ವಿಷಯಕ್ಕೆ ಹೋಗು

ಜನನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೨೨:೨೫, ೪ ನವೆಂಬರ್ ೨೦೨೦ ರಂತೆ Renamed user ijklofjfoifvonofqmoilk (ಚರ್ಚೆ | ಕಾಣಿಕೆಗಳು) ಇವರಿಂದ (Reverted edits by 2409:4071:E0A:8D93:32E2:5C1:2888:B2D6 (talk) to last revision by Srinivas ujire)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಜನನ ಹುಟ್ಟಿದ ದಿನ, ತಿಂಗಳು, ಇಸವಿಗಳ ವಿವರ. ನಮ್ಮ ಎಲ್ಲರ ಜೀವನದಲ್ಲಿ ತಪ್ಪದೆ ನಡೆದಿರುವ ಸಂಘಟನವು ಜನನ. ಲೋಕದಲ್ಲಿ ಹೆಚ್ಚಾಗಿ ಹುಟ್ಟಿದ ದಿನ, ತಿಂಗಳು ಮತ್ತು ವರ್ಷಗಳನ್ನು ಮಾತ್ರ ನಮ್ಮ ಜನ್ಮ ದಿನಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.

ಹನ್ನೆರಡು ರಾಶಿಚಕ್ರಗಳು
ವೆನಿಸ್ಸಿನಲ್ಲಿ ಸಂತ ಮಾರ್ಕ್ಸ್ ಅವರ ಗಡಿಯಾರ

ಹುಟ್ಟಿದ ದಿನವನ್ನು ಬ್ಯಾಂಕಿನಲ್ಲಿ ದೃಢೀರಣಕ್ಕೋಸ್ಕರ ಉಪಯೋಗಿಸುತ್ತಾರೆ.

ಪರಿಚಯ

[ಬದಲಾಯಿಸಿ]
  • ನಾವೆಲ್ಲರೂ ನಮ್ಮ ತಾಯಿಗಳಿಂದ ಜನನವನ್ನು ಹೊಂದಿದ್ದೇವೆ. ನಮ್ಮ ತಂದೆ ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ಬೆಳೆದು ದೊಡ್ಡವರಾಗಿದ್ದೇವೆ. ನಮ್ಮ ದೇಶದಲ್ಲಿ ನಾವು ಜನ್ಮ ದಿನವನ್ನು ನಕ್ಷತ್ರಗಳನ್ನು ನೋಡಿ ಕಂಡುಹಿಡಿಯುತ್ತೇವೆ. ವರ್ಷದಲ್ಲಿ ಮತ್ತೆ ಆ ನಕ್ಷತ್ರಗಳು ಅದೇ ಸ್ಥಳಕ್ಕೆ ಬಂದಾಗ, ಆಗ ನಾವು ನಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಆದರೆ ನಮ್ಮ ಭಾರತವನ್ನು ಬಿಟ್ಟರೆ ನಮ್ಮ ಭೂಮಿಯ ಮೇಲೆ ಹೆಚ್ಚು ದೇಶಗಳು ಇದನ್ನು ಮಾಡುವುದಿಲ್ಲ.

ಚರಿತ್ರೆ

[ಬದಲಾಯಿಸಿ]
  • ಇತಿಹಾಸವನ್ನು ಸಂಶೋಧನೆ ಮಾಡಿದರೆ, ಜನ್ಮದಿನವನ್ನು ಆಚರಿಸುವುದು ಮೊದಲು ಈಜಿಪ್ಟಿನಲ್ಲಿ ಆರಂಭವಾಯಿತು ಎಂದು ನಮಗೆ ತಿಳಿಯುತ್ತದೆ. ಜ್ಯೋತಿಷ್ಯರು ಪ್ರತಿ ನಕ್ಷತ್ರಕ್ಕೆ, ಪ್ರತಿ ಗ್ರಹದ ಸ್ಥಾನಕ್ಕೆ ಒಂದು ಅರ್ಥವಿದೆ ಎಂದು ಹೇಳುತ್ತಾರೆ. ಇವುಗಳ ಸ್ಥಾನಗಳು ನಮ್ಮ ಜೀವನವನ್ನು, ನಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತವೆ.

