂರ್ಣಾವಧಿಯಲ್ಲಿ ಸ್ಪರ್ಧಿಸುವುದಕ್ಕಾಗಿ ಜೂಡೋದಿಂದ ನಿವೃತ್ತಿ ಹೊಂದಿದನು. ಆತನು ಜಪಾನಿನ ಪ್ರಚಾರ ಸೆಂಗೋಕು ಒಂದಿಗೆ ಸಹಿ ಹಾಕಿದನು.
ಜೂಡೋದಲ್ಲಿ ಕಪ್ಪು ಬೆಲ್ಟ್ಅನ್ನು ಹೊಂದಿರುವ ಇತರ ಗಮನಾರ್ಹ MMA ಕಾದಾಳಿಗಳೆಂದರೆ:
- ಆಂಟೋನಿಯೊ ರೋಡ್ರಿಗೊ ನೋಗ್ವೆಯಿರ
- ಫ್ಯಾಬ್ರಿಸಿಯೊ ವೆರ್ಡುಮ್
- ಆಂಡರ್ಸನ್ ಸಿಲ್ವ
- ರೊನಾಲ್ಡೊ ಸೌಜ
- ರೆನ್ಜೊ ಗ್ರೇಸಿಯೆ
- ಮ್ಯಾನ್ವೆಲ್ ಗ್ಯಾಂಬುರ್ಯನ್
- ವಿಟರ್ ಬೆಲ್ಫೋರ್ಟ್
- ಫೆಡರ್ ಎಮೆಲಿಯನೆಂಕೊ
- ಕ್ಯಾರೊ ಪ್ಯಾರಿಸ್ಯಾನ್
ಶೈಲಿಗಳು
ಕ್ಯಾನೊ ಜಿಗೋರೊನ ಕೊಡೊಕಾನ್ ಜೂಡೋ ಹೆಚ್ಚು ಜನಪ್ರಿಯ ಮತ್ತು ಪ್ರಸಿದ್ಧ ಶೈಲಿಯ ಜೂಡೋ ಆಗಿದೆ, ಆದರೆ ಇದು ಒಂದೇ ಅಲ್ಲ. ಜೂಡೋ ಮತ್ತು ಜುಜುಟ್ಸು ಪದಗಳನ್ನು ಹಿಂದೆ ಅದಲುಬದಲು ಮಾಡಿ ಬಳಸಲಾಗುತ್ತಿತ್ತು. ಆದ್ದರಿಂದ ಜೂಡೋದ ಕೆಲವು ರೂಪಗಳನ್ನು, ಆ ಕಾರಣದಿಂದ ಅಥವಾ ಅವನ್ನು ಪ್ರಮುಖ ಜೂಡೋದಿಂದ ಭೇದ ಕಲ್ಪಿಸುವುದಕ್ಕಾಗಿ, ಈಗಲೂ ಜುಜುಟ್ಸು ಅಥವಾ ಜಿಯು-ಜಿಟ್ಸು ಎಂದು ಕರೆಯಲಾಗುತ್ತದೆ. ಕ್ಯಾನೊನ ಮೂಲ ಶೈಲಿಯ ಜೂಡೋದಿಂದ ಅನೇಕ ಸಂಬಂಧಿತ ರೂಪಗಳನ್ನು ಅಭಿವೃದ್ಧಿಪಡಿಸಲಾಯಿತು - ಅವುಗಳಲ್ಲಿ ಕೆಲವನ್ನು ಈಗ ವ್ಯಾಪಕವಾಗಿ ವಿಭಿನ್ನ ಕಲೆಗಳೆಂದು ಪರಿಗಣಿಸಲಾಗುತ್ತದೆ:
- ಒಲಿಂಪಿಕ್ ಜೂಡೋ : ಇದು ಕೊಡೊಕಾನ್ ಜೂಡೋದ ಪ್ರಮುಖ ರೂಪವಾಗಿದೆ.
- ಪ್ಯಾರಾಲಿಂಪಿಕ್ ಜೂಡೋ : ಇದು ಕುರುಡು ಮತ್ತು ಅಂಗವಿಕಲ ಸ್ಪರ್ಧಿಗಳಿಗಾಗಿ ಮಾರ್ಪಡಿಸಿದ ರೂಪವಾಗಿದೆ.
- ಬ್ರೆಜಿಲಿಯಿನ್ ಜಿಯು-ಜಿಟ್ಸು (BJJ) : 1914ರಲ್ಲಿ ಮಿಟ್ಸುಯೊ ಮಯೇದನು ಜೂಡೋವನ್ನು ಬ್ರೆಜಿಲ್‌ಗೆ ಪರಿಚಯಿಸಿದನು. ಮಯೇದನು ಬ್ರೆಜಿಲ್‌ನಲ್ಲಿ ಜೂಡೋವನ್ನು ಕಾರ್ಲೋಸ್ ಗ್ರೇಸೀ (1902–1994) ಮತ್ತು ಅನೇಕ ಮಂದಿ ಇತರರಿಗೆ ಕಲಿಸಿದನು. ಗ್ರೇಸೀ ಜೂಡೋದ ಅವರ ಸಾಧನೆಯನ್ನು 'ಬ್ರೆಜಿಲಿಯಿನ್ ಜಿಯು-ಜಿಟ್ಸು' ಎಂದು ಕರೆದನು (ಆ ಸಂದರ್ಭದಲ್ಲಿ ಜಪಾನ್ ಮತ್ತು ಬ್ರೆಜಿಲ್‌ನಲ್ಲಿ ಜೂಡೋವನ್ನು ಸಾಮಾನ್ಯವಾಗಿ 'ಕ್ಯಾನೊ ಜಿಯು-ಜಿಟ್ಸು' ಎಂದು ಕರೆಯಲಾಗುತ್ತಿತ್ತು). ಜೂಡೋದಿಂದ ಸ್ವತಂತ್ರವಾದುದೆಂದು ಪರಿಗಣಿಸಲಾದ ಬ್ರೆಜಿಲಿಯಿನ್ ಜಿಯು-ಜಿಟ್ಸು, ನಿಂತುಕೊಂಡು ಕಾದಾಡುವ ಹಂತಕ್ಕೆ ಹೆಚ್ಚು ಮಹತ್ವ ನೀಡುವುದಕ್ಕಾಗಿ ಅಂತಾರಾಷ್ಟ್ರೀಯ ಜೂಡೋ ನಿಯಮಗಳಿಗೆ ಸೇರಿಸಲಾದ ನಂತರದ ಬದಲಾವಣೆಗಳನ್ನು ಅಥವಾ ಹೆಚ್ಚು ಅಪಾಯಕಾರಿ ಪ್ರಯೋಗ ವಿಧಾನಗಳನ್ನು ನಿಷೇಧಿಸಲು ಚಾಲ್ತಿಗೆ ಬಂದ ನಿಯಮಗಳನ್ನು ಅನುಸರಿಸಲಿಲ್ಲ.
- ಜೂಡೋ-ಡು : ಆಸ್ಟ್ರೇಲಿಯಾದಲ್ಲಿ ಜೂಲಿಯಸ್ ಫ್ಲೆಕ್ ಮತ್ತು ಇತರರು ಜೂಡೋವನ್ನು ವಿಸ್ತರಿಸುವ ಉದ್ದೇಶದಿಂದ ಹೊಡೆತವನ್ನು ನೀಡುವ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದರು, ಇದನ್ನು "ಜೂಡೋ-ಡು" ಎಂದು ಕರೆದರು.
- ಕವೈಶಿ-ರ್ಯು ಜುಜುಟ್ಸು : ಫ್ರಾನ್ಸ್‌ನಲ್ಲಿ ಕಲಿಸುವಾಗ ಮಿಲ್ಕೋನೊಸುಕೆ ಕವೈಶಿಯು ಕವೈಶಿ-ರ್ಯು ಜುಜುಟ್ಸುವನ್ನು ಅಭಿವೃದ್ಧಿಪಡಿಸಿದನು. ಇದನ್ನು ಆಧುನಿಕ ಒಲಿಂಪಿಕ್/ಕೊಡೊಕಾನ್ ಜೂಡೋ ಸ್ಪರ್ಧೆಯಲ್ಲಿ ನಿಷೇಧಿಸಲ್ಪಟ್ಟ ಅನೇಕ ಪ್ರಯೋಗ ವಿಧಾನಗಳನ್ನು ಕಲಿಸುವ ಸೂಚನೆಗೆ ಪರ್ಯಾಯ ಮಾರ್ಗವಾಗಿ ಬಳಸಲಾಯಿತು.