ನಂಬಿಕೆಗಳು ಮತ್ತು ರಾಶಿಫಲ

[ಬದಲಾಯಿಸಿ]
  • ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳಿವೆ. ಈ ಚಿಹ್ನೆಗಳು ಪ್ರಾಣಿಗಳ ರೂಪಗಳನ್ನು ತೆಗೆದುಕೊಳ್ಳುತ್ತವೆ.
  • ಈ ಚಿಹ್ನೆಗಳ ಪ್ರಕಾರ, ಮಾರ್ಚಿ 21 ನೆಯ ದಿನದಿಂದ ಏಪ್ರಿಲ್ 19 ನೆಯ ದಿನ ವರೆಗೂ ಏರೀಸು ಚಿಹ್ನೆಯಲ್ಲಿ ಬೀಳುತ್ತದೆ. ಈ ಚಿಹ್ನೆ ಬೆಂಕಿಯ ಚಿಹ್ನೆ. ಈ ಕಾಲದಲ್ಲಿ ಹುಟ್ಟಿದವರು ಧೈರ್ಯವಂತರಾಗಿರುತ್ತಾರೆ. ಯಾವುದಾದರೂ ನಿರ್ಣಯಿಸಿಕೊಂಡರೆ ಅದನ್ನು ತಪ್ಪದೆ ಮಾಡುತ್ತಾರೆ. ಬಹಳ ವಿಶ್ವಾಸವನ್ನು ತೋರುತ್ತಾರೆ. ಮಾಡಿದ ಕೆಲಸಗಳನ್ನು ಉತ್ಸಾಹದಿಂದ ಮಾಡುತ್ತಾರೆ. ಆಶಾವಾದದಿಂದ, ಪ್ರಾಮಾಣಿಕತೆಯಿಂದ ಬದುಕುತ್ತಾರೆ.
  • ಏಪ್ರಿಲ್ 20 ನಿಂದ ಮೇ 20 ವರೆಗೂ ಟಾರಸ್ ಚಿಹ್ನೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆಯಲ್ಲಿ ಜನಿಸಿದವರು ವಿಶ್ವಾಸಾರ್ಹರು ಆಗಿರುತ್ತಾರೆ. ಈ ಜನರು ತಾಳ್ಮೆ ಇಂದ ವರ್ತಿಸುತ್ತಾರೆ. ಇವರು ಜವಾಬ್ದಾರಿ ಇದ್ದವರಾಗಿರುತ್ತಾರೆ. ತಮ್ಮ ತಮ್ಮ ಕೆಲಸಗಳನ್ನು ತಾರ್ಕಿಕವಾಗಿ, ಏಕಾಗ್ರತೆಯಿಂದ ಮಾಡುವುದು ಟಾರಸ್ ಚಿಹ್ನೆಯಲ್ಲಿ ಹುಟ್ಟಿದವರ ವ್ಯಕ್ತಿತ್ವ. ಯಾವ ಕಷ್ಟದ ಎದುರಲ್ಲಿಯೂ ಸ್ಥಿರವಾಗಿರುತ್ತಾರೆ.
  • ಮೇ 21 ರಿಂದ ಜೂನ್ 20 ವರೆಗೂ ಜೆಮಿನಿ ಚಿಹ್ನೆಯ ಕೆಳಗಡೆ ಬೀಳುತ್ತದೆ. ಇದು ಗಾಳಿಯ ಚಿಹ್ನೆ. ಜೆಮಿನಿ ಚಿಹ್ನೆಯಲ್ಲಿ ಹುಟ್ಟಿದವರು ತುಂಬಾ ಶಾಂತಿಯುತವಾದ ಜನರಾಗಿರುತ್ತಾರೆ. ಅವರು ಪ್ರೀತಿಸುವವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲದನ್ನು ಕುತೂಹಲದಿಂದ ಗಮನಿಸುತ್ತಾರೆ. ಯಾವ ಪರಿಸ್ಥಿತಿಯಲ್ಲಾದರೂ ಜೆಮಿನಿ ಚಿಹ್ನೆಯವರು ತುಂಬಾ ವೇಗದಿಂದ ರೂಢಿಮಾಡಿಕೊಳ್ಳುತ್ತಾರೆ.
  • ಇವರಿಗೆ ಹೊಸ ವಿಷಯಗಳನ್ನು ಕಲಿಯವುದು ಬಹಳ ಸುಲಭ, ಹಾಗೂ ಇವರಿಗೆ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳುವುದು ತುಂಬಾ ಇಷ್ಟ. ಕ್ಯಾನ್ಸರ್ ಚಿಹ್ನೆಯು ಜೂನ್ 21 ರಿಂದ ಜುಲೈ 22 ವರೆಗೂ ಬರುತ್ತದೆ. ಇದು ನೀರಿನ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಹಠವಾದ ಜನರಾಗಿರುತ್ತಾರೆ. ಕ್ಯಾನ್ಸರ್ ಚಿಹ್ನೆಯಲ್ಲಿ ಹುಟ್ಟಿದವರ ಕಲ್ಪನೆಯ ಶಕ್ತಿ ಬಹಳ ಹೆಚ್ಚಾಗಿರುತ್ತದೆ. ಇವರು ನಿಷ್ಠಾವಂತರು.
  • ಕ್ಯಾನ್ಸರ್ ಚಿಹ್ನೆಯವರು ಭಾವನಾತ್ಮಕತೆಯಿಂದ, ಸಹಾನುಭೂತಿಯಿಂದ ವರ್ತಿಸುತ್ತಾರೆ. ಪ್ರೀತಿಯಿಂದ ಎಲ್ಲರನ್ನು ಒಪ್ಪಿಸಬಲ್ಲವರಾಗಿರುತ್ತಾರೆ. ಜುಲೈ 23 ರಿಂದ ಆಗಸ್ಟ್ 22 ವರೆಗೂ ಲಿಯೋ ಚಿಹ್ನೆಯು ಬರುತ್ತದೆ. ಇದು ಬೆಂಕಿಯ ಚಿಹ್ನೆ. ಲಿಯೋ ಚಿಹ್ನಯಲ್ಲಿ ಹುಟ್ಟಿದ ಜನರು ಸೃಜನಶೀಲರಾಗಿರುತ್ತಾರೆ. ಈ ಚಿಹ್ನೆಯವರು ಎಷ್ಟು ಭಾವೋದ್ರಿಕ್ತವಾಗಿರುತ್ತಾರೋ, ಅಷ್ಟೇ ಕರುಣಾರ್ದ್ರ ಹೃದಯವಿದ್ದವರಾಗಿ ಇರುತ್ತಾರೆ. ಇವರು ಬಹಳ ಉದಾರವಾದ ಜನರು. ಹರ್ಷಚಿತ್ತದಿಂದ ಜೀವನವನ್ನು ಬದುಕುತ್ತಾರೆ.
  • ಬೇರೆಯವರನ್ನು ನಗಿಸುವುದು ಇವರಿಗೆ ತುಂಬಾ ಇಷ್ಟ, ಆದ್ದರಿಂದ ಯಾವಾಗಲೂ ಹಾಸ್ಯಮಯವಾಗಿರುತ್ತಾರೆ. ವರ್ಗೋ ಆಗಸ್ಟ್ 23 ರಿಂದ ಸೆಪ್ಟೆಂಬರ್ 22 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆಯವರಿಗೆ ನಿಷ್ಠೆ ತುಂಬಾ ಮುಖ್ಯ. ಬಹಳ ವಿಶ್ಲೇಷಣಾತ್ಮಕವಾಗಿ ಇರುತ್ತಾರೆ. ಇವರು ತುಂಬಾ ಒಳ್ಳೆಯ ಜನರಾಗಿದ್ದರಿಂದ, ಎಲ್ಲರನ್ನೂ ಬಹಳ ಪ್ರೀತಿ ವಾತ್ಸಲ್ಯಗಳಿಂದ ನಡೆಸಿಕೊಳ್ಳುತ್ತಾರೆ. ಬಹಳ ಶಿಸ್ತಿನಿಂದ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಎಚ್ಚರಿಕೆಯಿಂದ ಪ್ರವರ್ತಿಸುತ್ತಾರೆ.
  • ಲಿಬ್ರಾ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 22 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಬಹಳ ಸಹಕಾರಿವಂತರಾಗಿರುತ್ತಾರೆ. ಇವರು ತುಂಬಾ ಉದಾರತನವನ್ನು ತೋರುತ್ತಾರೆ. ನ್ಯಾಯವು ಇವರಿಗೆ ಬಹಳ ಮುಖ್ಯ. ಬೇರೆ ಜನರ ಜೊತೆಯಲ್ಲಿ ಇರುವುದು ಇವರಿಗೆ ತುಂಬಾ ಇಷ್ಟ, ಆ ಅಂಶ ಇವರನ್ನು ಸಂತೋಷ ಪಡಿಸುತ್ತದೆ.
  • ಸ್ಕಾರ್ಪಿಯೋ ಅಕ್ಟೋಬರ್ 23 ರಿಂದ ನವೆಂಬರ್ 21 ವರೆಗೂ ಬರುತ್ತದೆ. ಇದು ನೀರಿನ ಚಿಹ್ನೆ. ಸ್ಕಾರ್ಪಿಯೋ ಚಿಹ್ನೆಯ ಜನರಲ್ಲಿ ತಾರಕವು ಹೆಚ್ಚು. ಇವರು ಬಹಳ ಧೈರ್ಯವಂತರು. ಇವರು ಭಾವೋದ್ದೀಪ್ತವಾಗಿ ಇರುತ್ತಾರೆ. ಈ ಜನರಲ್ಲಿ ಮೊಂಡುತನವು ಸ್ವಲ್ಪ ಹೆಚ್ಚು. ಇವರು ತುಂಬಾ ಒಳ್ಳೆಯ ಗೆಳೆಯರು ಆಗುತ್ತಾರೆ. ಒಂದು ಸಲ ಅವರು ಸ್ನೇಹ ಮಾಡಿದರೆ, ಅವರು ಜೀವಾವಧಿಯ ಗೆಳೆಯರಾಗುತ್ತಾರೆ.