- Kosen judo (高專柔道?) : ಆರಂಭಿಕ 20ನೇ ಶತಮಾನದಲ್ಲಿ ಜಪಾನಿನ ಅಂತರ-ಶಾಲಾ ಸ್ಪರ್ಧೆಗಳಲ್ಲಿ ಜನಪ್ರಿಯವಾದ ಕೊಡೊಕಾನ್ ಜೂಡೋದ ಉಪ-ಶೈಲಿಯಾದ ಕೋಸೆನ್ ಶೈಲಿಯು ಅದೇ ಶ್ರೇಣಿಯ ಪ್ರಯೋಗ ವಿಧಾನಗಳನ್ನು ಹೊಂದಿದೆ. ಆದರೆ ಇದರ ನೆಲದ ಮೇಲಿನ ಪ್ರಯೋಗ ವಿಧಾನಕ್ಕೆ ಸ್ವಲ್ಪ ಹೆಚ್ಚಿನ ವ್ಯಾಪ್ತಿಯನ್ನು ನೀಡಲಾಗಿದೆ. ಈ ಶೈಲಿಯ ಜೂಡೋ—BJJ ಅಂತೆ—ಪ್ರಸ್ತುತದ ಒಲಿಂಪಿಕ್ ಜೂಡೋಗಿಂತ 1900ರ ಆರಂಭದ ಮೂಲ ಜೂಡೋಗೆ ಹತ್ತಿರವಾಗಿದೆ.
- ರಷ್ಯನ್ ಜೂಡೋ : ಈ ವಿಭಿನ್ನ ಶೈಲಿಯ ಜೂಡೋ ಸ್ಯಾಂಬೊದಿಂದ ಪ್ರಭಾವಿತವಾಗಿದೆ. ಇದನ್ನು ಪ್ರಸಿದ್ಧ ತರಬೇತಿದಾರರಾದ ಅಲೆಕ್ಸಾಂಡರ್ ರೆಟ್ಯುಂಸ್ಕಿಹ್ ಮತ್ತು ಐಗರ್ ಯಾಕಿಮೊ ಹಾಗೂ ಮಿಶ್ರ ಕದನ ಕಲೆಗಳ ಕಾದಾಳಿಗಳಾದ ಐಗರ್ ಜಿನೋವ್ಯೂವ್, ಫೆಡರ್ ಎಮೆಲಿಯನೆಂಕೊ ಮತ್ತು ಕ್ಯಾರೊ ಪ್ಯಾರಿಸ್ಯಾನ್ ಪ್ರತಿನಿಧಿಸಿದ್ದಾರೆ. ಕೊಡೊಕಾನ್ ಜೂಡೋ ಅಂಗೀಕರಿಸಿದ ಫ್ಲೈಯಿಂಗ್ ಆರ್ಮ್‌ಬಾರ್‌ನಂತಹ ಪ್ರಯೋಗ ವಿಧಾನಗಳೊಂದಿಗೆ ರಷ್ಯನ್ ಜೂಡೋ ಪ್ರಮುಖ ಜೂಡೋ ಮೇಲೆ ಪ್ರಭಾವ ಬೀರಿದೆ.
- ಸ್ಯಾಂಬೊ (ವಿಶೇಷವಾಗಿ ಕ್ರೀಡಾ ಸ್ಯಾಂಬೊ): ವಾಸಿಲಿ ಓಶ್ಚೆಪ್ಕೊ ಕ್ಯಾನೊನಡಿಯಲ್ಲಿ ಮೊದಲ ಯುರೋಪಿಯನ್ ಜೂಡೋ ಕಪ್ಪು ಬೆಲ್ಟ್ ಧಾರಿಯಾಗಿದ್ದಾನೆ. ಓಶ್ಚೆಕ್ಪೊ ಸ್ಯಾಂಬೊವನ್ನು ಭಾಗಶಃ ಜೂಡೋದ ಪ್ರಭಾವದೊಂದಿಗೆ ರಚಿಸಲು ಆರಂಭಿಸಿದನು, ಆತನು ಸ್ಥಳೀಯ ರಷ್ಯನ್ ಮಲ್ಲಯುದ್ಧ ಮತ್ತು ಇತರ ಹೋರಾಟದ ಪ್ರಯೋಗ ವಿಧಾನಗಳನ್ನು ಹೊಸ ವ್ಯವಸ್ಥೆಯಾಗಿ ಒಂದಾಗಿಸಿದನು. ಓಶ್ಚೆಕ್ಪೊ ಕ್ಯಾನೊನಡಿಯಲ್ಲಿ ಜಪಾನಿನ ಜೂಡೋದಲ್ಲಿ ಶಿಕ್ಷಣ ಮತ್ತು ಡ್ಯಾನ್-ಶ್ರೇಣಿಯನ್ನು ಕೊಡುವುದಿಲ್ಲವೆಂದು ನಿರಾಕರಿಸಿದುದಕ್ಕಾಗಿ 1937ರ ರಾಜಕೀಯ ಬಹಿಷ್ಕಾರದ ಸಂದರ್ಭದಲ್ಲಿ ಸಾವನ್ನಪ್ಪಿದನು.[ಸೂಕ್ತ ಉಲ್ಲೇಖನ ಬೇಕು] ಹಿಸ್ಟರಿ ಆಫ್ ಸ್ಯಾಂಬೊ ದಲ್ಲಿ ಬ್ರೆಟ್ಟ್ ಜ್ಯಾಕ್ವೆಸ್ ಮತ್ತು ಸ್ಕಾಟ್ ಆಂಡರ್ಸನ್, ಬೇರೆ ಬೇರೆ ಸಮವಸ್ತ್ರ ಮತ್ತು ನಿಯಮಗಳಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ರಷ್ಯಾದಲ್ಲಿ "ಜೂಡೋ ಮತ್ತು ಸ್ಯಾಂಬೊ ಒಂದೇ ಎಂದು ಪರಿಗಣಿಸಲಾಗುತ್ತಿತ್ತು" ಎಂದು ಬರೆದಿದ್ದಾರೆ.[೧೯]
- ಡೈಡೊ ಜುಕು : ಇದು ಒಂದು ಮಿಶ್ರ ಕದನ ಕಲೆಯಾಗಿದ್ದು ಜೂಡೋ ಮತ್ತು ಕ್ಯೋಕುಶಿನ್ ಎರಡರ ಅಂಶಗಳನ್ನೂ ಒಳಗೊಳ್ಳುತ್ತದೆ.
ಸುರಕ್ಷತೆ
ಜೂಡೋ ಯುವಕರಿಗಾಗಿರುವ ನಿರ್ದಿಷ್ಟವಾಗಿ ಒಂದು ಸುರಕ್ಷಿತ ಕ್ರೀಡೆಯಾಗಿದೆ ಎಂದು ಸಂಶೋಧನೆಗಳು ತೋರಿಸುತ್ತವೆ. ಆದರೂ ವಯಸ್ಕ ಸ್ಪರ್ಧಾತ್ಮಕ ಜೂಡೋ, ಘರ್ಷಣೆಯಿಲ್ಲದ ಅಥವಾ ಸಂಪರ್ಕವಿಲ್ಲದ ಚೆಂಡಿನ-ಕ್ರೀಡೆಗಳಿಗೆ ಹೋಲಿಸಿದರೆ ಹಾನಿಯುಂಟಾಗುವ ಹೆಚ್ಚಿನ ಸಂಭಾವ್ಯತೆಯನ್ನು ಹೊಂದಿದೆ, ಆದರೆ ಇತರ ಸ್ಪರ್ಧಾತ್ಮಕ ಸಂಪರ್ಕದ-ಕ್ರೀಡೆಗಳಿಗೆ ಸಮವಾಗಿದೆ.[೨೦][೨೧]
ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವುದು
ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವುದು ಪ್ರಬಲ ಮಾರಕ ಪ್ರಯೋಗ ವಿಧಾನವಾದರೂ, ಇದನ್ನು ಸರಿಯಾದ ರೀತಿಯಲ್ಲಿ ಪ್ರಯೋಗಿಸಿದರೆ ಮತ್ತು ಶರಣಾದ ಅಥವಾ ಪ್ರಜ್ಞೆ ತಪ್ಪಿದ ಕೂಡಲೇ ಬಿಟ್ಟುಬಿಟ್ಟರೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ ಪ್ರಯೋಗವನ್ನು ಸಾಮಾನ್ಯವಾಗಿ ಶಿಷ್ಯರ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ಹೆಚ್ಚು ಅನುಭವವಿರುವ ಜೂಡೋಕರಿಗೆ ಕಲಿಸಲಾಗುತ್ತದೆ.[೨೨][೨೩] ಉಸಿರು ಕಟ್ಟುವಂತೆ ಬಿಗಿಯಾಗಿ ಹಿಡಿಯುವ ಪ್ರಯೋಗ ವಿಧಾನವನ್ನು ಸುರಕ್ಷಿತವಾಗಿ ಪ್ರಯೋಗಿಸುವ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ,[೨೪][೨೫][೨೬] ಮತ್ತು ಇದರ ತರಬೇತಿಯು ತುರ್ತು ರಕ್ಷಣೆ[೨೭] ಹಾಗೂ ಮತ್ತೆ ಪ್ರಜ್ಞೆಗೆ ತರುವುದನ್ನು (ಕಪ್ಪೊ ) ಒಳಗೊಳ್ಳುತ್ತದೆ.[೨೨]