  • ಸಾಜಿಟೇರಿಯಸ್ ನವೆಂಬರ್ 22 ರಿಂದ ಡಿಸೆಂಬರ್ 21 ವರೆಗೂ ಬರುತ್ತದೆ. ಇದು ಬೆಂಕಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದ ಜನರು ಬಹಳ ಉದಾರತನವನ್ನು ತೋರಿಸುತ್ತಾರೆ. ಇವರು ಲೋಕವನ್ನು, ಜೀವನವನ್ನು ಒಂದು ಆದರ್ಶಾತ್ಮಕವಾದ ರೀತಿಯಲ್ಲಿ ದರ್ಶಿಸುತ್ತಾರೆ. ಈ ಚಿಹ್ನೆಯ ಜನರಲ್ಲಿ ಕುತೂಹಲ ಮತ್ತು ಕ್ರಿಯಾಶೀಲತೆ ತುಂಬಾ ಹೆಚ್ಚು.
  • ಕೇಪ್ರಿಕಾರ್ನ್ ಡಿಸೆಂಬರ್ 22 ರಿಂದ ಜನವರಿ 19 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿರುವ ಜನರು ಜವಾಬ್ದಾರಿ ಇದ್ದವರು ಆಗಿರುತ್ತಾರೆ. ಇವರಿಗೆ ಶಿಸ್ತು ಬಹಳ ಮುಖ್ಯ. ಇವರಿಗೆ ತಮ್ಮ ಮೇಲೆ ಇರುವ ಹಿಡಿತ ಬಹಳ ದೃಢವಾದುದು. ವ್ಯವಸ್ಥಾಪಕ ಕೆಲಸಗಳನ್ನು ಇವರು ತುಂಬಾ ಚೆನ್ನಾಗಿ ಮಾಡುತ್ತಾರೆ. ಎಲ್ಲಾ ಚಿಹ್ನೆಗಳಗಿಂತ ಕೇಪ್ರಿಕಾರ್ನ್ ಚಿಹ್ನೆಯ ಜನರು ಬಹಳ ವಿಚಾರಶೀಲರಾಗುತ್ತಾರೆ.
  • ಅಕ್ವೇರಿಯಸ್ ಜನವರಿ 20 ರಿಂದ ಫೆಬ್ರವರಿ 18 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನದಲ್ಲಿ ಹುಟ್ಟಿದ ಜನರು ಬಹಳ ಪ್ರಗತಿಪರವಾಗಿ ಇರುತ್ತಾರೆ. ಬೇರೆ ಅವರ ಮೇಲೆ ಅವಲಂಬಿಸುವುದು ಇವರಿಗೆ ಇಷ್ಟ ಇರುವುದಿಲ್ಲ. ಮಾನವೀಯ ವ್ಯಕ್ತಿತ್ವಗಳು ಇವರಲ್ಲಿ ಹೆಚ್ಚು. ಈ ಚಿಹ್ನೆಯಲ್ಲಿ ಹುಟ್ಟಿರುವರು ನಾಚಿಕೆಯ ಸ್ವಭಾವದ ಸ್ತಬ್ಧವಾದ ಮನುಷ್ಯರು ಆಗಿರುತ್ತಾರೆ.
  • ಪೈಸಿಸ್ ಫೆಬ್ರವರಿ 19 ರಿಂದ ಮಾರ್ಚ್ 20 ವರೆಗೂ ಬರುತ್ತದೆ. ಇದು ನೀರಿನ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿರುವವರ ಹೃದಯಗಳು ಮೃದವಾಗಿ, ಸಹಾನುಭೂತಿ ಇಂದ ಕೂಡಿರುತ್ತವೆ. ಅವರಿಗೆ ಕಲಾತ್ಮಕ ಸ್ವಭಾವಗಳಿರುವುದರಿಂದ, ಅವರ ಸಂಗೀತ ಕೌಶಲಗಳು ಬಹಳ ಅಧಿಕವಾಗಿರುವಂತೆ ಕಾಣುತ್ತದೆ. ಇವರು ವಿವೇಕವುಳ್ಳ ಜನರು ಆಗಿರುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]

"12 Astrology Zodiac Signs Dates, Meanings and Compatibility".

"When Did People Start Celebrating Birthdays? | HistoryNet".