ಹೊಡೆತಗಳು
ನಿಯಂತ್ರಿತ ರೀತಿಯಲ್ಲಿ ಸರಿಯಾಗಿ ನೀಡಿದ ಹೊಡೆತವು ವಿರೋಧಿಗೆ ಯಾವುದೇ ಹಾನಿ ಉಂಟಾಗದಂತೆ ಕಾಪಾಡಬೇಕು. ಆದರೂ ಹಾನಿ ಉಂಟಾಗಬಹುದು, ಉದಾಹರಣೆಗಾಗಿ, ಹೊಡೆತ ನೀಡುವವನು (ಟೋರಿ) ವಿರೋಧಿಯನ್ನು (ಉಕೆ) ಭಾವಾತಿರೇಕದ ಅಥವಾ ಉದ್ದೇಶಪೂರ್ವಕ ಹಗೆತನದ ಹೊಡೆತದಿಂದ ಧರೆಗಿಳಿಸಿದರೆ, ಅಥವಾ ಟೋರಿಯು ಉಕೆಯ ಸಂದುಗಳಿಗೆ ಭಾವಾತಿರೇಕದ ಹೊಡೆತವನ್ನು ನೀಡಿದರೆ (ಉದಾ. ಪಾರ್ಶ್ವದ ಬಲದೊಂದಿಗೆ ಮಂಡಿಗೆ ಪ್ರಯೋಗಿಸಿದ ಸರಿಯಾಗಿಲ್ಲದ ಒಸೋಟೊ ಗಾರಿ ಅಥವಾ ಟೈ ಒಟೋಶಿ; ಅಥವಾ ಭಾವಾತಿರೇಕದ ಸೋಟೊ ಮಕಿಕೋಮಿ ಅಥವಾ "ಸೋಲಿಸುವ" ಇಪ್ಪನ್ ಸಿಯೊ ನಗೆ, ಇದು ಯುಕೆಯ ಬಾಹುಗಳ ಮೇಲೆ ವಿಪರೀತ ಬಲವನ್ನು ಹಾಕುತ್ತದೆ). ಹೊಡೆತದ ಹಾನಿಗಳನ್ನು ತಪ್ಪಿಸಲು, ಸೆನ್ಸೈ ತಮ್ಮ ಶಿಷ್ಯರಿಗೆ ಅವರು ಸ್ಪರ್ಧೆಗೆ ಹೋಗುವುದಕ್ಕಿಂತ ಮೊದಲು ಸರಿಯಾದ ಹೊಡೆತದ ತಂತ್ರಗಳನ್ನು ಸಂಪೂರ್ಣವಾಗಿ ಕಲಿಸಿಕೊಡುತ್ತಾರೆ - "ಹೊಂದಿಕೆಯಾಗುವ" ಅಭ್ಯಾಸ (ಉಶಿ-ಕೋಮಿಸ್), ಪೂರ್ವ-ನಿಯೋಜಿತ ರೂಪಗಳು (ಉದಾ. ನಗೆ-ನೊ-ಕಾಟ) ಮತ್ತು ಭಾವಾವೇಶದ ಆದರೆ ನಿಯಂತ್ರಿತ ಮತ್ತು ಮೇಲ್ವಿಚಾರಣೆಯ ಸ್ವತಂತ್ರ-ಅಭ್ಯಾಸ/ಮುಷ್ಟಿ ಯುದ್ಧದ ವರಿಸೆಯ (ರಾಂಡೊರಿ) ಮೂಲಕ.
ಸಂಘಟನೆಗಳು
ಜೂಡೋದ ಅಂತಾರಾಷ್ಟ್ರೀಯ ಸಂಘಟನೆಯೆಂದರೆ ಇಂಟರ್‌ನ್ಯಾಷನಲ್ ಜೂಡೋ ಫೆಡರೇಶನ್ (IJF).
ಜೂಡೋದಲ್ಲಿ ಅಧಿಕೃತ ಸ್ಥಾನವನ್ನು ಹೊಂದಿರದಿದ್ದರೂ ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಅಸೋಸಿಯೇಟೆಡ್ ರಸ್ಲಿಂಗ್ ಸ್ಟೈಲ್ಸ್ (FILA), ಜೂಡೋವನ್ನು ಅಂತಾರಾಷ್ಟ್ರೀಯವಾಗಿ ಅಭ್ಯಾಸ ಮಾಡುವ ನಾಲ್ಕು ಪ್ರಮುಖ ಹವ್ಯಾಸಿ ಸ್ಪರ್ಧಾತ್ಮಕ ಮಲ್ಲ ಯುದ್ಧಗಳಲ್ಲಿ ಒಂದೆಂದು ನಿರೂಪಿಸುತ್ತದೆ (ಇತರು ಮೂರು - ಗ್ರೆಕೊ-ರೋಮನ್ ಮಲ್ಲ ಯುದ್ಧ, ಸ್ವತಂತ್ರ-ಶೈಲಿಯ ಮಲ್ಲ ಯುದ್ಧ ಮತ್ತು ಸ್ಯಾಂಬೊ).
ಶ್ರೇಣಿ ಮತ್ತು ಸ್ಥಾನ
ಒಬ್ಬ ಸಕ್ರಿಯ ಸ್ಪರ್ಧಿಯು ಉನ್ನತ ಶ್ರೇಣಿಗಳನ್ನು ಗುರಿಯಾಗಿಟ್ಟುಕೊಂಡು ಹೋಗದಿರಬಹುದು, ಬದಲಿಗೆ ಆತನು ಸ್ಪರ್ಧೆಗಾಗಿ ತಯಾರಿ ನಡೆಸುವ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾನೆ; ಉದಾಹರಣೆಗಾಗಿ, ಇಕ್ಯು (ಕಂದು ಬೆಲ್ಟ್) ಮಹಿಳಾ ಸ್ಪರ್ಧಿ ಲೊರೇನ ಪಿಯರ್ಸ್ 2004ರ ಪ್ಯಾರಾಲಿಂಪಿಕ್ಸ್‌ನಲ್ಲಿ -70 ಕೆಜಿ ವರ್ಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಳು. ತಿಳಿವು ಮತ್ತು ಸಾಮರ್ಥ್ಯದ ಹೊರತಾಗಿ, ಶ್ರೇಣಿಯ ಅಗತ್ಯತೆಗಳು ವಿಶಿಷ್ಟವಾಗಿ ಕನಿಷ್ಠ ವಯಸ್ಸನ್ನು ಒಳಗೊಳ್ಳುತ್ತದೆ.[೨೮] ಆದ್ದರಿಂದ ಹದಿಹರೆಯದ ಸ್ಪರ್ಧಿಗಳು ರಾಷ್ಟ್ರೀಯ-ಮಟ್ಟದ ಸ್ಪರ್ಧೆಯಲ್ಲಿ ಕಂಡುಬರುವುದು ಸಾಮಾನ್ಯವಾಗಿರುತ್ತದೆ, ಅವರು 10 ವರ್ಷಗಳ ಕಾಲ ಜೂಡೋವನ್ನು ಅಭ್ಯಾಸ ಮಾಡುತ್ತಿದ್ದು, ವಯಸ್ಕ ಅಭ್ಯಾಸನಿರತರನ್ನು ಸೋಲಿಸಬಲ್ಲವರಾಗಿರುತ್ತಾರೆ. ಆದರೆ ಕೇವಲ ನೀಲಿ ಅಥವಾ ಕಂದು ಬಣ್ಣದ ಬೆಲ್ಟ್ ಧಾರಿಗಳು ಡ್ಯಾನ್ ಶ್ರೇಣಿಗೆ ಅರ್ಹರಾಗಲು ತುಂಬಾ ಸಣ್ಣವರಾಗಿರುತ್ತಾರೆ. ಒಮ್ಮೆ ಒಬ್ಬ ಸ್ಪರ್ಧಿಯು ಡ್ಯಾನ್ ಶ್ರೇಣಿಯ ಮಟ್ಟವನ್ನು ತಲುಪಿದ ನಂತರ ಹೆಚ್ಚಿನ ಬಡತಿಗಳನ್ನು, ಕೌಶಲ್ಯ ಮಟ್ಟ, ಸ್ಪರ್ಧೆಯ ನಿರ್ವಹಣೆ ಹಾಗೂ/ಅಥವಾ ಕಲಿಸುವುದು ಮತ್ತು ಸ್ವ ಇಚ್ಛೆಯಿಂದ ಮಾಡಿದ ಸೇವೆ ಮೊದಲಾದ ಜೂಡೋಗೆ ನೀಡಿದ ಕೊಡುಗೆಗಳನ್ನೂ ಒಳಗೊಂಡಂತೆ ವಿವಿಧ ಕಾರಣಗಳಿಗಾಗಿ ನೀಡಲಾಗುತ್ತದೆ.[೨೯] ಆದ್ದರಿಂದ ಉನ್ನತ ಡ್ಯಾನ್ ಶ್ರೇಣಿಯನ್ನು ಪಡೆದವನು ಉತ್ತಮ ಕಾದಾಳಿ ಎಂದರ್ಥವಲ್ಲ (ಆದರೂ ಇದು ಕೆಲವೊಮ್ಮೆ ನಡೆಯುತ್ತದೆ).
ಜೂಡೋಕ ರಿಗೆ ಜೂಡೋ ಬಗೆಗಿನ ಅವರ ಕೌಶಲ್ಯ ಮತ್ತು ಅರಿವಿನ ಆಧಾರದಲ್ಲಿ ಶ್ರೇಣಿಯನ್ನು ನೀಡಲಾಗುತ್ತದೆ ಮತ್ತು ಅವರ ಶ್ರೇಣಿಯು ಅವರ ಬೆಲ್ಟ್ ಬಣ್ಣದಿಂದ ಪ್ರತಿಬಿಂಬಿಸಲ್ಪಡುತ್ತದೆ. ಈ ಶ್ರೇಣಿಯಲ್ಲಿ ಎರಡು ವಿಭಾಗಗಳಿವೆ: ಕಪ್ಪು-ಬೆಲ್ಟ್-ಮಟ್ಟಕ್ಕಿಂತ-ಕೆಳಗಿನ "ಸ್ಥಾನಗಳು" (ಕ್ಯು ) ಮತ್ತು ಕಪ್ಪು-ಬೆಲ್ಟ್-ಮಟ್ಟದ "ಹಂತಗಳು" (ಡ್ಯಾನ್ ). ಈ ಶ್ರೇಣಿಯ ವ್ಯವಸ್ಥೆಯನ್ನು ಕದನ ಕಲೆಗಳಿಗೆ ಕ್ಯಾನೊ ಪರಿಚಯಿಸಿದನು ಮತ್ತು ಅಲ್ಲಿಂದೀಚೆಗೆ ಅದನ್ನು ವ್ಯಾಪಕವಾಗಿ ಆಧುನಿಕ ಕದನ ಕಲೆಗಳು ತನ್ನದಾಗಿಸಿಕೊಂಡವು.[ಸೂಕ್ತ ಉಲ್ಲೇಖನ ಬೇಕು] ಇದನ್ನು ರೂಪಿಸಿದ ಆರಂಭದಲ್ಲಿ ಅವರೋಹಣ ಸಂಖ್ಯೆಯ ಕ್ರಮದಲ್ಲಿ ಒಟ್ಟು ಆರು ವಿದ್ಯಾರ್ಥಿ ಶ್ರೇಣಿಗಳಿದ್ದವು, ಮೊದಲ ಹಂತದ ಕಪ್ಪು ಬೆಲ್ಟ್‌ಗೆ (ಶೊಡ್ಯಾನ್ ) ಬಡ್ತಿ ಪಡೆಯುವುದಕ್ಕಿಂತ ಮೊದಲು ಮೊದಲನೇ ಕ್ಯು ಕೊನೆಯದಾಗಿರುತ್ತದೆ. ಸಾಮಾನ್ಯವಾಗಿ 10 ಡ್ಯಾನ್ ಶ್ರೇಣಿಗಳಿವೆ, ಇವನ್ನು ಆರೋಹಣ ಸಂಖ್ಯೆಯು ಕ್ರಮದಲ್ಲಿ ಶ್ರೇಣೀಕರಿಸಲಾಗುತ್ತದೆ. ಆದರೂ ನಿಯಮಬದ್ಧವಾಗಿ ಡ್ಯಾನ್ ಶ್ರೇಣಿಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
ಹತ್ತನೇ ಹಂತದ ಕಪ್ಪು ಬೆಲ್ಟ್ (ಜೂಡಾನ್ ) ಮತ್ತು ಅದಕ್ಕಿಂತ ಮೇಲಿನವರಿಗೆ ನಿಯಮಬದ್ಧ ಅಗತ್ಯತೆಗಳಿರುವುದಿಲ್ಲ. ಕೊಡೊಕಾನ್‌ನ ಅಧ್ಯಕ್ಷನು, ಪ್ರಸ್ತುತ ಕ್ಯಾನೊ ಜಿಗೋರೊನ ಮೊಮ್ಮಗ ಯುಕಿಮಿಟ್ಸು ಕ್ಯಾನೊ (ಕ್ಯಾನೊ ಯುಕಿಮಿಟ್ಸು ), ಕಾದಾಳಿಗಳಿಗೆ ಶ್ರೇಣಿಗೆ ಬಡ್ತಿ ನೀಡುವುದನ್ನು ನಿರ್ಧರಿಸುತ್ತಾನೆ. ಕೇವಲ ಹದಿನೈದು ಕಾದಾಳಿಗಳಿಗೆ ಮಾತ್ರ ಕೊಡೊಕಾನ್ ಈ ಶ್ರೇಣಿಗೆ ಬಡ್ತಿ ನೀಡಿದೆ. 2006ರ ಜನವರಿ 6ರಂದು ಮೂರು ಮಂದಿ ಕಾದಾಳಿಗಳಿಗೆ ಒಂದೇ ಬಾರಿಗೆ 10ನೇ ಡ್ಯಾನ್ ಶ್ರೇಣಿಗೆ ಬಡ್ತಿ ನೀಡಲಾಯಿತು: ಟೋಶಿರೊ ಡೈಗೊ, ಇಚಿರೊ ಅಬೆ ಮತ್ತು ಯೋಶಿಮಿ ಒಸಾವ. ಇದು ಅತ್ಯಂತ ಹೆಚ್ಚಿನದಾಗಿದೆ ಮತ್ತು 22 ವರ್ಷಗಳಲ್ಲಿ ಮೊದಲನೆಯದಾಗಿದೆ. 10ನೇ ಡ್ಯಾನ್ ಶ್ರೇಣಿಗಿಂತ ಹೆಚ್ಚಿನ ಶ್ರೇಣಿಗೆ ಇದುವರೆಗೆ ಯಾರೂ ಬಡ್ತಿ ಪಡೆದಿಲ್ಲ, ಆದರೆ:
Theoretically the Judo rank system is not limited to 10 degrees of black belt. The original English language copy (1955) of Illustrated Kodokan Judo, by Jigoro Kano, says: "There is no limit...on the grade one can receive. Therefore if one does reach a stage above 10th dan... there is no reason why he should not be promoted to 11th dan." However, since there has never been any promotion to a rank above 10th dan, the Kodokan Judo promotion system effectively has only 10 dans. There have only been 15 10th dans awarded by the Kodokan in the history of Judo.[೩೦]
ಡ್ಯಾನ್ ಶ್ರೇಣಿಗಳು ರಾಷ್ಟ್ರೀಯ ಸಂಘಟನೆಗಳಲ್ಲಿ ಸ್ಥಿರವಾಗಿರುವಂತೆ ಕಂಡುಬಂದರೂ, ಕ್ಯು ಶ್ರೇಣಿಗಳಲ್ಲಿ ಹೆಚ್ಚಿನ ಬದಲಾವಣೆಗಳಿವೆ, ಕೆಲವು ರಾಷ್ಟ್ರಗಳು ಹೆಚ್ಚಿನ ಕ್ಯು ಶ್ರೇಣಿಗಳನ್ನು ಹೊಂದಿವೆ. ಆರಂಭದಲ್ಲಿ ಕ್ಯು ಶ್ರೇಣಿಯ ಬೆಲ್ಟ್ ಬಣ್ಣವು ಏಕರೀತಿಯಲ್ಲಿ ಬಿಳಿಯಾಗಿದ್ದರೂ, ಇಂದು ವಿವಿಧ ಬಣ್ಣಗಳನ್ನು ಬಳಸಲಾಗುತ್ತದೆ.
ಬೆಲ್ಟ್ ಬಣ್ಣಗಳು
ಬಿಳಿ | ||
ಬಿಳಿ | ||
ನೀಲಿ | ||
ಹಳದಿ | ||
ಕಿತ್ತಳೆ | ||
ಹಸಿರು | ||
ಕೆನ್ನೀಲಿ | ||
ಕಂದು | ||
ಕಪ್ಪು | ||
ಬಿಳಿ ಮತ್ತು ಕೆಂಪು | ||
ಕೆಂಪು |
ಬಿಳಿ | ||
ಹಳದಿ | ||
ಕಿತ್ತಳೆ | ||
ಹಸಿರು | ||
ನೀಲಿ | ||
ಕಂದು | ||
ಕಪ್ಪು | ||
ಬಿಳಿ ಮತ್ತು ಕೆಂಪು | ||
ಕೆಂಪು |
ಜಪಾನಿನಲ್ಲಿ ಬೆಲ್ಟ್ ಬಣ್ಣಗಳ ಬಳಕೆಯು ವಿದ್ಯಾರ್ಥಿಗಳ ವಯಸ್ಸಿಗೆ ಸಂಬಂಧಿಸಿರುತ್ತದೆ. ಕೆಲವು ಕ್ಲಬ್‌ಗಳು ಕೇವಲ ಕಪ್ಪು ಮತ್ತು ಬಿಳಿ ಬಣ್ಣವನ್ನು ಮಾತ್ರ ಹೊಂದಿರುತ್ತವೆ. ಇತರೆ ಕೆಲವು ಹೆಚ್ಚಿನ ಕ್ಯು ಶ್ರೇಣಿಗಳಿಗೆ ಕಂದು ಬಣ್ಣದ ಬೆಲ್ಟ್ಅನ್ನು ಒಳಗೊಂಡಿರುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಮಧ್ಯಮ-ಮಟ್ಟದಲ್ಲಿ ಹಸಿರು ಬೆಲ್ಟ್ ಕಂಡುಬರುವುದು ಸಾಮಾನ್ಯವಾಗಿರುತ್ತದೆ.
ಆಸ್ಟ್ರೇಲಿಯಾದಲ್ಲಿ ಕ್ಯು ಶ್ರೇಣಿಗಳ ಬೆಲ್ಟ್ ಬಣ್ಣಗಳೆಂದರೆ ಬಿಳಿ, ಹಳದಿ, ಕಿತ್ತಳೆ, ಹಸಿರು, ನೀಲಿ ಮತ್ತು ಕಂದು.
ಡ್ಯಾನ್ ಶ್ರೇಣಿಗಳಲ್ಲಿ, ಮೊದಲ ಐದು ಶ್ರೇಣಿಗಳಿಗೆ ಕಪ್ಪು ಬಣ್ಣವನ್ನು ನೀಡಲಾಗುತ್ತದೆ, 6ನೇ, 7ನೇ ಮತ್ತು 8ನೇ ಡ್ಯಾನ್ ಶ್ರೇಣಿಗಳು ಪರ್ಯಾಯವಾಗಿ ಕೆಂಪು ಮತ್ತು ಬಿಳಿ ಬಣ್ಣಗಳನ್ನು (ಡ್ಯಾನ್ಡರ) ಹೊಂದಿರುತ್ತವೆ ಹಾಗೂ 9ನೇ ಮತ್ತು 10ನೇ ಡ್ಯಾನ್ ಶ್ರೇಣಿಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.[೩೧] ಆದರೆ ಗೋಡ್ಯಾನ್ ಗಿಂತ (5ನೇ ಡ್ಯಾನ್ ) ಮೇಲಿನ ಶ್ರೇಣಿಯನ್ನು ಹೊಂದಿರುವವರು ನಿಯತ ತರಬೇತಿಯಲ್ಲಿ ಹೆಚ್ಚಾಗಿ ಸ್ಪಷ್ಟ ಕಪ್ಪು ಬಣ್ಣದ ಬೆಲ್ಟ್ಅನ್ನು ಧರಿಸುತ್ತಾರೆ.
ಕೆಲವು ರಾಷ್ಟ್ರಗಳಲ್ಲಿ ಕಿರಿಯ ವಯಸ್ಸಿನ ಗುಂಪುಗಳನ್ನು ಸೂಚಿಸಲು ಬೆಲ್ಟ್‌ಗಳ ತುದಿಗಳಿಗೆ ಬಣ್ಣ ನೀಡಲಾಗುತ್ತದೆ. ಐತಿಹಾಸಿಕವಾಗಿ, ಮಹಿಳೆಯರ ಬೆಲ್ಟ್‌ಗಳ ಮಧ್ಯದಲ್ಲಿ ಬಿಳಿ ಪಟ್ಟೆಯಿತ್ತು.[ಸೂಕ್ತ ಉಲ್ಲೇಖನ ಬೇಕು]
ಪರೀಕ್ಷಾ ಅವಶ್ಯಕತೆಗಳು ರಾಷ್ಟ್ರ, ವಯಸ್ಸು ಮತ್ತು ಪಡೆದ ಶ್ರೇಣಿಯನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತವೆ. ಪರೀಕ್ಷೆಯೇ ಕೆಲವೊಮ್ಮೆ ಸ್ಪರ್ಧೆ ಮತ್ತು ಕಾಟವನ್ನು ಒಳಗೊಳ್ಳಬಹುದು. ಕ್ಯು ಶ್ರೇಣಿಗಳನ್ನು ಸಾಮಾನ್ಯವಾಗಿ ಸ್ಥಳೀಯ ತರಬೇತಿದಾರರು (ಸೆನ್ಸೈ ) ನೀಡುತ್ತಾರ. ಆದರೆ ಡ್ಯಾನ್ ಶ್ರೇಣಿಗಳನ್ನು ಸಾಮಾನ್ಯವಾಗಿ ರಾಷ್ಟ್ರೀಯ ಜೂಡೋ ಸಂಘಟನೆಯ ಸ್ವತಂತ್ರ ತೀರ್ಪುಗಾರರ ಮೇಲ್ವಿಚಾರಣೆಯಲ್ಲಿ ನಡೆಸಿದ ಪರೀಕ್ಷೆಯ ನಂತರ ಕೊಡಲಾಗುತ್ತದೆ. ಶ್ರೇಣಿಯು ಅಂಗೀಕೃತವಾಗಬೇಕಾದರೆ ಅದನ್ನು ರಾಷ್ಟ್ರೀಯ ಜೂಡೋ ಸಂಘಟನೆ ಅಥವಾ ಕೊಡೊಕಾನ್ ದಾಖಲಿಸಬೇಕು.
ಬ್ರೆಜಿಲ್
ಬ್ರೆಜಿಲ್‌ನ ಬೆಲ್ಟ್ ಶ್ರೇಣಿಗಳು ಸಾಮಾನ್ಯವಾಗಿ ಬಿಳಿ, ನೀಲಿ, ಹಳದಿ, ಕಿತ್ತಳೆ, ಹಸಿರು, ಕೆನ್ನೀಲಿ, ಕಂದು ಮತ್ತು ಕಪ್ಪು ಬಣ್ಣಗಳಾಗಿವೆ (6ನೇ, 7ನೇ ಮತ್ತು 8ನೇ ಡ್ಯಾನ್ ಶ್ರೇಯಾಂಕಿತರು ಪರ್ಯಾಯವಾಗಿ ಕೆಂಪು ಮತ್ತು ಬಿಳಿ ಬಣ್ಣದ ಬೆಲ್ಟ್‌ಗಳನ್ನು ಧರಿಸುತ್ತಾರೆ ಹಾಗೂ 9ನೇ ಮತ್ತು 10ನೇ ಡ್ಯಾನ್ ಶ್ರೇಣಿಯನ್ನು ಪಡೆದವರು ಕೆಂಪು ಬೆಲ್ಟ್‌ಗಳನ್ನು ಧರಿಸುತ್ತಾರೆ).[೩೨] ಹೆಚ್ಚುವರಿಯಾಗಿ, ಬೂದು ಬಣ್ಣದ ಬೆಲ್ಟ್ಅನ್ನು ನೀಲಿಗಿಂತ ಮೊದಲು ತುಂಬಾ ಕಿರಿಯ ಜೂಡೋಕರಿಗೆ (11 ಅಥವಾ 13 ವರ್ಷ ವಯಸ್ಸಿಗಿಂತ ಕೆಳಗಿನವರಿಗೆ) ನೀಡಲಾಗುತ್ತದೆ. ಕೆಲವೊಮ್ಮೆ ಸ್ಪರ್ಧಿಗಳನ್ನು ಶ್ರೇಣಿಯ ಆಧಾರದಲ್ಲಿ ಎರಡು ವರ್ಗಗಳಾಗಿ ಸಂಘಟಿಸಲಾಗುತ್ತದೆ; ಮೊದಲ ವರ್ಗವು ಬಿಳಿಯಿಂದ ಹಸಿರಿನವರೆಗೆ ಹಾಗೂ ಎರಡನೇ ವರ್ಗವು ಕೆನ್ನೀಲಿಯಿಂದ ಕಪ್ಪು ಬಣ್ಣದವರೆಗೆ.
ಕೆನಡಾ
ಕೆನಡಾದಲ್ಲಿ ಹಿರಿಯರ ಬೆಲ್ಟ್ ಶ್ರೇಣಿಗಳ ಬಣ್ಣಗಳೆಂದರೆ, ಆರೋಹಣದಲ್ಲಿ: ಬಿಳಿ, ಹಳದಿ, ಕಿತ್ತಳೆ, ಹಸಿರು, ನೀಲಿ, ಕಂದು ಮತ್ತು ಅಂತಿಮವಾಗಿ ಕಪ್ಪು. ಕಿರಿಯರ ಬೆಲ್ಟ್ ಶ್ರೇಣಿಗಳ ಬಣ್ಣಗಳೆಂದರೆ ಬಿಳಿ-ಕೆಂಪು, ಬಿಳಿ, ಬಿಳಿ-ಹಳದಿ, ಹಳದಿ, ಹಳದಿ-ಕಿತ್ತಳೆ, ಕಿತ್ತಳೆ, ಕೆಂಪು-ಹಸಿರು, ಹಸಿರು-ನೀಲಿ, ನೀಲಿ, ನೀಲಿ-ಕಂದು ಮತ್ತು ಕಂದು.[೨೮]
ಅಮೆರಿಕ ಸಂಯುಕ್ತ ಸಂಸ್ಥಾನಗಳು
USನಲ್ಲಿ ಕೇವಲ ಹಿರಿಯ ಕಾದಾಳಿಗಳು (ವಯಸ್ಕರು, ಸಾಮಾನ್ಯವಾಗಿ 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಮಾತ್ರ ಡ್ಯಾನ್ ಶ್ರೇಣಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ, ಇದನ್ನು ಪಡೆದವರು ಕಪ್ಪು ಬೆಲ್ಟ್‌ಗಳನ್ನು ಧರಿಸುತ್ತಾರೆ. ಇತರ ಸಂಘಟನೆಯಿಂದ ಪಡೆದ ಡ್ಯಾನ್ ಶ್ರೇಣಿಗಳನ್ನು USJF ಮತ್ತು USJA ಅಂಗೀಕರಿಸುತ್ತವೆ. ಹೆಚ್ಚಿನ ಕ್ಯು ಮಟ್ಟಗಳನ್ನು ಹಿರಿಯ ಮತ್ತು ಕಿರಿಯರಿಬ್ಬರೂ (16 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳು) ಗಳಿಸುತ್ತಾರೆ. ಅಲ್ಲದೇ ಇವನ್ನು ಕಪ್ಪನ್ನು ಹೊರತುಪಡಿಸಿ ಬೇರೆ ಇತರ ಬಣ್ಣಗಳ ಬೆಲ್ಟ್‌ಗಳ ಧರಿಸುವ ಮೂಲಕ ಸೂಚಿಸಲಾಗುತ್ತದೆ. ಬೆಲ್ಟ್ ಬಣ್ಣಗಳ ಕ್ರಮವು ಡೋಜೋದ ಸಂಘಟನೆಯ ಸಂಯೋಜನೆಯನ್ನು ಆಧರಿಸಿ ಡೋಜೋದಿಂದ ಡೋಜೋಗೆ ವ್ಯತ್ಯಾಸಗೊಳ್ಳಬಹುದು.
ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯು ಬೆಲ್ಟ್ ಬಣ್ಣಗಳು | ||||||
ಜಪಾನಿನ ಕ್ಯು ಹೆಸರುಗಳು |
USJF ಹಿರಿಯ |
USJF ಕಿರಿಯ |
USJA ಕಿರಿಯ |
USJA ಕಿರಿಯ |
USJA ಕಿರಿಯ ಮಟ್ಟದ ಹೆಸರುಗಳು | |
ಜುನಿಕ್ಯು | ಬಿಳಿ |
ಕಿರಿಯ 12ನೇ ವರ್ಗ | ||||
ಜುಶಿಕ್ಯು | ಬಿಳಿ |
ಹಳದಿ |
ಕಿರಿಯ 11ನೇ ವರ್ಗ | |||
ಜುಕ್ಯು | ಬಿಳಿ- ಹಳದಿ |
ಕಿತ್ತಳೆ |
ಕಿರಿಯ 10ನೇ ವರ್ಗ | |||
ಕುಕ್ಯು | ಹಳದಿ |
ಕಿತ್ತಳೆ |
ಕಿರಿಯ 9ನೇ ವರ್ಗ | |||
ಹಶಿಕ್ಯು | ಚಿತ್ರ:Judo yellow-orange belt.PNG ಹಳದಿ- ಕಿತ್ತಳೆ |
ಹಸಿರು |
ಕಿರಿಯ 8ನೇ ವರ್ಗ | |||
ನಾನಕ್ಯು ಅಥವಾ USJA ಹಿರಿಯ "ಬಿಗಿನ್ನರ್" |
ಕಿತ್ತಳೆ |
ಬಿಳಿ |
ಹಸಿರು |
ಕಿರಿಯ 7ನೇ ವರ್ಗ | ||
ರೊಕ್ಯು | ಬಿಳಿ |
ಕಿತ್ತಳೆ- ಹಸಿರು |
ಹಳದಿ |
ನೀಲಿ |
ಕಿರಿಯ 6ನೇ ವರ್ಗ | |
ಗೊಕ್ಯು | ಹಸಿರು |
ಹಸಿರು |
ಕಿತ್ತಳೆ |
ನೀಲಿ |
ಕಿರಿಯ 5ನೇ ವರ್ಗ | |
ಯೋಂಕ್ಯು | ನೀಲಿ |
ಹಸಿರು- ನೀಲಿ |
ಹಸಿರು |
ಕೆನ್ನೀಲಿ |
ಕಿರಿಯ 4ನೇ ವರ್ಗ | |
ಸಾಂಕ್ಯು | ಕಂದು |
ನೀಲಿ |
ಕಂದು |
ಕೆನ್ನೀಲಿ |
ಕಿರಿಯ 3ನೇ ವರ್ಗ | |
ನಿಕ್ಯು | ಕಂದು |
ಚಿತ್ರ:Judo blue-purple belt.PNG ನೀಲಿ- ಕೆನ್ನೀಲಿ |
ಕಂದು |
ಕಂದು |
ಕಿರಿಯ 2ನೇ ವರ್ಗ | |
ಇಕ್ಯು | ಕಂದು |
ಕೆನ್ನೀಲಿ |
ಕಂದು |
ಕಂದು |
ಕಿರಿಯ 1ನೇ ವರ್ಗ |
ಹಿರಿಯರು
ಹಿರಿಯ ಕಾದಾಳಿಗಳಿಗೆ ಯುನೈಟೆಡ್ ಸ್ಟೇಟ್ಸ್ ಜೂಡೋ ಫೆಡರೇಶನ್ (USJF)[೩೨] ಮತ್ತು ಯುನೈಟೆಡ್ ಸ್ಟೇಟ್ಸ್ ಜೂಡೋ ಅಸೋಸಿಯೇಶನ್ (USJA)[೩೩] ಎರಡೂ ಕೋಷ್ಟಕದಲ್ಲಿ ಪಟ್ಟಿಮಾಡಿದಂತೆ ಆರು ಕ್ಯು ಅನ್ನು ನಿರ್ದಿಷ್ಟಪಡಿಸುತ್ತವೆ. USJA "ಬಿಗಿನರ್ಸ್" (ಕ್ಯು ಅಲ್ಲ) ಹಳದಿ ಬೆಲ್ಟ್‌ಗಾಗಿ ಪರೀಕ್ಷೆಗೊಳಗಾಗುವವರೆಗೆ ಬಿಳಿ ಬೆಲ್ಟ್ಅನ್ನು ಧರಿಸಬೇಕೆಂದು ಸೂಚಿಸುತ್ತದೆ. USJA ಅಭ್ಯಾಸನಿರತರ ಮಟ್ಟವನ್ನು ಸೂಚಿಸುವ ಪಟ್ಟಿಯೊಂದನ್ನು ಧರಿಸುವಂತೆಯೂ ಸೂಚಿಸುತ್ತದೆ. ಇದು ಕ್ಯು ಮತ್ತು ಡ್ಯಾನ್ ಶ್ರೇಣಿಗಳನ್ನು ಪಡೆದವರಿಗೂ ಅನ್ವಯಿಸುತ್ತದೆ.
ಕಿರಿಯರು
USJF ಕಿರಿಯರ ಶ್ರೇಣಿಯನ್ನು ನೀಡುವ ವ್ಯವಸ್ಥೆಯು ಶ್ರೇಣಿಯನ್ನು 11ನೇ ಕ್ಯು (ಜುಶಿಕ್ಯು )ಗೆ ಸ್ಪಷ್ಟಪಡಿಸುತ್ತದೆ. USJA ಕಿರಿಯರ ಶ್ರೇಣಿಯನ್ನು ನೀಡುವ ವ್ಯವಸ್ಥೆಯು ಹನ್ನೆರಡು ಮಟ್ಟಗಳ ಕ್ಯು ಶ್ರೇಣಿಯನ್ನು ನೀಡುತ್ತದೆ, "ಕಿರಿಯ 1ನೇ ಶ್ರೇಣಿ"ಯಿಂದ (ಜುನಿಕ್ಯು ಅಥವಾ 12ನೇ ಕ್ಯು ಗೆ ಸಮವಾಗಿರುತ್ತದೆ) ಆರಂಭಗೊಂಡು "ಕಿರಿಯ 12ನೇ ಶ್ರೇಣಿ"ಯಲ್ಲಿ (ಇಕ್ಯು ಗೆ ಸಮವಾಗಿರುತ್ತದೆ) ಕೊನೆಗೊಳ್ಳುತ್ತದೆ. ಹಿರಿಯ ಅಭ್ಯಾಸನಿರತರಿಗೆ ಸೂಚಿಸಿದಂತೆ USJA ಕಿರಿಯರಿಗೂ ಅವರ ಶ್ರೇಣಿಯನ್ನು ಸೂಚಿಸುವ ಪಟ್ಟಿಯನ್ನು ಧರಿಸುವಂತೆ ಹೇಳುತ್ತದೆ. USJA ಕಿರಿಯರಿಗೆ 17 ವರ್ಷ ವಯಸ್ಸು ಪೂರ್ಣಗೊಂಡಾಗ, ಅವರು ಹಿರಿಯ ಸ್ಥಾನಕ್ಕೆ ಬದಲಾವಣೆಗೊಳ್ಳುತ್ತಾರೆ:[೩೪]
- ಹಳದಿ ಬೆಲ್ಟ್ 6ನೇ ಕ್ಯು ಶ್ರೇಣಿಗೆ (ರೊಕ್ಯು) ಬದಲಾಗುತ್ತದೆ
- ಕಿತ್ತಳೆ ಬಣ್ಣದ ಬೆಲ್ಟ್ 5ನೇ ಕ್ಯು ಶ್ರೇಣಿಗೆ (ಗೊಕ್ಯು) ಬದಲಾಗುತ್ತದೆ
- ಹಸಿರು ಬೆಲ್ಟ್ 4ನೇ ಕ್ಯು ಶ್ರೇಣಿಗೆ (ಯೋಂಕ್ಯು) ಬದಲಾಗುತ್ತದೆ
- ನೀಲಿ ಬೆಲ್ಟ್ ಅಥವಾ ಅದಕ್ಕಿಂತ ಹೆಚ್ಚಿನದು 3ನೇ ಕ್ಯು ಶ್ರೇಣಿಗೆ (ಸಾಂಕ್ಯು) ಬದಲಾಗುತ್ತದೆ
ಇವನ್ನೂ ಗಮನಿಸಿ
- ಜೂಡೋ ತಂತ್ರಗಳು - ಜೂಡೋ ತಂತ್ರಗಳ ಸಂಪೂರ್ಣ ಪಟ್ಟಿ
- ದಿ ಕ್ಯಾನನ್ ಆಫ್ ಜೂಡೋ - ಕ್ಯೂಜೊ ಮಿಫುನೆ (1960) ಬರೆದ ಪುಸ್ತಕ
- ದಿ ಪ್ರಿನ್ಸಿಪಲ್ ಆಫ್ ಜು
- ವಿಶ್ವ ಜೂಡೋ ಚಾಂಪಿಯನ್‌ಶಿಪ್‌ಗಳು
- ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಜೂಡೋ
- ಜೂಡೋಕ ಪಟ್ಟಿ
- ಪ್ರಸಿದ್ಧ ಜೂಡೋಕರ ಪಟ್ಟಿ
- ಜೂಡೋದಲ್ಲಿ ಒಲಿಂಪಿಕ್ ಪ್ರಶಸ್ತಿ ವಿಜೇತರ ಪಟ್ಟಿ
- ಪ್ಯಾರಾಲಿಂಪಿಕ್ ಜೂಡೋ
- U.S. ಅಂತರಕಾಲೇಜು ಜೂಡೋ ಚಾಂಪಿಯನ್‌ಗಳು
ಅಡಿ ಟಿಪ್ಪಣಿಗಳು
- ↑ Introduction of men's judo to the Olympics.
- ↑ Introduction of women's judo to the Olympics.
- ↑ The first Olympic competition to award medals to women judoka was in 1992; in 1988, women competed as a demonstration sport.
- ↑ "ಜುಜಿಟ್ಸು ಫೆಲ್ ಇನ್ಟು ಡಿಸ್‌ಯೂಸ್ ವಿದ್ ದಿ ಎಬೋಲಿಶನ್ ಆಫ್ ದಿ ಫ್ಯೂಡಲ್ ಸಿಸ್ಟಮ್ (1860–1865) ಆಂಡ್ ಬಿಕೇಮ್ ಆಲ್ಮೋಸ್ಟ್ ಎಕ್ಸ್ಟಿಂಕ್ಟ್" – 2000 ಯಿಯರ್ಸ್: ಜುಜಿಟ್ಸು ಮತ್ತು ಕೊಡೊಕಾನ್ ಜೂಡೋ - ಡೆನ್ನಿಸ್ ಹೆಲ್ಮ್
- ↑ ಕ್ಯಾನೊನ ಪದ ಬಳಕೆಗಿಂತ ಮೊದಲು ಜಿಕಿಶಿನ್-ರ್ಯು ಜೂಡೋ ಇತ್ತು, ಇದು 1724ರಲ್ಲಿದ್ದ ಒಂದು ಹಳೆಯ ಶಾಲೆಯಾಗಿದ್ದು, ಜಪಾನಿನ ಹೊರಗಿನ ಕಂಡುಬಂದಿದೆ.
- ↑ ಉದಾಹರಣೆಗಾಗಿ, ತ್ಸುನೆಜಿರೊ ತೋಮಿಟನು 1906ರಲ್ಲಿ ಜೂಡೋ: ದಿ ಮೋಡರ್ನ್ ಸ್ಕೂಲ್ ಆಫ್ ಜಿಯು-ಜಿಟ್ಸು ಎಂಬ ಪುಸ್ತಕವನ್ನು ಸಹ-ರಚಿಸಿದನು (ಗ್ರೆಗರಿ, O.H. ಮತ್ತು ತೋಮಿಟ, ತ್ಸುನೆಜಿರೊ. ಚಿಕಾಗೊದಲ್ಲಿ O.H. ಗ್ರೆಗರಿಯು ಪ್ರಕಾಟಿಸಿದನು.)
- ↑ ೭.೦ ೭.೧ "Introduction of the Blue Judogi". International Judo Federation. Archived from the original on 2007-09-12. Retrieved 2010-10-13.
- ↑ "ಶಿಯೈ ರೂಲ್ಸ್". Archived from the original on 2011-05-11. Retrieved 2010-10-13.
- ↑ ಸ್ಪರ್ಧಿಗಳು ಆರಂಭಿಸಬಹುದಾದ ಪ್ರಬಲ ಕಾದಾಟದ ವಿಧಿಬದ್ಧ ಮಾರ್ಗಗಳೆಂದರೆ ಒಗೆತದ ಮೂಲಕ; ಅಥವಾ ಕುಶಲತೆಯಿಂದ ಕೆಡವುವ ಮೂಲಕ; ಅಥವಾ ಒಬ್ಬ ಸ್ಪರ್ಧಿಯನ್ನು ನೆಲಕ್ಕೆ ಹೊಡೆದುರುಳಿಸುವ ಮೂಲಕ; ಅಥವಾ ಒಬ್ಬ ಸ್ಪರ್ಧಿಯು ನಿಯಂತ್ರಣವನ್ನು ಕಳೆದುಕೊಂಡು ನೆಲಕ್ಕೆ ಉರುಳಿದರೆ. (ಇಪ್ಪನ್ ಕೆಡೆತದಿಂದ ಅಂಕವನ್ನು ಗಳಿಸಿದರೆ, ಪಂದ್ಯವು ತಕ್ಷಣವೇ ಅಂತ್ಯಗೊಳ್ಳುತ್ತದೆ.)
- ↑ ಮಿಲ್ಲರ್, ಕ್ರಿಸ್. ಗ್ರ್ಯಾಪ್ಲಿಂಗ್/ಸಬ್ಮಿಶನ್ ಫೈಟಿಂಗ್. hsma1.com . URL 2006ರ ಮಾರ್ಚ್ 4ರಂದು ಕೊನೆಯದಾಗಿ ಸಂಕಲನಗೊಂಡಿದೆ.
- ↑ "ಇಂಟರ್‌ನ್ಯಾಷನಲ್ ಜೂಡೋ ಫೆಡರೇಶನ್ §27 (a.21)". Archived from the original on 2009-12-12. Retrieved 2021-08-10.
- ↑ ದಿ ಚಾಲೆಂಜಸ್ ಆಫ್ ಶಿಮೆವಾಜ - ಎಲೈ A. ಮೋರೆಲ್, ಶಿಚಿಡಾನ್ (judoinfo.com)
- ↑ ದಿ ಕಾಂಟ್ರಿಬ್ಯೂಷನ್ ಆಫ್ ಜೂಡೋ ಟು ಎಜುಕೇಶನ್ - ಕ್ಯಾನೊ ಜಿಗೋರೊ (judoinfo.com)
- ↑ judoinfo.com - ಜೂಡೋ ಆಸ್ ಮಾರ್ಷಿಯಲ್ ಆರ್ಟ್
- ↑ judoinfo.com ಅರೆಸ್ಟಿಂಗ್ ಟೆಕ್ನಿಕ್ಸ್.
- ↑ judoinfo.com ವುಮೆನ್ಸ್ ಸೆಲ್ಫ್-ಡಿಫೆನ್ಸ್
- ↑ judoinfo.com ವೈ ಸ್ಪೋರ್ಟ್ಸ್ ಜೂಡೋ ಈಸ್ ಇಫೆಕ್ಟಿವ್
- ↑ "entrevista a paulo filho (interview with Paulo Filho)" (in Portuguese). youtube.com.
{{cite web}}
: CS1 maint: unrecognized language (link) - ↑ "ದಿ ಹಿಸ್ಟರಿ ಆಫ್ ಸೋಂಬೊ – ಯುರೇಪಿಯನ್ ಜೂಡೋ ಈಸ್ ರಿಯಲಿ ಜಪಾನೀಸ್ ಸ್ಯಾಂಬೊ?" - ಬ್ರೆಟ್ ಜಾಕ್ವೆಸ್ ಮತ್ತು ಸ್ಕಾಟ್ ಆಂಡರ್ಸನ್ [೧] [೨] [೩]
- ↑ ಸ್ಪೋರ್ಟ್ಸ್ ಮೆಡಿಸಿನ್ ಇಶ್ಸೂಸ್ ಇನ್ ದಿ ಯಂಗ್ ಜೂಡೋ ಅಥ್ಲೆಟ್ – ರಾಬರ್ಟ್ S. ನಿಶಿಮೆ, M.D., USA ಜೂಡೋ ಸ್ಪೋರ್ಟ್ಸ್ ಮೆಡಿಸಿನ್ ಸಬ್‌ಕಮಿಟೀ (usjudo.org)
- ↑ ಜೂಡೋ ರಿಸರ್ಚ್ ಅಬ್‌ಸ್ಟ್ರಾಕ್ಟ್ಸ್ – ಆನ್ ಪರ್ಫೋರ್ಮೆನ್ಸ್, ಸೇಫ್ಟಿ, ಇತ್ಯಾದಿ (ಜೂಡೋ ಇನ್ಫರ್ಮೇಶನ್ ಸೈಟ್)
- ↑ ೨೨.೦ ೨೨.೧ ಪ್ರಿನ್ಸಿಪಲ್ಸ್ ಆಫ್ ಜೂಡೋ ಚೋಕಿಂಗ್ ಟೆಕ್ನಿಕ್ಸ್ – ನೈಲ್ ಓಹ್ಲೆನ್ಕ್ಯಾಂಪ್ (judoinfo.com)
- ↑ ಜೂಡೋ ಚೋಕಿಂಗ್ ಟೆಕ್ನಿಕ್ಸ್ (judoinfo.com)
- ↑ ಹೌ ಸೇಫ್ ಈಸ್ ಚೋಕಿಂಗ್ ಇನ್ ಜೂಡೋ? - E. K. ಕೊಯವೈ, M.D. (judoinfo.com)
- ↑ ದಿ ಸೇಫ್ಟಿ ಆಫ್ ಜೂಡೋ ಚೋಕ್ಸ್ - ಲಿಯೊನಾರ್ಡ್ I. ಲ್ಯಾಪಿನ್ಸೋಹ್ಮ್ M.D. (judoinfo.com)
- ↑ ಡೆತ್ಸ್ ಅಲೆಜೆಡ್ಲಿ ಕಾಸ್ಡ್ ಬೈ ದಿ ಯೂಸ್ ಆಫ್ "ಚೋಕ್ ಹೋಲ್ಡ್ಸ್" (ಶಿಮೆ-ವಾಜ) - E. K. ಕೊಯವೈ, M.D. (judoinfo.com)
- ↑ ಎಮರ್ಜೆನ್ಸಿ ಕೇರ್ ಫಾರ್ ಚೋಕ್ ಹೋಲ್ಡ್ಸ್ - ಜಾನ್ ಬೌಲೆ (judoinfo.com)
- ↑ ೨೮.೦ ೨೮.೧ "ಕೆನಡಿಯನ್ ನ್ಯಾಷನಲ್ ಕ್ಯು ಗ್ರೇಡಿಂಗ್ ಸಿಲೇಬಸ್" (PDF). Archived from the original (PDF) on 2010-07-02. Retrieved 2010-10-13.
- ↑ "ಕೆನಡಿಯನ್ ನ್ಯಾಷನಲ್ (ಡ್ಯಾನ್) ಗ್ರೇಡಿಂಗ್ ಸಿಲೇಬಸ್" (PDF). Archived from the original (PDF) on 2009-03-27. Retrieved 2010-10-13.
- ↑ Ohlenkamp, Neil. "The Judo Rank System".
- ↑ "柔道帯の最高位は、何と紅!? "紅帯"所持者に投げられてきた!" (in Japanese). R25.jp. 2008-05-15. Archived from the original on 2008-05-19. Retrieved 2008-11-11.
{{cite web}}
: CS1 maint: unrecognized language (link) - ↑ ೩೨.೦ ೩೨.೧ "FJERJ (Judo Federation of Rio de Janeiro) - Judo Graduation". Archived from the original on 2011-07-06. Retrieved 2010-10-13. ಉಲ್ಲೇಖ ದೋಷ: Invalid
<ref>
tag; name "USJF" defined multiple times with different content - ↑ "United States Judo Association Rank Requirements" (PDF). Archived from the original (PDF) on 2009-09-30. Retrieved 2010-10-13.
- ↑ "United States Judo Association Senior Handbook". Archived from the original on 2011-07-22. Retrieved 2010-10-13.
ಮೂಲಗಳು
- ಹಿಸ್ಟರಿ ಆಫ್ ಕೊಡೊಕಾನ್ – ಮೊಂಟಾನ ವಿಶ್ವವಿದ್ಯಾನಿಲಯದ ಜೂಡೋ ವೆಬ್‌ಸೈಟ್.
- ಕ್ಯಾನೊ, ಜಿಗೋರೊ (1994) ಕೊಡೊಕಾನ್ ಜೂಡೋ - ಜೂಡೋ ಬಗೆಗಿನ ಪ್ರಮಾಣಿತ ಉಲ್ಲೇಖ. ISBN 4-7700-1799-5.
- ಒಹ್ಲೆನ್‌ಕ್ಯಾಂಪ್, ನೈಲ್ (2006) ಜೂಡೋ ಅನ್‌ಲೀಶ್ಡ್ - ಜೂಡೋ ಬಗೆಗಿನ ಮತ್ತೊಂದು ಉಲ್ಲೇಖ. ISBN 0-0714-7534-6.
ಬಾಹ್ಯ ಕೊಂಡಿಗಳು
- ಜೂಡೋ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- IJF ಇಂಟರ್‌ನ್ಯಾಷನಲ್ ಜೂಡೋ ಫೆಡರೇಶನ್. ಪ್ರಪಂಚದಾದ್ಯಂತ ಜೂಡೋವನ್ನು ನಿರ್ವಹಿಸುವ ಸಂಸ್ಥೆ
- ಕೊಡೊಕಾನ್ ಜೂಡೋ ಇನ್ಸ್ಟಿಟ್ಯೂಟ್ – ಜೂಡೋದ ಪ್ರಧಾನ ಕಛೇರಿ (ಕ್ಯಾನೊ ಜಿಗೋರೊನ ಶಾಲೆ)
- ಯುನೈಟೆಡ್ ಸ್ಟೇಟ್ಸ್ ಜೂಡೋ ಅಸೋಸಿಯೇಶನ್ (USJA) – ಪ್ರಮುಖ U.S. ಜೂಡೋ ಕ್ಲಬ್ಗಳನ್ನು ಒಳಗೊಂಡಿದೆ (ಸುಮಾರು 1000 ಕ್ಲಬ್‌ಗಳು)
- ಆಸ್ಟ್ರೇಲಿಯನ್ ಕೊಡೊಕಾನ್ ಜೂಡೋ ಅಸೋಸಿಯೇಶನ್ (AKJA)
- H2G2 ಆರ್ಟಿಕಲ್ ಎಬೌಟ್ ಜೂಡೋ ಆನ್ ದಿ BBC ವೆಬ್‌ಸೈಟ್
- Pages with reference errors
- CS1 maint: unrecognized language
- Articles containing Japanese-language text
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from January 2008
- Articles with invalid date parameter in template
- Articles with unsourced statements from October 2007
- Articles with unsourced statements from April 2008
- Commons link from Wikidata
- Articles with Open Directory Project links
- ಕಾದಾಟ ಕ್ರೀಡೆಗಳು
- ಗೆಂಡೈ ಬುಡೊ
- ವೈಯಕ್ತಿಕ ಕ್ರೀಡೆಗಳು
- ಜೂಡೋ
- ಒಲಿಂಪಿಕ್ ಕ್ರೀಡೆಗಳು
- ಜಪಾನಿಯರ ಕದನ ಕಲೆಗಳು
- ಜಪಾನಿನ ಕ್ರೀಡೆ
- ಗ್ರ್ಯಾಪ್ಲಿಂಗ್ (ಪಟ್ಟು ಹಾಕುವುದು)
- ಜೆನ್ ಕಲೆ ಮತ್ತು ಸಂಸ್ಕೃತಿ
- Pages using ISBN magic links